ಸಂಕಷ್ಟದಲ್ಲಿ ಇರುವ ಕೋಳಿ ಸಾಗಾಣಿಕೆದಾರ ರೈತರಿಗೆ ಕೂಡಲೇ ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ರೀತಿಯಲ್ಲಿ ಪ್ರತಿ ಮಾಂಸದ ಕೋಳಿಗೆ ಪ್ರೋತ್ಸಾಹ ಧನವಾಗಿ 5 ರೂ. ಗಳನ್ನು ನೀಡಬೇಕು.

ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನ ರೂ. 5 ರೀತಿಯಲ್ಲಿಯೆ ಪ್ರತಿ ಮಾಂಸದ ಕೋಳಿಗೆ ಪ್ರೋತ್ಸಾಹ ಧನವಾಗಿ 5 ರೂ. ಗಳನ್ನು ಕೋಳಿ ಸಾಕಾಣಿಕೆದಾರ ರೈತರಿಗೆ ನೀಡಬೇಕು, ಹಲವು ರಾಜ್ಯ ಸರ್ಕಾರಗಳು, ನಮ್ಮ ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ಘೋಷಣೆ ಮಾಡಿರುವ ರೀತಿಯಲ್ಲಿ ‘ಕೋಳಿ ಸಾಕಾಣಿಕೆ’ಯನ್ನು, ‘ಕೃಷಿ’ ಎಂದು ಘೋಷಣೆ ಮಾಡಬೇಕು ಮತ್ತು ಕೃಷಿ, ರೇಷ್ಮೆ ಬೆಳೆಗಾರರಿಗೆ ನೀಡುತ್ತಿರುವ ಹಲವಾರು ಸೌಲಭ್ಯಗಳನ್ನು ಕೋಳಿ ಸಾಕಾಣಿಕೆದಾರ ರೈತರಿಗೂ ವಿಸ್ತರಿಸಬೇಕು, ಸುಮಾರು 10,000 ಕೋಳಿ ಸಾಕಾಣಿಕೆ ರೈತರು, ಹತ್ತಾರು ಕಂಪನಿಗಳು, ಹತ್ತಾರು ಸಾವಿರ ಸಗಟು, ಚಿಲ್ಲರೆ ವ್ಯಾಪಾರಸ್ಥರು, ಅಸಂಖ್ಯಾತ ಕೃಷಿ ಕೂಲಿಕಾರರು ಮತ್ತು ದೊಡ್ಡ ಪ್ರಮಾಣದ ಕೋಳಿ ಮಾಂಸ ತಿನ್ನುವ ಗ್ರಾಹಕರ ಹಿತಗಳನ್ನು ರಕ್ಷಿಸಲು ಮತ್ತು ಕುಕ್ಕುಟ್ಟ ಕ್ಷೇತ್ರವನ್ನು, ಹೈನುಗಾರಿಕೆಯ ಕ್ಷೇತ್ರಕ್ಕಿಂತ ಬಲಿಷ್ಠವಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ‘ಸಮಗ್ರ ಕಾನೂನು’ನ್ನು ಈ ಮುಂಬರುವ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಮಿತಿ ಆಗ್ರಹಿಸುತ್ತದೆ.

