ಬೈಕ್ ಟ್ಯಾಕ್ಸಿ ಹಿಂಪಡೆತದ ರಾಜ್ಯ ಸರ್ಕಾರದ ಕ್ರಮ ಮತ್ತು ದಿನಾಂಕ:06.03.2024 ಅಧಿಸೂಚನೆಯನ್ನು ಖಾನಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಸ್ವಾಗತಿಸುತ್ತದೆ,

ಬೈಕ್ ಟ್ಯಾಕ್ಸಿ ಹಿಂಪಡೆತದ ರಾಜ್ಯ ಸರ್ಕಾರದ ಕ್ರಮ ಮತ್ತು ದಿನಾಂಕ:06.03.2024 ಅಧಿಸೂಚನೆಯನ್ನು ಖಾನಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಸ್ವಾಗತಿಸುತ್ತದೆ, ಅದೇ ರೀತಿ, ಯಶಸ್ಸಿಗೆ ಕಾರಣರಾದ ಮಾಧ್ಯಮ ಮಿತ್ರರು, ನಾರಿಗೆ ಸಚಿವರಿಗೆ, ಮತ್ತು ಮುಖ್ಯಮಂತ್ರಿಗಳಿಗೆ ನಮ್ಮ ಧನ್ಯವಾದಗಳನ್ನು ಅರ್ಪಿಸುತ್ತಾ….

ತಮಗೆಲ್ಲ ತಿಳಿದಿರುವ ಹಾಗೆ, ವಾಯು ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ರಸ್ತೆಗೆ ತರಬೇಕೆಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ತರಲಾಯಿತು. ಇದನ್ನುದೊಡ್ಡ ಹಂತದಲ್ಲಿ ಪ್ರೋತ್ಸಾಹಿಸಲೆಂದು ಕೇಂದ್ರ ಸರ್ಕಾರವು, ವಿದ್ಯುತ್ ಚಾಲಕ ದ್ವಿಚಕ್ರ ವಾಹನ ಗಳಿಗೆ ಮಾರ್ಗಸೂಚಿಗಳನ್ನು ರೂಪಿಸಿ, ರಾಜ್ಯ ಸರ್ಕಾರಗಳು ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ರೂಪಿಸಲು ಸಂಪೂರ್ಣನಾದ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿತು.

ರಾಜ್ಯ ಸರ್ಕಾರವು ಸಹ 2021 ಜುಲೈನಲ್ಲಿ ವಿದ್ಯುತ್ ಬೈಕ್ ಟ್ಯಾಕ್ಸಿಗೆ ಸಂಬಂಧಿಸಿದಂತೆ ಯೋಜನೆಯನ್ನು ರೂಪಿಸಿ ನಿಯಮಗಳನ್ನು ಜಾರಿಗೊಳಿಸಿದ್ದವು. ಬೈಕ್ ಟ್ಯಾಕ್ಸಿ ಎಂಬುದು ದೇಶದಲ್ಲಿ ದೊಡ್ಡ ದೊಡ್ಡ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಕಂಪನಿಗಳ ಕಪಿಮುಷ್ಠಿಗೆ ಒಳಗಾಗಿ, ಒಳ್ಳೆಯ ಉದ್ದೇಶಗಳಿಂದ ರೂಪಿತವಾಗಿ ಕಾರ್ಯನಿರ್ವಹಿಸಬೇಕಾದ ಯೋಜನೆಯು ನೆಲಗುದಿಗೆಗೆ ಬೀಳಲು ಹಲವು ಬಹು ರಾಷ್ಟ್ರೀಯ ಕಂಪನಿಗಳು |ಕಾರಣವಾದವು. ಬಹು ರಾಷ್ಟ್ರೀಯ ಕಂಪನಿಗಳು ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು ತಮ್ಮ ಲಾಭಕ್ಕಾಗಿ ರಸ್ತೆಗೆ ಇಳಿಸಲು ಪ್ರಾರಂಭ ಮಾಡಿ, ರಾಜ್ಯದ ಮತ್ತು ಕೇಂದ್ರದ ಕಾನೂನು, ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ತಮಗೆ ಇಷ್ಟಬದ್ದಂತೆ ಲಾಭಕ್ಕಾಗಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನದ ಯೋಜನೆಯನ್ನು ಉಪಯೋಗಿಸ ತೊಡಗಿದವು. ಇದರಿಂದ ನಗರಗಳಲ್ಲಿ ಕಾನೂನಿನ ಸುವ್ಯವಸ್ಥೆ ದಾರಿ ತಪ್ಪಿದ್ದು, ಶ್ರಮ ಪಟ್ಟು ಸರ್ಕಾರಕ್ಕೆ ತೆರಿಗೆಯನ್ನು ಕಟ್ಟಿ, ವಿಮೆಯನ್ನು ಕಟ್ಟಿ, ಪ್ರತಿ ವರ್ಷ ಫಿಟೈಸ್ ಪಡೆದು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರಿಗೆ ದೊಡ್ಡ ಮಟ್ಟದಲ್ಲಿ ಹೊಡೆತವನ್ನು ನೀಡಿ, ಉದ್ದಿಮೆಯ ಅಸ್ತಿತ್ವವನ್ನೇ ಅಲುಗಾಡಿಸುವ ಮಟ್ಟದಲ್ಲಿ ಬೆಳೆಯ ತೊಡಗಿತ್ತು. ಇದರಿಂದ ರಾಜ್ಯದ ಸುಮಾರು ಏಳು ಲಕ್ಷ ಕುಟುಂಬಗಳು ತೊಂದರೆಗೆ ಈಡಾಗುವ ಪರಿಸ್ಥಿತಿ ಉದ್ಭವವಾಗಿತ್ತು.

