ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ನಿರ್ಣಯಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾದಿಗ ಮಹಾಸಭಾದ ರಾಜ್ಯ ಸಂಚಾಲಕ ಮುತ್ತಣ್ಣ ಬೆಣ್ಣೂರಹೇಳಿದರು

ಹುಬ್ಬಳ್ಳಿ : ನ್ಯಾ . ಸದಾಶಿವ ಆಯೋಗದ ವರದಿ ಯನ್ನು ರಾಜ್ಯ ಸರ್ಕಾರ ತಕ್ಷಣ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು . ಇಲ್ಲವಾದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ನಿರ್ಣಯಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾದಿಗ ಮಹಾಸಭಾದ ರಾಜ್ಯ ಸಂಚಾಲಕ ಮುತ್ತಣ್ಣ ಬೆಣ್ಣೂರಹೇಳಿದರು . ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಇರುತ್ತೇವೆ . ವರದಿ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿಯೇ ದ್ವಂದ್ವ ನಿಲುವು ಇದೆ ಎಂದರು . ನ್ಯಾ . ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಸಾಕಷ್ಟು ಬಾರಿ ಮನವಿ ಸಲ್ಲಿಸಿ ಬೇಸತ್ತಿರುವುದರಿಂದ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗಿದೆ . ವರದಿ ಅಂಗೀಕಾರವಾಗದೇ ಇರಲು ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಆರೋಪಿಸಿದರು . ಸರ್ಕಾರ ಪರಿಶಿಷ್ಟ ಜಾತಿಯ ಎಲ್ಲರನ್ನು ಒಂದೆಡೆ ಸೇರಿಸಿ ನ್ಯಾ . ಸದಾಶಿವ ಆಯೋಗದ ವರದಿ ಬಗ್ಗೆ ಪರ – ವಿರೋಧ ಚರ್ಚೆ ನಡೆಸಿ ಒಂದು ತೀರ್ಮಾನ ಕೈಗೊಳ್ಳಬೇಕು ಎಂದರು . ಮಹಾಸಭಾದ ರಾಜ್ಯ ಕಾರ್ಯದರ್ಶಿ ಪ್ರೇಮಾ ಕಲಕೇರಿ , ಕಲ್ಲಪ್ಪ ಬ್ಯಾಟನ್ನವರ , ಶಿವಾನಂದ ಬಿಸನಾಳ , ರಾಯಪ್ಪ ಬಿರಕಟ್ಟಿ , ಇತರರು ಇದ್ದರು .

City Today News

(citytoday.media)

9341997936

ನ್ಯಾಷನಲಿಸ್ಟ್ ಯುವ ಕಾಂಗ್ರೆಸ್ NATIONALIST YOUTH CONGRESS

ಕರ್ನಾಟಕ ನಗರ ಪ್ರದೇಶವಾಗಲಿ , ಗ್ರಾಮೀಣ ಪ್ರದೇಶವಾಗಲಿ ಸಾರಿಗೆ ವ್ಯವಸ್ಥೆ ಮತ್ತು ರಸ್ತೆಗಳು ದುರಸ್ತಿ ಕುಡಿಯುವ ನೀರಿನ ಸೌಲಭ್ಯ ಗ್ರಾಮೀಣ ಪ್ರದೇಶದಿಂದ ನಗರ ವಲಸೆ ಬಂದವರಿಗೆ ನಗರವ್ಯಾಪ್ತಿಯಲ್ಲಿ ದುಡಿಯಲು ಬಂದರೆ , ನಗರ ವ್ಯಾಪ್ತಿಯಲ್ಲಿ ವಾಸ ಮಾಡಲು ಸ್ಥಳವಿಲ್ಲದೆ , ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಹಳ್ಳಿ ಜನರಿಗೆ ಮೂಲಭೂತ ಸೌರ್ಕಯ ಕಲ್ಪಿಸಲು ಸರ್ಕಾರಗಳು ಮುಂದಾಗುತ್ತಿಲ್ಲ .

