ಕಳೆದ 44 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 10450 ಗ್ರಾಮ ಸಹಾಯಕರನ್ನು ಸರ್ಕಾರವು ‘ಡಿ’ ದರ್ಜೆ ನೌಕರರೆಂದು ಪರಿಗಣಿಸದೆ ಇರುವುದರಿಂದ ಬೆಳಗಾವಿಯ ಚಳಿಗಾಲದ ಅಧಿವೇಶನ ದಲ್ಲಿ ಪಾದಯಾತ್ರೆಯ ಮೂಲಕ ಸರ್ಕಾರದ ಗಮನ ಸೆಳೆಯಲು ಮುಷ್ಕರ

ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮ ಕಛೇರಿಗಳ ರದ್ದತಿ ಕಾಯ್ದೆ 1961ರ ಅನ್ವಯ ಜಾರಿಯಿಂದಾಗಿ 00:01-02-1963 ರಿಂದ ಅನ್ವಯವಾಗುವಂತೆ ವಂಶಪಾರಂಪಯ್ಯದ ಎಲ್ಲಾ ಗ್ರಾಮೀಣ ಹಂತದ ವಿಲೇಜ್ ಆಫೀಸರ್ಸ್ ಹುದ್ದೆಗಳು ರದ್ದಾದರಿಂದ ಕೆಳ ಹಂತದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರನ್ನು ತಾತ್ಕಾಲಿಕ ಆಧಾರದ ಮೇಲೆ ಯಾವುದೇ ವಂಶಪಾರಂಪಯ್ಯ ಹಕ್ಕುಗಳು ಅನ್ವಯವಾಗದಂತೆ ಆಡಳಿತಾತ್ಮಕ ಅನುಕೂಲಕ್ಕಾಗಿ ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಿಗರಿಗೆ ಸಹಾಯ ಮಾಡುವ ಸಲುವಾಗಿ ಸರ್ಕಾರಿ ಆದೇಶಗಳಲ್ಲಿ 10450 ಗ್ರಾಮ ಸಹಾಯಕರ ಹುದ್ದೆಗಳನ್ನು ಮಿತವೇತನದ ಆಧಾರದ ಮೇಲೆ ತಾತ್ಕಾಲಿಕವಾಗಿ ಮಂಜೂರು ಮಾಡಲಾಗಿದೆ. ಹಾಲಿ ನಮಗೆ ಮಾಸಿಕ ರೂ.13,000/- ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಇತರೆ ಭತ್ಯೆಗಳು ಇರುವುದಿಲ್ಲ. ಇಂದಿನ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕುಟುಂಬ ಜೀವನ ನಿರ್ವಹಣೆಗೆ ಕಷ್ಟಕರವಾಗಿರುತ್ತದೆ. ಹಾಗೂ ಇಂದಿನ ಮಾಸಿಕ ರೂ.13,000/- ಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಹಿರಿಯರ ಪಾಲನೆ ಪೋಷಣೆ ಮತ್ತು ವೈದ್ಯಕೀಯ ಚಿಕಿತ್ಸೆ ವೆಚ್ಚಭರಿಸಲು ದುಸ್ಥಿತಿಯಾಗಿರುತ್ತದೆ. ಸರ್ಕಾರಕ್ಕೆ ಈಗಾಗಲೇ ಹಲವು ಮನವಿಗಳನ್ನು ಕೇಂದ್ರ ಸಂಘ ಸಲ್ಲಿಸಿಕೊಂಡಿದ್ದರೂ ಸಹಾ ಈ ಬಗ್ಗೆ ಸರ್ಕಾರವು ಗಮನ ಹರಿಸಿರುವುದಿಲ್ಲ. ಗ್ರಾಮ ಸಹಾಯಕರಿಗೆ ಯಾವುದೇ ಸೇವಾ ನಿಯಮಾವಳಿ ಹಾಗೂ ಸೇವಾ ಭದ್ರತೆಯನ್ನು ನೀಡಿರುವುದಿಲ್ಲ. ಗ್ರಾಮ ಸಹಾಯಕರು ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಸಹಾಯ ಮಾಡಲು ಹಾಗೂ ಮಾಹಿತಿ ನೀಡಲು ನೇಮಕ ಮಾಡಿಕೊಂಡಿರುತ್ತಾರೆ.