ಯಾವುದೇ ಮಾರ್ಗಸೂಚಿಗಳನ್ನು ಪಾಲಿಸದೆ ಲಂಗು ಲಗಾಮು ಇಲ್ಲದೆ ವ್ಯವಹಾರವನ್ನು ಮಾಡುತ್ತಿದ್ದ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಚಾಲಕರು ಮತ್ತು ಮಾಲೀಕರ ಸಂಘಟನೆಗಳು 2021 ರಿಂದಲೂ ನಾನಾ ಪೊಲೀಸ್ ಠಾಣೆಗಳಲ್ಲಿ ಮತ್ತು ಸಾರಿಗೆ ಇಲಾಖೆಗೆ ದೂರನ್ನು ಸಲ್ಲಿಸುತ್ತಲೇ ಬಂದಿದ್ದವು,, ಆದರೆ ಬಲಿಷ್ಠವಾಗಿರುವ ಬಹುರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಕಂಪನಿಗಳು, ಬೈಕ್ ಟ್ಯಾಕ್ಸಿ ಉದ್ದಿಮೆಯಲ್ಲಿ ತೊಡಗಿಸಿಕೊಂಡ ಕಾರಣ, ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ಕಡಿವಾಣ ಹಾಕುವಲ್ಲಿ ವಿಫಲವಾಗಿದ್ದವು. ಇಷ್ಟೇ ಅಲ್ಲದೆ ಬೆಂಗಳೂರು ನಗರದಲ್ಲಿ ಬೈಕ್ ಟ್ಯಾಕ್ಸಿಗಳ ಚಾಲಕರಿಂದ ಸವಾರರಿಗೆ ಯಾವುದೇ ರೀತಿಯ ಸುರಕ್ಷತೆ ಇಲ್ಲದೆ ಇರುವುದು ನಾವು ಕಾಣಬಹುದಾಗಿದೆ, ಬರುವಂತಹ ಚಾಲಕರು, ಹೆಲ್ಕೆಟ್ ಅನ್ನು ಧರಿಸಿದ್ದುಬುಕ್ ಮಾಡುವಂತ ಸವಾರರಿಗೆ ಅವರ ಮುಖ ಪರಿಚಯವೂ ಸಹ ಇಲ್ಲದೆ ಇರುವ ಕಾರಣ ಹಲವು ಚಾಲಕರು ಹೆಣ್ಣು ಮಕ್ಕಳ ಮೇಲೆ ಅಸಭ್ಯವಾಗಿ ವರ್ತಿಸಿದ್ದರು ಅಂತಹ ಕಂಡುಹಿಡಿಯಲು ಪೊಲೀಸರಿಗೆ ಸಹ ದೊಡ್ಡ ಸವಾಲಾಗಿ ಎದುರಾಗಿತ್ತು, ಅದೇ ರೀತಿ ಮಳೆಗಾಲದಲ್ಲಿ ದ್ವಿಚಕ್ರ ವಾಹನಗಳ ಸಂಚಾರ ಸಾರ್ವಜನಿಕ ಸುರಕ್ಷತಾ ಹಿತದೃಷ್ಟಿಯಿಂದಲೂ ತೊಂದರೆಯಾಗುತ್ತಿತ್ತು. ದ್ವಿಚಕ್ರ ವಾಹನಗಳ ಟ್ಯಾಕ್ಸಿ ಚಾಲನೆ ಅನಧಿಕೃತವಾದ್ದರಿಂದ, ಇಂತಹ ವಾಹನಗಳಲ್ಲಿ ಸಂಚರಿಸುವ ಸವಾರರಿಗೆ ಅಪಘಾತ ಸಂಭವಿಸಿದ ಪಕ್ಷದಲ್ಲಿ ವಿಮೆ ದೊರಕುವುದು ಸಹ ಕಷ್ಟ ಸಾಧ್ಯ ವಾಗಿತ್ತು

ಬೈಕ್ ಟ್ಯಾಕ್ಸಿಯಿಂದ ಆಗುತ್ತಿದ್ದ ತೊಂದರೆಗಳು, ಕಾನೂನಿನ ತೊಡಕುಗಳು, ಅದರಲ್ಲಿನ ವೈಫಲ್ಯಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ದಿನಾಂಕ 11.09.2023 ರಂದು ನಡೆದ ಬೃಹತ್ ಬೆಂಗಳೂರು ಬಂದ್‌ ಪ್ರತಿಭಟನೆಯ ಮೂಲಕ ತರಲಾಯಿತು. ಪ್ರತಿಭಟನೆಯ ದಿನಾಂಕದಂದು ಮಾನ್ಯ ಸಾರಿಗೆ ಸಚಿವರು ವೇದಿಕೆಯ ಮೇಲೆ ವಿದ್ಯುತ್ ಚಾಲಿತ ಬೈಕ್ ಟ್ಯಾಕ್ಸಿಯನ್ನು ಸಂಪೂರ್ಣವಾಗಿ ರಾಜ್ಯದಲ್ಲಿ ನಿಷೇಧಿಸುವುದಾಗಿ ಭರವಸೆಯನ್ನು ನೀಡಿದ್ದರು. ಮಾನ್ಯ ಸಾರಿಗೆ ಸಚಿವರು, ಸಾರಿಗೆ ಇಲಾಖೆ ಅಧಿಕಾರಿಗಳು ಹಲವು ಬಾರಿ ಚರ್ಚೆಗಳು ಮತ್ತು ಸಭೆಗಳನ್ನು ನಡೆಸಿದ ನಂತರದಲ್ಲಿ ಐದು ತಿಂಗಳು ವಿಳಂಬವನ್ನು ಮಾಡಿ ನಮ್ಮ ಬೇಡಿಕೆಯನ್ನು ಈಡೇರಿಸಿರುತ್ತಾರೆ.

