ದಿನಾಂಕ 17.4.24 ರಂದು ಬೆಂಗಳೂರಿನ ಕೊಟ್ಟಿಗೆಪಾಳ್ಯದ ಮಾಳಗಾಳದಲ್ಲಿ ಹಮ್ಮಿಕೊಂಡಿರುವ ‘ನಮ್ಮ ತೆರಿಗೆ ನಮ್ಮ ಹಕ್ಕು’ ಅಭಿಯಾನ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಯಿತು. ಲೇಖಕರು ಹಾಗೂ ಹೋರಾಟಗಾರರಾದ ಜಾಣಗೆರೆ ವೆಂಕಟರಾಮಯ್ಯ, ಎಸ್.ಜಿ. ಸಿದ್ದರಾಮಯ್ಯ, ಕಾತ ಚಿಕ್ಕಣ್ಣ, ಮುಕುಂದರಾಜ್, ತಲಕಾಡು ಚಿಕ್ಕರಂಗೇಗೌಡ, ಪ್ರಭಾ ಬೆಳವಂಗಲ, ನಾಗೇಶ ಅರಳಕುಪ್ಪೆ, ಶೇಖರ್ ಮುಂತಾದವರು ಭಾಗವಹಿಸಿದ್ದರು.
ಸನ್ಮಾನ್ಯ ಮುಖ್ಯಮಂತ್ರಿಯವರು ಮತ್ತು ಶಾಸಕರು, ಶಿಫಾರಸ್ಸು ಪತ್ರಗಳನ್ನು ಸಹ ಪರಿಗಣಿಸದೇ ಕಡತಗಳನ್ನು ಅನುಮೋದನೆ ಮಾಡದೇ ಇರುವ ಬಗ್ಗೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಅನೇಕ ಉಪಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಸುಮಾರು 20-25 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರುತ್ತೇನೆ ಹಾಗೂ 2010ರಲ್ಲಿ ಬೆಂಗಳೂರಿನಿಂದ ಬಳ್ಳಾರಿ ತನಕ ಸುಮಾರು 325 ಕಿ.ಮೀ. ಗಳ ಪಾದಯಾತ್ರೆ ಮಾಡಿದ್ದು, ನಂತರ, ಮೇಕೆದಾಟು, ಭಾರತ್ ಜೋಡೋ ಯಾತ್ರೆ ಗುಂಡ್ಲುಪೇಟೆಯಿಂದ ರಾಯಚೂರು ತನಕ ಪಾದಯಾತ್ರೆಯ ಕಾಯಕ್ರಮದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಮಹಾತ್ಮಗಾಂಧಿ ವೇಷ ಹಾಕಿಕೊಂಡು ಭಾಗವಹಿಸಿರುತ್ತೇನೆ. ನಂಜನಗೂಡು (ಕಳಲೆ ಕೇಶವಮೂರ್ತಿ), ಕೊಪ್ಪಳ (ಬಸವರಾಜು ಹಿಟ್ನಾಳ್), ಆರ್ ಆರ್ ನಗರ (ಕುಸುಮ ಹೆಚ್), ಸಿ.ವಿ. ರಾಮನ್ ನಗರ (ಆರ್ ಸಂಪತ್‌ರಾಜ್), ಶಿವಾಜಿನಗರ (ರಿಜ್ವಾನ್ ಹರ್ಷದ್) ಸೇರಿದಂತೆ ಹಲವಾರು ಉಪ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ಶ್ರಮಿಸಿರುತ್ತೇನೆ.
