ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕರಿಗೆ ಸ್ಥಾನಮಾನ ದೊರೆತಿಲ್ಲ

ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕರಿಗೆ ಸ್ಥಾನಮಾನ ದೊರೆತಿಲ್ಲ . ನಮ್ಮ ಅಸಂಘಟಿತ ಕಾರ್ಮಿಕರು ಸುಮಾರು ಭಾರತದಲ್ಲಿ 62 % ಕಾರ್ಮಿಕರಿದ್ದಾರೆ ಸಂಘಟಿತ ಕಾರ್ಮಿಕರು 11 % ಕಾರ್ಮಿಲದ್ದಾರೆ . ಆದರೆ ಈ ದಿನ ಕಾರ್ಮಿಕ ಪ್ರತಿನಿಧಿಯು ಒಬ್ಬರು ಇಲ್ಲ . 543 ಲೋಕಸಭಾ ಕ್ಷೇತ್ರದಲ್ಲಿ 1 ಕಾರ್ಮಿಕ ಮುಖಂಡರಿಗೆ ಅವಕಾಶ ನೀಡದೇ ಕಾರ್ಮಿಕ ನಾಯಕರುಗಳಿಗೆ ಬೇಸರ ಉಂಟು ಮಾಡಿದೆ ನಮ್ಮ ಕೆ . ಪಿ . ಸಿ . ಸಿ ವಿಭಾಗಳಾದ ಕಾರ್ಮಿಕ ಘಟಕ ಅಸಂಘಟಿತ ಕಾರ್ಮಿಕ ವಿಭಾಗ ಐಎನ್‌ಯುಸಿ ಎಲ್ಲಾರು ಸೇರಿಕೊಂಡು ಒಗ್ಗಟ್ಟಾಗಿ ಕೆಲಸಮಾಡಿ ಕಾಂಗ್ರೆಸಲ್ಲಿ ರಾಹುಲ್‌ಗಾಂಧಿಯನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲು ಬಲಪಡಿಸುತ್ತೇವೆ . ಇವತ್ತು ನಡೆಯುತ್ತಿರುವ ರಾಜಕೀಯದಲ್ಲಿ ಬಹಳ ತೊಂದರೆಗಳಾಗಿವೆ . ಕಾರ್ಮಿಕರನ್ನು ನಿರಾಕಲಸಿದೆ ಕೂಡಲೆ ಎಐಸಿಸಿಕೆ . ಪಿ . ಸಿ . ಸಿ ಕಾರ್ಮಿಕ ನಾಯಕರುಗಳಗೆ 2 ಸ್ಥಾನ ನೀಡಬೇಕೆಂದು ಒತ್ತಡ ಮಾಡುತ್ತಿದ್ದೇವೆ . ನಾನು ಕಳೆದ 40 ವರ್ಷಗಳಿಂದ ಕಾರ್ಮಿಕ ನಾಯಕನಾಗಿ ಕೆಲಸ ಮಾಡುತ್ತಿದ್ದೇನೆ . ಇವತ್ತಿನ ದಿವಸ ಬೆಂಗಳೂರು ಜಿಲ್ಲಾ ಉತ್ತರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇದ್ದೇನೆ . ನನಗೆ ಶ್ರೀಮಾನ್ ರಾಹುಲ್ ಗಾಂಧೀ ಏನೇಶ್ ಗುಂಡೂರಾವ್ , ಈಶ್ವರ್ ಖಂಡೆ , ಸಿದ್ದರಾಮಯ್ಯ , ಪರಮೇಶ್ವರ್ ಆಶೀರ್ವಾದವಿದೆ . ಅದೇ ರೀತಿ ನನಗೆ ಮಾಜಿ ಪ್ರಧಾನಮಂತ್ರಿಗಳಾದ ದೇವೆಗೌಡ , ಮುಖ್ಯಮಂತ್ರಿಗಳಾದ ಕುಮಾರಸ್ವಾಮಿರವರ ಆಶೀರ್ವಾದವಿರುತ್ತದೆ . ಇದಕ್ಕೆ ರಾಷ್ಟ್ರೀಯ ಐಎನ್‌ಎಯುಪಿ , ಅಧ್ಯಕ್ಷರಾದ ಶ್ರೀಮಾನ್ ಸಂಜೀವ್ ರೆಡ್ಡಿರವರ ಆಶೀರ್ವಾದವಿರುತ್ತದೆ . ಕಾರ್ಮಿಕ ಘಟಕ ಅಸಂಘಟಿತ ಕಾರ್ಮಿಕ ವಿಭಾಗ , ಐಎನ್‌ಟಿಯುಸಿ ರವರ ಸಹಕಾರವಿರುತ್ತದೆ ಎಂದು ಕಾಂಗ್ರಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಡಾ. ಎಸ್. ಎಸ್. ಫ್ರಕಾಶಂ ರವರು ಹೇಳಿಕೆ ನೀಡಿದರು.