ಯಾವುದೇ ಪರಮರ್ಶೆನೆಯನ್ನು ಮಾಡದೆ ರಾಜ್ಯದಲ್ಲಿ E- ಬೈಕ್ ಟ್ಯಾಕ್ಸಿಗೆ ನಿಯಮಗಳನ್ನು ರೂಪಿಸಿ, ತದನಂತರದಲ್ಲಿ ಆದಂತಹ, ಮತ್ತು ಆಗುತ್ತಿದ್ದ ತೊಂದರೆಗಳನ್ನು ಗಣನೆಗೆ ತೆಗೆದುಕೊಳ್ಳದೆ ನಡೆದುಕೊಂಡಿದ್ದು, ರಾಜ್ಯದ ಸುಮಾರು 7 ಲಕ್ಷಕ್ಕೂ ಹೆಚ್ಚು ಚಾಲಕರ ಕುಟುಂಬಗಳಿಗೆ ನಷ್ಟವನ್ನು ಉಂಟು ಮಾಡಿತ್ತು, ಸೆಪ್ಟೆಂಬರ್ 11 2023ರ ಹೋರಾಟದ ದಿನದಂದು ವೇದಿಕೆಯ ಮೇಲೆ ನೀಡಿದ್ದ ಆಶ್ವಾಸನೆಯಂತೆ ಸಾರಿಗೆ ಸಚಿವರು ನಡೆದುಕೊಂಡಿದ್ದು, ಸಾರಿಗೆ ಸಚಿವಾಲಯದ ನಿರ್ಧಾರ ರಾಜ್ಯದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂತಸಕ್ಕೆ ಕಾರಣವಾಗಿದೆ.

ಸಾರಿಗೆ ಸಚಿವಾಲಯ ತನ್ನ ಕೆಲಸವನ್ನು, ಮಾಡಿ ಮುಗಿಸಿದ್ದು ಇನ್ನು ಸಾರಿಗೆ ಇಲಾಖೆ, ಸಂಚಾರಿ ಪೊಲೀಸರು ಅನಧಿಕೃತವಾಗಿ ಚಲಾಯಿಸುತ್ತಿರುವ ಬೈಕ್ ಟ್ಯಾಕ್ಸಿಯನ್ನು ತಡೆದು ಕಾನೂನಿನ ರೀತಿಯಲ್ಲಿ ಕ್ರಮಜರಗಿಸಬೇಕಾದ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಎಲ್ಲಾ ಮಾಧ್ಯಮ ಮಿತ್ರರ ಮೂಲಕ ಈ ಒಂದು ವಿಷಯವನ್ನು ಸಾರಿಗೆ ಇಲಾಖೆಯ ಪ್ರವರ್ತನ ಮತ್ತು ಸಂಚಾರಿ ಪೊಲೀಸರ ಅವಗಾಹನೆಗೆ ತರಲು ತಮ್ಮೆಲ್ಲರ ಸಹಕಾರ ಅತ್ಯಗತ್ಯ ಮತ್ತು ಅತ್ಯಮೂಲ್ಯ.

ಮತ್ತೊಮ್ಮೆ ಬೈಕ್ ಟ್ಯಾಕ್ಸಿ ಹಿಂಪಡೆತದ ರಾಜ್ಯ ಸರ್ಕಾರದ ಕ್ರಮ ಮತ್ತು ಅಧಿಸೂಚನೆಯನ್ನು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಸ್ವಾಗತಿಸುತ್ತದೆ, ಅದೇ ರೀತಿ, ಯಶಸ್ಸಿಗೆ ಕಾರಣರಾದ ಮಾಧ್ಯಮ ಮಿತ್ರರು, ಸಾರಿಗೆ ಸಚಿವರಿಗೆ, ಮತ್ತು ಮುಖ್ಯಮಂತ್ರಿಗಳಿಗೆ ನಮ್ಮ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಪತ್ರಿಕಾ ಗೋಷ್ಠಿ ಯಲ್ಲಿ ಒಕ್ಕೂಟದ ವಿತಿಯಿಂದ ಎಸ್.ನಟರಾಜ ಶರ್ಮ-ಅಧ್ಯಕ್ಷರು,KSBOA ತಿಳಿಸಿದರು.

City Today News 9341997936

‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”ಮಹಿಳಾ ಚೈತನ್ಯ ದಿನ’ – ಮಾರ್ಚ್ 8, 9, 2024, ಉಡುಪಿ

‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು ಕಳೆದ ಹನ್ನೊಂದು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತ ಬಂದಿದೆ. ಕರ್ನಾಟಕದಾದ್ಯಂತ ಮಹಿಳಾ ಚಳವಳಿ-ಸಾಹಿತ್ಯ-ಶಿಕ್ಷಣ ಕ್ಷೇತ್ರದ ಪರಿಣಿತರು-ರಂಗಭೂಮಿ-ಜನಪದ ಹೋರಾಟಗಳಲ್ಲಿ ಸಕ್ರಿಯವಾಗಿರುವ ಅನೇಕ ವ್ಯಕ್ತಿ- ಸಂಘಟನೆಗಳು ಈ ಒಕ್ಕೂಟದೊಂದಿಗಿದ್ದಾರೆ. ಮಹಿಳಾ ಸಂಘಟನೆಗಳು, ದಲಿತ ದಮನಿತರ ಸಂಘಟನೆಗಳು, ಅಂಗನವಾಡಿ, ಪೌರಕಾರ್ಮಿಕರು, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತೆಯರು-ಮನೆಕೆಲಸದ ಕಾರ್ಮಿಕರು, ಗಾರ್ಮೆಂಟ್ ಮತ್ತು ಇನ್ನಿತರ ಕಾರ್ಮಿಕರ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳು, ಲೈಂಗಿಕ ಕಾರ್ಯಕರ್ತರು-ಲಿಂಗತ್ವ ಅಲ್ಪಸಂಖ್ಯಾತರ ಗುಂಪುಗಳು, ಲೇಖಕಿಯರ ಸಂಘ, ರಂಗಕರ್ಮಿಗಳು, ಅಕಾಡೆಮಿಕ್ ವಲಯದ ಸಮಾನ ಮನಸ್ಕರು ಮೊದಲಾಗಿ ನೂರಾರು ಸಂಘ-ಸಂಸ್ಥೆ-ಸಂಘಟನೆಗಳು ಒಕ್ಕೂಟದಲ್ಲಿ ಭಾಗಿಯಾಗಿವೆ. ಜೀವಪರ ಚಿಂತನೆ ಇರುವ, ಸಮಾನತೆಯ ಆಶಯ ಹೊಂದಿದ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದ, ಸರ್ವಧರ್ಮ ಸಮಭಾವ ಇರುವ ಯಾರು ಬೇಕಾದರೂ ಒಕ್ಕೂಟದಲ್ಲಿ ಭಾಗಿಯಾಗಬಹುದು.