ಈಗಾಗಲೇ ಗ್ರಾಮ ಸಹಾಯಕರನ್ನು 2007ನೇ ಸಾಲಿನಲ್ಲಿ 10450 ಹುದ್ದೆಗಳು ಮಿತವೇತನದ ಆಧಾರದ ಮೇಲೆ ಸರ್ಕಾರವು ಖಾಯಂ ಮಾಡಿರುತ್ತದೆ. ಆದರೆ, ಇಲ್ಲಿಯವರೆವಿಗೂ ವೇತನ ಪರಿಷ್ಕರಣೆ ಆಗಿರುವುದಿಲ್ಲ. 2012ನೇ ಸಾಲಿನಲ್ಲಿ ಮಾನ್ಯ ಅಡ್ವಕೋಟ್ ಜನರಲ್ ರವರು ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ಮಾಡುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಿರುತ್ತಾರೆ ಆದರೂ ಸರ್ಕಾರವು ಇಲ್ಲಿಯವರೆವಿಗೂ ಗ್ರಾಮ ಸಹಾಯಕರಿಗೆ ಕನಿಷ್ಠ ವೇತನ ಜಾರಿ ಮಾಡುವಾಗಲೀ, ‘ಡಿ’ ದರ್ಜೆ ಎಂದು ಪರಿಗಣಿಸುವುದಾಗಲೀ ಕಂಡು ಬಂದಿರುವುದಿಲ್ಲ.

ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳಿಗೆ 2023-ಸೆಪ್ಟೆಂಬರ್ ತಿಂಗಳಿನಲ್ಲಿ ಈ ಬಗ್ಗೆ ಮನವಿ ಸಲ್ಲಿಸಿರುತ್ತದೆ ಮತ್ತು ಮಾನ್ಯ ಕಂದಾಯ ಸಚಿವರಿಗೆ ಹಾಗೂ ಮಾನ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಕೇಂದ್ರ ಸಂಘವು ಈ ಬಗ್ಗೆ ಮನವಿ ಸಲ್ಲಿಸಿರುತ್ತದೆ. ಆದರೆ ಇಲ್ಲಿಯವರೆವಿಗೂ ಗ್ರಾಮ ಸಹಾಯಕರ ಬೇಡಿಕೆಗಳ ಬಗ್ಗೆ ಸರ್ಕಾರವು ಕ್ರಮ ಕೈಗೊಂಡಿರುವ ಬಗ್ಗೆ ಕೇಂದ್ರ ಸಂಘಕ್ಕೆ ಮಾಹಿತಿ ಇರುವುದಿಲ್ಲ.

ಆದ್ದರಿಂದ ದಿನಾಂಕ:04-12-2023 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಗ್ರಾಮ ಸಹಾಯಕರ ಕೇಂದ್ರ ಸಂಘವು ಕಿತ್ತೂರು ರಾಣಿ ಚೆನ್ನಮ್ಮ ಅರಮನೆ (ಬೆಳಗಾವಿ ಜಿಲ್ಲೆ)ಯಿಂದ ಸುವರ್ಣಸೌಧದವರೆಗೆ ಪಾದಯಾತ್ರೆಯ ಮೂಲಕ ಮುಷ್ಕರವನ್ನು ಹಮ್ಮಿಕೊಂಡಿರುತ್ತದೆ ಎಂದು ಹೆಚ್‌.ಎನ್‌.ದೇವರಾಜು, ಅಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು

ಪತ್ರಿಕಾ ಘೋಷ್ಠಿಯಲ್ಲಿ ಜನಾರ್ಧನ್ ಬಂಟ್ವಾಳ,ಗೌರವ ಅಧ್ಯಕ್ಷರು, ಬಿ.ಶಿವರುದ್ರಪ್ಪ,ಪ್ರಧಾನ ಕಾರ್ಯದರ್ಶಿ, ಶ್ರೀನಿವಾಸ್,ಖಜಾಂಚಿ ಮತ್ತು ಸಂಘದ ಮುಖಂಡರುಗಳು ಉಪಸ್ತಿತರಿದ್ದರು.