City Today News

(citytoday.media)

9341997936

“ಕೆ ಪಿ ಸಿ ಸಿ ಸದಸ್ಯರಾದ ಶ್ರೀ ವಿನಯ ಗಾಂಧಿ ಯವರಿಂದ, ಕಾಂಗ್ರಸ್ ಪಕ್ಷ ತೊರೆದು ಬಿ ಜೆ ಪಿ ಪಕ್ಷ ಸೇರಿರುವ ಬಗ್ಗೆ ಪತ್ರಿಕಾ ಗೋಷ್ಠಿಯ ಹೇಳಿಕೆ”

ಹಾಸನದಲ್ಲಿ ಮಾಜಿ ಸಚಿವರಾಗಿದದ ಎ . ಮಂಜು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು . ಶ್ರೀ ಸಿದ್ದರಾಮಯ್ಯ ಕ್ಯಾಬಿನೆಟ್ನಲಿದರು . 1999 ರಲ್ಲಿ ಬಿಜೆಪಿ ಶಾಸಕರಾಗಿ ಚುನಾಯಿತರಾಗಿದ್ದವರು . 2003 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸನ್ಮಾನ್ಯ ಶ್ರೀ ಎಸ್ . ಎಂ . ಕೃಷ್ಣರವರು ಮುಖ್ಯಮಂತ್ರಿಗಳಾಗಿದ್ದಾಗ ಕಾಂಗ್ರೆಸ್ ಪಕ್ಷ ಸೇರಿದ್ದರು . ಪುನಃ ಕಾಂಗ್ರೆಸ್ ಪಕ್ಷ ತೊರೆದು ದಿನಾಂಕ 17 . 3 . 2019 ರಲ್ಲಿ ಬಿಜೆಪಿ ಪಕ್ಷವನ್ನು ಸೇರಿರುವ ಬಗ್ಗೆ .

1 ) ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಎ . ಮಂಜುರವರ ಅಕ್ಕನ ಪತಿ ಮಾಜಿ ಸಚಿವ ಹಾಗೂ ಮಾಜಿ ಲೋಕಸಭಾ ಸದಸ್ಯರಾದ ದಿವಂಗತ ಮಾನ್ಯಶ್ರೀ ಹೆಚ್ . ಎನ್ . ನಂಜೇಗೌಡರವರು ಮಾಜಿ ಪ್ರಧಾನಮಂತ್ರಿ ದಿವಂಗತ ಸನ್ಯ ಶ್ರೀ ರಾಜೀವಗಾಂಧಿಯವರ ವಿರುದ್ದ ಬೋಫೋರ್ಸ್ ಹಗರಣವನ್ನು ಆರೋಪ ಮಾಡಿ ಈ ಇಬ್ಬರೂ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು .

2 ) ಎ . ಮಂಜುರವರು ಅವಕಾಶವಾದಿಯಗಿದ್ದಾರೆ . ಬಿಜೆಪಿ ಪಕ್ಷದಲ್ಲಿ ಶಾಸಕರಾಗಿ ಹಣ ಮಾಡುವ ಉದ್ದೇಶದಿಂದ ಶ್ರೀ ಮಲ್ಯರವರು ರಾಜ್ಯಸಭೆಗೆ ನಿಂತಾಗ ಅವರಿಗೆ ಶಾಸಕರ ಮತ ಹಾಕಿಸಲು ಬೇಲೂರು ಕ್ಷೇತ್ರದ ಶಾಸಕರಾದ ಶ್ರೀ ಪುಟ್ಟರಂಗನಾಥ ಹಾಗೂ ಶ್ರೀ ಕೆ . ಹೆಚ್ . ಹನುಮೇಗೌಡರು ಇನ್ನು ಹಲವಾರು ಶಾಸಕರಿಂದ ಮತ ಹಾಕಿಸಲು ಹಣ ನೀಡುವ ಮುಂಚೂಣಿ ಪಾತ್ರವಹಿಸಿ ಅಲ್ಲಿಯೂ ಸಹ ಹಣ ಲಪಟಾಯಿಸಿದ್ದರು .