2012ರಲ್ಲಿ ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿತು. ಆ ವೇಳೆಯಲ್ಲಿ ‘ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ’ ಮಂಗಳೂರಿನಲ್ಲಿ ರಚನೆಯಾಯಿತು. ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಹಿಂಸೆ, ಲಿಂಗತಾರತಮ್ಯ, ಅಸಮಾನತೆಗಳನ್ನು ವಿರೋಧಿಸುತ್ತ, ಮಹಿಳಾ ಘನತೆಯನ್ನು ಎತ್ತಿ ಹಿಡಿಯುತ್ತ ‘ಇನ್ನು ಸಾಕು’ ಎಂಬ ಘೋಷವಾಕ್ಯವನ್ನಿಟ್ಟುಕೊಂಡು ಮಂಗಳೂರಿನಲ್ಲಿ 2013ರಲ್ಲಿ ಒಕ್ಕೂಟವು ಮೊದಲ ಸಮಾವೇಶ ನಡೆಸಿತು. ಸಮಾವೇಶದ ಬಳಿಕ ರಾಜ್ಯದಾದ್ಯಂತ ಇರುವ ಮಹಿಳಾಪರ ಸಂಘಟನೆಗಳು ಒಗ್ಗೂಡಿ “ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ” ನಿರ್ಮಾಣವಾಯಿತು. ಅಲ್ಲಿಂದ ಪ್ರತಿವರ್ಷ ಒಂದೊಂದು ಜಿಲ್ಲೆಯಲ್ಲಿ ಲಿಂಗಸೂಕ್ಷ್ಮತೆಯ ಕಾರ್ಯಾಗಾರ ನಡೆಸುತ್ತಾ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಮಹಿಳಾ ಚೈತನ್ಯ ದಿನ’ವಾಗಿ ಆಚರಿಸುತ್ತಾ, ಮಹಿಳಾ ಜಾಗೃತಿ ಸಮಾವೇಶವನ್ನು ನಡೆಸಿಕೊಂಡು ಬಂದಿದ್ದೇವೆ. ಇದುವರೆಗೆ ಮಂಗಳೂರು, ಮೈಸೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗ, ಧಾರವಾಡ, ಮಂಡ್ಯ, ಕೋಲಾರ, ಕಲಬುರಗಿ, ತುಮಕೂರುಗಳಲ್ಲಿ ಹನ್ನೊಂದು ಸಮಾವೇಶಗಳನ್ನು ನಡೆಸಿ 2024ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳನ್ನು ಸಮಸಮಾಜದ ನಿರ್ಮಾಣಕ್ಕಾಗಿ ಅರಿವಿನ ಆಂದೋಲನಗಳು ನಡೆದ ಉಡುಪಿ ನಾಡಿನಲ್ಲಿ ಹಮ್ಮಿಕೊಂಡಿದ್ದೇವೆ.

ಅದಕ್ಕೆ ಪೂರ್ವಭಾವಿಯಾಗಿ ಈಗಾಗಲೇ ಎಂಟು ತಿಂಗಳಿನಿಂದ ಉಡುಪಿಯಲ್ಲಿ ಸಿದ್ಧತಾ ಸಭೆ, ತರಬೇತಿ ಕಾರ್ಯಾಗಾರ ನಡೆಸಿದ್ದೇವೆ. ತಂಡಗಳನ್ನು ಸಿದ್ಧಪಡಿಸಲಾಗಿದೆ. ಜಿಲ್ಲೆಯಾದ್ಯಂತ ‘ಅರಿವಿನ ಪಯಣ’ ಎಂಬ ಲಿಂಗಸೂಕ್ಷ್ಮತಾ ಅಭಿಯಾನದ ಸಪ್ತಾಹವನ್ನು ಹಮ್ಮಿಕೊಂಡಿದ್ದೇವೆ. ಈಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಮಹಿಳಾ ಚೈತನ್ಯ ದಿನ’ವಾಗಿ  ಆಚರಿಸಲು ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಹಾಗೂ ಸಮಾನ ಮನಸ್ಕ ಸೋದರಿ-ಸೋದರರು ಮತ್ತು ರಾಜ್ಯದೆಲ್ಲೆಡೆಯಿಂದ ಬರುವ ಸಂಗಾತಿಗಳು ಜೊತೆಗೂಡಲಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಗಳ ವಿವರ

