ಉತ್ತರ ಕರ್ನಾಟಕದ ನೂತನ ಸಚಿವರಿಗೆ ಅಭಿನಂದಿಸಿ ಸನ್ಮಾನಿಸಿದ ಮಲ್ಲನಗೌಡ ಎಸ್. ಪಾಟೀಲ (ಕೋರವಾರ)

ಕರ್ನಾಟಕ ರಾಜ್ಯ ಸರ್ಕಾರದ ನೂತನ ಸಚಿವರಾಗಿ ಆಯ್ಕೆಯಾಗಿರುವ ಉತ್ತರ ಕರ್ನಾಟಕ ಭಾಗದ ಪ್ರಭಾವೀ, ಜನಪ್ರೀಯ ಹಾಗೂ ಹೆಮ್ಮೆಯ ನಾಯಕರಾಗಿರುವ ಸನ್ಮಾನ್ಯ ಶ್ರೀ ಸಿ. ಸಿ. ಪಾಟೀಲ್ ಜೀ, ಸನ್ಮಾನ್ಯ ಶ್ರೀ ಮುರುಗೇಶ್ ನಿರಾಣಿ ಜೀ ಮತ್ತು ಸನ್ಮಾನ್ಯ ಶ್ರೀ ಶಂಕರ್ ಪಾಟೀಲ್ ಮುನೇನಕೊಪ್ಪ ಜೀ ಇವರೆಲ್ಲರಿಗೂ
ಮಾಹಿತಿ ತಂತ್ರಜ್ಞಾನ ಉದ್ಯಮಿ, ಬಿಜೆಪಿ ಮುಖಂಡರು ಹಾಗೂ

ಅಖಿಲ ಭಾರತ ಲಿಂಗಾಯತ ಮಹಾಸಭಾದ ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲನಗೌಡ ಎಸ್. ಪಾಟೀಲ (ಕೋರವಾರ) ಇವರು
ಹೃತ್ಪೂರ್ವಕವಾದ ಅಭಿನಂದನೆಗಳು ಸಲ್ಲಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಿದ ಕ್ಷಣ.

ಈ ಸಂಧರ್ಭದಲ್ಲಿ
ಶ್ರೀ ಬಸವರಾಜ ದಿಂಡೂರ ನಿಕಟ ಪೂರ್ವ್ ರಾಜ್ಯಾಧ್ಯಕ್ಷರು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ, ಶ್ರೀ ಜಿ.ಬಿ. ಪಾಟೀಲ (ಹೆಬ್ಬಾಳ) ಜಾಗತಿಕ ಲಿಂಗಾಯತ ಮುಖಂಡರು, ಎಂ. ಎಸ್ ಪಾಟೀಲ, ಮಹಾಂತೇಶ್ ತಾರಾಪುರ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

City Today News
9341997936

ದಲಿತ ಕೋಟಾದಡಿಯಲ್ಲಿ ಶ್ರೀ ಸುನೀಲ ವಲ್ಯಾಪುರೆ ಗೆ ಸಚಿವ ಸ್ಥಾನ ನೀಡುವಂತೆ ಭೋವಿ (ವಡ್ಡರ) ಸಮುದಾಯದ ಮುಖಂಡರ ಮನವಿ

ಪತ್ರಿಕಾ ಪ್ರಕಟಣೆ

ದಲಿತ ಕೋಟಾದಡಿಯಲ್ಲಿ ಶ್ರೀ ಸುನೀಲ ವಲ್ಯಾಪುರೆ ಗೆ ಸಚಿವ ಸ್ಥಾನ ನೀಡುವಂತೆ ಭೋವಿ (ವಡ್ಡರ) ಸಮುದಾಯದ ಮುಖಂಡರ ಮನವಿ
ಚಿಂಚೋಳಿಯಲ್ಲಿ ಬಿಎಸ್‌ ವೈ ನೀಡಿದ್ದ ಮಾತು ಉಳಿಸಿಕೊಳ್ಳುವ ಭರವಸೆ

