ಉದ್ದೇಶಿತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು-ಶಿರಾ ಭಾಗದಲ್ಲಿ ನಿರ್ಮಿಸುವಂತೆ ರಾಜ್ಯ ಸರ್ಕಾರದಲ್ಲಿ ಮನವಿ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

ಉತ್ತರ ಕರ್ನಾಟಕದ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಗಣ್ಯರು, ಉದ್ದಿಮೆದಾರರು, ರಾಜ್ಯದ ಅಭಿವೃದ್ಧಿಗೆ ಪೂರಕವಾದ ಆಲೋಚನೆ ಮಾಡುವ ಚಿಂತಕರು, ತಜ್ಞರ ಮತ್ತು ಪ್ರಮುಖರ ಸಭೆಯನ್ನು ದಿನಾಂಕ: 14-07-2024 ರಂದು ಬೆಳಿಗ್ಗೆ 9:00 ಗಂಟೆಗೆ ಸಭೆ ಸೇರಿ, ಉದ್ದೇಶಿತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರಿಗೆ ಹೊಂದಿಕೊಂಡು, ಮೈಸೂರು ರಸ್ತೆಯ ಕಡೆಯಲ್ಲಿ ಮಾಡುತ್ತಿರುವುದಾಗಿ ತಿಳಿದುಬಂದಿರುವ ಹಿನ್ನೆಲೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ಮಾಡಲಾಗಿ, ಈ ಕೆಳಕಂಡ ಅಂಶಗಳ ಬಗ್ಗೆ ಆಲೋಚನೆ ಮಾಡಲಾಗಿ, ಉದ್ದೇಶಿತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು-ಶಿರಾ ಮಧ್ಯಭಾಗದಲ್ಲಿ ನಿರ್ಮಿಸುವುದು ಹೆಚ್ಚು ಸೂಕ್ತವೆಂದು ಅಭಿಪ್ರಾಯಪಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪುನರ್ ಪರಿಶೀಲಿಸಿ, ಸದರಿ ಉದ್ದೇಶಿತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು-ಚಿತ್ರದುರ್ಗದ ಹೆದ್ದಾರಿಯಲ್ಲಿ ಬರುವ ತುಮಕೂರು-ಶಿರಾ ಮಧ್ಯದಲ್ಲಿ ನಿರ್ಮಿಸಬೇಕೆಂದು ಸಮಗ್ರ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಜನರ ಪರವಾಗಿ ವಿನಂತಿಸಿಕೊಳ್ಳುತ್ತೇವೆ.

ಪ್ರಮೂಖ ಅಂಶಗಳು:

* ತುಮಕೂರು ಶಿರಾ ಮಧ್ಯದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದರಿಂದ ಬಾಗಶಃ ಉತ್ತರ -ದಕ್ಷಿಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ.

+ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಸ್ವಾದೀನ ವೆಚ್ಚವು ಕಡಿಮೆಯಾಗಲಿದ್ದು ಸದರಿ ಸ್ಥಳದಲ್ಲಿ ಸರಕಾರಿ ಜಮೀನು ಯಥೇಚ್ಚವಾಗಿದ್ದು ಕಾಮಗಾರಿಯ ವೆಚ್ಚ ಕಮ್ಮಿಯಾಗುವುದರೊಂದಿಗೆ ತ್ವರಿತ ಕಾಮಗಾರಿ ಸಂಪೂರ್ಣಗೊಳಿಸಲು ಸಹಕಾರಿಯಾಗುತ್ತದೆ.

* ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ಭಾಗದಲ್ಲಿ ಮಾಡುವುದರಿಂದ ರೈತರಿಗೆ, ಕೃಷಿ ಕಾರ್ಮಿಕರಿಗೆ, ನಿರುದ್ಯೋಗಿ ಯುವಕ/ ಯುವತಿಯರಿಗೆ ಆರ್ಥಿಕವಾಗಿ ಸದೃಢಗೊಳ್ಳುವದರೊಂದಿಗೆ, ಈ ಭಾಗದ ರೈತರ ಮಕ್ಕಳಿಗೆ ಉದ್ಯೋಗ ಸೃಷ್ಟಿಸಿದಂತೆಯಾಗುತ್ತದೆ.

← ತುಮಕೂರು ಶಿರಾ ಮಧ್ಯದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾಗುವುದರಿಂದ ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳನ್ನೊಳಗೊಂಡಂತೆ ಸಮಗ್ರ ಉತ್ತರ ಕರ್ನಾಟಕದ ಜಿಲ್ಲೆಗಳ ಅಂತರಾಷ್ಟ್ರೀಯ ವಾಪಾರಸ್ಥರಿಗೆ, ರೈತರಿಗೆ ಬಹು ದೊಡ್ಡ ಅಂತರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಿದಂತೆಯಾಗುತ್ತದೆ.

+ ಈ ಭಾಗದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದರಿಂದ ಈ ದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಜನ ಸಂಖ್ಯೆ, ಟ್ರಾಫಿಕ್ ಸಮಸ್ಯೆ, ವಸತಿಯ ಸಮಸ್ಯೆ, ನೀರಿನ ಸಮಸ್ಯೆ, ವಿದ್ಯುತ್ತಿನ ಸಮಸ್ಯೆ ಮತ್ತು ಜೀವನ ವೆಚ್ಚ ಸ್ವಲ್ಪ ಮಟ್ಟ ಸುಧಾರಣೆಗುಳ್ಳುತ್ತದೆ.

+ ಉತ್ತರ ಕರ್ನಾಟಕ ಹಾಗೂ ಮದ್ಯ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ದ್ರಾಕ್ಷಿ, ದಾಳಿಂಬೆ, ಮಾವು, ಈರುಳ್ಳಿ, ಜೋಳ, ಕಡಲೆ, ಶೇಂಗಾ ಸಿರಿದಾನ್ಯಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವುದರೊಂದಿಗೆ ಆರ್ಥಿಕವಾಗಿ ಸದೃಢವಾಗಿ ರೈತರಿಗೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ. ಸಾಗಾಣೆ ವೆಚ್ಚ ಸಹ ಶೇ 50% ಸಹ ಉಳಿತಾಯವಾಗಲಿದೆ.

