ಸಿನಿಮಾ ಪೈರೆಸಿ ತಡೆಗೆ ‘ಫಿಲ್ಡ್ ಮೇಕರ್ಸ್ ಕೌನ್ಸಿಲ್ (ರಿ)’ ಮುಂದಾಳತ್ವ

ಬೆಂಗಳೂರು: ಸಿನಿಮಾರಂಗದಲ್ಲಿ ಪೈರೆಸಿ ಮತ್ತು ಇತರ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಫಿಲ್ಡ್ ಮೇಕರ್ಸ್ ಕೌನ್ಸಿಲ್ (ರಿ) (FMC) ನಿರಂತರವಾಗಿ ಕೆಲಸ ಮಾಡುತ್ತಿದೆ. ಪೈರೆಸಿ ಚಲನಚಿತ್ರ ಉದ್ಯಮಕ್ಕೆ ಭಾರೀ ನಷ್ಟ ತರುತ್ತಿದ್ದು, ಇದನ್ನು ತಡೆಗಟ್ಟಲು FMC ಕಳೆದ ಒಂದು ವರ್ಷದಿಂದ ಪೊಲೀಸ್ ಇಲಾಖೆ, ಸೈಬರ್ ವಿಭಾಗ, ವಾರ್ತಾ ಇಲಾಖೆ, CBFC (Central Board of Film Certification) ಹಾಗೂ ಇತರ ಸರಕಾರೀ ಸಂಸ್ಥೆಗಳೊಂದಿಗೆ ಸತತ ಸಂಪರ್ಕದಲ್ಲಿದೆ. ಈ ಮುಂದಾಳತ್ವದ ಭಾಗವಾಗಿ, ಈಗಾಗಲೇ ನಾಲ್ಕು ವೆಬ್‌ ಪೋರ್ಟಲ್ ಮತ್ತು ಎರಡು ಮೊಬೈಲ್ ಆಪ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಪೈರೆಸಿಯ ವಿರುದ್ಧ ಒಗ್ಗೂಡಿ ಹೋರಾಟ

ಹಾಗಿದ್ದರೂ, ಡಿಜಿಟಲ್ ಯುಗದಲ್ಲಿ ಪೈರೆಸಿ ಹೊಸ ಹೊಸ ರೂಪದಲ್ಲಿ ತಲೆದೋರುತ್ತಿದ್ದು, ಸಿನಿಮಾಗಳು ಟೆಲಿಗ್ರಾಂ, ವೆಬ್‌ಸೈಟ್, ಅಪ್ಲಿಕೇಶನ್‌ಗಳ ಮೂಲಕ ಅನಧಿಕೃತವಾಗಿ ಹರಡುತ್ತಿವೆ. ಈ ಹಿನ್ನೆಲೆಯಲ್ಲಿ, FMC ಚಿತ್ರರಂಗದ ಎಲ್ಲ ಹಿತಾಸಕ್ತಿಗಳನ್ನೂ ಒಗ್ಗೂಡಿಸಿ, ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ.

ಚಿತ್ರರಂಗದ ಇತರ ಸಮಸ್ಯೆಗಳಿಗೂ ಪರಿಹಾರ ಅನಿವಾರ್ಯ

FMC ಕೇವಲ ಪೈರೆಸಿಯ ವಿರುದ್ಧವೇ ಅಲ್ಲ, ಇತರೆ ಪ್ರಮುಖ ಸಮಸ್ಯೆಗಳಿಗೂ ದಿಟ್ಟ ಹೆಜ್ಜೆ ಹಾಕುತ್ತಿದೆ. ಇದರ ಅಂಗವಾಗಿ,

ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಮತ್ತು ಪ್ರದರ್ಶನ ನಿಯಂತ್ರಣ

UFO/QUBE ಡಿಜಿಟಲ್ ಮೀನಾಪೋಲಿ (Monopoly) ನಿಯಂತ್ರಣ

ನಿರ್ದೇಶಿತ ಸಿನಿಮಾ ಬಿಡುಗಡೆ ಯೋಜನೆ (Structured Release Plan)

ಸಬ್ಸಿಡಿ, ಸರ್ಕಾರಿ ಪ್ರೋತ್ಸಾಹದ ಸಮಸ್ಯೆಗಳಿಗೆ ಪರಿಹಾರ

ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಿರ್ಲಕ್ಷ್ಯ ವಿರುದ್ಧ ಕ್ರಮ

ಚಿತ್ರರಂಗಕ್ಕೆ ಸರ್ಕಾರದಿಂದ ಭದ್ರತಾ ಒದಗಿಕೆ


ಈ ಎಲ್ಲ ವಿಷಯಗಳ ಬಗ್ಗೆ ಸರ್ಕಾರದೊಂದಿಗೆ FMC ಸಮಾಲೋಚನೆ ನಡೆಸಲು ಮುಂದಾಗಿದೆ.

