ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಏಜೆನ್ಸಿಗಳ ಮುಖಾಂತರ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಆಧಾರದ ನೌಕರಿಯಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಹಾಗೂ ಪ್ರತಿ ತಿಂಗಳು ನಿಗಧಿತ ಸಮಯಕ್ಕೆ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು.

1) ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಸದೆ ದಲಿತರ ಅಭಿವೃದ್ಧಿಗಾಗಿ ಬಳಸಬೇಕು ಹಾಗೂ ನಿರ್ಲಕ್ಷ ತೋರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಈಗಾಗಲೇ ಅನ್ಯ ಯೋಜನೆಗಳಿಗೆ ಬಳಸಿರುವ ಅನುದಾನವನ್ನು ಕೂಡಲೇ ವಾಪಸ್ಸು ತರಬೇಕು.

2) ರಾಜ್ಯದಲ್ಲಿ ಈಗಾಗಲೇ ದಲಿತರ ಮೇಲಿನ ದೌರ್ಜನ್ಯ ತಡೆಯುವ ಸಲುವಾಗಿ 33 ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯಲು ಆದೇಶ ನೀಡಿರುವುದು ಸ್ವಾಗತಾರ್ಹ. ಆದರೆ, ನಿರಂತರವಾಗಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವಲ್ಲಿ ವಿಫಲವಾಗಿರುವ ಜಿಲ್ಲಾಧಿಕಾರಿಗಳು / ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕು.

3) ತೋಟಿ/ತಳವಾರು ಜಮೀನು ಕುಲವಾಡಿ ಜಮೀನು ರದ್ದಿಯಾತಿ ಕಾಯ್ದೆ 1961 (Village Officer Abolition Act 1961) ಅಡಿ ಭೂಮಿ ಮಂಜೂರಾತಿದಾರರನ್ನು ಪಿಟಿಸಿಎಲ್ ಕಾಯ್ದೆ ಸೆಕ್ಷನ್ 3(1) (ಬಿ) ವ್ಯಾಪ್ತಿಗೆ ಸೇರಿಸಿ ಸದರಿ ಪಿಟಿಸಿಎಲ್ ಕಾಯ್ದೆಗೆ ರಾಜ್ಯ ಸರ್ಕಾರವು ತಿದ್ದುಪಡಿ ತಂದು ದಲಿತರ ಜಮೀನು ಉಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.

4) ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೋಟೆಕೆರೆ ಮಧ್ಯ ಭಾಗದಲ್ಲಿ 100 ಅಡಿಯ ಭಗವಾನ್ ಬುದ್ಧರ ಪ್ರತಿಮೆಯನ್ನು ಕೂಡಲೇ ಅನಾವರಣಗೊಳಿಸಬೇಕು ಹಾಗೂ ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದಿಂದ ಮಸೂದೆ ತೋಟಕ್ಕೆ ರಸ್ತೆ ಅನುಕೂಲ ಮಾಡಿಕೊಡಬೇಕು.

5) ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಏಜೆನ್ಸಿಗಳ ಮುಖಾಂತರ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಆಧಾರದ ನೌಕರಿಯಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಹಾಗೂ ಪ್ರತಿ ತಿಂಗಳು ನಿಗಧಿತ ಸಮಯಕ್ಕೆ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು.

6) ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಪ್ರಕಾರ ಸುಪ್ರೀಂ ಕೋರ್ಟ್ ತೀರ್ಪಿನಂತೆ ಕೂಡಲೇ ಒಳ ಮೀಸಲಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. 1

7) ಬಾಗಲಕೋಟೆ ನಗರದ ಸರ್ವೆ ನಂ.131 ರ 4ಎ-27 ಗುಂಟೆ ಸರ್ಕಾರಿ ಜಾಗದಲ್ಲಿ ಭಗವಾನ್ ಬುದ್ಧರ ವಿಹಾರ ನಿರ್ಮಿಸಿದ್ದು ಸದರಿ ಜಮೀನನ್ನು ಬುದ್ಧವಿಹಾರ ನಿರ್ಮಾಣ ಸಮಿತಿಗೆ ಮಂಜೂರು ಮಾಡಬೇಕು ಹಾಗೂ ಭಗವಾನ್ ಬುದ್ಧರ ಜಯಂತಿಗೆ ಸರ್ಕಾರಿ ರಜೆ ಘೋಷನೆ ಮಾಡಬೇಕು.

8) ಪ್ರತಿ ತಿಂಗಳ 2ನೇ ಭಾನುವಾರ ರಾಜ್ಯದ ಎಲ್ಲಾ ಪೊಲೀಸ ಠಾಣೆಗಳಲ್ಲಿಯೂ “ದಲಿತ ಸಭೆ” ನಡೆಸಲು ಆದೇಶವಿದ್ದು, ಇತ್ತೀಚೆಗೆ ಎಲ್ಲಿಯೂ ಸರಿಯಾಗಿ ದಲಿತರ ಕುಂದು ಕೊರತೆ ಸಭೆಗಳಾಗುತ್ತಿಲ್ಲ, ಆದ್ದರಿಂದ ನಿರಂತರವಾಗಿ ದಲಿತ ಸಭೆ ನಡೆಸಲು ನಿರಾಶಕ್ತಿ ತೋರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