City Today News 9341997936

ಆಡು, ಕುರಿ ಕಳ್ಳತನ ಪ್ರಕರಣದಲ್ಲಿ ಭರಮಸಾಗರ ಪೊಲೀಸರ (ಚಿತ್ರದುರ್ಗ ಜಿಲ್ಲೆ) ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ವರ್ತನೆಯಿಂದ ಲಿಂಗ ಅಲ್ಪಸಂಖ್ಯಾತ ಮಹಿಳೆ ಅರುಂಧತಿ ಒಂದು ತಿಂಗಳಿನಿಂದ ನರಳುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಕೊಳಹಾಳ್ (ಭರಮಸಾಗರ, ಚಿತ್ರದುರ್ಗ ಜಿಲ್ಲೆ) ದಲ್ಲಿ ಸುಮಾರು ಐದು ವರ್ಷಗಳಿಂದ ವಾಸವಾಗಿದ್ದು, ಜೀವನ ನಿರ್ವಹಣೆಗಾಗಿ ಹೈನುಗಾರಿಕೆ ಮಾಡಿಕೊಂಡಿದ್ದು, 45
ಮೇಕೆ 05 ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದರು. ದಿನಾಂಕ:26-10-2023 ರಂದು
ಸುಮಾರು ಹತ್ತು ಲಕ್ಷ ರೂಪಾಯಿ ಬೆಳೆಬಾಳುವ ಮೇಕೆ ಮತ್ತು ಕುರಿಗಳ ಕಳ್ಳತನವಾಗಿದ್ದು,
ಭರಮಸಾಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಿದಾನದ ಗತಿಯಲ್ಲಿ ತನಿಖೆ ನಡೆಸುತ್ತಿರುವ ಕಾರಣಕ್ಕೆ ಈ ವಿಷಯವನ್ನು ದಿನಾಂಕ: 30-10-2023 ರಂದು ಚಿತ್ರದುರ್ಗ ಜಿಲ್ಲಾ ಎಸ್.ಪಿ ಯವರ ಗಮನಕ್ಕೆ ತಂದು ನಾವು ಲಿಖಿತವಾಗಿ ಪತ್ರವನ್ನೂ ಸಲ್ಲಿಸಿದ್ದೇವೆ. ಆ ನಂತರವೂ ಪೊಲೀಸ್ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದ್ದು, ಇದು ಪೊಲೀಸರ ಮೇಲಿನ ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ. ಇದು ಅರುಂದತಿಯ ಜೀವನವನ್ನು ಕೆಟ್ಟದಾಗಿ ಬಾಧಿಸುತ್ತಿದೆ ಮತ್ತು ಆಕೆಯ ಜೀವನವು ಅಸ್ಥಿರವಾಗಿದೆ. ಭರಮಸಾಗರ ಪೊಲೀಸರು ಈ ವಿಷಯದಲ್ಲಿ ತುರ್ತಾಗಿ ತನಿಖೆ ನಡೆಸುವಂತೆ ಚಿತ್ರದುರ್ಗ ಜಿಲ್ಲಾ ಎಸ್ಪಿ ಮತ್ತು ಡಿಸಿ ಅವರು ಆದೇಶಿಸಬೇಕು ಮತ್ತು ಅರುಂಧತಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ.

ಲಿಂಗತ್ವ ಅಲ್ಪಸಂಖ್ಯಾತರು ಕೇವಲ ಭಿಕ್ಷೆ ಬೇಡಿ ಜೀವನ ಮಾಡುತ್ತಾರೆ ಎನ್ನುವ ಈ ಸಮಾಜದ ಮಧ್ಯೆ 45 ಮೇಕೆ 05 ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ನನಗೆ ಈ ಘಟನೆ ಇಂದ ಅಘಾಥವಾಗಿದೆ. ಭವಿಷ್ಯದಲ್ಲಿ ನನ್ನ ಜೀವನವನ್ನು ನಡೆಸಲು ನನಗೆ ಯಾವುದೇ ಮಾರ್ಗವನ್ನು ನೋಡಲು ಸಾಧ್ಯವಾಗುತ್ತಿಲ್ಲ – ನನ್ನ ಭವಿಷ್ಯವು ಕತ್ತಲೆಯಾಗಿದೆ. ಲೈಂಗಿಕ ವೃತ್ತಿ ಮತ್ತು ಭಿಕ್ಷಾಟನೆ ಮಾಡದ ನಾನು ಕುರಿ ಸಾಕಾಣಿಕೆಯಲ್ಲೇ ಜೀವನ ಮುಂದು ವರಿಸಬೇಕೆಂದಿದ್ದೇನೆ. ಆದರೆ ಪೋಲೀಸ್ ರವರ ನಿರ್ಲಕ್ಷದಿಂದ ದಾರಿತೋರದಾಗಿದೆ ಎಂದು ನೊಂದ ಅರುಂಧತಿ ತಿಳಿಸಿದರು.

