ಕರ್ನಾಟಕ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ನಿರ್ದೇಶಕರಾದ ಡಾ. ಅಲೋಕ್ ಮೋಹನ್ ಅವರನ್ನು ಭೇಟಿ ಮಾಡಿ ಭಾರತ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಹಾಗೂ ಜನತಾದಳ(ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರಾದ ಸನ್ಮಾನ ಶ್ರೀ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಅಸಭ್ಯ ಮತ್ತು ಅವಾಚ್ಯ ಶಬ್ದಗಳನ್ನು ಬಳಸಿದ ಐಪಿಎಸ್ ಅಧಿಕಾರಿ ಹಾಗೂ ಎಸ್ಐಟಿ ಮುಖ್ಯಸ್ಥರಾದ ಎಂ ಚಂದ್ರಶೇಖರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಪಕ್ಷದ ವತಿಯಿಂದ ಮನವಿ ಸಲ್ಲಿಸಿದರು.
ಈ ತಿಂಗಳ ಒಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ನೇರವೇತನ ಪೌರಕಾರ್ಮಿಕರಿಗೆ “ಖಾಯಂ ಭಾಗ್ಯ” ಕೊಟ್ಟು, ಖಾಯಂ ಪಟ್ಟಿ ಬಿಡುಗಡೆ ಮಾಡಲೇಬೇಕೆಂದು ಒತ್ತಾಯಿಸುತ್ತಿದ್ದೇವೆ ಹಾಗೂ ರಾಜ್ಯಾದ್ಯಂತ ಕೆಲವೊಂದು ಜಿಲ್ಲೆಗಳಲ್ಲಿ ಆದೇಶಗಳನ್ನು ಜಾರಿಗೊಳಿಸಿರುವುದಿಲ್ಲ. ಈ ಕೂಡಲೇ ಆದೇಶಗಳನ್ನು ಜಾರಿಗೊಳಿಸಬೇಕೆಂದು, ತಮ್ಮ ಪತ್ರಿಕೆ ಹಾಗೂ ಮಾಧ್ಯಮದ ಮುಖಾಂತರ ಸರ್ಕಾರ ಹಾಗೂ ಪಾಲಿಕೆಯನ್ನು ಒತ್ತಾಯಿಸುತ್ತಿದ್ದೇವೆ.”
ಈ ಮೇಲ್ಕಾಣಿಸಿದ ಮಹಾಸಂಘದ ವತಿಯಿಂದ ಹಲವಾರು ಹೋರಾಟಗಳ ಫಲವೇ ರಾಜ್ಯಾದ್ಯಂತ 24500 ಪೌರಕಾರ್ಮಿಕರನ್ನು ಖಾಯಂ ಮಾಡುವುದಾಗಿ ಹಿಂದಿನ ಸರಕಾರ ಹಾಗೂ ಇಂದಿನ ಸರಕಾರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದರು ಸಹ ಇಲ್ಲಿಯವರವಿಗೂ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇರವೇತನ ಪೌರಕಾರ್ಮಿಕರ ಖಾಯಂ ಪಟ್ಟಿ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದು ದುರ್ದೈವದ ಸಂಗತಿ, ಅದೇ ರೀತಿ ರಾಜ್ಯದ ಇನ್ನೂ ಕೆಲವೊಂದು ಜಿಲ್ಲೆಗಳಲ್ಲಿ (ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ) 2018ರಲ್ಲೇ ಗುತ್ತಿಗೆ ಪದ್ದತಿ ರದ್ದಾಗಿದ್ದರೂ, ಸಹ ಇಂದಿಗೂ ಗುತ್ತಿಗೆ ಪದ್ದತಿಯಲ್ಲೇ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವುದು ಗಮನಾರ್ಹ ವಿಷಯವಾಗಿರುತ್ತದೆ.
ಆದ್ದರಿಂದ ಈ ಕೆಳಕಂಡ ಆದೇಶಗಳನ್ನು ಜಾರಿಗೊಳಿಸದೆ ತಡ ಮಾಡುತ್ತಿರುವ ಸರ್ಕಾರ ಹಾಗೂ ನಗರಪಾಲಿಕೆಗಳಿಗೆ ಈ ಕೂಡಲೇ ಜಾರಿಗೊಳಿಸಲು ಒತ್ತಾಯಿಸುತ್ತಿದ್ದೇವೆ.
1) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈಗಾಗಲೇ ಘೋಷಿಸಿದಂತೆ, ಈ ತಿಂಗಳ ಒಳಗಾಗಿ ಖಾಯಂ ಪಟ್ಟಿ (ಮೊದಲನೇ ಹಂತ 3673 ಹಾಗೂ ಎರಡನೇ ಹಂತ 11307 ಒಟ್ಟು 14980) ಬಿಡುಗಡೆ ಮಾಡಲೇಬೇಕು.
2) ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ (ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ) ಇನ್ನೂ ಗುತ್ತಿಗೆ ಪದ್ದತಿ ಮುಂದುವರೆಯುತ್ತಿದ್ದು, ಈ ಕೂಡಲೇ ಗುತ್ತಿಗೆ ಪದ್ದತಿ ರದ್ದು ಮಾಡಿ ಖಾಯಂ ಮಾಡಬೇಕು.
3) ಬೆಂಗಳೂರು ಮಹಾನಗರ ಪಾಲಿಕೆಯೂ ಸೇರಿದಂತೆ ರಾಜ್ಯಾದ್ಯಂತ ಕಸಸಾಗಾಣಿಕೆ ಲಾರಿ ಚಾಲಕರು, ಆಟೋ ಚಾಲಕರು, ಹೆಲ್ಪರ್‌ಗಳು ಹಾಗೂ ಕ್ಲೀನರ್‌ಗಳನ್ನು ಗುತ್ತಿಗೆ ಪದ್ದತಿಯಿಂದ ವಿಮುಕ್ತಿಗೊಳಿಸಿ ನೇರವೇತನ ಅಡಿಯಲ್ಲಿ ನೇಮಿಸಿಕೊಳ್ಳಬೇಕು.
4) ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಒಳಚರಂಡಿ ಮಂಡಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರನ್ನು ಖಾಯಂ ಮಾಡಲೇಬೇಕು.
5) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 60 ವರ್ಷ ತುಂಬಿದ ನೇರವೇತನ ಪೌರಕಾರ್ಮಿಕರನ್ನು ಕೆಲಸದಿಂದ ನಿಲ್ಲಿಸಿದ್ದು, ನಿವೃತ್ತಿ ವೇತನ ಕೊಡಲು ಆದೇಶವಾಗಿದ್ದರೂ ಸಹ ಇದುವರೆಗೂ ಬಿಡುಗಡೆ ಮಾಡಿರುವುದಿಲ್ಲ, ಈ ಕೂಡಲೇ ನಿವೃತ್ತಿ ವೇತನ ಬಿಡುಗಡೆ ಮಾಡಬೇಕು. ಹಾಗೆ ನಿವೃತ್ತಿಯಾದ ಹಾಗೂ ಮರಣ ಹೊಂದಿದ ಕುಟುಂಬದ ಅವಲಂಬಿತರಿಗೆ ಒಂದು ಹುದ್ದೆ ನೀಡಬೇಕು.
6) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛತಾ ಕಿರಿಯ ಆರೋಗ್ಯ ಪರಿವೀಕ್ಷಕರುಗಳನ್ನು ಪಾಲಿಕೆಯೇ ನೇರವೇತನ ಅಡಿಯಲ್ಲಿ ನೇಮಿಸಿಕೊಳ್ಳಬೇಕು.
ಈ ಎಲ್ಲವು ಆದೇಶಗಳಾಗಿದ್ದು, ಈ ಕೂಡಲೇ ಜಾರಿಗೊಳಿಸಲು ಮತ್ತೊಮ್ಮೆ ಸರ್ಕಾರಕ್ಕೆ ಹಾಗೂ ಪಾಲಿಕೆಗೆ ಒತ್ತಾಯಿಸುತ್ತಿದ್ದೇವೆ. “ಇದನ್ನು ತಮ್ಮ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಪ್ರಕಟಿಸಿ ತಮ್ಮ ಸಂಪೂರ್ಣ ಬೆಂಬಲ ಈ ಬಡ ಶ್ರಾಮಿಕ ವರ್ಗದವರಿಗೆ ನೀಡಬೇಕೆಂದು ತಮ್ಮಲ್ಲಿ ಕೋರುತ್ತೇವೆ.” ಎಂದು ಮಹಾಸಂಘದ ವತಿಯಿಂದ ಶ್ರೀನಾರಾಯಣ (ಮೈಸೂರು),ಬಿ.ಎಂ.ಸುರೇಶ್ ಬಾಬು ಹಾಗೂ ಮುಖಂಡರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಶನ್ ಹೈಕೋರ್ಟ್ ಎತ್ತಿ ಹಿಡಿದಿದೆ. ಹೀಗೆ ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ತೀರ್ಪಿನಲ್ಲಿ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ಕಪಾಳ ಮೋಕ್ಷ ಮಾಡಿದೆ ಎಂದು *ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು ಮತ್ತು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ* ಅವರು ಜೆಡಿಎಸ್ ಪಕ್ಷದ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯ ವೇಳೆ ಹೇಳಿಕೆ ನೀಡಿದರು.
