ಸರ್ಕಾರಿ ನೌಕರರ ರಾಜ್ಯ ಮಟ್ಟದ ಪ್ರತಿಭಟನಾ ಧರಣಿ ಕಾರ್ಯಕ್ರಮ ದಿನಾಂಕ: 07.02.2024

ಕೇಂದ್ರ ಸರ್ಕಾರದ ನೀತಿಗಳು ದೈನಂದಿನ ಸರಕು ಸೇವೆಗಳ ಬೆಲೆಯೇರಿಕೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆಗಳ ಹೆಚ್ಚಳ ಮಾಡಿ ಜನತೆಗೆ ಸಂಕಷ್ಟ ತಂದೊಡ್ಡಿದ್ದು, ಖಾಸಗೀಕರಣ ನೀತಿಗಳ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ಹೆಚ್ಚಿನ ಲಾಭ ಹರಿದು ಹೋಗಲು ಈ ನೀತಿಗಳು ಸಹಕಾರಿಯಾಗಿವೆ. PFRDA ಕಾಯ್ದೆ / NPS ಪದ್ದತಿ ರದ್ದುಪಡಿಸಿ, ನಿಶ್ಚಿತ ಪಿಂಚಣಿ ಯೋಜನೆ (OPS) ಮರುಸ್ಥಾಪಿಸಲು ಒತ್ತಾಯಿಸಿ ದೇಶಾದ್ಯಂತ ಸರ್ಕಾರಿ ನೌಕರರು ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರವು ಕೇವಲ ಪರಿಶೀಲನಾ ಸಮಿತಿ ರಚಿಸಿ ಮೌನವಾಗಿದೆ. ರಾಜ್ಯ ಮಟ್ಟದಲ್ಲಿ ಕೆಲವು ರಾಜ್ಯಗಳು ಎನ್.ಪಿ.ಎಸ್ ಪದ್ದತಿಯನ್ನು ರದ್ದುಪಡಿಸಿದ್ದರೂ ರಾಜಕೀಯ ಪಕ್ಷಗಳು/ ಸರ್ಕಾರಗಳು ಬದಲಾದಾಗ ಮತ್ತೆ NPS ಅನ್ನು ಮರುಸ್ಥಾಪಿಸಲು ಕ್ರಮ ವಹಿಸುತ್ತಿರುವ ಸುದ್ದಿಗಳು ರಾಜಸ್ತಾನದಂತಹ ರಾಜ್ಯಗಳಿಂದ ಬರುತ್ತಿವೆ.

ಕರ್ನಾಟಕ ರಾಜ್ಯದ ಸರಕಾರಿ ನೌಕರರು ದಕ್ಷಿಣ ರಾಜ್ಯಗಳಲ್ಲಿಯೇ ಅತಿ ಕಡಿಮೆ ಸಂಬಳ ಪಡೆಯುವ ನೌಕರರರಾಗಿದ್ದೇವೆ. ಪ್ರಸ್ತುತ ರಾಜ್ಯ ಸರ್ಕಾರವು 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ ಎರಡನೇ ಬಾರಿಗೆ 6 ತಿಂಗಳ ಕಾಲ ದಿನಾಂಕ: 15.03.2024ರವರೆಗೆ ವಿಸ್ತರಿಸಿರುವುದು ನೌಕರರಲ್ಲಿ ತೀವ್ರ ನಿರಾಶೆ ಮತ್ತು ಆಕ್ರೋಶ ಮೂಡಿಸಿದೆ. ರಾಜ್ಯ ಸರ್ಕಾರವು 7ನೇ ವೇತನ ಪರಿಷ್ಕರಣೆ ಜಾರಿಗೊಳಿಸಲು ವಿಳಂಬ ಧೋರಣೆ ಅನುಸರಿಸುತ್ತಿದೆ. 2016ರಲ್ಲಿ ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾಜ್ಯದಲ್ಲಿ ಗುತ್ತಿಗೆ/ ದಿನಗೂಲಿ/ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಹೊರಗುತ್ತಿಗೆ ಏಜೆನ್ಸಿಗಳು ಶೋಷಣೆ ಮಾಡುತ್ತಿವೆ. ಘೋಷಣೆ ಮಾತ್ರವೇ ಆಗಿ ಉಳಿದಿರುವ ನಗದು-ರಹಿತ ವಿಮಾ ಯೋಜನೆ. ಅನುದಾನಿತ ಸಂಸ್ಥೆಗಳ ನೌಕರರು ಪಿಂಚಣಿ ವಂಚಿತರಾಗಿರುವುದು. ಅಸಂವಿಧಾನಿಕ ನಡತೆ ನಿಯಮಗಳು, ಪಿಡಿಒ ಅಧಿಕಾರಿಗಳ ಸಮಸ್ಯೆಗಳು, ನೌಕರ-ವಿರೋಧಿ ಅಂಶಗಳನ್ನು ಒಳಗೊಂಡಿರುವ ಆಡಳಿತ ಸುಧಾರಣೆಗಳು, ಇತ್ಯಾದಿ ನೌಕರ ಸಮಸ್ಯೆಗಳು ಆಗರವಾಗಿ ಬೆಳೆಯುತ್ತಿವೆ.