3 ) ಶ್ರೀ ರಾಜು ಚಂದ್ರಶೇಖರ ರವರು ರಾಜ್ಯಸಭೆಗೆ ಸ್ಪರ್ಧಿಸಿದ್ದಾಗ ಅಲ್ಲಿಯೂ ಸಹ ಹಣ ಪಡೆದು ಬಿಜೆಪಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿ ಪಕ್ಷದಿಂದ ಉಚ್ಚಾಟನೆಗೊಂಡರು .

4 ) ವಕ್ಕಲಿಗರ ಸಂಘದ ಕಾರ್ಯದರ್ಶಿಯಾಗಿದ್ದಾಗ ಅಲ್ಲಿಯೂ ಕೋಟ್ಯಾಂತರ ರೂಪಾಯಿ ಲಪಟಾಯಿಸಿ ಕ್ರಿಮಿನಲ್ ಕೇಸು ದಾಖಲಾಗಿತ್ತು . ಕೆಲವು ದಿನಗಳು ತಲೆಮರೆಸಿಕೊಂಡಿದ್ದುದನ್ನು ಕಾಣಬಹುದು .

5 ) ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎ . ಮಂಜುರವರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಹೀನಾಯವಾಗಿ ಸೋತಿದ್ದನ್ನು ಕಾಣಬಹುದಾಗಿದೆ . ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ಕರೆತಂದು ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಜಿಲ್ಲಾ ಪಂಚಾಯಿತಿ ಟಿಕೆಟನ್ನು ಕೊಟ್ಟಿದ್ದರಿಂದ 40 ಜಿಲ್ಲಾ ಪಂಚಾಯಿತಿ ಸ್ಥಾನದಲ್ಲಿ ಕೇವಲ 16 ಸ್ಥಾನ ಗೆಲುವು ಪಡೆದಿರುವುದನ್ನು ಕಾಣಬಹುದು . ತಾಲ್ಲೂಕು ಪಂಚಾಯಿತಿಯಲ್ಲಿ ಜಿಲ್ಲೆಯಲ್ಲಿ 8 ತಾಲ್ಲೂಕಿನಲ್ಲಿ ಒಂದು ತಾಲ್ಲೂಕುನಲ್ಲಿ ಸಹಾ ಅಧಿಕಾರಕ್ಕೆ ಬರಲಿಲ್ಲ . ಜಿಲ್ಲಾ ಪಂಚಾಯಿತಿಯಲ್ಲಿ ಕೇವಲ 16 ಸ್ಟಾನ ತಾಲ್ಲೂಕು ಪಂಚಾಯಿತಿಯಲ್ಲಿ ಜಿಲ್ಲೆಯ 7 ತಾಲ್ಲೂಕಿನಲ್ಲಿ ಒಂದು ತಾಲ್ಲೂಕಿನಲ್ಲಿ ಅಧಿಕಾರ ಇಲ್ಲದಂತೆ ಜಿಲ್ಲಾ ಉಸ್ತುವಾರಿ ಸಚಿವ ಎ . ಮಂಜು ನಾಯಕತ್ವ ಸಂಪೂರ್ಣ ವಿಫಲರಾಗಿದ್ದಾರೆ ಎಂಬುದಾಗಿ ಹಾಸನ ಜಿಲ್ಲಾ ಮುಖಂಡರು ಸುಮಾರು 30 ಜಿಲ್ಲಾ ಕಾಂಗ್ರೆಸ್ ಮುಖಂಡರು ಮಾನ್ಯಶ್ರೀ ಸಿದ್ದರಾಮಯ್ಯನವರು ಅಂದಿನ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ಜಿಲ್ಲೆಯ ಅಧಿಕಾರಿಗಳಿಂದ ಹಾಗೂ ಉಪವಿಭಾಗಾಧಿಕಾರಿಗಳು , ತಹಶೀಲ್ದಾರರು , ಎಲ್ಲೆಯ ಉನ್ನತಾಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಾ ಕಾಂಗ್ರೆಸ್ ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷಿಸುತ್ತಾರೆ . ಕೂಡಲೇ ಸಚಿವ ಸ್ಥಾನ ಬದಲಾಯಿಸಿ ದಿವಂಗತ ಶ್ರೀ ರುದ್ರೇಶ ಗೌಡರಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಮನವಿ ಮಾಡಿದ್ದೇವು . ಆ ಸಂದರ್ಭದಲ್ಲಿ ಜಿಲ್ಲೆಯ ಮಾಜಿ ಶಾಸಕರು ಹಾಗೂ ಮಾಜಿ ರಾಜ್ಯಸಭಾ ಸದಸ್ಯರು ನಿಗಮ ಮಂಡಳಿಯ ಅಧ್ಯಕ್ಷರು ಕೆಪಿಸಿಸಿ ಕಾರ್ಯದರ್ಶಿಗಳು , ಪಿಸಿಸಿ ಸದಸ್ಯರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಇನ್ನೂ ಮುಂತಾದ ನಾಯಕರು ಮನವಿ ಮಾಡಿದ್ದೆವು . ಈ ಸಂಬಂಧವಾಗಿ ನಾವು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ : ಜಿ . ಪರಮೇಶ್ವರ್ , ಸಚಿವರಾದ ಡಿ . ಕೆ . ಶಿವಕುಮಾರ್ ರವರನ್ನು ಸಹಾ ಬೇಟಿ ಮಾಡಿದ್ದೆವು .