ಅಂದ್ರೆ ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ತಮ್ಮ ಕುಟುಂಬಕ್ಕೆ ನೆರವಾಗುವ ರೀತಿಯಲ್ಲಿ ಮುಖ್ಯಂತ್ರಿಯಾಗಿ ಪ್ರಭಾವದ ದುರ್ಬಳಕೆ ಮಾಡಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ತನ್ನ ಆದೇಶದಲ್ಲಿ ತಿಳಿಸಿದೆ. ಸಿಎಂ ಶ್ರೀಮತಿ ಅವರ ಸೈಟು ಪರ ಪ್ರತಿಬಾರಿಯೂ ಮೂಡಾ ತೀರ್ಮಾನ ಕೈಗೊಳ್ಳುವಾಗ ಸಿದ್ದರಾಮಯ್ಯ ಪ್ರಭಾವಿ ಹುದ್ದೆಯಲ್ಲಿ ಇದ್ದರು.ಈ ಹುದ್ದೆಯ ಪ್ರಭಾವದಿಂದ ಸಿಎಂ ಶ್ರೀಮತಿ ಅವರಿಗೆ ಎರಡು ಸೈಟುಗಳು ಪರಿಹಾರವಾಗಿ ಸಿಗುವ ಬದಲು 14ಸೈಟುಗಳು ಸಿಕ್ಕಿವೆ ಎಂದು ನ್ಯಾಯಾಲಯ ಹೇಳಿದೆ ಎಂದು ತಿಳಿಸಿದರು.
ಅಂದ್ರೆ ಹೈಕೋರ್ಟ್ ಸಿದ್ದರಾಮಯ್ಯ ಅವರಿಗೆ ಬಹುತೇಕ ಛೀಮಾರಿ ಹಾಕಿದೆ. ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದು ಸಿಎಂ ಹೇಳಿದರೂ , 62ಕೋಟಿ ರೂಪಾಯಿ ಪರಿಹಾರ ಕೇಳಿದ್ದೇಕೆ? ಎನ್ನುವುದು ನ್ಯಾಯಾಲಯ ಪ್ರಶ್ನೆ. ಹಾಗೆ ಇದು ನಮ್ಮೆಲ್ಲರ ಪ್ರಶ್ನೆ ಕೂಡ ಎಂದು ಈ ವೇಳೆ ತಿಳಿಸಿದರು.
ಹೀಗಾಗಿ..ಸಿದ್ದರಾಮಯ್ಯ ರಾಜೀನಾಮೆ ಕೊಡದೆ ಬೇರೆ ದಾರಿ ಇಲ್ಲ. ತನಿಖೆಗೆ ಹಸಿರು ನಿಶಾನೆ ಕೊಡುವ ಭರಾಟೆ ಯಲ್ಲಿ ನ್ಯಾಯಾಲಯ ಈ ಮೂಡಾ ಪ್ರಕರಣದಲ್ಲಿ ಸಿಎಂ ಭಾಗಿ ಆಗಿರುವುದನ್ನು ಖಚಿತಪಡಿಸಿದ್ದು, ಅವರು ರಾಜೀನಾಮೆ ಕೊಡಲೇ ಬೇಕು. ಆರೋಪಕ್ಕೆ ಗುರಿಯಾದ ವ್ಯಕ್ತಿ ಪ್ರಭಾವಿ ಹುದ್ದೆಯಲ್ಲಿ ಇದ್ದರೆ ನಿಷ್ಪಕ್ಸಪಾತವಾದ ತನಿಖೆ ಆಗುವುದಿಲ್ಲ ಆದ್ದರಿಂದ ನಿಷ್ಪಕ್ಷಾತದಿಂದ ತನಿಖೆ ಆಗಬೇಕಾದರೆ ಸಿಎಂ ರಾಜೀನಾಮೆ ನೀಡಲೇಬೇಕು. ಇನ್ನೂ ಅತ್ಯಂತ ಮುಖ್ಯ ಅಂದ್ರೆ ರಾಜ್ಯದ ಪೊಲೀಸರು ಸಿಎಂ ಕೈ ಕೆಳಗೆ ಬರುವುದರಿಂದ ಪೊಲೀಸ್ ತನಿಖೆಯಿಂದ ನ್ಯಾಯ ಸಿಗುವುದು ಅನುಮಾನ. ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರ ಇದೆ ಮತ್ತು ಈ ಆದೇಶವನ್ನು ಅನುಷ್ಠಾನ ಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ದಿನಾಂಕ 01.08.2024 ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದು ಕಳೆದ 30 ವರ್ಷಗಳಿಂದ ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಅಲ್ಲದೇ ಇದು ಮೀಸಲಾತಿ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದೆ. ಈ ಹಿಂದೆ ಈ ವಿಚಾರದಲ್ಲಿ ಪರಸ್ಪರ ವಿರುದ್ಧವಾದ ತೀರ್ಪುಗಳನ್ನು ನ್ಯಾಯಾಲಯಗಳು ನೀಡಿದ್ದವು. ಈಗ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠವು ಈ ವಿಚಾರದಲ್ಲಿದ್ದ ಗೊಂದಲವನ್ನು ಪರಿಹರಿಸಿದೆ. ಒಳಮೀಸಲಾತಿ ನೀಡಿಕೆಯು ಸಂವಿಧಾನ ಕಲ್ಪಿಸಿರುವ ಸಮಾನತೆಯ ಹಕ್ಕನ್ನು ಉಲ್ಲಂಘಿಸುವುದಿಲ್ಲ. ವಾಸ್ತವಿಕವಾಗಿ ಸಮಾನತೆಯನ್ನು ಹೆಚ್ಚಿಸಲು ಅಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಬದಲಿಗೆ ವಾಸ್ತವಿಕವಾಗಿ ಸಮಾನತೆಯನ್ನು ಹೆಚ್ಚಿಸಲು ಅಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಪರಿಶಿಷ್ಟ ಜಾತಿಯ ಸಮುದಾಯಗಳು ಸಮರೂಪದಲ್ಲಿ ಮತ್ತು ಅವುಗಳಿಗೆ ಅಗೋಚರವಾದ ಏಕರೂಪವೂ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಜಾತಿಗಳ ಒಳಗೆ ಇರುವ ಕೆಲವು ಉಪ ಜಾತಿಗಳಿಗೆ ಮೀಸಲಾತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಇಂತಹ ಉಪಜಾತಿಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಹಿಂದುಳಿದಿರುವಿಕೆಯ ಆಧಾರದಲ್ಲಿ ಮೀಸಲಾತಿ ನೀಡಿದರೆ ಈ ತನಕ ಮೀಸಲಾತಿಯ ಲಾಭ ಪಡೆದುಕೊಳ್ಳಲು ಸಾಧ್ಯವಾಗದ ಸಮುದಾಯಗಳಿಗೆ ಕೂಡ ಪ್ರಯೋಜನ ದೊರೆಯಬಹುದು.
ಪಂಜಾಬ್, ಹರಿಯಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ರಾಜ್ಯಗಳು ಒಳಮೀಸಲಾತಿ ನೀಡಲು ಈ ಹಿಂದೆ ಪ್ರಯತ್ನಿಸಿದ್ದವು. ಆದರೆ ಈ ಪ್ರಯತ್ನಗಳಿಗೆ ನ್ಯಾಯಾಂಗವೇ ತಡೆಯೊಡ್ಡಿತ್ತು. ಒಳಮೀಸಲಾತಿ ಕಲ್ಪಿಸುವುದು ಬಹಳ ಸಾಧ್ಯವಾಗದ ಕೆಲಸ. ಹಾಗಾಗಿ ಈ ಕೆಲಸವನ್ನು ನ್ಯಾಯಯುತವಾಗಿ ಮಾಡಬೇಕು. ಒಳಮೀಸಲಾತಿ ನೀಡಿಕೆಯು ಯಾರದೋ ಇಷ್ಟಾನಿಷ್ಟಗಳನ್ನು ಅವಲಂಬಿಸದೆ, ಗಣನೀಯವಾದ ಮತ್ತು ಪ್ರಮಾಣೀಕರಿಸಬಹುದಾದ ದತ್ತಾಂಶಗಳ ಆಧಾರದಲ್ಲಿ ನಿರ್ಧಾರವಾಗಬೇಕು.
ಇದು ಬಹುದೊಡ್ಡ ಸವಾಲಿನ ಕೆಲಸ. ಪರಿಶಿಷ್ಟ ಜಾತಿಗಳಲ್ಲಿ ನೂರಾರು ಉಪಜಾತಿಗಳಿವೆ. ಒಪ್ಪಿತವಾದ ಮಾನದಂಡಗಳು ಮತ್ತು ವಿಧಾನಗಳ ಮೂಲಕ ತುಲನಾತ್ಮಕವಾಗಿ ಈ ಜಾತಿಗಳ ಹಿಂದುಳಿದಿರುವಿಕೆಯನ್ನು ನಿರ್ಣಯಿಸಬೇಕು.ಈ ಮಾನದಂಡಗಳು ಸರ್ಕಾರದಲ್ಲಿನ ಪ್ರಾತಿನಿಧ್ಯ ಮತ್ತು ಶಿಕ್ಷಣಕ್ಕೆ ಸೀಮಿತವಾಗಿರಬಾರದು.ಸಾಮಾಜಿಕ ಸ್ಥಾನಮಾನವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯವು ಹೇಳಿದೆ. ಒಳಮೀಸಲಾತಿ ನೀಡುವುದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗ್ರಹಿಸಿದ್ದರು. ಆದರೆ ಒಳಮೀಸಲಾತಿ ಕುರಿತು ಇದ್ದ ಗೊಂದಲಗಳಿಗೆ ಸುಪ್ರೀಂಕೋರ್ಟ್ ಈಗ ತೆರೆ ಎಳೆದಿದೆ. ಸುಪ್ರೀಂಕೋರ್ಟ್ ಆದೇಶ ಬಂದು ಒಂದು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರ ಸದರಿ ಆದೇಶವನ್ನು ಅನುಷ್ಠಾನಗೊಳಿಸದೆ ನಿದ್ದೆ ಹೊಡೆಯುತ್ತಿದೆ. ಈ ನಿದ್ದೆ ಹೊಡೆಯುತ್ತಿರುವ ಸರ್ಕಾರವನ್ನು ಬಡಿದೆಬ್ಬಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಸುಪ್ರೀಂ ಕೋರ್ಟ್ ತೀರ್ಪು ಅನ್ವಯ ರಾಜ್ಯ ಸರ್ಕಾರ ತಕ್ಷಣವೇ ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಆಗ್ರಹಿಸಿ, ಹಾಗೂ ಈ ಕೆಳಕಂಡ ಹಕ್ಕೊತ್ತಾಯಗಳು ಈಡೇರಿಕೆಗಾಗಿ ಒತ್ತಾಯಿಸಿ, ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಸೆಪ್ಟೆಂಬರ್ 12, 2024ರ ಗುರುವಾರ, ಬೆಳಗ್ಗೆ 11-00 ಗಂಟೆಗೆ “ಬೃಹತ್ ತಮಟೆ ಚಳುವಳಿ” ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಈ ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಪರ ಇರುವ ದಲಿತ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು, ಬುದ್ದಿಜೀವಿಗಳು, ವಿದ್ಯಾರ್ಥಿಗಳು, ದಸಂಸ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಈ ಮೂಲಕ ರಾಜ್ಯ ಸಮಿತಿ ಕೋರುತ್ತದೆ.
