ಅಮಿತ್ ಶಾ ರವರು ನಮ್ಮ ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ।। ಬಿ ಆರ್ ಅಂಬೇಡ್ಕರ್ ರವರ ಕುರಿತು ವಿವಾದಾತ್ಮಕ ಹೇಳಿಕೆ

ಇತ್ತೀಚಿಗೆ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ನಮ್ಮ ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ।। ಬಿ ಆರ್ ಅಂಬೇಡ್ಕರ್ ರವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಮತ್ತು ಹಿಂದುಳಿದವರ ವಿಚಾರ ಸಮಿತಿ(ರಿ) ರಾಜ್ಯಾದಂತ ಉಗ್ರ ಹೋರಾಟವನ್ನು ನಡೆಸುತ್ತಿದ್ದು ಈ ಮೂಲಕ ಅಮಿತ್ ಶಾ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ.

ಇದಲ್ಲದೆ,
1). ದೇಶದಲ್ಲಿ ಯಾವುದೇ ಹುದ್ದೆಯಲ್ಲಿರುವ ವ್ಯಕ್ತಿ ಬಾಬಾ ಸಾಹೇಬ್ ಡಾ।। ಬಿ ಆರ್ ಅಂಬೇಡ್ಕರ್, ಭಗವಾನ್ ಬುದ್ಧ, ಬಸವಣ್ಣ ರವರ ಹೆಸರುಗಳನ್ನು ದುರುಪಯೋಗಪಡಿಸಕೊಂಡರೆ ಪೋಲಿಸ್ ಇಲಾಖೆ ಸ್ವಯಂ ಕೇಸ್ ದಾಖಲಿಸಿಕೊಳ್ಳಬೇಕು ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.

2)ಬುದ್ಧ ಬಸವ ಅಂಬೇಡ್ಕರ್ ರವರ ಭಾವಚಿತ್ರ ಹಾಗೂ ಪುತ್ತಳಿ ನಿರ್ಮಿಸುವುದಕ್ಕೆ ಅನುಮತಿ ಪಡೆಯಬೇಕೆಂಬ ನಿರ್ಧಾರ ಸರ್ಕಾರ ಕೈಗೊಂಡಿದ್ದು ಇದನ್ನು ನಾವು ಖಂಡಿಸುತ್ತೇವೆ, ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಮಹನೀಯರ ಪುತ್ತಳಿಗಳನ್ನು ನಿರ್ಮಿಸುವುದಕ್ಕೆ ಯಾವುದೇ ಅನುಮತಿ ಬೇಡವಾಗಿದ್ದರಿಂದ ಈ ಕೂಡಲೇ ಆದೇಶವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸುತ್ತಾ.

ಈ ಮೇಲ್ಕಂಡ ಎರಡು ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಿ ನಮ್ಮ ಹೋರಾಟಕ್ಕೆ ಸ್ಪಂದಿಸಬೇಕೆಂದು ಮಾನ್ಯ ರಾಜ್ಯಪಾಲರ ಮೂಲಕ ಮನವಿ ಪತ್ರವನ್ನು ನೀಡುತ್ತಿದ್ದೇವೆ ಎಂದು ಡಾ||. ಜಿ ಎನ್ ಸಿದ್ದಲಿಂಗಯ್ಯ
ರಾಜ್ಯಾಧ್ಯಕ್ಷರು ಕರ್ನಾಟಕ ದಲಿತ ಮತ್ತು ಹಿಂದುಳಿದವರ ವಿಚಾರ ಸಮಿತಿ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತಯರ ಮತ್ತು ಸಹಾಯಕಿಯರ ಸಂಘ (ರಿ), ರಾಜ್ಯ ಸಮಿತಿ ಬೆಂಗಳೂರು ವತಿಯಿಂದ “ಬೆಂಗಳೂರು ಚಲೋ ಚಳುವಳಿ”

“ಬೆಂಗಳೂರು ಚಲೋ ಚಳುವಳಿ”

ದಿನಾಂಕ 28-01-2025ನೇ ಮಂಗಳವಾರ ಬೆಳಿಗ್ಗೆ : 10–30ಕ್ಕೆ

ಐ.ಸಿ.ಡಿ.ಎಸ್. ಯೋಜನೆ ಪ್ರಾರಂಭವಾಗಿ 50 ವರ್ಷಆಗಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರು ನಗರದ ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ

