ಎಲುವಹಳ್ಳಿ ಮಾಲೂರು ತಾಲೂಕು, ಕೊಲಾರಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಶೌಚಾಲಯಗಳನ್ನು ಮತ್ತು ಶೌಚಲಯ ಗುಂಡಿಗಳನ್ನು ವಿದ್ಯಾರ್ಥಿಗಳಿಂದ ಶುಚಿತ್ವಗೊಳಿಸಿರುವ ವಿಚಾರ ಮಾದ್ಯಮಗಳಲ್ಲಿ ಬಿತ್ತಾರಗೊಂಡಿತ್ತು, ತದನಂತರ ಬೆಂಗಳೂರಿನ ಆಂದ್ರ ಹಳ್ಳಿಯಲ್ಲಿರುವ ಸರಕಾರಿಶಾಲೆ ಮತ್ತು ಶಿವಮೊಗ್ಗ ಜಿಲ್ಲೆಯ ಗುಡ್ಡದ ನೇರಳ ಕೆರೆ ಸರಕಾರಿ ಶಾಲೆಯ ವಿದಾರ್ಥಿಗಳಿಂದ ಶೌಚಾಲಯವನ್ನು ಶುಚಿತ್ವ ಗೊಳಿಸಿರುವ ಅಮಾನುಷ ಕೃತ್ಯವು ತಿಳಿದು ಬಂದಿರುವುದರಿಂದ ಈ ಹೀನ ಕೃತ್ಯದ ವಿರುದ್ಧ ಬೆಂಗಳೂರಿನ ಕಾಡುಗೊಡಿ ನಿವಾಸಿ ಸಾಮಾಜಿಕ ಕಾರ್ಯಕರ್ತ ಶ್ರೀ ಪರಮೇಶ್.ವಿ ಎಂಬುವವರು ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಯನ್ನು ತನ್ನ ವಕೀಲರಾದ ಧರ್ಮಪಾಲ ರವರ ಮೂಲಕ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಸಲ್ಲಿಸಿದರು. ಆ ರೀಟ್ ಅರ್ಜಿ ಸಂಖ್ಯೆ 29294/2023. ಇದರಲ್ಲಿ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಇತರನ್ನು ಪ್ರತಿವಾದಿಗಳನ್ನಾಗಿ ಮಾಡಿರುತ್ತಾರೆ. ಈ ಕೃತ್ಯಕ್ಕೆ ಸಂಬಂದಪಟ್ಟವರ ವಿರುದ್ಧ ಸೂಕ್ತ ಕ್ರಮಕೈಗೊಳಲು ಪ್ರಕರಣವನ್ನು ಸಿ ಐ ಡಿ ಗೆ ಹಸ್ತಾಂತರಿಸಿ, ಈ ಪ್ರಕರಣದ ಬಗ್ಗೆ ಒಂದು ಸೂಕ್ತ ಕಮಿಟಿ ರಚನೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಬೇಕು ಅಲ್ಲದೆ 10 ವರ್ಷಗಳಿಂದ ಇಲ್ಲಿಯ ತನಕ ಇಂತಹ ಎಷ್ಟು ಪ್ರಕರಣ ಬೆಳಕಿಗೆ ಬಂದಿದೆ ಎಂಬ ವರದಿ ನ್ಯಾಯಲಕ್ಕೆ ಸಲ್ಲಿಸಬೇಕೆಂಬ ಮನವಿಯನ್ನು ಪಿರ್ಯಾದುದಾರರು ತನ್ನ
ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ ಸದ್ರಿರಿಟ್ ಅರ್ಜಿ ತಾ. 28-12-2623 ರಂದು ನ್ಯಾ. ನಟರಾಜ ಮತ್ತು ನ್ಯಾ ಕೆ.ವಿ ಅರವಿಂದ ಅವರಿದ್ದ ವಿಭಾಗಿಯ ಪೀಠದಲ್ಲಿ ವಿಚಾರಣೆಗೆ ಬಂದು ಎಲ್ಲಾ ಪ್ರತಿವಾದಿಗಳಿಗೆ ನೋಟಿಸು ಜಾರಿ ಮಾಡಿ ಆದೇಶಿಸಿದ್ದಾರೆ. ಸದರಿ ಅದೇಶ ಪ್ರತಿ ಮತ್ತು ರಿಟ್ ಅರ್ಜಿಯ ಪ್ರತಿಗಳನ್ನು ಇಲ್ಲಿ ಲಗತ್ತಿಸಿದೆ ಎಂದು ಧರ್ಮಪಾಲ ವಕೀಲರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