ಕೆಲವೇ ಕೆಲವು ಕ್ಷೇತ್ರದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡರೆ , ಸರ್ಕಾರದ ಅಡೆತಡೆಗಳು ಹೆಚ್ಚು ಕಾಣುತ್ತದೆ . ಅವರುಗಳಿಗೆ ವಸತಿ ಸೌಲಭ್ಯ ನೀಡಲು ಎರಡು ಮೂರು ವರ್ಷಗಳೇ ಬೇಕಾಗುತ್ತದೆ . ಆದರೂ ಕೆಲವರಿಗೆ ಸಿಕ್ಕಿಲ್ಲ . ಇದಕ್ಕಾಗಿ ನಾವುಗಳು ಮುಂದಾಗಬೇಕು . ಗ್ರಾಮೀಣ ಪ್ರದೇಶದಿಂದ ಬಂದ ಜನರಿಗೆ ಐಡಿ ಕಾರ್ಡ್ ಮತ್ತು ಉದ್ಯೋಗ , ವಸತಿ ಸೌಲಭ್ಯಗಳಿಗೆ ಮುಂದಾಗಬೇಕು ಎಂದು ಸರ್ಕಾರಗಳಲ್ಲಿ ವಿನಂತಿಸಿದ್ದಲ್ಲದೆ , ನಮ್ಮ ಕರ್ನಾಟಕ ಪ್ರದೇಶ ನ್ಯಾಷನಲಿಸ್ಟ್ ಯುವ ಕಾಂಗ್ರೆಸ್‌ ಮೂಲಕ ನಮ್ಮ ಕ್ಷೇತ್ರಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಮುಂದಾಗಿದ್ದೇವೆ . ಉದ್ಯೋಗ , ರಾಜಕೀಯ ಕ್ಷೇತ್ರದಲ್ಲಿ ಯುವ ಪೀಳಿಗೆಗೆ ಹೆಚ್ಚು ಹೆಚ್ಚು ಸ್ಥಾನಗಳನ್ನು ನೀಡಬೇಕು . ಹಿರಿಯ ಮುಖಂಡರುಗಳು ಯುವಕರಿಗೆ ಮಾರ್ಗದರ್ಶಿಗಳಾಗಿ ಸಲಹೆ ಸೂಚನೆಗಳನ್ನು ನೀಡಿ , ರಾಜಕೀಯವಾಗಿ ಯುವಕರನ್ನು ಮುಂದೆ ತರಬೇಕಾಗಿ ಈ ಮೂಲಕ ಮುಖಂಡರಲ್ಲಿ ಕೇಳಿಕೊಳ್ಳುತ್ತೇವೆ . ಕರ್ನಾಟಕ ಪ್ರದೇಶ ನ್ಯಾಷನಲಿಸ್ಟ್ ಯುವ ಕಾಂಗ್ರೆಸ್‌ನಿಂದ ಬೆಂಗಳೂರು ನಗರ ಪದಾಧಿಕಾರಿಗಳು ಹಾಗೂ ವಿಧಾನಸಭಾ ಕ್ಷೇತ್ರವಾರು ಪದಾಧಿಕಾರಿಗಳು ಆಯ್ಕೆ ಇಂತಿವೆ . ಬೆಂಗಳೂರು ನಗರ ಅಧ್ಯಕ್ಷರು , ಪ್ರದೀಪ್ ಎನ್ , ಉಪಾಧ್ಯಕ್ಷರು ರಘುರಾಮ್ ರೆಡ್ಡಿ ಮತ್ತು ವಿದೇಶ್ ಆಚಾರ್ಯ , ಪ್ರಧಾನಕಾರ್ಯದರ್ಶಿ ರಾಜು , ಕಾರ್ಯದರ್ಶಿಯಾಗಿ ನಾಗೇಶ್ ಮತ್ತು ಬಸವರಾಜು , ಸಂಘಟನಾ ಕಾರ್ಯದರ್ಶಿ ಸಪ್ತಾಗಿರಿ ಅವರುಗಳು ಆಯ್ಕೆಯಾಗಿದ್ದಾರೆ . ಬೆಂಗಳೂರು ನಗರ ವಿಧಾನಸಭಾ ಕ್ಷೇತ್ರವಾರು ಅಧ್ಯಕ್ಷರುಗಳು ; ದಾಸರಹಳ್ಳಿ – ರವಿ , ಬ್ಯಾಟರಾಯನಪುರ – ಯಶವಂತ್ , ಗಾಂಧಿನಗರ ಲೋಗನಾಥನ್ , ರಾಜರಾಜೇಶ್ವರಿನಗರ – ಇಡ್ತೀನ್ ಕಾರ್ತೀಕ್ , ಇನ್ನಿತರ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಆಯ್ಕೆ ಮಾಡಲಾಗಿದೆ . ಕರ್ನಾಟಕ ಪ್ರದೇಶ ನ್ಯಾಷನಲಿಸ್ ಯುವ ಕಾಂಗ್ರೆಸ್‌ , ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲದೆ , ವಾರ್ಡ್ ಮಟ್ಟದಲ್ಲಿಯೂ ಸಹ ಮತ್ತು ಬೂತ್ ಮಟ್ಟದಲ್ಲಿ ಸಂಘಟನೆಯು ಪ್ರಬಲವಾಗಿದೆ.