6 ) ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೇಮಕ ಮಾಡಲು ಒಂದು ಕೋಟಿ ರೂ ಪಡೆದು ನಗರಾಭಿವೃದಿ ಅಧ್ಯಕ್ಷರನ್ನು ಕೃಷ್ಣಸ್ವಾಮಿಯವರನ್ನು ಮಾಡಿದ್ದಾರೆ ಎಂದು ಜಿಲ್ಲಾ ದಲಿತ ಸಂಘಟನೆಯ ಕಾಂಗ್ರೆಸ್ ಕಾರ್ಯಕರ್ತ ಮುಖಂಡರು ಸುಮಾರು 15 ದಿನಗಳ ಕಾಲ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಧರಣಿ ಸತ್ಯಾಗ್ರಹ ಮಾಡಿ ಎ . ಮಂಜು ಪ್ರತಿಕೃತಿಯನ್ನು ಹಾಸನ ನಗರದಲ್ಲಿ ಪ್ರತಿಭಟನೆ ಮಾಡಿ ಪ್ರತಿಕೃತಿಯನ್ನು ದಹಿಸಿದ್ದನ್ನು ರಾಜ್ಯದ ಜನತೆ ನೋಡಿದ್ದಾರೆ .

7 ) ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ 7 ವಿಧಾನಸಭಾ ಸ್ಥಾನಗಳಿದ್ದು ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಲ್ಲದ ವ್ಯಕ್ತಿಗಳನ್ನು ವಿಧಾನಸಭೆಯ ಅಭ್ಯರ್ಥಿಗಳನ್ನಾಗಿ ಮಾಡಿದಂತ ಮಂಜುರವರು ತಾನು ಸೋಲುವುದರ ಮೂಲಕ 7 ಸ್ಥಾನದಲ್ಲಿ ವಿಧಾನಸಭೆ ಅಭ್ಯರ್ಥಿಗಳು ಪರಾಜಿತ ಗೊಂಡಿದ್ದನ್ನು ಕಾಣಬಹುದು . 7 ) 2005ರಲ್ಲಿ ಅರಕಲಗೂಡು ಕ್ಷೇತ್ರದಿಂದ ಹೀನಾಯವಾಗಿ ಸೋತ ಎ . ಮಂಜು ಪುನಹ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದರು . ನಂತರ ನಡೆದ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ನಡೆದು ಕೇವಲ 8 ಜಿಲ್ಲಾ ಪಂಚಾಯಿತಿ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು .

8 ) ಹಾಸನ ಜಿಲ್ಲಾಧಿಕಾರಿಗಳ ಜೊತೆ ಅಸಭ್ಯವಾಗಿ ನಡೆದುಕೊಂಡು ಶ್ರವಣಬೆಳಗೊಳ ಮಹಾಭಿಷೇಕ ಕಾರ್ಯಕ್ರಮದ ಅಭಿವೃದ್ಧಿ ನಿರ್ವಹಣೆ ಕಾಮಗಾರಿ ಮಾಡಲು ಸುಮಾರು 500 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಲಾಗಿದ್ದು ಆ ಕಾಮಗಾರಿಯನ್ನು ಎ . ಮಂಜುರವರ ಬೆಂಬಲಿಗರಿಗೆ ನೀಡಬೇಕೆಂದು ಜಿಲ್ಲಾಧಿಕಾರಿ ಸಿಂಧಾರಿಯವರ ಜೊತೆ ವಾಗ್ವಾದಕ್ಕೆ ಇಳಿದರು . ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಒಪ್ಪದ ಕಾರಣ ಜಿಲ್ಲಾಧಿಕಾರಿಡಿ ಶ್ರೀಮತಿ ಸಿಂಧಾರಿಯವರನ್ನು ವರ್ಗಾವಣೆ ಮಾಡಿಸಿದರು . ಕೋರ್ಟಿನ ಮೊರೆ ಹೋಗಿದ್ದರಿಂದ ಪುನಹ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು .

9 ) ಸಾರ್ವಜನಿಕರು ಎ . ಮಂಜು ವಿರುದ್ದ ಪ್ರತಿಭಟನೆಗಳನ್ನು ನಡೆಸಿದರು . ಎ . ಮಂಜು ದುರಾಡಳಿತ ದುರಹಂಕಾರ ಹಣ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ವಿಧಾನಸಭೆಯ 7 ಜನ ಅಭ್ಯರ್ಥಿಗಳ ಪರಾಜಿತರಾಗಿ ಪಕ್ಷಕ್ಕೆ ಹಿನ್ನಡೆಯಾಗಿಯಾಗಿತ್ತು . ಹಾಸನ ಲೋಕಸಭಾ ಕ್ಷೇತ್ರದ ಮತದಾರ ಬಂಧುಗಳಲ್ಲಿ ಕಳಕಳಿಯ ಮನವಿ . ಎ . ಮಂಜು ಪಕ್ಷಾಂತರಿ ಹಾಗೂ ಭ್ರಷ್ಟಾಚಾರಿ ಹಾಗೂ ಸಮಯಸಾಧಕ , ಲಂಚಕೋರ ಕುಟುಂಬ ರಾಜಕಾರಣಿಯಾಗಿರುವುದರಿಂದ ನಮ್ಮ ಎಲ್ಲಾ ಮತದಾರರಲ್ಲಿ ಮನವಿ ಯಾವುದೇ ಕಾರಣಕ್ಕೂ ಮತವನ್ನು ಕೊಟ್ಟು ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿಕೊಡಬೇಡಿ , ಹಾಸನ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಯಾರೂ ಎ . ಮಂಜುವಿನ ಜೊತೆ ಹೋಗುವುದಲ್ಲ ಹಾಗೂ ಬೆರಳೆಣಿಕೆಯಷ್ಟು ಅವನ ಹಿಂಬಾಲಕರು ಅವನ ಹಿಂದೆ ಹೋಗಬಹುದು . ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವ ನಮ್ಮ ರಾಷ್ಟ್ರನಾಯಕರೂ ಎಐಸಿಸಿ ಅಧ್ಯಕ್ಷರಾದ ಶ್ರೀ ರಾಹುಲ್‌ಗಾಂಧಿಯವರ ಮೈತ್ರಿ ಅಭ್ಯರ್ಥಿಯಾದ ಶ್ರೀ ಪ್ರಜ್ವಲ್ ರೇವಣ್ಣರವರನ್ನು ಬೆಂಬಲಿಸಬೇಕಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಹಾಸನ ಲೋಕಸಭಾ ಮತದಾರರಲ್ಲಿ ವಿನಂತಿಸಿದರು.

City Today News

(citytoday.media)

9341997936

ಡಿ . ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ “ಡಾ : ಕೆ . ಅನ್ನದಾನಿರವರಿಗೆ” ಅಭಿನಂದನಾ ಕಾರ್ಯಕ್ರಮ

ಡಿ . ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ : ಕೆ . ಅನ್ನದಾನಿರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಪಕ್ಷದ ರಾಜ್ಯ ಕಛೇರಿಯಲ್ಲಿ ದಿನಾಂಕ : 15 – 03 – 2019ನೇ ಶುಕ್ರವಾರ ಮಧ್ಯಾಹ್ನ : 12 – 30 ಘಂಟೆಗೆ ಹಮ್ಮಿಕೊಳ್ಳಲಾಗಿದ್ದು ,

ಅಂದೇ ಶ್ರೀ ಕೆ . ಎ . ಆನಂದ್‌ರವರು ಕರ್ನಾಟಕ ಪ್ರದೇಶ ಜನತಾದಳ ( ಜಾತ್ಯತೀತ ) ಪಕ್ಷದ ಪರಿಶಿಷ್ಠ ಜಾತಿ ವಿಭಾಗದ “ ನೂತನ ಅಧ್ಯಕ್ಷ ” ರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ . ಈ ಕಾರ್ಯಕ್ರಮಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್ . ಡಿ . ದೇವೇಗೌಡರವರು , ರಾಜ್ಯಾಧ್ಯಕ್ಷರಾದ ಶ್ರೀ ಅಡಗೂರು ಎಚ್ . ವಿಶ್ವನಾಥ್‌ರವರು , ಪಕ್ಷದ ಸಚಿವರು , ಶಾಸಕರು , ಹಿರಿಯ ಮುಖಂಡರುಗಳು ಭಾಗವಹಿಸಲಿದ್ದಾರೆ .