ಈ ಹಿನ್ನೆಲೆಯಲ್ಲಿ, ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ದಿನಾಂಕ: 07.02.2024 ಬುಧವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ನೌಕರರು ಒಂದು ದಿನದ ರಾಜ್ಯ ಮಟ್ಟದ ಪ್ರತಿಭಟನಾ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ರಾಜ್ಯ ಸರ್ಕಾರದ ವಿವಿಧ ಇಲಾಖಾ ಹಾಗೂ ವೃಂದ ಸಂಘಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡುತ್ತದೆ.

ಈ ಧರಣಿ ಕಾರ್ಯಕ್ರಮವು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ(ರಿ.)ದ ನೇತೃತ್ವದಲ್ಲಿ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ಸಮನ್ವಯ ನೌಕರರ ಸಂಘ(ರಿ.), ಕರ್ನಾಟಕ ರಾಜ್ಯ ಸರ್ಕಾರಿ ಪಿ.ಡಿ.ಓ ಕ್ಷೇಮಾಭ್ಯುದಯ ಸಂಘ(ರಿ.), ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಅನುದಾನಿತ ಪ್ರೌಢಶಾಲೆಗಳ ಕ್ಷೇಮಾಭ್ಯುದಯ ಸಂಘ(ರಿ.), ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ(ರಿ.), ಕರ್ನಾಟಕ ಸರ್ಕಾರ ಸಚಿವಾಲಯ ವಾಹನ ಚಾಲಕರ ಸಂಘ(ರಿ.), ಅಖಿಲ ಕರ್ನಾಟಕ ರಾಜ್ಯ ಪಿಂಚಣಿದಾರರ ಒಕ್ಕೂಟ, ಕಾನೂನು ಮಾಪನ ಶಾಸ್ತ್ರ ಇಲಾಖೆ ಪ.ಜಾ ಮತ್ತು ಪ.ಪಂ ನೌಕರರ ಸಂಘ, ಶಾಲಾ/ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ, ಕಾನೂನು ಮಾಪನ ಶಾಸ್ತ್ರ ಇಲಾಖೆ ಪರೀವೀಕ್ಷಕರ ಸಂಘ, ಕರ್ನಾಟಕ ರಾಜ್ಯ ಸರ್ಕಾರ ಗ್ರಂಥಾಲಯ ಇಲಾಖೆ ನೌಕರರ ಸಂಘ, ಕರ್ನಾಟಕ ರಾಜ್ಯ ಆಯುಷ್ ಶುಶೂಷಾಧಿಕಾರಿಗಳ ಸಂಘ, ಬಿ.ಬಿ.ಎಂ.ಪಿ ಪ.ಜಾ/ಪ.ಪಂ ಅಧಿಕಾರಿ/ನೌಕರರ ಕೇಂದ್ರ ಒಕ್ಕೂಟ. ಕರ್ನಾಟಕ ರಾಜ್ಯ ಅನುದಾನಿತ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಅನುದಾನಿತ ಬೋಧಕ/ಬೋಧಕೇತರ ಸಂಘಟನೆಗಳ ಒಕ್ಕೂಟ ಮತ್ತು ಇನ್ನಿತರೆ ಸಂಘಟನೆಗಳ ಒಡಗೂಡಿ ಜಂಟಿ ಕ್ರಿಯಾ ಸಮಿತಿಯನ್ನು ರಚಿಸಿ ಅಂದು ಧರಣಿ ನಡೆಸಲಾಗುತ್ತಿದೆ.