9) ಕೋಲಾರ ಜಿಲ್ಲೆ ಕೋಲಾರ ತಾಲ್ಲೂಕು, ಸುಗಟೂರು ಹೋಬಳಿ ನಾಗನಾಳ ಗ್ರಾಮದ ಗೋಮಾಳ ಸರ್ವೆ ನಂ.42 ರಲ್ಲಿ ಸೋಮಶೇಖರ್ ಬಿನ್ ಲೇಟ್ ನಾರಾಯಣಗೌಡ ರವರಿಗೆ ಮಂಜೂರಾಗಿರುವ ಕ್ವಾರಿ ಮತ್ತು ಜೆಲ್ಲಿ ಕ್ರಷರ್ ಹಾಗೂ ವೇಮಗಲ್ ಹೋಬಳಿ, ಮೇಡಿಹಾಳ ಗ್ರಾಮದ ಗೋಮಾಳ ಸರ್ವೆ ನಂ.24 ರಲ್ಲಿ ಹಾಗೂ ದನಮಟ್ಟಹಳ್ಳಿ ಗೋಮಾಳ ಸರ್ವೆ ನಂ.53 ರಲ್ಲಿ ಸೊಣ್ಣೆಗೌಡ ಬಿನ್ ಚೌಡೇಗೌಡ ರವರಿಗೆ ಮಂಜೂರಾಗಿರುವ ಕ್ವಾರಿ ಮತ್ತು ಜೆಲ್ಲಿಕ್ರಷರ್ ಪರವಾನಗಿಗಳನ್ನು ಗ್ರಾಮಸ್ಥರ/ರೈತರ ಹಿತ ದೃಷ್ಠಿಯಿಂದ ಸರ್ಕಾರ ಕೂಡಲೇ ರದ್ದುಗೊಳಿಸಬೇಕು ಮತ್ತು ಗಣಿದಣಿಗಳ ಜೊತೆ ಶಾಮೀಲಾಗಿ ಕರ್ತವ್ಯ ಲೋಪವೆಸಗಿ ರೈತರ ಜೀವನದ ಜೊತೆ ಚೆಲ್ಲಾಟವಾಡುವ ಸಂಬಂಧಪಟ್ಟಿ ಅಧಿಕಾರಿಗಳ ಮೇಲೆಸೂಕ್ತ ಕಾನೂನು ಕ್ರಮ ಜರುಗಿಸಬೇಕು.

10) ಉಚಿತ ಮತ್ತು ಕಡ್ಡಾಯ ಶಿಕ್ಷಣ (ಆರ್‌ಟಿಇ) 2006 ರಲ್ಲಿ ಜಾರಿಗೆ ಬಂದಿರುತ್ತದೆ. ಆದರೆ ಬಲಾಡ್ಯರ ಒತ್ತಾಯಕ್ಕೆ ಮಣಿದು ಸರ್ಕಾರಿ ಶಾಲೆಗಳ ಸಮೀಪ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಆರ್.ಟಿ.ಇ ಪ್ರವೇಶಕ್ಕೆ ಅವಕಾಶವಿಲ್ಲದೆ ಇರುವುದರಿಂದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಪಿ.ಯು.ಸಿ ವರೆಗೆ ವಿಸ್ತರಿಸಬೇಕು.

11) ರಾಯಚೂರು ಜಿಲ್ಲೆಗೆ ಎಐಎಂಎಸ್ ಕೂಡಲೇ ಜಾರಿಗೊಳಿಸಬೇಕು.

12) ರಾಜ್ಯದ ವಿವಿಧ ನಿಗಮಗಳಲ್ಲಿ ಸಾಲ ಪಡೆಯಬೇಕಾದರೆ ಸ್ಥಳೀಯ ಶಾಸಕರ ಶಿಫಾರಸ್ಸು ಪತ್ರ ಬೇಕಾಗಿರುವುದರಿಂದ ನಿಜವಾದ ಬಡವರಿಗೆ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ಕೂಡಲೇ ಸರ್ಕಾರ ಶಾಸಕರ ಶಿಫಾರಸ್ಸು ಪತ್ರವನ್ನು ರದ್ದುಪಡಿಸಬೇಕು.

13) ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ದಲಿತರಿಗೆ ಮೀಸಲಿಟ್ಟಿರುವ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಕೂಡಲೇ ದಲಿತರಿಗೆ ಮೀಸಲಿಟ್ಟಿರುವ 24/% ಹಣವನ್ನು ದಲಿತರ ಅಭಿವೃದ್ಧಿಗೆ ಬಳಸಬೇಕು ಹಾಗೂ ದಲಿತರಿಗೆ ಸ್ಮಶಾನ ಭೂಮಿಯನ್ನು ಖರೀದಿಸಿ ಅದರ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಬೇಕು.

14) ಪಂಚಾಯ್ತಿಗಳಲ್ಲಿ ಕೆಲಸ ಮಾಡುತ್ತಿರುವ ಪಿಡಿಒ ಗಳು ಒಂದೇ ಪಂಚಾಯ್ತಿಗಳಲ್ಲಿ 10-12 ವರ್ಷಗಳ ಕಾಲ ನಿರಂತರವಾಗಿದ್ದು ಭ್ರಷ್ಟಾಚಾರಲ್ಲಿ ತೊಡಗಿದ್ದಾರೆ. ದಲಿತರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡದೆ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಆದ್ದರಿಂದ ಇವರುಗಳನ್ನು ಕೂಡಲೇ ಕಾಲಕಾಲಕ್ಕೆ ವರ್ಗಾವಣೆ ಮಾಡಬೇಕು.

15) ಪಂಚಾಯ್ತಿ ಅಧ್ಯಕ್ಷ/ಉಪಾಧ್ಯಕ್ಷರ ಅವಧಿ 2 ವರ್ಷಗಳು ಎಂದು ಸರ್ಕಾರದ ಆದೇಶವಿದ್ದರೂ ಸಹ 6-8 ತಿಂಗಳಿಗೊಮ್ಮೆ ಅಧ್ಯಕ್ಷ/ಉಪಾಧ್ಯಕ್ಷರ ಬದಲಾವಣೆ ಮಾಡುತ್ತಿರುತ್ತಾರೆ. ಇದರಿಂದ ಆಡಳಿತ ವ್ಯವಸ್ಥೆ ಕುಸಿದಿದೆ. ಇನ್ನು ಮುಂದೆ ಸರ್ಕಾರ ಕಟ್ಟುನಿಟ್ಟಾಗಿ ಸರ್ಕಾರದ ನಿಯಮ ಪಾಲಿಸಲು ಆದೇಶಿಸಬೇಕು.

16) ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗಳಲ್ಲಿ ದಲಿತರ ಅಭಿವೃದ್ಧಿ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸದಿರುವುದನ್ನು ಕೂಡಲೇ ನ್ಯಾಯಾಂಗ ತನಿಖಗೆ ಒಳಪಡಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು.

17) ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿನ ಭೂ ಒಡೆತನ ಯೋಜನೆಯ ಹಣವನ್ನು ಕೂಡಲೇ ಮಂಜೂರು ಮಾಡಬೇಕು ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ರಾಜ್ಯ ಸರ್ಕಾರವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಭೀಮವಾದ),ರಾಜ್ಯ ಸಮಿತಿ, ಬೆಂಗಳೂರು ವತಿಯಿಂದ ಆಗ್ರಹಿಸಲಾಯಿತು.

