ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಫೆ. ೧೭ ರಂದು ಬೆಂಗಳೂರು ಚಲೋ ಕಾರ್ಯಕ್ರಮ

ವಿಧಾನ ಸೌಧ ಮುತ್ತಿಗೆ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದು ಸೇರಿದಂತೆ ಕೆಳಕಂಡ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರವರಿ ೧೭ ರಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂದು ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಆಗಮಿಸುವ ಸಾವಿರಾರು ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ರೈತರ ಬೇಡಿಕೆಗಳು ರೈತರ ಸಾಲ ಸಂಪೂರ್ಣ ಮನ್ನಾ ಆಗಬೇಕು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು ಈಗ ಘೋಷಿಸಿರುವ ಭತ್ತ, ರಾಗಿ, ಜೋಳ ಮತ್ತಿತರ ಧಾನ್ಯಗಳ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ ೫೦೦ ರೂ ಹೆಚ್ಚಳ ಮಾಡಬೇಕು.

೬೦ ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ರೈತರ ಹಕ್ಕೊತ್ತಾಯಗಳ ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆ ರೈತರ ಪಾಲಿಗೆ ಕರಾಳ ಚುನಾವಣೆಯಾಗುತ್ತದೆ ಎಂದು ಎಚ್ಚರಿಸಿದರು ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿ, ಮೂಲಭೂತ ಹಕ್ಕಾಗಿ ಖಾತರಿಪಡಿಸಿದ ಉದ್ಯೋಗ,

ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು) ಖಾಸಗೀಕರಣಕ್ಕೆ ವಿರೋಧ ಮತ್ತು ಉದ್ಯೋಗಿಗಳ ಸಂದರ್ಭೋಚಿತಗೊಳಿಸುವಿಕೆ ಮತ್ತು ಸ್ಥಿರ-ಅವಧಿಯ ಉದ್ಯೋಗವನ್ನು ರದ್ದುಗೊಳಿಸುವುದು

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬಲಪಡಿಸುವುದು, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದು, ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳಲ್ಲಿ ಎಲ್ಲರಿಗೂ ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯನ್ನು ನೀಡುವುದು ಶೀಘ್ರದಲ್ಲಿಯೇ ಮೇಕೆದಾಟು ಯೋಜನ ಕೈಗೆತ್ತಿಕೊಳ್ಳಬೇಕು. ಕಳಸಾಬಂಡೂರಿ, ಮಹದಾಯಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು.

೧೯೬೨ ರಲ್ಲಿ ದಿ.ನಿಜಲಿಂಗಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಡಪೀಡಿತ ಪ್ರದೇಶಗಳಾದ ಲಕ್ಯ ಹೋಬಳಿ, ಸಖರಾಯ ಪಟ್ಟಣ ಹೋಬಳಿ, ದೇವನೂರು ಹೋಬಳಿ, ಕಡೂರು ತಾಲ್ಲೂಕು ಮುಂತಾದ ಗ್ರಾಮಗಳ ಸಾವಿರಾರು ಎಕರೆ ಜಮೀನಿಗೆ ನೀರು ಒದಗಿಸಲು ಕಣಿವೆದಾಸರಹಳ್ಳಿ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಅಣೆಕಟ್ಟೆಯನ್ನು ಮುಚ್ಚಿಹಾಕಲಾಗಿದ್ದು, ಸದರಿ ಸರ್ಕಾರ ಈ ಅಣೆಕಟ್ಟೆಯನ್ನು ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ಮರು ಸ್ಥಾಪಿಸಬೇಕು. ಇಂತಹ ಹಲವು ಕಟ್ಟೆ ಮತ್ತು ಕೆರೆಗಳನ್ನು, ಅಣೆಕಟ್ಟೆಗಳನ್ನು ಮುಚ್ಚಿ ಹಾಕಿ ರೈತರಿಗೆ ಅನ್ಯಾಯ ಮಾಡಲಾಗಿದೆ. ಇವುಗಳನ್ನು ಕೂಡಲೇ ಮರು ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.

ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದವರು ದಯಾನಂದ ಪಾಟೀಲ್ ರಾಜ್ಯ ಗೌರವಾಧ್ಯಕ್ಷರು ಕರ್ನಾಟಕ ರಾಜ್ಯ

ರೈತ ಸಂಘಟನೆಗಳ ಒಕ್ಕೂಟ ಗುಲಬರ್ಗಾ ಚಂದ್ರಶೇಖರ ಭೋವಿ, ರಾಜ್ಯ ಯುವ ಘಟಕದ ಅಧ್ಯಕ್ಷರು

ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ. ಚಿಕ್ಕಮಗಳೂರು ಇಂಗಲಗುಪ್ಪೆ ಕೃಷ್ಣಗೌಡ, ರಾಜ್ಯ ವರಿಷ್ಠ ನಾಯಕರು, ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಟಿ.ಆರ್.ಕೃಷ್ಣ, ರೈತ ಚಳವಳಿ ಬೆಂಗಳೂರು ನಗರಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ.

City Today News 9341997936

2023-24ನೇ ಸಾಲಿನ ಸ್ನಾತಕ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹಾಗೂ ತಾಂತ್ರಿಕಾ ಶಿಕ್ಷಣ ಕೋರ್ಸಗಳ ಪರಿಷ್ಕೃತ ಸೀಟ್ ಮೆಟ್ರಿಕ್‌ನಲ್ಲಿ ಮಾಜಿ ಸೈನಿಕರ ಮತ್ತು ಸೈನಿಕರ ಮಕ್ಕಳಿಗೆ ಹಂಚಿಕೆಯಾಗಿರುವುದಕ್ಕೆವಿರೋಧ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನ ಸ್ನಾತಕ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹಾಗೂ ತಾಂತ್ರಿಕಾ ಶಿಕ್ಷಣ ಕೋರ್ಸಗಳ ಪರಿಷ್ಕೃತ ಸೀಟ್ ಮೆಟ್ರಿಕ್ಸ್‌ನಲ್ಲಿ ಉಲ್ಲೇಖಿತ-1 ಆದೇಶದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರಿಗೆ ವೈದ್ಯಕೀಯ ಶಿಕ್ಷಣಕ್ಕಾಗಿ 3365 ಸೀಟ್‌ಗಳು ಮತ್ತು ದಂತ ವೈದ್ಯಕೀಯಕ್ಕೆ 1738 ಸೀಟ್‌ಗಳು ಹಾಗೂ ತಾಂತ್ರಿಕ ಶಿಕ್ಷಣಕ್ಕೆ ವಿವಿಧ ಕೋರ್ಸ್‌ಗಳನ್ನೊಳಗೊಂಡು ಸಾವಿರಾರು ಸೀಟ್‌ಗಳಿದ್ದು, ಮಾನ್ಯ ಘನ ಸರ್ಕಾರವು ಆದೇಶ ಹೊರಡಿಸುವಾಗ ಮಾಜಿ ಸೈನಿಕರ ಮತ್ತು ಸೈನಿಕರ ಮಕ್ಕಳಿಗೆ ವೈದ್ಯಕೀಯ ಶಿಕ್ಷಣಕ್ಕಾಗಿ ಕೇವಲ 6 ಸೀಟುಗಳನ್ನು ಹಂಚಿಕೆ ಮಾಡಿದ್ದು ಮತ್ತು ದಂತ ವೈದ್ಯಕೀಯ ಶಿಕ್ಷಣಕ್ಕಾಗಿ ಕೇವಲ 6 ಸೀಟುಗಳನ್ನು ಹಂಚಿಕೆ ಮಾಡಿದ್ದು ಮತ್ತು ತಾಂತ್ರಿಕ ಶಿಕ್ಷಣಕ್ಕೆ ಕೇವಲ 64 ಸೀಟುಗಳು ಹಂಚಿಕೆಯಾಗಿರುವುದರಿಂದ ಮಾಜಿ ಸೈನಿಕರ ಮತ್ತು ಸೈನಿಕರ ಮಕ್ಕಳಿಗೆ ಸಂಪೂರ್ಣ ಅನ್ಯಾಯವಾಗಿರುವುದು ಉಲ್ಲೇಖಿತ ಆದೇಶದಲ್ಲಿ ಕಂಡುಬಂದಿರುತ್ತದೆ.

ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಾಜಿ ಸೈನಿಕರು ಮತ್ತು ಹಾಲೀ ಸೈನಿಕರು ಹಾಗೂ ವೀರ ನಾರಿಯರು ಮಕ್ಕಳ ಭವಿಷ್ಯಕ್ಕೆ ಸರ್ಕಾರದ ಆದೇಶ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿದೆ.

ಪ್ರತಿಯೊಬ್ಬ ದೇಶದ ನಾಗರೀಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಗಲು ರಾತ್ರಿ ಮಕ್ಕಳ ಜೊತೆಗಿದ್ದು ಕುಟುಂಬದ ಜೊತೆ ಇದ್ದು ಮಕ್ಕಳ ಶಿಕ್ಷಣ ಕಲಿಕೆಗಾಗಿ ಗಮನ ಹರಿಸುತ್ತಾರೆ. ಆದರೆ ಸೈನಿಕರು ದೇಶ ಸೇವೆಯೇ ಮುಖ್ಯ ಎಂದು ದೇಶದ ನಾನಾ ಗಡಿ ಭಾಗಗಳಲ್ಲಿ 17 ವರ್ಷಗಳಿಂದ 30 ವರ್ಷಗಳವರೆಗೆ ದೇಶ ಸೇವೆ ಮಾಡುತ್ತಾ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಾಜೀ ಸೈನಿಕರಿಗೆ ನೀಡುವ 10% ಉದ್ಯೋಗ ಮೀಸಲಾತಿಯಂತೆ ವೃತ್ತಿ ಪರ ಕೋರ್ಸ್‌ಗಳ ಸೀಟ್ ಹಂಚಿಕೆಯಲ್ಲಿ ನೀಡಬೇಕು.

ಈ ಹಿಂದೆ ಎಲ್ಲಾ ನೇಮಕಾತಿ ಮತ್ತು ಶಿಕ್ಷಣ ವ್ಯವಸ್ಥೆಗಳಲ್ಲಿ ಮಾಜಿ ಸೈನಿಕರಿಗೆ 10% ನಿಗದಿಪಡಿಸಿರುವುದು ಈ ಮೂಲಕ ತಮಗೆ ತಿಳಿಯಪಡಿಸುವದರೊಂದಿಗೆ ಬಾಕಿ ವರ್ಗಗಳಿಗೆ ಹಂಚಿಕೆಯಾಗಿರುವುದನ್ನು ವಿರೋಧಿಸುತ್ತೇವೆ ಎಂದು  ಡಾ. ಶಿವಣ್ಣ-ನಿವೃತ್ತ ಸೇನಾಧಿಕಾರಿ ರಾಜ್ಯಾಧ್ಯಕ್ಷರು ಸಂಘದ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ NHM ಗುತ್ತಿಗೆ ನೌಕರರ ಸಂಘದ ವತಿಯಿಂದ ದಿನಾಂಕ 15/02/2024 ರಿಂದ ಅನಿರ್ದಿಷ್ಟ ಅವದಿ ಮುಷ್ಕರಕ್ಕೆ ಕರೆ.

ಕರ್ನಾಟಕ ರಾ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಳಗುತ್ತಿಗೆ ಆಧಾರದ ಮೇಲೆ ಗ್ರಾಮೀಣ ಭಾಗದಲ್ಲಿ ಇರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರ ದಲ್ಲಿ ಕಳೆದ 7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು,

ಆರೋಗ್ಯ ಇಲಾಖೆಯ ಸಂಬಂಧಪಟ್ಟ ಕಾರ್ಯಕ್ರಮದ ಅಧಿಕಾರಿಗಳು ಹಾಗೂ ಮಾನ್ಯ ರಾಷ್ಟ್ರೀಯಾ ಆರೋಗ್ಯ ಅಭಿಯಾನ ನಿರ್ದೇಶಕರವರಿಗೆ ಮತ್ತು ಮಾನ್ಯ ಆರೋಗ್ಯ ಸಚಿವರಿಗೆ ಹಲವು ಬಾರಿ ನಮ್ಮ ನೌಕರರ ಬೇಡಿಕೆಗಳು ಮತ್ತು ಕುಂದು ಕೊರತೆಗಳ ಬಗ್ಗೆ ಮನವಿ ಪತ್ರದ ಮೂಲಕ ಮನವರಿಕೆ ಮಾಡಿರುತ್ತೇವೆ ಆದರೆ ಇಲ್ಲಿವರೆಗೂ ಯಾವುದೇ ರೀತಿಯಾ ಪರಿಹಾರ ದೊರಕಿರುವುದಿಲ್ಲ ಹಾಗಾಗಿ 11 ಪ್ರಮುಖ ಬೇಡಿಕೆಗಳಿಗೆ ಸಂಬಂಧಿಸಿದಂತೆ ದಿನಾಂಕ 15-02-2024 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುವ ಅನಿರ್ದಿಷ್ಟ ಮುಷ್ಕರದಲ್ಲಿ 6192 ಸಮುದಾಯ ಆರೋಗ್ಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

ಮುಷ್ಕರದ ಒತ್ತಾಯಗಳು:-

• CPHC-UHC ಮಾರ್ಗಸೂಚಿಗಳ ಅನ್ವಯ 6 ವರ್ಷಸೇವೆ ಪೂರೈಸಿದ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಸೇವೆಯನ್ನು ಖಾಯಂಗೊಳಿಸಬೇಕು.

*ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಇತರೆ ನೌಕರರಿಗೆ ನೀಡಿದ 15% ವೇತನ ಹೆಚ್ಚಳವನ್ನು ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕೂಡ ಅನ್ವಯಿಸಬೇಕು.