ರಾಜ್ಯದಲ್ಲಿ ಸುಮಾರು 10,000 ಕೋಳಿ ಸಾಕಾಣಿಕೆದಾರ ರೈತರು ವಿವಿಧ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಮಾಂಸದ ಕೋಳಿ (Broiler) ಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕುಕ್ಕುಟ ಕ್ಷೇತ್ರವು ಬಾರಿ ವೇಗವಾಗಿ ಬೆಳೆಯುತ್ತಿದೆ. ವಾರ್ಷಿಕ ಸಾವಿರಾರು ಕೋಟಿ ರೂ.ಗಳ ವಹಿವಾಟು ನಡೆಯುತ್ತಿದ್ದು, ಮತ್ತಷ್ಟು ಅಭಿವೃದ್ಧಿ ಮಾಡಲು ಉತ್ತಮ ಅವಕಾಶಗಳಿವೆ. ಆದರೆ ಸರ್ಕಾರಗಳು ಈ ಕುರಿತು ಕನಿಷ್ಠ ಗಮನವನ್ನು ಹರಿಸಿಲ್ಲ. ಇಂತಹ ಸ್ಥಿತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕೋಳಿ ಸಾಕಾಣಿಕೆದಾರ ರೈತರು, ಸಂಘಟಿತರಾಗಿ ಕಳೆದ ಹತ್ತು ವರ್ಷಗಳಿಂದ ಹತ್ತಾರು ಹೋರಾಟಗಳನ್ನು ನಡೆಸಿದ್ದಾರೆ. ಫಲವಾಗಿ ಕಳೆದ 7-8 ವರ್ಷಗಳಲ್ಲಿ ಸರ್ಕಾರದ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಬೇರೆ ರಾಜ್ಯಗಳಲ್ಲಿ ಇರುವಂತೆ ರಾಜ್ಯದಲ್ಲಿಯೂ ‘ಕೋಳಿ ಸಾಕಾಣಿಕೆ’ಯನ್ನು ‘ಕೃಷಿ’ ಎಂದು ಘೋಷಣೆ ಮಾಡಬೇಕು. ಸಾವಿರಾರು ಕೋಟಿ ರೂ.ಗಳು, ವ್ಯವಹಾರ ಮತ್ತು ಲಕ್ಷಾಂತರ ಜನರಿಗೆ ಸಂಬಂಧಪಟ್ಟ ಈ ಕ್ಷೇತ್ರದಲ್ಲಿ ‘ಸರ್ಕಾರ’ವೇ ಇಲ್ಲದ ಗಂಭೀರ ಲೋಪವನ್ನು ಸರಿಪಡಿಸಲು ಮತ್ತು ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ‘ಸಮಗ್ರ ಕಾನೂನುನು ರೂಪಿಸಬೇಕು, ರೈತರ ಸಾಕಾಣಿಕೆ ದರ ನಿಗದಿ ಇತ್ಯಾದಿ ಸಮಸ್ಯೆಗಳು ಪರಿಹಾರವಾಗಬೇಕು, ಸಂಕಷ್ಟದಲ್ಲಿ ಇರುವ ಕೋಳಿ ಸಾಗಾಣಿಕೆದಾರ ರೈತರಿಗೆ ಕೂಡಲೇ ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ರೀತಿಯಲ್ಲಿ ಪ್ರತಿ ಮಾಂಸದ ಕೋಳಿಗೆ ಪ್ರೋತ್ಸಾಹ ಧನವಾಗಿ 5 ರೂ. ಗಳನ್ನು ನೀಡಬೇಕೆಂದು ರಾಜ್ಯ ಸರ್ಕಾರದ ಜೊತೆಗೆ ಇತ್ತೀಚಿನ ಸಭೆಗಳಲ್ಲಿ ಒತ್ತಾಯಿಸಲಾಗಿದೆ. ನಮ್ಮ ಬೇಡಿಕೆಗಳ ಸರ್ಕಾರದ ಪರಿಶೀಲನೆಯ ಹಂತದಲ್ಲಿ ಇವೆ.

ಈ ಹಿನ್ನೆಲೆಯಲ್ಲಿ ಕೋಳಿ ಸಾಗಾಣಿಕೆದಾರ ರೈತರ ಬೇಡಿಕೆಗಳನ್ನು ಈ ಮುಂಬರುವ ಬಜೆಟಿನಲ್ಲಿ ಈಡೇರಿಸಲೇಬೇಕೆಂದು ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕೋಳಿ ಸಾಗಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಮಿತಿ ಒತ್ತಾಯಿಸುತ್ತದೆ ಎಂದರು.