ಚರ್ಮೋದ್ಯಮವು ಜನಜೀವನದಲ್ಲಿ ಅನಾದಿಕಾಲದಿಂದಲೂ ಹಾಸುಹೊಕ್ಕಾಗಿದೆ. ಈ ಉದ್ಯಮವನ್ನು ವಂಶಪಾರಂಪರಿಕವಾಗಿ ಬೆಳೆಸಿಕೊಂಡು ಬಂದಿರುವ ಪರಿಶಿಷ್ಟ ಜಾತಿಯ ಆದಿಜಾಂಬವ ಜನಾಂಗದ ಸುಮಾರು 50 ಸಾವಿರಕ್ಕೂ ಹೆಚ್ಚು ಕುಶಲ ಕರ್ಮಿಗಳು ತಮ್ಮ ಬದುಕಿಗೆ ಲಿಡ್ಕರ್ ಸಂಸ್ಥೆಯ ಮೇಲೆ ಅವಲಂಬಿತರಾಗಿದ್ದಾರೆ. ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯದ ಕುಶಲಕರ್ಮಿಗಳ ಉದ್ಯಮವನ್ನು ಉತ್ತಮಗೊಳಿಸಲು ಲಿಡ್ಕರ್ ಸಂಸ್ಥೆಯು ತನ್ನ ಧೇಯೋದ್ದೇಶಗಳನ್ನು ಅರ್ಥವತ್ತಾಗಿ ಅಳವಡಿಸಿಕೊಳ್ಳಬೇಕಾದ ಜರೂರು ಇದೆ. ಚರ್ಮೋದ್ಯಮದಲ್ಲಿ ನೂತನ ತಂತ್ರಜ್ಞಾನ ಮತ್ತು ಸುಧಾರಿತ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಚರ್ಮೋತ್ಪನ್ನಗಳನ್ನು ಮತ್ತು ಅವುಗಳ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ.
ಪರಿಶಿಷ್ಟ ಜಾತಿಯ ಚರ್ಮಕುಶಲ ಕರ್ಮಿಗಳ ಬದುಕಿಗೆ ಆಸರೆಯಾಗಲು ಡಾ|| ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ., (ಲಿಡ್ಕರ್) ಸಂಸ್ಥೆಯನ್ನು ಸಬಲಗೊಸುವುದು ಸರ್ಕಾರದ ಕರ್ತವ್ಯ. ಆ ಮೂಲಕ ಚರ್ಮ ಕುಶಲ ಕರ್ಮಿಗಳ ಬದುಕನ್ನು ಹಸನಾಗಿಸಲು ಕಟಿಬದ್ಧವಾಗಬೇಕಾಗಿದೆ.
ಡಾ|| ಬಾಬು ಜಗಜೀವನ್ ರಾಂ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ಸಂಸ್ಥೆಯು ಸ್ಥಾಪನೆಯಾದಾಗಿನಿಂದಲೂ ಚರ್ಮ ಕುಶಲಕರ್ಮಿಗಳಿಗೆ ಸಮರ್ಪಕ ತಯಾರಿಕೆಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿದೆ. ಆದರೆ ಉದ್ದೇಶಿತ ಕಾರ್ಯ ಈಡೇರಲಿಲ್ಲ. ಹಲವು ಕುಶಲ ಕರ್ಮಿಗಳಿಗೆ ಹಾಗೂ ಸಮುದಾಯದ ಸಂಸ್ಥೆಗಳಿಗೆ ಉದ್ದೇಶಿತ ಕಾರ್ಯ ಚಟುವಟಿಕೆಗಳಿಗೆ ಪೂರಕವಾದ ತಯಾರಿಕಾ ಚಟುವಟಿಕೆ ಹಮ್ಮಿಕೊಳ್ಳಲಿಲ್ಲ. ಬದಲಾಗಿ ಕುಶಲ ಕರ್ಮಿಗಳೇ ಅಲ್ಲದ ಹಾಗೂ ಪರಿಶಿಷ್ಟ ಜಾತಿಗೆ ಸೇರಿಲ್ಲದ ಹೊರಗಿನ ವ್ಯಕ್ತಿಗಳಿಗೆ ತಯಾರಿಕಾ ಆದೇಶ ನೀಡಿ ನಿಜವಾದ ಕುಶಲ ಕರ್ಮಿಗಳಿಗೆ ಅನ್ಯಾಯ ವೆಸಗಲಾಗುತ್ತಿದೆ.