ತುಮಕೂರು ಶಿರಾ ಭಾಗದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದರಿಂದ ಈಗಾಗಲೆ ಎಲ್ಲಾ ದಿಕ್ಕಿನಿಂದ ಅತ್ಯುತ್ತಮ ರಸ್ತೆಗಳ ಸಂಪರ್ಕ ಹೊಂದಿದ್ದು ಸದರಿ ಪ್ರದೇಶದಲ್ಲಿರುವ ರೈತರ ಭೂಮಿಗೆ ಹೆಚ್ಚಿನ ದರ ದೊರಕಲಿದ್ದು ಅಂತರಾಷ್ಟ್ರೀಯ ವಿಮಾಣ ನಿಲ್ದಾಣ ಸುತ್ತ-ಮುತ್ತ ಮತ್ತು ರಸ್ತೆಯ ಬದಿಗಳಲ್ಲಿರುವ ಅಕ್ಕ-ಪಕ್ಕದ ಹಳ್ಳಿ ಹೋಬಳಿಗಳು ಅಭಿವೃದ್ಧಿಗೊಳ್ಳುವುದರಿಂದ ಉದ್ಯೋಗಳನ್ನು ಬಯಸಿ ಬೆಂಗಳೂರಿಗೆ ವಲಸೆ (ಗೂಳೆ) ಬರುವ ಜನರ ಸಂಖ್ಯೆ ಕಡಿಮೆಮಾಡಿದಂತೆಯಾಗುತ್ತದೆ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಲಿದೆ.

* ತುಮಕೂರು ಶಿರಾ ಮಧ್ಯದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದರಿಂದ ಭವಿಷ್ಯದಲ್ಲಿ ವಿಮಾನ ನಿಲ್ದಾಣ ವಿಸ್ತರಣೆಗೆ ಭೂಮಿ ಲಭ್ಯತೆ ಮತ್ತು ನಿಲ್ದಾಣಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳು ಸುಲಭವಾಗಿ ಲಭಿಸಲಿವೆ.

* ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮೈಸೂರು ವಿಮಾನ ನಿಲ್ದಾಣಗಳ ನಡುವೆ ಅಂತರ ಕೇವಲ 120 ಕಿ.ಮಿ. ಈ ವ್ಯಾಪ್ತಿಯಲ್ಲಿದ್ದು ಈ ನಡುವೆ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ಥಾವನೆ ಸಮಂಜಸವಲ್ಲ.

* ಚಿತ್ರದುರ್ಗಾ ಮತ್ತು ತುಮಕೂರು ಜಿಲ್ಲೆಗಳಲ್ಲಿ ಏಷಾದಲ್ಲಿ ಅತೀ ದೊಡ್ಡ ಕೈಗಾರಿಕಾ ಪಾರ್ಕ್ ಒಳಗೊಂಡಂತೆ, ಕೇಂದ್ರ ಸರಕಾರದ ISRO, DRDO, HAL ನಂತಹ ಕಂಪನಿಗಳು ಪ್ರಾರಂಭಗೊಂಡಿದ್ದು ವಿಮಾನ ನಿಲ್ದಾಣಕ್ಕೆ ಬೇಕಾದ ಭೂಮಿ ಗುಣಮಟ್ಟದ ಉತ್ಕೃುಷ್ಟತೆಗೆ ಸಾಕ್ಷಿಯಾಗಿದೆ.

+ ತುಮಕೂರು ಹೊಗಲಾಡಿಸಿದಂತೆಯಾಗುತ್ತದೆ. ಮಧ್ಯದಲ್ಲಿ ಮಾಡುವುದರಿಂದ ಪ್ರಾದೇಶಿಕ ಅಸಮತೊಲನ ಸ್ವಲ್ಪಮಟ್ಟಿಗೆ

+ ಈಗಾಗಲೆ ಹಿಂದಿನ ಸರ್ಕಾರಗಳು ತುಮಕೂರು ಶಿರಾ ಮಧ್ಯದಲ್ಲಿ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು 3,000 ಸಾವಿರ ಎಕರೆ ಜಮೀನನ್ನು ಗುರುತಿಸಿ ಸರ್ವೆ ಮಾಡಲಾಗಿದೆಯಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ತುಮಕೂರು ಶಿರಾ ಮಧ್ಯದಲ್ಲಿ ಸಾಕಷ್ಟು ಜಮೀನು ದೊರೆಯುವದರಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಬೃಗತ್ ಕಾರ್ಖಾನೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಪ್ರಾರಂಭಗೊಳ್ಳತ್ತವೆ. ಅಲ್ಲದೆ ಹಾಲಿ ಆ ಭಾಗದಲ್ಲಿರುವ ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳು ಅಭಿವೃದ್ಧಿ ಪಡಿಸಿದಂತೆಯಾಗುತ್ತದೆ. ಇದರಿಂದಾಗಿ ಎಲ್ಲಾ ವಿದ್ಯಾರ್ಹತೆ ಹೊಂದಿದ ಮತ್ತು ಹೊಂದದೆ ಇರುವ ಎಲ್ಲಾ ವರ್ಗದ ಕನ್ನಡಿಗರಿಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಿದಂತೆಯಾಗುತ್ತದೆ. ಹಾಗೂ ದೇಶ ವಿದೇಶಗಳ ಮತ್ತು ರಾಜ್ಯದ ವಿದ್ಯರ್ಥಿಗಳಿಗೆ ಉನ್ನತ ಶಿಕ್ಷಣಗಳು ಕಡಿಮೆ ವೆಚ್ಚದಲ್ಲಿ ದೊರಕಿಸಿದಂತೆಯಾಗುತ್ತದೆ. ಹಾಗಾಗಿ ತುಮಕೂರು ಶಿರಾ ಮಧ್ಯದಲ್ಲಿ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವದು ಸೂಕ್ತವೆಂಬುವದು ಕರ್ನಾಟಕದ ಬಹುಜನರ ಬೇಡಿಕೆಯಾಗಿರುತ್ತದೆ.

ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳು, ಮಾನ್ಯ ಸಚಿವರುಗಳು, ಮಾನ್ಯ ಕೇಂದ್ರ ಸಚಿವರುಗಳು, ಮಾನ್ಯ ರಾಜ್ಯ ಸಭಾ ಸದಸ್ಯರುಗಳು, ಮಾನ್ಯ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮತ್ತು ಎಲ್ಲಾ ಪೀಠದ ಮಹಾಸ್ವಾಮಿಗಳು, ಮಠಾದೀಶರಲ್ಲಿ ನಮ್ಮ ಈ ಮನವಿಯನ್ನು ಒಮ್ಮತದಿಂದ ಪರಿಗಣಿಸಿ ಉದ್ದೇಶಿತ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಶಿರಾ ಮಧ್ಯದಲ್ಲಿ ನಿರ್ಮಿಸುವಂತೆ ನಮ್ಮ ಎಲ್ಲಾ ಸಂಘಟನೆಗಳು, ಉದ್ದಿಮೇದಾರರು, ರೈತರು, ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಉತ್ತರ ಕರ್ನಾಟಕ ನಾಗರೀಕರ ಅಭಿವೃದ್ಧಿ ಸಂಘದ ಹೋರಾಟ ಸಮಿತಿಯ ಅಧ್ಯಕ್ಷರೂಗಳದಂತ ದಂತ ಡಾ|| ಮಹಾಂತೇಶ್ ಆರ್. ಚರಂತಿಮಠ್,ಡಾ||ಬಿ. ಜಿ. ಅವಟಿ ಮತ್ತು ಪ್ರಧಾನ ಕಾರ್ಯಧರ್ಶಿ ಸುನಿಲ್ ಹೆಳವರ ರವರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಕರ್ನಾಟಕದ ಎಲ್ಲಾ ಬ್ಯೂಟಿಷಿಯನ್ಗಳಿಂದ ದಿನಾಂಕ 26/07/2024 ಶುಕ್ರವಾರ ಫ್ರೀಡಂ ಪಾರ್ಕಿನಲ್ಲಿ ಬೆಳಿಗ್ಗೆ 09.30 ರಿಂದ ಹೋರಾಟ

ಬೆಂಗಳೂರು ಬ್ಯೂಟಿಷಿಯನ್ ವುಮೆನ್ಸ್ ಟ್ರಸ್ಟ್ ವತಿಯಿಂದ ಕರ್ನಾಟಕ ಎಲ್ಲಾ ಜಿಲ್ಲೆ ಮತ್ತು ತಾಲೂಕು ಬ್ಯೂಟಿಷಿಯನ್‌ಗಳು, ಮೇಕಪ್ ಆರ್ಟಿಸ್ಟ್‌ಗಳು ಮತ್ತು ಕರ್ನಾಟಕ ಸವಿತ ಸಮಾಜದ ಹೇರ್ ಡ್ರೆಸ್ಸರ್ಸ್‌ಗಳು ಸೇರಿ ಕೆಲವು ಬೇಡಿಕೆಗಳಿಗೆ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಮಹಿಳಾ ಬ್ಯೂಟಿಷಿಯನ್‌ ಗಳಿಗೆ ಹಾಗೂ ಸವಿತಾ ಸಮಾಜದವರಿಗೂ ಮತ್ತು ಬ್ಯೂಟಿಗೆ ಸಂಬಂಧಪಟ್ಟ ಯಾವುದೇ ವರ್ಗದವರಿಗೆ ಯಾವುದೇ ರೀತಿಯ ಸೌಲಭ್ಯಗಳು ಸರ್ಕಾರದಿಂದ ದೊರೆಯದೆ ಇರುವುದರಿಂದ ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತಿದ್ದೇವೆ, ಅವುಗಳು ಈ ಕೆಳಗಿನಂತಿವೆ.

1. ಒಂದು ಪಾರ್ಲ‌್ರಗೂ ಮತ್ತೊಂದು ಪಾರ್ಲ‌ರ್ಗೂ ಕನಿಷ್ಠ ಪಕ್ಷ ಒಂದರಿಂದ ಎರಡು ಕಿಲೋಮೀಟರ್ ಅಂತರವಿರಬೇಕು.

2. ಮೂರರಿಂದ ಆರು ತಿಂಗಳು ಬ್ಯೂಟಿ ಪಾರ್ಲರ್ ತರಬೇತಿಯಾದ ಬ್ಯೂಟಿಷಿಯನ್‌ಗಳಿಗೆ ಕನಿಷ್ಠ ಪಕ್ಷ ಒಂದು ವರ್ಷ ಸರ್ವಿಸ್ ಮುಗಿದ ನಂತರ ಪಾರ್ಲರ್ ತೆರೆಯಲು ಬಿ.ಬಿ.ಎಂ.ಪಿ ಯಿಂದ ಲೈಸೆನ್ಸ್ ನೀಡುವಂತೆ ಮನವಿ ಮಾಡಲಾಗಿದೆ.

3. ಕಾರ್ಮಿಕರ ಕಾರ್ಡ್ ಇರುವ ಹಾಗೆ ನಮಗೂ ಅಂದರೆ ಬ್ಯೂಟಿಷಿಯನ್ಸ್ ಗಳಿಗೆ ಒಂದು ಕಾರ್ಡ್ ನೀಡಬೇಕೆಂದು ಸರ್ಕಾರದಲ್ಲಿ ಮನವಿ ಮಾಡಿದ್ದೇವೆ.

4. ಎಲ್ಲಾ ಕಂಪನಿಗಳಲ್ಲಿ ಪಿ.ಎಫ್ ಮತ್ತು ಇ.ಎಸ್.ಐ ಗಳು ಇರುವ ಹಾಗೆ ನಮ್ಮ ಬ್ಯೂಟಿ ಪಾರ್ಲ‌್ರಗಳಿಗೂ ಒಂದು ವ್ಯವಸ್ಥೆಯಾಗಬೇಕು.