ಲಿಂಗತ್ಯ ಮತ್ತು ಲೈಂಗಿಕ ವೈವಿಧ್ಯತೆಗಾಗಿ ಚಳುವಳಿ (Movement for Gender and Sexual Diversity) ಯ ಸಹ ಅಧ್ಯಕ್ಷರಾದ ವೈಶಾಲಿ ಯವರು ಮಾತನಾಡಿ, ಈ ಘಟನೆಯಲ್ಲಿ ಪೋಲೀಸು ವರ್ತನೆ, ಖಂಡನೀಯ ಲಿಂಗತ್ವ ಅಲ್ಪಸಂಖ್ಯಾರಲ್ಲಿ ಸ್ವಂತ ಕಾಲಿನ ಮೇಲೆ ನಿಂತು ದುಡಿಯುವ ಜನರು ಬಹಳ ಕಮ್ಮಿ, ಅವರಲ್ಲಿ ಒಬ್ಬರಾದ ಅರುಂದತಿಯರಿಗೆ ಈ ರೀತಿ ಯಾಗಿರುವುದನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸದೇ ಇರುವುದು ಬಹಳ ನೋವಾಗಿದೆ. ಆಕೆಗೆ ನ್ಯಾಯ ಸಿಗದಿದ್ದಲ್ಲಿ ನಲ್ಲಿ ನಮ್ಮ ಚಳುವಳಿಯ ಮೂಲಕ ಚಿತ್ರದುರ್ಗ ಜಿಲ್ಲಾಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಲಿಂಗತ್ವ ಮತ್ತು ಲೈಂಗಿಕ ವೈವಿಧ್ಯತೆಗಾಗಿ ಚಳುವಳಿ (Movement for Gender and Sexual Diversity) ಯ ಮತ್ತೊಬ್ಬ ಸಹ ಅಧ್ಯಕ್ಷರಾದ ಅಶ್ವಿನಿ ರಾಜನ್ ರವರು ಮಾತನಾಡಿ ಲಿಂಗತ್ವ ಅಲ್ಪಸಂಖ್ಯಾರತ ಸ್ವಾವಲಂಭಿ ಜೀವನಕ್ಕಾಗಿ ಸರ್ಕಾರದ ಯಾವುದೇ ವಿಷೇಶ ಯೋಜನೆ ಇಲ್ಲದಿದ್ದರೂ, ಸಮುದಾಯದವರಿಗೆ ಮಾದರಿಯಾಗುವಂತೆ ಸ್ವಂತ ಹಣ ದಿಂದ ಜೀವನ ಕಟ್ಟಿಕೊಂಡಿದ್ದ ಅರುಂಧತಿಯವರಿಗೆ ಪೋಲೀಸ್ ಇಲಾಖೆ ನೆರವಿಗೆ ನಿಲ್ಲಬೇಕು, ಆ ಕಾರಣಕ್ಕೆ ನಾವು ಇಂದು ಮಧ್ಯಾಹ್ನ ಐ.ಜಿ. ಯವರನ್ನು ಸಹ ಬೇಟಿ ಮಾಡಲಿದ್ದೇವೆ. ನಂತರವೂ ನ್ಯಾಯಸಿಗದೇ ಇದ್ದಲ್ಲಿ ವೈಷ್ಣವಿ ಯವರು ತಿಳಿಸಿದ ಹಾಗೆ ಚಳುವಳಿಯ ಮೂಲಕ ಚಿತ್ರದುರ್ಗ ಜಿಲ್ಲಾಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

City Today News 9341997936

ಕ್ರಿಷ್ಣ ಗೋದಾವರಿ ರಾಯನಿಕ ರಸಗೊಬ್ಬರ ಗೋಡವದಿಂದ ಹುಬ್ಬರುಡಿ ಗ್ರಾಮದ ಸಹಕಾರಿ ಶಾಲೆಯ ಮಕ್ಕಳಿಗೆ ಮತ್ತು ಗ್ರಾಮದ ಜನತೆಗೆ ಕಲುಷಿತ ನೀರು ಮತ್ತು ಬಾರಿ ಪ್ರಮಾಣದ ಲಾರಿಗಳಿಂದ ಶಾಲಾ ಮಕ್ಕಳಿಗೆ ತೊಂದರೆ

WP-NO 23094/2023

22/11/2023 ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹುಬ್ಬರೂಡಿ ಗ್ರಾಮದಲ್ಲಿರುವ ಕ್ರಿಷ್ಣ ಗೋದಾವರಿ ರಾಯನಿಕ ರಸಗೊಬ್ಬರ ಗೋಡವದಿಂದ ಹುಬ್ಬರುಡಿ ಗ್ರಾಮದ ಸಹಕಾರಿ ಶಾಲೆಯ ಮಕ್ಕಳಿಗೆ ಮತ್ತು ಗ್ರಾಮದ ಜನತೆಗೆ ಕಲುಷಿತ ನೀರು ಮತ್ತು ಬಾರಿ ಪ್ರಮಾಣದ ಲಾರಿಗಳಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ ಹುಬ್ಬರವಾಡಿ ಗ್ರಾಪದ ವ್ಯಕಿಯಾದ ಶ್ರೀ ಪಾಂಡುರಂಗ ಮಹದೇವ ಎಂಬ ವ್ಯಕಿಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಾನ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಬೆಂಗಳೂರು ಪೀಠ ಆಳಿಸಿ ಸ್ಥಳೀಯ ಅಧಿಕಾರಿಗಾಳನ್ನು ತಾರಟೆಗೆ ತೆಗೆದುಕೊಂಡು ಸದಾರಿ ಗೊಡವಿನ NOC ಯಾಕ್ಕೆ ರದ್ದು ಪಡಿಸಿಲ್ಲವೆಂದು ಪ್ರಶ್ನೆಶಿ ಎದುರುದಾರರಿಗಿ ನೋಟಿಸು ಕೊಟ್ಟು ಮಾನ್ಯಉಚ್ಛ ನ್ಯಾಯಾಲಯದ ಎದುರು ಹಾಜರಾಗಲು ಮಾನ್ಯ ಉಚ್ಛ ನ್ಯಾಯಲಯ ಬೆಂಗಳೂರು ಪೀಠ ಆದೇಶಿಸಿದೆ ಎಂದು ಅರ್ಜಿದಾರರ ಪರ ವಕೀಲರಾದ ಆತ್ಮ ವಿ ಹಿರೇಮಠ ಅವರು ತಿಳಿಸಿದರು.

City Today News 9341997936

“ಬೆಂಗಳೂರು ಚಲೋ ಕಾರ್ಯಕ್ರಮ & ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ”, ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ

ಬೆಂಗಳೂರು ಚಲೋ ಕಾರ್ಯಕ್ರಮ ದಿನಾಂಕ 22-11-2023ನೇ ಬುಧವಾರ ಬೆಳಗ್ಗೆ 10.00 ಗಂಟೆಗೆ

ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ

ಸರ್ಕಾರವು ಮಕ್ಕಳ ಮತ್ತು ತಾಯಂದಿರ ಅಭಿವೃದ್ಧಿಯಭಾಗವಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು 1975ರಲ್ಲಿ ಆರಂಭಿಸಿದ್ದು ದೇಶಾದ್ಯಂತ ಈ ಯೋಜನೆ ಅಡಿಯಲ್ಲಿ ಲಕ್ಷಾಂತರ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೆಲಸ ನಿರ್ವಯಿಸುತ್ತಿದ್ದು ರಾಜ್ಯದಲ್ಲೂ 1ಲಕ್ಷದ 32ಸಾವಿರ ಕಾರ್ಯಕರ್ತೆಯರು ದುಡಿಯುತ್ತಿದ್ದೇವೆ.

ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಆರೋಗ್ಯ ತಪಾಸಣೆ, ವಿಶೇಷ ಮಕ್ಕಳಿಗೆ ಪೌಷ್ಠಿಕ ಆಹಾರ ಸೌಲಭ್ಯ, ಚುಚ್ಚುಮದ್ದು ಬಿ.ಎಲ್.ಓ. ಮಾಹಿತಿ ಸೇವೆ ಇತ್ತೀಚೆಗೆ ಬಂದಿರುವ ಸ್ನೇಹಾ ಆಪ್‌ನಲ್ಲಿ ಮಕ್ಕಳ ತೂಕ ಮಾಡಿ ಪ್ರತಿತಿಂಗಳು ಗುತುತಿಸುವುದು ಕೇಂದ್ರ ಸರ್ಕಾರ ಯೋಜನೆಯಾದ ಪೋಷಣ್ ಟ್ರ್ಯಾಕರ್‌ನಲ್ಲಿ ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರ ಮಾಹಿತಿಯನ್ನು ತುಂಬುವುದು ಹೀಗೆ ದಿನೇ ದಿನೇ ಕೆಲಸದ ಒತ್ತಡಮಾತ್ರ ಹೆಚ್ಚುತ್ತಲೆ ಇದೆ.

ಈಗಾಗಲೇ ರಾಜ್ಯದಲ್ಲಿ ಕೊರೋನ ವಾರಿಯರಾಗಿ ಮಾನವೀಯತೆಯಿಂದ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವಾಗ ಅನೇಕ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮರಣ ಹೊಂದಿದ್ದಾರೆ ಅನೇಕ ಕುಟುಂಬಗಳು ಬೀದಿಪಾಲಾಗಿದೆ.

ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ 1ಲಕ್ಷದ 32ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗೌರವಧನ ಎಂಬ ಹೆಸರಿನಲ್ಲಿ ಕಾರ್ಯಕರ್ತೆಯರನ್ನಾಗಿ ತೆಗೆದಕೊಂಡು ಸರ್ಕಾರ ಮಹಿಳೆಯರನ್ನು ಶೋಷಣೆಮಾಡುತ್ತಿದೆ ಯಾವುದೇ ಸಾಮಾಜಿಕ ಭದ್ರತೆ ಇರುವುದಿಲ್ಲ ಈಗಿನ ಕೆಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣದ ಬಗ್ಗೆ ಹೆಚ್ಚಿನ ಅಭಿವೃದ್ಧಿಗಳನ್ನು ಹಮ್ಮಿಕೊಂಡಿದ್ದು ಅದೇ ರೀತಿ ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಸಹಾಯಕಿಯರಿಗೆ ಒಂದು ಕನಿಷ್ಠ ವೇತನ ಜಾರಿಮಾಡಿ ಅವರ ಬದುಕನ್ನು ಕಟ್ಟಿಕೊಳ್ಳಲು ಆಸರೆಯಾಗಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ.