ಘನ ಸರ್ಕಾರ ಹಾಗೂ ಸಂಸ್ಥೆಗೆ ಹೊಸದಾಗಿ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದ ಶ್ರೀಮತಿ ಎಂ. ಎಸ್. ವಸುಂಧರಾರವರು ಸಂಸ್ಥೆಯ ಉತ್ಪನ್ನಗಳಿಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ಲಿಡ್ಕರ್ ಉತ್ಪನ್ನಗಳತ್ತ ಗ್ರಾಹಕರನ್ನು ಸೆಳೆಯಲು ಗುಣಮಟ್ಟದ ಚರ್ಮೋತ್ಪನ್ನಗಳಿಗೆ ಆದ್ಯತೆ ನೀಡುತ್ತಿರುವುದಲ್ಲದೆ, ಗ್ರಾಹಕರನ್ನು ಆಕರ್ಷಿಸಲು ಖ್ಯಾತ ಚಲನ ಚಿತ್ರ ನಟ ಡಾಲಿ ಧನಂಜಯರವರನ್ನು ಸಂಸ್ಥೆಯ ಬ್ರಾಂಡ್ ರಾಯಭಾರಿಯನ್ನಾಗಿ ಮಾಡಿದ್ದಾರೆ ಹಾಗೂ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡು ಕುಶಲಕರ್ಮಿಗಳಲ್ಲಿ ಆಶಾಭಾವನೆ ಮೂಡಿಸಿದ್ದಾರೆ ಆದರೆ ಚರ್ಮಕುಶಲಕರ್ಮಿಗಳಿಂದ ಉತ್ಪನ್ನಗಳನ್ನು ಖರೀದಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸಗಟು ಉತ್ಪನ್ನಗಳ ಬೇಡಿಕೆಯನ್ನು ಪೂರೈಸಲು ಚರ್ಮ ಕುಶಲ ಕರ್ಮಿಗಳಿಗೆ ಹಾಗೂ ಈ ಸಮುದಾಯದ ತಯಾರಿಕಾ ಘಟಕಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ.
ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಕರ್ಷಕ ಮತ್ತು ಗುಣಮಟ್ಟದ ಚರ್ಮೋತ್ಪನ್ನಗಳ ಶೋರೂಂ ತೆರೆಯುವ ಮೂಲಕ ತಮಗಿರುವ ವಾಣಿಜ್ಯ ಜ್ಞಾನವನ್ನು ಪ್ರದರ್ಶಿಸಿದ್ದಾರೆ. ಚರ್ಮ ಕುಶಲ ಕರ್ಮಿಗಳ ಸಮಸ್ಯೆಗಳನ್ನು ಸಾವಧಾನದಿಂದ ಆಲಿಸುವ ವ್ಯವಸ್ಥಾಪಕ ನಿರ್ದೇಶಕರು ಸರಿಯಾದ ಮಾರ್ಗದರ್ಶಿಯಾಗಿ ದುಡಿಯುತ್ತಾ ಸಂಸ್ಥೆಯ ಮತ್ತು ಕುಶಲ ಕರ್ಮಿಗಳ ಅಭಿವೃದ್ಧಿ ಬಗ್ಗೆ ಚಿಂತನೆಗಳನ್ನು ಹೊಂದಿರುವ ಶ್ರೀಮತಿ ಎಂ. ಎಸ್. ವಸುಂಧರಾದೇವಿರವರನ್ನು ಪ್ರಭಾರ ಬದಲಾಗಿ ಖಾಯಂ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಕರ್ತವ್ಯ ನಿಯೋಜನೆ ಮಾಡಬೇಕೆಂದು ಹಾಗೂ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಆ ಮೂಲಕ ಚರ್ಮಕುಶಲಕರ್ಮಿಗಳಿಗೆ ಹಾಗೂ ಈ ಸಮುದಾಯದ ತಯಾರಿಕಾ ಘಟಕಗಳ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ.
ಬೇಡಿಕೆಗಳು :
1. ರಾಜ್ಯ ಸರ್ಕಾರ ಲಿಡ್ಕರ್ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು.
2. ರಾಜ್ಯ ಸರ್ಕಾರವು ಪೊಲೀಸ್ ಇಲಾಖೆ / ಅರಣ್ಯ ಇಲಾಖೆ / ಇತರೆ ಇಲಾಖೆಗಳ ಶೂ / ಇತರೆ ಚರ್ಮ ಉತ್ಪನ್ನಗಳನ್ನು ನಿಗಮದಿಂದ ಖರೀದಿ ಮಾಡಲು ಆದೇಶ ಮಾಡಬೇಕು.
