ಸುಪ್ರೀಂ ಕೋರ್ಟ್ ತೀರ್ಪಿನಂತೆ ಹರಿಶಿಷ್ಟ ಜಾತಿ ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ

ಪರಿಶಿಷ್ಟ ಜಾತಿಗಳ ಮೀಸಲಾತಿಯು 101 ಪರಿಶಿಷ್ಟ ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಆದ್ದರಿಂದ ಪರಿಶಿಷ್ಟ ಮೀಸಲಾತಿಯನ್ನು 4 ಗುಂಪುಗಳನ್ನಾಗಿ ವರ್ಗೀಕರಣ ಮಾಡಲು ಒತ್ತಾಯಿಸಿ 3 ದಶಕಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಚಳುವಳಿ ಮಾಡಿದ ಹಲವರು ಜೀವ, ಜೀವನ ಮತ್ತು ಬದುಕನ್ನೇ ಬಲಿಕೊಟ್ಟು ಬಸವಳಿದಿದ್ದಾರೆ.

ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಿಸಿ ಒಳಮೀಸಲಾತಿ ಕಲ್ಪಿಸಲು ಒತ್ತಾಯಿಸಿ ನಡೆಸಿದ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ 2004ರಲ್ಲಿ ನಿ. ನ್ಯಾ ಎ.ಜೆ. ಸದಾಶಿವ ಆಯೋಗ ರಚಿಸಿತು. ಆಯೋಗ ಸರ್ಕಾರಕ್ಕೆ ದಿನಾಂಕ 14-06-2012ರಂದು ವರದಿ ಸಲ್ಲಿಸಿತು. ಹಿಂದಿನ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರ್ಕಾರದ “ಸಚಿವ ಸಂಪುಟ”ವು ನಿವೃತ್ತ ನ್ಯಾ. ಸದಾಶಿವರವರ ವರದಿಯಲ್ಲಿನ ದತ್ತಾಂಶದ ಪ್ಯಾರ-1ನ್ನು ಅಂಗೀಕರಿಸಿ ದಿನಾಂಕ 31-03-2023ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಮುಖ್ಯಮಂತ್ರಿ ಮಾನ್ಯ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಸಹ ಪರಿಶಿಷ್ಠರ ಮೀಸಲಾತಿ ವರ್ಗೀಕರಣ ಮಾಡುವ ನಿರ್ಣಯವನ್ನು “ಸಚಿವ ಸಂಪುಟ ದಲ್ಲಿ ಅನುಮೋದಿಸಿ ದಿನಾಂಕ 17-03-2024ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು.

ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಮಾಡಲು ಒತ್ತಾಯಿಸಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಡ, ಜಾರ್ಖಂಡ್, ಹರಿಯಾಣ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಲವಾರು ದಶಕಗಳಿಂದ ಹೋರಾಟ ನಡೆಯುತ್ತಿದೆ.

ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು :- ಪರಿಶಿಷ್ಟರ ಮೀಸಲಾತಿ ವರ್ಗೀಕರಣಕ್ಕಾಗಿ ವಿವಿಧ ರಾಜ್ಯಗಳ ಆಯೋಗಗಳ

ವರದಿಗಳು ಮತ್ತು ಕೋರ್ಟ್‌ಗಳ ಹಲವು ತೀರ್ಪುಗಳನ್ನು ಪರಮಾರ್ಶಿಸಿದ ಸುಪ್ರೀಂಕೋರ್ಟ್‌ನ 7 ನ್ಯಾಯಾಧೀಶರ ಸಂವಿಧಾನ ಪೀಠ ದಿನಾಂಕ : 01-08-2024ರಂದು “ಐತಿಹಾಸಿಕ ತೀರ್ಪು’ ನೀಡಿತು. ಈ ತೀರ್ಪಿನಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ನೀಡುವ ಸಂವಿಧಾನಬದ್ಧ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ತೀಪು ನೀಡಿದೆ

ಕೆನೆಪದರ :- ಮೂಲ ಸಂವಿಧಾನದ ಅನುಚ್ಛೇದ 15(4) ಮತ್ತು 16 (4)ರಂತೆ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಿದ ಮೀಸಲಾತಿಯು ಮೂಲಭೂತ ಹಕ್ಕಾಗಿದ್ದು ಕೆನೆ ಪದರಕ್ಕೆ ಅವಕಾಶವೇ ಇಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀಶರ ಪೀಠ 1992ರಲ್ಲಿ ಇಂದ್ರಸಾಕ್ಷಿ ಕೇಸ್‌ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಸಂವಿಧಾನದ ವಿಧಿ 15(4) ಮತ್ತು 16 (16) “ಸಮಕಾಲೀನ ಪಟ್ಟಿ” (Concurrent List of Subject) ಆಗಿದೆ. ಹಾಗಾಗಿ ಕೇಂದ್ರ ಸರ್ಕಾರ ಅಳವಡಿಸಿಕೊಂಡ ನೀತಿಯನ್ನೇ ರಾಜ್ಯಗಳು ಅನುಸರಿಸಬೇಕು. ಈಗಾಗಲೇ ಸುಪ್ರೀಂಕೋರ್ಟಿನ ಆದೇಶವನ್ನು ಸ್ವಾಗತಿಸಿರುವ ಕೇಂದ್ರ “ಸಚಿವ ಸಂಪುಟ” ಪ.ಜಾ / ಪ. ವರ್ಗಗಳಿಗೆ ಕೆನೆಪದರ ಮೀಸಲಾತಿ ಅಳವಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕ ರಾಜ್ಯ ಸರ್ಕಾರ ಮತ್ತಷ್ಟು ವಿಳಂಬ ಧೋರಣೆ ಮಾಡಿ ಮೀನಾಮೇಷ ಎಣಿಸದೆ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಹಾಗೂ ಸಂವಿಧಾನಕ್ಕೆ ಗೌರವ ನೀಡಿ ಈ ಕೂಡಲೇ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡಲು ದ.ಸಂ.ಸ. ಆಗ್ರಹಿಸಿದೆ.

-: ಹಕ್ಕೋತ್ತಾಯಗಳು :-

+ ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ತೀರ್ಪಿನಂತೆ ಪರಿಶಿಷ್ಟರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅನುಷ್ಠಾನಕ್ಕೆ ತರಲಿ.