ಹಾಗೂ ದಿನಾಂಕ: 16.02.2024ರಂದು ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ(ರಿ.)ವು PFRDA ಕಾಯ್ದೆ / NPS ಪದ್ಧತಿ ರದ್ದುಪಡಿಸುವುದು ಸೇರಿದಂತೆ ಇನ್ನಿತರೆ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ/ರಾಜ್ಯ ಸರ್ಕಾರವನ್ನು ಒತ್ತಾಯಿಸಿ “ರಾಷ್ಟ್ರೀಯ ಮುಷ್ಕರ”ಕ್ಕೆ ಕರೆ ಕೊಟ್ಟಿದ್ದು, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಇದಕ್ಕೆ ಬೆಂಬಲ ನೀಡಿದೆ.

ಪ್ರಮುಖ ಬೇಡಿಕೆಗಳು:

1. ಶೇ. 40 ರಷ್ಟು ಹೆಚ್ಚಳದೊಂದಿಗೆ 7ನೇ ವೇತನ ಪರಿಷ್ಕರಣೆಯನ್ನು ಕೂಡಲೇ ಜಾರಿಗೊಳಿಸುವುದು.

2. ರಾಜ್ಯದ ಎಲ್ಲಾ ನೌಕರರಿಗೂ PFRDA ಕಾಯ್ದೆ / NPS ಪದ್ಧತಿ ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ (OPS) ಮರುಸ್ಥಾಪಿಸುವುದು.

3. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವುದು.

4. ಗುತ್ತಿಗೆ/ಹೊರಗುತ್ತಿಗೆ ಅರೆಕಾಲಿಕ ನೇಮಕಾತಿಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು. ಸದರಿಯವರ ವೇತನವನ್ನು ಸರ್ಕಾರಿಂದ ನೇರವಾಗಿ ಖಾತೆಗೆ ಜಮಾ ಮಾಡುವುದು. ಇವರುಗಳನ್ನು ಎಲ್ಲಾ ನೇರ ನೇಮಕಾತಿಗಳಲ್ಲಿ ಖಾಯಂಗೊಳಿಸುವುದು. ಇನ್ನು ಮುಂದೆ ಗುತ್ತಿಗೆ/ಹೊರಗುತ್ತಿಗೆ ನೇಮಕಾತಿಯನ್ನು ಕೈಬಿಟ್ಟು ಖಾಯಂ ನೇಮಕಾತಿ ಮಾಡಿಕೊಳ್ಳುವುದು.

5. ಕೋವಿಡ್ ನೆಪದಲ್ಲಿ ತಡೆಹಿಡಿಯಲಾಗಿರುವ 18 ತಿಂಗಳ ತುಟ್ಟಿಭತ್ಯೆ ಬಿಡುಗಡೆ ಮಾಡುವುದು.

6. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಶೀಘ್ರ ಪರಿಷ್ಕರಣೆ ಮಾಡಿ, ಜೇಷ್ಠತಾ ಪಟ್ಟಿ ಸಿದ್ಧಪಡಿಸುವುದು ಹಾಗೂ ನಿಯಮಾನುಸಾರ ಪದೋನ್ನತಿ ನೀಡುವುದು.

7. ಆಡಳಿತ ಸುಧಾರಣೆಗಳ ನೆಪದಲ್ಲಿ ಇಲಾಖೆಗಳ ವಿಲೀನ, ನೌಕರರ ಸಂಖ್ಯೆ ಕಡಿತ, ಸಾರ್ವಜನಿಕ ಉದ್ದಿಮೆಗಳ/ಸರ್ಕಾರದ ಯೋಜನೆಗಳ ಖಾಸಗೀಕರಣ, ಹೊರಗುತ್ತಿಗೆ ನೇಮಕಾತಿ ಪ್ರಸ್ತಾವನೆಗಳನ್ನು ಕೈಬಿಡುವುದು

8. ಬಡ್ತಿ ಮೀಸಲಾತಿ ಕಾಯ್ದೆ ಸಂಪೂರ್ಣ ಅನುಷ್ಠಾನಗೊಂಡು ಬ್ಯಾಕ್ ಲಾಗ್‌ ಹುದ್ದೆ ಭರ್ತಿ ಮಾಡುವುದು.