ಬೆಂಗಳೂರು ಜುಲೈ 30 2021: ಚಿಂಚೋಳಿ ಉಪಚುನಾವಣೆಯ ಸಂಧರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್‌ ಯಡಿಯೂರಪ್ಪನವರು ನುಡಿದಂತೆ ವಿಧಾನಪರಿಷತ್‌ ಸದಸ್ಯರಾದ ಸುನೀಲ್‌ ವಲ್ಯಾಪುರೆ ಅವರನ್ನು ದಲಿತ ಕೋಟಾದಡಿಯಲ್ಲಿ ಮಂತ್ರಿ ಸ್ಥಾನ ನೀಡಬೇಕು ಎಂದು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಭೋವಿ(ವಡ್ಡರ) ಸಮುದಾಯದ ಮುಖಂಡರುಗಳು ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಪ್ರೆಸ್‌ ಕ್ಲಬ್‌ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಭೋವಿ(ವಡ್ಡರ) ಮಹಾಸಭಾ ಕಾರ್ಯಾಧ್ಯಕ್ಷ ರಾಘವೇಂದ್ರ ಧಾರವಾಡ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭೋವಿ (ವಡ್ಡರ) ಸಮುದಾಯವು ಬಿ.ಜೆ.ಪಿ. ಪಕ್ಷಕ್ಕೆ ಮೊದಲಿನಿಂದಲೂ ಬೆಂಬಲ ನೀಡುತ್ತಲೇ ಬಂದಿದೆ. ಅದರಲ್ಲೂ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಭೋವಿ (ವಡ್ಡರ) ಸಮುದಾಯ ಬಿ.ಜೆ.ಪಿ. ಪಕ್ಷಕ್ಕೆ ನಿರಂತರವಾಗಿ ಬೆಂಬಲ ಸೂಚಿಸಿದೆ. ಈ ಭಾಗದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಸಂಧರ್ಭದಲ್ಲಿ ಪಕ್ಷದಿಂದ ಶಾಸಕರು ಮತ್ತು ಸಂಸದರಾಗಿ ಆಯ್ಕೆಯಾಗಲು ನಮ್ಮ ಸಮುದಾಯದ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸುನೀಲ ವಲ್ಯಾಪುರೆ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ತಿಪ್ಪಣ್ಣ ಒಡಿರಾಜ, ಅಧ್ಯಕ್ಷರು, ಜಿಲ್ಲಾ ಭೋವಿ (ವಡ್ಡರ) ಸಮಾಜ ಕಲಬುರ್ಗಿ ಮಾತನಾಡಿ, 2 ಬಾರಿ ಶಾಸಕರಾಗಿ 1 ಬಾರಿ ಸಚಿವರಾಗಿ ಸುನೀಲ್‌ ವಲ್ಯಾಪುರೆ ಉತ್ತಮ ಕೆಲಸ ಮಾಡಿದ್ದು ಉತ್ತಮ ಆಡಳಿತದ ಅನುಭವ ಹೊಂದಿದ್ದವರಾಗಿದ್ದಾರೆ. ಶ್ರೀ.ಬಿ.ಎಸ್. ಯಡಿಯೂರಪ್ಪನವರು ಈ ರಾಜ್ಯದ ಮುಖ್ಯ ಮಂತ್ರಿಯಾಗಬೇಕೆಂದು ತಮ್ಮ ಮೀಸಲು ಕ್ಷೇತ್ರವಾದ ಚಿಂಚೋಳ ವಿಧಾನಸಭಾ ಕ್ಷೇತ್ರವನ್ನು ಉಪ ಚುನಾವಣೆ ಸಮಯದಲ್ಲಿ ಡಾ. ಅವಿನಾಶ ಜಾಧವರವರಿಗೆ ಬಿಟ್ಟುಕೊಡುವ ಮೂಲಕ ತ್ಯಾಗ ಮನೋಭಾವ ಮರೆದಿದ್ದಾರೆ. ಅಷ್ಟೆ ಅಲ್ಲದೆ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಗೆಲ್ಲಸುವ ಮುಖಾಂತರ ಶ್ರೀ.ಬಿ.ಎಸ್.ಯಡಿಯೂರಪ್ಪನವರ ಕೈ ಬಲಪಡಿಸಿದ್ದರು.