ಮಾರ್ಚ್ 8, 2024ರ ಶುಕ್ರವಾರ ಆರೂರು ಲಕ್ಷ್ಮಿನಾರಾಯಣ ರಾವ್ ಟೌನ್ ಹಾಲ್ ಅಜ್ಜರಕಾಡು ಉಡುಪಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ‘ಮಹಿಳಾ ಪ್ರಾತಿನಿಧ್ಯ: ಆಶಯ ಮತ್ತು ವಾಸ್ತವ’ ಎಂಬ ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಚೆನ್ನೈನ ನ್ಯಾಯವಾದಿ, ಹೋರಾಟಗಾರ್ತಿ ಅರುಳ್ ಮೌಳಿ ಮಹಿಳಾ ದಿನದ ಸಂದೇಶ ನೀಡಲಿದ್ದಾರೆ. ಕೆ. ಎಸ್. ಲಕ್ಷ್ಮಿ, ಬೆಂಗಳೂರು; ಶಾಹೀನ್ ಮೊಕಾಶಿ, ಹುಬ್ಬಳ್ಳಿ; ಮೈತ್ರಿ ಬೆಂಗಳೂರು; ಯು. ಟಿ. ಫರ್ಜಾನಾ, ಮಂಗಳೂರು; ಡಾ. ಸಬಿತಾ ಕೊರಗ, ಮಂಗಳೂರು ವಿಚಾರ ಮಂಡನೆ, ಚರ್ಚೆ ನಡೆಸಿಕೊಡಲಿದ್ದಾರೆ. ಬಳಿಕ ಸಂಜೆ 5.30ರಿಂದ ಉಡುಪಿಯ ಜೋಡುಕಟ್ಟೆಯಲ್ಲಿ ಬೆಳಕಿನೊಂದಿಗೆ ‘ಕಪ್ಪು ಉಡುಗೆಯಲ್ಲಿ ಮಹಿಳೆಯರು’ ಮೌನ ಜಾಗೃತಿ ಕಾರ್ಯಕ್ರಮ ‘ನಮ್ಮ ಉಡುಪು ನಮ್ಮ ಹಕ್ಕು’ ಘೋಷವಾಕ್ಯದೊಂದಿಗೆ ನಡೆಯಲಿದೆ.

ಮಾರ್ಚ್ 9, 2024ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಉಡುಪಿಯ ‘ಹುತಾತ್ಮ ಚೌಕ’ದಲ್ಲಿ ಹಕ್ಕೊತ್ತಾಯ ಜಾಥಾ, ಮೆರವಣಿಗೆ ಉದ್ಘಾಟನೆ ನಡೆಯಲಿದೆ. ತೆಲಂಗಾಣದ ಜನಪರ ಹೋರಾಟಗಾರ್ತಿ, ಡಾ. ಜಿ. ವಿ. ವೆನ್ನೆಲ ಗದ್ದರ್ ಅವರು ಮೆರವಣಿಗೆ ಉದ್ಘಾಟಿಸಿ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಬಳಿಕ ಬಾಸೆಲ್ಮಷನ್ ಚರ್ಚ್ ಹಾಲಿನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ರಾಜ್ಯದ ನಾನಾ ಭಾಗಗಳಿಂದ ಬಂದ ಸಂಗಾತಿಗಳು ಮಾತನಾಡಲಿದ್ದಾರೆ ಎಂದು ಒಕ್ಕೂಟದ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲೂ ತಿಳಿಸಲಾಯಿತು.

City Today News 9341997936

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ, ಬೆಂಗಳೂರು ದಿ. 11-08-2022ರಂದು ನೀಡಿರುವ ತೀರ್ಪಿನಲ್ಲಿನ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು-ಗುರುನಾಥ ವಡ್ಡೆ

ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984 ರ ಸೆಕ್ಷನ್ 12(4) ಗೆ ತಿದ್ದುಪಡಿ ತಂದು ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ಸರ್ಕಾರಿ ಹಾಗೂ ಸಾರ್ವಜನಿಕ ನೌಕರರ ವಿರುದ್ಧ ವಿಚಾರಣೆ ನಡೆಸಿ ಸಲ್ಲಿಸಿರುವ ವರದಿಗಳನ್ನು ಅಂಗೀಕರಿಸಿ ಕ್ರಮ ಜರುಗಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಮಾಹಿತಿ ನೀಡಲು ಗುರುನಾಥ ವಡ್ಡೆ, ಅಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ಇಂದು ಪತ್ರಿಕಾ ಗೋಷ್ಠಿ ನಡೆಸಿದರು.

ಪತ್ರಿಕಾ ಗೋಷ್ಠಿ ಯಲ್ಲಿ (1) ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984ರ ಸೆಕ್ಷನ್ 12(4) ತಿದ್ದುಪಡಿ ತಂದು ಲೋಕಾಯುಕ್ತ ಅಥವಾ ಉಪಲೋಕಾಯುಕ್ತರು ಸರ್ಕಾರಿ ಹಾಗೂ ಸಾರ್ವಜನಿಕ ನೌಕರರ ವಿರುದ್ಧ ವಿಚಾರಣೆ ನಡೆಸಿ ಸಲ್ಲಿಸಿರುವ ವರದಿಗಳನ್ನು ಅಂಗೀಕರಿಸಿ ಕ್ರಮ ಜರುಗಿಸುವುದನ್ನು ಕಡ್ಡಾಯಗೊಳಿಸುವುದು.

(2) ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ, ಬೆಂಗಳೂರು ದಿ. 11-08-2022ರಂದು ನೀಡಿರುವ ತೀರ್ಪಿನಲ್ಲಿನ ಶಿಫಾರಸ್ಸುಗಳನ್ನು ಜಾರಿಗೊಳಿಸುವುದು.

(3) ಖಾಲಿ ಇದ್ದ ಒಂದು ಉಪ ಲೋಕಾಯುಕ್ತ ಸ್ಥಾನ ಭರ್ತಿ ಮಾಡುವುದು.

(4) ಎಲ್ಲಾ ಜಿಲ್ಲೆಗಳಲ್ಲಿ ಎಸ್.ಪಿ. ಹುದ್ದೆಗಳು ನೇಮಕ ಮಾಡುವುದು.