ಸಿನಿಮಾ ತಯಾರಕರ ಹಿತಕಾಯುವ ವೇದಿಕೆ

FMC ಕೇವಲ ಒಂದು ಸಂಘಟನೆಯಷ್ಟೇ ಅಲ್ಲ, ಇದು ಸಿನಿಮಾ ತಯಾರಕರ ಸಮುದಾಯಕ್ಕಾಗಿ ಕಾರ್ಯನಿರ್ವಹಿಸುವ ವೇದಿಕೆ. ಚಲನಚಿತ್ರ ಮೌಲ್ಯ ಮತ್ತು ಭದ್ರತೆ ಕುರಿತು ಜಾಗೃತಿ ಮೂಡಿಸಲು, ಚಿತ್ರೀಕರಣ ಅನುಮತಿ, ಪ್ರಚಾರ, ಬಿಡುಗಡೆ ಪ್ರಕ್ರಿಯೆಗಳಲ್ಲಿ ಸಲಹೆ ನೀಡಲು ಈ ಸಂಸ್ಥೆ ನಿರ್ಧರಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ FMC ಚಟುವಟಿಕೆಗಳು

“ಕಾಕಾ ಜೊತೆ ಈ ವಾರದ ಸಿನೆಮಾ” – ಪ್ರೇಕ್ಷಕರಿಗೆ ಹೊಸ ಸಿನಿಮಾಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ

“Let’s Talk with Pavana” – ಸಿನಿಮಾ ತಂತ್ರಜ್ಞರು, ನಿರ್ಮಾಪಕರು ಮತ್ತು ನಟರೊಂದಿಗೆ ಅನುಭವ ಹಂಚಿಕೊಳ್ಳುವ ವೇದಿಕೆ


ಈ ಎಲ್ಲ ಕಾರ್ಯಗಳನ್ನು ಇನ್ನಷ್ಟು ಬಲಪಡಿಸಲು, FMC ಚಿತ್ರರಂಗದ ಸಮುದಾಯ ಮತ್ತು ಮಾಧ್ಯಮ ಮಿತ್ರರ ಸಹಕಾರ ನಿರೀಕ್ಷಿಸುತ್ತಿದೆ.

ಈ ಕಾರ್ಯಕ್ರಮದಲ್ಲಿ FMC ಅಧ್ಯಕ್ಷ ಸಂತೋಷ್ ಕೊಡೆಂಕೇರಿ ಮತ್ತು ನಿರ್ದೇಶಕ ಮಂಡಳಿಯ ಸದಸ್ಯರು ಪಾವನ ಸಂತೋಷ್, ಶಿವರುದ್ರಯ್ಯ ಎಸ್.ವಿ, ಪ್ರಮೀಳಾ ಸುಬ್ರಮಣ್ಯ, ಉಮಾಶಂಕರ್ ಸ್ವಾಮಿ, ಹನುಮಂತ್ ರಾವ್ ಕೌಜಲಗಿ, ರಕ್ಷಕ್ ಮೋನಪ್ಪ, ಹಯವದನ ವಾದಿರಾಜ್, ಶ್ರೀನಿವಾಸ್ ರಾಜು ಎಚ್ ಉಪಸ್ಥಿತರಿದ್ದರು. ಗೌರವಾನ್ವಿತ ಸಲಹೆಗಾರರಾದ ರೋಹಿತ್ ಮಂಜ್‌ರೇಕರ್, ಬರಗೂರು ರಾಮಚಂದ್ರಪ್ಪ, ಮೋಹನ್ ಕೊಂಡಜ್ಜಿ, ಕೃಷ್ಣಗೌಡರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

City Today News 9341997936

2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಲಿಂಗತ್ಯ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ಮೀಸಲಿಡುವಂತೆ ಒತ್ತಾಯಿಸಿ, ಲಿಂಗತ್ಯ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ಸಂಘಟನೆಯಿಂದ ಒತ್ತಾಯ

ಬೆಂಗಳೂರು: 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಲಿಂಗತ್ಯ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ಮೀಸಲಿಡುವಂತೆ ಒತ್ತಾಯಿಸಿ, ಲಿಂಗತ್ಯ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ಸಂಘಟನೆ ಇಂದು ಬೆಳಿಗ್ಗೆ 11:30 ಗಂಟೆಗೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿತು.