* ತಡೆಹಿಡಿದಿರುವ 5 % ವಾರ್ಷಿಕ ವೇತನ ಮತ್ತು 10% loyality Bonus ಕೂಡಲೆ ಬಿಡುಗಡೆ ಮಾಡಬೇಕು.

• ವಿನಾಕಾರಣ ವಜಾಗೊಳಿಸಿದ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕೂಡಲೇ ವಾಪಸ್‌ ಕೆಲಸಕ್ಕೆ ತೆಗೆದುಕೊಳ್ಳಬೇಕು.

• CPHC-UHC ಮಾರ್ಗ ಸೂಚಿಗಳ ಅನ್ವಯ ಮಾಸಿಕ ಪ್ರೋತ್ಸಾಹಧನ 15000/- ಗಳನ್ನು ಪಾವತಿಸಬೇಕು.

• ಸಮುದಾಯ ಆರೋಗ್ಯ ಅಧಿಕಾರಿಗಳ ಕುಟುಂಬಕ್ಕೆ ಆರೋಗ್ಯ ವಿಮೆ ಹಾಗೂ PF ಒದಗಿಸಬೇಕು.

• ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಾತಿ ಷರತ್ತು ಹಾಗೂ ಕೇಂದ್ರ ಸರ್ಕಾರದ ぴ (Clinical Function, Public Function, Managerial Function,) ಕಾರ್ಯನಿರ್ವಹಣೆ ಹಾಗೂ HWC ಆಡಳಿತಕ್ಕೆ ಮಾತ್ರ ಸೀಮಿತಗ ಮಾತ್ರ ಸೀಮಿತಗೊಳಿಸಬೇಕು.

• ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಮಾಡುವ ಅವಕಾಶ ಕಲ್ಪಿಸಬೇಕು.

• ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಕುಡಿಯುವ ನೀರು, ಶೌಚಾಲಯ, ಸ್ವಚ್ಛತಾ ಸೇವೆ ಇತರೆ ಉಪಕರಣಗಳು ಹಾಗೂ ಔಷದವನ್ನು ಕಡ್ಡಾಯವಾಗಿ ಒದಗಿಸಬೇಕು.

• 18-11-2022 ರಂದು ನಾವು ನಡೆಸಿದ ಕಾನೂನಾತ್ಮಕ ಮುಷ್ಕರದ ಒಂದು ದಿನದ ವೇತನವನ್ನು ಪಾವತಿಸಬೇಕು.

• 15th FC ಅಡಿಯಲ್ಲಿ ಬರುವ 13 ಜಿಲ್ಲೆಯಾ ಸಮುದಾಯ ಆರೋಗ್ಯ ಅಧಿಕಾರಿಗಳ ಮೂರು ತಿಂಗಳ ವೇತನ ಪಾವತಿ ಆಗಿರುವುದಿಲ್ಲ ಕೂಡಲೇ ಪಾವತಿಸಬೇಕು ಎಂದು ಚನ್ನಪ್ಪ ನಾಯಕ ಬಣಕಾರ -ಪ್ರಧಾನ ಕಾರ್ಯದರ್ಶಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಪಾರಂಪರಿಕ ಕುಣಿಗಲ್ ಕುದುರೆ ಫಾರಂ ಉಳಿವಿಗಾಗಿ ಹೋರಾಟ ಸಮಿತಿಯಿಂದ ಹೋರಾಟ.

ಕುಣಿಗಲ್ ಎಂದಾಕ್ಷಣ ಈ ಮಣ್ಣಿನಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಮೈ ನವಿರೇಳಲು ಎರಡು ಸಂಗತಿಗಳು ಕಾರಣ ಇಲ್ಲಿನ ಪುರಾಣ ಪ್ರಸಿದ್ದ ಮೂಡಲ್ ಕುಣಿಗಲ್ ಕೆರೆ ಇನ್ನೊಂದು ಜಗತ್ಪಸಿದ್ದ ಕುಣಿಗಲ್ ಕುದುರೆ ಪಾರಂ ಈ ಎರಡು ಕೇವಲ ಸ್ಥಳಗಳಲ್ಲ ಕುಣಿಗಲ್ ಜನರೋಂದಿಗೆ ಬೆಸೆದುಕೊಂಡಿರುವ ಭಾವನಾತ್ಮಕ ಸಂಬಂಧ, ಐತಿಹಾಸಿಕ ಕುರುಹು, ಕುಣಿಗಲ್ ನ ಪ್ರತಿಯೊಬ್ಬ ನಾಗರೀಕರ ಅಸ್ಮಿತೆ

ಕುಣಿಗಲ್ ಕುದುರೆ ಪಾರಂ ನ ನೆಲದ ಸತ್ವದ ಬಗ್ಗೆ ಇಲ್ಲಿನ ಜನರು ಅನೇಕ ದಂತಕತೆಗಳನ್ನು ಕಟ್ಟಿದ್ದಾರೆ ದೈವಿಕ ಭಾವನೆ ಹೊಂದಿದ್ದಾರೆ. ಕರ್ನಾಟಕವನ್ನು ಆಳ್ವಿಕೆ ಮಾಡಿದ ಗಂಗರು ಯುದ್ಧದಲ್ಲಿ ದಣಿದ ಕುದುರೆಗಳಿಗೆ ಮೇವು ಮತ್ತು ವಿಶ್ರಾಂತಿಗಾಗಿ ಈ ಜಾಗವನ್ನು ಆಶ್ರಯಿಸುತ್ತಿದ್ದರು ಎನ್ನುವ ಐತಿಹ್ಯ ವಿದೆ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಯುದ್ಧಕ್ಕೆ ಬೇಕಾಗುವ ಕುದುರೆಗಳನ್ನು ಇಲ್ಲಿ ಸಾಕಲು ಪ್ರಾರಂಭಿಸಿದರು ಪಶುಸಂಪತ್ತಿನ ಬಗ್ಗೆ ಅಪಾಯ ಕಾಳಜಿ ಹೊಂದಿದ್ದ ಟಿಪ್ಪು ಈ ಸ್ಥಳವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಜಗತ್ತಿನಲ್ಲಿಯೇ ಉತ್ತಮ ತಳಿ ಸಂವರ್ಧನ ಕೇಂದ್ರವಾಗಿಸಿದನು