City Today News 9341997936

ಸರ್ಕಾರವು ನಿಗಧಿಪಡಿಸಿರುವ ಕಾಲಾವಕಾಶದಂತೆ ಒಳಮೀಸಲಾತಿ ವರ್ಗೀಕರಣವನ್ನು ಜಾರಿಗೊಳಿಸದೆ ಇದ್ದರೆ ಜನವರಿ ತಿಂಗಳಲ್ಲಿ ರಾಜ್ಯಾದ್ಯಂತ ಜಾಗೃತಿ ಸಭೆಗಳನ್ನು ನಡೆಸಿ, ಜನಾಂದೋಲದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ

ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ದಲಿತ ಮತ್ತು ಮಾದಿಗ ಸಂಘಟನೆಗಳು ಕಳೆದ 30 ವರ್ಷಗಳಿಂದ ಬೀದಿಗಿಳಿದು ಹೋರಾಡಿದ ಪರಿಣಾಮದಿಂದಲೇ ಸಾಮಾಜಿಕ ನ್ಯಾಯವಾದ ಒಳ ಮೀಸಲಾತಿ ವರ್ಗೀಕರಣವು ದಿಲ್ಲಿಯಿಂದ ರಾಜ್ಯ ರಾಜ್ಯಧಾನಿಯವರೆಗೆ ಗೆಲುವು ಕಂಡಿದೆ. 2022ರ ಫ್ರೀಡಂ ಪಾರ್ಕ್ ಐತಿಹಾಸಿಕ ಹೋರಾಟದಿಂದ ಹಂತ ಹಂತವಾಗಿ ಒಳಮೀಸಲಾತಿ ಹೋರಾಟವು ಯಶಸ್ವಿಯಾಗಿ ಮುಂದೆ ಸಾಗಿದೆ.

ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗವು ಪರಿಶಿಷ್ಟ ಜಾತಿಗಳ ಸಂವಿಧಾನಿಕ ಸೌಲಭ್ಯಗಳ ಹಂಚಿಕೆಯಲ್ಲಿ ಉಂಟಾದ ತಾರತಮ್ಯಗಳ ನಿವಾರಣಾ ಸಮಿತಿಯು ಭಾರತದಲ್ಲಿ ಮೊದಲ ಬಾರಿಗೆ ಮನೆಮನೆಯ ಸಮೀಕ್ಷೆಯನ್ನು ನಡೆಸಿ ಅಂಕಿ ಅಂಶಗಳನ್ನು ವೈಜ್ಞಾನಿಕವಾಗಿ ಕ್ರೋಢೀಕರಿಸಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲು ದಿನಾಂಕ, 06.06.2012 ರಂದು ಕರ್ನಾಟಕ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇಲ್ಲಿಯವರೆಗೂ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷಗಳೂ ಒಳಮೀಸಲಾತಿ ಸಮಸ್ಯೆಯನ್ನು ಒಂದು ಸಾಮಾಜಿಕ ನ್ಯಾಯವೆಂದು ಪರಿಗಣಿಸದೆ ರಾಜಕೀಯ ದಾಳವಾಗಿ ಉಪಯೋಗಿಸಿರುವುದು ದುರಂತದ ವಿಷಯ. ಇದು ಖಂಡನೀಯ.

ಮಾನ್ಯ ಸುಪ್ರೀಂ ಕೋರ್ಟ್ ದಿನಾಂಕ 1.8.2024ರಂದು ಒಳ ಮೀಸಲಾತಿ ನೀಡುವ ಅಧಿಕಾರವು ರಾಜ್ಯ ಸರಕಾರಕ್ಕೆ ಇದೆ ಎಂದು ತೀರ್ಪು ನೀಡಿ ಮೂರು ತಿಂಗಳು ಕಳೆದಿದೆ. ಕರ್ನಾಟಕ ರಾಜ್ಯ ಸರಕಾರದಲ್ಲಿ ಸಾಕಷ್ಟು ದತ್ತಾಂಶಗಳು ಲಭ್ಯವಿದ್ದರೂ ಶೀಘ್ರವೇ ಕ್ರಮ ಜರುಗಿಸದೆ ಅನಾವಶ್ಯಕವಾಗಿ ಏಕಸದಸ್ಯ ಆಯೋಗದ ಮೊರೆಹೋಗಿರುವುದು ನಿಧಾನ ದ್ರೋಹವಾಗಿದೆ ದಿನಾಂಕ 28.10.2024 ರಂದು ರಾಜ್ಯ ಸರ್ಕಾರವು ನಚಿವ ಸಂಪುಟದಲ್ಲಿ ಒಳ ಮೀಸಲಾತಿ ವರ್ಗೀಕರಣವನ್ನು ಒಪ್ಪಿಕೊಂಡು ಜಾರಿಗಾಗಿ ಎರಡು ತಿಂಗಳ ಗಡುವು ವಿಧಿಸಿದೆ. ನ್ಯಾಯಮೂರ್ತಿ ನಾಗಮೂಹನದಾಸ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಅದರ ಅವಧಿಯು ಡಿಸೆಂಬರ್ 28 12:2024ಕ್ಕೆ ಎರಡು ತಿಂಗಳು ಕಳೆಯುತ್ತದೆ, ಇದುವರೆಗೂ ಆಯೋಗಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಸರ್ಕಾರವು ನಿರ್ಲಕ್ಷ್ಯದಿಂದ ವಿಳಂಬ ಧೋರಣೆಯನ್ನು ಮುಂದುವರಿಸಿರುವುದರಿಂದ ಆಯೋಗದ ಅಧ್ಯಕ್ಷರು ಕಾರ್ಯಪ್ರೌವೃತ್ತರಾಗಲು ಸಾಧ್ಯವಾಗುತ್ತಿಲ್ಲ. ಇದು ಖಂಡನೀಯ.

