ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ರಾಜ್ಯದ ಎಲ್ಲಾ ವಿಚಾರಗಳನ್ನು ಸಂವಿಧಾನಾತ್ಮಕವಾಗಿ ನೋಡುವ ಸ್ಥಾನದಲ್ಲಿದ್ದು ಏಕ ಪಕ್ಷೀಯವಾಗಿ ವರ್ತಿಸಬಾರದೆಂದು ವಿನಯಪೂರ್ವ ಕೋರಿಕೆ

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ವತಿಯಿಂದ ಕರ್ನಾಟಕ ಕಂಡಂತಹ ಅಪ್ರತಿಮ ಧೀಮಂತ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಕಳೆದ 45 ವರ್ಷಕ್ಕೂ ಮೇಲ್ಪಟ್ಟು ರಾಜಕೀಯ ಜೀವನದಲ್ಲಿ ಕಳಂಕರಹಿತರಾಗಿ ಕಪ್ಪು ಚುಕ್ಕೆಯಿಲ್ಲದಂತೆ ಎರಡನೇ ದೇವರಾಜ ಅರಸು ಎಂಬ ಖ್ಯಾತಿಯೊಂದಿಗೆ ಎರಡನೇ ಭಾರಿ ಮುಖ್ಯಮಂತ್ರಿಯಾಗಿ ಕರ್ನಾಟಕ ರಾಜ್ಯದ ಮಹಾ ಜನತೆಗೆ ನೂರಾರು ಭಾಗ್ಯಗಳನ್ನು ಕೊಟ್ಟು ಅನ್ನ ಭಾಗ್ಯ ನೀಡುವ ಮೂಲಕ “ಅನ್ನರಾಮಯ್ಯ” ಎಂಬ ಖ್ಯಾತಿಯನ್ನು ಹೊಂದಿದ್ದು ಪ್ರಸ್ತುತ ಸರ್ಕಾರದಲ್ಲಿ ನುಡಿದಂತೆ ನಡೆದು ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಯಶಸ್ವಿ ಸರ್ಕಾರ ನಡೆಸುತ್ತಿರುವ ಸಂಧರ್ಭದಲ್ಲಿ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ರವರಿಗೆ ರಾಜಕೀಯ ಭವಿಷ್ಯವಿಲ್ಲವೆಂದು ಭಾವಿಸಿ ಸಿದ್ದರಾಮಯ್ಯರವರನ್ನು ರಾಜಕೀಯವಾಗಿ ಮುಗಿಸಲು ಚಿಂತಿಸಿ ಮುಡಾ ಹಗರಣವನ್ನು ಸೃಷ್ಟಿಸಿ ಈ ವಿಚಾರದಲ್ಲಿ ಬಿಜೆಪಿ ಮತ್ತು ಜೆ.ಡಿಎಸ್ ರಾಜ್ಯದ ಜನರ ದಿಕ್ಕನ್ನು ಬದಲಾಯಿಸಲು ಹೊರಟಿರುವುದು ಅಕ್ಷಮ್ಯ ಅಪರಾದವಾಗಿರುತ್ತದೆ, ಹಾಗೇ ಆರ್.ಟಿ.ಐ ಕಾರ್ಯಕರ್ತನ ಮೂಲಕ ರಾಜ್ಯಪಾಲರಿಗೆ ದೂರು ನೀಡಿಸಿ ಪ್ರಾಸಿಕ್ಯಷನ್ ಗೆ ಮುಂದಾಗಿರುವುದು ಕಾನೂನು ಬಾಹಿರವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಈ ವಿಚಾರವಾಗಿ ಕೂಲಂಕುಷವಾಗಿ ಚರ್ಚಿಸಿ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲು ಸಮಯಾವಕಾಶವನ್ನು ಕೋರಿರುತ್ತೇವೆ. ಹಾಗೂ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಮೂಢಾ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ತನಿಕೆ ಪ್ರಗತಿಯಲ್ಲಿದ್ದು ತನಿಕೆ ಮುಗಿದು ವರದಿ ಬರುವವರೆಗೂ ಕಾಯಬಹುದಾಗಿದೆ.

ಮುಂದುವರೆದು ದಿನಾಂಕ 09-08-2024 ರಂದು ಮೈಸೂರಿನಲ್ಲಿ ಸಿದ್ದರಾಮಯ್ಯರನ್ನ ಬೆಂಬಲಿಸಿ ನಡೆಯುವ ಮಹಾ ಸಮಾವೇಶದಲ್ಲಿ ನಾವು ಸೇರಿದಂತೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು, ಅಲೆಮಾರಿ ಬುಡಕಟ್ಟು ಜನಾಂಗದವರು ಹಾಗೂ ಪ್ರವರ್ಗ 1 ಮತ್ತು ಪ್ರವರ್ಗ -2 ಒಟ್ಟು 197 ಜಾತಿಗಳ ಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಸ್ವ ಇಚ್ಛೆಯಿಂದ ಭಾಗವಹಿಸತ್ತಿದ್ದು ನಾವೂ ಸಹ ಬೆಂಬಲವನ್ನು ಸೂಚಿಸಿರುತ್ತೇವೆ. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದೇವೆ.