ಬೇಡಿಕೆಗಳು

1) ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ 21000 ಕನಿಷ್ಠ ವೇತನ ನೀಡಬೇಕು.

2) ಕಾಂಗ್ರೆಸ್  ಸರ್ಕಾರ ಚುನಾವಣಾ ಪೂರ್ವದಲ್ಲಿ 6ನೇ ಗ್ಯಾರಂಟಿಯಾಗಿ ಕಾರ್ಯಕರ್ತೆಯರಿಗೆ 15000 ರೂ. ಸಹಾಕಿಯರಿಗೆ 10000 ರೂ. ನೀಡುತ್ತೇವೆ ಎಂದು ಘೋಷಣೆ ಮಾಡಿದ್ದನ್ನು ತಕ್ಷಣದಿಂದ ಜಾರಿಮಾಡಬೇಕು.

3) ಎಲ್ಲಾ ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು ಅಲ್ಲಿಯವರೆಗೆ ಮುಖ್ಯಕಾರ್ಯಕರ್ತೆ ನೀಡುವ ಗೌರವಧನವನ್ನು ನೀಡಬೇಕು.

4) ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ನಿವೃತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಕಿಯರಿಗೆ ಗ್ರಾಜ್ಯುಟಿ ಹಣವನ್ನು ತಕ್ಷಣ ಜಾರಿ ಮಾಡಬೇಕು.

ಮೇಲ್ಖಂಡ ವಿಷಯಗಳನ್ನೊಲಗೊಂಡ ಪ್ರಕಟಣೆಯನ್ನು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆ (ರಿ.) ವತಿಯಿಂದ ಬಿ.ಪ್ರೇಮ -ರಾಜ್ಯಾಧ್ಯಕ್ಷರು, ಜಯಲಕ್ಷ್ಮಿ ಬಿ.ಆರ್.-ಗೌರವ ಅಧ್ಯಕ್ಷರು, ಉಮಾಮಣಿ-ರಾಜ್ಯ ಕಾರ್ಯದರ್ಶಿ, ವಿಶಾಲಾಕ್ಷಿ-ರಾಜ್ಯ ಖಜಾಂಚಿ, ನಿರ್ಮಲ ಬಿ.ಎಸ್.-ರಾಜ್ಯ ಉಪಾಧ್ಯಕ್ಷರು, ಶಾಂತ-ರಾಜ್ಯ ಸಹ ಕಾರ್ಯದರ್ಶಿ ಮತ್ತು ಭಾರತಿ ಎನ್.ಪಿ.-ರಾಜ್ಯ ಸಲಹೆಗಾರರು ಗಳ ಉಪಸ್ತಿತಿಯಲ್ಲಿ ಪ್ರಕಟಿಸಲಾಯಿತು.

City Today News 9341997936

ಈ ಕೂಡಲೇ ಸಂಘದ ಆಸ್ತಿ ಉಳಿಸಲು ಕ್ರಮ ಕೈಗೊಳ್ಳದಿದ್ದರೆ ಸಜ್ಜೆ ಪಾಳ್ಯ ಜಮೀನು ಉಳಿಸಿ ಆಂದೋಲನವನ್ನು ರಾಜ್ಯದ ಸಮುದಾಯದ ಸಂಘ ಸಂಸ್ಥೆಗಳು ಒಗ್ಗೂಡಿ ಮಾಡಬೇಕಾಗಿತ್ತೆಂದು   ಹೋರಾಟ ಸಮಿತಿ ಎಚ್ಚರಿಕೆ

ರಾಜ್ಯದ ಪ್ರತಿಷ್ಠಿತ ಎರಡನೇ ದೊಡ್ಡ ಜನಾಂಗವಾಗಿರುವ ಒಕ್ಕಲಿಗರ ಮಾತೃ ಸಂಸ್ಥೆ ಎನಿಸಿರುವ ‘ರಾಜ್ಯ ಒಕ್ಕಲಿಗರ ಸಂಘ’ದ ಆಸ್ತಿ ಉಳಿವಿಗಾಗಿ ನಿರಂತರ ಹೋರಾಟ ಮಾಡುತ್ತಿರುವ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇಂದು ಕರೆದಿರುವ ಪತ್ರಿಕಾಗೋಷ್ಠಿಯ ಮುಖ್ಯ ಉದ್ದೇಶಗಳೆಂದರೆ..