5. 50 ವರ್ಷ ಮೇಲ್ಪಟ್ಟ ಮತ್ತೆ 20 ರಿಂದ 30 ವರ್ಷ ಸರ್ವಿಸ್ ಆದವರಿಗೆ ಇಂತಿಷ್ಟು ಪೆನ್ನನ್ ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿಸಿದ್ದೇವೆ.

6 . ಸರ್ಕಾರದಿಂದ ಸಿಗುವಂತಹ ಸಬ್ಸಿಡಿ ಲೋನ್‌ಗಳು ವ್ಯವಸ್ಥೆಯಾಗಬೇಕು.

7. ಎಲ್ಲಾ ಪಾರ್ಲ‌್ರಗಳಲ್ಲಿಯೂ ಒಂದೊಂದು ಸರ್ವಿಸ್‌ ಗೆ ನಿಗದಿತವಾದ ದರಗಳನ್ನು ಇಡಬೇಕು.

8. ಎಲ್ಲಾ ಪಾರ್ಲ‌್ರಗಳಿಗೆ ಅಧಿಕಾರಿಗಳು ಭೇಟಿ ಕೊಟ್ಟು ಒಳ್ಳೆಯ ಗುಣಮಟ್ಟದ ಸೌಂದರ್ಯವರ್ಧಕಗಳನ್ನು ಬಳಸುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು.

9. ಕೆಲವು ಸೌಕರ್ಯಗಳ ಬಗ್ಗೆ ಸರ್ಕಾರಕ್ಕೆ ಮನವಿ ಹಾಗೂ ಹೋರಾಟ ಮಾಡಲು ಬೆಂಗಳೂರು ಬ್ಯೂಟಿಷಿಯನ್ ವುಮೆನ್ಸ್ ಟ್ರಸ್ಟ್ ಎಲ್ಲಾ ಪದಾಧಿಕಾರಿಗಳು ಹೋರಾಡುತ್ತಿದ್ದೇವೆ ಹಾಗೂ ಈ ಹೋರಾಟಕ್ಕೆ ಸವಿತಾ ಸಮಾಜದವರು ಕೂಡ ಕೈಜೋಡಿಸುತ್ತಿದ್ದಾರೆ ಹಾಗೆಯೇ ನಮ್ಮ ಕರ್ನಾಟಕದ ಎಲ್ಲಾ ಬ್ಯೂಟಿಷಿಯನ್ಗಳು ದಿನಾಂಕ 26/07/2024 ಶುಕ್ರವಾರ ಫ್ರೀಡಂ ಪಾರ್ಕಿನಲ್ಲಿ ಬೆಳಿಗ್ಗೆ 09.30 ರಿಂದ ಹೋರಾಟ ಇರುತ್ತದೆ  ಎಂದು ಅಧ್ಯಕ್ಷರು ಹಾಗೂ ಬೆಂಗಳೂರು ಬ್ಯೂಟಿಷಿಯನ್ ವುಮೆನ್ಸ್ ಟ್ರಸ್ಟ್‌ನ ಪದಾಧಿಕಾರಿಗಳು ಮತ್ತು ಕರ್ನಾಟಕ ಸವಿತಾ ಸಮಾಜ ದವರು  ಜಂಟಿಯಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಹಾಲಿ ಮಹಿಳಾ ಮತ್ತು ಮಕ್ಕಳ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಳರ್ ರವರ ಏಕಪಕ್ಷೀಯ ನಿರ್ಧಾರಕ್ಕೆ ಸಂಯುಕ್ತ ಸಂಘರ್ಷ ಸಮಿತಿಯಿಂದ ತೀವ್ರ ವಿರೋಧ

ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿಯಲ್ಲಿರುವ ಸಂಘಟನೆಗಳು ತೆಗೆದುಕೊಂಡ ನಿರ್ಣಯಗಳು

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

ದಿನಾಂಕ : 19-07-2024ರಂದು ಬೆಳಗ್ಗೆ 11-30ಕ್ಕೆ ಎಲ್ಲಾ ಸಂಯುಕ್ತ ಸಂಘರ್ಷ ಸಮಿತಿಯ ಅಂಗನವಾಡಿ ಸಂಘಟನೆಗಳ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಕರ್ನಾಟಕ ಸರ್ಕಾರ ಶಿಶು ಅಭಿವೃದ್ಧಿ ಯೋಜನೆಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಸಮಸ್ಯೆಗಳ ಬಗ್ಗೆ ಸುಧೀರ್ಘವಾಗಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಚರ್ಚೆ ನಡೆಸಿದ ನಂತರ ಎಲ್ಲಾ ಸಂಘಟನೆಗಳು ಸರ್ವಾನುಮತದಿಂದ ಈ ಕೆಳಕಂಡ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

1) ಸರ್ವೋಚ್ಛ ನ್ಯಾಯಾಲಯ ಅಂಗನವಾಡಿ ಕಾರ್ಯಕರ್ತೆಯರಿಗೆ / ಸಹಾಯಕಿಯರಿಗೆ ನಿವೃತ್ತಿ ಉಪಧನ (ಗ್ರಾಚ್ಯುಟಿ) ಬಗ್ಗೆ ಆದೇಶ ಮಾಡಿರುತ್ತದೆ. ಆ ಆದೇಶದ ಪ್ರಕಾರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರು 1975 ರಿಂದ ಕೆಲಸ ಮಾಡುತ್ತಿದ್ದು ಕಾಲ ಕಾಲಕ್ಕೆ ನಿವೃತ್ತಿಯಾದ ದಿನಾಂಕಗಳಲ್ಲಿ ಅವರಿಗೆ ಗ್ರಾಚ್ಯುಟಿ (ನಿವೃತ್ತಿ ಉಪಧನ) ಕೊಡುವ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಏಪ್ರಿಲ್ 25, 2022ರಲ್ಲಿ ಆದೇಶಿಸಿದೆ. ಆದರೆ ಕರ್ನಾಟಕ ಸರ್ಕಾರ 01-04-2023ರಿಂದ ಅನ್ವಯವಾಗುವಂತೆ ಗ್ರಾಚ್ಯುಟಿ (ಉಪಧನ) ಬಗ್ಗೆ ಮಾಡಿರುವ ಆದೇಶವನ್ನು ಕೂಡಲೇ ವಾಪಸ್ ಪಡೆದು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ /ಸಹಾಯಕಿಯರಿಗೆ ಗ್ರಾಚ್ಯುಟಿ (ಉಪಧನ) ನೀಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.

2) ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ., ಯು.ಕೆ.ಜಿ. ಶಿಕ್ಷಣ ನೀಡಲು ನಿರ್ಧರಿಸಿದ್ದು ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ಮಾಂಟಸ್ಸರಿ ಎಂದು ಹೊಸದಾಗಿ 22ನೇ ಜುಲೈ 2024 ರಿಂದ ನಾಮಕರಣ ಮಾಡಲು ಸರಿಯಷ್ಟೇ. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ., ಯು.ಕೆ.ಜಿ. ಮಾಡುವುದು ಸ್ವಾಗತನೀಯ. ಆದರೆ ಇದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಅಂಗನವಾಡಿ ಸಂಘಟನೆಗಳು ಕಳೆದ 35 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು ಆ ಸಂಘಟನೆಗಳ ಅಭಿಪ್ರಾಯವನ್ನು ಪಡೆಯದೇ ಸರ್ಕಾರ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಿರುವುದನ್ನು ಸಂಯುಕ್ತ ಸಂಘರ್ಷ ಸಮಿತಿಯ ಎಲ್ಲಾ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಇದರ ಬಗ್ಗೆ ಎಲ್ಲಾ ಸಂಘಟನೆಗಳ ಮುಕ್ತ ಅಭಿಪ್ರಾಯಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಇಲಾಖೆಯ ಆದ್ಯ ಕರ್ತವ್ಯ. ಇದಕ್ಕೆ ಬದಲಾಗಿ ಅಂಗನವಾಡಿ ಸಂಘಟನೆಗಳನ್ನು ಸದರಿ ವಿಷಯದಲ್ಲಿ ಹೊಡೆದು ಆಳುವ ಇಲಾಖೆಯ ಅಧಿಕಾರಿಗಳ ಮತ್ತು ಸಚಿವರ ಅಭಿಪ್ರಾಯಗಳನ್ನು ಎಲ್ಲಾ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ರಾಜ್ಯದಲ್ಲಿರುವ 61,876 ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ.ಯನ್ನು ಹಂತ ಹಂತವಾಗಿ ಪ್ರಾರಂಭಿಸುವುದಲ್ಲದೇ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರಿಗೆ ತರಭೇತಿ, ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸಭೆಯಲ್ಲಿ ಎಲ್ಲಾ ಸಂಘಟನೆಗಳ ಅಭಿಪ್ರಾಯ ವ್ಯಕ್ತಪಡಿಸಿವೆ.

3) ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುತ್ತಿರುವ ಪೌಷ್ಠಿಕ ಆಹಾರದ ಗುಣಮಟ್ಟ ಸರಿಯಿಲ್ಲದ ಕಾರಣ ಫಲಾನುಭವಿಗಳು ಆ ಪೌಷ್ಠಿಕ ಆಹಾರ ತಿನ್ನುತ್ತಿಲ್ಲ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ನಿಯಮಾವಳಿಗಳಲ್ಲಿ ಸ್ಥಳೀಯ ಪೌಷ್ಠಿಕ ಆಹಾರ ನೀಡಲು ನಿಯಮವಿದ್ದರು ಅದನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಹಣ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿರುವ ನೀತಿಯನ್ನು ನಮ್ಮ ಎಲ್ಲಾ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ.

4) ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಹಾಗೂ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಪ್ರಾರಂಭದಿಂದ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಹಾಲಿ ಮಹಿಳಾ ಮತ್ತು ಮಕ್ಕಳ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಳರ್ ರವರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದನ್ನು ಸಂಯುಕ್ತ ಸಂಘರ್ಷ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಬೆಂಗಳೂರು  ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.

City Today News 9341997936

ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆರ್.ಎಸ್,  ಟ್ಯೂರ್ ಅಂಡ್ ಟ್ರಾವೆಲ್ಸ್ ರವರಿಗೆ ಯಾವುದೇ ರೀತಿಯ ಉಪಯೋಗ ಇಲ್ಲದ ಕಾರಣದಿಂದ ರದ್ದು ಮಾಡಲು ರಾಜ್ಯ ಸರ್ಕಾರಕ್ಕೆ ಆಗ್ರಹ.

ಚಾಲಕರಿಗೆ ಮತ್ತು ಮಾಲೀಕರಿಗೆ ಸಾಕಷ್ಟು ತೊಂದರೆ ಉಂಟಾಗಿರುವ ಎಫ್.ಸಿ ಆಗದಂತೆ ಸಾಕಷ್ಟು ಜನರಿಗೆ ತೊಂದರೆ ಉಂಟಾಗಿರುತ್ತದೆ ಆದ ಕಾರಣದಿಂದ ವಾಹನದ ಯೆಲ್ಲೋ ಬೋರ್ಡ್ ಮಾಲೀಕರಿಗೆ ಸಂಕಷ್ಟದಲ್ಲಿದ್ದಾರೆ.