ಚಿಂಚೋಳಿ ಉಪ ಚುನಾವಣೆ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಮಾನ್ಯ. ಶ್ರೀ.ಬಿ.ಎಸ್.ಯಡಿಯೂರಪ್ಪನವರು ಸಾರ್ವಜನಿಕ ಸಮಾರಂಭದಲ್ಲಿ ಸುನೀಲ ವಲ್ಯಾಪುರವರನ್ನು ಎಂ.ಎಲ್.ಸಿ. ಮಾಡಿ ಮಂತ್ರಿಯನ್ನಾಗಿ ಮಾಡಿ ನನ್ನ ಪಕ್ಷದಲ್ಲಯೇ ಇಟ್ಟುಕೊಳ್ಳುತ್ತೇನೆ ಎಂದು ಸಭೆಯಲ್ಲಿ ಘೋಷಿಸಿದ್ದರು. ಅಂದು ಪಕ್ಷಕ್ಕಾಗಿ ತ್ಯಾಗ ಮಾಡಿದ ಸುನೀಲ್‌ ವಲ್ಯಾಪುರೆ ಅವರಿಗೆ ತಾವು ಕೊಟ್ಟ ಮಾತನ್ನು ನಿಕಟಪೂರ್ವ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಉಳಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ನಮ್ಮದಾಗಿದೆ ಎಂದು ಹೇಳಿದರು.

ಈ ಹಿನ್ನಲೆಯಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಏಕೈಕ ಭೋವಿ (ವಡ್ಡರ) ಸಮುದಾಯದ ಶಾಸಕರಾಗಿರುವ ಶ್ರೀ. ಸುನೀಲ ವಲ್ಯಾಪುರೆ ರವರಿಗೆ ದಲಿತ ಕೋಟಾದಡಿಯಲ್ಲಿ ಸಚಿವ ಸ್ಥಾನ ನೀಡಬೇಕು. ಈ ಮೂಲಕ ಹಿಂದುಳಿದ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಗಾಗಿ ಅವಕಾಶ ಕಲ್ಪಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್‌ ಬೊಮ್ಮಾಯಿ, ನಿಟಕಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್‌ ಯಡಿಯೂರಪ್ಪನವರು ಹಾಗೂ ಬಿಜೆಪಿ ಮುಖಂಡರುಗಳಿಗೆ ಮನವಿಯನ್ನು ಸಲ್ಲಿಸಲಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ್‌ ಕಂದಗಲ್‌ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೋವಿ ಸಮಾಜ, ಮಹಿಳಾ ಭೋವಿ(ವಡ್ಡರ) ಮಹಾಸಭಾ ಬೆಂಗಳೂರು ರಾಜ್ಯಾಧ್ಯಕ್ಷೆ ಶ್ರೀಮತಿ ಪದ್ಮಾ, ಬಾಗಲಕೋಟೆ ಜಿಲ್ಲಾ ಬೋವಿ ಸಮಾಜದ ಯುವ ಮುಖಂಡ ಈರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

City Today News
9341997936

ಸನ್ಮಾನ್ಯ ಶ್ರೀ. ಕೆ.ಎಸ್.ಈಶ್ವರಪ್ಪರವರನ್ನು ಉಪಮುಖ್ಯಮಂತ್ರಿ ಮಾಡುವಂತೆ ಒತ್ತಾಯ

ಸನ್ಮಾನ್ಯ ಶ್ರೀ. ಕೆ.ಎಸ್.ಈಶ್ವರಪ್ಪನವರು , ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿ , ಮೂರು ದಶಕಗಳ ಕಾಲ ತನ್ನ ಪಕ್ಷಕ್ಕಾಗಿ ತನ್ನನ್ನು ತೊಡಗಿಸಿಕೊಂಡು , ಜನಸಂಘದಲ್ಲಿ ಗುರುತಿಸಿಕೊಂಡಿದ್ದರು . 75-77ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬಂಧನಕ್ಕೊಳಗಾಗಿದ್ದರು . 1982 ರಲ್ಲಿ ಶಿವಮೊಗ್ಗ ನಗರ ಘಟಕದ ಅಧ್ಯಕ್ಷರಾಗಿ , ಬಿಜೆಪಿ , ಪಕ್ಷದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡವರು . 1989 ರಲ್ಲಿ ಮೊಟ್ಟ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ , ಅಂದಿನಿಂದ ನಿರಂತರ ಪರಿಶ್ರಮದಿಂದ ದಕ್ಷಿಣಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 2008 ರಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪನವರಷ್ಟೇ ಶ್ರಮವನ್ನು ಈಶ್ವರಪ್ಪನವರು ಪಟ್ಟಿದ್ದಾರೆ . ಇಂದಿಗೂ ಸಹ ತನ್ನ ಪಕ್ಷವನ್ನು ತಾಯಿಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದಾರೆ ಪಕ್ಷಸಿದ್ದಾಂತಗಳನ್ನು ಪಾಲನೆ ಮಾಡುತ್ತಿದ್ದಾರೆ . ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 55 % ರಷ್ಟಿರುವ ಹಿಂದುಳಿದ ವರ್ಗಗಳ ನಾಯಕರಾಗಿ , ಆ ವರ್ಗಗಳ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ .

ಯಾವತ್ತಿಗೂ ಸಹ ತನ್ನ ಪಕ್ಷನಿಷ್ಠೆಗೆ ಮೋಸ ಮಾಡದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ . ಯಡಿಯೂರಪ್ಪನವರು ಬಿಜೆಪಿ ಪಕ್ಷವನ್ನು ಬಿಟ್ಟಾಗಳು ಸಹ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮುನ್ನೆಡೆಸಿದ್ದರವರು . 2008-2013ರ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪನವರ , ಸದಾನಂದಗೌಡರು , ಜಗದೀಶಶೆಟ್ಟರ್‌ ರವರು ಮುಖ್ಯಮಂತ್ರಿಗಳಾಗಿದ್ದರು , 2019 ರಲ್ಲಿ ಮತ್ತೊಮ್ಮೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆ .

ರಾಜ್ಯದಲ್ಲಿ ಮತ್ತೆ ಲಿಂಗಾಯುತ ಸಮುದಾಯದ ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ . ಆದ್ದರಿಂದ ಮುಖ್ಯಮಂತ್ರಿ ಸ್ಥಾನದಿಂದ ಶ್ರೀ ಕೆ.ಎಸ್.ಈಶ್ವರಪ್ಪನವರಿಗೆ ರಾಜ್ಯ ಉಪಮುಖ್ಯಮಂತ್ರಿ ಸ್ಥಾನವನ್ನು ಕೊಡುವುದರ ಮೂಲಕ ಹಿಂದುಳಿದ ವರ್ಗ ಹಾಗೂ ರಾಜ್ಯದ ದೊಡ್ಡ ಸಮುದಾಯದಲ್ಲಿ ಒಂದಾದ ಕುರುಬ ಸಮಾಜಕ್ಕೆ ನ್ಯಾಯ ಕಲ್ಪಿಸಿಕೊಡಬೇಕಾಗಿ ಈ ಪತ್ರಿಕಾಗೋಷ್ಠಿಯ ಮೂಲಕ ರಾಜ್ಯ ಬಿಜೆಪಿ ಹಾಗೂ ಕೇಂದ್ರ ಬಿಜೆಪಿ ವರಿಷ್ಠರಿಗೆ ಮನವಿ ಮಾಡುತ್ತಿದ್ದೇವೆ .

-ವೀರೇಶ್ ಉಂಡೋಡಿ

ರಾಜ್ಯಾಧ್ಯಕ್ಷರು

ಮಂಜುನಾಥ್.ಎಂ

ರಾಜ್ಯ ಪ್ರಧಾನ ಕಾರ್ಯದರ್ಶಿ

City Today News
9341997936

ಪರಿಶಿಷ್ಟ ಜಾತಿಯ ಛಲವಾದಿ ( ಬಲಗೈ ) ಸಮುದಾಯದವರಾದ ಶ್ರೀ. ನೆಹರು ಓಲೇಕಾರ್ ರವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯ

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಛಲವಾದಿ ( ಬಲಗೈ ) ಸಮುದಯಾಕ್ಕೆ ಮುಖ್ಯಮಂತ್ರಿ ಹುದ್ದೆ ದಕ್ಕುತ್ತದೆ ಎಂಬ ಮಾತು ನಾಲ್ಕು ದಶಕಗಳಿಂದಲೂ ಕೇಳಿ ಬರುತ್ತಿದೆ , ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಸಂಖ್ಯೆ ಸುಮಾರು ಒಂದು ಕೋಟಿ ಐವತ್ತು ಲಕ್ಷ ) ಜನಸಂಖ್ಯೆ ಇದ್ದು , ಇದುವರೆಗೂ ಮುಖ್ಯಮಂತ್ರಿ ಹುದ್ದೆ ದೊರಕದೆ ಇರುವುದು ನಮ್ಮ ದುರ್ದೈವ . ರಾಜ್ಯದಲ್ಲಿ ಲಿಂಗಾಯತರು 8 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ ಹಾಗೇಯೆ ಒಕ್ಕಲಿಗರು 6 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ ಕೇವಲ 2 % ಇರುವ ಬ್ರಾಹ್ಮಣರು ಮುಖ್ಯಮಂತ್ರಿಗಳಾಗಿದ್ದಾರೆ , ಕುರುಬರು ಮತ್ತು ಹಿಂದುಳಿದವರು ಸಹ ಮುಖ್ಯಮಂತ್ರಿಗಳಾಗಿದ್ದಾರೆ . ಕಾಂಗ್ರೆಸ್ ಪಕ್ಷವು 70 ವರ್ಷಗಳಿಂದ ಆಡಳಿತ ನಡೆಸುತ್ತಾ ಬಂದಿರುತ್ತದೆ ಆ ಪಕ್ಷದಲ್ಲಿ ದಿವಂಗತ ಕೆ.ಹೆಚ್ . ರಂಗನಾಥ , ದಿವಂಗತ ಬಿ . ಬಸವಲಿಂಗಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲಾಯಿತು ನಂತರ ಶ್ರೀ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ || ಜಿ . ಪರಮೇಶ್ವರ್‌ರವರು ಮುಖ್ಯಮಂತ್ರಿ ರೇಸ್‌ನಲ್ಲಿ ಬಂದು ಕೊನೆಗಳಿಗೆಯಲ್ಲಿ ಕಾಂಗ್ರೆಸ್ High command ಇವರನ್ನು ಮೂಲೆ ಗುಂಪು ಮಾಡಿದರು . ಭಾರತೀಯ ಜನತಾ ಪಾರ್ಟಿಯಲ್ಲಿ ಉಳಿದಿರುವ 20 ತಿಂಗಳು ಶ್ರೀ ನೆಹರು ಓಲೇಕಾರ್ , ಅಧ್ಯಕ್ಷರು , ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇವರು ವಿದ್ಯಾವಂತ ಪದವಿದರರಾಗಿದ್ದು ಇವರನ್ನು ಮುಖ್ಯಮಂತ್ರಿ ಮಾಡಲಿ ಎಂಬುದಾಗಿ ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘವು ಒತ್ತಾಯಿಸುತ್ತದೆ . ಕಾಂಗ್ರೆಸ್ ಪಕ್ಷವು 70 ವರ್ಷದಿಂದ ಮುಖ್ಯಮಂತ್ರಿ ಮಾಡಲಿಲ್ಲ , ಪ್ರಾದೇಶಿಕ ಪಕ್ಷ ಜೆ.ಡಿ.ಎಸ್ ಮೇಲೆ ನಮಗೆ ನಂಬಿಕೆ ಇಲ್ಲ ಉಳಿದಿರುವುದು , ಭಾರತೀಯ ಜನತಾ ಪಾರ್ಟಿ ಸಂವಿಧಾನದ ಮೇಲೆ ನಂಬಿಕೆ , ಸಾಮಾಜಿಕ ಬದ್ದತೆ ಇದ್ದರೆ ಶ್ರೀ ನರೇಂದ್ರ ಮೋದಿ , ಶ್ರೀ ಅಮೀತ್ ಶಾ ರವರು ಸರ್ವರಿಗೂ ಸಮಪಾಲು , ಸರ್ವರಿಗೂ ಸಮಬಾಳು ಎಂದು ಹೇಳುತ್ತಿರುತ್ತಾರೆ ಇದನ್ನು ಸಾಬೀತು ಪಡಿಸಲಿ ಮತ್ತು ಆರ್.ಎಸ್.ಎಸ್ ದಲಿತರ ಪರವಾಗಿದೆ , ಎಂದರೆ ದಲಿತ ಮುಖ್ಯಮಂತ್ರಿ ಮಾಡಿ 70 ವರ್ಷದಿಂದ ದಲಿತ ಮುಖ್ಯಮಂತ್ರಿ ಮಾಡಿಲ್ಲ ಎಂಬ ಕಪ್ಪು ಚುಕ್ಕೆ ಉಳಿದಿದೆ . ಅದನ್ನು ಬಿ.ಜೆ.ಪಿ ಪಕ್ಷವು ಅಳಿಸಿ ಸಾಮಾಜಿಕ ನ್ಯಾಯ ಮತ್ತು ಸಂವಿಧಾನಕ್ಕೆ ಗೌರವ ಕೊಡುತ್ತದೆ ಎಂದು ನಂಬಿರುತ್ತೇವೆ ಎಂದು ಪತ್ರಿಕಾಗೋಷ್ಥಿಯಲ್ಲಿ ಅಂದರು.