ಟಿಪ್ಪು ವಿನ ನಂತರ ಮೈಸೂರಿನ ಅರಸರು ಇದನ್ನು ನಿರ್ವಹಣೆ ಮಾಡಿದರು ಸ್ವಾತಂತ್ರ್ಯ. ನಂತರ ಬೆಂಗಳೂರು ಟರ್ಪ ಕ್ಲಬ್, ವಿಜಯ್ ಮಲ್ಯ ಒಡೆತನದ ಯು.ಬಿ ಗ್ರೂಪ್ ಗುತ್ತಿಗೆ ಪಡೆದು ನಿರ್ವಹಣೆ ಮಾಡಿದ್ದಾರೆ. ಈಗ ಯು.ಬಿ ಗ್ರೂಪ್ ನ 30 ವರ್ಷ ಗಳ ಗುತ್ತಿಗೆ ಅವಧಿ 2022 ಕ್ಕೆ ಮುಗಿದಿದೆ. ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕುದುರೆ ತಳಿ ಸಂವರ್ಧನೆಯಲ್ಲಿ ಪರಿಣತಿ ಪಡೆದಿರುವ ಪೂನಾ ವಾಲ ಕಂಪನಿಗೆ 30 ವರ್ಷಗಳ ಅವಧಿಗೆ ಕುದುರೆ ಪಾರಂ ನಿರ್ವಣೆ ಮತ್ತು ಕುದುರೆ ತಳಿಗಳ ಮಾರಟ ವಹಿವಾಟು ನಡೆಸಲು ಮಾತ್ರ ಗುತ್ತಿಗೆ ನೀಡಲು ಎಲ್ಲಾ ಹಂತದ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ತಕ್ಷಣ ಚುನಾವಣೆ ಘೋಷಣೆಯಾದ್ದರಿಂದ ಸಚಿವ ಸಂಪುಟದ ಅನುಮೋದನೆ ಪಡೆಯಲು ಸಾಧ್ಯವಾಗದೆ ವಿಳಂಬವಾಯಿತು. ಬದಲಾದ ಸನ್ನಿವೇಶದಲ್ಲಿ ಈಗ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ . ಹಿಂದಿನ ಸರ್ಕಾರದಲ್ಲಿ ಪೂನಾ ವಾಲಾಗೆ ಕೊಡಲು ತೀರ್ಮಾನಿಸಿದ್ದ ಗುತ್ತಿಗೆ ಟೆಂಡ‌ರ್ ಅನ್ನು ಸಂಪೂರ್ಣ ರದ್ದು ಪಡಿಸಿದ ಹೊಸದಾಗಿ ಟೆಂಡರನ್ನೂ ಕರೆಯುತ್ತಿಲ್ಲ ಸರ್ಕಾರವೇ ನಿರ್ವಹಣೆ ಮಾಡುತ್ತದೆ ಎನ್ನುವ ಹೇಳಿಕೆಯನ್ನೂ ನೀಡುತ್ತಿಲ್ಲ. ಬದಲಾಗಿ ಇಡೀ ಕುದುರೆ ಪಾರಂ ಜಾಗವನ್ನು ಇಂಟಿಗ್ರೇಟೆಡ್ ಟೌನ್ ಶೀಪ್ ಮಾಡಿ ಅತೀ ಶ್ರೀಮಂತರಿಗೆ ವಿಲ್ಲಾ ಗಳನ್ನು ಕಟ್ಟಿಸಿ ಮಾರಾಟ ಮಾಡಲು ಹೊರಟಿದೆ ಇದನ್ನು ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಚಿವರಾದ ಬೈರತಿ ಸುರೇಶ್ ಅವರು ಬಹಿರಂಗಪಡಿಸಿದ್ದಾರೆ ಕುಣಿಗಲ್ ಕ್ಷೇತ್ರದ ಶಾಸಕರಾದ ಡಾ. ರಂಗನಾಥ್ ಅವರೂ ಪತ್ರಿಕಾ ಹೇಳಿಕೆಯನ್ನು ನೀಡಿ ಇದನ್ನು ಖಚಿತ ಪಡಿಸಿದ್ದಾರೆ. ಸರ್ಕಾರ ಈ ರೀತಿ ಮಾಡುವುದರಿಂದ ಕುಣಿಗಲ್ ಜನತೆಗೆ ಏನು ಲಾಭ ಎನ್ನುವುದನ್ನು ಬಹಿರಂಗವಾಗಿ ಹೇಳುತ್ತಿಲ್ಲ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಡಾ. ರಂಗನಾಥ್ ಅವರ ಗಮನಕ್ಕೆ ನಾವು ತರಬಯಸುವುದೇನೆಂದರೆ ಕುಣಿಗಲ್ ತಾಲ್ಲೂಕಿನ ಜನ ಅಭಿವೃದ್ಧಿ ವಿರೋಧಿಗಳಲ್ಲ ನೀವು ಇಲ್ಲಿನ ಯುವ ಜನಾಂಗಕ್ಕೆ ಉದ್ಯೋಗ ನೀಡುವ ಕೈಗಾರಿಕೆ, ಐ.ಟಿ, ໖.3 ಕಂಪನಿಗಳನ್ನು ತಾಲ್ಲೂಕಿನಲ್ಲಿ ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿದ್ದರೆ ಕುಣಿಗಲ್ ತಾಲ್ಲೂಕಿನ ಬೇರೆ ಬೇರೆ ಜಾಗದಲ್ಲಿ ಸರ್ಕಾರಿ ಖಾಲಿ ಜಮೀನಿದೆ ಅಲ್ಲಿ ಸ್ಥಾಪಿಸಿ ಅದನ್ನು ಬಿಟ್ಟು ಐತಿಹಾಸಕ ಪರಂಪರೆ ಹೊಂದಿರುವ ಕುಣಿಗಲ್ ಕುದುರೆ ಪಾರಂ ನಲ್ಲಿ ಇಂಟಿಗ್ರೇಟೆಡ್ ಟೌನ್ ಶೀಪ್ ಮಾಡುತ್ತೇವೆ, ಖಾಸಗಿ ಮೆಡಿಕಲ್ ಕಾಲೇಜು ಕಟ್ಟುತ್ತೇವೆ ಐ.ಟಿ.ಬಿ ಟಿ ಕಂಪನಿ ತರುತ್ತೇವೆ ಎನ್ನುವ ನಿಮ್ಮ ಮತ್ತು ಸರ್ಕಾರದ ನಿಲುವಿಗೆ ಪ್ರತಿಯೊಬ್ಬ ಕುಣಿಗಲ್ ತಾಲ್ಲೂಕಿನ ಸ್ವಾಭಿಮಾನಿ ನಾಗರೀಕರ ವಿರೋಧವಿದೆ. ಕುಣಿಗಲ್ ಕುದುರೆ ಪಾರಂ ಅನ್ನು ಸರ್ಕಾರವೇ

ನಿರ್ವಹಣೆ ಮಾಡಬೇಕು ಇಲ್ಲವೇ ಮತ್ತೋಂದು ಅವಧಿಗೆ ಕಠಿಣ ಷರತ್ತುಗಳನ್ನು ವಿಧಿಸಿ ಈ ಜಾಗದ ಮೂಲ ಸ್ವರೂಪಕ್ಕೆ ಯಾವುದೇ ದಕ್ಕೆಯಾಗದ ರೀತಿ ಮತ್ತು ಇದರ ಐತಿಹಾಸಿಕ ಪರಂಪರೆಯನ್ನು ಹಾಳುಮಾಡದ ಹಾಗೆ ನೋಡಿಕೊಳ್ಳು. ಸಂಸ್ಥೆಗೆ ನಿರ್ವಹಣೆ ಗೆ ಮಾತ್ರ ಗುತ್ತಿಗೆಗೆ ನೀಡಬೇಕು ಏಷ್ಯಾ ಖಂಡದಲ್ಲಿಯೇ ಎರಡನೇ ಸ್ಥಾನ ಪಡೆದು ಈಗ ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಏಕೈಕ ಕುದುರೆ ತಳಿ ಸಂವರ್ದನಾ ಕೇಂದ್ರ ಇದಾಗಿರುವುದರಿಂದ ಕರ್ನಾಟ ಸರ್ಕಾರ ಅತ್ಯಂತ ಜವಾಬ್ದಾರಿಯಿಂದ ಇದನ್ನು ಸಂರಕ್ಷಣೆ ಮಾಡಬೇಕು ಎನ್ನುವುದು ಕುಣಿಗಲ್ ಜನರ ಒತ್ತಾಯವಾಗಿದೆ.