ಈ ನಮ್ಮ ರಾಜ್ಯ ಸರ್ಕಾರವು ಇದನ್ನು ಪರಿಶೀಲಿಸಿ ಸೂಕ್ತವಾದ ನ್ಯಾಯ ಒದಗಿಸಿ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆರ್.ಎಸ್ ಟ್ಯೂರ್ ಅಂಡ್ ಟ್ರಾವೆಲ್ಸ್ ರವರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ ಕಾರಣ ನಾವು ಹೊರಗಡೆ ಅಥವಾ ಹೊರರಾಜ್ಯದಲ್ಲಿ ಓಡಾಡುವ ಸಮಯದಲ್ಲಿ ವಯಸ್ಸಾಗಿರುರವರಾಗಲಿ, ಮಕ್ಕಳಾಗಲಿ ಅಥವ ನಿದ್ದೆ ಮಾಡುವ ಸಮಯದಲ್ಲಾಗಲಿ ಗೊತ್ತಿದ್ದೋ ಅಥವ ಗೊತ್ತಿಲ್ಲದೆಯೋ ಆ ಬಟನ್‌ ಅನ್ನು ಒತ್ತಿದರೆ 1) ಚಾಲಕರಿಗೆ ಪೋಲೀಸರಿಂದ ಸಾಕಷ್ಟು ತೊಂದರೆ ಆಗುತ್ತದೆ 2) ಈ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆರ್.ಎಸ್ ಐಟಿ ಕಂಪನಿಗಳಲ್ಲಿ ಒಡಾಡುವಂತಹ ಟಿ.ಟಿ ಗಾಡಿ ಹಾಗೂ ಕಾರುಗಳು ಇಂತವರಿಗೆ ಅವಶ್ಯಕತೆ ಇರುತ್ತದೆ 3) ಟ್ಯೂರ್ ಅಂಡ್ ಟ್ರಾವಲ್ಸ್ ಹೊರಗಡೆ ಮತ್ತು ಒಳಗಡೆ ಅಂದರೆ ರಾಜ್ಯ ಹಾಗೂ ಹೊರರಾಜ್ಯ ಓಡಾಡುವುದರಿಂದ ನಮ್ಮ ಚಾಲಕರಿಗೆ ಯಾವುದೇ ರೀತಿಯ ಉಪಯೋಗ ಇರುವುದಿಲ್ಲ

4) ಇತ್ತೀಚಿನ ದಿನಗಳಲ್ಲಿ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆ‌ರ್.ಎಸ್ ಆದೇಶದಿಂದ ಸಾವಿರಾರು ಗಾಡಿಗಳು ಎಫ್.ಸಿ ಮತ್ತು ಫಾಸಿಂಗ್ ಆಗುತ್ತಿಲ್ಲ 5) ಕರ್ನಾಟಕ ರಾಜ್ಯದ ಒಟ್ಟು ಟೆಂಪೋ ಟ್ರಾವೆಲ್ ವಾಹನಗಳು ಮಠಕ್ಕೆ ಓಡಾಡುವ ವಾಹನಗಳು 3% 6) ಸಾಲಾ ಕಾಲೇಜುಗಳಲ್ಲಿ 20% 7) ವಿವಧ ರೀತಿಯ ಕಂಪನಿಗೆ 55% 7) ಪ್ರವಾಸಕ್ಕೆ 40% 8) ಅಂಗಡಿ ದಿನಸಿಗೆ 5% 9) ಕ್ಯಾರಿವ್ಯಾನ್‌ 2% 10) ಪ್ರವಾಸ ವಾಹನ (ಟಿ.ಟಿ) ಮಾಲೀಕರು ಒಟ್ಟು ಕಟ್ಟುತ್ತಿರುವ ತೆರಿಗೆ 1 ವರ್ಷಕ್ಕೆ

1) 21,200 ಟಾಕ್ಸ್

2) 2,800 ಎಫ್.ಸಿ

3) 35,000 ವಿಮೆ ಕಟ್ಟುತ್ತಿದ್ದಾರೆ ಹಾಗೂ ಈ ಟಿ.ಟಿ ವಾಹನವನ್ನು ಚಲಾಯಿಸುವವರ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬೇಕು ತಮ್ಮಗಳಿಗೆ ಒಂದು ವರ್ಷದಲ್ಲಿ ಕೇವಲ ಆರು ತಿಂಗಳು ಮಾತ್ರ ಬಾಡಿಗೆ ಇರುತ್ತದೆ ಇನ್ನುಳಿದ 6 ತಿಂಗಳು ಮನೆ ಬಾಗಿಲಿನಲ್ಲಿ ನಿಂತಿರುತ್ತದೆ ಆದರೂ ಸಹ ಟಾಕ್ಸನ್ನು ಕಟ್ಟುತ್ತಿರುತ್ತೇವೆ. ಆದರೆ ಐಟಿಬಿಟಿ ಕಂಪನಿಗಳಲ್ಲಿ ಓಡಾಡುವ ವಾಹನಗಳಿಗೆ ಒಂದು ವರ್ಷ ಪೂರ್ತಿಯಾಗಿ ಬಾಡಿಗೆಯು ಸಿಗುತ್ತದೆ. ಆದ್ದರಿಂದ ಇದನ್ನೆಲ್ಲಾ ಪರಿಗಣಿಸಿ ದಯಮಾಡಿ ತಾವು ಈ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆರ್.ಎಸ್ ನ್ನು ರದ್ದುಗೊಳಿಸಲೇ ಬೇಕೆಂದು ಬಡಚಾಲಕರ ಮತ್ತು ಬಡಮಾಲೀಕರ ವಿನಂತಿ ಈ ವಿನಂತಿಯನ್ನು 7 ದಿನಗಳ ಒಳಗಾಗಿ ಈ ನಮ್ಮ ಟೆಂಪೋ ಟ್ರಾವೆಲ್ ರವರ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ತಮ್ಮಲ್ಲಿ ಹೃದಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವೆ.

ನಮ್ಮ ಮಾವವಿ ಈಡೇರಿಸಲು ತಪ್ಪಿದಲ್ಲಿ, ಈ ವಿಚಾರವಾಗಿ ದಿನಾಂಕ 30-07-2024 ರಂದು ಪ್ರೀಡಂ ಪಾರ್ಕ್‌ನಲ್ಲಿ ಹೋರಾಟವನ್ನು ಹಮ್ಮಿಕೊಂಡಿರುತ್ತೇವೆ. ಈ ನಮ್ಮ ಸಮಸ್ಯೆ ಬಗೆಹರಿಯುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಅಸೋಸಿಯೇನ್ ನ ಅಧ್ಯಕ್ಷರಾದ ಮಂಟೇಲಿಂಗ ಗೌಡ ಮತ್ತು ರಾಜ್ಯ ಗೌರವ ಅಧ್ಯಕ್ಷರಾದ ಕೆ. ಮಂಜುನಾಥ್ ಗೌಡರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಹಾಗೂ ಪಧಾದಿಕಾರುಗಳು ಉಪಸ್ಥಿತರಿದ್ದರು.