9. ರಾಜ್ಯದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲಿನ ಕೆಲಸದ ಒತ್ತಡ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟಲು “ತಜ್ಞರ ಸಮಿತಿ ನೇಮಕ ಮಾಡುವುದು.

10. ಎಲ್ಲಾ ನೌಕರರಿಗೂ ಹಾಗೂ ಎಲ್ಲಾ ನಿವೃತ್ತರಿಗೂ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆ ಜಾರಿ ಮಾಡುವುದು.

11. ಮಹಿಳಾ ನೌಕರರ ಮೇಲಿನ ದೌರ್ಜನ್ಯ ತಡೆಗಟ್ಟುವುದು.

12. ಅನುದಾನಿತ ಶಾಲಾ/ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 60 ಸಾವಿರ ಬೋಧಕ/ಭೋದಕೇತರ ನಿಶ್ಚಿತ ಪಿಂಚಣಿ ಸೌಲಭ್ಯ ಮರುಸ್ಥಾಪಿಸುವುದು.

13. ಕರ್ನಾಟಕ ರಾಜ್ಯ ನಾಗರೀಕ ಸೇವಾ (ನಡತೆ) ನಿಯಮ(2021) ಗಳಲ್ಲಿನ ನೌಕರ-ವಿರೋಧಿ ಅಂಶಗಳನ್ನು ಕೈಬಿಡುವುದು ಮುಂತಾದ ವಿಷಯಗಳನ್ನು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ವತಿಯುಂದ ತಿಳಿಸಲಾಯಿತು.

City Today News 9341997936

ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಮಂಡಳಿಯು ದಿನಾಂಕ 20-02-2023 ರಂದು ಸರ್ಕಾರಿ ಆದೇಶ ಸಂಖ್ಯೆ ಹಿಂವಕ 85 ಬಿ.ಸಿ.ಎ. 2023ರಲ್ಲಿ ಸ್ಥಾಪನೆಯಾಗಿದ್ದು ಅದರನ್ವಯ ನಿಗಮದ ನೋಂದಣಿ, ಅಧಿಕೃತ ಕಛೇರಿ ಹಾಗೂ ಅನುಷ್ಠಾನ ಹಾಗೂ ಅನುಧಾನಕ್ಕಾಗಿ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಶಾಂತಿಯುತ ಹೋರಾಟ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸುವರ್ಣ ಕರ್ನಾಟಕ ಗಾಣಿಗ ಮಹಾಸಭದ ನೇತೃತ್ವದಲ್ಲಿ ದಿನಾಂಕ : 05-02-2024ನೇ ಸೋಮವಾರ ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಒಂದು ದಿನದ ಶಾಂತಿಯುತ ಹೋರಾಟ ಹಮ್ಮಿಕೊಂಡಿದ್ದು, ಇದರ ಉದ್ದೇಶ ರಾಜ್ಯದಲ್ಲಿ ಸುಮಾರು 50-60 ಲಕ್ಷ ಜನಸಂಖ್ಯೆ ಇದ್ದು ನಮ್ಮ ಸಮಾಜವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಸಮುದಾಯವಾಗಿದೆ.

ಹಲವಾರು ವರ್ಷಗಳಿಂದ ತಮ್ಮ ಕುಲ ಕಸಬನ್ನು ಕಳೆದುಕೊಂಡು ತಮ್ಮ ಜೀವನ ಸಾಗಿಸಲಾಗದೆ ಮತ್ತು ಮಕ್ಕಳನ್ನು ಶೈಕ್ಷಣಿಕವಾಗಿ ಪೋಷಿಸಲಾಗದೆ ಆರ್ಥಿಕವಾಗಿ ಹಿಂದುಳಿದಿದೆ. ಈ ನಿಟ್ಟಿನಲ್ಲಿ ಕಳೆದ ದಿನಾಂಕ : 13-02-2023 ರಂದು ಸಮಸ್ತ ಗಾಣಿಗರ ಪರವಾಗಿ ಇದೇ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸಿದಾಗ ಹಿಂದಿನ ಬಿಜೆಪಿ ಸರ್ಕಾರ ನಮ್ಮ ಹೋರಾಟ ಮತ್ತು ಮನವಿಯನ್ನು ಪುರಸ್ಕರಿಸಿ ನಿಗಮ ಮಂಡಳಿಯನ್ನು ಘೋಷಣೆಮಾಡಿ ಸ್ಥಾಪನೆ ಮಾಡಿತ್ತು.

ಆದರೆ ಈಗಿನ ಸರ್ಕಾರ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಮಂಡಳಿಯು ದಿನಾಂಕ 20- 02-2023 ರಂದು ಸರ್ಕಾರಿ ಆದೇಶ ಸಂಖ್ಯೆ ಹಿಂವಕ 85 ಬಿ.ಸಿ.ಎ. 2023ರಲ್ಲಿ ಸ್ಥಾಪನೆಯಾಗಿದ್ದು ಅದರನ್ವಯ ನಿಗಮದ ನೋಂದಣಿ, ಅಧಿಕೃತ ಕಛೇರಿ ಹಾಗೂ ಅನುಷ್ಠಾನ ಹಾಗೂ ಅನುಧಾನವನ್ನು ನೀಡಿಲ್ಲ. ಈ ಎಲ್ಲಾ ಬೇಡಿಕೆಗಳನ್ನು ಪಡೆಯುವ ಸಲುವಾಗಿ ರಾಜ್ಯದ ಸಮಸ್ತ ಗಾಣಿಗರ ಪರವಾಗಿ ಈ ಹೋರಾಟವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಎಲ್ಲಾ ಸಮುದಾಯದವರು ಈ ಹೋರಾಟಕ್ಕೆ ಹೆಚ್ಚಿನ ಪ್ರಚಾರ ನೀಡಿ ಯಶಸ್ವಿಯಾಗಲು ಸಹಕರಿಸಿ. ಗಾಣಿಗರ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕೆಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.

City Today News 9341997936

ದಿನಾಂಕ 19/01/2024 ರಂದು ಬೆಂಗಳೂರಿನಿಂದ ಬೆಳಗಾವಿ ಮಹಾರಾಷ್ಟ್ರ ಗಡಿಯವರೆಗೆ ಅಲೆಮಾರಿ ಸಮುದಾಯದ ಸಂಘಟನೆಗಳ ಬೆಂಬಲದೊಂದಿಗೆ ಶಾಂತಿಯುತವಾಗಿ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಪಾದಯಾತ್ರೆ

ದಿನಾಂಕ 19/01/2024 ರಂದು ಬೆಂಗಳೂರಿನಿಂದ ಬೆಳಗಾವಿ ಮಹಾರಾಷ್ಟ್ರ ಗಡಿಯವರೆಗೆ ಅಲೆಮಾರಿ ಸಮುದಾಯದ ಸಂಘಟನೆಗಳ ಬೆಂಬಲದೊಂದಿಗೆ ಶಾಂತಿಯುತವಾಗಿ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಪಾದಯಾತ್ರೆ ಕೈಗೊಂಡಿರುವ ಕುರಿತು.

Press meet held at press club of Bangalore

ದಿನಾಂಕ 19/01/2024 ರಂದು ಬೆಂಗಳೂರಿನಿಂದ ಬೆಳಗಾವಿ ಮಹಾರಾಷ್ಟ್ರ ಗಡಿಯವರೆಗೆ ಅಲೆಮಾರಿ ಸಮುದಾಯದ ಸಂಘಟನೆಗಳ ಬೆಂಬಲದೊಂದಿಗೆ ಶಾಂತಿಯುತವಾಗಿ ಬೇಡಿಕೆಗಳನ್ನ ಈಡೇರಿಸುವಂತೆ ಸಮೃದ್ಧಿ ಸೇವಾ ಸಂಸ್ಥೆಯ ವತಿಯಿಂದ ಪಾದಯಾತ್ರೆ ಗೊಳ್ಳಲಾಗಿದೆ.