ಒಂದು ರೀತಿಯಲ್ಲಿ ಎಕಸದಸ್ಯ ಆಯೋಗದ ನೇಮಕವು ಅನಾವಶ್ಯಕವಾಗಿತ್ತು. ಈಗಾಗಲೇ ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ನ್ಯಾಯಮೂರ್ತಿ ಸದಾಶಿವರವರ ಆಯೋಗದ ವರದಿಯ ಸಮೀಕ್ಷೆಯ ಅಂಶಗಳನ್ನು ಪರಿಗಣಿಸಿ ಆಯೋಗದ ಶಿಫಾರಸ್ಸುಗಳನ್ನು ಮಾತ್ರ ರದ್ದುಪಡಿಸಿ ಶೇ. 17 ರ ಹೆಚ್ಚುವರಿ ಅನುವಾತದಲ್ಲಿ ಒಳಮೀಸಲಾತಿ ವರ್ಗೀಕರಣವನ್ನು ಮಾದಿಗ ಸಂಬಂಧಿತ ಉಪಜಾತಿಗಳಿಗೆ ಶೇ 6 ರಂತೆ, ಹೊಲೆಯ ಸಂಬಂಧಿತ ಉಪಜಾತಿಗಳಿಗೆ ಶೇ.5.5, ಬೋವಿ ಲಂಬಾಣಿ ಕೊರಮ ಕೊರಚ ಸಮುದಾಯಗಳಿಗೆ ಶೇ.4.5 ರಂತೆ, ಅಲೆಮಾರಿ ಸಮುದಾಯಗಳಿಗೆ ಶೇ 1 ರಂತೆ ಶಿಫಾರಸ್ಸು ಮಾಡಿತು. ಬಿಜೆಪಿ ಸಚಿವ ಸಂಪುಟವು, ಅನುಮೋದಿಸಿ ಅದನ್ನು ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳೂ ಸಹ ಒಪ್ಪಿ ಒಳಮೀಸಲಾತಿ ವರ್ಗೀಕರಿಸಲು ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಲಾಗಿತ್ತು ಒಳಮೀಸಲಾತಿ ವರ್ಗೀಕರಣಕ್ಕೆ ಬೇಕಾದಂತಹ 2011ರ ಜನಸಂಖ್ಯಾ ಜನಗಣತ, ಸದಾಶಿವರ ಆಯೋಗದ ವರದಿ, ಕಾಂತರಾಜ್ ಆಯೋಗದ ವರದಿ, ನಾಗಮೋಹನ್ ದಾಸ್ ಆಯೋಗದ ವರದಿ ಸೇರಿದಂತೆ ಲಭ್ಯವಿರುವ ಎಲ್ಲಾ ದತ್ತಾಂಶಗಳ ಅಂಶಗಳನ್ನು ಒಪ್ಪಿಕೊಂಡಿದ್ದರೆ ಸಾಕಾಗಿತ್ತು. ಆದರೆ ಸಾಮಾಜಿಕ ನ್ಯಾಯವನ್ನು ಕೊಡಲು ರಾಜಕೀಯ ಇಚ್ಛಾಶಕ್ತಿ ಇಲ್ಲದ ಕಾರಣ ಉದ್ದೇಶಪೂರ್ವಕವಾಗಿ ನಾಗಮೋಹನ್ ದಾಸ್ ರವರ ಆಯೋಗವನ್ನು ರಚಿಸಲಾಗಿದೆ.

ಕರ್ನಾಟಕ ರಾಜ್ಯ ಸಂಪುಟವು 26-10-2024 ರಂದು ಸರ್ವೋಚ್ಚನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಎಸ್ಸಿ.ಎಸ್ಪಿ ಸಮುದಾಯಗಳಿಗೆ ಒಳಮೀಸಲಾತಿ (Internal Reservation) ಕೊಡಲು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು, ಜೊತೆಯಲ್ಲಿಯೇ ಸರ್ಕಾರವು ಒಳಮೀಸಲು ವರ್ಗೀಕರಣ ಜಾರಿಯಾಗುವವರೆಗೂ ಹೊಸ: ನೇಮಕಾತಿಯನ್ನು ತಡೆಯುವಂತೆಯೂ ಕೂಡ ಆದೇಶಿಸಿದೆ. ಆದರೂ ನೇಮಕಾತಿಗಳೂ ನಡೆಯುತ್ತಲೇ ಇದೆ. ಒಂದು ಕಡೆ ಈ ಹಿಂದೆ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳಲ್ಲಿರುವ ನೇಮಕಾತಿ ಸಂಖ್ಯೆಗಳನ್ನು ಹೆಚ್ಚಳ ಮಾಡಲು ಪ್ರಯತ್ನಿಸುತ್ತಿರುವುದು, ಇನ್ನೂ ಕೆಲವು ನೇಮಕಾತಿಯ ಅಧಿಸೂಚನೆಗಳಿಗೆ ಹಿಂದಿನ ದಿನಾಂಕಗಳನ್ನು ಹಾಕಿ ಪ್ರಕಟಿಸುತ್ತಿರುವುದು ಹಾಗೂ ಡಾ/ ಜಿ ಪರಮೇಶ್ವರ್ ರವರ ಗೃಹ ಮತ್ತು ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ವಿಶೇಷ ಅನುಮತಿ ನೀಡಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಯಾರಿ ಮಾಡಿರುವುದು ಎಷ್ಟು ಸರಿ?

ಸಚಿವ ಸಂಪುಟದ ನಿರ್ಣಯವನ್ನು ಸಮಾಜ ಕಲ್ಯಾಣ ಇಲಾಖೆಯು 15 ದಿನಗಳ ನಂತರ ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣಾ (DPAR) ಇಲಾಖೆಗೆ ರವಾನಿಸಿ ನಂತರ ಇಲಾಖೆಯು ಮೂರು ವಾರಗಳ ತಡಮಾಡಿ ದಿನಾಂಕ 25.11.2024 ರಂದು ಎಲ್ಲಾ ಇಲಾಖೆಗಳಿಗೆ ಸೂಚಿಸಿದೆ. ಈ ರೀತಿ ಪರೋಕ್ಷವಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರೈಸಿಕೊಳ್ಳಲು ಕುತಂತ್ರ ಮಾಡುತ್ತಿರುವುದನ್ನು ಖಂಡಿಸುತ್ತೇವೆ.

ಆಯೋಗಕ್ಕೆ ಸರ್ಕಾರವೇ ನಿಗಧಿಪಡಿಸಿದಂತೆ ಎರಡು ತಿಂಗಳ ಕಾಲಾವಕಾಶವು ಡಿಸೆಂಬರ್ 28.12.2024 ರಂದು ಪೂರ್ಣಗೊಳ್ಳಲಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಅಯೋಗಕ್ಕೆ ಕಛೇರಿ ಮತ್ತು ಅಗತ್ಯ ಸೌಲಭ್ಯಗಳನ್ನೂ ಕೂಡ ಇಲ್ಲಿಯವರೆಗೂ ಒದಗಿಸಿಲ್ಲ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದು ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಇದನ್ನು ಒಕ್ಕೂಟವು ಖಂಡಿಸುತ್ತಾ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ.