City Today News

(citytoday.media)

9341997936

The Politician lives happily on account of all eight – Cicero of the Roman empire wrote this

“Cicero(43 B. C.,) of the Roman empire wrote this and it is still valid for today’s life and more, so here where all this happens to the extreme”

1. The poor – work & work.
2. The rich – exploit the poor.
3. The soldier – protects both.
4. The taxpayer – pays for all three.
5. The banker – robs all four.
6. The lawyer – misleads all five.
7. The doctor – bills all six.
8. The goons – scare all of seven.
9. The Politician -, lives happily on account of all eight.

Written in 43 B.C., but valid even today…

City Today News

(Tj vision media)

9341997936

ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಮಲಿಂಗಾ ರೆಡ್ಡಿರವರನ್ನು ಸೇರ್ಪಡೆ ಮಾಡಿಸಿಕೊಂಡರೆ ,ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬಹುದು . ಕಾಂಗ್ರೆಸ್ ಪಕ್ಷ ಸಚಿವ ಸಂಪುಟ ವಿಸ್ತರಣೆ ಮತ್ತೆ ಎಡವಿದರೆ ಬಹುಡೊಡ್ಡ ಹಾನಿ ಖಚಿತ.

ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಿದೆ ಇರುವುದು .ಕಾಂಗ್ರೆಸ್ ಪಕ್ಷದಲ್ಲಿ ಆಸಮಾಧಾನ. ಸಮ್ಮಿಶ್ರ ಸರ್ಕಾರಕ್ಕೆ ಗಂಡಾತರ….. ಕಾಂಗ್ರೆಸ್ ಸ್ವಯಂಕೃತ ಅಪರಾಧದಿಂದ ಹಲವಾರು ರಾಜ್ಯಗಳಲ್ಲಿ ತನ್ನ ಅಧಿಕಾರಿ ಕಳೆದುಕೊಂಡಿದೆ .ಕರ್ನಾಟಕ ರಾಜ್ಯದಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಬಾರಿ ಹಿನ್ನಡೆಯಾಗುವ ಎಲ್ಲ ಲಕ್ಷಣ ಕಾಣುತ್ತಿದೆ .ಬೆಂಗಳೂರು ನಗರ ರಾಜ್ಯದ ರಾಜಧಾನಿ ಇಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದರೆ ಮಾತ್ರ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಅಧಿಪತ್ಯ ಸಾಧಿಸಬಹುದು . ಇತ್ತೀಚಿಗಿನ ಕೆಲವು ವಿದ್ಯಮಾನಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷ ಬೆಂಗಳೂರು ನಗರದ ಕೈ ತಪ್ಪುವ ಎಲ್ಲ ಲಕ್ಷಣ ಗೋಚರಿಸುತ್ತಿದೆ . ಬೆಂಗಳೂರುನಗರ 28ವಿಧಾನಸಭಾ ಕ್ಷೇತ್ರ ಮತ್ತು ,ಮಹಾನಗರ ಪಾಲಿಕೆ ,ಜಿಲ್ಲಾ ಪಂಚಾಯಿತಿ ,ಪ್ರತಿಯೊಬ್ಬ ಕಾಂಗ್ರೆಸ್ ಸದಸ್ಯ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಾಡಿ ಮಿಡಿತ ತಿಳಿದಿರುವ ಏಕೈಕ ರಾಜಕಾರಣಿ ಎಂದರೆ ಮಾಜಿ ಗೃಹ ಸಚಿವರು ,ಶಾಸಕರಾದ ರಾಮಲಿಂಗಾ ರೆಡ್ಡಿರವರು .ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರಿಗೆ ರಾಮಲಿಂಗಾ ರೆಡ್ಡಿರವರ ನೇರ ಭೇಟಿಯಗಲು ಸಿಗುವ ಸಜ್ಞನ ರಾಜಕಾರಣಿ ಎಂದೇ ಚಿರಪರಿತರು .