ಈ ವಿಚಾರವನ್ನು ಬಿಜೆಪಿ ಮತ್ತು ಜೆಡಿಎಸ್ ರವರು ಮಾಡಿರುವ ಷಡ್ಯಂತರವನ್ನು ಕೈಬಿಡದ್ದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ್ಯಂತ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆಗಳನ್ನು ಮಾಡುತ್ತಾ ಬ್ರಷ್ಟ ಬಿಜೆಪಿ ಸರ್ಕಾರದಲ್ಲಿ ನಡೆದಂತಹ ಹಗರಣ ಮತ್ತು ಬ್ರಷ್ಟಚಾರಗಳನ್ನು ದಾಖಲೆ ಸಮೇತ ಹೊರತೆಗೆದು ಜನರ ಮುಂದಿಟ್ಟು ನ್ಯಾಯ ಕೇಳಲು ನಿರ್ದರಿಸಿದ್ದೇವೆ.

ಮುಖ್ಯಮಂತ್ರಿಗಳು ಎರಡು ಭಾರಿ ಮುಖ್ಯಮಂತ್ರಿಗಳಾಗಿ ಜನಪರ ಕಾರ್ಯಕ್ರಮಗಳನ್ನು ಸಮಾಜಕ್ಕೆ ಕೊಟ್ಟು ಜನಪ್ರಿಯ ಗಳಿಸಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಗಾಂಧೀಜಿಯವರ ಸತ್ಯಮೇವ ಜಯತೇ ಎಂಬ ನಾನ್ನುಡಿಯಂತೆ ಮತ್ತು ಸರ್ವರಿಗೂ ಸಮ ಬಾಳು. ಸರ್ವರಿಗೂ ಸಮ ಪಾಲು ಎಂಬ ಬಸವಣ್ಣನವರ ತತ್ವದಂತೆ ನಡೆಯುತ್ತಿರುವ ಮುಖ್ಯಮಂತ್ರಿಗಳಿಗೆ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ರಾಜ್ಯದ ಎಲ್ಲಾ ವಿಚಾರಗಳನ್ನು ಸಂವಿಧಾನಾತ್ಮಕವಾಗಿ ನೋಡುವ ಸ್ಥಾನದಲ್ಲಿದ್ದು ಏಕ ಪಕ್ಷೀಯವಾಗಿ ವರ್ತಿಸಬಾರದೆಂದು ಅಧ್ಯಕ್ಷರು-ಎಂ.ಸಿ. ವೇಣುಗೋಪಾಲ್, ಮಾಜಿ ಶಾಸಕರು,  ಸವಿತಾ ಸಮಾಜ ಬೆಂಗಳೂರು,ಪ್ರಧಾನ ಕಾರ್ಯದರ್ಶಿ-ಎಂ. ನಾಗರಾಜು, ಹೆಳವ ಸಮಾಜ ಬೆಂಗಳೂರು, ಖಜಾಂಚಿ-ಎಲ್.ಎ. ಮಂಜುನಾಥ್, ನಿವೃತ್ತ ಡಿ.ಸಿ. ಅಬಕಾರಿ, ತಿಗಳ ಸಮಾಜ ಬೆಂಗಳೂರು ಮತ್ತು ಇತರ ಮುಖಂಡರುಗಳ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ (ರಿ) ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ  ವಿನಯಪೂರ್ವಕವಾಗಿ ಕೋರಿಕೆ ಸಲ್ಲಿಸಲಾಯಿತು.

City Today News 9341997936

ಕೆ.ಎಸ್.ಹಿಡಿ.ಎಲ್. ಬೆಂಗಳೂರು ಮಾರುಕಟ್ಟೆ ವಿಭಾಗದ ಕಾರ್ಮಿಕರಿಗೆ ವೇತನ ಹೆಚ್ಚಳ ಹಾಗೂ ಬೋನಸ್ ನೀಡದಿರುವುದನ್ನು ಖಂಡಿಸಿ ಮುಷ್ಕರ

ಕೆ.ಎಸ್.&ಡಿ.ಎಲ್. ಬೆಂಗಳೂರು ಮಾರುಕಟ್ಟೆ ವಿಭಾಗದಲ್ಲಿ ಕಳೆದ 26 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕ ಕಾಯಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಕಾಯಿದೆಗಳನ್ನು ಉಲ್ಲಂಘನೆ ಮಾಡಿ ಕಾರ್ಮಿಕರಿಗೆ ಕಾನೂನಿನ ರೀತಿ ನೀಡಬೇಕಿರುವ ವಾರ್ಷಿಕ ತುಟ್ಟಿಭತ್ಯೆ, ವೇತನ ಹೆಚ್ಚಳ, ಬೋನಸ್ ಕಾಯಿದೆ ಪ್ರಕಾರ ಬೋನಸ್, ಹಕ್ಕಿನ ರಜೆಗಳ ಸವಲತ್ತು ಹಾಗೂ ಕಾರ್ಮಿಕರಿಗೆ ಅರ್ಹ ಸವಲತ್ತುಗಳನ್ನು ನೀಡುತ್ತಿಲ್ಲ.