ಸರ್ಕಾರವು ನಿಗಧಿಪಡಿಸಿರುವ ಕಾಲಾವಕಾಶದಂತೆ ಒಳಮೀಸಲಾತಿ ವರ್ಗೀಕರಣವನ್ನು ಜಾರಿಗೊಳಿಸದೆ ಇದ್ದರೆ ಜನವರಿ ತಿಂಗಳಲ್ಲಿ ರಾಜ್ಯಾದ್ಯಂತ ಜಾಗೃತಿ ಸಭೆಗಳನ್ನು ನಡೆಸಿ, ಜನಾಂದೋಲದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸುತ್ತೇವೆ ಎಂದು ಮಾರಸಂದ್ರ ಮುನಿಯಪ್ಪ, ರಾಜ್ಯಾಧ್ಯಕ್ಷರು, ಅಖಿಲ ಭಾರತ ಬಹುಜನ ಸಮಾಜ ಪಕ್ಷ. ಡಾ.ಎನ್.ಮೂರ್ತಿ, ರಾಜ್ಯಾಧ್ಯಕ್ಷರು, ಡಿಎಸ್ಎಸ್.ಗುರುಮೂರ್ತಿ,ರಾಜ್ಯಾಧ್ಯಕ್ಷರು, ಡಿಎಸ್ಎಸ್ (ಪ್ರೊ. ಬಿ. ಕೃಷ್ಣಪ್ಪ).ಕೇಶವ ಮೂರ್ತಿ,ರಾಜ್ಯ ಕಾರ್ಯಾಧ್ಯಕ್ಷರು. ಹಾಗೂ ಡಾ.ಭೀಮರಾಜು,ರಾಜ್ಯಾಧ್ಯಕ್ಷರು, ವಿಶ್ವ ಆದಿ ಜಾಂಬವ ಮಹಾಸಭಾ ರವರ ವತಿಯಿಂದ ಜಂಟಿಯಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಎಚ್ಚರಿಕೆ ನೀಡಿದರು.

City Today News 9341997936

ಭೂಗಳ್ಳರಿಂದ ನನಗೆ ಜೀವ ಭಯವಿದ್ದು ನ್ಯಾಯಾಲಯಕ್ಕೆ ಹಾಜರಾಗುವ ಸಮಯದಲ್ಲಿ ನನ್ನ ಮೇಲೆ ಮಾರಣಾಂತಿಕ ಹಲ್ಲೆಯಾಗುವ ಸಂಭವವಿದೆ – ಕೆ. ಮುನೇಗೌಡ ಪ್ರಗತಿಪರ ರೈತರು

ಬೆಂಗಳೂರು ಉತ್ತರ ತಾಲ್ಲೂಕು, ನಾಗಶೆಟ್ಟಿಹಳ್ಳಿ ಮತ್ತು ಭೂಪಸಂದ್ರ ಗ್ರಾಮದ ಸಾವಿರಾರು ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಭೂಗಳ್ಳರು, ಕೊಲೆಗಡುಕರು. ಅಂಡರ್‌ವರ್ಲ್ಡ್ ಡಾನ್‌ಗಳು, ರೌಡಿಗಳು, ಕಂದಾಯ ಅಧಿಕಾರಿಗಳು ಮತ್ತು ಇತರರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಒತ್ತುವರಿ ಮಾಡಿಕೊಂಡಿರುತ್ತಾರೆ. ಈ ಪ್ರಕರಣದ ಬಗ್ಗೆ ಅಡಗೂರು ಎಚ್. ವಿಶ್ವನಾಥ್ ರವರು ಗೃಹಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ, ಮುಖ್ಯ ಕಾರ್ಯದರ್ಶಿಯವರಿಗೆ. ಜನರಲ್ ಅಡ್ವಕೇಟ್ ರವರಿಗೆ, ಕಾನೂನು ಅಪರ ಕಾರ್ಯದರ್ಶಿಗಳಿಗೆ, ಪ್ರಧಾನ ಕಾರ್ಯದರ್ಶಿಗಳಿಗೆ, ರಾಜ್ಯಪಾಲರಿಗೆ ದೂರು ನೀಡಿ, ಈ ಭೂಗಳ್ಳರಿಂದ 72 ವರ್ಷ ವಯಸ್ಸಾದ ಪ್ರಗತಿಪರ ರೈತನಾದ ನನಗೆ ಜೀವ ಭಯವಿರುವುದರಿಂದ ಪೊಲೀಸ್ ರಕ್ಷಣೆ ಕೊಡಬೇಕೆಂದು ಕೋರಿಕೊಂಡಿರುತ್ತಾರೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಸುಳ್ಳು ದೂರು ನೀಡಿ ಸಿ.ಸಿ. ನಂಬರ್ 26843/2016, ಜೈಲಿಗೆ ಕಳುಹಿಸಿ ಜೈಲಿನಲ್ಲಿ ನನ್ನ ಕೊಲೆ ಯತ್ನ ನಡೆದಿರುತ್ತದೆ ಎಂದು ಹೆಚ್. ವಿಶ್ವನಾಥ್ ರವರು ದೂರು ನೀಡಿರುತ್ತಾರೆ. ಇವರುಗಳು ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿರುತ್ತಾರೆ. ತಾವುಗಳು ನಿಮ್ಮ ಹಿಂಬರಹದಲ್ಲಿ ದಿನಾಂಕ 07.12.2024 ರಂದು ತಲೆ ಮರೆಸಿಕೊಂಡಿರುವವರನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ ಎಂದು  ತಿಳಿಸಿರುತ್ತಾರೆ.

ಮೇಲ್ಕಾಣಿಸಿದ ಭೂಗಳ್ಳರಿಂದ ನನಗೆ ಜೀವ ಭಯವಿದ್ದು ನ್ಯಾಯಾಲಯಕ್ಕೆ ಹಾಜರಾಗುವ ಸಮಯದಲ್ಲಿ ನನ್ನ ಮೇಲೆ ಮಾರಣಾಂತಿಕ ಹಲ್ಲೆಯಾಗುವ ಸಂಭವವಿರುವುದರಿಂದ ನನಗೆ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ಕೋರಿಕೊಳ್ಳುತ್ತೇನೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಕೆ. ಮುನೇಗೌಡ ಪ್ರಗತಿಪರ ರೈತರು ತಿಳಿಸಿದರು.

City Today News 9341997936

ಸಂವಿಧಾನ ಜಾಗೃತ ಸಮಾವೇಶ : ಸ್ಥಳ: ಫ್ರೀಡಂ ಪಾರ್ಕ್ : ಪರಿಶಿಷ್ಟ ಜಾತಿ/ವರ್ಗದವರಿಗೆ ಸರ್ಕಾರ ವಿವಿಧ ಯೋಜನೆಗಳಲ್ಲಿ ಮಂಜೂರು ಮಾಡಿರುವ ಜಮೀನುಗಳು ಹಾಗೂ ಕೆಲ ಜಮೀನುಗಳ (ತೋಟಿ ಇನಾಂ, ನೀರಗಂಟಿ, ಜಿಎಂಎಫ್ ಮುಂತಾದ) ಜಮೀನುಗಳನ್ನು ಒಳಗೊಂಡಂತೆ, 1978ರ ಪಿಟಿಸಿಎಲ್ ಕಾಯಿದೆಗೆ ಸಮಗ್ರ ತಿದ್ದುಪಡಿ ಮಾಡುವಂತೆ ಒತ್ತಾಯಿಸುತ್ತದೆ.

ಕರ್ನಾಟಕ ಆದಿಜಾಂಬವ ಸಂಘಟನೆಗಳ ಒಕ್ಕೂಟವು ರಾಜ್ಯ ಮಟ್ಟದ ಸ್ವಯಂ ಸೇವಾ ಸಂಘವಾಗಿದ್ದು, ರಾಜ್ಯದಲ್ಲಿನ ಪರಿಶಿಷ್ಟ ಜಾತಿ/ವರ್ಗದವರ ಏಳಿಗೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.

ಈ ರಾಜ್ಯದಲ್ಲಿ ಅತೀ ಶೋಷಣೆಗೊಳಗಾಗಿರುವ ಅಸ್ಪಷ್ಟ ಕೋಮಿಗೆ ಸೇರಿದ, ಮಾದಿಗ, ಮೋಚಿ, ಮಾದಾರ, ಮಾಂಗ್, ಮಾತಂಗ, ಜಾಡಮಾಲಿ, ಚಮ್ಮಾರ, ಮಣೆಗಾರ, ಆದಿಶೈವ, ಆದಿಜಾಂಬವ ಮುಂತಾದ ಹೆಸರಿನಿಂದ ಕರೆಯಲ್ಪಡುವ ಆದಿಜಾಂಬವ ಜನಾಂಗವು ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ರಂಗಗಳಲ್ಲಿ ಅತೀ ಹಿಂದುಳಿದಿರುತ್ತದೆ. ಅಲ್ಲದೆ, ಈ ಸಮುದಾಯವು ಚರ್ಮೋದ್ಯೋಗ ಮತ್ತು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು ಹೀನಾಯವಾದ ಮತ್ತು ಅನೈರ್ಮಲ್ಯ ವಾತಾವರಣದಲ್ಲಿ ಜೀವಿಸುತ್ತಿದ್ದು ಇವರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗದೆ ಡಾ: ಅಂಬೇಡ್ಕ‌ರವರ ಮೀಸಲಾತಿಯ ಸವಲತ್ತಿನಿಂದ ವಂಚಿತರಾಗಿದ್ದಾರೆ.

1. ಈ ಹಿನ್ನೆಲೆಯಲ್ಲಿ ಆದಿಜಾಂಬವ ಸಂಘವು 1992ರಿಂದಲೂ ಎಲ್.ಜಿ. ಹಾವನೂರ್ ಆಯೋಗವು 1975ರಲ್ಲಿ ನೀಡಿದ್ದ ವರದಿಯನ್ವಯ ಪರಿಶಿಷ್ಟ ಜಾತಿಯ ಶೇ. 55.57ರಷ್ಟಿರುವ ಆದಿಜಾಂಬವ ಸಮುದಾಯಕ್ಕೆ ಮೀಸಲಾತಿಯಲ್ಲಿ ಜನಸಂಖ್ಯೆಗನುಗುಣವಾಗಿ, ಪ್ರತ್ಯೇಕ ಮೀಸಲಾತಿ ನೀಡಬೇಕೆಂಬ ಒತ್ತಾಯ ಮಾಡಿದ್ದು, ಭಾರತದ ಆಂದ್ರ, ಹರಿಯಾಣ, ಪಂಜಾಬ್, ತಮಿಳುನಾಡು, ಬಿಹಾರ, ಉತ್ತರಖಾಂಡ ಮುಂತಾದ ರಾಜ್ಯಗಳಲ್ಲಿಯೂ ಮೀಸಲಾತಿಯಲ್ಲಿ ವರ್ಗೀಕರಣ ಮಾಡಿದ್ದು, ಇದರನ್ವಯ ಘನ ಸುಪ್ರೀಂ ಕೋರ್ಟಿನ 7 ಜನರ ಸಾಂವಿಧಾನಿಕ ಪೀಠವು, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಮಾಡುವ ಹಕ್ಕು ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂದು 1/8/2024ರಲ್ಲಿ ತೀರ್ಪು ನೀಡಿರುತ್ತದೆ.