ಗೃಹ ಸಚಿವರಾಗಿ ಆಡಳಿತ ಅವಧಿಯಲ್ಲಿ ಅವರ ನಡೆ ,ಆಡಳಿತ ವೈಖರಿಯನ್ನು ಕಂಡ ರಾಜ್ಯದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದರು 10ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ,ಏಳು ಬಾರಿ ಶಾಸಕರಾಗಿ ಸೇವೆ .ರಾಮಲಿಂಗಾ ರೆಡ್ಡಿರವರು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಉತ್ತಮ ಒಡನಾಟವಿದೆ. ಯಾವುದೇ ಸಂದರ್ಭದಲ್ಲಿ ಬಂದರು ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ರಾಮಲಿಂಗಾರೆಡ್ಡಿರವರು ಬೆಂಗಳೂರುನಗರ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದಾರೆ .ಕಳೆದ ಆರು ತಿಂಗಳ ಕಾಂಗ್ರೆಸ್ ,ಜೆ.ಡಿ.ಎಸ್.ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ರಾಮಲಿಂಗಾ ರೆಡ್ಡಿರವರನ್ನು ಕೈ ಬಿಟ್ಟಿರುವುದು ,ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಗಳೂರಿನ ಜನರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಡೊಡ್ಡ ಅಸಮಾಧಾನವಿದೆ .ಬಿ.ಜೆ.ಪಿ.ಭದ್ರಕೋಟೆಯಾಗಿದ್ದ ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಗತ ವೈಭವಕ್ಕೆ ಮರಳಲು ಕಾರಣಕರ್ತರಾದರು .

ರಾಮಲಿಂಗಾರೆಡ್ಡಿರವರ ಶಕ್ತಿ ಸಾಮರ್ಥ್ಯ ಮತ್ತು ಸಂಘಟನೆ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಈಗಲಾದರೂ ಎಚ್ಚತ್ತುಕೊಳ್ಳಬೇಕು .ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಮಲಿಂಗಾ ರೆಡ್ಡಿರವರನ್ನು ಸೇರ್ಪಡೆ ಮಾಡಿಸಿಕೊಂಡರೆ ,ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬಹುದು . ಕಾಂಗ್ರೆಸ್ ಪಕ್ಷ ಸಚಿವ ಸಂಪುಟ ವಿಸ್ತರಣೆ ಮತ್ತೆ ಎಡವಿದರೆ ಬೆಂಗಳೂರುನಗರ ಕಾಂಗ್ರೆಸ್ ಬಹುಡೊಡ್ಡ ಹಾನಿ ಖಚಿತ.

City Today News

(Tj vision media)

9341997936

New Office Bearers of YUVA JD (U), Karnataka will be released shortly – *K.V. Shivaram* State President – YUVA JD (U)

Bengaluru, 2nd Nov, 2018:

The *”YUVA JD (U)”, Karnataka State* which is a wing of Janata Dal (United), Karnataka State has been dissolved with immediate effect in view of change in Office Bearers, subsequently appointing new Office Bearers for Youth Wing, Karnataka.

The list of new Office Bearers of YUVA JD (U), Karnataka will be released shortly.

City Today News

(Tj vision media)

9341997936