ದೇಶದಲ್ಲಿ ಮಹಿಳೆಯರು, ಮಕ್ಕಳು, ಗರ್ಭಿನಿಯರು, ಬಾಣಂತಿಯರು, ಕಿಶೋರಿಯರು ಎದುರಿಸಿರುತ್ತಿರುವ ಅಪೌಷ್ಟಿಕತೆ ರಕ್ತಹೀನತೆ, ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕುವ ಹಿನ್ನೆಲೆಯಲ್ಲಿ 1975 ಅಕ್ಟೋಬರ್ 2ರಂದು ಪ್ರಾರಂಭಿಸಲಾದ ಸಮಗ್ರಶಿಶು ಅಭಿವೃದ್ಧಿಯೋಜನೆಯ (ಐ.ಸಿ.ಡಿ.ಎಸ್) ಪರಿಣಾಮಕಾರಿಯಾಗಲು ಅಂಗನವಾಡಿ ಕಾರ್ಯಕರ್ತೆಯರು ಸಾಕಷ್ಟು ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿದ್ದೇವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ (ಐ.ಸಿ.ಡಿ.ಎಸ್) ಯೋಜನೆಯಲ್ಲಿ 3 ರಿಂದ 6ವರ್ಷದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಪೂರಕ ಪೌಷ್ಠಿಕ ಆಹರ ವಿತರಣೆ ಮಕ್ಕಳಿಗೆ ಚುಚ್ಚು ಮದ್ದು ಕೊಡಿಸುವುದು. ಭಾಗ್ಯಲಕ್ಷ್ಮೀ ಅರ್ಜಿ ಹಾಗೂ ಮಾತೃವಂದನಾ ಅರ್ಜಿಯನ್ನು ಫಲಾನುಭವಿಗಳಿಗೆ ನೀಡುವುದು. ಬಿ.ಎಲ್.ಓ. ಕೆಲಸ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಪೋಷಣ್ ಟ್ರ್ಯಾಕರ್‌ನಲ್ಲಿ ಮಕ್ಕಳು ಮತ್ತು ಗರ್ಭಿಣಿಯರು, ಬಾಣಂತಿಯರ, ತೂಕ ಮತ್ತು ಎತ್ತರವನ್ನು ನಮೂದಿಸರುತ್ತಿದ್ದೇವೆ. ಈ ಹಿಂದೆ 2020, 21, 22ನೇ ಸಾಲಿನಲ್ಲಿ ಕರೋನ ವಾರಿಯರ್ಸ್ಗಳಾಗಿ ಜೀವದ ಹಂಗುತೋರೆದು ಅರೋಗ್ಯ ಇಲಾಕೆಯವರ ಜೊತೆ ಕೆಲಸ ನಿರ್ವಹಿಸಿದ್ದೇವೆ. ಆ ಸಂದರ್ಭದಲ್ಲಿ ಕರೋನ ವೈರಸ್‌ಗೆ ತುತ್ತಾಗಿ ತಂಬಾ ಕಾರ್ಯಕರ್ತೆಯರು ಮರಣ ಹೊಂದಿದ್ದು ಅವರು ಕುಟುಂಬಗಳು ಬೀದಿಗೆ ಬಂದಿರುತ್ತವೆ.

ಹೀಗೆ ನಮ್ಮ ಕೆಲಸದ ಜೊತೆಗೆ ಇತರೆ ಇಲಾಖೆಗಳ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರು 50 ವರ್ಷಗಳಿಂದ ಕೆಲಸ ನಿರ್ವಸಿಕೊಂಡು ಬರುತ್ತಿದ್ದೇವೆ ಅದರು ನಮಗೆ ಕನಿಷ್ಠ ಕೂಲಿಯನ್ನು ನೀಡುತ್ತಿಲ್ಲ ಗೌರವಧನದ ಆದರದಲ್ಲಿ ಮಹಿಳೆಯರನ್ನು ಹೀಗೆ ದುಡಿಸಿಕೊಳ್ಳುತ್ತಿರುವುದು ಖಂಡಿಸಿ ನಮ್ಮ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ (ಐ.ಸಿ.ಡಿ.ಎಸ್) ಯೋಜನೆಯ 50 ನೇ ವರ್ಷ ಸುವರ್ಣಮಹೋತ್ಸವವನ್ನು ಅರ್ಥಪೂರ್ವಕವಾಗಿ ಆಚರಿಸಲು ಸರ್ಕಾರ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.