ಪಕ್ಷಕ್ಕಾಗಿ ದುಡಿದಿರುವಂತಹ ನಮ್ಮಂತಹ ಸಾಮಾನ್ಯ ಕಾರ್ಯಕರ್ತರು ಆದ ನನಗೆ ತುಂಬಾ ಬೇಕಾದವರು ಆಗಿರುವಂತಹವರ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಸನ್ಮಾನ್ಯ ಮುಖ್ಯಮಂತ್ರಿಯವರಿಂದ ಮತ್ತು ಸಂಬಂಧಪಟ್ಟ ಸ್ಥಳೀಯ ವಿಧಾನಸಭಾ ಸದಸ್ಯರ ಶಿಫಾರಸ್ಸು ಪತ್ರಗಳನ್ನು ಸಂಬಂಧಪಟ್ಟ ಲೋಕೋಪಯೋಗಿ ಕಡತ ಅನುಮೋದನೆಗಾಹಗಿ ಕಡತವೊಂದನ್ನು ಸಂಬಂಧಪಟ್ಟ ಇಲಾಖೆಯ ಮೂಲಕ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಈ ವಿಚಾರವಾಗಿ ನಾನು ಮಾನ್ಯ ಸಚಿವರನ್ನು ಸುಮಾರು 4-5 ಬಾರಿ ಖುದ್ದಾಗಿ ಭೇಟಿ ನೀಡಿ ಕಡತವನ್ನು ಅನುಮೋದನೆ ಮಾಡಿಕೊಡಿ ಎಂದು ವಿನಂತಿಸಿಕೊಂಡಾಗ ಮಾನ್ಯ ಸಚಿವರು ಆಪ್ತ ಕಾರ್ಯದರ್ಶಿಯಾಗಿರುವ ಶ್ರೀ ರಾಜಪ್ಪರವರಿಗೆ ಈ ವಿಚಾರವಾಗಿ ಕಡತ ಪರಿಶೀಲಿಸಿ ಎಂದು ತಿಳಿಸಿದರೂ ಸಹ ಶ್ರೀಯುತ ರಾಜಪ್ಪರವರು ನಮಗೆ ಆ ಜಾಗ ಬೇರೆಯವರಿಗೆ ಆಗಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಇದೇ ರೀತಿ ಕಳೆದ ಕಡತದಲ್ಲಿಯೂ ಸಹ ಅನುಮೋದನೆಗಾಗಿ ಸಲ್ಲಿಸಿರುವ ಕಡತವು ವರ್ಗಾವಣೆ ಅವಧಿ ಮುಗಿದಿರುವುದರಿಂದ ಇಲಾಖೆಗೆ ವಾಪಸ್ಸು ಕಳುಹಿಸಿರುತ್ತೇನೆ ಎಂದು ತಿಳಿಸಿರುತ್ತಾರೆ.
ಸಾಮಾನ್ಯ ವರ್ಗಾವಣೆಯ ಅವಧಿಯಲ್ಲಿ ಇಲಾಖೆಯ ಸಚಿವರಿಗೆ ಮಾತ್ರ ಸಂಪೂರ್ಣ ಅಧಿಕಾರವಿದ್ದು, ತದನಂತರ ಮಾನ್ಯ ಮುಖ್ಯಮಂತ್ರಿಗಳು ಉಳಿದ ಅವಧಿಯಲ್ಲಿ ವರ್ಗಾವಣೆ ಮಾಡಲು ಸಂಪೂರ್ಣ ಅಧಿಕಾರ ಇರುತ್ತದೆ.
ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆ ಪಡೆಯದೆ ಹಲವಾರು ವರ್ಗಾವಣೆಗಳನ್ನು ಮಾಡಿರುತ್ತಾರೆ. ಸರ್ಕಾರ ಆದೇಶ ಸಂಖ್ಯೆ ಲೋ.ಇ.235/ಸೇವಿಸು/2023 ದಿನಾಂಕ 17-01-2024ರ ಆದೇಶದಲ್ಲಿ ತಲಕಾಡು
ಇಲಾಖೆಯ ಅಧಿಕಾರಿಗಳು ವಯೋನಿವೃತ್ತಿ ಹೊಂದಿದ್ದು, ಸದರಿ ಜಾಗಗಳಿಗೆ ಸಂಬಂಧಪಟ್ಟ ಶಾಸಕರ ಪತ್ರವನ್ನು ತೆಗೆದುಕೊಂಡು ಬಂದರೂ ಸಹ ಪರಿಗಣಿಸದೆ ನಮಗೆ ಸಬೂಬು ಹೇಳುತ್ತಿದ್ದಾರೆ.
