ಈಗಾಗಲೇ ಕ್ವಾರಿ ಮತ್ತು ಕ್ರಷರ್ ಮಾಲೀಕರುಗಳಿಗೆ, ಲಾರಿ ಮಾಲೀಕರುಗಳಿಗೆ ವಿಧಿಸಿರುವ ಎಲ್ಲಾ ರೀತಿಯ ದಂಡವನ್ನು ‘ಮನ್ನಾ’ ಮಾಡಬೇಕು.

ಸರ್ಕಾರ ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಿಲ್ಲ. ಸರ್ಕಾರಿ ಕಾಮಗಾರಿ ನಿರ್ವಹಣಾ ಗುತ್ತಿಗೆದಾರರು ಮತ್ತು ಖಾಸಗೀ ಕಾಮಗಾರಿ ನಿರ್ವಹಣಾ ಗುತ್ತಿಗೆದಾರರು ಯಾವ ರೀತಿ ರಾಜಧನವನ್ನು ಎಲ್ಲಿ ಪಾವತಿಸಬೇಕೆಂದು ಕೇಂದ್ರ ಎಂ.ಎಂ.ಡಿ.ಆರ್-1957 ಮತ್ತು ರಾಜ್ಯ ಕೆ.ಎಂ.ಎಂ.ಸಿ-1994 ನಿಯಮಗಳಲ್ಲಿ ಸ್ಪಷ್ಟತೆ ಇದ್ದರೂ ಕೂಡಾ ಅದನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಅನುಷ್ಟಾನ ಮಾಡಿಲ್ಲ. ಮತ್ತು ಲಾರಿ ಮಾಲೀಕರುಗಳಿಗೂ ಸ್ಪಷ್ಟ ನಿರ್ದೇಶನವನ್ನೂ ನೀಡಿಲ್ಲ. ಅಲ್ಲದೇ ಕ್ರಷರ್ ಮತ್ತು ಕ್ವಾರಿ ಮಾಲೀಕರುಗಳಿಗೆ ಮತ್ತು ಲಾರಿ ಮಾಲೀಕರುಗಳಿಗೆ ದಿನಃಪ್ರತೀ ಕೋಟ್ಯಾಂತರ ರೂ. ದಂಡ ವಿಧಿಸುತ್ತಿದ್ದಾರೆ. ಇದರಿಂದಾಗಿ ಈಗ ಕ್ವಾರಿ ಮತ್ತು ಕ್ರಷರ್ ಮಾಲೀಕರುಗಳು, ಲಾರೀ ಮಾಲೀಕರುಗಳು ಆತ್ಮಹತ್ಯೆ ಮಾಡಿಕೊಳ್ಳುವ ಇಂತಹ ಪ್ರಕರಣ ನಡೆಯುತ್ತಿದೆ.

ರಾಜ್ಯದಾದ್ಯಂತ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈಗ ಈ ಆತ್ಮಹತ್ಯೆ ಮಾಡಿಕೊಂಡಿರುವ ಶ್ರೀ ನಾಗೇಶ್‌ರವರಿಗೂ ಕೂಡಾ ನೋಟೀಸನ್ನು ನೀಡಿ ಸುಮಾರು 8 ಲಕ್ಷದಷ್ಟು ದಂಡ ಕಟ್ಟಲು ಇಲಾಖೆ 2) ಗಿ ಒತ್ತಾಯ ಪಡಿಸಿದ ಕಾರಣ ಮನನೊಂದು ಇಲಾಖಾ ಕಛೇರಿಯ ಎದುರೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿರುತ್ತದೆ.

ನಮ್ಮ ಪ್ರಮುಖ ಬೇಡಿಕೆಗಳು:-

01. ಲಾರಿ ಮಾಲೀಕರಾದ ಶ್ರೀ ನಾಗೇಶ್‌ರವರ ಕುಟುಂಬಕ್ಕೆ ಸರ್ಕಾರ ‘ಒಂದು ಕೋಟಿ ರೂ. ಪರಿಹಾರ ಧನವನ್ನು ಒಂದು ವಾರದೊಳಗೆ ಘೋಷಣೆ ಮಾಡಬೇಕು’.

02. ‘ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕವಾಗಿ ಒಂದು ವಾರದೊಳಗೆ ಅನುಷ್ಟಾನ’ಕ್ಕೆ ತರಬೇಕು. ಸರ್ಕಾರ ರಾಜಧನ ಪಾವತಿ ವ್ಯವಸ್ಥೆಯನ್ನು ಇದುವರೆಗೂ ಸಮರ್ಪಕಗೊಳಿಸದೇ ಇರುವುದರಿಂದ ಸರ್ಕಾರಕ್ಕೆ ಸಂದಾಯವಾಗತಕ್ಕ ರಾಜಧನ WEDA’s (Work Executive Department Agencies) and ನಿಂದ ಸರ್ಕಾರಕ್ಕೆ ಸಂದಾಯವಾಗಿರುವುದರಿಂದ ಈಗಾಗಲೇ ಕ್ವಾರಿ ಮತ್ತು ಕ್ರಷರ್ ಮಾಲೀಕರುಗಳಿಗೆ, ಲಾರಿ ಮಾಲೀಕರುಗಳಿಗೆ ವಿಧಿಸಿರುವ ಎಲ್ಲಾ ರೀತಿಯ ದಂಡವನ್ನು ‘ಮನ್ನಾ’ ಮಾಡಬೇಕು.

03. ಕ್ವಾರಿಗಳಿಗೆ ಮಾಡುತ್ತಿರುವ ಡೋಕ್ ಸರ್ವೆಯನ್ನು ಈಗಿನ ಪ್ರಸ್ತುತ ಭೂಮಟ್ಟವನ್ನು ದಾಖಲಿಸಿ ಮುಂದಿನ ಲೆಕ್ಕ ಪರಿಶೋಧನೆಗೆ ಅನುವು ಮಾಡಿಕೊಡಬೇಕು ಹೊರತು ಇದುವರೆಗೆ ತೆಗೆದಿರುವ ಖನಿಜಗಳ ಲೆಕ್ಕ ಹಾಕಿ ದಂಡ ವಿಧಿಸಬಾರದು ಎಂದು ಶ್ರೀ ಡಾ॥ ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷರು, ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಒರ್ನ ಅಸೋಸಿಯೇಷನ್(ರಿ), ಬೆಂಗಳೂರು. ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ದಲಿತ ಮುಖ್ಯಮಂತ್ರಿ ಪದವಿಗೆ ಮಾದಿಗ ಮಹಾಸಭಾ ಸಂಪೂರ್ಣ ವಿರೋಧ

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಮಾದಿಗೆ ಸಮುದಾಯ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಆದರೆ ಶತಮಾನಗಳಿಂದ ತಳಸಮುದಾಯಗಳಾದ ಮಾದಿಗ ಮತ್ತು ಹೊಲೆಯ ಜಾತಿಗಳು ಈ ಸಮಾಜದ ಅನೇಕ ಕಟ್ಟುಪಾಡುಗಳಿಗೆ ಒಳಪಟ್ಟು ತುಳಿತಕ್ಕೆ ಒಳಗಾದ ಹಾಗೂ ಸಮಾಜದಲ್ಲಿ ಅತಿ ಹೆಚ್ಚು ಕಡೆಗಣನೆಗೆ ಒಳಗಾದಂತಹ ಜಾತಿಗಳಾಗಿರುತ್ತವೆ. ಇವು ಪರಿಶಿಷ್ಟ ಜಾತಿಯಲ್ಲಿ ಅಸ್ಪೃಶ್ಯ ಜಾತಿಗಳಾಗಿದ್ದು ಸಮಾಜದ ಎಲ್ಲಾ ಜಾತಿಗಳಿಂದ ನಿರ್ಲಕ್ಷತೆಗೊಳಪಟ್ಟಿವೆ.