City Today News 9341997936

ಸರ್ಕಾರಕ್ಕೆ ನೈತಿಕತೆ ಇದ್ದರೆ ಕೂಡಲೇ ರೈತರಿಗೆ ಪರಿಹಾರದ ನಿವೇಶನ ನೀಡಲು ಅನುಮತಿ ನೀಡಿ

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

20 ವರ್ಷ ಕಳೆದರೂ ಬಿ.ಎಂ.ಐ.ಸಿ.ಯೋಜನೆಯಲ್ಲಿ ಭೂಮಿ ಕಳೆದುಕೊಂಡ 2000 ರೈತ ಕುಟುಂಬಗಳಿಗಿನ್ನೂ ಪರಿಹಾರದ ನಿವೇಶನ ನೀಡಲು ಅನುಮತಿ ನೀಡದ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಮ್ಮ ಬಿಟ್ಟಿ ಗ್ಯಾರಂಟಿಗಳ ಹೊಟ್ಟೆ ತುಂಬಿಸಲು ನೈಸ್ ಯೋಜನೆಯ ಭೂಮಿ ಮೇಲೆ ಕಣ್ಣಾಕಿ ಸಂಪನ್ಮೂಲ ತುಂಬಿಸಿಕೊಳ್ಳಲು ಯಾವ ಹಕ್ಕಿದೆ..!? ಮೊದಲು ಸರ್ಕಾರಕ್ಕೆ ನೈತಿಕತೆ ಇದ್ದರೆ ಕೂಡಲೇ ರೈತರಿಗೆ ಪರಿಹಾರದ ನಿವೇಶನ ನೀಡಲು ಅನುಮತಿ ನೀಡಿ,

ಕನ್ನಡ ನಾಡು- ನುಡಿ,ನೆಲ-ಜಲ ಹಾಗು ಕನ್ನಡ ರೈತಜನರ ಪರ ನಿರಂತರ ಹೋರಾಟ ಮಾಡುತ್ತಾ ಬಂದಿರುವ ‘ ಕರ್ನಾಟಕ ಸಂಘಟನೆಗಳ ಒಕ್ಕೂಟವು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕ್ಕೆ ಆಗ್ರಹ ಪಡಿಸುತ್ತಾ, ಈ ಪತ್ರಿಕಾ ಗೋಷ್ಠಿ ಕರೆದ ವಿವರ ಏನೆಂದರೆ,ಜುಲೈ 3 ನೇ ತಾರೀಖಿನ ವಿಜಯ ಕರ್ನಾಟಕ ಪತ್ರಿಕೆಯ ಮುಖಪುಟದ ಸುದ್ದಿ ಪ್ರಕಟವಾಗಿರುವ ಪ್ರಕಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ತನ್ನ ಬಿಟ್ಟಿ ಗ್ಯಾರಂಟಿಗಳ ಹೊಟ್ಟೆ ತುಂಬಿಸಿಕೊಳ್ಳುವ ಭರದಲ್ಲಿ ಆ ಯೋಜನೆಗಳ ವೆಚ್ಚ ಸರಿದೂಗಿಸಲು ತುಮಕೂರು ರಸ್ತೆಯ ಮಾದಾವರ ದಿಂದ ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಯವರೆಗಿನ ಬೆಂಗಳೂರು ಸಿಟಿ ಹೊರಗಿನ ಬೃಹತ್ ಹಾಗು ಶೀಘ್ರ ಸಂಚಾರದ ಬೆನ್ನೆಲುಬಾಗಿರುವ ನೈಸ್ ಕಂಪನಿ ನಿರ್ಹಿಸುತ್ತಿರುವ ಬಿ.ಎಂ.ಐ.ಸಿ. ಯೋಜನೆಯನ್ನು ಸ್ವಾಧೀನ ಪಡಿಸಿಕೊಂಡು ಅದರ ಮೂಲಕ ರಸ್ತೆಯ ಆಸುಪಾಸಿನ ಸಾವಿರಾರು ಎಕರೆ ಭೂಮಿಯನ್ನು ಸಂಪನ್ಮೂಲಕ್ಕೆ ಮಾರ್ಗವಾಗಿಸುವ ಲೆಕ್ಕಾಚಾರ ಹಾಕಿ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ ಎಂಬ ಸುದ್ದಿ ಓದಿ ನಿಜಕ್ಕೂ ಆಶ್ಚರ್ಯ ಉಂಟಾಯಿತು. ಇದೊಂದು ಅಪ್ರಬುದ್ಧ ಹಾಗು ದುರಾದೃಷ್ಟಕರ ನಡೆ ಎಂದು ಒಕ್ಕೂಟ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಒಂದೆಡೆ ಸರ್ಕಾರ ಯುರೋಪ್ ಮತ್ತು ಜಪಾನ್..ನಂತಹ ರಾಷ್ಟ್ರಗಳ ಖಾಸಗೀ ಕಂಪನಿಗಳನ್ನು ಆಹ್ವಾನಿಸಿ, ಮೂಲಭೂತ ಸೌಕರ್ಯ ಕ್ಷೇತ್ರ ಹಾಗು ಕೈಗಾರಿಕಾ ಕ್ಷೇತ್ರಗಳಿಗಾಗಿ ಅಗತ್ಯ ಸಾವಿರಾರು ಎಕರೆ ಭೂಮಿ,ನೀರು ನೀಡುವ ಒಪ್ಪಂದ ಮಾಡಿಕೊಳ್ಳುತ್ತಾ ಬರುತ್ತಿದ್ದು,ಮತ್ತೊಂದೆಡೆ ಇನ್ನೂ ಅನೇಕ ಕಾನೂನು ಪ್ರಕರಣಗಳು ರೈತ ಪರಿಹಾರ ವ್ಯಾಜ್ಯಗಳು ಬಾಕಿ ಇರುವ ಬಿ.ಎಂ.ಐ.ಸಿ.ಯೋಜನೆ ವಶಕ್ಕೆ ಪಡೆಯುವ ಮಾತುಗಳು ಇವರ ದ್ವಂದ್ವ ನಿಲುವನ್ನು ಸಾದರಪಡಿಸುತ್ತಿವೆ.