ಬೆಂಗಳೂರು ಮಾರುಕಟ್ಟೆ ವಿಭಾಗ ಹಾಗೂ ದೇಶದ ಎಲ್ಲಾ ಕಡೆಯ ಮಾರುಕಟ್ಟೆ ನೌಕರರ ನಿರಂತರ ಪರಿಶ್ರಮದಿಂದ ಇಂದು ಕಾರ್ಖಾನೆ 1200 ಕೋಟಿ ಠೇವಣಿಯನ್ನು ಇಡಲಾಗಿದೆ. ಕಾರ್ಮಿಕರಿಗೆ ನೀಡಬೇಕಿರುವ ವೇತನ ಹೆಚ್ಚಳ, ಸಮಾನ ಕೆಲಸಕ್ಕೆ ಸಮಾನ ವೇತನ, ತುಟ್ಟಿಭತ್ಯೆ, ಮನೆ ಬಾಡಿಗೆ, ಸಾರಿಗೆ ಭತ್ಯೆ ಹಾಗೂ ಬೋನಸ್ ಅನ್ನು ನೀಡದೇ ಆಡಳಿತ ವರ್ಗ ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು. ಇಂದಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ಇತ್ಯಾಧಿ ಖರ್ಚುಗಳಿಗೆ ಅವರಿಗೆ ಸಿಗುತ್ತಿರುವ ವೇತನದಿಂದ ಜೀವನ ಮಾಡಲು ಸಾಧ್ಯವಿಲ್ಲ. ಕೆ.ಎಸ್.ಪಿಡಿ.ಎಲ್. ಕಾರ್ಖಾನೆಯಲ್ಲಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಖಾಯಂ ನೌಕರರಿಗೆ 65,000/- ದಿಂದ 75,000/- ದವರೆಗೆ ವೇತನ ಸಿಗುತ್ತದೆ. ಆದೇ ಕೆಲಸವನ್ನು ಮಾಡುವ ನೇರ ಗುತ್ತಿಗೆ ಕಾರ್ಮಿಕರಿಗೆ ಕೇವಲ 20,000/- ರಿಂದ 25,000/- ವೇತನ ನೀಡಲಾಗುತ್ತಿದೆ. ಇದರಿಂದ ತಿಳಿಯಬಹುದು ಗುತ್ತಿಗೆ ಹೆಸರಿನಲ್ಲಿ ಕಾರ್ಮಿಕರ ಶೋಷಣೆ ಅಲ್ಲದೇ ಗುತ್ತಿಗೆ ಕಾರ್ಮಿಕ ಕಾಯಿದೆ 1970ರ ಸೆಕ್ಷನ್ 25(5)ರ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದಾರೆ.

ಕೆ.ಎಸ್‌.&ಡಿ.ಎಲ್. ಕಾರ್ಖಾನೆ ಕರ್ನಾಟಕದ ಸಾರ್ವಜನಿಕ ಉದ್ದಿಮೆಯಾಗಿದೆ. ಇದು ಮಾದರಿಯ ಮಾಲೀಕರಾಗಿ ಅರ್ಹ ಸವಲತ್ತುಗಳನ್ನು ನೀಡಬೇಕಿರುವುದು ಸರ್ಕಾರಿ ಸಾಮ್ಯದ ಆದ್ಯ ಕರ್ತವ್ಯವಾಗಿದೆ. ಇದನ್ನು ಉಲ್ಲಂಘನೆ ಮಾಡಿ ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವುದನ್ನು ಈ ಸಾರ್ವಜನಿಕ ಉದ್ದಿಮೆಯಲ್ಲಿ ಕಾಣಬಹುದು.

ಕೆ.ಎಸ್.&ಡಿ.ಎಲ್. ಮಾರುಕಟ್ಟೆ ವಿಭಾಗದ ಕಾರ್ಮಿಕರ ಬೇಡಿಕೆಗಳು :

1) 2023-24ನೇ ಸಾಲಿನ ಇನ್‌ಕ್ರೀಮೆಂಟ್ ಅನ್ನು ಉತ್ಪಾದನಾ ಹಾಗೂ ಇತರೆ ಕಾರ್ಮಿಕರಿಗೆ ನೀಡಿ ಈ ಸವಲತ್ತುಗಳನ್ನು ಮಾರುಕಟ್ಟೆ ನೌಕರರಿಗೆ ನೀಡಬೇಕು.

2) ಮಾರುಕಟ್ಟೆ ನೌಕರರಿಗೆ ಕಳೆದ 8 ವರ್ಷಗಳಿಂದ ಬೋನಸ್ ಕಾಯಿದೆ ಪ್ರಕಾರ ಬೋನಸ್ ನೀಡಬೇಕಿದ್ದರು ಇದನ್ನು ನೀಡಿಲ್ಲ. ಆದ್ದರಿಂದ ಕೂಡಲೇ ನೀಡಬೇಕು.

3) ದೇಶದ ಮುಂಬೈ, ಕಲ್ಕತ್ತಾ, ಚೆನೈ ಹಾಗೂ ಹೈದರಾಬಾದ್ ಮಾರುಕಟ್ಟೆ ಶಾಖೆಗಳಲ್ಲಿ ಅಲ್ಲಿನ ನೌಕರರಿಗೆ ಬಡ್ತಿ ನೀಡಿ ಕರ್ನಾಟಕದಲ್ಲಿಯೇ ಬಡ್ತಿ ನೀಡಿಲ್ಲ. ಇದನ್ನು ಕೂಡಲೇ ನೀಡಬೇಕು.