– ಕಿರಣ್‌ಕುಮಾರ್‌ ಬಿ.ಆರ್

ರಾಜ್ಯ ಪ್ರಧಾನ ಕಾರ್ಯದರ್ಶಿ

ಪರಿಶಿಷ್ಠ ಜಾತಿ ವಿಭಾಗ

ಕರ್ನಾಟಕ ಪ್ರದೇಶ ಜನತಾದಳ ( ಜಾತ್ಯತೀತ )

City Today News

(citytoday.media)

9341997936

“ನನಗೆ ಬಹಳಷ್ಟು ನೋವುಂಟಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ” -ವೈಜನಾಥ ಪಾಟೀಲ ಮಾಜಿ ಸಚಿವರು , ಕಲಬುರಗಿ .

ಕರ್ನಾಟಕ ರಾಜ್ಯದಲ್ಲಿಯೇ ಶೈಕ್ಷಣಿಕ , ಆರ್ಥಿಕ ಹಾಗೂ ಅಭಿವೃದ್ಧಿಯಲ್ಲಿ ಹಿಂದುಳಿದ ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ದಿಗಾಗಿ ಹಾಗೂ 371ನೇ ಕಲಂ ತಿದ್ದುಪಡಿಗಾಗಿ ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ಹಾಗೂ ಅನೇಕ ಕನ್ನಡಪರ ಸಂಘಟನೆಗಳು ಸೇರಿ ಹೋರಾಟ ಮಾಡುವ ಮೂಲಕ ಈ ಭಾಗದಲ್ಲಿ ಜನಜಾಗೃತಿ ಮೂಡಿಸಿದಾಗ , ಅಂದಿನ ಮುಖ್ಯಮಂತ್ರಿ ಶ್ರೀ ಬಿ . ಎಸ್ . ಯಡಿಯೂರಪ್ಪನವರು ವಿಧಾನಸಭೆ ಮತ್ತು ವಿಧಾನ ಪರಿಷತ್‌ಗಳಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು , ಕೇಂದ್ರ ಸರ್ಕಾರಕ್ಕೆ ಕಳುಹಿಸಿದರು . ಈ ರಸ್ತಾ ರೋಕೋ , ರೈಲು ರೋಕೊ ಹಾಗೂ ಬಂದ್‌ನಂಥಹ ಉಗ್ರ ಹೋರಾಟಗಳಿಗೆ ಮತ್ತು ರಾಜ್ಯ ಸರಕಾರದ ನಿರ್ಣಯದಿಂದ ಕೇಂದ್ರ ಸರಕಾರ 371ಕ್ಕೆ ತಿದ್ದುಪಡಿ ತರಲಾಯಿತು . ಆದರೆ ದುರ್ದೈವದಿಂದ ಆ ತಿದ್ದುಪಡಿಯ ಲಾಭ ಹೈದ್ರಾಬಾದ ಕರ್ನಾಟಕದವರಿಗೆ ಸರಿಯಾಗಿ ಸಿಗದಂತೆ ನೋಡಿಕೊಳ್ಳಲಾಗುತ್ತಿದೆ . ಹೊಸದಾಗಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರಕಾರಕ್ಕೂ ಈ ವಿಷಯ ಗಮನಕ್ಕೆ ತರಲಾಗಿದೆ . ಆದರೂ ಹೊಸ ಸರಕಾರದಲ್ಲಿಯೂ ಕಾಂಗ್ರೆಸ್ ಪಕ್ಷದವರ ಪ್ರಮುಖ ಪಾತ್ರವಿದ್ದರೂ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ . ಕಳೆದ 5 ವರ್ಷದ ಹಿಂದೆ ಸಂವಿಧಾನದ 371ನೇ ಸಂಸತ್ತಿನಲ್ಲಿ ತಿದ್ದುಪಡಿ ಮಾಡಲಾಯಿತು . ಅದರ ಪ್ರಕಾರ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿನ ಸರಕಾರದ ಎಲ್ಲ ನೇಮಕಾತಿಗಳಲ್ಲಿ ಮೀಸಲಾತಿ ಒದಗಿಸಬೇಕೆಂದು ಅಂದಿನ ಸರಕಾರಕ್ಕೆ ಸೂಚನೆ ಕೊಡಲಾಗಿತ್ತು . ಆ ಸೂಚನೆ ಪ್ರಕಾರ ಸರ್ಕಾರಿ ಸೇವೆಗಳಲ್ಲಿ ಬರುವ ಎ ಗ್ರೇಡ್ 60 % ಬಿ ಗ್ರೇಡ್‌ದಲ್ಲಿ ಬರುವ ನೌಕರರಿಗೆ 65 % , ಸಿ ಗ್ರೇಡ್ ನೌಕರರಿಗೆ 75 % ಹಾಗೂ ಡಿ ಗ್ರೇಡ್ ನೌಕರರಿಗೆ 80 % ರಷ್ಟು ಮೀಸಲಾತಿ ಒದಗಿಸುವ ಆದೇಶ ಹೊರಡಿಸಲಾಗಿತ್ತು . ಈ ಭಾಗದಲ್ಲಿನ ಪ್ರತಿಯೊಂದು ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಈ ಭಾಗದ ಖಾಲಿ ಸ್ಥಾನಗಳನ್ನು ತುಂಬದೇ ಹಾಗೇ ಇಟ್ಟಿರುವುದು , ಹೈದ್ರಾಬಾದ ಕರ್ನಾಟಕ ಪ್ರದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ತುಂಬದೇ ಇರುವುದರಿಂದ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುತ್ತಿವೆ . ಅದೇ ಪ್ರಕಾರ ಈ ಭಾಗದ ಅಭಿವೃದ್ದಿಗಾಗಿ ಕೋಟ್ಯಾವಧಿ ರೂಪಾಯಿ ವಿವಿಧ ಅಭಿವೃದ್ಧಿ ಕಾಮಗರಿಗಳ ಹೆಸರಿಗೆ ಮಾತ್ರ ಘೋಷಣೆ ಮಾಡಲಾಗುತ್ತಿವೆ . ಆದರೆ ಆ ಹಣ ಖರ್ಚು ಆಗದಂತೆ ಬುದ್ದಿವಂತಿಕೆಯಿಂದ ನೋಡಿಕೊಳ್ಳಲಾಗುತ್ತಿದೆ .