+ 2023-2024 ಮತ್ತು 2024-2025ನೇ ಸಾಲಿನಲ್ಲಿ 25,391 ಕೋಟಿ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ

ಎಸ್‌ಸಿಪಿ/ಬಿಎಸ್‌ಪಿ ಅಭಿವೃದ್ಧಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಈ ಹಣವನ್ನು ಈ ಸಮಾಜದ

ಅಭಿವೃದ್ಧಿಗೆ ವಾಪಸ್ ನೀಡಲೇಬೇಕು. + ಪ.ಜಾತಿ / ಪ. ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸರಿಯಾಗಿ ನೀಡುತ್ತಿಲ್ಲ ಹಾಗೂ ಮೆರಿಟ್ ವಿದ್ಯಾರ್ಥಿ ವೇತನ ಮತ್ತು ವಿದೇಶದಲ್ಲಿ ಎಸ್.ಸಿ/ಎಸ್.ಟಿ. ವ್ಯಾಸಂಗ ಮಾಡಲು ಇದ್ದ ಪ್ರಬುದ್ಧ ಯೋಜನೆ ರದ್ದು ಮಾಡಲಾಗಿದೆ. ಪುನಃರಾರಂಭಿಸಲಿ.

+ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಜಾರಿಯಾಗುವವರೆಗೂ ಕೇಂದ್ರ ಮತ್ತು ರಾಜ್ಯದ ಎಲ್ಲಾ ಉದ್ಯೋಗ ನೇಮಕಾತಿಗಳನ್ನು ಸ್ಥಗಿತಗೊಳಿಸಲಿ.

+ ಪಾಸಗಿ ಉದ್ಯೋಗ ಕ್ಷೇತ್ರ ಮತ್ತು ಗುತ್ತಿಗೆ ನೇಮಕಾತಿಗಳಲ್ಲಿಯೂ ಎಸ್.ಸಿ/ಎಸ್.ಟಿ ಮೀಸಲಾತಿ ಜಾರಿಯಾಗಲಿ.

+ ಕೇಂದ್ರ ಸರ್ಕಾರ ಕೂಡಲೇ ಎಸ್.ಸಿ/ಎಸ್.ಟಿ ಅಭಿವೃದ್ಧಿಗಾಗಿ ಎಸ್ ಸಿಪಿ/ಬಿಎಸ್ಪಿ ಕಾಯ್ದೆ ರಚಿಸಿ ಜನಸಂಖ್ಯೆಗನುಗುಣವಾಗಿ ಐಜೆಟ್‌ನಲ್ಲಿ ಹಣ ನೀಡಬೇಕು ಎಂದು ದಾದಾ ಸಾಹೇಬ್ ಡಾ॥ ಎನ್. ಮೂರ್ತಿ ದ.ಸಂ.ಸ ರಾಜ್ಯಾಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಆಗ್ರಹಿಸಿದರು.

ಕರ್ನಾಟಕ ರಸ್ತೆ ಸಾರಿಗೆ ಮದ್ದೂರ್ ಸಂಘ ಒಕ್ಕೂಟ (ರಿ) ಕರ್ನಾಟಕ ವತಿಯಿಂದ ಸರ್ಕಾರ ಮತ್ತು ಸಂಸ್ಥೆಯ ಕಣ್ಣು ತೆರೆಸಲು ಮತ್ತು ಗಮನ ಸೆಳೆಯಲು “ನಮ್ಮ ದುಡಿಮೆ ನಮ್ಮ ಹಕ್ಕು” ಜಾಗೃತಿ ಜಾಥಾ ಆಯೋಜನೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಜೂರ್ ಸಂಘ ಒಕ್ಕೂಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಂದು ಉತ್ತಮ ಸಂಘಟನೆಯಾಗಿ ಮದ್ದೂರ್ ಸಂಘ ಸಂಸ್ಥೆ ಏಳಿಗೆಗೆ ಮತ್ತು ಕಾರ್ಮಿಕ ಹಿತಕ್ಕೊಸ್ಕರವಾಗಿ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಆದರೆ ಇಂದು ಈ ಸಮಯದಲ್ಲಿ “ನಮ್ಮ ದುಡಿಮೆ ನಮ್ಮ ಹಕ್ಕು” ಶೀರ್ಷಿಕೆ ಅಡಿಯಲ್ಲಿ ಕಾರ್ಮಿಕರಿಗೆ ದಿನಾಂಕ : 01.01.2020 ಪರಿಷ್ಕರಣೆ 01.03.2023ರಿಂದ ತಡವಾಗಿ 38 ತಿಂಗಳ ನಂತರ ವೇತನಕ್ಕೆ 15% ರಷ್ಟು ಹೆಚ್ಚಿಗೆ ಮಾಡಿರುತ್ತಾರೆ. ಆದರೆ 38 ತಿಂಗಳ ವೇತನ ಬಾಕಿ 56 ತಿಂಗಳಾದರೂ ನೀಡಿರುವುದಿಲ್ಲ ಸದರಿ ವಿಷಯದ ಬಗ್ಗೆ ಸಂಘಟನೆ ಸರ್ಕಾರಕ್ಕೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಹಲವಾರು ಪತ್ರಗಳನ್ನು ನೀಡಿದ್ದರೂ ಸಹ ನಮಗೆ ಸಿಗಬೇಕಾದ ಬಾಕಿ ಹಣ ಸಂದಾಯವಾಗಿರುವುದಿಲ್ಲ. ಒಂದು ಲಕ್ಷದ ಇಪ್ಪತ್ತು ಸಾವಿರ (1,20,000) ನೌಕರರಿಗೆ ಸುಮಾರು 2 ಲಕ್ಷದಿಂದ 3.5 ಲಕ್ಷದ ವರೆಗೆ ಬಾಕಿ ಹಣ ಬರಬೇಕಾಗಿದೆ, ಇಲ್ಲಿ ನಾವು ಬಿಟ್ಟಿ ಭಾಗ್ಯ ಕೇಳುತ್ತಿಲ್ಲ, ಕಾಮಿಕರು ದುಡಿದಿರುವ ವೇತನ ಬಾಕಿ ಹಣ ಕೇಳುತ್ತಿದ್ದೇವೆ. ಸರ್ಕಾರವಾಗಲಿ ಅಥವಾ ಸಂಸ್ಥೆಯಾಗಲಿ ನೌಕರರ ಬೇಡಿಕೆ ಬಗ್ಗೆ ಗಮನ ಹರಿಸುತ್ತಿಲ್ಲ. ನಿವೃತ್ತ ನೌಕರರಿಗೂ 01.01.2020 ವೇತನ ಜಾರಿಯಾಗಿಲ್ಲ, ವೇತನ ಬಾಕಿ ಹಣ ನೀಡಿರುವುದಿಲ್ಲ.