ಸಮಾಜದ ಎಲ್ಲಾ ಜಾತಿಗಳಿಂದ ಎಲ್ಲಾ ರೀತಿಯಿಂದಲೂ ಅಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅತಿ ಹೆಚ್ಚು ಕಡೆಗಣನೆಗೆ ಒಳಗಾಗಿದ್ದು ಇಂದಿಗೂ ಸಹ ಅಸ್ಪರ್ಶವಾಗಿ ಉಳಿದುಕೊಂಡಿದೆ.

ಇದನ್ನು ಮನಗಂಡಂತಹ ಮಾದಿಗ ಸಮಾಜದ ಸಂಘಟನೆಗಳು ತಮಗೆ ಆಗುತ್ತಿರುವ ಅನ್ಯಾಯವನ್ನು ಈಗ್ಗೆ ಸುಮಾರು 30 ವರ್ಷಗಳಿಂದ ಹೋರಾಟವನ್ನು ನಡೆಸುತ್ತಾ ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಮಾಡುತ್ತಿವೆ. ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು, ಶಾಸಕರು, ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತರುವ ಮೂಲಕ ಈ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕೇಳಿಕೊಂಡಾಗ್ಯೂ ಯಾವುದೇ ಪ್ರಯೋಜನವಾಗದ ಕಾರಣ ರಾಜ್ಯದಾದ್ಯಂತ ಹೋರಾಟವನ್ನು ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡಲಾಗಿದೆ. ವಿಧಾನಸೌಧ ಮುತ್ತಿಗೆ, ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ, ತಾಲ್ಲೂಕು ಕಛೇರಿ ಮುತ್ತಿಗೆ, ಅರಬೆತ್ತಲೆ ಮೆರವಣಿಗೆ, ಉರುಳು ಸೇವೆ, ಶಾಸಕರ, ಸಚಿವರ ಮನೆ ಮುಂದೆ ಧರಣಿ, ಮುಖ್ಯಮಂತಿಗಳಿಗೆ ಫೆರಾವು ಹಾಗೂ ಬೆಳಗಾಂ ಅಧಿದೇಶನದಲ್ಲಿ ಮುತ್ತಿಗೆ ಕಾರ್ಯಕ್ರಮ ಇವುಗಳನ್ನು ಹಾಕುವ ಮುಖಾಂತರ ಹಲವಾರು ಹೋರಾಟಗಳನ್ನು ಮಾಡುವ ಮೂಲಕ ಸರ್ಕಾರದ ಕಣ್ಣು ತೆರೆಸಲಾಗಿದೆ. ಇದರ ಪ್ರತಿಫಲವಾಗಿ ಹಿಂದೆ ಜಾತಿ, ಜನಗಣತಿಯನ್ನು ಅಧರವಾಗಿಟ್ಟುಕೊಂಡು ಸದಾಶಿವ ಆಯೋಗವನ್ನು ಅಂದಿನ ಸರ್ಕಾರ ನೇಮಕ ಮಾಡಿತ್ತು. ಇದರ ವರದಿಯನ್ನು ಸಹ ಸರ್ಕಾರಕ್ಕೆ ನೀಡಿತು. ಆದರೆ ಹಲವು ವರ್ಷಗಳ ಕಾಲ ಇದನ್ನು ಜಾರಿಗೆ ತರದೆ ಸರ್ಕಾರಗಳು ನಿರ್ಲಕ್ಷ್ಯ ಮಾಡಿದವು. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದಾದ್ಯಂತ ಹೋರಾಟವನ್ನು ತೀವ್ರಗೊಳಿಸಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಸದಾಶಿವ ಆಯೋಗವನ್ನು ಜಾರಿ ಮಾಡುತ್ತೇವೆ. ಎಂದು ಸುಳ್ಳು ಭರವಸೆಗಳನ್ನು ಕೊಟ್ಟರೇ ವಿನಃ ಜಾರಿಗೊಳಿಸುವ ದೃಢ ನಿರ್ಧಾರವನ್ನು ಮಾಡಲಿಲ್ಲ. ಈ ಮೇಲ್ಕಂಡ ಅಸ್ಪರ್ಶ ಜಾತಿಗಳನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡವು.

ಹೋರಾಟ ರಾಜ್ಯಾದಾದ್ಯಂತ ತೀವ್ರಗೊಂಡ ನಂತರ ಸುಪ್ರೀಂ ಕೋರ್ಟ್ 2024ರ ಆಗಸ್ಟ್-1 ರಂದು ಐತಿಹಾಸಿಕವಾದಂತಹ ತೀರ್ಪನ್ನು ಪ್ರಕಟಿಸುವ ಮೂಲಕ ಬಳ ಮೀಸಲಾತಿಯನ್ನು ಜಾರಿಗೆ ತರಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ ಎಂಬ ಮಹತ್ವದ ತೀರ್ಪನ್ನು ಪ್ರಕಟಿಸಿತು. ಈ ತೀರ್ಪು ಪ್ರಕಟವಾದ ನಂತರ ತೆಲಂಗಾಣ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ನಾವೇ ಮೊದಲು ತರುತ್ತೇವೆ ಎಂದು ಪ್ರಕಟಿಸಿದರು. ಹರಿಯಾಣ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಈ ಸರ್ಕಾರ ಒಳ ಮೀಸಲಾತಿ ಪರವಾಗಿ ಇದೆ ಎಂಬುದನ್ನು ಸಾಬೀತುಪಡಿಸಿದೆ. ಆದರೆ ಕಾಂಗ್ರೇಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲು ಒಳಮೀಸಲಾತಿ ಜಾರಿ ಮಾಡುತ್ತೇವೆಂದು ಆಶ್ವಾಸನೆ ನೀಡಿತ್ತು. ಆದರೆ ಇಲ್ಲಿಯವರೆಗೂ ಕಾಂಗ್ರೇಸ್ ಸರ್ಕಾರ ಬದ್ಧತೆಯನ್ನು ತೋರದೇ ಇರುವುದು ದುರದೃಷ್ಟಕರ. ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ.ಪರಮೇಶ್ವ‌ರ್, ಹೆಚ್.ಸಿ.ಮಹದೇವಪ್ಪ ಇನ್ನು ಹಲವು ಬಲಗೈ ನಾಯಕರು ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಅಸಹನೆ ತೋರುಸತ್ತಿದ್ದಾರೆ ಎಂಬುದು ದೇಶ ಹಾಗೂ ರಾಜ್ಯದಾದ್ಯಂತ ದೊಡ್ಡ ಸುದ್ದಿಯಲ್ಲಿದೆ. ಅಲ್ಲದೇ ದಲಿತ ಮುಖ್ಯಮಂತ್ರಿ ವಿಚಾರವಾಗಿ ಪ್ರತಿ ಬಾರಿಯು ದಲಿತ ಮುಖ್ಯಮಂತ್ರಿ ನಾವೇ ಎಂಬುದಾಗಿ ಸುದ್ದಿ ಮಾಡುತ್ತಿದ್ದಾರೆ. ನಿಜವಾದ ಅಸ್ಪರ್ಶ ಮಾದಿಗರನ್ನು ತನ್ನ ಸಹೋದರರು ಎಂದು ಎಂದೂ ಸಹ ಅಂದುಕೊಳ್ಳದ ಈ ಸಮುದಾಯದವರು ಮಾದಿಗರನ್ನು ಕಡೆಗಣಿಸುತ್ತಾ ಬಹುಪಾಲು ಸೌಲಭ್ಯಗಳ ಒಡೆಯರಾಗಿದ್ದಾರೆ. ಆದ ಕಾರಣ ಒಳ ಮೀಸಲಾತಿ ಜಾರಿಗೆ ತರುವಲ್ಲಿ ಈ ಸಮುದಾಯದ ನಾಯಕರು ಬದ್ಧತೆ ತೋರದೇ ಇದ್ದಲ್ಲಿ ಮುಂದೆ ಮೀಸಲಾತಿ ಕ್ಷೇತ್ರಗಳಲ್ಲಿ ಮಾದಿಗ ಸಮುದಾಯದವರು ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಬೇಕಾಗುತ್ತದೆ, ಅಲ್ಲದೇ ದಲಿತರಿಗೆ ಬೇಕಾಗಿಲ್ಲ.

