“ಕಸ ಸಂಗ್ರಹಣಾ ಕಾರ್ಮಿಕರ ಸಂಕಷ್ಟ” ವಿಮೆ – ಸುರಕ್ಷತೆಗಾಗಿ ಸಂಘಟನೆಗಳ ಆಗ್ರಹ

ಬೆಂಗಳೂರು, ಮಾ. 26: ನಗರದಲ್ಲಿ ಕಸ ಸಂಗ್ರಹಣೆ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರಾದ ಚಾಲಕರು ಮತ್ತು ಸಹಾಯಕರಿಗೆ ಆರೋಗ್ಯ ವಿಮೆ ಹಾಗೂ ಅಗತ್ಯ ಸುರಕ್ಷತಾ ಸಾಧನಗಳನ್ನು ತಕ್ಷಣ ಒದಗಿಸಬೇಕು ಎಂದು ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಒತ್ತಾಯಿಸಿವೆ.

ಈ ಕುರಿತು ಪ್ರಕಟಣೆ ನೀಡಿದ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಹಾಗೂ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ರಾಜು ಕನ್ನಡಿಗ, ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಟೋ ಮತ್ತು ಲಾರಿ ಚಾಲಕರು ಹಾಗೂ ಸಹಾಯಕರ ಆರೋಗ್ಯ ದಿನೇದಿನೇ ಹದಗೆಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಂಬಂಧಿತ ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದು, ಕಸ ಗುತ್ತಿಗೆದಾರರು ಸಹ ಕಾರ್ಮಿಕರ ಆರೋಗ್ಯ ರಕ್ಷಣೆಗೆ ತಕ್ಕ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಕಸ ವಿಂಗಡಣೆ ವೇಳೆ ಕೈಯಿಂದಲೇ ಕೆಲಸ ನಿರ್ವಹಿಸುವ ಚಾಲಕರು ಮತ್ತು ಸಹಾಯಕರಿಗೆ ಸೂಜಿ, ಬ್ಲೇಡ್‌ ಸೇರಿದಂತೆ ಅಪಾಯಕಾರಿ ವಸ್ತುಗಳಿಂದ ಗಾಯಗಳಾಗುತ್ತಿವೆ. ದುರ್ವಾಸನೆ ಮತ್ತು ಧೂಳಿನ ಪರಿಣಾಮವಾಗಿ ಚರ್ಮ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿವೆ ಎಂದು ಅವರು ವಿವರಿಸಿದರು.

ಇದರಿಂದಾಗಿ ಕಾರ್ಮಿಕರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವುದರ ಜೊತೆಗೆ ಮುಖಾವರಣ, ಕೈಗವಸು, ಬೂಟುಗಳು, ಸ್ಯಾನಿಟೈಸರ್ ಹಾಗೂ ಸಮವಸ್ತ್ರವನ್ನು ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು. ಜೊತೆಗೆ ಅಪಘಾತಗಳು ಅಥವಾ ಆರೋಗ್ಯ ಹಾನಿ ಸಂಭವಿಸಿದಲ್ಲಿ ಸಮರ್ಪಕ ಪರಿಹಾರ ನೀಡಬೇಕು ಎಂದು ತಿಳಿಸಿದರು.

ನಗರದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಮಹಿಳಾ ಪೌರ ಕಾರ್ಮಿಕರು ಸೇರಿದಂತೆ ಚಾಲಕರು ಮತ್ತು ಸಹಾಯಕರು ಶ್ರಮಿಸುತ್ತಿದ್ದು, ಅವರ ಸೇವೆಯನ್ನು ಗುರುತಿಸಿ ಸರ್ಕಾರವು ‘ಸ್ವಚ್ಛತಾ ಸೇವಾರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ಮನವಿ ಮಾಡಿದ್ದಾರೆ.

City Today News 9341997936

Ambedkar’s Vision at Risk? RPI Questions Internal Reservation Move

Bengaluru: The Republican Party of India (Ambedkar) has expressed concern that the ongoing confusion surrounding internal reservation in the state is leading to increased social tension.

Addressing a press conference, State President, Prabhu G.C. stated that, according to the vision of Dr. B.R. Ambedkar, reservation was never intended to be a permanent provision but a temporary mechanism to ensure social justice and equal opportunities. He explained that constitutional safeguards were introduced to address centuries of injustice, inequality, and untouchability faced by Scheduled Castes and Scheduled Tribes. The primary objective was to ensure equal access to education, employment, and political participation.