ಕರ್ನಾಟಕದಲ್ಲಿ, ಆದಿಜಾಂಬವ ಸಂಘ ಮತ್ತು ಇತರೆ ಮಾದಿಗ ಸಂಘಟನೆಗಳ ಹೋರಾಟದ ಫಲವಾಗಿ, ನ್ಯಾಯಮೂರ್ತಿ ಎ.ಜೆ. ಸದಾಶಿವ ಏಕ ಸದಸ್ಯ ಆಯೋಗವು 6 ವರ್ಷಗಳಿಗೂ ಅಧಿಕ ಕಾಲ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಉಪಜಾತಿಯವರ, ಔದ್ಯೋಗಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ, ಇವರ ಅಭಿವೃದ್ಧಿಯ ಬಗ್ಗೆ ಮಾಡಿದ ಅಧ್ಯಯನದ ಮೇರೆಗೆ ಇದರಲ್ಲಿ ಅಸ್ಪೃಶ್ಯ ಸಮುದಾಯದ ಬಹುಸಂಖ್ಯಾತ ಆದಿಜಾಂಬವ (ಮಾದಿಗ ಸಮ್ಮಂಧಿತ) ಕೋಮಿಗೆ ಶೇ.6, ಛಲವಾದಿ (ಹೊಲೆಯ ಸಮ್ಮಂಧಿತ) ಕೋಮಿಗೆ ಶೇ.5, ಸೃಷ್ಟ ಸಮುದಾಯಕ್ಕೆ ಸೇರಿದ ಭೋವಿ, ಲಂಬಾಣಿ ಮತ್ತು ಕೊರಮ-ಕೊರಚ ಉಪಜಾತಿಯವರಿಗೆ ಶೇ.3 ಮತ್ತು ಇತರೆ ಉಪಜಾತಿಯವರಿಗೆ ಶೇ.1ರಷ್ಟು ಒಳ ಮೀಸಲಾತಿಯನ್ನು ನೀಡಬಹುದೆಂದು ಶಿಫಾರಸ್ಸು ಮಾಡಿ ಜೂನ್ 2012ರಲ್ಲಿ ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಅಲ್ಲದೆ, 2023ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನ್ಯಾ: ನಾಗಮೋಹನದಾಸ್ ವರದಿಯನ್ವಯ ಪರಿಶಿಷ್ಟ ಜಾಳೆಯ ಮೀಸಲಾತಿಯನ್ನು ಶೇ. 2 ರಷ್ಟು ಏರಿಕೆ ಮಾಡಿದ್ದು, ಈ ಮೀಸಲಾತಿಯಲ್ಲಿ, ಆದಿಜಾಂಬವ ಸಮುದಾಯಕ್ಕೆ ಶೇ. 0.75 ರಷ್ಟು ಅಧಿಕ ಮೀಸಲಾತಿ ನೀಡಬೇಕಾಗಿದ್ದು, ಒಟ್ಟಾರೆ ಮಾದಿಗೆ ಮತ್ತು ಮಾದಿಗ ಸಮ್ಮಂಧಿತ ಸಮುದಾಯಕ್ಕೆ ಶೇ. 6.75 ರಷ್ಟು ಮೀಸಲಾತಿ ನೀಡಬೇಕಾಗಿರುತ್ತದೆ. ಈಗ, ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗೆ ತರಲು ಇದ್ದ ಎಲ್ಲಾ ಅಡಚಣೆಗಳೂ ತೆರವಾಗಿದ್ದು, ಈ ಕೂಡಲೇ ರಾಜ್ಯ ಸರ್ಕಾರವು ಮಾದಿಗೆ ಸಮ್ಮಂಧಿತ ಸಮುದಾಯಕ್ಕೆ ಶೇ. 6.75ರ ಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕೆಂದು ಸಂಘವು ಒತ್ತಾಯಿಸುತ್ತದೆ.

2.ರಾಜ್ಯದಲ್ಲಿ ಕಳೆದ ಹಲವಾರು ತಿಂಗಳುಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಹಲವಾರು ಹುದ್ದೆಗಳಿಗೆ ಪ್ರಕಟಣೆ ಮಾಡಿ, ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನ ನಡೆಸಿದ್ದು, ಇವುಗಳ ಫಲಿತಾಂಶ ನೀಡಬೇಕಾಗಿದ್ದು, ಈ ಫಲಿತಾಂಶವನ್ನು ತಡೆಹಿಡಿದು. ಈ ಹುದ್ದೆಗಳಿಗೆ ಒಳಮೀಸಲಾತಿ ಜಾರಿಗೆ ತಂದು ಈ ಫಲಿತಾಂಶ ನೀಡಬೇಕೆಂದು ತಮ್ಮಲ್ಲಿ ಸಂಘವು ಮನವಿ ಮಾಡಿಕೊಳ್ಳುತ್ತದೆ.

3.ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದ ಸಾವಿರಾರು ಹುದ್ದೆಗಳು ಹಿಂಬಾಕಿಯಾಗಿ (ಬ್ಯಾಕ್‌ಲಾಗ್ ಹುದ್ದೆಗಳು) ಉಳಿದಿದ್ದು, ರಾಜ್ಯದಲ್ಲಿ ಲಕ್ಷಾಂತರ ನಿರುದ್ಯೋಗಿಗಳು ಉದ್ಯೋಕ್ಕಾಗಿ ಕಾಯ್ದಿದ್ದು, ಇವರ ವಯೋಮೀತಿ ಮೀರುತ್ತಿದ್ದು, ಅವುಗಳಿಗೂ ಒಳಮೀಸಲಾತಿ ಜಾರಿಗೊಳಿಸಿ ಈ ಹುದ್ದೆಗಳನ್ನು ಸ್ಪೆಷಲ್ ಡ್ರೈವ್ ನೇಮಕಾತಿ ಮೂಲಕ ತ್ವರಿತವಾಗಿ ತುಂಬಿ ಜಾರಿಗೊಳಿಸಬೇಕೆಂದು ತಮ್ಮಲ್ಲಿ ಸಂಘವು ಮನವಿ ಮಾಡುತ್ತದೆ.

4.ಪರಿಶಿಷ್ಟ ಜಾತಿ/ವರ್ಗದವರಿಗೆ ಸರ್ಕಾರ ವಿವಿಧ ಯೋಜನೆಗಳಲ್ಲಿ ಮಂಜೂರು ಮಾಡಿರುವ ಜಮೀನುಗಳು ಹಾಗೂ ಕೆಲ ಜಮೀನುಗಳ (ತೋಟಿ ಇನಾಂ, ನೀರಗಂಟಿ, ಜಿಎಂಎಫ್ ಮುಂತಾದ) ಜಮೀನುಗಳನ್ನು ಒಳಗೊಂಡಂತೆ, 1978ರ ಪಿಟಿಸಿಎಲ್ ಕಾಯಿದೆಗೆ ಸಮಗ್ರ ತಿದ್ದುಪಡಿ ಮಾಡುವಂತೆ ಒತ್ತಾಯಿಸುತ್ತದೆ.