ಕೆಲವರು ಕುಣಿಗಲ್ ಕುದುರೆ ಪಾರಂ ನಲ್ಲಿ ಇರುವ ಕುದುರೆಗಳಿಗೆ ಕೇವಲ 100 ಎಕ್ಕರೆ ಜಾಗ ಸಾಕು ಇನ್ನುಳಿದ ಜಾಗದಲ್ಲಿ ಇಂಟಿಗ್ರೇಟೆಡ್ ಟೌನ್ ಶೀಪ್ ಮಾಡಲಿ, ಶಾಲಾ, ಕಾಲೇಜು ಕಟ್ಟಲಿ, ಇಂಜಿನಿಯರಿಂಗ್, ಖಾಸಗಿ ಮೆಡಿಕಲ್ ಕಾಲೇಜು ಕಟ್ಟಲಿ ಎನ್ನುವ ವಾದ ಮಾಡುತ್ತಾರೆ ಇದು ಸಂಪೂರ್ಣ ಅವಾಸ್ತವ ಏಕೆಂದರೆ ಈಗ ಕುಣಿಗಲ್ ಕುದುರೆ ಪಾರಂ ನಲ್ಲಿ 185 ಕುದುರೆಗಳಿವೆ ವೈಜ್ಞಾನಿಕವಾಗಿ ನೋಡಿದರೆ ಒಂದು ಕುದುರೆಗೆ 5 ಎಕ್ಕರೆ ಜಾಗ ಬೇಕು ಕನಿಷ್ಠ 3 ಎಕ್ಕರೆಯಾದರೂ ಇರಲೇ ಬೇಕು ಈಗ ಕುಣಿಗಲ್ ಸ್ಟಡ್ ಪಾರಂ ಜಾಗ ಸಂಪೂರ್ಣವಾಗಿ ಕುದುರೆ ಸಾಕಾಣಿಕೆಗೆ ಬಳಕೆಯಾಗುತ್ತಿದೆ ಎಲ್ಲಿಯೂ ಜಾಗ ವ್ಯರ್ಥವಾಗಿ ಉಳಿದಿಲ್ಲ ಇದರ ಜೊತೆಗೆ ಉತ್ತಮ ಆಕ್ಸಿಜನ್ ಒದಗಿಸುವ 200 ವರ್ಷಗಳಷ್ಟು ಹಳೆಯ ನೂರಾರು ಅರಳಿಮಗಳು ಸೇರಿದಂತೆ ಸುಮಾರು 6000 ಹೆಚ್ಚು ಮರಗಳಿವೆ ಮೊಲ, ಗೂಬೆ, ಗುಬ್ಬಚ್ಚಿ, ಗೊರವಂಕ, ಮರಕುಟಿಕ, ನವಿಲು ಇಲ್ಲಿ ವಾಸವಾಗಿದ್ದು ಇಡೀ ಕುದುರೆ ಪಾರಂ ಜಾಗ ಜೀವ ವೈವಿಧ್ಯತೆಯಿಂದ ಕೂಡಿದ ಇಂತಹ ಐತಿಹಾಸಿಕ ಜಾಗವನ್ನು ಕಳೆದುಕೊಳ್ಳಲು ಕುಣಿಗಲ್ ಮಣ್ಣಿನಲ್ಲಿ ಹುಟ್ಟಿದ ಯಾವ ಸ್ವಾಭಿಮಾನಿಯೂ ಇಷ್ಟಪಡುವುದಿಲ್ಲ

ಕರ್ನಾಟಕ ಸರ್ಕಾರ ಐತಿಹಾಸಿಕ ಕುಣಿಗಲ್ ಕುದುರೆ ಪಾರಂನಲ್ಲಿ ಇಂಟಿಗ್ರೇಟೆಡ್ ಟೌನ್ ಶೀಪ್ ನಿರ್ಮಾಣ ಮಾಡಲು ಯೋಜನೆ ಮಾಡುತ್ತಿದೆ ಎನ್ನುವ ವಿಷಯ ತಿಳಿದ ಕೂಡಲೇ ಕುಣಿಗಲ್ ತಾಲ್ಲೂಕಿನ ಸಮಾನ ಮನಸ್ಕರು, ರಾಜಕೀಯ ಪಕ್ಷಗಳ ಮುಖಂಡರು, ದಲಿತಪರ, ಸಂಘಟನೆಗಳು, ಮಹಿಳಾ ಸಂಘಟನೆ, ಕಾರ್ಮಿಕ, ರೈತ ಸಂಘಟನೆ, ಕನ್ನಡಪರ, ಪ್ರಗತಿಪರ ಸಂಘಟನೆ ಹಿಂದುಳಿದ ಜಾತಿ ಸಂಘಟನೆಗಳು ಮುಂತಾದ ಸಂಘಟನೆಗಳ ಮುಖಂಡರು ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ಮೂರು ಸಭೆ ನಡೆಸಿ ಪಾರಂಪರಿಕ ಕುಣಿಗಲ್ ಕುದುರೆ ಪಾರಂ ಅನ್ನು ಉಳಿಸಿಕೊಳ್ಳಲು ” ಪಾರಂಪರಿಕ ಕುಣಿಗಲ್ ಕುದುರೆ ಪಾರಂ ಉಳಿವಿಗಾಗಿ ಹೋರಾಟ ಸಮಿತಿ “” ರಚಿಸಿ ಈ ಸಮಿತಿ ವತಿಯಿಂದ ಮಾನ್ಯ ಮುಖ್ಯ ಮಂತ್ರಿಯವರಿಗೆ ಮತ್ತು ಪಶುಸಂಗೋಪನೆ ಇಲಾಖೆ ಸಚಿವರಿಗೆ ಕುಣಿಗಲ್ ಕ್ಷೇತ್ರದ ಶಾಸಕರಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಕುಣಿಗಲ್ ಕುದುರೆ ಪಾರಂ ಅನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕೆಂದು ಮನವಿ ಮಾಡಿದ್ದೇವೆ.