He further noted that Articles 15(4), 16(4), 46, 341, and 342 of the Constitution were incorporated to promote the development of backward communities. Political representation has also been ensured through reservations in Parliament and State Assemblies. However, he expressed concern that the current debate on internal reservation is creating divisions within communities, leading to mistrust and conflict.

Highlighting the root issues, he said that lack of education and employment opportunities continues to be ignored, leaving genuinely backward families still struggling for opportunities. Even decades after independence, the persistence of untouchability in certain areas remains a matter of concern.

Referring to the Supreme Court’s 2024 judgment, he pointed out that while states have been permitted to implement internal reservation, it is not mandatory. He emphasized that such decisions must be based on comprehensive and scientific data, warning that arbitrary or politically driven decisions could lead to adverse consequences. He added that the current lack of complete data calls for a cautious approach.

In this context, he stressed the importance of maintaining unity among Scheduled Castes, Scheduled Tribes, and tribal communities. He demanded that the Nagamohan Das Commission report be withdrawn immediately and that the existing reservation system be continued in line with constitutional provisions.

He also urged the government to act responsibly to ensure that the issue of internal reservation does not create hatred or hostility among communities. Calling for the protection of social justice, equality, and fraternity, he appealed to the government to take appropriate steps.
He warned that if necessary action is not taken, the party will launch a strong protest in the coming days.

State-level Secretary Ramesh Natakar, State Coordinator Basavaraj, Hassan District President Darshan, Bengaluru South President Muniraju, social activist Maddurappa, organizational coordinator Girish, and Anekal Taluk Youth President Suman were present at the press conference.

City Today News 9341997936

ಮೀಸಲಾತಿ ಜಗಳದಿಂದ ಸಮುದಾಯಗಳಲ್ಲಿ ವಿಭಜನೆ: ಆರ್‌ಪಿಐ (ಅಂಬೇಡ್ಕರ್) ಆತಂಕ

ಒಳ ಮೀಸಲಾತಿ ಕುರಿತಾಗಿ ರಾಜ್ಯದಲ್ಲಿ ಉಂಟಾಗಿರುವ ಗೊಂದಲಗಳು ಸಮಾಜದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿರುವುದಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷವು ಆತಂಕ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷರಾದ, ಪ್ರಭು ಜಿ.ಸಿ., ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಮೀಸಲಾತಿ ಶಾಶ್ವತ ಸೌಲಭ್ಯವಲ್ಲ, ಅದು ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಸಾಧಿಸಲು ರೂಪಿಸಲಾದ ತಾತ್ಕಾಲಿಕ ವ್ಯವಸ್ಥೆಯಾಗಿದೆ ಎಂದು ಹೇಳಿದರು. ಶತಮಾನಗಳ ಅನ್ಯಾಯ, ಅಸಮಾನತೆ ಮತ್ತು ಅಸ್ಪೃಶ್ಯತೆಯನ್ನು ನಿವಾರಿಸಲು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ವಿಶೇಷ ರಕ್ಷಣೆಯನ್ನು ಒದಗಿಸಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಸಿಗುವಂತೆ ಮಾಡುವುದೇ ಇದರ ಮುಖ್ಯ ಉದ್ದೇಶವಾಗಿತ್ತು ಎಂದು ಅವರು ವಿವರಿಸಿದರು.

ಸಂವಿಧಾನದ ವಿಧಿ 15(4), 16(4), 46, 341 ಮತ್ತು 342ರ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ ನೀಡುವ ಮೂಲಕ ರಾಜಕೀಯ ಪ್ರತಿನಿಧಿತ್ವವೂ ಖಚಿತಪಡಿಸಲಾಗಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಒಳ ಮೀಸಲಾತಿ ವಿಚಾರವು ಒಂದೇ ಸಮುದಾಯದೊಳಗೆ ವಿಭಜನೆಗೆ ಕಾರಣವಾಗುತ್ತಿದ್ದು, ಪರಸ್ಪರ ಅವಿಶ್ವಾಸ ಮತ್ತು ಸಂಘರ್ಷವನ್ನು ಹೆಚ್ಚಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮಸ್ಯೆಯ ಮೂಲ ಶಿಕ್ಷಣ ಮತ್ತು ಉದ್ಯೋಗದ ಕೊರತೆಯಾಗಿದ್ದು, ಅದು ಕಡೆಗಣನೆಯಾಗುತ್ತಿದೆ. ಇದರಿಂದ ನಿಜವಾದ ಹಿಂದುಳಿದ ವರ್ಗಗಳು ಇನ್ನೂ ಅವಕಾಶಕ್ಕಾಗಿ ಹೋರಾಟ ನಡೆಸುತ್ತಿವೆ. ಸ್ವಾತಂತ್ರ್ಯಕ್ಕೆ ದಶಕಗಳು ಕಳೆದರೂ ಕೆಲವು ಭಾಗಗಳಲ್ಲಿ ಅಸ್ಪೃಶ್ಯತೆ ಮನೋಭಾವ ಇನ್ನೂ ಜೀವಂತವಾಗಿದೆ ಎಂಬುದು ವಿಷಾದನೀಯ ಎಂದು ಹೇಳಿದರು.

ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ 2024ರ ತೀರ್ಪು ರಾಜ್ಯಗಳಿಗೆ ಅವಕಾಶ ನೀಡಿದರೂ, ಅದು ಕಡ್ಡಾಯವಲ್ಲ. ಈ ಕ್ರಮವನ್ನು ಜಾರಿಗೆ ತರಲು ಸಮಗ್ರ ಮತ್ತು ವೈಜ್ಞಾನಿಕ ಮಾಹಿತಿ ಅಗತ್ಯವಾಗಿದ್ದು, ಯಾವುದೇ ತುರ್ತು ಅಥವಾ ರಾಜಕೀಯ ಒತ್ತಡದ ನಿರ್ಧಾರಗಳು ತಪ್ಪು ದಾರಿಗೆ ಕೊಂಡೊಯ್ಯಬಹುದು ಎಂದು ಅವರು ಎಚ್ಚರಿಸಿದರು. ಪ್ರಸ್ತುತ ಡೇಟಾ ಅಪೂರ್ಣವಾಗಿರುವುದರಿಂದ ಈ ವಿಷಯದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಆದಿವಾಸಿ ಸಮುದಾಯಗಳ ಏಕತೆಯನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ತಕ್ಷಣ ಕೈಬಿಡಬೇಕು ಮತ್ತು ಸಂವಿಧಾನದ ಮಾರ್ಗಸೂಚಿಗಳ ಪ್ರಕಾರ ಪ್ರಸ್ತುತ ಇರುವ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದರು.

ಒಳ ಮೀಸಲಾತಿ ವಿಚಾರದಲ್ಲಿ ಯಾವುದೇ ಸಮುದಾಯದ ವಿರುದ್ಧ ದ್ವೇಷ ಅಥವಾ ವೈಮನಸ್ಸು ಉಂಟಾಗದಂತೆ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಬಾಂಧವ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಟ್ಟದ ಕಾರ್ಯದರ್ಶಿ ರಮೇಶ್ ನಾಟಕರ್, ರಾಜ್ಯ ಸಂಚಾಲಕ ಬಸವರಾಜ್, ಹಾಸನ ಜಿಲ್ಲಾಧ್ಯಕ್ಷ ದರ್ಶನ್, ಬೆಂಗಳೂರು ದಕ್ಷಿಣ ಘಟಕದ ಅಧ್ಯಕ್ಷ ಮುನಿರಾಜು, ಸಾಮಾಜಿಕ ಚಿಂತಕ ಮದ್ದೂರಪ್ಪ, ಸಂಘಟನೆ ಸಂಚಾಲಕ ಗಿರೀಶ್ ಹಾಗೂ ಆನೇಕಲ್ ತಾಲೂಕು ಯುವ ಘಟಕದ ಅಧ್ಯಕ್ಷ ಸುಮನ್ ಉಪಸ್ಥಿತರಿದ್ದರು.