ಹಲವು ಹಗರಣಗಳು ಆರೋಪಗಳಿಂದ ಮೂರು ವರ್ಷಗಳ ಕಾಲ ಆಡಳಿತಾಧಿಕಾರಿಯನ್ನು ಕಂಡಿದ್ದ ರಾಜ್ಯ ಒಕ್ಕಲಿಗರ ಸಂಘಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಚುನಾವಣೆಗಳು ನಡೆದು ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಾಗ ನಮ್ಮೆಲ್ಲ ಹೋರಾಟಗಾರರ ಬೇಡಿಕೆಯಂತೆ ಸಂಘಕ್ಕೆ ಸೇರಿರುವ ಬೆಂಗಳೂರು ಉತ್ತರ ತಾಲೂಕಿನ ಸಜ್ಜೆ ಪಾಳ್ಯದ ಸರ್ವೆ ನಂಬರ್ 15ರ 96 ಎಕರೆ 35 ಗುಂಟೆ ಭೂಮಿ ಉಳಿಸುವ ಭರವಸೆ ನೀಡಿ ಅದರಂತೆ ನಾಲ್ಕು ಜನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಿ ಭರವಸೆ ಮೂಡಿಸಿದ್ದು ಇಡೀ ಜನಾಂಗಕ್ಕೆ ಆಶಾದಾಯಕ ಬೆಳವಣಿಗೆಯಾಗಿ ಕಂಡಿತ್ತು ಆದರೆ ಇತ್ತೀಚಿಗೆ ಬಾಲಕೃಷ್ಣರವರ ಅಧ್ಯಕ್ಷತೆಯ ಸಮಿತಿ ಹೋಗಿ ಕೆಂಚಪ್ಪಗೌಡ ಮತ್ತು ಹನುಮಂತಯ್ಯ ನವರ ನೇತೃತ್ವದ ಸಮಿತಿ ಬಂದಮೇಲೆ ಸಜ್ಜೆ ಪಾಳ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಲೇಔಟ್ ನಿರ್ಮಿಸಲು ಹೊರಟಿರುವ ಆತಂಕಕಾರಿ ಹಾಗೂ ಅನುಮಾನಾಸ್ಪದ ಬೆಳವಣಿಗೆಗಳು ನಡೆಯುತ್ತಿದ್ದು ಪ್ರಸ್ತುತ ಅಸ್ತಿತ್ವದಲ್ಲಿರುವ ಸಮಿತಿ ಭೂಗಳ್ಳರನ್ನು ತಡೆದು ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಕಾನೂನಾತ್ಮಕವಾಗಿ ಸಂಘಕ್ಕೆ ಪಡೆಯುವ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು ಆದರೆ ಯಾವುದೇ ಕ್ರಮ ಕೈಗೊಳ್ಳದೆ ನಿಷ್ಕ್ರಿಯ ಇರುವುದು ರಾಜ್ಯ ಒಕ್ಕಲಿಗರ ಸಂಘ ಹಾಗೂ ಸಮುದಾಯಕ್ಕೆ ಮಾಡುತ್ತಿರುವ ದ್ರೋಹವೆಂದು ಪರಿಗಣಿತವಾಗಿರುತ್ತದೆ

ಪ್ರಸ್ತುತ ಅಸ್ತಿತ್ವದಲ್ಲಿರುವ ಕಾರ್ಯಕಾರಿ ಸಮಿತಿಯು ಕೂಡಲೇ ಸಜ್ಜೆ ಪಾಳ್ಯದ ಸಂಘಕ್ಕೆ ಸೇರಿರುವ ಭೂಮಿಯಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಭೂಗಳ್ಳರ ಅತಿಕ್ರಮಕ್ಕೆ ಕೂಡಲೇ ತಡೆಯೊಡ್ಡಿ ಬೇಕು ಆಗದಿದ್ದರೆ ರಾಜೀನಾಮೆ ಕೊಟ್ಟು ಅಧಿಕಾರದಿಂದ ಕೆಳಗಿಳಿಯಲೇಬೇಕು ಎಂದು ಹೋರಾಟ ಸಮಿತಿ ಆಗ್ರಹಿಸುತ್ತಿದೆ ಸಂಘದ ಪ್ರಸ್ತುತ ಕಾರ್ಯಕಾರಿ ಸಮಿತಿಯ ಸಂಘದ ಆಸ್ತಿಪಾಸ್ತಿ ರಕ್ಷಣೆಗೆ ಬಾರದೆ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಅನುಯಾಯಿ ಯಾದರೆ ಕಾರ್ಯದರ್ಶಿ ಜೆಡಿಎಸ್ ಪಕ್ಷದ ಅನುಯಾಯಿ ಖಜಾಂಚಿ ಬಿಜೆಪಿ ಪಕ್ಷದ ಪದಾಧಿಕಾರಿಗಳಾಗಿ ಪಕ್ಷತೀತವಾಗಿ ಕಾರ್ಯನಿರ್ವಹಿಸಬೇಕಾದ ಸಂಘ ರಾಜಕಾರಣಿಗಳ ಆಡೋಬಲ ದಂತಾಗಿ ಒಕ್ಕಲಿಗ ಸಮುದಾಯದ ಸೇವಕ ರಾಗಬೇಕಾದ ಇವರು ಅಧಿಕಾರವನ್ನು ಭೂಗಳ್ಳರ ರಾಜಕಾರಣಿಗಳ ಪರವಾಗಿ ಕಟಿಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ.