City Today News
9341997936

ಕರ್ನಾಟಕ ರಾಜ್ಯಾದ್ಯಂತ ಸಮಾಜವಾದಿ ಪಾರ್ಟಿ ಬಲಿಷ್ಠ ಹಾಗೂ ಸದೃಢ ಸಂಘಟನೆ ರಾಜ್ಯಾಧ್ಯಕ್ಷ ಎನ್.ಮಂಜಪ್ಪ , ಸಂಕಲ್ಪ

ಎನ್.ಮಂಜಪ್ಪ ಸಮಾಜವಾದಿ ಪಾರ್ಟಿಯ ರಾಜ್ಯಾಧ್ಯಕ್ಷರನ್ನಾಗಿ ದಿನಾಂಕ : 10-07 2021 ರಂದು ನೇಮಕ ಆದೇಶ ಮಾಡಿರುವ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಖಿಲೇಶ್ ಯಾದವ್ ಹಾಗೂ ರಾಜ್ಯದ ಉಸ್ತುವಾರಿ ರಾಜೀವ್ ರೈ ಮತ್ತು ಕರ್ನಾಟಕ ರಾಜ್ಯದ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ನನ್ನ ಸ್ನೇಹಿತರು ಮತ್ತು ಹಿತೈಷಿಗಳಿಗೆ ಅಭಿನಂದನೆಗಳು .

ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಪ್ರವಾಸ ಮಾಡಿ ಪಕ್ಷವನ್ನು ಸದೃಢವಾಗಿ ಮತ್ತು ಬಲಿಷ್ಠವಾಗಿ ಸಂಘಟನೆಯನ್ನು ಕಟ್ಟುತ್ತೇನೆ .

ಸಮಾಜವಾದಿ ಸಮಾವೇಶ ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜನೆ ಮಾಡಲಾಗುವುದು . ಈ ಸಮಾವೇಶಕ್ಕೆ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಖಿಲೇಶ್ ಯಾದವ್‌ರವರು ಪಾಲ್ಗೊಳ್ಳುತ್ತೇನೆಂದು ತಿಳಿಸಿರುತ್ತಾರೆ ಹಾಗೂ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರುಗಳು , ರಾಜ್ಯದ ನಾಯಕರುಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ .

ಈಗ ಪಕ್ಷದ ಎಲ್ಲಾ ಸಮಿತಿಗಳನ್ನು ರದ್ದುಪಡಿಸಲಾಗಿದೆ . ಆಗಸ್ಟ್ ಮೊದಲನೇ ವಾರದೊಳಗಾಗಿ ಎಲ್ಲಾ ನೂತನ ಪದಾಧಿಕಾರಿಗಳನ್ನು ಮತ್ತು ಎಲ್ಲಾ ಸಮಿತಿಗಳನ್ನು ರಚಿಸುತ್ತೇನೆ . ಈ ಮುಖಾಂತರವಾಗಿ ಪಕ್ಷದ ಬಲವರ್ಧನೆ ಮತ್ತು ಸದಸ್ಯತ್ವ ನೋಂದಣಿ ಹಾಗೂ ಈಗೀರುವ ಆಡಳಿತ ರೂಢ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯಗಳನ್ನು ಖಂಡಿಸುತ್ತ ಹೋರಾಟದ ಮೂಲಕ ಪಕ್ಷವನ್ನು ಸದೃಢವಾಗಿ ಕಟ್ಟುತ್ತೇನೆ . ಸಮಾಜವಾದಿ ಸಿದ್ಧಾಂತವನ್ನು ರಾಜ್ಯದ ಎಲ್ಲಾ ಜನರಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು .

ಈ ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಕಾರ್ಯಕರ್ತರಾದ ಆಲಿಬಾಬ , ಲಕ್ಷ್ಮೀನಾರಾಯಣಗೌಡ , ಉದಯಶಂಕರ್ , ಎಸ್.ಜಿ.ಮಥ್ , ರಾಯಚೂರು , ಅಮೃತ್‌ರಾವ್ , ಗುಲ್ಬರ್ಗ , ಸತ್ಯನಾರಾಯಣ ಯಾದವ್ , ಯಾದಗಿರಿ , ಶಂಕರ್ ಯಾದವ್ , ಬೀದರ್ , ಶಿವರಾಮ್ , ಕೋಲಾರ , ಕೂನಿಕೆರೆ ರಾಮಣ್ಣ , ಚಿತ್ರದುರ್ಗ , ಗಿರೀಶ್ , ರಾಮನಗರ , ರವಿಹೆಗ್ಗಡೆ , ಶಿವಮೊಗ್ಗ ಇನ್ನು ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

City Today News
9341997936