ದಿನಾಂಕ : 01.01.2024ಕ್ಕೆ ವೇತನ ಪರಿಷ್ಕರಣೆ ಜಾರಿಯಾಗಬೇಕಾಗಿದ್ದ 9 ತಿಂಗಳಾದರೂ ಜಾರಿ ಮಾಡಿರುವುದಿಲ್ಲ. ಈ ಪರಿಸ್ಥಿತಿಯಲ್ಲಿ ಎಲ್ಲಾ ಬೆಲೆಗಳು ಗಗನಕ್ಕೆ ಏರಿರುತ್ತವೆ, ಕಾರ್ಮಿಕರು ಜೀವನ ಸಾಗಿಸುವುದು ಕಷ್ಟವಾಗಿದೆ. ಅವರೂ ಸಹ ಸಂಬಳ ಜಾಸ್ತಿ ಮಾಡಿರುವುದಿಲ್ಲ. ಈ ವಿಷಯದ ಬಗ್ಗೆ ಸಂಸ್ಥೆಗೆ ಹಲವಾರು ಬಾರಿ ಸಂಘಟನೆ ಪತ್ರಗಳನ್ನು ನೀಡಿದ್ದರೂ ಸಹ ವೇತನ ಹೆಚ್ಚಳ ಮಾಡಿರುವುದಿಲ್ಲ, ಹಾಗೂ ಸಂಘಟನೆಗಳನ್ನು ಮಾತುಕತೆಗಳಿಗಾಗಿ ಕರೆದು ಮಾತನಾಡಿಲ್ಲ.

ಸರ್ಕಾರಿ ನೌಕರರು ಅವರ ಸಂಘದಿಂದ “ಪೆನ್ ಡೌನ್” ಮಾಡುತ್ತೇವೆ ಎಂದು ಸರ್ಕಾರಕ್ಕೆ ಪತ್ರ ಬರೆದ ತಕ್ಷಣ ಅವರಿಗೆ ನೀಡಬೇಕಾಗಿರುವ 7ನೇ ವೇತನ ಆಯೋಗದಂತೆ 27% ಹೆಚ್ಚಿಗೆ ವೇತನ 01.08.2024 ರಿಂದ ಜಾರಿಗೆ ಬರುವಂತೆ ಆದೇಶ ಮಾಡಿರುತ್ತಾರೆ.

ನಮ್ಮ ಸಾರಿಗೆ ಕಾರ್ಮಿಕರು ಸಹ ಹಗಲು ರಾತ್ರಿ ಬಸ್ಸಿನಲ್ಲಿ ಮಲಗಿ ಎಲ್ಲಾ ಊರುಗಳಲ್ಲಿ ನೀರು ನೀಡಿ ಇಲ್ಲದೆ ಹಬ್ಬ ಹರಿದಿನಗಳು ಮನೆಯಲ್ಲಿ ಇಲ್ಲದೆ ದುಡಿಯುತ್ತಿದ್ದಾರೆ, ಇಂತಹ ನೌಕರರಿಗೆ ಏಕೆ ಅನ್ಯಾಯ ಮಾಡುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೋಸ್ಕರ ಸರ್ಕಾರ ಮತ್ತು ಸಂಸ್ಥೆಯ ಕಣ್ಣು ತೆರೆಸಲು ಮತ್ತು ಗಮನ ಸೆಳೆಯಲು “ನಮ್ಮ ದುಡಿಮೆ ನಮ್ಮ ಹಕ್ಕು” ಜಾಗೃತಿ ಜಾಥಾವನ್ನು ಸಂಘಟನೆ ಮಜೂರ್ ಸಂಘ ಆಯೋಜಿಸಲಾಗಿದೆ, ದಿನಾಂಕ : 18.08.2024 ರಿಂದ 04.09.2024 ರವರೆಗೆ ಬಸವ ಕಲ್ಯಾಣ ಮತ್ತು ನಿಪ್ಪಾಣಿಯಿಂದ ಎರಡು ಭಾಗವಾಗಿ ರಾಜ್ಯಾದ್ಯಂತ ಜಿಲ್ಲೆಗಳಾದ ಎಲ್ಲಾ ಘಟಕಗಳಿಗೆ ಬೀದರ್, ಗುಲಬರ್ಗಾ, ಬಿಜಾಪುರ, ಯಾದಗಿರಿ, ರಾಯಚೂರು, ವಿಜಯನಗರ, ಕೊಪ್ಪಳ, ಬಳ್ಳಾರಿ, ತುಮಕೂರು, ಮೈಸೂರು, ಬೆಳಗಾವಿ, ಹಾವೇರಿ, ದಾರವಾಡ, ಬಾಗಲಕೋಟೆ, ಗದಗ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಎಲ್ಲಾ ಜಿಲ್ಲೆಗಳ ಸಾರಿಗೆ ಸಂಸ್ಥೆಯ ಬಸ್ಸು ಘಟಕ ಬೇಟಿ ನೀಡಿ ಮೇಲಿನ ಕಾರ್ಯಕ್ರಮದ ಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿ, ದಿನಾಂಕ : 04.09.2024ರಂದು ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿವಸದ ಶಾಂತಿಯುತ ಧರಣಿ ಸಭೆಯನ್ನು ಸಾವಿರಾರು ನೌಕರರೊಂದಿಗೆ ನಡೆಸಲು ತೀರ್ಮಾನಿಸಿ ಅದರಂತೆ ನಡೆಸಲಾಗುತ್ತಿದೆ.

ಈ ಮೇಲಿನ ಎರಡು ಪ್ರಮುಖ ಬೇಡಿಕೆಗಳ ಜೊತೆಗೆ ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ (1) ನಗದು ರಹಿತ ವೈದ್ಯಕೀಯ ಸೌಲಭ್ಯ (2) ನೌಕರರ ಶಿರುಕುಳ (3) ಅವೈಜ್ಞಾನಿಕ ಪಾರಂ ನಂ.4 (ವೇಳಾಪಟ್ಟಿ) (4) ಏಕರೂಪ ಶಿಸ್ತುಕ್ರಮ, ಕ್ಯಾಂಟಿನ್ ಇಲ್ಲದೆ ಇರುವುದು, ಕಾರ್ಮಿಕರ ಮೇಲೆ ದಬ್ಬಾಳಿಕೆ, ಸಾರಿಗೆ ಸಂಸ್ಥೆಯಲ್ಲಿ ಖಾಸಗೀಕರಣ ಹಾಗೂ ಇನ್ನು ಇತರೆ ತೊಂದರೆ ಬಗ್ಗೆ ಉತ್ತಮ ರೀತಿಯಲ್ಲಿ ಸಂಸ್ಥೆಯ ಆಡಳಿತ ನಡೆಸಬೇಕು ನಮಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು.