ಸಮುದಾಯದ ಮರಣ ಶಾಸನ ದಂತಿರುವ ಕಾಂತರಾಜ ಸಮಿತಿ ವರದಿಯನ್ನು ರಾಜ್ಯ ಸರ್ಕಾರ ಒಪ್ಪುವ ಆತುರದಲ್ಲಿರುವಾಗ ಇದರ ವಿರುದ್ಧ ಗಟ್ಟಿಯಾದ ಧ್ವನಿ ಎತ್ತಲು ಇಡೀ ರಾಜ್ಯದ ಒಕ್ಕಲಿಗರ ಪರ ಸಂಘ ಸಂಸ್ಥೆಗಳು ಈ ಸಮಿತಿಯನ್ನು ಕೇಳಿಕೊಂಡರು ಕೇವಲ ಒಂದು ಪತ್ರಿಕಾಗೋಷ್ಠಿ ಮಾಡಿ ಸುಮ್ಮನಾದದ್ದು ಒಕ್ಕಲಿಗರ ಜನಾಂಗಕ್ಕೆ ತುಂಬಾ ನೋವು ತಂದಿದೆ ಕೆ ಎಚ್ ರಾಮಯ್ಯನವರು ಕಂಡ ಕನಸನ್ನು ಈಡೇರಿಸುವ ಅರ್ಹತೆ ಅರ್ಹತೆ ಯೋಗ್ಯತೆ ಇರುವವರು ಸಂಘದ ಪದಾಧಿಕಾರಿಗಳಾಗಿರಬೇಕೇ ಹೊರತು ಸಂಘದಿಂದ ಹಣದ ದೋಚುವ ದುರಾಸೆಯ ಜನರಿಂದ ಒಕ್ಕಲಿಗರ ಸಂಘದ ಉದ್ಧಾರ ಸಾಧ್ಯವಿಲ್ಲ ಸದನ ಸಮಿತಿ ಹಾಗೂ ನ್ಯಾಯಾಲಯಗಳು ಸಂಘದ ಆಸ್ತಿಯನ್ನು ಖಾಸಗಿಯವರು ಕಬಳಿಸಲು ಕೆಂಚಪ್ಪ ಗೌಡರೆ ನೇರ ಹೊಣೆ ಎಂದು ಸ್ಪಷ್ಟ ದಾಖಲೆಗಳಲ್ಲಿ ಮಾತುಗಳಲ್ಲಿ ಹೇಳಿರುವಾಗ ಅಂತಹ ವ್ಯಕ್ತಿಯೇ ಈಗಿರುವ ಸಮಿತಿಯ ನೇತೃತ್ವ ಅಂದರೆ ಗೌರವ ಅಧ್ಯಕ್ಷರಾಗಿರುವುದು ಸಜ್ಜೆ ಪಾಳ್ಯ ಜಮೀನಿನ ರಕ್ಷಣೆ ಸಾಧ್ಯವೇ ಇದಕ್ಕೆ ನಮ್ಮ ಜನಾಂಗದ ನಾಯಕರುಗಳ ಸಹಮತ ಇದೆಯೇ.

ಈ ಕೂಡಲೇ ಸಂಘದ ಆಸ್ತಿ ಉಳಿಸಲು ಕ್ರಮ ಕೈಗೊಳ್ಳದಿದ್ದರೆ ಸಜ್ಜೆ ಪಾಳ್ಯ ಜಮೀನು ಉಳಿಸಿ ಆಂದೋಲನವನ್ನು ರಾಜ್ಯದ ಸಮುದಾಯದ ಸಂಘ ಸಂಸ್ಥೆಗಳು ಒಗ್ಗೂಡಿ ಮಾಡಬೇಕಾಗಿತ್ತೆಂದು ಹೋರಾಟ ಸಮಿತಿ ಎಚ್ಚರಿಕೆ ನೀಡುವುದು, ಹೋರಾಟ ಮಾಡಬೇಕಾದದ್ದು ಅನಿವಾರ್ಯವಾಗುತ್ತದೆ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಲಾಯಿತು.

City Today News 9341997936