ಹಕ್ಕೊತ್ತಾಯಗಳು
1) ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ದವಾದ ಅಧಿಕಾರವಿದೆ ಎಂದು ಆಗಸ್ಟ್ 01-2024 ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದೆ. ಮತ್ತು ಈ ತೀರ್ಪುನ್ನು ಅನುಷ್ಠಾನ ಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನಗೊಳಿಸಬೇಕು.
2) ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನವಾದ ಜೂನ್ 09 ನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು. ಮತ್ತು ಪ್ರೊ.ಬಿ.ಕೃಷ್ಣಪ್ಪ ನವರಿಗೆ “ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಬೇಕು.
3) ಬಾಕಿ ಉಳಿದಿರುವ “ಬ್ಯಾಕ್ ಲಾಗ್” ಹುದ್ದೆಗಳನ್ನು ರಾಜ್ಯ ಸರ್ಕಾರ ತಕ್ಷಣವೇ ಭರ್ತಿ ಮಾಡಬೇಕು. ಒಳಮೀಸಲಾತಿ ಜಾರಿಯಾಗುವವರೆಗೂ ರಾಜ್ಯ ಸರ್ಕಾರದ ಎಲ್ಲಾ ಹೊಸ ನೇಮಕಾತಿ ಪ್ರಕ್ರಿಯೆಗಳನ್ನು ತಡೆ ಹಿಡಿಯಬೇಕು.
4) ಬಗರ್ ಹುಕುಂ ಸಾಗುವಳಿ ಯನ್ನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು.
5) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಹೊರ ಸಂಪನ್ಮೂಲದಡಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು ಎಂದು ಪ್ರೊ. ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ವತಿಯಿಂದ ಸಮಿತಿಯ ಮುಖಂಡರುಗಳು ಜಂಟಿಯಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಪ್ರಕಟಣೆ ಮಾಡಿದರು.
118 ವರ್ಷಗಳ ಇತಿಹಾಸ ಇರುವ ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘ ಅನೇಕ ಮುತ್ಸದ್ದಿ ಮಹನೀಯರಿಂದ ಸಂಸ್ಥಾಪಿಸಲ್ಪಟ್ಟು ಬೆಳೆದದ್ದು, ನಂತರ ಕೆಲವು ಸ್ವಾರ್ಥ ಹಾಗು ದುರಾಸೆಯ ಲೂಟಿಕೋರರ ಕೈಗೆ ಸಿಲುಕಿ ನೌಕರರಿಗೆ ಸಂಬಳ ಕೊಡಲೂ ಪರದಾಡುವ ಸ್ಥಿತಿಗೆ ಬಂದದ್ದು ವಿಪರ್ಯಾಸ ಎನಿಸಿತ್ತು. ಇತ್ತೀಚೆಗಿನ ಕೆಲ ಉತ್ತಮ ಆಡಳಿತಗಾರರಿಂದ ಸಂಘದ ಸ್ಥಿತಿ ಸರಿ ಹೋಗುತ್ತಿದೆ ಎಂಬ ಅತಾವರಣ ಸೃಷ್ಟಿಯಾಗುತ್ತಿರುವಾಗ ಹೊಸ ಆಡಳಿತ ಮಂಡಳಿಯ ಭರವಸೆಯ ಹೆಜ್ಜೆಗಳು ಸಮುದಾಯಕ್ಕೆ ಒಳಿತು ಮಾಡಬಹುದು ಎನ್ನುವ ಹೊತ್ತಲ್ಲೇ ಪರವಾಗಿಲ್ಲ,ಉತ್ತಮರೆನಿಸಿಕೊಂಡಿದ್ದ ಕೆಲವು ನಿರ್ದೇಶಕರನ್ನು ಅಧಿಕಾರ, ಹಣದ ಆಮಿಷದ ಖೆಡ್ಡಾಕ್ಕೆ ಕೆಡವಿ, ಕೇವಲ ಎರಡೇ ತಿಂಗಳಲ್ಲಿ ಉತ್ತಮ ಆಡಳಿತದ ಭರವಸೆ ಮೂಡಿಸಿದ್ದ ಶಾಸಕ ಬಾಲಕೃಷ್ಣ ಅವರ ತಂಡದ ಕೆಲವರನ್ನೇ ಕುದುರೆ ವ್ಯಾಪಾರ ಮಾಡಿ ಕೆಳಗಿಳಿಸಲು ಅವಿಶ್ವಾಸ ಮಂಡಿಸುತ್ತಿರುವುದು ಸಮುದಾಯವನ್ನು ಆತಂಕಕ್ಕೆ ದೂಡಿದೆ. ಹಾಗು ಇದರ ಹಿಂದೆ ಸಚ್ಚೇಪಾಳ್ಯ ಜಮೀನು ಲೂಟಿಕೋರ ಖಾಸಗೀ ಬಿಲ್ಡರ್ ಗಳ ಲಾಭಿ ಇರುವ ಶಂಕೆ ವ್ಯಕ್ತವಾಗುತ್ತಿದೆ.ಆದ್ದರಿಂದ ಇದನ್ನೆಲ್ಲಾ ಮೂಕ ಪ್ರೇಕ್ಷಕರಾಗಿ ಸುಮ್ಮನೆ ನೋಡುತ್ತಾ ಕೂರದೆ, 5 ಲಕ್ಷಕ್ಕೂ ಮಿಗಿಲಾದ ಅಜೀವ ಸದಸ್ಯರು ಜಾಗೃತರಾಗಿ ಎಚ್ಚೆತ್ತು ಪ್ರಶ್ನಿಸಬೇಕಿದೆ.
ಕೇವಲ ಎರಡು ತಿಂಗಳಲ್ಲೇ ನಮಗೆ ಎಂಥಾ ಭರವಸೆ ಮೂಡಿಸಿತ್ತು ಪ್ರಸ್ತುತ ಇರುವ ಸಮಿತಿ, ಅದರಲ್ಲಿ ನೀವು ಯಾವ ತಪ್ಪನ್ನು ಕಂಡಿರಿ !? ಸಂಘದಲ್ಲಿ ನಡೆದಿರುವ ಮೂರ್ನಾಲ್ಕು ತಾತ್ಕಾಲಿಕ ಕಾರ್ಯಕಾರೀ ಸಮಿತಿ ಸಭೆಗಳಲ್ಲಿ ಚರ್ಚೆಯನ್ನೇ ಮಾಡದೆ ಅಧಿಕಾರ ಲಾಲಸೆಗೆ ಈ ರೀತಿ ವಾಮಮಾರ್ಗ ಹಿಡಿಯುತ್ತಾ,ನಿರ್ದೇಶಕರ ಹೈಜಾಕ್ ಮಾಡಿ, ರೆಸಾರ್ಟ್ ಗೆ ಕರೆದೊಯ್ದು ಕುದುರೆ ವ್ಯಾಪಾರ ಮಾಡುತ್ತಿರುವುದರ ಹಿಂದಿನ ಮರ್ಮವೇನು!? ಇದರ ಹಿಂದೆ ಇರುವ ಲೂಟಿಕೋರ ಲಾಭಿಗೆ ಮಣಿದು, ಸಂಘದ ಹಿತಾಸಕ್ತಿ ಬಲಿಗೊಡುವುದು ಯಾವ ನ್ಯಾಯ..!? ಒಕ್ಕಲಿಗ ಸಂಘದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರತಿಷ್ಠಿತ ಘನತೆಗೆ ಕುಂದು ಉಂಟಾಗುವುದು ನಿಮಗೆ ಅರಿವಲ್ಲವೇ.!?
ಸಾಕುಮಾಡಿ ಈ ಹುಚ್ಚಾಟವಾ.!?
ಕೇವಲ ಎರಡು ತಿಂಗಳ ಚಿಕ್ಕ ಅವಧಿಯಲ್ಲಿನ ನೂತನ ಸಮಿತಿಯ ಉತ್ತಮ ಆಡಳಿತವ ಏಕೆ ಸಹಿಸಿಕೊಳ್ಳಲಾಗುತ್ತಿಲ್ಲ..!?
* ಪ್ರಸ್ತುತ ಇರುವ ಬಿ.ಐ.ಟಿ. ಜೊತೆಗೆ ಕೆಂಗೇರಿ ಹಾಗು ಶ್ರೀ ಗಂಧದಕಾವಲಿನಲ್ಲಿ ಮತ್ತೆರಡು ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ತೆಗೆದುಕೊಂಡಿದ್ದ ನಿರ್ಣಯ ಖುಷಿಯ ವಿಚಾರ ಅಲ್ಲವೇ!?