4) ಕೆ.ಎಸ್.&ಡಿ.ಎಲ್. ಮಾರುಕಟ್ಟೆ ವಿಭಾಗಕ್ಕೆ ನೂತನವಾಗಿ ಕೆಲಸಕ್ಕೆ ತೆಗೆದುಕೊಂಡಿರುವ ಜಿ.ಕೆ. ನವೀನ್ ಕುಮಾರ್‌ಗೆ 65000/- ವೇತನ ನೀಡಲಾಗುತ್ತಿದೆ. ಅದೇ ರೀತಿ ಮಾರುಕಟ್ಟೆಯ ಎಲ್ಲಾ ನೌಕರರಿಗೆ 65000/- ವೇತನ ಹೆಚ್ಚಳ ಮಾಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.

5) ಮಾರುಕಟ್ಟೆ ಗುರಿಯನ್ನು ವೈಜ್ಞಾನಿಕವಾಗಿ ಹಾಗೂ ಸಂಘದ ಕಾರ್ಮಿಕ ಮುಖಂಡರುಗಳ ಜೊತೆ ಚರ್ಚಿಸಿ ತೀರ್ಮಾನಿಸುವುದು.

6) ದೇಶದ ಕಲ್ಕತ್ತಾ, ಹೈದರಾಬಾದ್ ಮಾರುಕಟ್ಟೆ ಶಾಖೆಗಳಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದರು ಮಾರುಕಟ್ಟೆಯ ಪ್ರಧಾನ ವ್ಯವಸ್ಥಾಪಕರಾಗಲೀ ಅಥವಾ ಇತರೆ ಅಧಿಕಾರಿಗಳು ಯಾವುದೇ ಕ್ರಮವಹಿಸುತ್ತಿಲ್ಲ.

7) ಕೆ.ಎಸ್.&ಡಿ.ಎಲ್. ಕಾರ್ಖಾನೆಯಲ್ಲಿ ನಿವೃತ್ತಿಯಾದ ನೌಕರರನ್ನು ಪುನರ್ ನೇಮಕ ಮಾಡಬಾರದೆಂದು ಸರ್ಕಾರದ

ಆದೇಶವಿದ್ದರು ಕೆ.ಎಸ್‌.&ಡಿ.ಎಲ್.ನಲ್ಲಿ ನಿವೃತ್ತಿಯಾದ ದಿನಾಂಕದ ವೇತನವನ್ನು ನೀಡಿ ಮುಂದುವರೆಸುವುದನ್ನು ಕೂಡಲೇ ನಿಲ್ಲಿಸಿ ಕೆಲಸದಿಂದ ತೆಗೆಯಲು ಒತ್ತಾಯಿಸಲಾಗಿದೆ.

ಈ ಮೇಲ್ಕಂಡ ಬೇಡಿಕೆಗಳನ್ನು ಒತ್ತಾಯಿಸಿ ಧರಣಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಸಂಸ್ಥೆಯ ಮಾನ್ಯ ಅಧ್ಯಕ್ಷರು ವಿದೇಶ ಪ್ರವಾಸದಲ್ಲಿರುವ ಕಾರಣ 12-08-2024ರಂದು ನಡೆಸಬೇಕಿದ್ದ ಧರಣಿ ಮುಷ್ಕರವನ್ನು ಮಾನ್ಯ ಅಧ್ಯಕ್ಷರು ವಿದೇಶದಿಂದ ವಾಪಸ್‌ ಬಂದ ಕೂಡಲೇ ಬೇಡಿಕೆಗಳನ್ನು ಒತ್ತಾಯಿಸಿ ಧರಣಿ ಮುಷ್ಕರ ನಡೆಸಲಾಗುವುದು ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷರಾದಂತ ಜಿ.ಆರ್.ಶಿವಶಂಕರ್ ತಿಳಿಸಿದರು.

City Today News 9341997936

ಸುಪ್ರೀಂ ಕೋರ್ಟ್ ಆಗಸ್ಟ್ 1ರಂದು ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದವರಿಗೆ ಮೀಸಲಾತಿಯ ತೀರ್ಪು ನೀಡಿರುವ ಕುರಿತು ಬಿಜೆಪಿ ಸರ್ಕಾರಕ್ಕೆ ಧನ್ಯವಾದ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಿಜೆಪಿ ಸರ್ಕಾರದ ಶ್ರೀ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟವರ್ಗ ಮೀಸಲಾತಿ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಪರಿಶಿಷ್ಟ ಜಾತಿ ಮೀಸಲಾತಿ ಶೇ.15% ರಿಂದ ಶೇ.17%ಕ್ಕೆ ಏರಿಕೆ ಮಾಡುವುದರ ಜೊತೆಗೆ ಎಲ್ಲಾ 101 ಪರಿಶಿಷ್ಟ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಣವನ್ನು ರೂಪಿಸಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ವರದಿ ಶಿಫಾರಸ್ಸು ಮಾಡಿ ದಲಿತರ ಬದುಕಿಗೆ ಹೊಸ ಇತಿಹಾಸ ಬರೆದ ರಾಜ್ಯ ಬಿ.ಜೆ.ಪಿ ಸರ್ಕಾರ ಮುಖ್ಯಪಾತ್ರ ವಹಿಸಿರುತ್ತದೆ.