ಬೆಂಗಳೂರಿನಿಂದ ಮಹಾರಾಷ್ಟ್ರಗಡಿವರೆಗೂ ಪಾದಯಾತ್ರೆ

1. ಅಲೆಮಾರಿಗಳಿಗೆ ಕರ್ನಾಟಕ ಸರ್ಕಾರದಲ್ಲಿ ಆದ್ಯತೆ ನೀಡಿ ಅಲೆಮಾರಿ ಆಯೋಗ ರಚನೆ ಮಾಡಬೇಕು.

2. ಅಲೆಮಾರಿ ಜನಾಂಗದ ವಸತಿ ರಹಿತರಿಗೆ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಅನುದಾನದಲ್ಲಿ ಕನಿಷ್ಠ ಐದು ಲಕ್ಷಗಳ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುವುದು.

3. ಅಲೆಮಾರಿಗಳ ಏಳಿಗೆಗಾಗಿ ಹೆಚ್ಚಿನ ಆದ್ಯತೆ ನೀಡಿ ವಿವಿಧ ಯೋಜನೆಯಡಿ ನಿಗಮಗಳಿಗೆ ಅನುದಾನ ಹೆಚ್ಚಿಸಬೇಕು.

4. ಅಲೆಮಾರಿಗಳ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ ಪಟ್ಟಿಯ ಒಂದೇ ಜಾತಿಯ ಪರ್ಯಾಯ ಪದಗಳನ್ನು ಬೇರ್ಪಡಿಸಿರುವುದರಿಂದ ರಾಜ್ಯದಲ್ಲಿ ಜಾತಿ ಗೊಂದಲಗಳ ಸಮಸ್ಯೆ ಉಲ್ಬಣವಾಗಿರುವುದನ್ನು ತಪ್ಪಿಸಲು ಜಾತಿ ಪ್ರಮಾಣ ಪತ್ರದ ಕುರಿತು ಪರ್ಯಾಯ ಪದಗಳನ್ನು ಒಂದು ಮಾಡಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು.

ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಪತ್ರ ನೀಡಿದ್ದರು ಯಾವುದೇ ಪ್ರತಿಫಲ ಸಿಕ್ಕಿರುವುದಿಲ್ಲ ಆದ್ದರಿಂದ ದಿನಾಂಕ 19/01/2024 ರಂದು ಮೇಲ್ಕಂಡ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನಿಂದ ಮಹಾರಾಷ್ಟ್ರಗಡಿವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ದಯಮಾಡಿ ಈ ಒಂದು ಬೇಡಿಕೆಗಳು ಸರಿ ಇದೆ ಎಂದು ತಿಳಿದಿದ್ದು ಎಲ್ಲಾ ಸಂಘಟನೆಗಳು ನಮ್ಮ ಈ ಪಾದಯಾತ್ರೆಗೆ ಸಹಕರಿಸಿ ಎಂದು ಕೋರಿಕೊಳ್ಳುತ್ತೇನೆ ಎಂದು ಬಿ.ಹೆಚ್.ಮಂಜುನಾಥ್,ಸಂಸ್ಥಾಪಕ ಅಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ತಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News 9341997936

Request to Expose the vested interests working against the interest of our State & the Country by fomenting unrest by inciting drivers through Mis-information and malicious propaganda and by calling a strike. The instability in the State and the Country could lead to disruption of supply chains and hurt the people of the country at large.

Dr G Shanmugappa, Chairman-All India Motor Transport Congress, saidWe write to you to expose the vested interests of perpetrators of the Strike call and its mobilization through deliberate dissemination of misinformation and malicious propaganda. These entities are actively involved in spreading unfounded rumours, and inciting drivers to create unrest and instability in the state and the country.

The focal point of their campaign revolves around the Hit & Run Case under section 106 (2) of BhartiyaNyaya Sanhita (Second) 2023, which, it’s crucial to note, has been kept in abeyance by the Government ofIndia. (copies of the same are enclosed)

This orchestrated effort to manipulate drivers sentiment is not only misleading but also has the potentialto disrupt the normal functioning of essential services, create unnecessary chaos and pose a serious threatto internal security.

Considering the gravity of the situation, we earnestly request your kind intervention to counteract theseactions by exposing their nefarious designs and highlight the Government’s decision to keep the provisionunder BNS2 under abeyance, in your esteemed media.