ನಮ್ಮ ಎಲ್ಲಾ ಬೇಡಿಕೆಗಳು, ತೊಂದರೆಗಳು ನಿಲ್ಲಬೇಕು. ಆದ್ದರಿಂದ ದಿನಾಂಕ 04.09.2024ರಂದು ನಡೆಯುವ ಧರಣಿ ಸತ್ಯಾಗ್ರಹಕ್ಕೆ ಕಾರ್ಮಿಕರ ಬೆಂಬಲ ಮತ್ತು ತಮ್ಮಗಳ ಸಹಕಾರ ನೀಡಬೇಕು. ನಿಮ್ಮ ಮಾದ್ಯಮಗಳಿಂದ ಸರ್ಕಾರಕ್ಕೆ ವಿಷಯ ತಿಳಿಯುವಂತೆ ತಾವುಗಳು ಸಹ ಸಾರಿಗೆ ಕಾರ್ಮಿಕರ ಬವಣೆಗಳನ್ನು ಸರ್ಕಾರಕ್ಕೆ ಮುಟ್ಟಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಜೂರ್ ಸಂಘ (ರಿ)ವತಿಯಿಂದ ತಮ್ಮಲ್ಲಿ ಕೇಳಿಕೊಳ್ಳುತ್ತದೆ. ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಜಿ.ಎಸ್.ಮಹದೇವಯ್ಯ- ಪ್ರಧಾನ ಕಾರ್ಯದರ್ಶಿಗಳು ತಿಳಿಸಿದರು.

City Today News 9341997936

VCN Doctors Welfare Association condemn the brutal act of sexual assault and murder of our colleague in Kolkata and also assault on the peaceful protestors in RG Kar medical college premises

The members of VCN Doctors Welfare Association condemn the brutal act of sexual assault and murder of our colleague in Kolkata and also assault on the peaceful protestors in RG Kar medical college premises and total apathy of the law enforcement agencies when this assault and destruction of Emergency room of RG Kar medical college hospital.

Demand

1. All people involved in these violence are arrested and brought to justice

2. Better working conditions and security for the health care workers in all health care facilities-government, private clinics, corporate or charitable institutions. 3. We demand a central law to deal with any violence in health care institutions.

4, we demand all law enforcement agencies to be accountable for the enforcement of the law to protect health care workers in their workplace so that we can carry out our duties without any fear.

5. To provide proper security in all health care institutions by the management and the authorities and they should be held accountable in cases of lapses in the security system 6. We request the general public to show patience and support the health care workers in their rightful demand for safety and dignity in our workplace

7. we request media to create awareness about the plight of healthcare workers and highlight the importance of having safe and secure environment for the health care workers to ensure proper care of the patients and society at large

8. we request our representatives of the people to highlight the dangers being faced by healthcare workers and help bringing in effective enforcement of legislation to protect the health care workers

9. we do not want to put our patients health in danger so all emergency and essential healthcare services are continuing even when we are on strike

10. We request our general public to show empathy when your healthcare workers are facing such brutality and join hands with us to demand our safety so that we can take care of you with our best of the abilities.

11. we demand safe working environments for all students particularly women students in all medical, nursing, para medical colleges with separate duty rooms and safe and hygienic restrooms, proper functioning CCTV surveillance of corridors.

12. we demand sensitive handling of all the grievances of the students and staff in all the medical, nursing and paramedical institutions.

The above statements were released at the press meet held at Preds Club of Bangalore by Dr. Raju-President and Members of VCN Doctors Welfare Association.

City Today News 9341997936

ಭೂಮಾಲಿಕರ ಪರವಾಗಿ ಆದೇಶಗಳನ್ನು ಮಾಡುತ್ತಿರುವ ಬೆಂಗಳೂರು ದಕ್ಷಿಣ AC ರಜಿನಿಕಾಂತ್ ರನ್ನು ಅಮಾನತ್ತುಗೊಳಿಸಿ – ಪ್ರಜಾ ವಿಮೋಚನಾ ಚಳವಳಿ (ರಿ) ಪಿವಿಸಿ,ರಾಜ್ಯ ಸಮಿತಿ.

ರಾಜ್ಯ ಸರ್ಕಾರ ಮಾಡಿರುವ PTCL ತಿದ್ದುಪಡಿ ಕಾಯ್ದೆಗೆ ಸವಾಲೊಡ್ಡಿರುವ ಶೋಷಿತ ಸಮುದಾಯಗಳ ವಿರೋಧಿ, ಕಡುಭ್ರಷ್ಟ, ಲಂಚಕೋರ ದುರಹಂಕಾರಿ ಹಿಟ್ಲರ್ ಮನಸ್ಥಿತಿ ಹೊಂದಿರುವ ಬಿಲ್ಡರ್‌ಗಳ, ಭೂಮಾಲಿಕರ ಪರವಾಗಿ ಆದೇಶಗಳನ್ನು ಮಾಡುತ್ತಿರುವ ಬೆಂಗಳೂರು ದಕ್ಷಿಣ AC ರಜಿನಿಕಾಂತ್ ರನ್ನು ಅಮಾನತ್ತುಗೊಳಿಸಿ. ಇವರ ಆಸ್ತಿಯನ್ನು ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ಮಾಡಿಸಿ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ. ಮಾನ್ಯ ಮುಖ್ಯಮಂತ್ರಿಗಳಿಗೆ, ಮಂತ್ರಿಗಳಿಗೆ ಶಾಸಕರಿಗೆ ಮನವಿ ಮತ್ತು ನಿರಂತರ ಪ್ರತಿಭಟನೆ.