ಮಾಜಿ ಪ್ರಧಾನಿ H. D ದೇವೇಗೌಡ ಅವರನ್ನು ಭೇಟಿ ಮಾಡಿ ಮನವಿಸಲ್ಲಿಸಿದ್ದೇವೆ ಮಾಜಿ ಮುಖ್ಯಮಂತ್ರಿ H.D ಕುಮಾರ ಸ್ವಾಮಿ ಅವರನ್ನೂ ಭೇಟಿಮಾಡಿ ಮನವಿ ಕೊಟ್ಟಿದ್ದೇವೆ ನಮ್ಮ ಮನವಿಗೆ ಸ್ಪಂದಿಸಿದ H. ದೇವೇಗೌಡ ರವರು ಮತ್ತು ಕುಮಾರಸ್ವಾಮಿ ಅವರು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಐತಿಹಾಸಿಕ ಕುಣಿಗಲ್ ಕುದುರೆ ಪಾರಂ ಅನ್ನು ಯಥಾಸ್ಥಿತಿಯಲ್ಲಿಯೇ ಉಳಿಸ ಬೇಕೆಂದು ಮನವಿ ಮಾಡಿದ್ದಾರೆ.

ನಾಡಿನ ಇತಿಹಾಸ ತಜ್ಞರು, ಪರಿಸರವಾದಿಗಳು, ಕನ್ನಡಪರ, ದಲಿತಪರ, ರೈತ ಮತ್ತು ಕಾರ್ಮಿಕ ಸಂಘಟನೆಯ ಮುಖಂಡರನ್ನು ಭೇಟಿಮಾಡಿ ಕುಣಿಗಲ್ ಕುದುರೆ ಪಾರಂ ಉಳಿವಿಗಾಗಿ ಹೋರಾಟಕ್ಕೆ ಬೆಂಬಲ ಕೊರಿದ್ದೇವೆ ಇವರೆಲ್ಲರೂ ಬೆಂಬಲ ಸೂಚಿಸಿದ್ದಾರೆ.

ಕುಣಿಗಲ್ ಕುದುರೆ ಪಾರಂ ನಲ್ಲಿ ಇಂಟಿಗ್ರೇಟೆಡ್ ಟೌನ್ ಶೀಪ್ ನಿರ್ಮಾಣ ಮಾಡಬಾರದು ಈ ಐತಿಹಾಸಿಕ ಪಾರಂ ಅನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕೆಂದು ಜನವರಿ 17, 2024 ಕುಣಿಗಲ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಕರ್ನಾಟಕ ಸರ್ಕಾರಕ್ಕೆ ಮನವಿ ಪತ್ರವನ್ನು ನೀಡಿದ್ದೇವೆ. ಆದರೂ ಕರ್ನಾಟಕ ಸರ್ಕಾರ ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿಲ್ಲ ಸ್ಥಳೀಯ ಶಾಸಕರು ಕುದುರೆ ಪಾರಂ ನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ತೆರೆದು ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಗೊಂದಲ ಉಂಟುಮಾಡುತ್ತಿದ್ದಾರೆ . ಕುಣಿಗಲ್ ಕುದುರೆ ಪಾರಂ ನಲ್ಲಿ ಸರ್ಕಾರ ಕುದುರೆಗೆ ಸಂಬಂಧ ಇಲ್ಲದ ಯಾವುದೇ ಯೋಜನೆ ತಂದರೂ ನಮ್ಮ ವಿರೋಧವಿದೆ ಪಾರಂಪರಿಕ ಕುಣಿಗಲ್ ಕುದುರೆ ಪಾರಂ ಯಥಾಸ್ಥಿತಿಯಲ್ಲಿಯೇ ಉಳಿಯಬೇಕೆನ್ನುವುದು ನಮ್ಮ ಒತ್ತಾಸೆಯಾಗಿದೆ.

ಬೇಡಿಕೆ

೧.ಕುಣಿಗಲ್‌ ಕುದುರೆ ಪಾರಂ ನಲ್ಲಿ ರಾಜ್ಯ ಸರ್ಕಾರ ಇಂಟಿಗ್ರೇಟೆಡ್ ಟೌನ್ ಶೀಪ್ ನಿರ್ಮಾಣ ಮಾಡಲು ಉದ್ದೇಶಿಸಿರುವ ಯೋಜನೆಯನ್ನು ಕೂಡಲೇ ಕೈ ಬಿಡಬೇಕು. ೨.ಕುಣಿಗಲ್‌ ಕುದುರೆ ಎಂದು ಖ್ಯಾತಿ ಪಡೆದು ವಿಶ್ವಕ್ಕೆ ಉತ್ತಮ ತಳಿಯ ಕುದುರೆಗಳನ್ನು ನೀಡಿರುವ ಈ ಪ್ರದೇಶವನ್ನು ಸಂರಕ್ಷಣೆ ಮಾಡಬೇಕು.

೩. ಕುಣಿಗಲ್‌ ಕುದುರೆ ಪಾರಂ ನಲ್ಲಿ ಕುದುರೆ ತಳಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು.

೪. ಕುದುರೆ ಪಾರಂ ನ ಜಾಗದಲ್ಲಿ ಯಾವುದೇ ಕೈಗಾರಿಕೆ, ವಾಣಿಜ್ಯ ಉದ್ದೇಶದ ಕಟ್ಟಡ ಕಟ್ಟಲು ಜಾಗ ಮಂಜೂರು ಮಾಡಬಾರದು.

೫. ಕುಣಿಗಲ್ ಕುದುರೆ ಪಾರಂ 400 ವರ್ಷಗಳ ಇತಿಹಾಸ ಹೊಂದಿದ್ದು, ಈಗಲೂ ಅಸ್ತಿತ್ವದಲ್ಲಿರುವುದರಿಂದ ಕುಣಿಗಲ್ ಕುದುರೆ ಪಾರಂ ಅನ್ನು 1961 ಕಲಂ 2 ಮತ್ತು 3 ಕರ್ನಾಟಕ ಐತಿಹಾಸಿಕ ಸ್ಮಾರಕಗಳ ಅಧಿನಿಯಮದ ಅನ್ವಯ ಪಾರಂಪರಿಕ ಸ್ಥಳವೆಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಬೇಕು ಎಂದು ಪಾರಂಪರಿಕ ಕುಣಿಗಲ್ ಕುದುರೆ ಪಾರಂ ಉಳಿವಿಗಾಗಿ ಹೋರಾಟ ಸಮಿತಿ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಕಾರ್ಮಿಕ ಹಕ್ಕಿಗಾಗಿ ಬೃಹತ್ ಪ್ರತಿಭಟನೆ-‘ಎದ್ದೇಳಿ ಕಾರ್ಮಿಕರೇ ನಮ್ಮ ಹಕ್ಕು ನಾವು ಪಡೆಯೋಣ”.

ಕಾರ್ಮಿಕ ಹಕ್ಕಿಗಾಗಿ ಬೃಹತ್ ಪ್ರತಿಭಟನೆ

11/02/2024.