ಬಜೆಟ್‌ನಲ್ಲಿ 200 ಕೋಟಿ ರೂ. ಮೀಸಲಾತಿ ಪ್ರಣಾಳಿಕೆಯಲ್ಲೇ ಉಳಿದಿದೆಯೇ?
ಈ ವೇಳೆ ಮಾತನಾಡಿದ ಮಾನವ ಹಕ್ಕುಗಳ ಹೋರಾಟಗಾರ ಮನೋಹರ್ ಎಲವರ್ತಿ ಮತ್ತು ರಾಜ್ಯ ಸಹ-ಅಧ್ಯಕ್ಷೆ ಕಾಂತದೇವಿ, ಕಾಂಗ್ರೆಸ್ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ಲಿಂಗತ್ಯ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ವರ್ಷಕ್ಕೆ ₹200 ಕೋಟಿ ಮೀಸಲಿಡುವುದಾಗಿ ಘೋಷಿಸಿತ್ತು. ಆದರೆ, ಇನ್ನೂ ಇದನ್ನು ಜಾರಿಗೆ ತರದಿರುವುದನ್ನು ಅವರು ಟೀಕಿಸಿದರು.

ಸಮುದಾಯದ ಪ್ರಭಾವಶಾಲಿ ಒತ್ತಾಯಗಳು:
ಸಂಘಟನೆಯ ಪ್ರಮುಖರು ಸರ್ಕಾರಕ್ಕೆ ಈ ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು:

1. ವಸತಿ ಯೋಜನೆ: ಲಿಂಗತ್ಯ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಸತಿ ಸೌಲಭ್ಯ ನೀಡಲು ಹೊಸ ಯೋಜನೆ ರೂಪಿಸಬೇಕು.


2. ಆರ್ಥಿಕ ನೆರವು: ಲಿಂಗ ಅಲ್ಪಸಂಖ್ಯಾತರು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಲು ಪ್ರತಿ ವ್ಯಕ್ತಿಗೆ ₹2,00,000 ಸಹಾಯಧನ ನೀಡಬೇಕು.


3. ಉಚಿತ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ: ಉಚಿತ Sex Reassignment Surgery (SRS) ನೀಡಲು ಮತ್ತು ಶಸ್ತ್ರಚಿಕಿತ್ಸೆಯ ನಂತರ 6 ತಿಂಗಳ ಆರೈಕೆಗಾಗಿ ಅನುದಾನ ನೀಡಬೇಕು.


4. ಉದ್ಯೋಗಾವಕಾಶ: 1% ಮೀಸಲಾತಿಯಡಿ ಉದ್ಯೋಗ ಪಡೆಯಲು ಲಿಂಗತ್ಯ ಅಲ್ಪಸಂಖ್ಯಾತರಿಗೆ ತರಬೇತಿ ಮತ್ತು ಕೋಚಿಂಗ್‌ಗಾಗಿ ಅನುದಾನ ಹಂಚಬೇಕು.


5. ಸಮಗ್ರ ಅಭಿವೃದ್ಧಿ: ಲಿಂಗತ್ಯ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸರ್ವತೋಮುಖ ಅಭಿವೃದ್ಧಿಗೆ ವಾರ್ಷಿಕ ₹200 ಕೋಟಿ ಮೀಸಲಿಡಲು ಪ್ರತ್ಯೇಕ ನೀತಿ ರಚಿಸಬೇಕು.