City Today News 9341997936

ಪಶುಸಂಗೋಪನೆ ಟೆಂಡರ್ ಅಕ್ರಮ: ₹50 ಕೋಟಿ ನಷ್ಟದ ಆರೋಪ

ಬೆಂಗಳೂರು: ರಾಜ್ಯ ಪಶುಸಂಗೋಪನೆ ಇಲಾಖೆಯ ಆಸ್ಪತ್ರೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಡಿ-ಗ್ರೂಪ್ ನೌಕರರನ್ನು ಒದಗಿಸುವ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಅಕ್ರಮದಿಂದ ರಾಜ್ಯ ಸರ್ಕಾರಕ್ಕೆ ಸುಮಾರು ₹50 ಕೋಟಿ ನಷ್ಟ ಉಂಟಾಗಿದೆ ಎಂದು ಒಕ್ಕೂಟದ ರಾಜ್ಯ ವಕ್ತಾರ ಎಂ.ಬಿ. ನಾಗಣ್ಣಗೌಡ ಆರೋಪಿಸಿದರು. ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರೂ, ಇಲಾಖೆಯ ಸಚಿವ ಕೆ. ವೆಂಕಟೇಶ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪಶು ಚಿಕಿತ್ಸಾಲಯಗಳಲ್ಲಿ ಖಾಲಿ ಇರುವ 2,256 ಡಿ-ಗ್ರೂಪ್ ಹುದ್ದೆಗಳನ್ನು ಭರ್ತಿ ಮಾಡಲು 2015ರಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಪಡೆಯಲು ಅನುಮತಿ ನೀಡಲಾಗಿತ್ತು. ಆದರೆ, ನೇರ ನೇಮಕಾತಿ ನಡೆಯುವವರೆಗೆ ಮಾತ್ರ ಟೆಂಡರ್ ಮೂಲಕ ಸೇವೆ ಪಡೆಯಬೇಕೆಂಬ ನಿಯಮವನ್ನು ಇಲಾಖೆ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಹೇಳಿದರು.

ಧಾರವಾಡ ಮೂಲದ ಮಾತಾ ಟೆಕ್ನಾಲಜೀಸ್ ಹಾಗೂ ಅಪ್ಟೆಕ್ಟ್ ಟೆಕ್ನಾಲಜೀಸ್ ಎಂಬ ಎರಡು ಏಜೆನ್ಸಿಗಳಿಗೆ ಕಳೆದ 11 ವರ್ಷಗಳಿಂದ ಯಾವುದೇ ಹೊಸ ಟೆಂಡರ್ ನಡೆಸದೆ ಗುತ್ತಿಗೆ ಮುಂದುವರಿಸಲಾಗಿದೆ. ಇದು ಕೆಟಿಟಿಪಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಪ್ರತಿ ವರ್ಷ ಟೆಂಡರ್ ನಡೆಸಬೇಕಾದ ನಿಯಮವಿದ್ದರೂ, ಅದನ್ನು ಪಾಲಿಸಿಲ್ಲ ಎಂದು ಅವರು ಆರೋಪಿಸಿದರು.

ಹೆಚ್ಚುವರಿ ಆರೋಪವಾಗಿ, ಶೇ.2ರ ಸೇವಾಶುಲ್ಕದಲ್ಲಿ ಸೇವೆ ನೀಡಲು ಹಲವು ಏಜೆನ್ಸಿಗಳು ಸಿದ್ಧವಿದ್ದರೂ, ಶೇ.11.5ರಷ್ಟು ಹೆಚ್ಚಿನ ಶುಲ್ಕದಲ್ಲಿ ಈ ಏಜೆನ್ಸಿಗಳನ್ನು ಮುಂದುವರಿಸಲಾಗಿದೆ. ಇದರಿಂದ ವರ್ಷಕ್ಕೆ ಸುಮಾರು ₹5 ಕೋಟಿ, ಒಟ್ಟು ₹50 ಕೋಟಿ ನಷ್ಟ ಸರ್ಕಾರಕ್ಕೆ ಉಂಟಾಗಿದೆ ಎಂದು ಹೇಳಿದರು.

ಈ ಬಗ್ಗೆ ಸಚಿವ ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕಿಲ್ಲ. ಸಚಿವರು ಸಹ ಈ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ನಾಗಣ್ಣಗೌಡ ಹೇಳಿದರು.

ಲೋಕಾಯುಕ್ತದಲ್ಲಿ ದೂರು ದಾಖಲಾದ ನಂತರ, ಸಂಬಂಧಿತ ಏಜೆನ್ಸಿಗಳ ಮೂಲಕ ನ್ಯಾಯಾಲಯದಲ್ಲಿ ದಾವೆ ಹೂಡಿಸಿ, ಬಾಕಿ ಹಣಕ್ಕೆ ಬಡ್ಡಿ ನೀಡುವಂತೆ ಮತ್ತು ಟೆಂಡರ್ ರದ್ದುಪಡಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ನೆಪದಲ್ಲಿ ಸರ್ಕಾರ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಅವರು ಆರೋಪಿಸಿದರು.ನ್ಯಾಯಾಲಯ ಯಾವುದೇ ಮಧ್ಯಂತರ ತಡೆ ಆದೇಶ ನೀಡದಿದ್ದರೂ, ಅದನ್ನು ಕಾರಣವನ್ನಾಗಿ ಮಾಡಿಕೊಂಡು ಗುತ್ತಿಗೆ ಮುಂದುವರಿಸಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಮತ್ತಷ್ಟು ನಷ್ಟವಾಗುತ್ತಿದೆ ಎಂದು ಹೇಳಿದರು.