ದಲಿತ ಮುಖ್ಯಮಂತ್ರಿ ಪದವಿಗೆ ಮಾಡಿಗೆ ದುಹಾಸಭಾ ಸಂಪೂರ್ಣ ವಿರೋಧವನ್ನು ವ್ಯಕ್ತಪಡಿಸುತ್ತವೆ.

ಅಲ್ಲದೇ ಒಳ ಮೀಸಲಾತಿ ಜಾರಿಯಾಗುವ ವರೆಗೂ ಸರ್ಕಾರದ ಉದ್ಯೋಗದ ಅಧಿಸೂಚನೆಗಳನ್ನು ಕಡ್ಡಾಯವಾಗಿ ರದ್ದುಗೊಳಿಸಬೇಕು. ಹಾಗೂ ಎಸ್.ಇ.ಪಿ / ಟಿ.ಎಸ್.ಪಿ ಅನುದಾನವನ್ನು ಹಂಚಿಕೆ ಮಾಡದೇ ತಡೆಗಟ್ಟಬೇಕು ಹಾಗೂ ಒಳ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮಾದಿಗ ಸಮಾಜದ ಶಾಸಕರು, ಸಚಿವರು, ಸಂಸದರು ಹಾಗೂ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ರಾಜ್ಯ ಸರ್ಕಾರಕ್ಕೆ ಒತ್ತಾಯವನ್ನು ಮಾಡಬೇಕು ನಿಮ್ಮ ಒತ್ತಾಯಕ್ಕೆ ಸರ್ಕಾರ ಮಣಿಯದೇ ಇದ್ದಲ್ಲಿ ತಮ್ಮ ಸ್ಥಾನಗಳಲ್ಲಿ ರಾಜೀನಾಮೆ ಕೊಡುವ ಮೂಲಕ ಈ ಸಮಾಜದ ಋಣವನ್ನು ತೀರಿಸಬೇಕಾಗಿ ಮಾದಿಗ ಮಹಾಸಭಾ ಮುಖಂಡರುಗಳು ಪತ್ರಿಕಾ ಗೋಷ್ಟಿಯ ಮೂಲಕ ಒತ್ತಾಯಿಸಿದರು.

City Today News 9341997936

ಅಮಸಮರ್ಥನೀಯ ಹಾಗೂ ಆತಾರ್ಕಿಕ ದತ್ತಾಂಶಗಳನ್ನು ಆಧರಿಸಿದ. ಒಳಮೀಸಲಾತಿ ವರ್ಗೀಕರಣವನ್ನು ಸಚಿವ ಸಂಪುಟ ಸಭೆಯಲ್ಲಿ ತಿರಸ್ಕರಿಸುವಂತೆ ಹಾಗೂ ಕಾಂತರಾಜು ಆಯೋಗದ ವರದಿಯನ್ನು ಬಹಿರಂಗ ಪಡಿಸುವಂತೆ ಆಗ್ರಹ

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

ಪರಿಶಿಷ್ಟ ಜಾತಿಯ ಒಳಮೀಸಲಾತಿಯ (ವರ್ಗೀಕರಣ) ಸಂಬಂಧಿಸಿದಂತೆ ಇತ್ತೀಚೆಗೆ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಸಪ್ತಪೀಠವು ತೀರ್ಪು ನೀಡಿದ್ದು ಸರಿಯಷ್ಟೆ. ಈ ಬಗ್ಗೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತಾಗಿ ಅವೈಜ್ಞಾನಿಕ, ಅತಾರ್ಕಿಕ ಹಾಗೂ ಆಸಮರ್ಥನೀಯ ದತ್ತಾಂಶಗಳನ್ನು ಆಧರಿಸಿ ಒಳಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿರುವುದು ಸಾಮಾಜಿಕ ನ್ಯಾಯದ ಕಗೊಲೆಯಾಗಿದೆ. ಕಾರಣ ಪರಿಶಿಷ್ಟ ಜಾತಿಯ 101 ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಕುರಿತಾದ ಸಮಗ್ರ ಹಾಗೂ ವಸ್ತುನಿಷ್ಟ ಅಂಕಿ-ಅಂಶಗಳ ಕುರಿತಾದ ಕೊರತೆ ಇದ್ದು, ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಕೈಗೊಳ್ಳದೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಏಕಾಏಕಿ ಒಳಮೀಸಲಾತಿ ವರ್ಗೀಕರಣ ಕುರಿತಾಗಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಅಖಿಲ ಕರ್ನಾಟಕ ಕುಳುವ ಮಹಾಸಂಘವು ತೀವ್ರವಾಗಿ ಖಂಡಿಸುತ್ತದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯಗಳ ನಡುವೆ ಒಳಮೀಸಲಾತಿ ಕಲ್ಪಿಸಲು ರಾಜ್ಯದಲ್ಲಿ 101 ಪರಿಶಿಷ್ಟ ಜಾತಿಗಳ ನಡುವಿನ ಮೀಸಲಾತಿ ಹಂಚಿಕೆಯ ಕುರಿತಾದ ಸಮಗ್ರ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯವನ್ನು ಖಾತ್ರಿಪಡಿಸಲು ಸಮರ್ಥನೀಯ ಹಾಗೂ ವೈಜ್ಞಾನಿಕ ದತ್ತಾಂಶಗಳನ್ನು ಕ್ರೋಢಿಕರಿಸಿ, ವಿಶ್ಲೇಷಿಸಿ ತಜ್ಞರ ವರದಿಯನ್ನು ಪಡೆದು ಕೊಳ್ಳದ ಹೊರತು, ಸರ್ಕಾರವು ಯಾವುದೇ ಕ್ರಮವನ್ನು ಕೈಗೊಳ್ಳದಂತೆ ರಾಜ್ಯದ ದಮನಿತ ಹಾಗೂ ಅವಕಾಶ ವಂಚಿತ ಅಲೆಮಾರಿ, ಕೊರಮ-ಕೊರಚ-ಕೊರವ ಸಮುದಾಯಗಳ ಪರವಾಗಿ ಅಖಿಲ ಕರ್ನಾಟಕ ಕುಳುವ ಮಹಾಸಂಘವು ಈ ಪತ್ರಿಕಾ ಗೋಷ್ಠಿಯ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತದೆ.

ಹಕ್ಕೊತ್ತಾಯಗಳು

1. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ, ಸರ್ಕಾರವು ಏಕಾಏಕಿ ಪರಿಶಿಷ್ಟ ಜಾತಿಯ ಒಳಮೀಸಲಾತಿಯ ಕುರಿತಂತೆ ಅಮಸಮರ್ಥನೀಯ ಹಾಗೂ ಅತಾರ್ಕಿಕ ದತ್ತಾಂಶಗಳನ್ನು ಆಧರಿಸಿ ಯಾವುದೇ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಬಾರದೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇವೆ.

2. 2011ರ ಜನಗಣತಿಯ ಅಂಕಿಅಂಶಗಳನ್ನು ಪರಿಗಣಿಸದೇ, ರಾಜ್ಯದಲ್ಲಿ ಇತ್ತೀಚೆಗಿನ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ (ಜಾತಿ ಗಣತಿ-2016 / ಕಾಂತರಾಜು ಆಯೋಗದ ವರದಿ)ಯನ್ನು ಕೂಡಲೇ ಬಹಿರಂಗಗೊಳಿಸಿ ಸದರಿ ವರದಿಯಲ್ಲಿರುವ ದತ್ತಾಂಶಗಳನ್ನು ಪರಿಣಿಸಬೇಕು.