ಸಂಘಟನೆ ಸರ್ಕಾರವನ್ನು ತಕ್ಷಣವೇ ಈ ಬೇಡಿಕೆಗಳನ್ನು ಪರಿಗಣಿಸಲು ಮತ್ತು ಬಜೆಟ್‌ನಲ್ಲಿ ಲಿಂಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅಗತ್ಯ ಅನುದಾನ ಮೀಸಲಿಡಲು ಒತ್ತಾಯಿಸಿದೆ. “ಸಮುದಾಯದ ಹಕ್ಕುಗಳಿಗಾಗಿ ನಾವು ಹೋರಾಟ ಮುಂದುವರಿಸುತ್ತೇವೆ” ಎಂದು ಮಾನವ ಹಕ್ಕುಗಳ ಹೋರಾಟಗಾರ ಮನೋಹರ್ ಎಲವರ್ತಿ ಹೇಳಿದ್ದಾರೆ.

ರಾಜ್ಯ ಸರ್ಕಾರದ ಪ್ರತಿಕ್ರಿಯೆ ಏನು?
ಸಂಘಟನೆಯ ಈ ಒತ್ತಾಯಕ್ಕೆ ಸರ್ಕಾರ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕಾದು ನೋಡಬೇಕಿದೆ. ಲಿಂಗತ್ಯ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಈ ಒತ್ತಾಯಗಳು ಬಜೆಟ್‌ನಲ್ಲಿ ಪರಿಗಣನೆಗೆ ಬರಲಿವೆಯಾ ಎಂಬುದರ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕಾಗಿದೆ.

City Today News 9341997936

ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು – ಸಂಘಟನೆ ಒತ್ತಾಯ


ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಿಸಬೇಕೆಂದು ವಿಶ್ವಜ್ಞಾನಿ ಡಾ|. ಬಿ.ಆರ್. ಅಂಬೇಡ್ಕರ್ ರಾಜ್ಯ ಹೋರಾಟ ಸೇನೆ (ರಿ.) ಒತ್ತಾಯಿಸಿದೆ. ರಾಜ್ಯದ ಅಭಿವೃದ್ಧಿ ಮತ್ತು ಕಾಂಗ್ರೆಸ್ ಸಂಘಟನೆಗೆ ಅವರ ನಾಯಕತ್ವ ಅಗತ್ಯವಿದೆ ಎಂದು ಸಂಘಟನೆಯ ಸುಮಾ ಬಸವಲಿಂಗಯ್ಯ, ಸಂಸ್ಥಾಪಕ ಅಧ್ಯಕ್ಷರು ಮತ್ತು ಎಸ್ ಬಿ. ಮಲ್ಲಿಕಾರ್ಜುನ ಸ್ವಾಮಿ ಹೋರಾಟ ಸೇನೆಯ ವತಿಯಿಂದ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಶ್ರೀ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ, ಬೂತ್ ಮಟ್ಟದಿಂದ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಎಲ್ಲ ವರ್ಗಗಳ ಜನರ ಬೆಂಬಲವನ್ನು ಅವರು ಹೊಂದಿದ್ದಾರೆ. ಹೀಗಾಗಿ, ರಾಜ್ಯದ ಮುಂದಿನ ಚುನಾವಣೆಗಳ ದೃಷ್ಟಿಯಿಂದ ಅವರ ನಾಯಕತ್ವ ಅತ್ಯಗತ್ಯ,” ಎಂದರು.

ರಾಜ್ಯದಲ್ಲಿ ಇತ್ತೀಚೆಗೆ ಉಂಟಾಗಿರುವ ರಾಜಕೀಯ ಅನಿಶ್ಚಿತತೆ ಮತ್ತು ಅಸಮಾಧಾನವನ್ನು ಸರಿಪಡಿಸಲು, ಕಾಂಗ್ರೆಸ್ ಉನ್ನತ ನಾಯಕತ್ವ ತಕ್ಷಣ ಕ್ರಮ ಕೈಗೊಳ್ಳಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಖರ್ಗೆ ಅವರ ಮಾರ್ಗದರ್ಶನದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಬೇಕು ಎಂಬುದು ಸಂಘಟನೆಯ ಹಿತದೃಷ್ಟಿಯಾಗಿದೆ ಎಂದು ಅವರು ಹೇಳಿದರು.

City Today News 9341997936

Indian Transgender Activist Dr. Akkai Padmashali Condemns Trump’s Anti-Transgender Policies in Open Letter

Bengaluru, India – Prominent transgender activist Dr. Akkai Padmashali, along with fellow gender rights advocates, has issued a scathing open letter to former U.S. President Donald Trump, denouncing his administration’s policies targeting transgender and non-binary individuals. The letter, signed by Dr. Padmashali, trans activist Ms. Rakshitha Mallikarjuna, and intersex rights advocate Ms. Abeda Begum, strongly criticizes Trump’s efforts to erase transgender identities, limit their rights, and roll back key protections.