ಈ ವಿಷಯವನ್ನು ರಾಜ್ಯದ 224 ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಗಮನಕ್ಕೆ ತರಲು ದಾಖಲೆಗಳೊಂದಿಗೆ ಮಾಹಿತಿ ನೀಡಲಾಗುವುದು. ಹಣಕಾಸು ಸಚಿವ ಸಿದ್ದರಾಮಯ್ಯ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿತ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಟೆಂಡರ್ ರದ್ದುಪಡಿಸಿ ನಷ್ಟವನ್ನು ವಸೂಲಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಇತರೆ ಮುಖಂಡರು ಉಪಸ್ಥಿತರಿದ್ದರು.

City Today News 9341997936

‘ಅನಿಲ ಇಲ್ಲ, ಆದಾಯ ಇಲ್ಲ’: ಆಟೋ ಚಾಲಕರ ತೀವ್ರ ಆಕ್ರೋಶ, ಕೇಂದ್ರದ ವಿರುದ್ಧ ಘೋಷಣೆಗಳು

ಆಟೋಗಳಿಗೆ ಅನಿಲ ಕೊರತೆ ವಿರುದ್ಧ ಚಾಲಕರ ಸಂಘಟನೆಗಳ ಬೃಹತ್ ಪ್ರತಿಭಟನೆ

ಬೆಂಗಳೂರು, ಮಾ.17: ಆಟೋಗಳಿಗೆ ಅಗತ್ಯವಾದ ಅನಿಲ ಸಿಲಿಂಡರ್‌ಗಳ ತೀವ್ರ ಕೊರತೆ ಉಂಟಾಗಿರುವುದನ್ನು ಖಂಡಿಸಿ ವಿವಿಧ ಚಾಲಕರ ಸಂಘಟನೆಗಳು ಮಂಗಳವಾರ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು.

ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್, ಸಂಚಾರಿ ಚಾಲಕರ ಸೇವಾ ಟ್ರಸ್ಟ್ ಹಾಗೂ ಸ್ನೇಹಜೀವಿ ಚಾಲಕರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಚಾಲಕರು ವಿಭಿನ್ನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಫ್ರೀಡಂ ಪಾರ್ಕ್ ಮುಂಭಾಗ ಆಟೋಗಳಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಸಂಕಷ್ಟದ ಸಂಕೇತ ನೀಡಿದ ಅವರು, ಖಾಲಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಪ್ರದರ್ಶಿಸಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಆಟೋ ಚಾಲಕರು ಎದುರಿಸುತ್ತಿರುವ ಸಂಕಷ್ಟವನ್ನು ವಿವರಿಸಿದರು. “ಕೇಂದ್ರ ಸರ್ಕಾರದ ನೀತಿಗಳಿಂದ ಆಟೋ ಚಾಲಕರಿಗೆ ಅನ್ಯಾಯವಾಗುತ್ತಿದೆ. ಅನಿಲದ ಕೊರತೆಯಿಂದ ದಿನನಿತ್ಯದ ಆದಾಯವೇ ಕುಂಠಿತವಾಗಿದ್ದು, ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಪ್ರತಿಯೊಬ್ಬ ಆಟೋ ಚಾಲಕರ ಕುಟುಂಬಕ್ಕೂ ತಕ್ಷಣ ಹತ್ತು ಸಾವಿರ ರೂ. ಪರಿಹಾರ ನೀಡಬೇಕು,” ಎಂದು ಅವರು ಆಗ್ರಹಿಸಿದರು.

ಅದೇ ವೇಳೆ, ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ಮನೆಮನೆಗಳಲ್ಲಿ ಸಂಕಷ್ಟ ಉಂಟುಮಾಡಿದೆ. ಆಟೋಗಳಿಗೆ ಅಗತ್ಯವಾದ ಅನಿಲವೂ ಬಂಕ್‌ಗಳಲ್ಲಿ ಸಿಗದಿರುವುದರಿಂದ ಚಾಲಕರು ದ್ವಂದ್ವ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಅವರು ಹೇಳಿದರು.

ಸ್ನೇಹಜೀವಿ ಚಾಲಕರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜು ಕನ್ನಡಿಗ ಹಾಗೂ ಸಂಚಾರಿ ಸತೀಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

City Today News 9341997936