1. PWD/59/SAG/2024 ಸದರಿ ಕಡತವು ಮಾನ್ಯ ಸಚಿವರ ಕಚೇರಿಯಲ್ಲಿ ಅನುಮೋದನೆಗಾಗಿ ಇದ್ದು ಈ ತನಕ ಅನುಮೋದನೆ ಆಗಿರುವುದಿಲ್ಲ.
2. PWD/220/SAG/2024 – ថ덜덜된 김/ /, ಮುಗಿದಿರುತ್ತದೆ ಎಂದು ದುರುದ್ದೇಶಪೂರ್ವಕವಾಗಿ ಇಲಾಖೆಗೆ ಮಾನ್ಯ ಸಚಿವರ ಆಪ್ತ ಕಾರ್ಯದರ್ಶಿ ವಾಪಸ್ಸು ಹಾಕಿರುತ್ತಾರೆ. ತದನಂತರ 2-3 ವರ್ಗಾವಣೆಗಳ ಆದೇಶಗಳಾಗಿರುತ್ತವೆ.
ನಾವು ನಿಗಮ ಮಂಡಳಿಗಳಲ್ಲಿಯೋ ಅಥವಾ ಬೇರೆ ಯಾವುದೇ ಸ್ಥಾನಮಾನ ಕೇಳುತ್ತಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ನಮ್ಮಂತಹ ಸಾವಿರಾರು ಕಾರ್ಯಕರ್ತರ ಶ್ರಮದಿಂದ ಇಂದು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿದ್ದೀರ. ಇನ್ನು 4-5 ದಿನಗಳ ನಂತರ ಚುನಾವಣಾ ಆಯೋಗದಿಂದ ಯಾವುದೇ ಕ್ಷಣದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಬಹುದು.
ದಯವಿಟ್ಟು ಮೇಲ್ಕಂಡ ಕಡತವನ್ನು ಮಾನ್ಯ ಸಚಿವರ ಕಾರ್ಯಾಲಯದಿಂದ ಅತಿ ಶೀಘ್ರವಾಗಿ ತರಿಸಿಕೊಂಡು ಕಡತವನ್ನು ಅನುಮೋದನೆ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೋರುತ್ತಾ, ಮುಂದಿನ ಆಗು-ಹೋಗುಗಳಿಗೆ ಶ್ರೀ ರಾಜಪ್ಪರವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಮುತ್ತುರಾಯಪ್ಪ ತಿಳುಸಿದರು.
ಜಾತ್ಯತೀತ ಜನತಾದಳ ಪಕ್ಷದ ಕೇಂದ್ರ ಕಚೇರಿಯಾದ ಜೆಪಿ ಭವನದಲ್ಲಿ ಇಂದು 536ನೇ ಕನಕದಾಸರ ಜಯಂತೊತ್ಸವನ್ನು ಹಮ್ಮಿಕೊಳ್ಳಲಾಯಿತು,ವಿಧಾನ ಪರಿಷತ್ ಶಾಸಕರಾದ ಶ್ರೀ ಟಿ. ಎ. ಶರವಣ ಅವರು ಮುಖ್ಯ ಅಥಿತಿಯಾಗಿ ಭಾಗಿಯಾಗಿದರು. ಈ ಕಾರ್ಯಕ್ರಮದಲ್ಲಿ MLC ಶ್ರೀ ತಿಪ್ಪೇಸ್ವಾಮಿ, CM ನಾಗರಾಜ್ ಸೇರಿದಂತಹ ಹಲವಾರು ಜೆಡಿಎಸ್ ಪಕ್ಷದ ನಾಯಕರು ಹಾಜರಿದ್ದರು.