(5) ಲೋಕಾಯುಕ್ತ ಸಂಸ್ಥೆಯಿಂದ ಎಲ್ಲಾ ಆದೇಶಗಳು ಹಿಂಬರಹಗಳು, ಸೂಚನೆ, ತಿಳುವಳಿಕೆ ಪತ್ರಗಳು ಹಾಗೂ ದೂರುದಾರರಿಗೆ ಸಂಬಂಧಿಸಿದ ಎಲ್ಲಾ ಪತ್ರಗಳನ್ನು ಕನ್ನಡ ಭಾಷೆಯಲ್ಲಿ ನೀಡುವುದು. (ಸದರಿ ವಿಷಯದ ಬಗ್ಗೆ ಮಾನ್ಯ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ, ಬೆಂಗಳೂರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಡಬ್ಲ್ಯು.ಪಿ.ನಂ. 4962/2024)

(6) ಮುಖ್ಯಮಂತ್ರಿಗಳ ಸಹಿತ ಎಲ್ಲಾ ಸಚಿವರ ಶಾಸಕರ ಸಂಸದರ ಆದಾಯ ಮೂಲದ ಬಗ್ಗೆ ಪ್ರತಿವರ್ಷ ಲೋಕಾಯುಕ್ತರಿಂದ ಆದಾಯದ ಮೂಲದ ಹಾಗೂ ಆಸ್ತಿ ತನಿಖೆ ನಡೆಸುವ ಬಗ್ಗೆ ವ್ಯವಸ್ಥೆ ಜಾರಿ ಮಾಡುವುದು. ಡಬ್ಲ್ಯು.ಪಿ.ನಂ. 894/2024.

(7) ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ನೌಕರರ ತನಿಖೆಗೆ ಯಾವುದೇ ಪೂರ್ವಾನುಮತಿ ಬೇಡ ಅನ್ನುವ ಹಲವಾರು ಬೇಡಿಕೆಗಳನ್ನು ಮಾನ್ಯ ಮುಖ್ಯ ಮಂತ್ರಿಗಳಲ್ಲಿ ವಿನಾಯಪೂರ್ವಕವಾಗಿ ಇಟ್ಟರು.

City Today News 9341997936

4/3/2024 ರಂದು ವಿಶ್ವಕರ್ಮ ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರಿಂದ ಫ್ರೀಡಂಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಧರಣಿ

ಪತ್ರಿಕಾ ಗೋಷ್ಠಿ ಯಲ್ಲಿ ಶ್ರೀ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ ಆದಿಲಕ್ಷ್ಮೀ ವಿಶ್ವಕರ್ಮ ಮಠ,ಮಳವಳ್ಳಿ ಶ್ರೀನಿವಾಸ್, ರಾಜ್ಯಾಧ್ಯಕ್ಷರು,ಗುರು ವಿಶ್ವಕರ್ಮ, ರಾಜ್ಯ ಕಾರ್ಯಾಧ್ಯಕ್ಷರು,ಟಿ.ಕೆಪುರುಶೋತ್ತಮ್, ರಾಜ್ಯ ಉಪಾಧ್ಯಕ್ಷರು ಮತ್ತು ಆಶಾ ಉಮೇಶ್, ರಾ.ಮ.ಉಪಾಧ್ಯಕ್ಷರು ಉಪಸ್ಥಿತರಿದ್ದರು.