* ನಾವು ಹೋರಾಟ ಮಾಡಿದ್ದ ಸಂಘದಿಂದ ಕೈಬಿಟ್ಟು ಹೋಗಿದ್ದ ಶ್ರೀ ಗಂಧದ ಕಾವಲಿನ 10 ಎಕರೆ ಭೂಮಿಯನ್ನು ಸರ್ಕಾರದೊಂದಿಗಿನ ಸಮನ್ವಯತೆಯಿಂದ ಸಂಘದ ಹೆಸರಿಗೆ ‘ಪಹಣಿ ‘ ತಂದಂತಹ ಕ್ರಮ ಷಹಬ್ಬಾಸ್ ಎನ್ನುವಂತದ್ದಲ್ಲವೇ..!?
* ಸಂಘದ ‘ಕೆಂಪೇಗೌಡ ಆಸ್ಪತ್ರೆ’ಯಲ್ಲಿ ಉಚಿತ ಹೆರಿಗೆ ಸೌಲಭ್ಯ ನೀಡಿ ಜನಾನುರಾಗಿತ್ವ ಗಳಿಸಿ, ಆಸ್ಪತ್ರೆ ಸುಸಜ್ಜಿತ ಉತ್ತಮ ದರ್ಜೆಗೇರುತ್ತಿರುವುದನ್ನು ಇಡೀ ಸಮುದಾಯ ಪ್ರಶಂಸಿಸಿ ಎಮ್ಮೆ ಪಡುತ್ತಿದೆ, ಆದರೆ ನೀವು ಇಂತಹ ಆಡಳಿತ ಕೆಡವಲೊರಟಿದ್ದೀರಿ ಇದು ಸರಿಯೇ..!?
* ಕಳೆದ 9 ವರ್ಷಗಳಿಂದ ನಡೆಸದೇ ಇದ್ದ ಸಂಘದ ಸಾಮಾನ್ಯ ಸಭೆ (general body )ಯನ್ನು ಸೆ.29ಕ್ಕೆ ನಿಗದಿಗೊಳಿಸಿ, ಉತ್ತಮ
ವಿಚಾರಗಳ ಚರ್ಚೆಗೆ ಅನುವು ಮಾಡಿಕೊಟ್ಟ ಕ್ರಮ ನಿಮಗೆ ಸರಿ ಎನಿಸಿಲ್ಲವೇ…!? * ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ‘ಪ್ರತಿಭಾ ಪುರಸ್ಕಾರ ‘ ಕಾರ್ಯಕ್ರಮ ರೂಪಿಸಿದ್ದು ನಿಮಗೆ ಯಾಕೆ ಸರಿ ಎನಿಸುತ್ತಿಲ್ಲ!?
* ಕೇವಲ ಎರಡೇ ತಿಂಗಳಲ್ಲಿನ ಅವಧಿಯಲ್ಲಿ ದೆಹಲಿಗೆ ಓಡಾಡಿ ಪ್ರತಿಷ್ಠಿತ’ ಕೆಂಪೇಗೌಡ ಮೆಡಿಕಲ್ ಕಾಲೇಜಿಗೆ’ 180ಮೆಡಿಕಲ್ ಸೀಟುಗಳು ಹಾಗು 68 ಪಿ.ಜಿ.ಸೀಟುಗಳನ್ನು ಹೆಚ್ಚಿಸಲು ಬಾಲಕೃಷ್ಣ ನೇತೃತ್ವದ ತಂಡ ಕೈಗೊಂಡ ಕ್ರಮ ನಿಮಗೆ ಸಹ್ಯವಾಗಲಿಲ್ಲವೇ..!?
* ಎಲ್ಲಾ ಜಿಲ್ಲೆಗಳಲ್ಲೂ ಸಂಘದ ಶಿಕ್ಷಣ ಹಾಗು ಆರೋಗ್ಯ ಸೇವೆ ವಿಸ್ತರಿಸಲು ಸಂಸ್ಥೆಗಳ ಸ್ಥಾಪನೆಗೆ ಆಯಾ ಜಿಲ್ಲೆಗಳಲ್ಲೇ ಸಂಘಕ್ಕೆ ಆಸ್ತಿ ಕೊಳ್ಳಲು ತೆಗೆದುಕೊಂಡ ತೀರ್ಮಾನ ನಿಮಗೆ ಸರಿ ಎನಿಸಲಿಲ್ಲವೇ!? ಈ ಹಿಂದಿನ ಕೆಲವು ಖದೀಮರಂತೆ ಅವರವರ ಸ್ವಂತ ಹೆಸರಿಗೆ
ಮಾಡಿಸಿಕೊಳ್ಳಬೇಕಿತ್ತೇ..!? వారు భూరg. 94 ఈ శుదురి వరద రుద రంజి ఇద్దు. ఇదు విందనాయ..