ಮುಖ್ಯ ಬೇಡಿಕೆಗಳು:

1) ಅಂಗನವಾಡಿ ಕಾರ್ಯಕರ್ತೆಯರಿಗೆ 25,000-00 ರೂ ಹಾಗೂ ಅಂಗನವಾಡಿ ಸಹಾಯಕಿಯರಿಗೆ 12,000-00 ಸಾವಿರ ರೂ. ಕನಿಷ್ಠ ವೇತನವನ್ನು ನಿಗದಿಮಾಡಬೇಕು.

2) ಕಾರ್ಯಕರ್ತೆಯರನ್ನು ಸಿ.ದರ್ಜೆ ಎಂದು ಮತ್ತು ಸಹಾಯಕಿಯರನ್ನು ಡಿ. ದರ್ಜೆ ಸರ್ಕಾರಿ ನೌಕರರೆಂದು ಪರಿಗಣಿಸಿ, ಗುಜರಾತ್ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ನಮ್ಮ ಕರ್ನಾಟಕದಲ್ಲಿಯೂ ಜಾರಿ ಮಾಡಿ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಮತ್ತು ಬಿ.ಪ್ರೇಮ-ರಾಜ್ಯಾಧ್ಯಕ್ಷರು
ಜಯಲಕ್ಷ್ಮಿ ಬಿ.ಆ‌ರ್-ಗೌರವ ಅಧ್ಯಕ್ಷರು
ವಿಶಾಲಾಕ್ಷಿ-ರಾಜ್ಯ ಖಜಾಂಚಿ
ನಿರ್ಮಲ ಬಿ.ಎಸ್-ರಾಜ್ಯ ಉಪಾಧ್ಯಕ್ಷರು
ಶಾಂತ-ರಾಜ್ಯ ಸಹ ಕಾರ್ಯದರ್ಶಿ
ಭಾರತಿ ಎನ್.ಪಿ-ರಾಜ್ಯ ಸಲಹೆಗಾರರು,
ಎಲ್ಲಾ ಜಿಲ್ಲೆಯ ಮತ್ತು ತಾಲ್ಲೂಕುಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ರಾಜ್ಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಂದ ಮಾಡಲಿರುವ ಧರಣಿ ಸತ್ಯಾಗ್ರಹಕ್ಕೆ ಎಲ್ಲರನ್ನು ಬೆಂಗಳೂರಿಗೆ ಕರೆತನ್ನಿ ಯಶಸ್ವಿಗೊಳಿಸಿ ಎಂದು ಉಮಾಮಣಿ- ರಾಜ್ಯ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.


City Toda News
9341997936

ಮಡಿವಾಳ ಸಮಾಜದ ಬೇಡಿಕೆಗಳು: ಸರ್ಕಾರದ ಗಮನ ಸೆಳೆಯಲು ಒಕ್ಕೂಟದ ಒತ್ತಾಯ

ಬೆಂಗಳೂರು, ಜನವರಿ 20: ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ (ರಿ) ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ಇಂದು ಪತ್ರಿಕಾ ಗೋಷ್ಠಿ ನಡೆಯಿತು. ಗೋಷ್ಠಿಯಲ್ಲಿ ಮಡಿವಾಳ ಸಮಾಜದ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು, ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಸಮಾಜದ ಮುಖ್ಯ ಬೇಡಿಕೆಗಳು:

1. ಪರಿಶಿಷ್ಟ ಜಾತಿ ಸ್ಥಾನಮಾನ:
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಪ್ರೊಫೆಸರ್ ಅನ್ನಪೂರ್ಣಮ್ಮ ಅವರ ನೇತೃತ್ವದ ಅಯೋಗ ನೀಡಿರುವ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು.


2. ಮಾಚಿದೇವ ನಿಗಮ ಮಂಡಳಿ:
ಮಾಚಿದೇವ ನಿಗಮ ಮಂಡಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಶೀಘ್ರದಲ್ಲಿ ನೇಮಿಸಬೇಕೆಂದು ಒತ್ತಾಯಿಸಲಾಗಿದೆ.