ದಿನಾಂಕ 02.11.2023 ರಂದು ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಯದಲ್ಲಿ ಶಿವಧ್ವಜಾರೋಹಣ ಮಾಡಿ ತಮ್ಮ ಆಶೀರ್ವಚನ ನೀಡಿದ ಸಾಣೇಹಳ್ಳಿ ಮಠಾಧೀಶರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು “ವೇದಿಕೆ ಕಾರ್ಯಕ್ರಮಗಳಲ್ಲಿ ಅಥವಾ ಮನೆಗಳಲ್ಲಿ ಗಣೇಶನನ್ನು ವಿಘ್ನ ನಿವಾರಕನನ್ನಾಗಿ ಪೂಜಿಸುವುದು, ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಲ್ಲ, ಅದರ ಬದಲು ವಾಸ್ತವಕ್ಕೆ ತಕ್ಕುದಾದ ವಚನಗಳನ್ನು ಪಠಿಸಬೇಕು” ಎಂದು ಕರೆಕೊಟ್ಟಿದ್ದರು. ಮುಂದುವರಿದು “ಗಣಪತಿಯನ್ನು ಸ್ತುತಿಸುವುದು ಮೌಡ್ಯದ ಆಚರಣೆ, ವಚನಗಳನ್ನು ಪ್ರಸ್ತುತಪಡಿಸುವುದು ನಿಜವಾದ ಪ್ರಾರ್ಥನೆ. ಕಾರ್ಯಕ್ರಮಗಳ ಆರಂಭದಲ್ಲಿ ವಚನಗಳನ್ನೂ ಹಾಡಬಹುದು ಎಂದು ತೋರಿಸಿದವರು ಶಿವಕುಮಾರ ಸ್ವಾಮೀಜಿ” ಎಂದು ತಿಳಿಸಿದ್ದರು. ಅಲ್ಲದೆ, “ಶರಣರ ಪ್ರಕಾರ ಸ್ವಸಾಮರ್ಥ್ಯ. ಉತ್ತಮ ನಡವಳಿಕೆ ಹೊಂದಿದವರೇ ನಿಜವಾದ ದೇವರು. ನಮ್ಮನ್ನು ನಾವು ನಂಬಬೇಕು. ಶರಣರ ಆಶಯಗಳಂತೆ ಬದುಕಬೇಕು. ಈ ನಿಟ್ಟಿನಲ್ಲಿ ಆತ್ಮಾವಲೋಕನ ಅಗತ್ಯ” ಎಂದು ಬಸವಾನುಯಾಯಿಗಳಿಗೆ ಮತ್ತು ಲಿಂಗಾಯತ ಧರ್ಮೀಯರಿಗೆ ಅರಿವು ಮೂಡಿಸುವ ಮತ್ತು ಶರಣರ ಹಾಗೂ ಅವರು ರಚಿಸಿದ ವಚನ ಸಾಹಿತ್ಯದ ಆಶೋತ್ತರಗಳನ್ನು ಪಾಲಿಸಲು ಕರೆಕೊಟ್ಟಿದ್ದರು.
ಶ್ರೀಗಳು ಶರಣ ಸಮೂಹಕ್ಕೆ ಕೊಟ್ಟ ಕರೆಯನ್ನು ತಪ್ಪಾಗಿ ಅರ್ಥೈಸಿ ವಿಶ್ವವಾಣಿ ದಿನಪತ್ರಿಕೆಯ ಸಂಪಾದಕರಾದ ಮಾನ್ಯ ವಿಶ್ವೇಶ್ವರ ಭಟ್ಟರು “ಉಪದ್ಯಾಪಿ, ಅನರ್ಥಕಾರೀ ಹೇಳಿಕೆ, ದೇವರ ಗೊಡವೆಗೆ ಹೋಗಬೇಡಿ, ಎಡಬಿಡಂಗಿ ಹೇಳಿಕೆ, ಚಲಾವಣೆಗೆ ಬರಲು ಈ ತರಹದ ಹೇಳಿಕೆ, ನಾಟಕ ಮಾಡಿಕೊಂಡಿರಿ ಇಂತಹ ಅಸಭ್ಯ ಮತ್ತು ಕೀಳು ಅಭಿರುಚಿಯ ಶಬ್ದಗಳನ್ನು ಉಪಯೋಗಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ತಾವು ಸಂಪಾದಿಸುವ ವಿಶ್ವವಾಣಿ ದಿನಪತ್ರಿಕೆಯಲ್ಲಿ ಬರಹಗಳನ್ನು ಪ್ರಕಟಿಸುವುದರ ಜೊತೆಗೆ ಮತ್ತೊಬ್ಬ ತಾನೇ ಅಪ್ಪಟ ಹಿಂದೂ ಕಾರ್ಯಕರ್ತನೆಂದು ಹೇಳಿಕೊಳ್ಳುವ ಶ್ರೀ ಪ್ರಶಾಂತ ಸಂಬರ್ಗಿ ಎನ್ನುವವರು ಸ್ವಾಮಿಗಳ ವಿರುದ್ಧ ಅನಗತ್ಯ ಪೋಲಿಸ್ ದೂರು ದಾಖಲಿಸಿ ಸಾಣೆ ಹಳ್ಳಿ ಶ್ರೀಗಳಿಗೆ ಜೀವ ಭಯವನ್ನುಂಟುಮಾಡುವ ಉದ್ಧಟತನವನ್ನು ಮಾಡಿರುತ್ತಾನೆ. ಈ ಇಬ್ಬರೂ ಮಹನೀಯರಿಗೆ ಲಿಂಗಾಯತ ಧರ್ಮದ ತತ್ವಾದರ್ಶಗಳ ಅರಿವು ಇದ್ದಂತಿಲ್ಲ. ಲಿಂಗಾಯತರ ಶಿವನಿಗೂ ಹಿಂದೂ ಧರ್ಮದಲ್ಲಿನ ಶಿವನಿಗೂ ಇರುವ ಮೂಲ ವ್ಯತ್ಯಾಸವೇ ತಿಳಿದಿಲ್ಲ ಮತ್ತು ತಿಳಿಯುವ ಪ್ರಯತ್ನವನ್ನೂ ಮಾಡದೆ ತಮಗೆ ತಿಳಿದಂತ ಹಾಗೂ ಮನಬಂದಂತೆ ಹೇಳಿಕೆ, ಅಂಕಣ ಬರಹ ಮತ್ತು ದೂರದರ್ಶನದಲ್ಲಿ ಹೇಳಿಕೆ ಕೊಡುವುದರ ಮೂಲಕ ಬಸವತತ್ವಾಧಾರಿತ ಲಿಂಗಾಯತ ಧರ್ಮದ ಗುರುಗಳಾದ ಹಾಗೂ ತಮ್ಮ ಧರ್ಮ ಪ್ರಸಾರದಲ್ಲಿ ತೊಡಗಿದ್ದ ಸಾಣೆಹಳ್ಳಿ ಮಠದ ಮಠಾಧೀಶರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಘನತೆಗೆ ಕುಂದುಂಟು ಮಾಡಿದ್ದು, ಸಾರ್ವಜನಿಕವಾಗಿ ಅಪಮಾನಿಸಿದ್ದು ಅವರು
ಹೇಳದ ಮತ್ತು ಹೇಳಿದ ಮಾತುಗಳನ್ನು ತಿರುಚುವುದರ ಮೂಲಕ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ, ಅಲ್ಲದೆ ಧರ್ಮಗಳ ಮಧ್ಯೆ ವೈಮನಸ್ಯ ಉಂಟಾಗುವಂತೆ ಪ್ರೇರೇಪಣೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇವೆಲ್ಲವುಗಳ ಹೊರತಾಗಿ ಸಂವಿಧಾನಿಕ ಹಕ್ಕಾಗಿರುವ ತಮ್ಮ ಧರ್ಮದ ಪ್ರಚಾರದಲ್ಲಿದ್ದ ಸ್ವಾಮೀಜಿಗಳಿಗೆ ಅಡಚಣೆ ಮಾಡಿದ್ದಾರೆ. ಈ ಕಾರಣಕ್ಕಾಗಿ ಲಿಂಗಾಯತ ಧರ್ಮೀಯರು ಹಾಗೂ ಬಸವತತ್ವಾನುಯಾಯಿಗಳು ಘಾಸಿಗೊಂಡಿದ್ದಾರೆ. ಆದುದರಿಂದ ನಾವುಗಳು ಇವರ ಈ ಹೇಳಿಕೆ ಮತ್ತು ಬರಹಗಳನ್ನು ಖಂಡಿಸುವುದರ ಜೊತೆಗೆ ಶ್ರೀ ವಿಶ್ವೇಶ್ವರ ಭಟ್ಟರು ಮತ್ತು ಶ್ರೀ ಪ್ರಶಾಂತ ಸಂಬರ್ಗಿ ಅವರುಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿದ್ದೇವೆ. ಅಲ್ಲದೆ, ನಮ್ಮ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದೇನೆಂದರೆ, ಒಂದು ಧರ್ಮದ ಗುರುಗಳಿಗೆ ಅವಮಾನ ಮಾಡುವುದರ ಮೂಲಕ ಇಡೀ ಲಿಂಗಾಯತ ಸಮಾಜಕ್ಕೆ ಹಾಗೂ ಬಸವತತ್ವಕ್ಕೆ ಮಾಡಿರುವ ಇವರ ಈ ನಡವಳಿಕೆಯ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.