ಸ್ಥಳ ಫ್ರೀಡಂ ಪಾರ್ಕ್, ಬೆಂಗಳೂರು

ಎದ್ದೇಳಿ ಕಾರ್ಮಿಕರೇ ನಮ್ಮ ಹಕ್ಕು ನಾವು ಪಡೆಯೋಣ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಸಾಮಾನ್ಯವಾಗಿ ಬಡತನದ ಬದುಕಿನಲ್ಲಿ ಬದುಕುತ್ತಾ ಹೆಚ್ಚಾಗಿ ಅವಿದ್ಯಾವಂತರಾಗಿರುತ್ತಾರೆ. ಇವರು ಕೆಲಸದಿಂದ ಕೆಲಸಕ್ಕೆ ಅಲೆದಾಡುತ್ತಾ ಕಟ್ಟಡ ನಿರ್ಮಾಣದಲ್ಲಿ ಮೇಸನ್, ಸೆಂಟ್ರಿಂಗ್, ಕಾರ್ಪೆಂಟರ್, ಪ್ಲಂಬಿಂಗ್, ಸಿಮೆಂಟ್ ಕಾಂಕ್ರೀಟ್ ಕೆಲಸ ಹಾಗೂ ಇನ್ನಿತರೆ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿರುತ್ತಾರೆ. ಇವರಿಗೆ ಯಾವುದೇ ಭದ್ರತೆಯ ಬದುಕು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಹಾಗೂ ನವೀಕರಣ ಮಾಡಿಸಿಕೊಳ್ಳಲು ಮಂಡಳಿಯು ಹಲವಾರು ಷರತ್ತುಗಳು ವಿಧಿಸಿರುತ್ತದೆ. ವೇತನ ಚೀಟಿ ಹಾಗೂ ಹಾಜರಾತಿ ನಿಯಮಗಳನ್ನು ರದ್ದುಗೊಳಿಸಬೇಕು. ಕಾರಣ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಾರ್ಮಿಕರ ನೋಂದಣಿ ನವೀಕರಣಕ್ಕಾಗಿ ನಿಯಮಗಳನ್ನು ಸರಳೀಕರಣಗೊಳಿಸಲು ಸೂಕ್ತ ಆದೇಶವನ್ನು ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.

ಹೀಗಿರುವಾಗ ಕಾಮಿಕರು ಅತಂತ್ರ ಬದುಕು ಸಾಗಿಸುತ್ತ ಕೆಲಸ ನಿರ್ವಹಿಸುವ ಸಮಯದಲ್ಲಿ ನೋಂದಣಿಯಾಗಿ ಹಾಗೂ ನವೀಕರಣಕ್ಕಾಗಿ ಕಟ್ಟಡ ಪರವಾನಿಗೆ ಪತ್ರ ಹಾಗೂ ನಕ್ಷೆ, ವೇತನ ಚೀಟಿ ಹಾಗೂ ಹಾಜರಾತಿ ಪುಸ್ತಕ ಕೇಳಿರುವುದು ಇವರಿಗೆ ಒದಗಿಸಿಕೊಡುವುದು ಅಸಾಧ್ಯ ವಿಷಯವಾಗಿರುತ್ತದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಇಂತಹ ಜಾಗದಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದಾಗ ಅದನ್ನು ಪರಿಶೀಲಿಸಿ ಸತ್ಯ ಅಸತ್ಯತೆಯನ್ನು ತನಿಖೆ ಮಾಡುವ ಅಧಿಕಾರ ಸಂಬಂಧಪಟ್ಟ ಕಾರ್ಮಿಕ ನಿರೀಕ್ಷಕರಿಗೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಕಾನೂನುಗಳನ್ನು ಜಾರಿ ಮಾಡಿರುವುದರಿಂದ ಸಾವಿರಾರು ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. :

1) ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರಿಗೆ ರೂ.5,00,000/-ಗಳ ವಸತಿ ಸೌಲಭ್ಯವನ್ನು ಕಾರ್ಮಿಕ ಇಲಾಖೆಯಿಂದ ಕೂಡಲೆ ಘೋಷಣೆ ಆಗಬೇಕು.

2) ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್, ಕಾರ್ಮಿಕ ಇಲಾಖೆಯಿಂದ ಕೂಡಲೇ ನೀಡಲು ಆದೇಶ ಹೊರಡಿಸಬೇಕು.

3) ಕರ್ನಾಟಕ ರಾಜ್ಯಾದ್ಯಂತ ಜಿಲ್ಲೆ ಮತ್ತು ತಾಲ್ಲೋಕುಗಳಲ್ಲಿ ಕಾರ್ಮಿಕ ಕಲ್ಯಾಣ ಮಂಟಪ ಮತ್ತು ಕಾರ್ಮಿಕ ಸಮುದಾಯ ಭವನ ನಿರ್ಮಾಣವಾಗಬೇಕು.

4) ಕಾರ್ಮಿಕರಿಗೆ 2013 ರಿಂದ ಸತತವಾಗಿ ಕನಿಷ್ಟ ವೇತನ ನೀಡಬೇಕಾಗಿ ಕೇಳಿದರು ಕೂಡ ಇದುವರೆಗೂ ಬೇಡಿಕೆ, ಈಡೇರಿಸಿಲ್ಲ ಹಾಗಾಗಿ ಕನಿಷ್ಟ ವೇತನ ಒಳಪಡುವ ಕಾರ್ಮಿಕರಿಗೆ 35 ಸಾವಿರ ರೂ.ಗಳನ್ನು ನಿಗದಿಪಡಿಸಬೇಕು.

5) ಕಾರ್ಮಿಕ ಮಕ್ಕಳಿಗೆ ವಿದ್ಯಾಬ್ಯಾಸಕ್ಕಾಗಿ, ನೀಡುತ್ತಿರುವ ಸೌಲಭ್ಯವನ್ನು 2019-20ನೇ ಸಾಲಿನಲ್ಲಿ ಏನು ನಿಗದಿ ಆಗಿದೆಯೋ ಅದೇ ಸೌಲಭ್ಯವನ್ನು 2023-24ನೇ ಸಾಲಿನಲ್ಲೂ ಕೂಡಲೇ ನೀಡಬೇಕು.

6) ನೋಂದಣಿ ಆಗಿರುವ ಕಾರ್ಮಿಕರಿಗೆ ಚಿಕಿತ್ಸೆಗಾಗಿ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಮಿಕರು ಚಿಕಿತ್ಸೆ ಹಾಗೂ ಆಪರೇಷನ್‌ಗೆ ಒಳಪಟ್ಟಲ್ಲಿ 5 ವರ್ಷದವರೆಗೆ ಮರು ಪಾವತಿ ನೀಡಬೇಕಾಗಿ ಅನುಕೂಲ ಮಾಡಿ ಕೊಡಬೇಕು, ಇದು ರಾಜ್ಯಾದ್ಯಂತ.

7) ಕಾರ್ಮಿಕ ಇಲಾಖೆ ವತಿಯಿಂದ ವಂತಿಗೆ ಹಣವನ್ನು ಇಡೀ ರಾಜ್ಯಾದ್ಯಂತ ಶೇಕಡ 2% ಹೆಚ್ಚುವರಿಯಾಗಿ ಏರಿಸಿ ಪಾವತಿ ಮಾಡಿಸಿಕೊಳ್ಳಬೇಕು.