ಸರಕಾರದಿಂದ ಬಿಡುಗಡೆಯಾದ ಹಣ ಖರ್ಚಾಗಬೇಕಾದರೆ ಅದರ ಸಲುವಾಗಿ ಸಿಬ್ಬಂದಿಗಳನ್ನು ನೇಮಕಾತಿ ಮಾಡಬೇಕಾಗುತ್ತದೆ . ಈ ಸಿಬ್ಬಂದಿಗಳನ್ನು ಸಹ ನೇಮಕಾತಿ ಆಗದಂತೆ ನೋಡಿಕೊಳ್ಳಲಾಗುತ್ತಿದೆ . ವೈದ್ಯಕೀಯ , ಇಂಜನೀಯರಿಂಗ್ ಮತ್ತು ಮೊದಲಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಸರಿಯಾದ ರೀತಿಯಲ್ಲಿ ಮೀಸಲಾತಿ ಸಿಗುತ್ತಿಲ್ಲ . ಈ ಮೀಸಲತಿಗಳನ್ನು ಪಡೆಯಬೇಕಾದರೆ ಕೆಲವು ಅಧಿಕಾರಿಗಳಿಂದ ಅರ್ಹತಾ ಪತ್ರ ಪಡೆಯಬೇಕಾಗುತ್ತದೆ . ಇದರಿಂದ ಬಹುತೇಕ ಅಭ್ಯರ್ಥಿಗಳು ತೀವ್ರ ತೊಂದರೆ ಅನುಭವಿಸಬೇಕಾಗಿದೆ . ಇನ್ನೊಂದೆಡೆ ಬಹಳಷ್ಟು ಅಭ್ಯರ್ಥಿಗಳು ವಂಚಿತರಾಗುತ್ತಿದ್ದಾರೆ . ಈ ಎಲ್ಲ ವಿಷಯಗಳು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಯಿತು . ಆದರೆ ಅವರು ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ . ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸಮ್ಮಿಶ್ರ ಸರ್ಕಾರದಲ್ಲಿಯೂ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಪ್ರಮುಖ ಪಾತ್ರವಹಿಸಿದ್ದರೂ 371 ( ಜೆ ) ಕಲಂನಲ್ಲಿ ಸಿಗಬೇಕಾದ ಲಾಭಗಳು ನಮ್ಮ ನಮ್ಮ ಹೈದ್ರಾಬಾದ ಕರ್ನಾಟಕ ಪ್ರದೇಶದ ಯುವಕರಿಗೆ ಸಿಗುತ್ತಿಲ್ಲ . ಈ ಎಲ್ಲ ವಿಷಯಗಳನ್ನು ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಜಾರಿಗೊಳಿಸದೇ ಇರುವುದರಿಂದ ಈ ಭಾಗದ ಹೋರಾಟಗಾರರಿಗೆ ಹಾಗೂ ವೈಯಕ್ತಿಕವಾಗಿ ನನಗೆ ಬಹಳಷ್ಟು ನೋವುಂಟಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದು , ಇದನ್ನು ತಾವು ಸ್ವೀಕರಿಸಬೇಕಾಗಿ ಕೋರುತ್ತೇನೆ ಎಂದರು.