5. ಶಿಕ್ಷಣ ಹಕ್ಕು ಕಾಯಿದೆ: ಕೇಂದ್ರ ಸರ್ಕಾರವು 2010ರಲ್ಲಿ ರಾಷ್ಟ್ರದಲ್ಲಿ ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿ ಮಾಡಿದ್ದು, ಇದರನ್ವಯ ದುರ್ಬಲ ವರ್ಗದ ಶಾಲಾ ಮಕ್ಕಳಿಗೆ ತಮ್ಮ ವಾಸ ಸ್ಥಳದ 3 ಕಿ.ಮೀ. ವ್ಯಾಪ್ತಿಯಲ್ಲಿ 5 ಖಾಸಗೀ ಶಾಲೆಗಳಲ್ಲಿ ಉಚಿತ ಪ್ರವೇಶ ಪಡೆಯಲು ಅವಕಾಶ ಮಾಡಿಕೊಟ್ಟಿದ್ದು, ಕರ್ನಾಟಕದಲ್ಲಿ ಸರ್ಕಾರವು ಖಾಸಗೀ ಶಾಲೆಗಳ ಒತ್ತಡಕ್ಕೆ ಮಣಿದು, ಸರ್ಕಾರಿ ಶಾಲೆಗಳಲ್ಲಿ ಮಾತ್ರ ಉಚಿತ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದು, ಇದು ಜನ ವಿರೋಧಿ ನೀತಿಯಾಗಿರುತ್ತದೆ. ಆದುದರಿಂದ, ರಾಜ್ಯ ಸರ್ಕಾರವು ಈ ಕೂಡಲೆ, ಶಿಕ್ಷಣ ನೀತಿಗೆ ತಿದ್ದುಪಡಿ ಮಾಡಿ, ಮರ್ಬಲ ವರ್ಗದ ಮಕ್ಕಳಿಗೆ ಎಲ್ಲಾ ಖಾಸಗೀ ಸಂಸ್ಥೆಗಳಲ್ಲೂ ಉಚಿತ ಪ್ರವೇಶ ದೊರಕಿಸಿಕೊಡುವಂತೆ ಸರ್ಕಾರವನ್ನು ಸಂಘವು ಒತ್ತಾಯಿಸುತ್ತದೆ.

6. ಬಿಬಿಎಂಪಿ ಮತ್ತು ರಾಜ್ಯದ ಪುರಸಭೆ/ಪಾಲಿಕೆಗಳಲ್ಲಿ ಗುತ್ತಿಗೆ/ನೇರಪಾವತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಲೋರ್ಡ ಮತ್ತು ಚಾಲಕರನ್ನು ಖಾಯಂ ಗೊಳಿಸುವಂತೆ ಸಂಘವು ಸರ್ಕಾರವನ್ನು ಆಗ್ರಹಪಡಿಸುತ್ತದೆ.

7.ರಾಜ್ಯದಲ್ಲಿ ಸರ್ಕಾರದ ಸಾಲ ಸೌಲಭ್ಯ, ಆಶ್ರಯ ಯೋಜನೆ ಮುಂತಾದ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ತಮ್ಮ ಪಕ್ಷದ ಹಿಂಬಾಲಕರನ್ನು ಆಯ್ಕೆ ಮಾಡುತ್ತಿದ್ದು, ಇದರಿಂದ ಆಯಾ ಸಮುದಾಯದ ಸದಸ್ಯರಿಗೆ ಸರ್ಕಾರದ ಸೌಲಭ್ಯಗಳು ಸಿಗದೆ ವಂಚಿತರಾಗುತ್ತಿದ್ದು, ಇದನ್ನು ತಪ್ಪಿಸಲು ಆಯಾ ಸಮುದಾಯದ ಸಂಘಗಳು ಆಯ್ಕೆ ಮಾಡಿ ನೀಡುವ ಶೇ. 25 ರಷ್ಟು ಫಲಾನುಭವಿಗಳಿಗೆ ಸಮ್ಮಂಧಿತ ಯೋಜನೆಗಳಲ್ಲಿ ಆಯ್ಕೆ ಮಾಡುವಂತೆ ಒಕ್ಕೂಟವು ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು  ಜಂಬೂದ್ವೀಪ ಸಿದ್ದರಾಜು-ಕಾರ್ಯಾಧ್ಯಕ್ಷರು,ಆಲ್ನೋಡ್ ಹನುಮಂತಪ್ಪ-ಮಾಜಿ ಸಚಿವರು ರಾಜ್ಯಾಧ್ಯಕ್ಷರು, ಸಿ.ವಿ. ರಮೇಶ್ ಕುಮಾರ್ -ಪ್ರ.ಕಾರ್ಯದರ್ಶಿ ಹಾಗೂ ಒಕ್ಕೂಟದ ಮುಖಂಡರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

Public hearing on challenges faced by deprived communities in accessing pensions



Bengaluru-19, November 2024 – Karnataka Pension Parishad is organizing the public hearing on Challenges and issues faced by deprived communities in accessing Widow pension, Manaswini, Indira Gandhi, Sandhya Suraksha, transgender and disability pensions provided by government. This is being held at Bapu Sabhangana, Gandhi Bhavan on 20th Nov 2024 from 2pm-5pm.

During and after the COVID-19 pandemic, access to pensions became increasingly difficult. Around 7.5 lakh pensions were canceled without prior notification, leaving vulnerable pensioners from slums and colonies – many of whom are illiterate- unable to understand why their pensions were suddenly discontinued. To address this crisis, members of pension parishad have been engaging with communities in 220 slums, informal settlements & colonies for the past 2.5 years to facilitate pension access addressing the gaps. Through this engagement, it was realized that many issues are due to restrictive criteria and the absence of effective systems to address frequent technical changes imposed by the government, forcing pensioners to run from pillar to post. According, our reach around 50,000 eligible individuals only 36% are able to access pension as of today.

The eligible pensioners living in vulnerable situations are being deprived of pensions due to various issues, such as the non-availability of necessary documents like Aadhaar card, birth or transfer certificates, BPL card, age certificate, death certificate. These pensioners will share their experiences, highlighting the difficulties they face, which include dealing with intermediaries, bribe, network issues, and undignified behaviour from officials at the Nadakacheri centers.

On the 20th, the pensioners will share their stories in person and through video presentations. Additionally, issues from 18 Nadakacheri centers will also be discussed. Officials are expected to provide alternative solutions to address the pensioners’ challenges. There will be 5 jury members who will submit their recommendations to the officials after considering the community’s difficulties.

Aforesaid statement was released at press meet held at press club of Bangalore in behalf of Pension Parishad.

City Today News 9341997936