3. ಸರ್ಕಾರದ ಸಮಾಜ ಕಲ್ಯಾಣ ಇಲಾಖೆ / ಹಿಂದುಳಿದ ವರ್ಗಗಳ / ಅಲ್ಪಸಂಖ್ಯಾತ ಮಕ್ಕಳ / ವಸತಿ ಶಾಲೆಗಳ ವಿದ್ಯಾರ್ಥಿಗಳ ಶೂ / ಸಾಕ್ಸ್ / ಬ್ಯಾಗ್ / ಇತರೆ ನಿಗಮದ ಉತ್ಪನ್ನಗಳನ್ನು ಖರೀದಿ ಮಾಡಲು ಆದೇಶ ಮಾಡಬೇಕು.
4. ಲಿಡ್ಕರ್ ನಿಗಮಕ್ಕೆ ಅಗತ್ಯವಾದ ಉತ್ಪನ್ನಗಳ ಖರೀದಿ ಆದೇಶವನ್ನು ಚರ್ಮಕುಶಲಕರ್ಮಿಗಳು ಹಾಗೂ ಪರಿಶಿಷ್ಟಜಾತಿ ಚರ್ಮೋತ್ಪನ್ನ ಘಟಕಗಳಿಂದ ಖರೀದಿಮಾಡಬೇಕು.
5. ಲಿಡ್ಕರ್ ನಿಗಮಕ್ಕೆ ಅನವಶ್ಯಕವಾಗಿ ನೇಮಕವಾಗಿರುವ ಫೇಸ್-1 ತಂಡವನ್ನು ರದ್ದು ಮಾಡಬೇಕು.
6. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾದ ಶ್ರೀಮತಿ ಎಂ.ಎಸ್. ವಸುಂಧರಾರವರನ್ನು ಪ್ರಭಾರ ಹುದ್ದೆಯಿಂದ ಖಾಯಂ ಆಗಿ ನಿಯೋಜನೆ ಮಾಡಬೇಕು ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ
ಎಡತೊರೆ ಎಂ. ನಿಂಗರಾಜ್ ರಾಜ್ಯಾಧ್ಯಕ್ಷರು ರಾಜ್ಯ ಆದಿಜಾಂಬವ ಸಂಘ(ರಿ) +91 82776 38205
ಎಸ್. ಡಿ. ಬಾಲರಾಜು ಅಧ್ಯಕ್ಷರು ಕರ್ನಾಟಕ ರಾಜ್ಯ ಕುಶಲಕರ್ಮಿಗಳ ಸಂಘ +91 99010 89333
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಹೆಚ್.ಕಾಂತರಾಜು ರವರ ನೇತೃತ್ವದಲ್ಲಿ 2019 ರಲ್ಲಿ ನಡೆದ ಸಮೀಕ್ಷೆಯ ವರದಿಯನ್ನು ಸ್ವೀಕರಿಸಿ ಅನುಷ್ಠಾನಗೊಳಿಸಲು ನಮ್ಮ ಸಮಾಜದ ವತಿಯಿಂದ ಹಲವಾರು ಬಾರಿ ಮನವಿಯನ್ನು ಸಲ್ಲಿಸಿರುತ್ತೇವೆ. ಆದರೂ ಸಹ ಸರ್ಕಾರವು ಇದುವರೆವಿಗೂ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಈ ಸಂದರ್ಭದಲ್ಲಿ ತಮ್ಮ ಗಮನಕ್ಕೆ ತರಲು ಇಚ್ಚಿಸುವುದೇನೆಂದರೆ ಈ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಗೆ ಸಂಬಂಧಿಸಿದಂತೆ ಒಟ್ಟು 55 ಅಂಶಗಳ ಮಾಹಿತಿಯನ್ನು ಅಂದರೆ ಜಾತಿ ಗಣತಿಯ ಜೊತೆಗೆ ಶೈಕ್ಷಣಿಕ, ಔದ್ಯೋಗಿಕ, ಉದ್ಯೋಗ, ಕೌಟುಂಬಿಕ ಸ್ತಿರಾಸ್ತಿ, ಚರಾಸ್ತಿ, ಆದಾಯ ತೆರಿಗೆ ಪಾವತಿದಾರರೆ ಅಲ್ಲವೆ, ಅವರು ವಾಸ ಮಾಡುತ್ತಿರುವ ಮನೆ – ಸ್ವಂತ ಅಥವಾ ಬಾಡಿಗೆ ಮನೆಯೇ ಪಕ್ಕ ಮನೆಯೇ, ಅಥವಾ ಶೀಟ್ ಮನೆಯೇ, 9 ಅವರ ವಿದ್ಯಾಭ್ಯಾಸದ ಮಟ್ಟ, ಇವರು ಸರ್ಕಾರಿ ಕೆಲಸದಲ್ಲಿದ್ದಾರೆಯೇ ಅಥವಾ ಖಾಸಗಿ ಕೆಲಸದಲ್ಲಿದ್ದಾರೆಯೇ, ಇವರ ಮೀಸಲಾತಿ ಸೌಲಭ್ಯವನ್ನು ಪಡೆದುಕೊಂಡಿದ್ದಾರೆಯೇ ಇಲ್ಲವೆ, ಇವರು ರಾಜಕೀಯವಾಗಿ ಇವರ ರಾಜಕೀಯ ಸ್ಥಾನಮಾನವೇನು, ಯಾವ ಹುದ್ದೆಯನ್ನು ಹೊಂದಿದ್ದಾರೆಯೇ, ಎಂ.ಪಿ.ಎಂ.ಎಲ್.ಎ. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸದಸ್ಯರೆ, ಅಥವಾ ಇನ್ಯಾವುದೇ ಸರ್ಕಾರಿ ನಿಗಮ ಮಂಡಳಿಗಳಲ್ಲಿ ಸ್ಥಾನ ಮಾನ ಹೊಂದಿದ್ದಾರೆಯೇ, ಮುಂತಾದ ಹಲವಾರು ವಿಷಯಗಳನ್ನು ಮನೆ ಮನೆಗೂ ಹೊಗಿ ಮಾಹಿತಿ ಪಡೆಯಲೂ 1,33.410, (ಒಂದು ಲಕ್ಷದ ಮೂವತ್ತು ಮೂರು ಸಾವಿರದ ನಾಲ್ಕು ನೂರ ಹತ್ತು ಸರ್ಕಾರಿ ಶಾಲಾ ಶಿಕ್ಷಕರು) ಗಣತಿದಾರರನ್ನು, 22189 (ಇಪ್ಪತ್ತೇರಡು ಸಾವಿರದ ಒಂದು ನೂರ ಎಂಭತ್ತೊಂಬತ್ತು ಸರ್ಕಾರಿ ಶಾಲಾ ಮುಖ್ಯೋಪಾದ್ಯಯರು) ತರಬೇತುದಾರರು 7118 (ಎಳು ಸಾವಿರದ ಒಂದು ನೂರ ಹದಿನೆಂಟು) ನೇಮಿಸಿ ಮಾಹಿತಿಯನ್ನು ಪಡೆಯಲಾಗಿದೆ. ಇವರೆಲ್ಲರೂ ಸರ್ಕಾರಿ ಶಾಲೆಗಳ ಸಿಬ್ಬಂದಿ. ಇದರಲ್ಲಿ ಡಿ.ಸಿ. ತಹಶಿಲ್ದಾರ್ ಹಾಗೂ ಇತರೆ ಸಿಬ್ಬಂದಿಗಳು ಸಹ ಇದರಲ್ಲಿ ಕಾರ್ಯನಿರ್ವಹಿಸಿರುತ್ತಾರೆ.
ಈ ಸಮೀಕ್ಷೆಯ ಕೆಲಸಕ್ಕೆ ಒಟ್ಟು 158 ಕೋಟಿ ವೆಚ್ಚ ಮಾಡಲಾಗಿದೆ. ಈ ಸಮೀಕ್ಷೆಯು ಪ್ರತಿಷ್ಟಿತ ಸಂಸ್ಥೆಯಾದ ಇಂಡಿಯನ್ ಇನ್ಸೂಟ್ಯೂಟ್ ఆఫ్ ಮ್ಯಾನೆಜೆಮೆಂಟ್ ಪರಿಶೀಲಿಸಿ ಈ ಎಲ್ಲಾ ಅಂಶಗಳನ್ನು ಬಳಕೆ ಮಾಡಲು ಬಹಳ ವೈಜ್ಞಾನಿಕ ಹಾಗೂ ಅರ್ಹವಾದವುಗಳೆಂದು ಧೃಡೀಕರಿಸಿದೆ. ಇದಲ್ಲದೆ ಆಯೋಗವು ಸೆಕೆಂಡರಿ ಮೂಲದಿಂದ ಸರ್ಕಾರದ ಎಲ್ಲಾ ಇಲಾಖೆಗಳಿಂದ ಮಾಹಿತಿ ಪಡೆದು ಯಾವ ಯಾವ ಜಾತಿಯಲ್ಲಿ ಎಷ್ಟು ಜನ ನೌಕರರು ಇದ್ದಾರೆ ಎಂಬ ಮಾಹಿತಿಯನ್ನು ಪಡೆದು ವೈಜ್ಞಾನಿಕವಾಗಿ ಈ ವರದಿಯನ್ನು ತಯಾರಿಸಿರುವುದಾಗಿ ತಿಳಿದುಬಂದಿದೆ. ಸರ್ಕಾರಿ ಆದೇಶದ ಪ್ರಕಾರ ಪ್ರತಿ 10 ವರ್ಷಗಳಿಗೊಮ್ಮೆ ಜಾತಿ ಗಣತಿಯನ್ನು ಮಾಡಬೇಕಿತ್ತು, ಅದರಂತೆ ಮೀಸಲಾತಿ ಸೌಲಭ್ಯವನ್ನು ಪರಿಷ್ಕರಣೆ ಮಾಡುವ ಅಗತ್ಯವಿದೆ, ಆದ್ದರಿಂದ ಕಾಂತರಾಜು ವರದಿಯನ್ನು ಸ್ವೀಕರಿಸಿ ಅನುಷ್ಠಾನಗೊಳಿಸಬೇಕೆಂದು ಕೋರುತ್ತೇವೆ. ಇದಲ್ಲದೆ ಹಿಂದುಳಿದ ಹಾಗೂ ಶೋಷಿತ ವರ್ಗಗಳು ಮುಂದಿನ ತಿಂಗಳು ಕೊನೆಯ ವಾರದಲ್ಲಿ ನಡೆಸುವ ಅಹಿಂದ ಸಮಾವೇಶಕ್ಕೆ ಮಡಿವಾಳ ಸಮಾಜವು ಸಹ ಸಕ್ರಿಯವಾಗಿ ಭಾಗವಹಿಸಲಿದೆ ಎಂಬುದಾಗಿ ತಿಳಿಸಲು ಇಚ್ಚಿಸುತ್ತೇವೆ ಎಂದು
ಸಿ. ನಂಜಪ್ಪ-ರಾಜ್ಯಾಧ್ಯಕ್ಷರು & ಜಿ.ಆರ್.ಪ್ರಕಾಶ್ ಪ್ರಧಾನ ಕಾರ್ಯದರ್ಶಿಗಳು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಶ್ರೀ ಶ್ರೀ ಸಿದ್ದಾರೂಢ ಸ್ವಾಮಿಗಳ ಆಶೀರ್ವಾದದೊಂದಿಗೆ ಹುಬ್ಬಳ್ಳಿಯಿಂದ ಬೆಳಗಾವಿ ವರೆಗೆ ಶ್ರೀ ಸವಿತಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ದಿನಾಂಕ 11/12/2023 ರಿಂದ 13/12/2023 3 ದಿವಸಗಳ ಪಾದಯಾತ್ರೆ ಕೈಗೊಂಡು
ಸವಿತಾ ಸಮಾಜದ ಎಲ್ಲಾ ಮುಖಂಡರುಗಳು ಬಾಂಧವರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಸವಿತಾ ಸಮಾಜದ ಹಲವು ಬೇಡಿಕೆಗಳಾದ ಪ್ರತ್ಯೇಕ ಮೀಸಲಾತಿ, ಜಾತಿ ನಿಂದನೆ ಕಾಯ್ದೆ ಮಾಡಿ ಶಿಕ್ಷೆಗೆ ಗುರಿಪಡಿಸಲು, ಕಾಂತರಾಜ್ ವರದಿಯನ್ನು ಜಾರಿಗೆ ಮಾಡಲು ಇನ್ನು ಹಲವು ಬೇಡಿಕೆಗಳನ್ನು ಈಡೇರಿಸಲು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಲಾಯತು
ಮಾನ್ಯ ಉಚ್ಚ ನ್ಯಾಯಾಲಯದ ಕಲಬುರಗಿ ಪೀಠದ ಡಿವಿಷನಲ್ ಬೆಂಚ್ ಆದೇಶ ದಿನಾಂಕ: 16-02-2019.
ಕರ್ನಾಟಕ ಅರಣ್ಯ ಇಲಾಖೆಯಲ್ಲಿ 1985 ರಿಂದ ಕಳೆದ 37 ವರ್ಷಗಳಿಂದ ಅತ್ಯಂತ ಕಡಿಮೆ ವೇತನದಲ್ಲಿ ಪೂರ್ಣಕಾಲಿಕವಾಗಿ ಮತ್ತು ನಿರಂತರವಾಗಿ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿರುವ ಅರಣ್ಯ ಪ್ರೇರಕರ ಸೇವೆಯನ್ನು ಸಕ್ರಮಗೊಳಿಸಲು ಕಾಲಕಾಲಕ್ಕೆ ಮನವಿ ಸಲ್ಲಿಸುತ್ತಬಂದಿದ್ದರೂ ಸಹ ಸರ್ಕಾರ ಈವರೆವಿಗೆ ಸಕ್ರಮಗೊಳಿಸಿರುವುದಿಲ್ಲ.