1978-79ರಲ್ಲಿ PTCL ಕಾಯ್ದೆ ಜಾರಿಗೆ ಬಂದ ಪ್ರಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಜನರಿಗೆ ಮಂಜೂರಾಗಿರುವ ಜಮೀನುಗಳನ್ನು ಪರಭಾರೆ ಮಾಡಲು ಸರ್ಕಾರದ ಪೂರ್ವಾನುಮತಿ ಅತ್ಯವಶ್ಯಕ ಎಂಬ ಷರತ್ತು ಇದೆ. ಕಾಯ್ದೆ ಉಲ್ಲಂಘಿಸಿ ಭೂಮಿ ಪರಭಾರೆ ಆಗಿದ್ದಲ್ಲಿ ಮರುಮಂಜೂರಾತಿ ಕೋರಿ ಮೂಲ ಮಂಜೂರುದಾರರು ಅಥವಾ ಅವರ ವಾರಸುದಾರರು ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಲು ಕಾಲಮಿತಿ ಇರಲಿಲ್ಲ.

ನೆಕ್ಕಂಟಿ ರಾಮಲಕ್ಷ್ಮೀ V/s ಕರ್ನಾಟಕ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ “ಸಮುಚಿತ ಸಮಯದೊಳಗೆ” ಅರ್ಜಿ ಸಲ್ಲಿಸಬೇಕೆಂದು 2017ರ ಅಕ್ಟೋಬರ್ 26ರಲ್ಲಿ ಆದೇಶ ಮಾಡಿದ್ದು ಇದಾದ ಬಳಿಕ PTCL ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಉಪವಿಭಾಗಾಧಿಕಾರಿಗಳ ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ದಾಖಲಿಸಿದ್ದ ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿಯವರ ವಿರುದ್ಧವಾಗಿ ಸಾವಿರಾರು ಪ್ರಕರಣಗಳು ಆದೇಶವಾಗಿರುವುದನ್ನು ಖಂಡಿಸಿ ಕಾಲಮಿತಿಯನ್ನು ರದ್ದುಪಡಿಸಲು PTCLಕಾಯ್ದೆಗೆ ತಿದ್ದುಪಡಿ ಆದೇಶ ಮಾಡುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ ನಿರಂತರವಾಗಿ ಧರಣಿ ನಡೆಸಲಾಗಿತ್ತು.

ದಿನಾಂಕ 15-09-2022ರಲ್ಲಿ ವಿರೋಧಪಕ್ಷದ ನಾಯಕರಾಗಿದ್ದ ಮಾನ್ಯ ಸಿದ್ಧರಾಮಯ್ಯನವರು ಮತ್ತು KPCC ಕಾಯಾಧ್ಯಕ್ಷರಾಗಿದ್ದ ಸತೀಶ್ ಜಾರಕಿಹೋಳಿರವರು ಹೋರಾಟದ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ PTCL ಕಾಯ್ದೆಗೆ ಸಮಗ್ರ ತಿದ್ದುಪಡಿ ಆದೇಶ ಮಾಡುವುದಾಗಿ ಮತ್ತು ಎಲ್ಲಾ ದಲಿತ ಸಂಘಟನೆಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಎಲ್ಲಾ ದಲಿತ ಸಂಘಟನೆಗಳು ಒಗ್ಗಟ್ಟಿನಿಂದ ರಾಜ್ಯಾದ್ಯಂತ ಚುನಾವಣೆಯಲ್ಲಿ ಲಕ್ಷಾಂತರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದ ಕಾರಣ 2023ರಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದರು. PTCL ಕಾಯ್ದೆಗೆ ತಿದ್ದುಪಡಿ ಮಾಡಿ ಕಾಯ್ದೆಯನ್ನು ವಿಧಾನ ಸಭೆಯಲ್ಲಿ ಮಾನ್ಯ ಕಂದಾಯ ಸಚಿವರಾದ ಕೃಷ್ಣಾಭೈರೇಗೌಡರು ಮಂಡಿಸಿ ದಿನಾಂಕ 21-07-2023ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿ ದಲಿತ ಕುಟುಂಬಗಳಿಗೆ ಅನುಕೂಲ ಕಲ್ಪಿಸಿರುವುದು ಸ್ವಾಗತಾರ್ಹ ವಿಷಯ.

ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯಾಗಿ ದಿನಾಂಕ 30-06-2023ರಲ್ಲಿ ಬಂದ ರಜಿನಿಕಾಂತ್‌ ರವರು ಕೇವಲ 6 ತಿಂಗಳಲ್ಲೆ ಸುಮಾರು 480-500 RA ಪ್ರಕರಣಗಳನ್ನು ಆದೇಶ ಮಾಡಿದ್ದು, ಸದರಿ ಪ್ರಕರಣಗಳಲ್ಲಿ ಕ್ರಯಪತ್ರಗಳು ಆಗಿದ್ದರೂ ಸಹ ಕಾನೂನು ಉಲ್ಲಂಘಿಸಿ ಆದೇಶಗಳನ್ನು ಮಾಡಿರುತ್ತಾರೆ. ಸುಮಾರು 450 PTCL ಪ್ರಕರಣಗಳು ದಾಖಲಾಗಿದ್ದರೂ ಪ್ರಕರಣಗಳನ್ನು ನಡೆಸದೆ ನಿರ್ಲಕ್ಷ್ಯ ವಹಿಸಿದ್ದರ ವಿರುದ್ಧ ಪತ್ರಗಳನ್ನು ನೀಡಿ ಮನವಿ ಮಾಡಿದಾಗ ಸರ್ಕಾರ ಮಾಡಿರುವ PTCL ಕಾಯ್ದೆ ತಿದ್ದುಪಡಿ ಆದೇಶದಂತೆ ಮೂಲ ಮಂಜೂರಿದಾರರ ಪರವಾಗಿ ಆದೇಶ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿ ಬಡವರ, ದಲಿತರ, ಸಂಘಟನೆಯವರ ಯಾವುದೇ ಕೆಲಸಗಳನ್ನು ಮಾಡದೆ ಕಛೇರಿಯಲ್ಲಿ ಜನಸಾಮಾನ್ಯರಿಗೆ ಸಿಗದೆ ತಮ್ಮ ವೃತ್ತಿಯನ್ನು ವ್ಯಾಪಾರಿ ಮನೋಭಾವದಲ್ಲಿ ತೊಡಗಿಸಿಕೊಂಡಿರುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿಗಳು ಉಪ ವಿಭಾಗಾಧಿಕಾರಿಗಳಿಗೆ ಸಾರ್ವಜನಿಕರಿಗೆ ಮತ್ತು ಸಂಘಟನೆಯವರಿಗೆ ಸ್ಪಂದಿಸುವಂತ A.C. ಗೆ ನಿರ್ದೇಶನ ನೀಡಿರುವುದನ್ನು ಲೆಕ್ಕಿಸದೆ ಅದೇ ರೀತಿ ವರ್ತಿಸುತ್ತಿರುವುದನ್ನು ಉಗ್ರವಾಗಿ PVC ಖಂಡಿಸುತ್ತೇವೆ.