ಇ.ವಿ.ಚನ್ನಯ್ಯ ವಿರುದ್ಧ ಆಂಧ್ರಪ್ರದೇಶ 2004ರ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ರವರು ನೀಡಿದ ತೀರ್ಪು ಒಳ ಮೀಸಲಾತಿಯೇ ಅಸಂವಿಧಾನಿಕ ಎನ್ನುತ್ತಿದ್ದ ರಾಜಕಾರಣಿಗಳಿಗೆ ಪ್ರಗತಿಪರ ಹೋರಾಟಗಾರರಿಗೆ, ಸುಪ್ರೀಂ ಕೋರ್ಟ್‌ನ 7 ಜನ ನ್ಯಾಯಾಧೀಶರ ಪೀಠ ಮೀಸಲಾತಿ ಹಂಚಿಕೆ ಬಗ್ಗೆ ಉತ್ತರ ನೀಡಿದೆ. ಜನವರಿ ತಿಂಗಳಲ್ಲಿ ಮೂರು ದಿನ ವಿಸ್ತತ ಚರ್ಚೆ ನಡೆಸಿ ತೀರ್ಪು ಕಾಯ್ದಿರಿಸಿತ್ತು.

ಮೂವತ್ತು ವರ್ಷಗಳ ಸುದೀರ್ಘ ಹೋರಾಟಗಳು, ಅವಮಾನಗಳು, ಪ್ರಾಣತ್ಯಾಗ ಮಾಡಿ ಈ ದಿನ ಮಾದಿಗ ಮತ್ತು ಮಾದಿಗ ಉಪಜಾತಿಗಳಿಗೆ ವಿಜಯ ಬಾವುಟವನ್ನು ಹಾರಿಸಿ ಮಾದಿಗರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿರುವ ರಾಷ್ಟ್ರೀಯ ನಾಯಕರು ಅಭಿನವ ಅಂಬೇಡ್ಕರ್ ಶ್ರೀ ಮಂದಕೃಷ್ಣ ಮಾದಿಗ ರವರಿಗೆ ಈ ಕೀರ್ತಿ ಸಲ್ಲುತ್ತದೆ.

ಆರ್ಥಿಕ, ಸಾಮಾಜಿಕ, ವಿದ್ಯಾ, ಉದ್ಯೋಗ ರಂಗಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ಮೀಸಲಾತಿ ಹಂಚಿಕೆ ಮಾಡಬಹುದೆಂದು ಸಂವಿಧಾನವಾಗಿ 1-8-2024 ರಂದು ಪರಿಶಿಷ್ಟ ಜಾತಿ ಮತ್ತು ಉಪಜಾತಿಗಳ ಉಪವರ್ಗಿಕರಣ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

ಈ ಕೂಡಲೆ ಹಾಲಿ ಕಾಂಗ್ರೆಸ್ ಸರ್ಕಾರ ಸುಪ್ರೀಂಕೋರ್ಟ್ ಮೀಸಲಾತಿ ಹಂಚಿಕೆ ತೀರ್ಪು ಕುರಿತು ತಕ್ಷಣವೇ ಜಾರಿಗೆ ತಂದು ಕಾಂಗ್ರೆಸ್ ಸರ್ಕಾರ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿರುವ ಎಲ್ಲವನ್ನು ಸ್ಥಗಿತಗೊಳಿಸಿ ಮೀಸಲಾತಿ ಹಂಚಿಕೆ ಮಾಡುವಲ್ಲಿ ಸರ್ಕಾರವು 30 ದಿನಗಳೊಳಗಾಗಿ ಮುಂದಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ವಿಳಂಬ ಮಾಡಿದಲ್ಲಿ ಬೀದರ್‌ನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತೇವೆಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ ಸರ್ಕಾರಕ್ಕೆ 7 ಮಂದಿ ತೀರ್ಪು ನೀಡಿರುವ ನ್ಯಾಯಾಧೀಶರುಗಳಿಗೆ, ಎಲ್ಲಾ ಹೋರಾಟಗಾರರಿಗೆ, ಬುದ್ಧಿಜೀವಿಗಳಿಗೆ ಮಾದಿಗ ದಂಡೂರ ಮಾದಿಗ ಹೋರಾಟ ಸಮಿತಿಯಿಂದ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಬಿ.ನರಸಪ್ಪ ದಂಡೂರ ರಾಜ್ಯ ಅಧ್ಯಕ್ಷರು ರವರು ಮಾದಿಗ ದಂಡೋರ ಸಮಿತಿಯ ಮುಖಂಡರುಗಳಾದ ಮಂಜುನಾಥ್ ಕೊಂಡಪಲ್ಲಿ,ಎಸ್.ರಾಮಕೃಷ್ಣ,ತ್ರಿಲೋಕ್ ಚಂದರ್,ಗಣೇಶ್ ದುಪ್ಪಳ್ಳಿ,ಫರ್ನಾಂಡೀಸ್ ಹಿಪ್ಪಳಾಂಗವ,ಜೆ.ಎಂ.ದೇವರಾಜ್ ಮತ್ತು ವೆಂಟೇಶ್ ಕತ್ತಿ ಯವರ  ಉಪಸ್ಥಿತಿಯಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುದರು.