8) ಇಡೀ ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳಲ್ಲಿ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಪಿ.ಎಫ್ ಮತ್ತು ಇ.ಎಸ್.ಐ ಕೂಡಲೇ ಜಾರಿಗೆ ತರಬೇಕು.

9) ರಾಜ್ಯಾದ್ಯಂತ ನೋಂದಣಿಯಾಗಿರುವ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು

ಮಾಡುತ್ತಿರುವುದರಿಂದ ಮಂಡಳಿಯಲ್ಲಿರುವ ಹಣವು ದುರುಪಯೋಗವಾಗುತ್ತಿದೆ. ಆದ * ಕಾರಣ ಆರೋಗ್ಯ ತಪಾಸಣೆಯನ್ನು ಕೂಡಲೇ ನಿಲ್ಲಿಸಬೇಕು.

10) ಕಾರ್ಮಿಕ ದಿನಾಚರಣೆ ಮೇ 1ರ ದಿನದಂದು ನೋಂದಣಿ ಆಗಿರುವ ಕಟ್ಟಡ ಕಾರ್ಮಿಕರಿಗೆ 25 ಸಾವಿರ ರೂಪಾಯಿಗಳನ್ನು ಬೋನಸ್ ಮೂಕಾಂತರ ನೀಡಬೇಕು.

11) ಇದೇ ಮಾದರಿಯಲ್ಲಿ ಲೇಬರ್ ವೆಲ್‌ಫೇರ್ ಬೋರ್ಡಿನಲ್ಲಿ ವಂತಿಕೆ ಹಣವನ್ನು ಕಟ್ಟುತ್ತಿರುವ ಕಾರ್ಮಿಕರಿಗೆ ಮೇ 1ರ ದಿವಸದಂದು 25 ಸಾವಿರ ರೂಪಾಯಿಗಳನ್ನು ಬೋನಸ್ ಮುಖಾಂತರ ನೀಡಬೇಕು.

12) ಕಟ್ಟಡ ಪರವಾನಿಗೆ ಪತ್ರ/ನಕ್ಷೆ ಅನುಮೋದನೆಯನ್ನು ಈ ಕೂಡಲೇ ಹಿಂಪಡೆಯಬೇಕು.

14) ರಾಜ್ಯಾದ್ಯಂತ ಕಾರ್ಖಾನೆಗಳು, ಮಾಲ್‌ಗಳು, ಲಾಡ್ಜ್ ಗಳು, ಹೋಟೆಲ್‌ಗಳು, ಪೆಟ್ರೋಲ್ ಬಂಕ್‌ಗಳು, ಗಾರ್‌ಮೆಂಟ್ಸ್ಗಳು ಮತ್ತು ಸೆಕ್ಯೂರಿಟಿಗಳಲ್ಲಿ ಕೆಲಸ ಮಾಡುವವರಿಗೆ ವೇತನ ಚೀಟಿ ನ್ಯಾಯಯುತವಾಗಿ ಸಿಗುತ್ತಿಲ್ಲ. ಇದನ್ನು ನ್ಯಾಯಯುತವಾಗಿ ಸಿಗುವಂತೆ ಕಡ್ಡಾಯಗೊಳಿಸಿ. A

15) ವಿವಿಧ ಕಾರ್ಮಿಕರಿಗೆ ನೀಡುವ ಕಿಟ್‌ಗಳಿಗಾಗಿ ವಹಿಸುವ ಟೆಂಡರ್‌ನ್ನು ತಕ್ಷಣವೇ ರದ್ದುಪಡಿಸಬೇಕು.

16) ಸಂಚಾರಿ ವಾಹನ ಚಿಕಿತ್ಸೆಯನ್ನು ತಕ್ಷಣವೇ ರದ್ದುಗೊಳಿಸಬೇಕು.

17) 2023-24ನೇ ಸಾಲಿನ ಶೈಕ್ಷಣಿಕ ಧನ ಸಹಾಯದ ಅರ್ಜಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಾರಂಭಿಸಬೇಕು.

18) ನವೀಕರಣವನ್ನು ಮೊದಲಿನಂತೆ ಮೂರು ವರ್ಷದ ಅವಧಿಗೆ ವಿಸ್ತರಿಸಬೇಕು.

19) ಮದುವೆ ದನ ಸಹಾಯ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಬೇಕು.

20) ಸ್ಥಗಿತಗೊಂಡಿರುವ ಮುಂದುವರಿಕೆ ಪೆನ್ನನ್ ಸೌಲಭ್ಯವನ್ನು ಕೂಡಲೇ ಪ್ರಾರಂಭಿಸಬೇಕು.

21) 60 ವರ್ಷಗಳ ನಂತರ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕು.

22) ನೋಂದಾಯಿತ ಬೋಗಸ್ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ಸ್ಲಂ ಬೋರ್ಡ್‌ ಗೆ ನಿಡಿದ ಧನ ಸಹಾಯವನ್ನು ತನಿಖೆಗೆ ಒಳಪಡಿಸಿ ಮಂಡಳಿಗೆ ಅನುದಾನವನ್ನು ಹಿಂಪಡೆಯಬೇಕು.

23) ರಾಜ್ಯ ಸರ್ಕಾರವು ಫೆಬ್ರವರಿ 2024ರ ಬಡಜೆಟ್‌ನಲ್ಲಿ ಕಾರ್ಮಿಕರಿಗಾಗಿ 1000 ಕೋಟಿ ರುಪಾಯಿಗಳ ಅನುದಾನವನ್ನು ಘೋಷಣೆ ಮಾಡಬೇಕು.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಜಾರಿ ಮಾಡಬೇಕಾಗಿ ಒತ್ತಾಯಸಿದ್ದೇವೆ. ಇದರ ಜೊತೆಗೆ ಕೆಲವು ಕಾರ್ಮಿಕರ ಕನ್ನಡ ಪರ ರೈತಪರ ದಲಿತಪರ ಹಾಗೂ ಇನ್ನೂ ಕೆಲವು ಸಂಘಟನೆಗಳ ಸಹಕಾರದೊಂದಿಗೆ ಕಾರ್ಮಿಕರ ವಿವಿಧ ಬೇಡಿಕೆಗಳ ಹೀಡೇರಿಕೆಗಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ಮಾಡಲಿದ್ದು. ಈ ಮೇಲಿನ ಎಲ್ಲಾ ಬೇಡಿಕೆಗಳು ಶೀಘ್ರವೇ ಈಡೇರದೇ ಇದ್ದಲ್ಲಿ ನಾವುಗಳು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಛೇರಿಗಳ ಮುಂದೆ ಉಗ್ರ ಸ್ವರೂಪದ ಹೋರಾಟಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆಂದು ಈ ಮೂಲಕ ತಮ್ಮಲ್ಲಿ ತಿಳಿಯಪಡಿಸುತ್ತಿದ್ದೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಒಕ್ಕೂಟದ ವತಿಯಿಂದ ತಿಳಿಸಲಾಯಿತು.

City Today News 9341997936