ರಾಜ್ಯ ಸರ್ಕಾರ PTCL ಕಾಯ್ದೆಗೆ ತಿದ್ದುಪಡಿ ಆದೇಶ ಮಾಡಿರುವುದರಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳವರಿಗೆ ಮಂಜೂರಾದ ಜಮೀನುಗಳನ್ನು ಕಡ್ಡಾಯವಾಗಿ ಅವರಿಗೆ ಮರುಸ್ಥಾಪಿಸಬೇಕಾಗಿದ್ದರೂ ಸಹ ಕಾಯ್ದೆಯನ್ನು ರಕ್ಷಿಸಬೇಕಾದ ಉಪವಿಭಾಗಾಧಿಕಾರಿ ಕಾಯ್ದೆಯನ್ನು ಉಲ್ಲಂಘಿಸಿ ಕ್ರಯದಾರರೊಂದಿಗೆ ಶಾಮೀಲಾಗಿ ಅವರ ಪರವಾಗಿ ಆದೇಶಗಳನ್ನು ಮಾಡುವುದರ ಮೂಲಕ ಲಕ್ಷಾಂತರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕುಟುಂಬಗಳನ್ನು ಬೀದಿಪಾಲು ಮಾಡುವ ಸನ್ನಿವೇಶ ಇರುವುದನ್ನು ಅತಿಗಂಭೀರವಾಗಿ ಪರಿಗಣಿಸಿ ಕಾನೂನಿನ ಭಯವಿಲ್ಲದೆ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿರುವ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯನ್ನು ಅಮಾನತ್ತುಗೊಳಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇವೆ.

SC/ST ಮೀಸಲಾತಿ ಕ್ಷೇತ್ರಗಳಲ್ಲಿ ಗೆದ್ದಿರುವ ಮಂತ್ರಿಗಳು, ಶಾಸಕರು ಮಾನ್ಯ ಮುಖ್ಯಮಂತ್ರಿಗಳ ಮೇಲೆ ಒತ್ತಡತಂದು ಸುಪ್ರೀಂಕೋರ್ಟ್ ಮತ್ತು ಉಚ್ಚನ್ಯಾಯಾಲಯದಲ್ಲಿ ಸರ್ಕಾರದಿಂದ ಪಿಶಿಷನ್ ದಾಖಲಿಸಿ ಪರಿಶಿಷ್ಟ ಜಾತಿ/ಪ.ಪಂಗಡಗಳ ಪರವಾಗಿ ಭೂಮಿಗಳನ್ನು ಆದೇಶ ಮಾಡಿಸಬೇಕು.

ಹಕ್ಕೊತ್ತಾಯಗಳು

ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯಾಗಿರುವ ರಜಿನಿಕಾಂತ್ ರವರು ಸರ್ಕಾರ PTCL ಕಾಯ್ದೆಗೆ ತಿದ್ದುಪಡಿ ಆದೇಶ ಮಾಡಿದ್ದರೂ ಈ ಕಾಯ್ದೆಯನ್ನು ರಕ್ಷಿಸಬೇಕಾದ ಉಪವಿಭಾಗಾಧಿಕಾರಿಯೇ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡು ಬಿಲ್ಡರ್‌ಗಳ ಭೂಮಾಲೀಕರೊಂದಿಗೆ ಶಾಮೀಲಾಗಿ ಭ್ರಷ್ಟಾಚಾರದಲ್ಲಿ ತೊಡಗಿ ಅವರ ಪರವಾಗಿ ಆದೇಶಗಳನ್ನು ಮಾಡಿರುವದರಿಂದ ಇವರು ಇದೇ ಹುದ್ದೆಯಲ್ಲೇ ಮುಂದುವರೆದರೆ ಲಕ್ಷಾಂತರ ದಲಿತ ಕುಟುಂಬಗಳು ಬೀದಿಪಾಲಾಗುವ, ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಸನ್ನಿವೇಶ ಇರುವುದರಿಂದ ಸರ್ಕಾರ ಇವರನ್ನು ತಕ್ಷಣ ಅಮಾನತ್ತುಗೊಳಿಸಿ ಇವರ ಆಸ್ತಿಯನ್ನು ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ಮಾಡಿಸಿ ಇವರಿಗೆ ಕಠಿಣ ಶಿಕ್ಷೆ ವಿಧಿಸಬೇಕು.

ಇವರು ಹುದ್ದೆಗೆ ಬಂದ 6 ತಿಂಗಳಲ್ಲೇ ಸುಮಾರು 480-500 RA ಪ್ರಕರಣಗಳನ್ನು ಆದೇಶ ಮಾಡಿದ್ದು ಅನೇಕ ಪ್ರಕರಣಗಳಲ್ಲಿ ಕ್ರಯಪತ್ರಗಳಾಗಿದ್ದರೂ ಕಾನೂನು ಉಲ್ಲಂಘಿಸಿ ಭ್ರಷ್ಟಾಚಾರದಲ್ಲಿ ತೊಡಗಿ ಆದೇಶ ಮಾಡಿರುವದರಿಂದ ನೂರಾರು ಬಡವರಿಗೆ ತೊಂದರೆ ಆಗಿರುವುದರಿಂದ ಇವರು ಮಾಡಿರುವ ಎಲ್ಲ ಆದೇಶಗಳನ್ನು ತನಿಖೆಗೊಳಪಡಿಸಿ ಶಿಕ್ಷೆ ವಿಧಿಸಬೇಕು.

ಬೆಂಗಳೂರು ದಕ್ಷಿಣ-ಉತ್ತರ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ಸಾವಿರಾರು PTCL ಪ್ರಕರಣಗಳು ದಾಖಲಾಗಿದ್ದು ಎಲ್ಲಾ ಪ್ರಕರಣಗಳನ್ನು ಶೀಘ್ರವಾಗಿ ಮೂಲಮಂಜೂರುದಾರರಿಗೆ/ವಾರಸುದಾರ ಪರವಾಗಿ ಆದೇಶಗಳನ್ನು ಮಾಡಲು ಸರ್ಕಾರ ಕಠಿಣ ನಿರ್ದೇಶನ ನೀಡಬೇಕು.

ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ PTCL ಕಾಯ್ದೆಯಡಿ ಮಾಡುವ ಆದೇಶಗಳನ್ನು ತಕ್ಷಣ ಜಾರಿಗೊಳಿಸಿ ಖಾತೆ ವರ್ಗಾವಣೆ ಮಾಡಿ ಭೂಮಿಯ ಭೌತಿಕ ಸ್ವಾಧೀನವನ್ನು ಬಿಡಿಸಿಕೊಡಬೇಕು.

PTCL ಕಾಯ್ದೆಯಡಿ ಉಚ್ಚನ್ಯಾಯಾಲಯ, ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಮಾಡುವ ಆದೇಶ ಅಥವಾ ತಡೆಯಾಜ್ಞೆಯನ್ನು ಪಹಣಿಯಲ್ಲಿ ನಮೂದಿಸಲು ವರದಿಗಳನ್ನು ಪಡೆದು 1-2 ತಿಂಗಳ ಕಾಲ ಖಾತೆ ಮಾಡದೆ ನಿಧಾನ ಅನುಸರಿಸುತ್ತಿರುವ ತಾಲ್ಲೂಕು ವಿಶೇಷ ತಹಸೀಲ್ದಾರವರುಗಳಿಗೆ ಶೀಘ್ರವಾಗಿ ಜಾರಿಗೊಳಿಸುವಂತೆ ಕಠಿಣ ನಿರ್ದೇಶನ ನೀಡಬೇಕು.

ಈ ಕಾರ್ಯಕ್ರಮದಲ್ಲಿ ನೊಂದಿರುವ ಎಲ್ಲಾ ಸಾವಿರಾರು ದಲಿತ ಕುಟುಂಬಗಳು, ಶೋಷಿತ ಸಮುದಾಯಗಳು ಭಾಗವಹಿಸಿ ನಿರಂತರ ಹೋರಾಟಗಳನ್ನು ಮಾಡುವುದರ ಮೂಲಕ ಸಾವಿರ ಸಾರಿ ದಿಕ್ಕಾರಗಳನ್ನು ಹೇಳಿವುದರ ಮೂಲಕ A.C. ರಜನಿಕಾಂತ್ ರವರನ್ನು ಹುದ್ದೆಯಿಂದ ತೆಗಿಸಬೇಕು ಎಂದು ಪ್ರಜಾ ವಿಮೋಚನಾ ಚಳವಳಿ (ರಿ) ಪಿವಿಸಿ,ರಾಜ್ಯ ಸಮಿತಿ ವತಿಯಿಂದ ರಾಜ್ಯ ಸರ್ಕಾರವನ್ನು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಒತ್ತಾಯಿಸಿದರು.

City Today News 9341997936

ಶ್ರೀ ಐ.ಪಿ.ಡಿ. ಸಾಲಪ್ಪ ವರದಿಯ ವಿಚಾರ ಸಂಕಿರಣ-2024

ಶ್ರೀ ಐ.ಪಿ.ಡಿ. ಸಾಲಪ್ಪ ವರದಿಯ ವಿಚಾರ ಸಂಕಿರಣ-2024

ದಿನಾಂಕ: 14-08-2024 ಬುಧವಾರ

ಸಮಯ: ಬೆಳಗ್ಗೆ 11:00ಕ್ಕೆ

ಸ್ಥಳ : ಗಾಂಧಿ ಭವನ, ವಾಪೂ। ಸಭಾಂಗಣ ಶಿವಾನಂದ ಸರ್ಕಲ್, ಬೆಂಗಳೂರು


ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತವಾದ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ಇಂದಿಗೆ ಪ್ರಪಂಚದದ್ಯಾಂತ ಪ್ರಸಿದ್ದಿ ಪಡೆದ ಮಹಾನಗರವಾಗಿದೆ. ಈ ಮಹಾನಗರದ ಸೌಂದರ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುತ್ತಿರುವವರೇ ಪೌರಕಾರ್ಮಿಕರು, ಪ್ರಮಾಣಿಕ ಸೇವೆ ಬದ್ಧತೆಯಿಂದ ಬಸವಣ್ಣನವರ ತತ್ವವಾದ ‘ದುಡಿಮೆಯೇ ದೇವರೆಂದು’ ಭಾವಿಸಿ ಸ್ವಚ್ಛತೆಯನ್ನು ಮಾಡುತ್ತಿರುವ ಪೌರಕಾರ್ಮಿಕರಿಗೆ ಹೃದಯ ಪೂರ್ವಕ ವಂದನೆಗಳು. ಈ ಪೌರಕಾರ್ಮಿಕ ವೃತ್ತಿಯ ಸೇವೆ ಸಲ್ಲಿಸುತ್ತಿರುವ ಹೆಚ್ಚಿನ ಸಮುದಾಯದವರು ಪರಿಶಿಷ್ಟ ಜಾತಿಯವರು. ಈ