Dr.Akkai Padmashali, a well-known voice for transgender rights in India, expressed deep concern over policies that redefine sex as strictly male or female based on biological attributes at birth, exclude transgender individuals from military service and sports, and eliminate federal funding for gender-affirming care. “Your policies represent a shocking assault on the basic rights of transgender individuals and establish a dangerous precedent for government-perpetrated discrimination worldwide,” the letter states.

The activists also condemned Trump’s rollback of Title IX protections, which previously ensured equal rights for transgender students in educational institutions. They argued that such actions push transgender individuals further into the margins of society, depriving them of dignity, legal protection, and basic healthcare.

“The LGBTQ+ community, especially transgender individuals, has long faced discrimination and systemic erasure. But we will not be silenced, nor will we be erased,” Dr. Akkai Padmashali asserted.

The letter also highlights the Trump administration’s removal of transgender history from official records, its dismantling of Diversity, Equity, and Inclusion (DEI) programs, and its broader attacks on LGBTQ+ rights. The activists urged global solidarity and resistance against such policies, vowing to support their “queer brothers and sisters in the U.S.” in fighting for justice, inclusion, and legal protections.

“Mr. Trump, history will not be kind to you for this,” the letter warns. “Our lives are not debatable, our rights are inalienable, and our existence is not yours to erase.”

The open letter has sparked discussions within activist circles, emphasizing the need for international pressure to protect transgender rights globally.

For further information, Dr. Akkai Padmashali can be contacted at akkaipadmashali@gmail.com.

City Today News 9341997936

“ಸಿಐಟಿಯು (CITU) ರಾಜ್ಯ ಸಮಿತಿಯಿಂದ ಪ್ರತಿಭಟನೆ” “ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಿ, ಬಡವರಿಗೆ ಬದುಕು ಕಲ್ಪಿಸಿ” ಎಂಬ ಘೋಷಣೆಯೊಂದಿಗೆ ಮಾರ್ಚ್ 3 ರಿಂದ 7, 2025 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ

ಬೆಂಗಳೂರು, ಡಿಸೆಂಬರ್ 20, 2024: ಕರ್ನಾಟಕದಲ್ಲಿ ಕಾರ್ಮಿಕರ ಹಕ್ಕುಗಳು ಮತ್ತು ಜನಪರ ಆರ್ಥಿಕ ನೀತಿಗಳ ಜಾರಿಗೆ ಒತ್ತಾಯಿಸಿ, ಸಿಐಟಿಯು (CITU) ರಾಜ್ಯ ಸಮಿತಿ ಭಾರಿ ಪ್ರತಿಭಟನೆಯನ್ನು ಆಯೋಜಿಸಿದೆ. “ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಿ, ಬಡವರಿಗೆ ಬದುಕು ಕಲ್ಪಿಸಿ” ಎಂಬ ಘೋಷಣೆಯೊಂದಿಗೆ ಮಾರ್ಚ್ 3 ರಿಂದ 7, 2025 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಯಲಿದೆ ಎಂದು ಸಮಿತಿಯ ಮುಖಂಡರು ತಿಳಿಸಿದ್ದಾರೆ.