ವಿಶೇಷ ಸೂಚನೆ:- ಬಸವ ತತ್ವದ ಮೇಲೆ ಮುಂದುವರೆದ ದಾಳಿಯನ್ನು ವಿರೋಧಿಸಿ ದಿನಾಂಕ 22-11-2023 ರಂದು ಬೆಳಿಗ್ಗೆ 11:00ಗೆ ಕರ್ನಾಟಕದ ಪ್ರಜ್ಞಾವಂತರ ಅನುಭವ ಮಂಟಪ ವೇದಿಕೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರರು ಮತ್ತು ಬಸವಪರ ಸಂಘಟನೆಗಳ ಸದಸ್ಯರು ಭಾಗವಹಿಸಬೇಕಾಗಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ವಿನಂತಿಸಿದರು.
ಕರ್ನಾಟಕದಾದ್ಯಂತ 2023-24 ನೇ ಸಾಲಿನ ಆಮ್ ಆದ್ಮ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಿರುವಂತಹ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಮ್ ಆದ್ಮ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಬಗ್ಗೆ ಪತ್ರಿಕಾ ಗೋಷ್ಠಿ
ಕರ್ನಾಟಕದಾದ್ಯಂತ 2023-24 ನೇ ಸಾಲಿನ ಆಮ್ ಆದ್ಮ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಿರುವಂತಹ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಮ್ ಆದ್ಮ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಬಗ್ಗೆ ಪತ್ರಿಕಾ ಗೋಷ್ಠಿ ಕರ್ನಾಟಕದಾದ್ಯಂತ ಆಮ್‌ಆದ್ಮ ಪಕ್ಷದಿಂದ 2023-24 ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವಂತಹ ಸುಮಾರು 100 ಕ್ಕೂ ಅಧಿಕ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮತ್ತು ಪ್ರಣಾಳಿಕೆಯನ್ನು ಒಪ್ಪಿ ಆಮ್ ಆದ್ಮ ಪಕ್ಷವನ್ನು ತೊರೆದು ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಕೆ.ಪಿ.ಸಿ.ಸಿ ಪ್ರಧಾನ ಕಛೇರಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮತ್ತು ಮಾನ್ಯ ಕೆ.ಪಿ.ಸಿ.ಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಹಾಗೂಚನ್ನಪಟ್ಟಣ ಕ್ಷೇತ್ರದ ಆಮ್ ಆದ್ಮ ಪಕ್ಷದಿಂದ ಸ್ಪರ್ಧೆ ಮಾಡಿದಂತಹ ಶ್ರೀ ಸಿ.ಪಿ. ಶರತ್‌ಚಂದ್ರ ನೇತೃತ್ವದಲ್ಲಿ ಆಮ್‌ಆದ್ಮ ಪಕ್ಷದ 100 ಕ್ಕೂ ಹೆಚ್ಚು ಎಂ.ಎಲ್.ಎ ಅಭ್ಯಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಸ್ವ-ಇಚ್ಛೆಯಿಂದ ದಿನಾಂಕ: 19.11.2023 ಭಾನುವಾರದಂದು ಮಧ್ಯಾಹ್ನ 1.00 ಗಂಟೆಗೆ ಬೆಂಗಳೂರಿನ ಕೆ.ಪಿ.ಸಿ.ಸಿ ಪ್ರಧಾನ ಕಛೇರಿ, ಕ್ಲೀನ್ಸ್ ರೋಡ್‌ನಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಗಿಳ್ಳುತಿರುವುದಾಗಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.
1) ಸಿ.ಪಿ. ಶರತ್ ಚಂದ್ರ- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ – 185
2) ನೂರಅಹಮ್ಮದ್ ಕುತುಬುದ್ದಿನ್ ಮುಲ್ಲಾ – ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ-12
You must be logged in to post a comment.