ಪ್ರತಿಷ್ಟಿತ ಜೆ.ಎಸ್.ಡಬ್ಲೂ ಸ್ಟೀಲ್ ಕಂಪನಿಗೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಹಾಗು ಕುರೇಕೊಪ್ಪ ಬಳಿ ಒಟ್ಟು 3666 ಎಕರೆ ಭೂಮಿಯನ್ನು ಸರ್ಕಾರ ಕಡಿಮೆ ಮೊತ್ತಕ್ಕೆ ಕೊಟ್ಟಿದೆ ಇದೂ ಸಹ ರಾಜಕೀಯ ನಾಯಕರ ಮಾತಿನ ಗುದ್ದಾಟಕ್ಕೆ ವೇದಿಕೆ ಕಲ್ಪಿಸಿತ್ತು!.ಇದೇ ರೀತಿ ಟೊಯೋಟಾ ಕಂಪನಿಗೆ 1800 ಎಕರೆ ಕೆ.ಐ.ಡಿ.ಬಿ.ಮೂಲಕವೇ ರೈತರಿಂದ ನೀಡಿದ ಭೂಮಿ ಟಾಟಾ ಸ್ಟೀಲ್‌ ಬಯೋಕಾನ್,ವಿಪ್ರೋ,ಇನ್ಫೋಸಿಸ್…ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಖಾಸಗೀ ಕ್ಷೇತ್ರದಲ್ಲಿ ಸ್ಥಾಪನೆಯಾಗಿರುವ ಖಾಸಗೀ ಕಂಪನಿಗಳಿಗೆ ಸಾವಿರಾರು ಎಕರೆ ಭೂಮಿಯನ್ನು ಹಲವು ಷರತ್ತುಗಳ ಮೇಲೆಯೇ ನೀಡಲಾಗಿದ್ದು, ಹಲವಾರು ಕಡೆ ಈ ಯೋಜನೆಗಳಲ್ಲಿ ಇಂತಹ ಯೋಜನೆಗಳಿಗೆ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಸರಿಯಾದ ಪರಿಹಾರವೇ ಸಿಕ್ಕಿಲ್ಲ ಎಂದು ಇವತ್ತಿಗೂ ಅನೇಕ ಜನಪರ ಸಂಘಟನೆಗಳು ಇಂತಹ ಸರ್ಕಾರದ ನೀತಿಯ ವಿರುದ್ಧ ರೈತರ ಪರವಾಗಿ ನಿರಂತರವಾಗಿ ಹೋರಾಟ ಮಾಡುತ್ತಲೇ ಬರುತ್ತಿವೆ.

ಹೀಗಿರುವಾಗ ನೈಸ್ ಎಂಬ ಖಾಸಗೀ ಕಂಪನಿಯ ಮೂಲಕವೇ ಅನೇಕ ಷರತ್ತುಗಳು ಹಾಗು ಒಪ್ಪಂದಗಳ ಮೂಲಕವೇ ಆರಂಭವಾಗಿರುವ ಬಿ.ಎಂ.ಐ.ಸಿ. ಯೋಜನೆಗಾಗಿ ಭೂಮಿ ಕಳೆದುಕೊಂಡ III ರೈತ ಕುಟುಂಬಗಳಿಗೆ ಸರ್ಕಾರವೇ ಮಾಡಿರುವ ಒಪ್ಪಂದದ ಪ್ರಕಾರವೇ ಇನ್ನೂ ಸರಿಯಾಗಿ ಪರಿಹಾರಾರ್ಥ ನಿವೇಶನಗಳು ಹಂಚಿಕೆಯಾಗಲು ಸರ್ಕಾರವೇ ಅನುಮತಿ ನೀಡದೇ ನಾಟಕ ಆಡುತ್ತಾ, ರೈತರಿಗೆ ಕೊಡಬೇಕಾದ ಪರಿಹಾರ ಕೊಡದೇ ಇರುವಾಗ ತನ್ನ ಸಂಪನ್ಮೂಲ ಸಂಕಷ್ಟಕ್ಕೆ ಈ ಬಿ.ಎಂ.ಐ.ಸಿ.ಪಿ.ಯ ಬೆಲೆ ಬಾಳುವ ಭೂಮಿ ಮೇಲೆ ಕಣ್ಣಿಟ್ಟು ಸರ್ಕಾರದ ವಶಕ್ಕೆ ಪಡೆಯಲು ಸರ್ಕಾರಕ್ಕೆ ನೈತಿಕತೆ ಇದೆಯೇ..!? ಈ ನಡೆ ಅಪ್ರಬುದ್ಧ ಹಾಗು ಪರಿಪಕ್ಷವಲ್ಲದ್ದು ಎಂದು ಒಕ್ಕೂಟ ಆಕ್ರೋಶ ವ್ಯಕ್ತಪಡಿಸುತ್ತದೆ ಹಾಗು ಈ ಕೂಡಲೇ ಈ ಯೋಜನೆಗೆ ತಮ್ಮ ಅಮೂಲ್ಯ ಭೂಮಿ ನೀಡಿ ಅಕ್ಷರಶಃ ಬೀದಿಗೆ ಬಿದ್ದಿರುವ ರೈತರಿಗೆ ಕೂಡಲೇ ಕೊಡಬೇಕಾದ ನಿವೇಶನಗಳ ನೀಡಲು ಕಂಪನಿಗೆ ಅನುಮತಿ ನೀಡಿ ರೂತರ ನೆರವಿಗೆ ಬರಬೇಕೆಂದು ಕರ್ನಾಟಕ ಸಂಘಟನೆಗಳ ಒಕ್ಕೂಟ ಆಗ್ರಹಿಸುತ್ತದೆ ಎಂದು ಕೆ.ಎನ್.ಲಿಂಗೇಗೌಡ, ರಾಜ್ಯಾಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936