ರಾಜ್ಯದ ಕಾರ್ಮಿಕರ ಪ್ರಮುಖ ಬೇಡಿಕೆಗಳು

ರಾಜ್ಯದ ಕಾರ್ಮಿಕರ ಹಲವು ಬೇಡಿಕೆಗಳು ದೀರ್ಘಕಾಲದಿಂದ ಪ್ರಗತಿ ಕಾಣದೆ ಇರುವುದರಿಂದ, ಶ್ರಮಶಕ್ತಿಯ ಸಮರ್ಪಕ ನಿರ್ವಹಣೆ ಹಾಗೂ ಕಾರ್ಮಿಕರಿಗೆ ನ್ಯಾಯ ಒದಗಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿಐಟಿಯು ಒತ್ತಾಯಿಸಿದೆ. ಸರ್ಕಾರವು ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ನೀತಿಗಳನ್ನು ಅನುಸರಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಮಾರ್ಚ್ 3 ರಂದು ಗ್ರಾಮ ಪಂಚಾಯಿತಿ ಕಾರ್ಮಿಕರು, ಮಾರ್ಚ್ 4 ರಂದು ಅಕ್ಷರ ದಾಸೋಹ ಕಾರ್ಮಿಕರು, ಮಾರ್ಚ್ 5 ರಂದು ಕಟ್ಟಡ ನಿರ್ಮಾಣ ಕಾರ್ಮಿಕರು, ಮಾರ್ಚ್ 6 ರಂದು ಕಾರ್ಖಾನೆ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರು ಭಾಗವಹಿಸಲಿದ್ದಾರೆ. ಮಾರ್ಚ್ 7 ರಂದು ಅಂಗನವಾಡಿ ಕಾರ್ಮಿಕರು ಸೇರಿದಂತೆ ವಿವಿಧ ವೃತ್ತಿಗಳ ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 50,000ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸುವ ನಿರೀಕ್ಷೆಯಿದೆ.

ಪ್ರತಿಭಟನೆಯಲ್ಲಿ ಕನಿಷ್ಠ ವೇತನ ಹೆಚ್ಚಳ, ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡುವುದು, ಸಮಾನ ಕೆಲಸಕ್ಕೆ ಸಮಾನ ವೇತನ, ಅಸಂಘಟಿತ ಕಾರ್ಮಿಕರ ಕಲ್ಯಾಣ ಯೋಜನೆಗಳು, ಸರ್ಕಾರಿ ಯೋಜನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನ್ಯಾಯ ಒದಗಿಸುವುದು ಸೇರಿ 37 ಬೇಡಿಕೆಗಳನ್ನು ಪ್ರಸ್ತಾಪಿಸಲಾಗಿದೆ.

ಸರ್ಕಾರದ ಕಾರ್ಮಿಕ ನೀತಿಯ ವಿರೋಧ

ಸಿಐಟಿಯು ರಾಜ್ಯ ಸಮಿತಿಯು ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ಜಾರಿಗೆ ತಂದ ಕಾರ್ಮಿಕ ಕಾನೂನು ತಿದ್ದುಪಡಿಗಳನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಕೂಡ ಮುಂದುವರಿಸುತ್ತಿದೆ ಎಂದು ಆರೋಪಿಸಿದೆ. ಕೃಷಿ ಕ್ಷೇತ್ರದಲ್ಲಿ ಎಪಿಎಂಸಿ ಕಾಯಿದೆ ತಿದ್ದುಪಡಿ ಹಿಂಪಡೆಯದೆ, ಜನತೆಗೆ ನೀಡಿದ ಭರವಸೆಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಸಂಘಟನೆ ಹೇಳಿದ್ದಾರೆ.

ರಾಜ್ಯ ಸರ್ಕಾರ ಕಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸಲು ನಿರಾಕರಿಸಿರುವುದರಿಂದ, ಬಜೆಟ್ ಪೂರ್ವ ಚರ್ಚೆಗಳಲ್ಲೂ ಕಾರ್ಮಿಕರ ಸಮಸ್ಯೆಗಳಿಗೆ ತಕ್ಕ ಪ್ರತಿಕ್ರಿಯೆ ದೊರಕದೆ ಇರುವುದರಿಂದ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಸಮಿತಿ ಪ್ರಕಟಣೆ ನೀಡಿದೆ. ಸರ್ಕಾರ ಪ್ರಜಾಸತ್ತಾತ್ಮಕ ತತ್ವಗಳನ್ನು ಪಾಲಿಸಬೇಕಾದರೆ, ಬಜೆಟ್ ಪ್ರಸ್ತಾವನೆಗಳಲ್ಲಿ ಈ ಬೇಡಿಕೆಗಳ ಕುರಿತು ಸ್ಪಷ್ಟ ಘೋಷಣೆ ಮಾಡಬೇಕು ಎಂದು ಸಮಿತಿಯು ಆಗ್ರಹಿಸಿದೆ.

ಈ ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷರಾದ ಎಸ್. ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿಗಳಾದ ಮೀನಾಕ್ಷಿ ಸುಂದರಂ, ಎಚ್.ಎಸ್. ಸುನಂದಾ ಮತ್ತು ಮಾಲಿನಿ ಮೇಸ್ತ ಉಪಸ್ಥಿತರಿದ್ದರು.

City Today News 9341997936