ಜಿ.ಸಿ. ಬಯ್ಯಾರೆಡ್ಡಿ – ಗೌರವ ಅಧ್ಯಕ್ಷರು, ಪ್ರಕಾಶ್‌ ರೆಡ್ಡಿ ರಾಜ್ಯ – ಸಹ ಕಾರ್ಯದರ್ಶಿ, ಜೆ.ಸಿ. ಮಂಜುನಾಥ -ಅಧ್ಯಕ್ಷರು, ಕೃಷ್ಣಮೂರ್ತಿ-ಅಧ್ಯಕ್ಷರು ಕೋಲಾರ ಜಿಲ್ಲೆ, ಡಿ.ಕೆ. ಮುನಿವೆಂಕಟಗೌಡ – ರಾಜ್ಯ ಉಪಾಧ್ಯಕ್ಷರು, ಶ್ರೀಧರ್ ರೆಡ್ಡಿ- ಪ್ರಧಾನ ಕಾರ್ಯದರ್ಶಿ ಕೋಲಾರ ಜಿಲ್ಲೆ ವೆಂಕಟರಮಣ ರೆಡ್ಡಿ ಮತ್ತು ಯಶ್ವಂತ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ತಿತರಿದ್ದರು

City Today News – 9341997936

ಸಂಚಾರ ದಟ್ಟಣೆಯ ನೆಪದಲ್ಲಿ ಕೇವಲ ಟ್ರಾಕ್ಟರ್ ಗಳನ್ನು ನಿಷೇಧಿಸಿ ಬಡ ಕೂಲಿ ಕಾರ್ಮಿಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಿಂದ ಅನ್ನ ಅರಸಿ ಬೆಂಗಳೂರಿಗೆ ಬಂದ ಲಕ್ಷಾಂತರ ಮಂದಿ ಬಡವರು, ಕೂಲಿ ಕಾರ್ಮಿಕರ, ಟ್ರ್ಯಾಕ್ಟರ್ ಚಾಲಕರು, ಸಹಾಯಕರು ಇಂದು ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು ನಗರ ಪೊಲೀಸರ ಅವೈಜ್ಞಾನಿಕ ಸುತ್ತೊಲೆಯಿಂದ ನಮ್ಮ ಕನ್ನಡ ಮಣ್ಣಿನ ಮಕ್ಕಳಾದ ಬಡ ಕಾರ್ಮಿಕರು ಇಂದು ಬೀದಿ ಪಾಲಾಗುವಂತೆ ಅಗಿದೆ.

ಬೆಂಗಳೂರು ನಗರ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಅವರು ಬೆಂಗಳೂರು ನಗರದಲ್ಲಿ ಟ್ರ್ಯಾಕ್ಟರ್ ಸಂಚಾರ ನಿಷೇದಿಸಿ ಆದೇಶ ಹೊರಡಿಸಿದರಿಂದ ಅದನ್ನ ನಂಬಿ ಬದುಕು ಕಟ್ಟಿಕೊಂಡ ಲಕ್ಷಾಂತರ ಮಂದಿ ಬಡವರು ಇಂದು ಯಾವುದೇ ಕೆಲಸ ವಿಲ್ಲದೆ ಬೀದಿ ಪಾಲಾಗಿದ್ದಾರೆ.

ಬೆಂಗಳೂರು ನಗರದಲ್ಲಿ 40 ಸಾವಿರಕ್ಕೂ ಅಧಿಕ ಟ್ರಾಕ್ಟರ್ ಗಳು ಕೃಷಿ ಉತ್ಪನ, ಕಟ್ಟಡ ತ್ಯಾಜ್ಯ ಹಾಗೂ ಸರಕು ಸಾಗಾಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಬೆಂಗಳೂರಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಈ ಟ್ರಾಕ್ಟರ್ ಗಳು ಪ್ರಮುಖ ಪಾತ್ರವಹಿಸಿವೆ.