3. ಜನಗಣತಿ ದೋಷ ಪರಿಹಾರ:
ಮಡಿವಾಳ ಸಮಾಜವನ್ನು ಸರಿಯಾಗಿ ಗುರುತಿಸಲಾಗದೆ ಇದೆ ಎಂಬ ಆರೋಪವನ್ನು ಒಕ್ಕೂಟ ಹೊರ ಹಾಕಿದೆ. ತಮ್ಮ ಸ್ವಂತ ಸರ್ವೇ ಪ್ರಕಾರ, ರಾಜ್ಯದಲ್ಲಿ 17 ಲಕ್ಷಕ್ಕಿಂತ ಹೆಚ್ಚು ಮಡಿವಾಳ ಸಮುದಾಯದ ಜನರಿದ್ದಾರೆ. ಆದುದರಿಂದ, ಸಮಾಜದ ಜನಗಣತಿಯನ್ನು ಪುನರಾವೃತ್ತಿ ಮಾಡಬೇಕೆಂದು ಒತ್ತಿಹೇಳಲಾಗಿದೆ.


4. ಮಾಚಿದೇವ ಜಯಂತಿ ಆಚರಣೆ:
ಮಾಚಿದೇವ ಜಯಂತಿಯನ್ನು ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಮತ್ತು ಕಂದಾಯ ಇಲಾಖೆಯ ಎಲ್ಲ ಕಚೇರಿಗಳಲ್ಲಿ ಅಧಿಕೃತವಾಗಿ ಆಚರಿಸಲು ಸರ್ಕಾರ ಆದೇಶ ನೀಡಬೇಕು.


ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷ ಡಾ. ಕಟೀಲು ಸಂಜೀವ ಮಡಿವಾಳ ಅವರೊಂದಿಗೆ, ಕಾರ್ಯಾಧ್ಯಕ್ಷ ಅಶೋಕ್ ಹರಪನಹಳ್ಳಿ, ಕೋಶಾಧಿಕಾರಿ ರಂಗಸ್ವಾಮಿ ಅರಸಿಕೆರೆ, ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್, ಕಾರ್ಯದರ್ಶಿ H.D ಪಾಲಾಕ್ಷ ತಾತಗುಣಿ, ಮತ್ತು ಸಂಘಟನಾ ಕಾರ್ಯದರ್ಶಿ ಗಂಗಯ್ಯ ಮಡಿವಾಳ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸಮಾಜದ ಅಭಿವೃದ್ಧಿಗೆ ಒಕ್ಕೂಟದ ಕಾಳಜಿ:
ಡಾ. ಕಟೀಲು ಸಂಜೀವ ಮಡಿವಾಳ ಅವರು, “ಮಡಿವಾಳ ಸಮಾಜದ ಹಕ್ಕುಗಳಿಗಾಗಿ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಬೇಡಿಕೆಗಳನ್ನು ನಿರ್ಲಕ್ಷಿಸಿದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು,” ಎಂದು ಎಚ್ಚರಿಕೆ ನೀಡಿದರು.

ಸಮಾಜದ ಅಭಿವೃದ್ಧಿ ಮತ್ತು ಹಕ್ಕುಗಳ ಸುಧಾರಣೆಗಾಗಿ ಸರ್ಕಾರವೇ ಮುಂದಾಗಬೇಕೆಂಬ ಒಕ್ಕೂಟದ ಈ ಹೋರಾಟವು ಜನಮನ ಸೆಳೆಯುತ್ತಿದೆ.

City Today News 9341997936

ಇಂಧನ ಇಲಾಖೆಯಲ್ಲಿ ಪ್ರಾಣಾಪಾಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸೇವಾ ಭದ್ರತೆಗೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ರಾಜ್ಯದಲ್ಲಿರುವ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಿ ಹೊರ ಗುತ್ತಿಗೆ ನೌಕರರು ತಮ್ಮ ಕುಟುಂಬದೊಂದಿಗೆ ಬೃಹತ್ ಪ್ರತಿಭಟನೆ.

ಈಗಾಗಲೇ 2023 ಆಗಸ್ಟ್ ತಿಂಗಳಿನಲ್ಲಿ ಸತತ ಐದು ದಿನಗಳ ಕಾಲ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಿ ಸರ್ಕಾರದ ಗಮನಸೆಳೆದು ಮಾನ್ಯ ಇಂಧನ ಸಚಿವರಿಗೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಿದ್ದೆವು. ನಮ್ಮ ಮನವಿಗೆ ಮಾನ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಹಂತ ಹಂತವಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಹೇಳಿ ನಮ್ಮ ಹೋರಾಟವನ್ನು ಹಿಂಪಡೆಯಲು ಮನವೊಲಿಸಿದ್ದರು. ಅದರಂತೆ ನಾವು ಒಂದು ವರ್ಷ ನಾಲ್ಕು ತಿಂಗಳು ಕಾಲ ಕಾಯ್ದರೂ ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸದ ಸರ್ಕಾರ ಮತ್ತು ಇಂಧನ ಇಲಾಖೆಯ ವಿರುದ್ಧ ಪ್ರಾಣಪಾಯದಲ್ಲಿ ಕೆಲಸ ಮಾಡುತ್ತಿರುವ ಸ್ಟೇಷನ್ ಅಪರೇಟರ್ಸ್, ಸ್ಟೇಷನ್ ಹೆಲ್ವರ್ಸ್‌, ಗ್ಯಾಂಗ್ ಮ್ಯಾನ್, ಮೀಟರ್ ರೀಡರ್ಸ್ ಮತ್ತು ಚಾಲಕರು ಹಾಗು ಮತ್ತಿತರರ ಹೊರ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಿ ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದಿನಾಂಕ: 28/01/2025 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ಮತ್ತು ಎಸ್ಕಾಂ ಗುತ್ತಿಗೆ ನೌಕರ ಹಿತರಕ್ಷಣಾ ವೇದಿಕೆ ಹಾಗು ಕೆಪಿಟಿಸಿಎಲ್ ಮತ್ತು ಎಸ್ಕಾಂ ಹೊರಗುತ್ತಿಗೆ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾ ಪದಾಧಿಕಾರಿಗಳು ಸಭೆಯಲ್ಲಿ ನಿರ್ಣಯ ಕೈಗೊಂಡಿರುತ್ತೇವೆ ಈ ಪ್ರತಿಭಟನೆಗೆ ವಿವಿಜಿ ಮಾಡಿಕೊಡದೆ ಸರ್ಕಾರ ಮತ್ತು ಇಂದನ ಇಲಾಖೆ ಇದೇ ತಿಂಗಳು 27 ರ ಒಳಗೆ  ಹಾಕಿರುವ ಹೊರ ಗುತ್ತಿಗೆ ನೌಕರರನ್ನು ಮರು ನೇಮಕ ಮಾಡಬೇಕು ಎಂದು ತಮ್ಮ More ಮಾಧ್ಯಮಗಳ ಮುಖೇನವಾಗಿ ಸರ್ಕಾರವನ್ನು ವಿನಂತಿಸುತ್ತೇವೆ. ಒಂದು ವೇಳೆ ಗಡುವು ನೀಡಿರುವ ದಿನಾಂಕದ ಒಳಗೆ ಸರ್ಕಾರ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಪ್ರತಿಭಟನೆಗೆ ನಿಗದಿ ಮಾಡಿರುವ ದಿನಾಂಕದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನೌಕರರು ರಾಜ್ಯದ ಎಲ್ಲಾ ವಿಧ್ಯುತ್ ಉಪ ಕೇಂದ್ರಗಳನ್ನು ಸ್ಥಗಿತಗೊಳಿಸಿ ತಮ್ಮ ಕುಟುಂಬ ಸಮೇತವಾಗಿ ಪ್ರತಿಭಟನೆಗೆ ಮುಂದಾಗುತ್ತೇವೆಂದು ನಿಮ್ಮ ಮಾಧ್ಯಮದ ಮೂಲಕ ಸರ್ಕಾರಕ್ಕೆ ತಿಳಿಸ ಬಯಸುತ್ತೇವೆ ಎಂದು ಕರ್ನಾಟಕ ರಾಜ್ಯ ಕೆ.ಪಿ.ಟಿ.ಸಿ.ಎಲ್. ಮತ್ತು ಎಸ್ಕಾಂಸ್ ಹೊರ ಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ (ರಿ) ವತಿಯಿಂದ ತಿಳಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ಮತ್ತು ಎಸ್ಕಾಂ ಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ ರಾಜ್ಯ ಗೌರವಾಧ್ಯಕ್ಷರಾದ ಮೇಲುಕೋಟೆ ಬೆಟ್ಟಸ್ವಾಮಿ ಗೌಡ, ರಾಜ್ಯಾಧ್ಯಕ್ಷರಾದ ಲೀಲಾಸಾಗರ್ ಎಂ ಎಸ್, ರಾಜ್ಯ ಉಪಾಧ್ಯಕ್ಷರಾದ ಪರಶುರಾಮ್ ರಾಥೋಡ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಾಗಪ್ಪ ಭಾವಿಕಟ್ಟಿ, ರಾಘವೇಂದ್ರ ಉರಣಕರ್, ಮಂಜುನಾಥ್ ಹಾದಿಮುನಿ, ಜಿನೇಂದ್ರ ಕುಮಾರ್ ಬಿ ಪಿ, ಅರ್ಜುನ್ ಗಾಣಿಗೇರ, ಮನೋಹರ್ ಸಿ ಹೆಚ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಮಲ್ಲೇಶ್ ಬಿ ಜಿ ಹಾಗು ರಾಜ್ಯ ಕಮಿಟಿ ಮತ್ತು ಜಿಲ್ಲಾ ಕಮಿಟಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