1985ರಲ್ಲಿ . ಸರ್ಕಾರ/ಇಲಾಖೆಯು ದಿನಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿ ರೈತ ಕುಟುಂಬಗಳಿಂದ ಬಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪಾಸಾದ ರೈತರ ಮಕ್ಕಳನ್ನು ಎರಡು ವರ್ಷಗಳ ಅವಧಿಗೆಂದು ಇಲಾಖಾ ಮೇಲಾಧಿಕಾರಿಗಳಿಂದ ಕೂಡಿದ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಿ ನೇಮಕಾತಿ ಆದೇಶ ನೀಡಿ ಕರ್ತವ್ಯಕ್ಕೆ ತೆಗೆದುಕೊಂಡಿದ್ದು, ನಿಗಧಿತ ಅವಧಿಯ ನಂತರವೂ ಕಳೆದ 36 ವರ್ಷಗಳಿಂದ ಸೇವೆಯಲ್ಲಿ ಮುಂದುವರೆಸಿಕೊಂಡು ಬಂದಿರುತ್ತಾರೆ.
ಈಗ ಬಹಳಷ್ಟು ಜನ ಅರಣ್ಯ ‘ಪ್ರೇರಕರು ನಿವೃತ್ತಿ ಹಂಚಿನಲ್ಲಿದ್ದು, ಅವರಿಗೆ ಯಾವುದೇ ರೀತಿಯ ನಿವೃತ್ತಿ ಉಪಧನ, ಪಿಂಚಣಿ ಇಲ್ಲದೆ ಬರಿಗೈಯಲ್ಲಿ ಮನೆಗೆ ತೆರಳುವಂತಾಗಿದೆ. ಈ ರೀತಿಯ ನೌಕರರು ಬೇರೆ ಯಾವುದೇ ಇಲಾಖೆಯಲ್ಲಿ ಇರುವುದಿಲ್ಲ. ಈ ನೌಕರರು ನಿವೃತ್ತಿಗೊಂಡಂತೆ ಆ ಹುದ್ದೆಗಳು ಸಹ ಕೊನೆಗೊಳ್ಳುವುದಾಗಿ ಹಾಗೂ ಹೊಸದಾಗಿ ಅರಣ್ಯ ಪ್ರೇರಕರನ್ನು ನೇಮಕಮಾಡುವಂತಿಲ್ಲ ಎಂದು ಇಲಾಖೆ 1993ರಲ್ಲಿ ಸುತ್ತೋಲೆ ಹೊರಡಿಸಿದೆ.
ಇಲಾಖೆಯಲ್ಲಿ ವಿವಿಧ ವರ್ಗದ ಅಂದರೆ ಅರಣ್ಯ ರಕ್ಷಕ, ಅರಣ್ಯ ಕಾವಲುಗಾರ (ವಾಚರ್), ದಾಸ್ತಾನು ಕೊಠಡಿಗಳ ಹಗಲು ಮತ್ತು ರಾತ್ರಿ ಕಾವಲುಗಾರ, ವಾಹನಚಾಲಕ ಹಾಗೂ ಲಿಪಿಕ ವೃಂದದ ಹುದ್ದೆಗಳಾದ ದ್ವಿತೀಯ ದರ್ಜೆ ಸಹಾಯಕ, ಪ್ರಥಮ ದರ್ಜೆ ಸಹಾಯಕ, ಕಂಪ್ಯೂಟರ್ ಆಪರೇಟರ್, ಬೆರಳಚ್ಚುಗಾರ ಮತ್ತು ರವಾನೆ ಗುಮಾಸ್ತ ಮುಂತಾದ ಹುದ್ದೆಗಳು ఖాలి ಇದ್ದು, ಸದರಿ ಹುದ್ದೆಗಳಲ್ಲಿ ಅರಣ್ಯ ಪ್ರೇರಕರಿಂದ ಸೇವೆ ಪಡೆದುಕೊಂಡಿರುತ್ತಾರೆ.
ಇಲಾಖೆ/ಸರ್ಕಾರ ಅರಣ್ಯ ಪ್ರೇರಕರಿಂದ ಪೂರ್ಣ ಕಾಲದ ಸೇವೆ ಪಡೆದುಕೊಂಡಿದ್ದು, ಈ ನೌಕರರ ಸೇವೆಯನ್ನು ಸಕ್ರಮಗೊಳಿಸಬೇಕೆಂದು ఇలాఖా ಮುಖ್ಯಸ್ತರಾದ ಮಾನ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯಪಡೆ ಮುಖ್ಯಸ್ಥರು ಕೆಳಕಂಡಂತೆ ಕಾಲ ಕಾಲಕ್ಕೆ ಅರಣ್ಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಮಾಡಿದ್ದರೂ ಯಾವುದೇ ಕ್ರಮ ವಹಿಸಿರುವುದಿಲ್ಲ.