ಪ್ರತಿ ಟ್ರಾಕ್ಟರ್ ಗೆ ಒಬ್ಬ ಚಾಲಕ, ಒಬ್ಬ ಸಹಾಯಕ ಹಾಗೂ ಇಬ್ಬರು ಕೂಲಿ ಆಳು ಸಹಿತ ನಾಲ್ವರಿಗೆ ಕೆಲಸ ಅಂದರೆ 40 ಸಾವಿರ ಟ್ರಾಕ್ಟರ್ ನಿಂದ ಒಂದು ಲಕ್ಷ ಅರವತ್ತು ಸಾವಿರಕ್ಕೂ ಅಧಿಕ ಮಂದಿಗೆ ಕೈತುಂಬಾ ಕೆಲಸ ಅಷ್ಟು ಕುಟುಂಬಗಳಿಗೆ ಎರಡು ಹೊತ್ತಿನ ಊಟಕ್ಕ, ಮಕ್ಕಳ ಶಿಕ್ಷಣ ಹಾಗೂ ಆರೋಗ್ಯಕ್ಕೆ ದಾರಿಯಾಗಿದ್ದವು. ಏಕಾಏಕಿ ಈ ಟ್ರಾಕ್ಟರ್ ನಿಷೇದಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದರಿಂದ ಅಷ್ಟು ಕುಟುಂಬಗಳು ಬೀದಿ ಪಾಲಾಗುವಂತ ಆಗಿದೆ.

ಟ್ರಾಕ್ಟರ್ ನಿಷೇದದಿಂದ ಬೆಂಗಳೂರು ಸಂಚಾರ ದಟ್ಟಣೆ ನಿಷೇಧ ಸಾಧ್ಯವಿಲ್ಲ. ನಿಲುಗಡೆ ಸೌಲಭ್ಯ ವಿಲ್ಲದಿದ್ದರು ಮನೆಯಲ್ಲಿ ಮೂರು ನಾಲ್ಕು ಕಾರುಗಳು ಖರೀದಿಸಿ ಅದನ್ನು ಸಾರ್ವಜನಿಕ ರಸ್ತೆಯಲ್ಲಿ ನಿಲುಗಡೆ ಮಾಡಿ ಇಂದು ಕಾರಿನಲ್ಲಿ ಒಬ್ಬೊಬ್ಬರ ಸಂಚರಿಸುವುದರಿಂದ ಸಂಚಾರ ದಟ್ಟಣೆ ಸಮಸ್ಯೆಗೆ ಮೂಲ ಕಾರಣವಾಗಿದೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಮೊದಲು ಇದಕ್ಕೆ ಕಡಿವಾಣ ಹಾಕಬೇಕು.

ಪ್ರಮುಖ ಬೇಡಿಕೆಗಳು

*ನಿಗದಿತ ಸಮಯ ನಿಗದಿಪಡಿಸಿ ಟ್ರಾಕ್ಟರ್ ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. *ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡುವ ಟ್ರಾಕ್ಟರ್ ಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕು.*ಕಚೇರಿ ಸಮಯದಲ್ಲಿ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವುದಕ್ಕೆ ಕಡಿವಾಣ ಹಾಕಬೇಕು. *ಮೆಟ್ರೊ ರೈಲು, ಬಿಎಂಟಿಸಿ ಬಸ್‌ ಸಹಿತ ಸಾರ್ವಜನಿಕ ಸಂಚಾರಕ್ಕೆ ಉತ್ತೇಜನ ನೀಡಬೇಕು. *ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನ ನಿರ್ಗಮನದ ಸಮಯಕ್ಕೆ ತಕ್ಕಂತ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲುಗಳ ಸಮಯವನ್ನು ನಿಗದಿ ಮಾಡಬೇಕು.*ಸಂಚಾರ ದಟ್ಟಣೆಯ ನೆಪದಲ್ಲಿ ಕೇವಲ ಟ್ರಾಕ್ಟರ್ ಗಳನ್ನು ನಿಷೇಧಿಸಿ ಬಡ ಕೂಲಿ ಕಾರ್ಮಿಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಶ್ರೀ. ಎಂ.ಬಸವರಾಜ್ ಪಡುಕೋಟೆ ರಾಜ್ಯಾಧ್ಯಕ್ಷರು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಲಿಂಗಪ್ಪ ಹುಲ್ಲೂರು, ಗುರು ದೊಡ್ಡಮನಿ, ರೂಪೇಶ್ ರಾಜಣ್ಣ ಮತ್ತು ನಾಗರಾಜು ಉಪಸ್ಥಿತಿಯಿದ್ದರು