We would also like to bring to your kind notice the turn of events that has led to unrest anddiscontentment among our drivers’ brethren and the Government has given its assurance in writingthat the provision regarding Hit & Run Case under section 106 (2) of Bhartiya Nyaya Sanhita(Second) 2023 is not implemented and any decision on it will be taken after discussions, thusquelling the rumours and misinformation unleashed campaign by the vested interests and antisocial elements.

1.0) The Government published Gazette of Bhartiya Nyaya Sanhita (Second) 2023 on December 25, 2023.

2.0) Team AIMTC immediately took cognizance of the harsh provisions reg. Hit & Run Case under section 106 (2) of BNS2.

3.0) Te

am AIMTC anticipated the likely implications and repercussions of the said provision and on December 27, 2023 wrote detailed letter to Shri Narendra Modi Ji, Honourable Prime Minister, Shri.Amit Shah Ji, Hon’ble Home Minister, Shri Nitin Gadkari JI, Shri J P Nadda Ji and all Members of  Parliament (Lok Sabha & Rajya Sabha) highlighting our concerns.4.0) In the next few days, the rumours flew thick and fast across the country and the driver brethren started leaving their jobs and the transportation and supply chain specially of essential commodities and export – import got impacted

5.0) We continually engaged the Home Ministry at the highest level and highlighted the alarming situationarising out of it and asked them of the revocation of the provisions for Hit & Run cases under BNS2to quench the discontentment among the drivers.

6.0) It was by and large decided that AIMTC shall stand in support of our drivers’ brethren who are part ofour family and we will ask the government not to implement the harsh provisions in the BNS2.

7.0) During this time, our President (Shri Amritlal Madan) got a call from Ministry of Home Affairs andhe very boldly put the concerns of the drivers’ brethren to him and as such a mecting was scheduled at6.00 pm with Home Secretary and senior officials of MHA.

8.0) The announcement at the Press Meet was postponed for after our mecting with Home Secretary Sir.

1 9.30 pm and apart from all major9.0) The meeting with Home Secretary Sir went on from 6.00 pmaconcerns of our drivers’ brethren were discussed and emphasized. He was positive and understoodathe issues in an empathetic manner. He agreed to our demand to keep the said provision inabeyance and for its amendment later on after due consultations with the Team AIMTC.

10.0) The Home Secretary, Government of India also issued Press Release there and then and conveyed thedecision through media byte that we had widely circulated.

11.0) There are mischief mongers and vested interests, which are trying to circulate unfounded rumours andmislead drivers’ brethren again and take advantage of the situation.

12.0) To dispel the misconceptions and ongoing tirades, we again wrote to the Home Minister, HomeSecretaryothers and late night yesterday we got the letter from MHA, re-confirming thatthe the provision regarding Hit & Run Case under section 106 (2) of Bhartiya NyayaSanhita (Second) 2023 is not implemented and any decision on it will be taken after dueconsultations with AIMTC.

We are constantly appealing our members and drivers brethren not to fall prey to the designs of the anti-social elements and vested interests who want to take their advantage to secure their self interests..

We once again request our sisters and brothers from esteemed media to please clarify and spread the message amongst the fraternity THAT THERE IS NO STRIKE AS SUCH IN THE COUNTRY ASTHE GOVERNMENT HAS ACCEDED TO OUR DEMANDS, At present old law is implemented inthe country in of accident and there is no need to fear or worry about the new provisions that are now in abeyance.

City Today News 9341997936

ವಿಧಾನಪರಿಷತ್ ಹಿರಿಯ ಸದಸ್ಯ, ಜೆಡಿಎಸ್ ನಾಯಕ ಟಿ. ಎ.ಶರವಣ 2016-17 ಸಾಲಿನಿಂದ ಪರಿಷ್ಕರಣೆ ತೆರಿಗೆ ಹಣ ಪಾವತಿಸುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ನೋಟಿಸ್ ನೀಡುತ್ತಿರುವುದು ಹಗಲು ದರೋಡೆ, ಸುಲಿಗೆ ಎನ್ನಲೇಬೇಕು ಎಂದು ಬಲವಾಗಿ ಖಂಡಿಸಿದ್ದಾರೆ.