3. ಪರಿಶಿಷ್ಟ ಜಾತಿಯ 101 ಸಮುದಾಯಗಳ ಪೈಕಿ 51 ಜಾತಿಗಳು ಗುರುತಿಸಲ್ಪಟ್ಟ ಅಲೆಮಾರಿ ಮತ್ತು ವಿಮುಕ್ತ ಸಮುದಾಯಗಳಾಗಿದ್ದು, ಇವುಗಳ ಸಾಮಾಜಿಕ ಹಿಂದುಳಿದಿರುವಿಕೆ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಮೀಸಲಾತಿ ಪ್ರಾತಿನಿಧ್ಯವನ್ನು ಕುರಿತಾದ ಸಮರ್ಥನೀಯ ದತ್ತಾಂಶಗಳನ್ನು (ಎಂಪೆರಿಕಲ್ ಡೇಟಾ) ಕ್ರೋಡಿಕರಿಸಿ, ವೈಜ್ಞಾನಿಕವಾಗಿ ವಿಶ್ಲೇಷಿಸಲು ಸಾಮಾಜಿಕ, ಶೈಕ್ಷಣಿಕ ಮತ್ತು ಕಾನೂನು ಪರಿಣಿತಿಯುಳ್ಳ ತಜ್ಞರ ಸಮಿತಿಯನ್ನು ಕೂಡಲೇ ರಚಿಸಬೇಕು.

4. ಅಂತಹ ತಜ್ಞರ ಸಮಿತಿಯ ವರದಿ ಪಡೆದು 101 ಜಾತಿಗಳ ಅಹವಾಲುಗಳನ್ನು ಮುಕ್ತವಾಗಿ ಆಲಿಸಿ, ಸಮುದಾಯಗಳ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಚಿಂತಕರೊಂದಿಗೆ ಸಮಾಲೋಚನೆ ನಡೆಸಿ, ನಂತರ ಪರಿಶಿಷ್ಟ ಜಾತಿ ಒಳಮೀಸಲಾತಿಯ (ವರ್ಗೀಕರಣ) ತೀರ್ಮಾನ ಕೈಗೊಳ್ಳಬೇಕು.

City Today News 9341997936

ಕರ್ನಾಟಕ ರಾಜ್ಯದಲ್ಲಿರುವ 101 ಪ.ಜಾತಿಯ ಪಟ್ಟಿಯಲ್ಲಿರುವ 51 ಎಸ್.ಸಿ./ಎಸ್.ಟಿ. ಅಲೆಮಾರಿ ಸಮುದಾಯಕ್ಕೆ ಪ್ರತಿಯೊಂದು ಸಮುದಾಯಗಳಲ್ಲಿ ಶಿಕ್ಷಣ, ជ ២០៩ ab, (interse backwardness) ಸಾಬೀತು ಪಡಿಸಿ ಅಗತ್ಯ ಸಮೀಕ್ಷೆ/ ಅಧ್ಯಯನದ ಮೂಲಕ ಅಲೆಮಾರಿ ಸಮುದಾಯಗಳ ಮೀಸಲಾತಿಯನ್ನು ಕನಿಷ್ಠ 35 ಕಲ್ಪಿಸಿಕೊಡಬೇಕು

ಕರ್ನಾಟಕ ರಾಜ್ಯದಲ್ಲಿರುವ 101 ಪ.ಜಾತಿಯ ಪಟ್ಟಿಯಲ್ಲಿ 51 ಅಲೆಮಾರಿ ಸಮುದಾಯಗಳಾದ ಹಂದಿಜೋಗಿ, ಸಿಳ್ಳೇಕ್ಯಾಶಾಸ್, ಬುಡ್ಗಜಂಗಮ, ಸುಡುಗಾಡುಸಿದ್ದ, ಚನ್ನದಾಸರ್, ದೊಂಬರು, ಘಂಟಿಚೋರ್, ಕೊರಮ, ಕೊರಚ, ಮಾಂಗ್ ಗಾರುಡಿ, ಮುತ್ರಿ, ಅಬೇಲ, ಹಳ್ಳೇರ್, ನಲಿಕೆಯವ, ಸಿಂಧೋಳ್ಳು ಚಿಂಧೋಳ್ಳು, ಇತ್ಯಾದಿ 51 ಜಾತಿ ಮತ್ತು ಪರಿಶಿಷ್ಟ ವರ್ಗದ ಅಲೆಮಾರಿ ಬುಡಕಟ್ಟು, ಮೇದ, ಹಕ್ಕಿಪಿಕ್ಕಿ, ಇರುಳಿಗ, ರಾಜಗೊಂಡ, ಪಾರಿ, ಚೆಂಚು, ಹರಿಣಿಶಿಕಾರಿ, ಮಲೆಕುಡಿಯ, ಕಮ್ಮಾರ, ಹರಣಿಶಿಕಾರಿ, ದುಂಗಿಗರಾಸಿಯಾ ಇತ್ಯಾದಿ 23 ಬುಡಕಟ್ಟು ಹೀಗೆ ಒಟ್ಟು 74 ಅಲೆಮಾರಿ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಿಂದ ವಂಚಿತವಾಗಿ ಇಂದಿಗೂ ಟೆಂಟು, ಗುಡಿಸಲು, ಹಾಡಿ ಪೋಡುಗಳಲ್ಲಿ ಪಾರಂಪರಿಕ ವೃತ್ತಿಗಳನ್ನು ಅವಲಂಬಿಸಿ ಅಸಂಘಟಿತರಾಗಿ ಬದುಕುತ್ತಿದ್ದಾರೆ. ಇವರು ಕಳೆದ 70 ವರ್ಷದಲ್ಲಿ ಯಾವುದೇ ಮೀಸಲಾತಿ ಸಿಗದೇ ಔದ್ಯೋಗಿಕ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಎಲ್ಲೂ ಇವರ ದತ್ತಾಂಶವಿಲ್ಲದ ಕಾರಣ ಮೀಸಲಾತಿಯಿಂದ ವಂಚಿತರಾಗಿ ನಿರ್ಲಕ್ಷಿಸಲ್ಪಟ್ಟಿರುತ್ತಾರೆ. ಮುಂದುವರೆದು ದೇವಿಂದರ್ ಸಿಂಗ್ ಮತ್ತು ಪಂಜಾಬ್ ಪ್ರಕರಣದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಎಲ್ಲರಿಗೂ ತಿಳಿದ ಸಂಗತಿ.

ತೀರ್ಪಿನ ಮುಖ್ಯಾಂಶಗಳನ್ನು ಹೇಳುವುದಾದರೆ..

1. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಇರುವ ಪ್ರತಿಯೊಂದು ಸಮುದಾಯಗಳಲ್ಲಿ ಶಿಕ್ಷಣ, ಉದ್ಯೋಗದಲ್ಲಿ “ಅಂತರ್ ಹಿಂದುಳಿದಿರುವಿಕೆ ಯನ್ನು (interse backwardness) ಸಾಬೀತು ಪಡಿಸಬೇಕು. ಅಗತ್ಯ ಸಮೀಕ್ಷೆ/ ಅಧ್ಯಯನದ ಮೂಲಕ ಇದನ್ನು ಪತ್ತೆ ಹಚ್ಚಬೇಕು.

2. “ವಾಸ್ತವಿಕ ದತ್ತಾಂಶಗಳ (empirical data) ಆಧಾರದಲ್ಲಿ ಪ್ರಾತಿನಿಧ್ಯದ ಕೊರತೆಯನ್ನು ಸಾಬೀತುಪಡಿಸಬೇಕು.

3. ಆನಂತರದಲ್ಲಿ ಪ್ರಾತಿನಿಧ್ಯದ ಕೊರತೆಯನ್ನು ಆಧಾರಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗೀಕರಣ ಮಾಡಬಹುದು.

4. ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ರಾಜ್ಯ ಸರ್ಕಾರಗಳಿಗೆ ನೀಡಲಾಗಿರುವ ಈ ಅಧಿಕಾರವನ್ನು ಸಂವಿಧಾನಾತ್ಮಕವಾಗಿ ನಿರ್ವಹಿಸಬೇಕು. ಯಾವುದೇ ಸಮುದಾಯಗಳಿಗೆ ಅನಾನುಕೂಲ ಮಾಡುವ ಅಥವಾ ಸಮುದಾಯಗಳನ್ನು ಅವಕಾಶ ಮತ್ತು ಹಕ್ಕುಗಳಿಂದ ಹೊರಗಿಡುವ ಕಾರ್ಯವನ್ನು ಮಾಡಬಾರದು.

5. ರಾಜ್ಯ ಸರ್ಕಾರಗಳು ಮಾಡಬಹುದಾದ ವರ್ಗೀಕರಣ ಪ್ರಕ್ರಿಯೆಯು ನ್ಯಾಯಾಲಯದ ಪರಾಮರ್ಶೆಗೆ ಒಳಪಡಲಿದೆ.

ಘನ ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿ ಈ ಮೇಲಿನ ಅಂಶಗಳಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈಗ ರಾಜ್ಯ ಸರ್ಕಾರಗಳು ನ್ಯಾಯಾಲಯದ ನಿರ್ದೇಶನದ ಈ ಅಂಶಗಳನ್ನು ಪೂರೈಸಬೇಕು.

ಸಮುದಾಯಗಳ ಅಂತರ್ ಹಿಂದುಳಿದಿರುವಿಕೆ ಮತ್ತು ಪ್ರಾತಿನಿಧ್ಯದ ಕೊರತೆಯನ್ನು ವಾಸ್ತವಿಕ ದತ್ತಾಂಶಗಳ ಮೂಲಕ ನಿರೂಪಿಸಿ ಸಾಬೀತು ಪಡಿಸಬೇಕು. ಇದನ್ನು ಸಾಬೀತು ಪಡಿಸಲು ರಾಜ್ಯ ಸರ್ಕಾರದ ಬಳಿ ಇಲ್ಲಿಯವರೆಗೆ ಯಾವುದೇ ಅಧ್ಯಯನ, ಸಮೀಕ್ಷೆ, ಸುಲನೆ ಮಾಡಿರುವ ವರದಿಗಳು ಇರುವುದಿಲ್ಲ. ಸಮುದಾಯಗಳ ತಲಾ ಜನಸಂಖ್ಯೆ, ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಿತಿಗಳ ಒಳಗೊಂಡಿರುವ ಅಲೆಮಾರಿಗಳ ವಾಸ್ತವಿಕ ದತ್ತಾಂಶಗಳು ಸರ್ಕಾರದ ಬಳಿ ಇಲ್ಲ. ಜಾತಿಗಳನ್ನು ವರ್ಗೀಕರಿಸಲು ಅಗತ್ಯವಿರುವ ಕುಲಶಾಸ್ತ್ರ ಅಧ್ಯಾಯನ, ಸಾಮಾಜಿಕ ಮತ್ತಿತರ ಅಂಶಗಳನ್ನು ಸಾಕಾರಗೊಳಿಸಬಹುದಾದ ವೈಜ್ಞಾನಿಕ ಮತ್ತು ಒಪ್ಪಿತ ವರದಿಗಳು ಸರ್ಕಾರದಲ್ಲಿ ಇರುವುದಿಲ್ಲ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿಗಳ ಅಗತ್ಯವಿದೆ. ವಿವಿಧ ರಾಜ್ಯಗಳು ಮತ್ತು ಸರ್ವ ಪಕ್ಷಗಳ ಅಭಿಪ್ರಾಯಗಳು ಕೂಡ ಇಲ್ಲಿ ಬೇಕಾಗಬಹುದು. ಕಾನೂನು ಮತ್ತು ಸಮಾಜಶಾಸ್ತ್ರ ತಜ್ಞರ ಅಭಿಪ್ರಾಯ ಕೂಡ ಅನಿವಾರ್ಯ.

ಈ ವರ್ಗೀಕರಣ ಪ್ರಕ್ರಿಯೆಗೆ ಸಹಕಾರಿ ಆಗುವಂತೆ ಹರಿಯಾಣ ರಾಜ್ಯ ಸರ್ಕಾರ ಹೊಸ ಆಯೋಗ ರಚಿಸಲು ನಿರ್ಧಾರ ಮಾಡಿರುವುದು ತಿಳಿದ ಸಂಗತಿ,

ನ್ಯಾಯ ಸಮ್ಮತ ಮತ್ತು ಸಂವಿಧಾನಾತ್ಮಕ ಅಂಶಗಳ ದೃಷ್ಟಿಯಿಂದ ರಾಜ್ಯ ಸರ್ಕಾರ ಹೊಸದೊಂದು ಅಧ್ಯಯನ ಮಾಡಬೇಕು. ಅದಕ್ಕಾಗಿ ಎಲ್ಲಾ ಸಮುದಾಯಗಳನ್ನು ಒಳಗೊಂಡ ಈಗಾಗಲೇ ನಮ್ಮ ಬೇಡಿಕೆಯಂತೆ ಅಲೆಮಾರಿಗಳಿಗೆ ಪ್ರತ್ಯೇಕ ಎಸ್.ಸಿ/ಎಸ್‌.ಟಿ ಅಲೆಮಾರಿಗಳ ಆಯೋಗಕ್ಕಾಗಿ ಬೇಡಿಕೆ ಇಡಲಾಗಿತ್ತು ಆದರೆ ಸರ್ಕಾರವು ಕಳೆದ ಬಜೆಟ್‌ನಲ್ಲಿ ಎಸ್.ಸಿ/ಎಸ್‌.ಟಿ ಅಲೆಮಾರಿ ಆಯೋಗದ ಬದಲಿಗೆ ಹಿಂದುಳಿದ ವರ್ಗದ ಅಲೆಮಾರಿಗಳ ಆಯೋಗ ರಚನೆ ಮಾಡಿದೆ ಅದೇ ಮಾದರಿಯಲ್ಲಿ ಎಸ್.ಸಿ/ಎಸ್.ಟಿ ಅಲೆಮಾರಿ ಸಮುದಾಯಗಳ ಆಯೋಗದ ರಚನೆ ಮಾಡಿ ಸಮುದಾಯಗಳ ಸ್ಥಿತಿಗತಿಗಳನ್ನು ಅರಿತು ಕನಿಷ್ಠ ಎಸ್.ಸಿ/ಎಸ್.ಟಿ ಅಲೆಮಾರಿ ಸಮುದಾಯಗಳಿಗೆ 3% ಮೀಸಲಾತಿ ಕಲ್ಪಿಸಿಕೊಡಬೇಕೆಂದು ಈ ಮೂಲಕ ನಮ್ಮ ಎಸ್.ಸಿ/ಎಸ್.ಟಿ ಅಲೆಮಾರಿ ಸಮುದಾಯಗಳ ಪರವಾಗಿ ಆಗ್ರಹಿಸುತ್ತದೆ ಎಂದು ಒಕ್ಕೂಟದ ಆಧರ್ಶಯಲ್ಲಪ್ಪ-ಅಧ್ಯಕ್ಷರು,ಬಿ.ಹೆಚ್.ಮಂಜುನಾಥ್-ಪ್ರಧಾನ ಕಾರ್ಯದರ್ಶಿ (ಸಂ), ಹಾಗೂ ಬಸವರಾಜ ನಾರಾಯಣಕರ-ಖಜಾಂಚಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

“ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು, ರಿಜಿಸ್ಟರ್ ಮತ್ತು ಪಠ್ಯ ಪುಸ್ತಕದ ಅಧ್ಯಯನ ಸಮಿತಿಯನ್ನು ವಜಾ ಮಾಡುವಂತೆ ಮತ್ತು ಹಿಂದುಳಿದ ವರ್ಗದ ಜಾತಿ ನಿಂದನೆ ಕಾಯ್ದೆಯ ಅನುಷ್ಠಾನಗೊಳಿಸಲು ಆಗ್ರಹ” -ಕರ್ನಾಟಕ ರಾಜ್ಯ ಸವಿತಾ ಸಮಾಜದ ವಿವಿಧ ಸಂಘಟನೆಗಳು

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಪ್ರಾಧಿಕಾರ ಮಂಡಳಿಯವರು ಬಿಡಿಎ /ಬಿಸಿಎಚ್ ಎನ್ / ಬಿಸಿಎ/ಬಿಸಿಎಲ್ಎಸ್/ಬಿಸಿಟಿಟಿ/ಬಿಸಿಡಿಎ ಯ ಮೊದಲನೇ ಸೆಮಿಸ್ಟ‌ರ್ , ಕನ್ನಡ ಭಾಷಾ ಪಠ್ಯ ಪುಸ್ತಕ ವಾಣಿಜ್ಯ ವಿಶ್ಲೇಷಣಾ ಸಂಪದ ೧ ( ಆಧುನಿಕ ಕನ್ನಡ ಸಾಹಿತ್ಯ) ಈ ಪುಸ್ತಕದ ರೂಪದಲ್ಲಿ ಕಥಾ ಭಾಗದ 2 ರ ಕುರುಡು ಕಾಂಚಾಣ ಪಠ್ಯದಲ್ಲಿ ಸವಿತಾ ಸಮುದಾಯದ ಜಾತಿ ನಿಂದನೆಯ ಪದವನ್ನು ( ಸರ್ಕಾರ ಜಾತಿ ಪದವನ್ನು ತೆಗೆದು ಆದೇಶ ಮಾಡಿರುವ ಪದ ) ಮತ್ತು ಅವಮಾನಿಸುವ ವಿವರಣೆಯನ್ನು ಮುದ್ರಣ ಮಾಡಿ ಸಂಬಂಧಪಟ್ಟ ವಿಧ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ. ಇದರಿಂದ ಸವಿತಾ ಸಮುದಾಯಕ್ಕೆ ಮತ್ತು ವೃತ್ತಿ ಮಾಡುವ ಕ್ಷೌರಿಕರಿಗೆ ಅತೀವವಾದ ಮಾನಸಿಕ ನೋವು ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ. ಸಂವಿಧಾನದಲ್ಲಿ ಎಲ್ಲಾ ಸಮುದಾಯದವರಿಗೆ ಗೌರವ ನೀಡಬೇಕು ಎಂಬ ನಿಯಮ ಇದೆ. ಇದರನ್ವಯ ಸವಿತಾ ಸಮುದಾಯದ ಜಾತಿ ನಿಂದನ ಪದವನ್ನು ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರದ ಆದೇಶ ಸಂಖ್ಯೆ ಹಿಂವಕ 78 ಬಿಸಿಎ 2016 ದಿನಾಂಕ 28- 06-2016 ರ ಪ್ರಕಾರ ಜಾತಿ ಕಲಂನಲ್ಲಿ ತೆಗೆದಿರುತ್ತಾರೆ.

ಸರ್ಕಾರ ಆ ಜಾತಿ ಪದವನ್ನು ತೆಗೆದಿದ್ದರೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ವರು ಈ ಪದವನ್ನು ಕ್ಷೌರಿಕ ವೃತ್ತಿ ಮಾಡುವವರಿಗೆ ಉದ್ದೇಶ ಪೂರ್ವಕವಾಗಿ ನಮ್ಮ ಸಮಾಜದ ನಿಷೇಧಿತ ಪದವನ್ನು ಮುದ್ರಿಸಿ ವಿಧ್ಯಾರ್ಥಿಗಳಿಗೆ ಬೋಧನೆ ಮಾಡಿರುವುದು ಸರ್ಕಾರದ ಆದೇಶ ಉಲ್ಲಂಘನೆ ಮಾಡಿರುತ್ತಾರೆ. ಈ ಪಠ್ಯವನ್ನು ಓದುವಾಗ ಉದ್ದೇಶ ಪೂರ್ವಕವಾಗಿ 18 ಬಾರಿ ಕ್ಷೌರಿಕನನ್ನು ಜಾತಿ ನಿಂದನೆಯ ಪದವನ್ನು ಬಳಸಿ ವಿದ್ಯಾರ್ಥಿಗೆ ಬೋಧನೆ ಮಾಡಿದ್ದಾರೆ. ಇಂತಹ ಪದವನ್ನು ಬಳಸಿ ಶಿಕ್ಷಕರು ಉಚ್ಛಾರಣೆ ಮಾಡುವಾಗ ನಮ್ಮ ಸಮುದಾಯದ ವಿದ್ಯಾರ್ಥಿಗೆ ಯಾವ ರೀತಿ ಖಿನ್ನತೆ ಮುಜುಗರ ಮನಸ್ಸಿಗೆ ಘಾಸಿ ಆಗಬಾರದು. ಈ ರೀತಿ ಕ್ಷೌರಿಕ ವೃತ್ತಿ ಮಾಡುವವನಿಗೆ ಈ ರೀತಿ ಸರ್ಕಾರದ ಗೆಜೆಟ್ ನಲ್ಲಿ ತೆಗೆದಿರುವ ಪದವನ್ನು ಬಹಿರಂಗವಾಗಿ ಬಳಸಿ ಮುಂದಿನ ವಿಧ್ಯಾರ್ಥಿಗಳು ಈ ನಾಗರಿಕ ಪ್ರಪಂಚದಲ್ಲಿ ನಮ್ಮ ಸಮುದಾಯವನ್ನು ಕೀಳಾಗಿ ನೋಡುವ ರೀತಿ ಮೂಡಿಸಿದ್ದಾರೆ. ಶೈಕ್ಷಣಿಕ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಶಿಕ್ಷಕರು, ವಿದ್ಯಾರ್ಥಿಗಳನ್ನು ಸಾಂವಿಧಾನಿಕ ರೂಪದಲ್ಲಿ ಬೆಳೆಸಬೇಕು. ಆದರೆ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧಿಕಾರದವರು ಕ್ಷೌರಿಕ ವೃತ್ತಿಯನ್ನು ಬಹಳ ನೀಚವಾಗಿ ತೋರಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಸಂವಿಧಾನದ ವಿರುದ್ಧ ಒಂದು ಜಾತಿಯ ವ್ಯಕ್ತಿಯನ್ನು ಮೈಲಿಗೆ ಮುಖದವನನ್ನು, ಹಜಾಮ, ಹಜಾಮನು, ಹಜಾಮರು, ಹಜಾಮರ, ಹಜಾಮನಿಗೆ, ಹಜಾಮನ, ಹಜಾಮನೇ, ಕ್ಷೌರಿಕ ತೆರನಾದ ಮೋಸ, ತಲೆಪ್ರತಿಷ್ಠೆಯ ಹಜಾಮರು, ಹೆಚ್ಚಾಗಿ ಮಾತಾನಾಡುತ್ತಾನೆ, ಕ್ಷೌರಿಕನ ನಡತೆ ಎಂದು ಬಹಳ ಹೀನಾಯವಾಗಿ ಕ್ಷೌರಿಕ ವ್ಯತ್ತಿಯನ್ನು ಬಳಸಿ ಈ ವೃತ್ತಿಯನ್ನು ಮಾಡುವವರಿಗೆ ಘಾಸಿ ಮಾಡಿದ್ದಾರೆ. ಈ ಪಠ್ಯವನ್ನು ಪ್ರಕಟ ಮಾಡುವ ಮುನ್ನ ಒಬ್ಬ ಕ್ಷೌರಿಕ ಅಥವಾ ಹೆಸರು ಹೇಳಿ ಕಥೆಯನ್ನು ಬರೆಯಬಹುದಿತ್ತು. ಆದರೆ ಈ ಪಠ್ಯವನ್ನು ಅತಿ ಹಿಂದುಳಿದ ವರ್ಗದ ಜಾತಿಯನ್ನು ಅವಮಾನಿಸಿಲೇಂದು 18 ಬಾರಿ ಬಳಸಿ ಮತ್ತು ವೃತ್ತಿಯನ್ನು ಅವಮಾನಿಸಲು ಈ ಪಠ್ಯವನ್ನು ಮುದ್ರಣ ಮಾಡಿ ವಿಧ್ಯಾರ್ಥಿಗಳಿಗೆ ಕ್ಷೌರಿಕ ವೃತ್ತಿಯನ್ನು ಕೀಳಾಗಿ ಕಾಣಲು ಪ್ರೇರಣೆ ಮಾಡಿದ್ದಾರೆ, ಜಾತಿ ನಿಂದನೆಯನ್ನು ಹೀಗೆ ಮುಂದುವರೆದರೆ ನಮ್ಮ ಸವಿತಾ ಸಮಾಜದ ಶಿಕ್ಷಣದ ಮೂಲಕ ಮುಂದಿನ ಪೀಳಿಗೆಗೆ ಜಾತಿ ನಿಂದನೆಯ ಪದವನ್ನು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದಲ್ಲಿ ವಿಷ ಬೀಜವನ್ನು ಬಿತ್ತಿ ಕ್ಷೌರಿಕ ವೃತ್ತಿಯನ್ನು ಕೇವಲವಾಗಿ • ನೋಡುವಂತಹ ವಾತಾವರಣ ನಿರ್ಮಾಣವಾಗುತ್ತದೆ.