City Today News 9341997936

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ NHM ಒಳ ಗುತ್ತಿಗೆ ನೌಕರರ ಸಂಘವು ಮಣಿಪುರ ರಾಜ್ಯದಲ್ಲಿ NHM ಒಳ ಗುತ್ತಿಗೆ ನೌಕರರು ಖಾಯಂ ಆಗಿರುವಂತೆ ಕರ್ನಾಟಕದಲ್ಲಿಯೂ ಸಹ ಖಾಯಂ ಮಾಡುವಂತೆ ಆಗ್ರಹ.

ಫೆಬ್ರವರಿ -2023 ರಲ್ಲಿ 40 ದಿನಗಳ ಕಾಲ 28000 NHM ಒಳ ಗುತ್ತಿಗೆ ನೌಕರರನ್ನು ಖಾಯಂ ಮಾಡುವಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮುಷ್ಕರ ನಡೆಸಿರುತ್ತೇವೆ ಅಂದಿನ ಸರ್ಕಾರ ಕೊನೆ ಘಳಿಗೆಯಲ್ಲಿ ನಮ್ಮ ಬೇಡಿಕೆಯನ್ನು ಈಡೇರಿಸದೆ ಕಾಲ ಹರಣ ಮಾಡಿ ಇಂದು ವಿರೋಧ ಪಕ್ಷದಲ್ಲಿ ಕೂರುವಂತಾಗಿದೆ. ಅಂದು ಮುಷ್ಕರದ ವೇದಿಕೆಗೆ KPCC ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಹಾಗೂ ದಿನೇಶ್ ಗುಂಡೂರಾವ್ ರವರು ಆಗಮಿಸಿ ಕೊರೋನ-19 ಮಹಾಮಾರಿ ಕಾಯಿಲೆ ವಿಶ್ವದಾದ್ಯಂತ ಅಪ್ಪಳಿಸಿದ ಸಮಯದಲ್ಲಿ ಆರೋಗ್ಯ ಇಲಾಖೆಯ ಸೇವೆಯನ್ನು ಪರಿಗಣಿಸಿ ನಮ್ಮ NHM ನೌಕರರನ್ನು ಖಾಯಂ ಮಾಡುವುದಾಗಿ ಭರವಸೆ నిడి ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿರುತ್ತಾರೆ.ಇದರಂತೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಪ್ರಚಂಡ ಬಹುಮತದೊಂದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ಅಧಿಕಾರ ನಡೆಸುತ್ತಿದೆ.ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ 5 ಪ್ರಮುಖ ಭರವಸೆಗಳನ್ನು ಈಗಾಗಲೇ ಯಶಸ್ವಿಯಾಗಿ ಈಡೇರಿಸಿದ್ದು ಇನ್ನು ಅನೇಕ ಬೇಡಿಕೆಗಳನ್ನು ಈಡೇರಿಸಿರುತ್ತಾರೆ. ಇದರಂತೆ NHM ಒಳ ಗುತ್ತಿಗೆ ನೌಕರನ್ನು ಖಾಯಂ ಮಾಡುವಂತೆ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರನ್ನು NHM ಒಳ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿರುತ್ತೇವೆ.

ಇದರಂತೆ ದಿನಾಂಕ 16-03-2024 ರಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸೂಕ್ತ ಕ್ರಮ ವಹಿಸಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿರುತ್ತಾರೆ.ಮುಖ್ಯಮಂತ್ರಿಗಳ ನಿರ್ದೇಶನದಂತೆ NHM ಒಳ ಗುತ್ತಿಗೆ ನೌಕರರ ಖಾಯಂ ಕಡತವು ತಯಾರಾಗಿದ್ದು ಸಚಿವ ಸಂಪುಟದಲ್ಲಿ ಅನುಮೋದನೆ ನೀಡುವಲ್ಲಿ ವಿಳಂಬವಾಗುತ್ತಿದೆ. ಇದರಿಂದ ನಮ್ಮ ನೌಕರರು ವಿಚಾಲಿತರಾಗಿರುತ್ತಾರೆ. ಪ್ರಮುಖ ಭರವಸೆಗಳನ್ನು ಈಡೇರಿಸುವ ಜೊತೆಗೆ ಇನ್ನು ಅನೇಕ ಬೇಡಿಕೆಗಳನ್ನು ಈಡೇರಿಸಿರುತ್ತಾರೆ


1) ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ಸಮಯದಲ್ಲಿ ಇಡಿಘಂಟು ಯೋಜನ ಜಾರಿ ಮಾಡಿರುತ್ತಾರೆ.

2) ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಿರುತ್ತಾರೆ.

3) ಇತ್ತೀಚೆಗೆ ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಿರುತ್ತಾರೆ.

ಇದರಂತೆ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಿ ಜನಮನ್ನಣೆ ಪಡೆದಿರುವ ಸರ್ಕಾರವು ನುಡಿದಂತೆ ನಡೆಯುತ್ತಿದೆ.