1) ಪ್ರಧಾನ ಕಾರ್ಯದರ್ಶಿಗಳ ಸಭಾ ನಡವಳಿ ದಿನಾಂಕ: 16-12-1994
2) ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ಯೋಜನೆ, ಬೆಂಗಳೂರು ಇವರ ಅರೆ ಸರ್ಕಾರಿ ಪತ್ರ :ಎlಇಎಸ್‌ಟಿ/ಸಿಆರ್ 21/1994-95 00: 18-08-1994.
3) PCCF ರವರ ಕಛೇರಿ ಪತ್ರ ಸಂಖ್ಯೆ: ಬಿ6/ಅ.ಪ್ರೇ.-ಸಿಆರ್/55/ 1997-98- 04:19-02-2007
4) PCCF ರವರ ಕಛೇರಿ ಪತ್ರ ಸಂಖ್ಯೆ:ಬಿ5/ಅ.ಪ್ರೇ.ಗೌ-ಸಿಆರ್/5/ 2008-09 00: 26-09-2009.
5) PCCF ರವರ ಕಛೇರಿ ಪತ್ರ ಸಂಖ್ಯೆ:ಬಿ6/ದಿನಗೂಲಿ-ಸಿಆರ್/55/ 1997-98 008: 08-10-2010, 30-01-2013.
6) PCCF ರವರ ಕಛೇರಿ ಪತ್ರ ಸಂಖ್ಯೆ:ಬಿ4/ಅ.ಪ್ರೇ.ಗೌ-ಸಿಆರ್/1/ 2013-14 00:24-05-2014.
7( PCCF 08-01-2016 :00 ? : ס.
8) F & 3/217 & 2014/0:23-12-2017.
9) PCCF ಕಛೇರಿ ಪತ್ರ ಸಂಖ್ಯೆ: ದಿನಗೂಲಿ/ಕ್ಷೇಅಅ/ಸಿಆರ್-55/97-98 90: 16-02-2018.
ಕಳೆದ 37 ವರ್ಷಗಳಿಂದಲೂ ಸಂಘವು ಹಲವಾರುಬಾರಿ ಇಲಾಖಾ ಮುಖ್ಯಸ್ತರಿಗೆ ಮನವಿ ಮಾಡಿದ್ದು, ಅವರು ಇಲಾಖಾ ಕಾರ್ಯದರ್ಶಿಗಳಿಗೆ ಮಾಡಿದ ಶಿಫಾರಸ್ಸುಗಳನ್ನು ಇಲಾಖಾ ಕಾರ್ಯದರ್ಶಿಗಳು ಅನುಷ್ಠಾನ ಗೊಳಿಸದಿರುವುದು ವಿಷಾದನೀಯ.
ತದನಂತರ ನ್ಯಾಯಕ್ಕಾಗಿ ಸಂಘವು ಕಾರ್ಮಿಕ ಇಲಾಖೆಯ ಮೊರೆಹೋಗಲಾಗಿ ಪ್ರಕರಣ ದಾಖಲಾಗಿ ಉಲ್ಲೇಖ (1) ಮತ್ತು ಮಾನ್ಯ ಉಚ್ಛ ನ್ಯಾಯಾಲಯಗಳಲ್ಲಿಯೂ ಉಲ್ಲೇಖ (2)ರಲ್ಲಿ ಆದೇಶವಿದ್ದರೂ ಸರ್ಕಾರ ಕ್ರಮವಹಿಸಿರುವುದಿಲ್ಲ. ಆದ್ದರಿಂದ ತಾವುಗಳು ವಿಧಾನ ಮಂಡಲದ ಅದಿವೇಶನದಲ್ಲಿ ಪ್ರಶ್ನಿಸುವ ಮೂಲಕ ವಿಷಯ ಪ್ರಸ್ತಾಪಿಸಿ ನ್ಯಾಯಾಲಗಳ ಆದೇಶಗಳನ್ನು ಅನುಷ್ಠಾನಗೊಳಿಸಲು ಸರ್ಕಾರವನ್ನು ಒತ್ತಾಯಿಸಬೇಕಾಗಿ ಕೋರುತ್ತೇವೆ ಎಂದು ರಾಜಣ್ಣ-ಅಧ್ಯಕ್ಷರು, ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು
You must be logged in to post a comment.