ಇದೇ ರೀತಿ ಜನಸಂಖ್ಯೆ ಹೆಚ್ಚಿರುವ ಸಮುದಾಯವನ್ನು ಅವಮಾನ, ಜಾತಿ ನಿಂದನೆ ಪದ, ಕಿರಿಕಿರಿ : ಉದ್ದೇಶಪೂರ್ವಕವಾಗಿ ಅತಿ ಅಮಾನುಷವಾಗಿ ಬರೆದು ವುಸ್ತಕ ಬಿಡುಗಡೆ ಮಾಡಿದರೆ, ಆ ಸಮೂದಯ ಸುಮ್ಮನ್ನೆ ಇರುತ್ತಿತಾಗಿ ಆ ಸಮೂದಯ ಹೋರಟ ಮಾಡುವ ಮುನ್ನವೇ * ಸರ್ಕಾರವೇ ಸುಮೋಟೊ ಕೇಸ್ ದಾಖಲು ಮಾಡುತ್ತಿದ್ದರು . ನಮ್ಮಂತಹ ಚಿಕ್ಕ ಸಮುದಾಯಕ್ಕೆ ಅಂತಹ ಸುಮೋಟೊ ಕೇಸ್ ಹಾಕಲು ಸರ್ಕಾರ ಏಕೆ ಮುಂದಾಗುವುದಿಲ್ಲ?. ಪ್ರತಿದಿನ ಸರ್ವಾಜನಿಕರು ಬೈಗುಳವಾಗಿ ನಮ್ಮ ಜಾತಿಯ ಪದವನ್ನು ಉಪಯೋಗಿಸುತ್ತಿದ್ದರು ರಾಜ್ಯದಲ್ಲಿ ಆದಿಕಾರಕ್ಕೆ ಬಂದಂತಹ ಎಲ್ಲಾ ಸರಕಾರಗಳು ಕಣ್ಮುಚಿ ಕೂಳಿತಿರುವುದು ನಿಜಕ್ಕೂ ದುರಂತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೌರವಯುತವಾಗಿ ಬದಕಲು ಸರಕಾರವನ್ನು ಅಂಗಲಾಚುತ್ತಿರುವುದು ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಮಾರಕ ನಮ್ಮ ಸಮೂದಯ ನಮಗೆ ಹಣ ಕೂಡಿ, ಜಾಗ ಕೂಡಿ ಎಂದು ಕೇಳುತ್ತಿಲ್ಲ. ಮೆಲ್ಮಾತಿಯ ವ್ಯವಸ್ಥೆಯಡಿ ಬದಕುತ್ತಿರುವ ನಾವು ನಮ್ಮ ಸಮೂದಯದ ಜನರನ್ನು ಹೆಸರಿಸದೇ ಕರೆಯುವುದಕ್ಕೂ ಜನ ಹಿಂಜರೆಯುತ್ತಿದ್ದಾರೆ. ಬೇರೆ ಊರಿನಿಂದ ಹಳ್ಳಿಗೆ ನಮ್ಮ ಸಮೂದಯದ ಮನೆಯವನ ಅಡ್ರಸ್ ಕೇಳಿದಾಗ, ಆ ಊರಿನ ಮೇಲ್ಮಾತಿಯ ವ್ಯಕ್ತಿ ಹೇಳುವುದು ಹಜಾಮರ ಮನೆನಾ?. ನೆನೆಯಬಾರದವರ ಮನೆನಾ? ಎಂದು ಕೇಳಿದಾಗ ನಾವು ಎನೂ ಮಾಡಬೇಕು?.ಅತನನ್ನು ನಾವು ಮೇಲ್ಮಾತಿಯವರೇ ಹೆಚ್ಚಾಗಿರುವ ಜಾಗದಲ್ಲಿ ಎಕೆ ಹೀಗೆ ಹೇಳುತ್ತಿರಾ ಎಂದು ಕೇಳುವ ಧೈರ್ಯವು ನಮಗೆ ಇರುವುದಿಲ್ಲ. ಇಂತಹ ಹಳ್ಳಿಗಳಲ್ಲಿ ನಮ್ಮ ಸವಿತಾ ಸಮಾಜದವರು ಯಾವ ಸ್ಥಿತಿಯಲ್ಲಿ ಬಾಳುತ್ತಿದ್ದರೆ ಎಂದು ಅರ್ಥ ಮಾಡಿಕೊಳ್ಳಿ1. ಊರಿನಲ್ಲಿ ಸವರ್ಣಿಯರ ಮತ್ತು ಪರಿಶಿಷ್ಟ ಜಾತಿಯವರ ನಡುವೆ ಅಡಕೆ ಕತ್ತರಿಯಾಗಿ ನಾವು ಜೀವನ ಮಾಡುತ್ತಿದ್ದೆವೆ. ಇದಕ್ಕೆಲ್ಲ ಪರಿಹಾರ ಒಂದೇ ಸರಕಾರ ಜಾತಿ ನಿಂದನೆ ಕಾಯ್ದೆ / ಸವಿತಾ ಸಮೂದಯದ ದೌರ್ಜನ್ಯ ಕಾಯ್ದೆಯನ್ನು ಜಾರಿಗೆ ತರಬೇಕು