ತಮ್ಮಲ್ಲಿ ಪ್ರಸ್ತುತ ಪಡಿಸುತ್ತಾ ತಮಗೆಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ 45 ಲಕ್ಷ ಜನಸಂಖ್ಯೆಯಷ್ಟು ವಿಶ್ವಕರ್ಮ ಸಮಾಜ ಇದೆ. ಈ ಹಿಂದಿನಿಂದಲೂ ನಮ್ಮನ್ನು ಅಳಿದಂತ ಸರಕಾರಗಳು ನಮ್ಮ ಸಮಾಜಕ್ಕೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ನ್ಯಾಯ ಕೋಡಿಸುವಲ್ಲಿ ನ್ಯಾಯಯುತವಾದ ಪ್ರಯತ್ನ ಮಾಡಲೇ ಇಲ್ಲ. ಕಳೆದ ಹತ್ತಾರು ವರ್ಷಗಳಿಂದಲೂ ನಮ್ಮ ಸಮಾಜದ ಹಲವಾರು ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿದ್ದರೂ ಸಹ ಸರ್ಕಾರಗಳು ನಮ್ಮನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈ ಹಿಂದಿನ ಸರ್ಕಾರಗಳ ರೀತಿಯಲ್ಲೇ ನಾವೆಲ್ಲರೂ ತುಂಬಾ ಭರವಸೆ ಇಟ್ಟಿರುವಂತಹ ಪ್ರಸ್ತುತ ಸಕಾರವು ಸಹಾ ನಮ್ಮನ್ನು ನಿರ್ಲಕ್ಷಿಸುತ್ತಿರುವುದು ನಮಗೆ ಅತಿಯಾದ ನೋವುಂಟು ಮಾಡಿರುತ್ತದೆ. ಹಿಂದುಳಿದ ವರ್ಗದಲ್ಲಿ ನಾವು ಹುಟ್ಟಿರುವುದೇ ನಮಗೆ ಶಾಪವಾಗಿದೆ ಎಂದು ಭಾಸವಾಗುತ್ತಿದೆ.ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತಳಹದಿಯಲ್ಲಿ ಬದುಕಬೇಕಾದ ನಾವುಗಳು ಕಾಡಿಬೇಡಿ ಬದುಕುವ ಸಂದರ್ಭ ಬಂದಿರುವುದು ನಮ್ಮ ಸಮಾಜಕ್ಕೆ ಬಂದಿರುವುದು ದುರ್ದೆವ, ಜಾತಿ ಧರ್ಮ ನೋಡದೆ ಎಲ್ಲರಿಗೂ ನಮ್ಮ ಪಂಚ ಕಸುಬುಗಳ ಮೂಲಕ ಸೇವೆ ಸಲ್ಲಿಸುವ ನಾವುಗಳು ಹಲವಾರು ದೇವಾಲಯಗಳನ್ನು ಕಟ್ಟಿಕೊಡುವ ಮೂಲಕ ದೇಶದ ಸಂಸ್ಕೃತಿಗೆ ಅಪಾರ ಕೊಡುಗೆಗಳನ್ನು ಕೊಟ್ಟಿರುವ ನಾವುಗಳು ವೇದಿಕೆಗಳಲ್ಲಿ ಹೊಗಳಿಕೆಗಳಿಗಷ್ಟೇ ಸೀಮಿತವಾಗಿದ್ದೇವೆ. ಯಾವ ಸರ್ಕಾರವು ನಮ್ಮನ್ನು ಮೇಲೆತ್ತುವ ಕೆಲಸವನ್ನು ಮಾಡುತ್ತಿಲ್ಲ. ಕಳೆದ 6ನೇ ತಾರೀಖು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರನ್ನು ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರುಗಳ ನಿಯೋಗ ಸಮಾಜದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಣ್ಣಪುಟ್ಟ ಬೇಡಿಕೆಗಳನ್ನು ಸಲ್ಲಿಸಿದ್ದೆವು. ಅವುಗಳಲ್ಲಿ ಪ್ರಮುಖವಾಗಿ ವಿಶ್ವಕರ್ಮ ಅಭಿವೃದ್ದಿ ನಿಗಮದ ಬಾಕಿ ಇರುವ ಸಾಲವನ್ನು ಮನ್ನಾ ಮಾಡುವುದು, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂಗಳ ಅನುದಾನವನ್ನು ನೀಡುವುದು, ಎಲ್ಲಾ ಸಾಧಕರ ಮಹನೀಯರ ಪ್ರತಿಮೆಗಳು ವಿಧಾನಸೌಧದ ಆವರಣದಲ್ಲಿರುವಂತೆ ಶಿಲ್ಪಕಲೆಯ ಮೂಲಕ ನಾಡಿಗೆ ದೇಶಕ್ಕೆ ಅಪಾರ ಕೀರ್ತಿ ತರುವಂತಹ ಅಮರಶಿಲ್ಪಿ ಜಕಣಾಚಾರಿ ರವರ ಪ್ರತಿಮೆ ಸ್ಥಾಪನೆ ಮಾಡಿಕೊಡುವುದು, ವಿಶ್ವಕರ್ಮ ಅಭಿವೃದ್ಧಿ ನಿಗಮದ ಮೂಲಕ ಸಮಾಜದ ಪ್ರತಿಭಾವಂತ ವಿದಾರ್ಥಿಗಳಿಗಾಗಿ ಯುಪಿಎಸ್‌ಸಿ/ಕೆಪಿಎಸ್‌ಸಿ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಿಕೊಡುವುದು. ರಾಜ್ಯದಲ್ಲಿರುವ ವಿಶ್ವಕರ್ಮ ಬಡಮಕ್ಕಳಿಗೆ ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ತಲಾ ಒಂದರಂತೆ ವಿಶ್ವಕರ್ಮ ವಸತಿ ಶಾಲೆಯನ್ನು ಸ್ಥಾಪಿಸಿಕೊಡುವುದು. ಹೀಗೆ ಒಟ್ಟು 12 ಬೇಡಿಕೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿಕೊಡುವಂತೆ ಮನವಿ ಮಾಡಿದರೂ ಸಹಾ ಇವುಗಳಲ್ಲಿ ಒಂದನ್ನಾದರೂ ಮುಖ್ಯಮಂತ್ರಿಗಳು ಈಡೇರಿಸಿಕೊಟ್ಟಿಲ್ಲ. ಸಮಾಜದ ಅಭಿವೃದ್ದಿಗಾಗಿ ಸಂಘಟನಾ ಜವಾಬ್ದಾರಿಯನ್ನು ಹೊತ್ತಿರುವ ನಾವುಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ಸಮಾಜದ ಬಂಧುಗಳಿಗೆ ನ್ಯಾಯ ಒದಗಿಸಲು ಸ್ವಾಮೀಜಿಗಳು ಮತ್ತು ಮುಖಂಡರುಗಳ ತೀರ್ಮಾನದಂತೆ ಈ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸಮಾಜದ ಸರ್ವ ಸ್ವಾಮಿಜಿಗಳ ನಿಯೋಗ ಮತ್ತು ಸಮಾಜದ ಮುಖಂಡರುಗಳೆಲ್ಲರೂ ದಿನಾಂಕ 04.03.2024 ರಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಧರಣಿಯನ್ನು ಹಮ್ಮಿಕೊಂಡಿರುತ್ತೇವೆ. ಸರ್ಕಾರವು ನಮ್ಮ ಹೋರಾಟವು ತೀಕ್ಷ್ಯಗೊಳ್ಳುವ ಮೊದಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತೇವೆ. ಒಂದು ವೇಳೆ ಸರ್ಕಾರವು ಪುನಃ ನಮ್ಮನ್ನು ನಿರ್ಲಕ್ಷಿಸಿದರೆ ಹೋರಾಟವನ್ನು ರಾಜ್ಯಾಧ್ಯಂತ ವಿಸ್ತರಿಸುವಂತೆ ನಮ್ಮ ಸಮಾಜಕ್ಕೆ ಕರೆಕೊಟ್ಟು ಬೀದಿಗಿಳಿದು ನಮ್ಮ ಹಕ್ಕಿಗಾಗಿ ನಾವು ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಲಾಗುವುದು ಎಂದು ತಮ್ಮ ಮುಖಾಂತರ ಸರ್ಕಾರಕ್ಕೆ ಸಂದೇಶವನ್ನು ತಿಳಿಸುತ್ತಿದ್ದೇವೆ ಎಂದು ಸಮಾಜದ ವತಿಯಿಂದ ತಿಳಿಸಲಾಯಿತು.