ಒಂದು ಆಡಳಿತ ಸಮಿತಿ ಅಸ್ತಿತ್ವಕ್ಕೆ ಬಂದು ಕನಿಷ್ಠ ಒಂದು ವರ್ಷ ಅಥವಾ 6 ತಿಂಗಳಾದರೂ ಆಡಳಿತ ನಡೆಸಲೂ ಬಿಡದೆ, ಯಾವ ತಪೂ ಇರದ, ಅಂತಹ ತಪ್ಪೇನಾದರೂ ಆಗಿದ್ದರೆ ಕಾರ್ಯಕಾರೀ ಸಮಿತಿಯಲ್ಲಿ ಚರ್ಚಿಸದೆ, ಕೇವಲ ಅಧಿಕಾರ ಲಾಲಸೆ ಹಾಗು ಸಂಘದ ಆಸ್ತಿ ನುಂಗುವ ದುಷ್ಟ ಶಕ್ತಿಗಳ ಜೊತೆ ಕೈಜೋಡಿಸಿ ಈ ರೀತಿಯ ದುಸ್ಸಾಹಸಕ್ಕೆ ಕೈ ಹಾಕಿದ್ದೀರೆಂಬ ಆರೋಪಗಳಿಗೆ ಉತ್ತರ ಕೊಡದೆ ಪಲಾಯನ ಮಾಡಿ ರೆಸಾರ್ಟ್ ನಲ್ಲಿ ಕುಳಿತು ನೀವು ನಡೆಸುತ್ತಿರುವ ಕೃತ್ಯದಿಂದ ಇಡೀ ಒಕ್ಕಲಿಗ ಸಮುದಾಯ ತಲೆತಗ್ಗಿಸಬೇಕಿದೆ.ಇಡೀ ಜನಾಂಗದ ಮಾನ-ಮರ್ಯಾದೆ ಹಾದಿ ಬೀದಿಯಲ್ಲಿ ಹರಾಜು ಹಾಕುವ ಈ ಸ್ವಾರ್ಥದಿಂದ ಒಕ್ಕಲಿಗ ಜನಾಂಗ ತಲೆತಗ್ಗಿಸಬೇಕಾಗಿದೆ, ಆದ್ದರಿಂದ ಒಕ್ಕಲಿಗ ಸಮುದಾಯದ ಶ್ರೀ ಗುರುಗಳು, ಎಲ್ಲ ಪಕ್ಷಗಳ ಮುತ್ಸದ್ದಿ ಮುಖಂಡರು ಕೂಡಲೇ ಇಂತಹವರನ್ನ ಕರೆದು ಬುದ್ದಿ ಹೇಳುವ ಮೂಲಕ ಸಮುದಾಯದ ಹಾಗು ಸಂಘದ ಗೌರವ ಕಾಪಾಡಬೇಕಾಗಿ ಸಮುದಾಯದ ಕಾಳಜಿಯಿಂದ ನಿರಂತರವಾಗಿ ಹೋರಾಟ ಮಾಡುತ್ತಿರುವ ಹೋರಾಟಗಾರರು ಈ ಪತ್ರಿಕಾಗೋಷ್ಠಿಯ ಮೂಲಕ ಮನವಿ ಮಾಡುತ್ತಾ ಸಂಘದ 5 ಲಕ್ಷಕ್ಕೂ ಮೀರಿದ ಅಜೀವ ಸದಸ್ಯರು ಚುನಾವಣೆ ಬಂದಾಗ ಮಾತ್ರ ಕೇವಲ ಮತ ಹಾಕಿ ಸುಮ್ಮನಾಗದೆ, ಮಾತೃಸಂಸ್ಥೆ ಉಳಿವಿಗಾಗಿ ಇಂತಹ ಸಂದರ್ಭದಲ್ಲಿ ಎಚ್ಚೆತ್ತು ಹೋರಾಟಕ್ಕಿಳಿದು, ಸಮುದಾಯದ ಸೇವೆ ಮಾಡಲು ಆರಿಸಿರುವ ನಿರ್ದೇಶಕರು ಸ್ವಾರ್ಥಿಗಳಾಗಲೊರಟಾಗ ಬುದ್ದಿ ಹೇಳುವ ಕೆಲಸವನ್ನೂ ಮಾಡುವಂತವರಾಗಬೇಕೆಂದು ಆಗ ಮಾತ್ರ ಮಾತೃಸಂಸ್ಥೆ’ ರಾಜ್ಯ ಒಕ್ಕಲಿಗರ ಸಂಘ’ ಉಳಿಯುತ್ತದೆಂದು ಈ ಪತ್ರಿಕಾಗೋಷ್ಠಿ ಯ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ಕೆ.ಎನ್.ಲಿಂಗೇಗೌಡ-ಪ್ರಧಾನ ಸಂಚಾಲಕರು, ಸಂಘದ ಮುಖಂಡರುಗಳಾದ A. S. ಗೋವಿಂದೇಗೌಡ ಹಾಗೂ R. G. S. ಗೌಡ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
You must be logged in to post a comment.