City Today News 9341997936

ಚಿಂತಾಮಣಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ;  ಆನೇಕಲ್ ಅಂಬೇಡ್ಕರ್ ಯುವಕ ಸಂಘದಿಂದ ಉಗ್ರ ಹೋರಾಟದ ಎಚ್ಚರಿಕೆ.



ಬೆಂಗಳೂರು ಜನವರಿ2,2025;  ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಟ್ಟಣದ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಸ್ಥಾಪಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಕೊಳಕು ಬಟ್ಟೆ ಹೊದಿಸಿ ಅವಮಾನ ಮಾಡಲಾಗುತ್ತಿದೆ.  ಅದನ್ನು ಹೋಗಲಾಡಿಸುವವರೆಗೂ ಉಗ್ರ ಹೋರಾಟ ನಡೆಸಲಾಗುವುದು ಎಂದು ಆನೇಕಲ್ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ ಎಚ್ಚರಿಸಿದೆ.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮರಸೂರು ಕೃಷ್ಣಪ್ಪ, ಚಿಂತಾಮಣಿ ನಗರದಲ್ಲಿ ಸ್ಥಾಪಿಸಿರುವ ಅಂಬೇಡ್ಕರ್ ಪ್ರತಿಮೆಗೆ ಅಪಮಾನದ ಹಿಂದೆ ಸಚಿವ ಸುಧಾಕರ್ ಹಾಗೂ ರೆಡ್ಡಿ ಸಮಾಜದ ಮಾನವತಾವಾದಿಗಳ ಕೈವಾಡವಿದೆ.  ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಕೆಲವು ವಂಚಕರು, ದಲಿತ ನಾಯಕರನ್ನು ಕಟ್ಟಿಕೊಂಡು ಕೊಳಕು ಬಟ್ಟೆ ಹೊದಿಸಿ ವಿರೋಧಿಸುತ್ತಿದ್ದಾರೆ.  ಇದರ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ದೂರು ಸಲ್ಲಿಸಲಾಗುವುದು.

ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರೇಣುಕಾ ಬೊಮ್ಮಸಂದ್ರ ಮಾತನಾಡಿ, ಕಳೆದ ಆಗಸ್ಟ್ ನಲ್ಲಿ ಚಿಂತಾಮಣಿ ಪಟ್ಟಣದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರತಿಮೆ ಅನಾವರಣಗೊಳಿಸಲಾಗಿತ್ತು.  ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿದ್ದರೂ ಕೆಲ ಮಾನವ ಹಕ್ಕು ಕಾರ್ಯಕರ್ತರು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಕೊಳಕು ಬಟ್ಟೆ ಸುತ್ತಿ ಅವಮಾನ ಮಾಡಿದ್ದಾರೆ.  ಸುತ್ತಿದ ಬಟ್ಟೆ ತೆಗೆಯುವವರೆಗೆ ಆನೇಕಲ್ ಅಂಬೇಡ್ಕರ್ ಯುವಕ ಸಂಘ ಬೃಹತ್ ಪ್ರತಿಭಟನೆ ನಡೆಸಲಿದೆ.

ಖಜಾಂಚಿ ಮೈಲಾರಪ್ಪ, ಮಂಜುನಾಥ್.  ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಿ.ಭೀಮ ಪುತ್ರಿ ಪವಿತ್ರ, ಮಾನೆ ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.

City Today News 9341997936