ಸಮುದಾಯದವರು ತಲತಲಾಂತರಗಳಿಂದ ಇದೆ ವೃತ್ತಿಯನ್ನು ಅವಲಂಭಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಜೀವನದ ಪರಿವರ್ತನೆಗಾಗಿ 1929 ರಲ್ಲಿ ಜನಿಸಿದ ಮಹಾನಾಯಕ ಶ್ರೀ ಐ.ಪಿ.ಡಿ ಸಾಲಪ್ಪರವರು ಈ ಸಮಾಜದಲ್ಲಿ ಹುಟ್ಟಿ ವಿದ್ಯಾವಂತರಾಗಿ ಈ ಸಮಾಣದಲ್ಲಿನ ಮೌಡ್ಯ, ಉನಾಗರಿಕತೆ ಇತ್ಯಾದಿಗಳ ಬದಲಾವಣೆಗಾಗಿ ಶಿಕ್ಷಣ ಶಾಲೆಯನ್ನು 1956 ರಲ್ಲಿ ಪ್ರಾರಂಭಿಸಿ ಪೌರಕಾರ್ಮಿಕರ ಮಕ್ಕಳಿಗೆ ವಿದ್ಯಾಗುರುಗಳಾಗಿ ಶಿಕ್ಷಣವನ್ನು ನೀಡಿ, ಅಲ್ಲಂದ ಪರಿವರ್ತನೆಯನ್ನು ಪ್ರಾರಂಭಿಸಿ ಬಾಬಾ ಸಾಹೇಬ್ ಡಾ|| ಬಿ.ಆರ್ ಅಂಬೇಡ್ಕರ್ ರವರಿಂದ ಪ್ರೇರಣೆಗೊಂಡು ಸಮಾಜದಲ್ಲಿನ ಎಲ್ಲಾ ಕೆಟ್ಟ ಚಟಗಳನ್ನು ಬಿಡಿಸುವ ಪರಿವರ್ತನೆಗೆ ನಾಂದಿ ಹಾಡಿದರು. ಇದನ್ನೆಲ್ಲಾ ಗಮನಿಸಿದ ಶ್ರೀ ಬಿ. ಬಸವಲಿಂಗಪ್ಪನವರು ಐ.ಪಿ.ಡಿ ಸಾಲಪ್ಪರವರನ್ನು ಉತ್ತೇಖಿಸಿ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಡಿ.ದೇವರಾಜ್ ಅರಸು ಅವರಿಂದ ಕರ್ನಾಟಕ ರಾಜ್ಯದ ಪೌರಕಾರ್ಮಿಕರ ಜೀವನದ ಸ್ಥಿತಿಗತಿಗಳನ್ನು ಅರಿತು ಒಂದು ವರದಿಯನ್ನು ರಚಿಸುವಂತೆ ಶ್ರೀ ಐ.ಪಿ.ಡಿ ಸಾಲಪ್ಪ ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಿ, ಸಂಪೂರ್ಣ ಅಂಕಿ ಅಂಶಗಳ ಮಾಹಿತಿಯನ್ನು ವರದಿ ಮುಖಾಂತರ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶಿಸಿದರು. ಅದರಂತೆ ಸಾಲಪ್ಪರವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಪೌರಕಾರ್ಮಿಕರ ಸ್ಥಿತಿಗತಿಗಳನ್ನು ಅಧ್ಯಾಯನ

ಮಾಡಿ, 1976 ರಲ್ಲಿ ಸರ್ಕಾರಕ್ಕೆ ಅಂಕಿ ಅಂಶಗಳ ಸಮೇತ ಸಮಗ್ರ ನ ಅಂಶಗಳ ವರದಿಯನ್ನು ಸಲ್ಲಿಸಿದರು ಅಂದಿನ

ಕಾಂಗ್ರೆಸ್ ನೇತೃತ್ವದ ದಿ. ದೇವರಾಜ್ ಅರಸ್ ಸರ್ಕಾರ 26 ಅಂಶಗಳನ್ನು ಒಪ್ಪಿ ಅದರಂತೆ ಪೌರಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರದ ಆದೇಶ ಸುತ್ತೋಲೆಯನ್ನು ಹೊರಡಿಸಿರುತ್ತದೆ. ಆದರೆ ಇಚ್ಛಾಶಕ್ತಿ ಇಲ್ಲದ ಅಧಿಕಾರಿಗಳಿಂದ ಪೂರ್ಣ ಪ್ರಮಾಣದ ಬಿ.ಪಿ.ಡಿ ಸಾಲಪ್ಪ ವರದಿಯ ರವಿಯನ್ನು ಕಾರ್ಯಗತ ಮಾಡಿರುವುದಿಲ್ಲ. ಈ ದಿಕ್ಕಿನಲ್ಲಿ ಹಲವಾರು ಸಂಘಟನೆಗಳು ಪ್ರತಿಭಟನೆ, ಹೋರಾಟ ಮತ್ತು ಸತ್ಯಾಗ್ರಹಗಳನ್ನು ನೆಡೆಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಅವರಿಗೆಲ್ಲ ನಮ್ಮ ವಂದನೆಗಳು. ಈ ದಿಕ್ಕಿನಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಪಾಲಿಕೆ

ಸಂಘಟನೆಗಳೊಂದಿಗೆ ಚರ್ಚಿಸಿ ಐ.ಪಿ.ಡಿ ಸಾಲಪ್ಪ ವರದಿ ಬಗ್ಗೆ ಒಂದು ವಿಚಾರ ಸಂಕೀರ್ಣವನ್ನು ಕಮ್ಮಿಕೊ ಕೊಳ್ಳಲು Seximro ದಿನಾಂಕ 14-08-2024 ಬುಧವಾರ ಬೆಳಗ್ಗೆ: 1000 ರಿಂದ ಶಿವಾನಂದ ಸರ್ಕಲ್ ಬಳಿಯಿರುವ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ಹಮ್ಮಿಕೊಂಡಿರುತ್ತೇವೆ. ಈ ವಿಚಾರ ಸಂಕೀರ್ಣಕ್ಕೆ ಕರ್ನಾಟಕ ಸರ್ಕಾರದ ಬೆಂಗಳೂರು ನಗರಾಭಿವೃದ್ಧಿ ಮತ್ತು ಉಪಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಮಂತ್ರಿಗಳು, ಪೌರಡಳಿತ ಮಂತ್ರಿಗಳು ಹಾಗೂ ನಮ್ಮ ಪರಿಶಿಷ್ಟ ಜಾತಿಯ ಮಂತ್ರಿಗಳು ಮತ್ತು ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಾಲಿಕೆ ಆಡಳಿತಾಧಿಕಾರಿಗಳು ಹಾಗೂ ಗೂ ಮುಖ್ಯ ಆಯುಕ್ತರು ಭಾಗವಹಿಸಲಿದ್ದಾರೆ. ಆದುದರಿಂದ ಪೌರಕಾರ್ಮಿಕರ ಸಮಾಜದ ಚಿಂತಕರು, ಹಿತೈಷಿಗಳು, ಕಾರ್ಮಿಕಕರ ಮುಖಂಡರುಗಳು ಹಾಗೂ ಸಾಲಪ್ಪರವರ ಅಭಿಮಾನಿಗಳು ಈ ಪೌರಕಾರ್ಮಿಕರು ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ಸಾಲಪ್ಪ ವರದಿ ಸಂಪೂರ್ಣವಾಗಿ ಜಾರಿಗೆ ಬರಲು ಸಹಕರಿಸಬೇಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ,ಪೌರಕಾರ್ಮಿಕರು, ನೇರವೇತನ ಪೌರಕಾರ್ಮಿಕರು ಮತ್ತು ಚಾಲಕರ ಶುಚಿಗಾರರ ಸಂಘಟನೆಗಳ ಒಕ್ಕೂಟ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ವಿನಂತಿಸಿದರು.

City Today News 9341997936