ಸರ್ಕಾರಿ ನೌಕರರಿಗೆ ಸಮನಾಗಿ ಯಾವುದೇ ಸೌಲಭ್ಯಗಳನ್ನು NHM ನೌಕರರು ಪಡೆಯದೇ ಅತ್ಯಂತ ಕಡಿಮೆ ಸಂಚಿತ ವೇತನ ಪಡೆದು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಅನೇಕ ವರ್ಷಗಳಳಿಂದ ಸೇವೆ ನೀಡುತ್ತಾ ಬಂದಿರುತ್ತೇವೆ. ಸಾಮಾಜಿಕ ನ್ಯಾಯದ ಬಗ್ಗೆ ಅಪಾರ ಕಾಳಜಿ ಹಾಗೂ ಅದನ್ನು ಜಾರಿ ಮಾಡುವಲ್ಲಿ ಯಶಸ್ವಿಯಾಗಿರುವ ನುಡಿದಂತೆ ನಡೆಯುತ್ತಿರುವ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ನಮ್ಮ ನ್ಯಾಯಯುತವಾದ ಖಾಯಂ ಬೇಡಿಕೆಯನ್ನು 15-08- 2024 ರ ಒಳಗೆ ಈಡೇರಿಸಬೇಕೆಂದು 28258 NHM ಒಳ ಗುತ್ತಿಗೆ ನೌಕರರು ಆಗ್ರಹಿಸುತ್ತೇವೆ ಎಂದು
ಅಶ್ವತ್ ಹೆಚ್. ಕೆ  ರಾಜ್ಯ ಅಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

ಈ ಕೂಡಲೇ ಜಾತಿ ಕದ್ದ ಕೊತ್ತುರು ಜಿ. ಮಂಜುನಾಥ್ ರವರನ್ನು ಕೂಡಲೇ ಅಮಾನತ್ತುಗೊಳಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ ಎಲ್ಲಾ ಬಂಧುಗಳ ಆಗ್ರಹ.

ಕೋಲಾರ ಶಾಸಕರಾದ ಶ್ರೀ ಕೊತ್ತೂರು ಜಿ. ಮಂಜುನಾಥ್ ರವರು ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಿ 2013 ರಿಂದ 2018 ರವರೆಗೆ ಮುಳಬಾಗಿಲು ವಿಧಾನಸಭಾ (ಎಸ್‌ಸಿ ಮೀಸಲು) ಕ್ಷೇತ್ರದ ಶಾಸಕರಾಗುವ ಮೂಲಕ ವಂಚಿಸಿದ್ದು, ಇವರ ವಿರುದ್ಧವಾಗಿ ಕರ್ನಾಟಕ ರಾಜ್ಯ ಹೈಕೋರ್ಟ್ನ WPNo.2841/2023 (G.M-CC) ಪ್ರಕರಣದ ಆದೇಶದಂತೆ ಇವರ ವಿರುದ್ಧ ಕ್ರಮ ತೆಗೆದುಕೊಂಡು ಪರಿಶಿಷ್ಟ ಜನಾಂಗಕ್ಕೆ ನ್ಯಾಯ ಒದಗಿಸಿಕೊಡುವ ಬಗ್ಗೆ.

ಕೊತ್ತೂರು ಜಿ. ಮಂಜುನಾಥ್ ರವರು ಅಕ್ರಮವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಂಡು ಈ ಪ್ರಮಾಣ ಪತ್ರವನ್ನು ದಿನಾಂಕ:15/09/2012 ರಂದು ಮುಳಬಾಗಿಲು ತಾಲ್ಲೂಕು, ತಹಶೀಲ್ದಾರ್ ರವರು ದೂರುದಾರರಿಗೆ ಯಾವುದೇ ಕಾರಣಕ್ಕೂ ಈ ಹಿಂದೆ ಪಡೆದಿರುವಂತಹ ಜಾತಿ ಪ್ರಮಾಣ ಪತ್ರವನ್ನು ನೀವು ಉಪಯೋಗಿಸಬಾರದೆಂದು ಎಚ್ಚರಿಕೆ ಸಹ ಕೊಟ್ಟಿದ್ದರು. ಹೀಗಿದ್ದರೂ ಸಹ ಕೊತ್ತೂರು ಜಿ. ಮಂಜುನಾಥ್ ರವರು ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಮುಳಬಾಗಿಲು ವಿಧಾನಸಭಾ ಮೀಸಲು ಕ್ಷೇತ್ರದ ಚುನಾವಣೆಗಾಗಿ 2013 ರಂದು ಜಾತಿ ಪ್ರಮಾಣ ಪತ್ರವನ್ನು ಉಪಯೋಗಿಸಿರುತ್ತಾರೆ. ಕರ್ನಾಟಕ ಹೈಕೋರ್ಟ್ ಚುನಾವಣಾ ಪಿಟೀಷನ್ ನಂ:4/2013 ರಂದು ಕೇಸು ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿಯೂ ಸಹ ಕೊತ್ತೂರು ಜಿ. ಮಂಜುನಾಥ್ ರವರ ವಿರುದ್ಧವಾಗಿ ಆದೇಶವಾಗಿರುತ್ತಾರೆ.