ಇಂತಹ ಪ್ರಜಾಪ್ರಭುತ್ವದಲ್ಲಿ ನಮ್ಮಂತಹ ಚಿಕ್ಕ ಸಮುದಾಯ ಸಮಾನಾಗಿ ಬದಕಲು ನಾಗರೀಕ ಪ್ರಪಂಚದಲ್ಲಿ ವ್ಯವಸ್ಥೆ ಮಾಡಿಕೊಡುವುದು ಸರ್ಕಾರದ ಆದ್ಯ ಕರ್ತ್ಯವ್ಯ ಅಲ್ಲವೇ?. ಅದನ್ನೆ ನಮ್ಮ ಸಮಾಜ ನಿರಂತರವಾಗಿ ಸರ್ಕಾರವನ್ನು ಅಗ್ರಹಿಸುತ್ತಿರುವುದು?. ಈಗಾಗಲೇ ಸವಿತಾ ಸಮಾಜ ನಿರಂತರ ಹೋರಟದಿಂದ ಹಿಂದುಳಿದ ವರ್ಗದ ಆಯೋಗ ಸರ್ಕಾರ ಕ್ಕೆ ಸಲ್ಲಿಸಿರವ ಪ್ರತ್ಯಕ ವರದಿಯಾದ ಹಿಂದುಳಿದ ವರ್ಗಗಳ ಜಾತಿ ನಿಂದನೆ ನಿಯಂತ್ರಣ ಶಿರ್ಷಿಕೆ ಆಡಿ ನೀಡಿರುವ ವರದಿಯನ್ನು ಜಾರಿಗೊಳಿಸಿದಾಗ ಇಂತಹ ವಿಷಯಗಳಿಗೆ ತಾನಾಗೀಯ ಕಡಿವಾಣ ಬೀಳುತ್ತದೆ.

ಭಾರತೀಯ ನ್ಯಾಯ ಸಂಹಿತೆಯ ಕಲಂ 356 ರ 1,2,3,4 ರ ಪ್ರಕಾರ ಅವಮಾನ ಮತ್ತು ಕಿರಿಕಿರಿ ಮತ್ತು ಭಾರತೀಯ ನ್ಯಾಯ ಸಂಹಿತೆ 352 ರ ಪ್ರಕಾರ ಯಾರಾದರೂ ಉದ್ದೇಶಪೂರ್ವಕವಾಗಿ ಯಾವುದೇ ರೀತಿಯಲ್ಲಿ ಅವಮಾನಿಸಿದರೆ ಮತ್ತು ಆ ಮೂಲಕ ಯಾವುದೇ ವ್ಯಕ್ತಿಗೆ ಪ್ರಚೋದನೆಯನ್ನು ನೀಡಿದರೆ, ಅಂತಹ ಪ್ರಚೋದನೆಯು ಸಾರ್ವಜನಿಕ ಶಾಂತಿಯನ್ನು ಮುರಿಯಲು ಅಥವಾ ಇನ್ನಾವುದೇ ಅಪರಾಧವನ್ನು ಮಾಡಲು ಕಾರಣವಾಗಬಹುದು ಎಂದು ಉದ್ದೇಶಿಸಿ ಅಥವಾ ತಿಳಿದಿದ್ದರೆ, ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ಶಿಕ್ಷಿಸಬಹುದಾಗಿದೆ.

ಈ ವಿಚಾರಕ್ಕೆ ಸಂಬಂದಿಸದಂತೆ ನಮ್ಮ ಸಮಾಜ ದಿನಾಂಕ 19-10-2024 ರಂದು ಹಲಸೂರು ಪೋಲಿಸ್ ಠಾಣೆ ದೂರು ನೀಡಿದವ ಮತ್ತು ಕೂಡಲೇ ಭಾರತೀಯ ನ್ಯಾಯ ಸಂಹಿತೆಯ ಕಲಂ 356 ರ 1,2,3,4 ರ ಪ್ರಕಾರ ಮತ್ತು ಭಾರತೀಯ ನ್ಯಾಯ ಸಂಹಿತೆ 352 ರ ಪ್ರಕಾರ ಈ ಪುಸ್ತಕ ಬಿಡುಗಡೆ ಮಾಡಲು ಕಾರಣರಾದ ಬೆಂಗಳೂರು ನಗರ ವಿಶ್ವವಿದ್ಯಾಲಯ ದ ಕುಲಪತಿಗಳು, ರಿಜಿಸ್ಟ್ರಾರ್, ಪ್ರಧಾನ ಸಂಪಾದಕರಾದ ಡಾ. ಎಂ.ಜಿ.ಮಂಜುನಾಥ್ ಸಂಪಾದಕರು ಡಾ. ರುದ್ರೇಶ ಅದರಂಗಿ, ಡಾ. ಶೀಲವಂತ ಸಂಜೀವಕುಮಾರ್, ಡಾ.ಪ್ರೇಮಾವತಿ ಎಸ್.ಕೆ ಡಾ.ವಾದಿರಾಜ, ಸಲಹಾ ಸಮಿತಿ ಯವರಾದ ಡಾ. ಎಸ್. ಎಲ್ ಮಂಜುನಾಥ, ಡಾ. ಪೂರ್ಣಿಮ, ಡಾ.ಸುವರ್ಣ ಸಂಗಣ್ಣ ಹುಡೇದ, ಪೂ ಬೋಮ್ಮೆ ಗೌಡ,ಡಾ ಮನೋನ್ಮನಿ, ಡಾ. ಪಿ. ಬೆಟ್ಟೆಗೌಡ, ಡಾ. ಎನ್. ಆರ್ ಚಂದ್ರಗೌಡ ರವರು ಇವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರು ನೀಡಿರುತ್ತೇವೆ.

ಕಿರಿಕಿರಿ, ಜಾತಿ ನಿಂದನೆ, ಸರ್ಕಾರದ ಆದೇಶ ನಿಂದನೆ, ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಒಂದು ಜಾತಿಯನ್ನು ಕೀಳಾಗಿ ನೋಡಲು ಪ್ರಚೋದನೆ ಆಡಿಯಲ್ಲಿ FIR ಮಾಡಿ ತಪಿಸ್ಥರ ವಿರುದ್ಧ ಶಿಕ್ಷೆಗೊಳಿಸಬೇಕು ಮತ್ತು ಇಂತಹ ಪ್ರಕರಣ ರಾಜ್ಯದ ಉದ್ದಗಲಕ್ಕು ನೆಡೆಯುತ್ತಿರುವುದರಿಂದ ಕೂಡಲೇ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ರವರು ಜಾತಿ ನಿಯಂತ್ರಣ ಕಾಯ್ದೆ ಶಿರ್ಷಿಕೆ ಆಡಿ ನೀಡಿರುವ ವರದಿಯನ್ನು ಜಾರಿಗೊಳಿಸಿ ಸವಿತಾ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಈ ಪತ್ರಿಕಾಗೋಷ್ಟಿ ಮುಖಾಂತರ ಅಗ್ರಹ ಮಾಡುತ್ತಿದ್ದೇವೆ ಎಂದು ಕರ್ನಾಟಕ ಸವಿತಾ ಕ್ಷೌರಿಕರ ಹಿತ ರಕ್ಷಣಾ ವೇದಿಕೆ ( ರಿ )ಯ
ಸಿ ಕೃಷ್ಣಮೂರ್ತಿ, ( ಕಮ್ಮನಹಳ್ಳಿ )-ರಾಜ್ಯಾಧ್ಯಕ್ಷರು
ಎಸ್.ವೇಣುಗೋಪಾಲ್ ರಾಜ್ಯ ಕಾರ್ಯಧ್ಯಕ್ಷರು,
ಸಿ. ಬಾಲಕೃಷ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ,
ಮಹೇಂದ್ರ, ಬೆಂಗಳೂರು ನಗರ ಅಧ್ಯಕ್ಷರು, ಮಾವಳ್ಳಿ ಕೃಷ್ಣ,ರಾಜ್ಯ ಉಪದ್ಯಕ್ಷರು ಹಾಗೂ ಮೋಹನ್ ಬೆಂಗಳೂರು ಉಪಾಧ್ಯಕ್ಷರು ಜಂಟಿಯಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936