ಪತ್ರಿಕಾ ಗೋಷ್ಠಿ ಯಲ್ಲಿ ಶ್ರೀ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ ಆದಿಲಕ್ಷ್ಮೀ ವಿಶ್ವಕರ್ಮ ಮಠ,ಮಳವಳ್ಳಿ ಶ್ರೀನಿವಾಸ್, ರಾಜ್ಯಾಧ್ಯಕ್ಷರು,ಗುರು ವಿಶ್ವಕರ್ಮ, ರಾಜ್ಯ ಕಾರ್ಯಾಧ್ಯಕ್ಷರು,ಟಿ.ಕೆಪುರುಶೋತ್ತಮ್, ರಾಜ್ಯ ಉಪಾಧ್ಯಕ್ಷರು ಮತ್ತು ಆಶಾ ಉಮೇಶ್, ರಾ.ಮ.ಉಪಾಧ್ಯಕ್ಷರು ಉಪಸ್ಥಿತರಿದ್ದರು.

City Today News 9341997936

ಚಲನಚಿತ್ರ ನಟ ದರ್ಶನ್‌ರವರು ಹೆಣ್ಣು ಮಕ್ಕಳ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಖಂಡನೆ

ಚಲನಚಿತ್ರ ನಟ ದರ್ಶನ್‌ರವರು ಹೆಣ್ಣು ಮಕ್ಕಳ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಖಂಡಿಸುವ ಪತ್ರಿಕೆ ಪ್ರಕಟಣೆ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಟ ದರ್ಶನ್ ಶ್ರೀರಂಗಪಟ್ಟಣದಲ್ಲಿ 25ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾರ್ವಜನಿಕ ಸಭೆಯಲ್ಲಿ ನಮ್ಮ ನಾಡಿನ ಹೆಣ್ಣು ಮಕ್ಕಳ ಬಗ್ಗೆ ಕೀಳು ಭಾವನೆಯಿಂದ ಒಬ್ಬಳು ಹೋಗುತ್ತಾಳೆ, ಒಬ್ಬಳು ಬರುತ್ತಾಳೆ. ಅವಳ ಅಜ್ಜಿನ ಬಡಿಯ ಎಂದು ಕೀಳಾಗಿ ಮಾತನಾಡಿರುತ್ತಾರೆ. ಈ ಸಭೆಯಲ್ಲಿ ಆದಿಚುಂಚನಗಿರಿ ಗುರುಗಳು ಹಾಗೂ ಸಂಸದೆ ಸುಮಲತಾ ಅಂಬರೀಷ್‌ರವರು ಹಾಗೂ ಹಲವಾರು ಗಣ್ಯಾತಿಗಣ್ಯರು ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು. ಕನ್ನಡ ನಾಡಿಗೆ ಮಾದರಿ ಆಗಬೇಕಿದ್ದ ಒಬ್ಬ ನಾಯಕ ನಟ ಸಾರ್ವಜನಿಕವಾಗಿ ಮಾತನಾಡುವುದು ತಪ್ಪು ಹಾಗೂ ಅಪರಾಧವಾಗಿದ್ದು, ವಿಚಾರಣೆ ನಡೆಸಿ ಆತ ಉಪಯೋಗಿಸಿರುವ ಪದಗಳನ್ನು ಯಾವ ಭಾವನೆಯಿಂದ ಹೇಳಿದ್ದಾರೆಂದು ಅವರಿಗೆ ಜನ್ಮ ನೀಡಿರುವುದು ಒಂದು ಹೆಣ್ಣು ಅದನ್ನು ಮರೆಯಬಾರದು ಹಾಗೂ ವಿವರಣೆ ಕೇಳಬೇಕಾಗಿ ವಿನಂತಿ ಹಾಗೂ ದರ್ಶನ್‌ರವರು 6 ಕೋಟಿ ಕನ್ನಡಿಗರ ಬೆಂಬಲದಿಂದ ಈ ಸ್ಥಾನಕ್ಕೆ ಬರಲು ಕಾರಣವಾಗಿರುತ್ತಾರೆ. ಕರ್ನಾಟಕದಲ್ಲಿ ನಮಗೆ ನಮ್ಮ ಹೆಣ್ಣು ಮಕ್ಕಳ ಬಗ್ಗೆ ಜವಾಬ್ದಾರಿ ಇರುತ್ತದೆ. ಕನ್ನಡಾಂಬೆಯು ಒಂದು ಹೆಣ್ಣು, ಭಾರತ ಮಾತೆಯೂ ಒಂದು ಹೆಣ್ಣು. ಆದರೆ ಇವರು ತೆರೆಯ ಮೇಲೆ ಹೆಣ್ಣು ಮಕ್ಕಳಿಗೆ ಗೌರವಿಸಿದಂತೆ ತೆರೆಯ ಹಿಂದೆಯು ಗೌರವಿಸಬೇಕು. ಈ ವಿಚಾರಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ನಮ್ಮ ಹೆಣ್ಣು ಮಕ್ಕಳ ಮೇಲೆ ಯಾವ ರೀತಿ ಕೆಟ್ಟ ಪರಿಣಾಮವು ಬೀಳಬಾರದು. ಹೆಣ್ಣು ಮಕ್ಕಳ ಬಗೆಗಿನ ಅವರ ದೃಷ್ಟಿ ಕೋನ ಬದಲಾಯಿಸಬೇಕು. 6 ಕೋಟಿ ಕನ್ನಡಿಗರ ಮುಂದೆ ದರ್ಶನ್‌ರವರು ಕೂಡಲೇ ಕ್ಷಮೆಯಾಚಿಸಬೇಕು ಎಂದು . ರಂಗಸ್ವಾಮಿ ಸಂಸ್ಥಾಪಕ ಅಧ್ಯಕ್ಷರು ಆಗ್ರಹಿಸಿದರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ನವೀನ್ ಕುಮಾರ್ ಸಿ.ಎನ್ ರಾಜ್ಯ ಸಂಘಟನಾ ಕಾರ್ಯದರ್ಶಿ,ಕೆ. ಧರ್ಮೇಂದ್ರ ರಾಜ್ಯಾ ಉಪಾಧ್ಯಕ್ಷರು,ಮತ್ತು ಆಂಜನಪ್ಪ .ಕ,ರಾಜ್ಯ ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದರು.

City Today News 9341997936