ಇದಾದ ಮೇಲೆ ಚುನಾವಣೆ ರಿಟ್ ಪಿಟೀಷನ್ ನಂ:4/2013 ಆದೇಶದ ವಿರುದ್ಧ ಕೊತ್ತೂರು ಜಿ. ಮಂಜುನಾಥ್ ಸುಪ್ರಿಂ ಕೋರ್ಟ್‌ನಲ್ಲಿ ಸಿವಿಲ್ ಅಪೀಲ್ 4533/2018 ಜಾತಿ ಪ್ರಮಾಣ ಪತ್ರವನ್ನು ಪರಿಶೀಲನೆ ಮಾಡಿ ಕೊತ್ತೂರು ಜಿ.ಮಂಜುನಾಥ್ ರವರು ಉಪಯೋಗಿಸಿಕೊಂಡಿರುವ ನಕಲಿ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ ಇವರು ಬೈರಾಗಿ ಜನಾಂಗಕ್ಕೆ ಸೇರಿದವರಾಗಿತ್ತಾರೆಂದು ಆದೇಶ ನೀಡಿರುತ್ತಾರೆ. ಆದರೆ ಇವರು ಪರಿಶಿಷ್ಟ ಜಾತಿ (ಬುಡಗ ಜಂಗಮ ಜಾತಿ) ಗೆ ಬರುವುದಿಲ್ಲವೆಂದು ತಿಳಿಸಿರುತ್ತಾರೆ. ಕೋಲಾರ ಜಿಲ್ಲೆಯ ಜಿಲ್ಲಾ ಜಾಗೃತಿ ಸಮಿತಿ ವರದಿಯ ಕುರಿತು ಬೇಕಾದಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದೆಂದು ಸೂಚಿಸಿರುತ್ತಾರೆ.

ಕೊತ್ತೂರು ಜಿ. ಮಂಜುನಾಥ್ ರವರು ಜಿಲ್ಲಾ ಪರಿಶೀಲನಾ ಸಮಿತಿ (ಡಿಸಿಎಸಿ) ವರದಿಯನ್ನು ಪ್ರಶ್ನಿಸಿ ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ಡೆಪ್ಯುಟಿ ನಂ.2841/2023 (ಜಿ.ಎಂ-ಸಿಸಿ) ದಾವೆ ಹೂಡಿ ಈ ದಾವೆಯು 20/12/2023 ರಂದು ನ್ಯಾಯಾಲಯವು ಅಪೀಲನ್ನು ಡಿಸ್‌ಮಿಸ್ ಮಾಡಿರುತ್ತಾರೆ. ಆದರೆ ಕರ್ನಾಟಕ ಸರ್ಕಾರ ಜಿ.ಕೊತ್ತೂರು ಮಂಜುನಾಥ್ ರವರ ಮೇಲೆ ಕ್ರಮಕೈಗೊಳ್ಳಲು ಸರ್ಕಾರದ ಅಧೀನಕ್ಕೆ ಕಳುಹಿಸಿರುತ್ತಾರೆ. ನ್ಯಾಯಾಲಯದಲ್ಲಿ 2023 ಡಿಸೆಂಬರ್ ತಿಂಗಳಲ್ಲಿ ಆದೇಶವಾಗಿದ್ದು, ಇದುವರೆವಿಗೂ ಕರ್ನಾಟಕ ಸರ್ಕಾರ ಯಾವುದೇ ಕ್ರಮಕೈಗೊಳ್ಳದೇ ಮಂದಗತಿಯಲ್ಲಿ ನಮಗೆ ಸಂಬಂಧನೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವುದು ಎಷ್ಟು ಸರಿ, ಈ ನಡೆ ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟ ಹಾಗೆ ಅಲ್ಲವೇ?

ಆದ್ದರಿಂದ ಈ ಕೂಡಲೇ ಜಾತಿ ಕದ್ದ ಕೊತ್ತುರು ಜಿ. ಮಂಜುನಾಥ್ ರವರನ್ನು ಕೂಡಲೇ ಅಮಾನತ್ತುಗೊಳಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ ಎಲ್ಲಾ ಬಂಧುಗಳು ಕಾಯುತ್ತಿರುವುದು ಸರ್ಕಾರದ ನಿರ್ಧಾರಕ್ಕೆ ದಯವಿಟ್ಟು ಕೂಡಲೇ ಇತ್ಯರ್ಥ ಪಡಿಸಿ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೂಹಳ್ಳಿ ಪ್ರಕಾಶ್ ಜಿಲ್ಲಾಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಪ್ರಕಟಿಸಿದರು. ಪತ್ರಿಕಾ ಗೋಷ್ಠಿ ಯಲ್ಲಿ ಒಕ್ಕೂಟದ ನಾಯಕರುಗಳಾದ ದಲಿತ ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ,ಮುರಳಿ ದಲಿತ ಮುಖಂಡರು ಮುಳಬಾಗಿಲು,K. ಅನಂತ ಕೀರ್ತಿ ಜಿಲ್ಲಾ ಉಪಾಧ್ಯಕ್ಷರು ಕೋಲಾರ,ಹನುಮಾನ್ ದಲಿತ ಮುಖಂಡರು ಕೋಲಾರ,ಶ್ರೀನಾಥ್ ದಲಿತ ಮುಖಂಡರು, ಮಾಲೂರು,ಸದಾಶಿವ ದಲಿತ ಮುಖಂಡರು, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷರು,ಜಗದೀಶ್ ದಲಿತ ಮುಖಂಡರು ಮುಳಬಾಗಿಲು ಮತ್ತು ವೆಂಕಟ್ ರೆಡ್ಡಿ  ಶ್ರೀನಿವಾಸಪುರ ಉಪಸ್ಥಿತರಿದ್ದರು.

City Today News 9341997936