ಆಸ್ತಿತೆರಿಗೆ ಹೆಸರಲ್ಲಿ ಬೆಂಗಳೂರು ಜನರ ಕಿಸೆಗೆ ಕತ್ತರಿ ಹಾಕಲು ಹೊರಟಿರುವ ಈ ಜೇಬುಗಳ್ಳ ಸರಕಾರದ ನಡೆಯನ್ನು ವಿಧಾನಪರಿಷತ್ ಹಿರಿಯ ಸದಸ್ಯ, ಜೆಡಿಎಸ್ ನಾಯಕ ಟಿ. ಎ.ಶರವಣ ಬಲವಾಗಿ ಖಂಡಿಸಿದ್ದಾರೆ.
2016- 17 ಸಾಲಿನಿಂದ ಪರಿಷ್ಕರಣೆ ತೆರಿಗೆ ಹಣ ಪಾವತಿಸುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ನೋಟಿಸ್ ನೀಡುತ್ತಿರುವುದು ಹಗಲು ದರೋಡೆ, ಸುಲಿಗೆ ಎನ್ನಲೇಬೇಕು ಎಂದು ಅವರು ಖಂಡಿಸಿದ್ದಾರೆ.
ಒಮ್ಮೆಲೆ ಏಳು ವರ್ಷಗಳ ಆಸ್ತಿ ತೆರಿಗೆ ಪರಿಷ್ಕರಿಸುವ ಕ್ರಮ ಅವೈಜ್ಞಾಿನಿಕವಾಗಿದೆ. ಇದು ಜನರ ಬದುಕಿನ ಮೇಲೆ ಬರೆ ಎಳೆಯುವ ದಂಡನೆ ಆಗಿದೆ ಎಂದು ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಮತ್ತೊಂದು ವಿಶೇಷ ಎಂದರೆ ಬೆಂಗಳೂರು ಉಸ್ತುವಾರಿ ವಹಿಸಿರುವ ಡಿಸಿಎಂ ಶಿವಕುಮಾರ್ ಮತ್ತು ಬೆಂಗಳೂರಿಂದ ಸತತವಾಗಿ ಆಯ್ಕೆ ಆಗುತ್ತಿರುವ ಸಚಿವ ರಾಮಲಿಂಗಾರೆಡ್ಡಿ ಅವರ ನಡುವೆ ಹೊಂದಾಣಿಕೆಯೇ ಇಲ್ಲದೆ ಇರುವುದು.
ಬಿಬಿಎಂಪಿ ಯ ಈ ಕ್ರಮವನ್ನು ಖುದ್ದು ರಾಮಲಿಂಗಾರೆಡ್ಡಿ ಅವರೇ ಖಂಡಿಸಿ, ಇಂಥ ನೊಟೀಸ್ ನೀಡುವುದನ್ನು ನಿಲ್ಲಿಸಬೇಕು ಎಂದು ಪತ್ರ ಬರೆದು ಹೇಳಿದ್ದಾರೆ.
ಅಂದರೆ ಈ ವಿಚಾರದಲ್ಲಿ ಸರಕಾರದಲ್ಲಿಯೇ ಸಹಮತ ಇಲ್ಲ ಎನ್ನುವುದು ವ್ಯಕ್ತವಾಗುತ್ತದೆ. ಈ ಸಮನ್ವಯತೆಯ ಕೊರತೆಯನ್ನು ಸರಕಾರ ಮೊದಲು ಸರಿಮಾಡಿಕೊಳ್ಳಲಿ ಎಂದವರು ಆಗ್ರಹಪಡಿಸಿದರು.
ಜನಸಾಮಾನ್ಯರ ಸಂಕಷ್ಟ ತಪ್ಪಿಸಲು ತಕ್ಷಣ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ಈ ನೊಟೀಸ್ ನೀಡುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಿ. ಬೆಂಗಳೂರು ಉಸ್ತುವಾರಿ ಡಿಸಿಎಂ ಶಿವಕುಮಾರ್ ಅವರಿಗೆ ಬುದ್ಧಿವಾದ ಹೇಳಲಿ ಎಂದು ಶರವಣ ಮನವಿ ಮಾಡಿದ್ದಾರೆ

City Today News 9341997936