City Today News

(citytoday.News)

9341997936

ಹಿಂದೂಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದ  ಪಾಕಿಸ್ತಾನದ ಪಂಜಾಬ್ ಸಚಿವ ಫಯಾಜ್ ಉಲ್ ಹಸ್ಸನ್ ಚೋಹನ್ರನ್ನು ಸಂಪುಟದಿಂದ ವಜಾ ಮಾಡಲಾಗಿದೆ.

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಫಯ್ಯಾಜುಲ್ ಹಿಂದುಗಳ ಭಾವನೆಗೆ ಧಕ್ಕೆ ತರುವಂತ ಹೇಳಿಕೆ ನೀಡಿದ್ದರು.

ಲಾಹೋರ್ (ಮಾ.6): ಹಿಂದೂಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದ ಪಾಕಿಸ್ತಾನದ ಪಂಜಾಬ್ ಸಚಿವ ಫಯಾಜ್ ಉಲ್ ಹಸ್ಸನ್ ಚೋಹನ್ರನ್ನು ಸಂಪುಟದಿಂದ ವಜಾ ಮಾಡಲಾಗಿದೆ.
ಪಂಜಾಬ್ ಸರ್ಕಾರದಲ್ಲಿ ಮಾಹಿತಿ ಹಾಗೂ ಸಾಂಸ್ಕೃತಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಫಯಾಜ್ ಹಿಂದೂಗಳ ವಿರುದ್ಧ ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ಟೀಕೆಗಳು ಕೇಳಿ ಬಂದಿದ್ದವು. ಈ ಬಗ್ಗೆ ಕ್ಷಮೆ ಕೇಳಿದ ಹೊರತಾಗಿಯೂ ಪಕ್ಷದ ಹಿರಿಯ ನಾಯಕರೇ ಫಯಾಜ್ ವಿರುದ್ಧ ಅಪಸ್ವರ ಎತ್ತಿದ್ದರು. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ಗೆ ಸೂಚನೆ ನೀಡಿದ್ದರು.

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಫಯಾಜ್ ಹಿಂದುಗಳ ಭಾವನೆಗೆ ಧಕ್ಕೆ ತರುವಂಥ ಹೇಳಿಕೆ ನೀಡಿದ್ದರು. ಇದಾದ ನಂತರ ಹೇಳಿಕೆಗೆ ಸಮರ್ಥನೆ ನೀಡುವ ಕೆಲಸವನ್ನೂ ಮಾಡಿದ್ದರು. “ನಾನು ನನ್ನ ಹೇಳಿಕೆಗೆ ಕ್ಷಮೆ ಕೇಳುತ್ತೇನೆ. ಪಾಕಿಸ್ತಾನದಲ್ಲಿರುವ ಹಿಂದು ಸಮುದಾಯ ಉದ್ದೇಶಿಸಿ ನಾನು ಈ ಹೇಳಿಕೆ ನೀಡಿಲ್ಲ. ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಲ್ಲಿನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದೆ. ಪಾಕ್ನಲ್ಲಿರುವ ಹಿಂದುಗಳನ್ನು ಉದ್ದೇಶಿಸಿ ಈ ಹೇಳಿಕೆ ನೀಡಿಲ್ಲ. ದೇಶಕ್ಕೋಸ್ಕರ ಸೇವೆ ಸಲ್ಲಿಸಲು ನಾನು ಸದಾ ಸಿದ್ಧ,” ಎಂದಿದ್ದರು. ಅವರ ಕ್ಷಮಾಪಣಾ ಹೇಳಿಕೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.

ಭಾರತದಲ್ಲಿ ಹಿಂದೂಗಳ ವಿರುದ್ಧ ಸರ್ವೇಸಾಮಾನ್ಯವಾಗಿ ಅವಹೇಳನಕಾರಿ ಹೇಳಿಕೆ ನೀಡುವ ನಾಯಕರುಗಳ ವಿರುದ್ಧ ಕ್ರಮ ಇಲ್ಲ ಏಕೆ?

City Today News

(citytoday.media)

9341997936