City Today News – 9341997936

ಕಾನೂನನ್ನು ಉಲ್ಲಂಘಿಸಿ,ದಲಿತ ಹೆಣ್ಣು ಮಗಳಿಗೆ ನೋವುಂಟು ಮಾಡಿ ಮೋಸ ಮಾಡಿರುವ ರೂಪಾ ರವರ ಪತಿ ಪ್ರವೀಣ್ ಮತ್ತು ಕುಟುಂಬದವರ ವಿರುಧ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ

ಬೆಂಗಳೂರು ನಗರ ಜಿಲ್ಲೆ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬೇಗೂರು ಮುಖ್ಯರಸ್ತೆಯ ಭಗವತಿ ಗಾರ್ಮೆಂಟ್ಸ್ ಮಾಲೀಕರಾದ ದೇವೇಂದ್ರ @ ರಾಜು ಹಾಗೂ ರಾಜೇಶ್ವರಿ ಕೋಂ ದೇವೇಂದ್ರ ಮತ್ತು ಪ್ರವೀಣ್‌ರವರು ಬೆಂಗಳೂರು ಸಿಟಿ ಪ್ರಿನ್ಸಿಪಲ್ ಫ್ಯಾಮಿಲಿ ಕೋರ್ಟ್‌ ಎಂ.ಸಿ ನಂ 2249,72022 ನ್ನು ಉಲ್ಲಂಘಿಸಿ ದಲಿತ ಹೆಣ್ಣು ಮಗಳಿಗೆ ನೋವುಂಟು ಮಾಡಿ ಮರುಮದುವೆ ಮಾಡಿ ಕಾನೂನನ್ನು ಉಲ್ಲಂಘಿಸಿರುವ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಿಕಾಗೋಷ್ಠಿಯ ಮುಖಾಂತರ ತಿಳಿಸಿ ಅನುಕೂಲ ಕಲ್ಪಿಸಿಕೊಡಲು ಕೋರಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬೇಗೂರು ಮುಖ್ಯರಸ್ತೆಯ ಭಗವತಿ ಗಾರ್ಮೆಂಟ್ಸ್ ಮಾಲೀಕರಾದ ದೇವೇಂದ್ರ @ ರಾಜು ಹಾಗೂ ರಾಜೇಶ್ವರಿ ಕೋಂ ದೇವೇಂದ್ರ ಮತ್ತು ಪ್ರವೀಣ್‌ರವರು ಬೆಂಗಳೂರು ಸಿಟಿ ಪ್ರಿನ್ಸಿಪಲ್ ಫ್ಯಾಮಿಲಿ ಕೋರ್ಟ್ ಆದೇಶದ ಸಂಖ್ಯೆ ಎಂ.ಸಿ ನಂ. 2249/2022 ಅನ್ನು ಉಲ್ಲಂಘಿಸಿ ದಲಿತ ಹೆಣ್ಣು ಮಗಳಿಗೆ ನೋವುಂಟು ಮಾಡಿ ಮರುಮದುವೆ ಮಾಡಿ ಕಾನೂನನ್ನು ಉಲ್ಲಂಘಿಸಿರುವ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಿಕಾಗೋಷ್ಠಿಯ ಮುಖಾಂತರ ತಿಳಿಸಲು ದಿನಾಂಕ 4/2/2023 ರ ಶನಿವಾರದಂದು ಬೆಳಿಗ್ಗೆ 12:00 ಗಂಟೆಗೆ ಪತ್ರಿಕಾಗೋಷ್ಠಿಯ ಮೂಲಕ ನೊಂದ ರೂಪ ಕೋಂ ಪ್ರವೀಣ್ ರವರಿಗೆ ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಪತ್ರಿಕಾಗೋಷ್ಠಿಯನ್ನು ಮಾಡಿ ರೂಪ ಹಾಗೂ ಅವರ ಪತಿಯಾದ ಪ್ರವೀಣ್ ರವರ ಸಂಸಾರಕ್ಕೆ ಮುಂಚೂಣಿಯನ್ನು ನೀಡದೆ ನಿರಾಕರಿಸಿರುವ ಪ್ರವೀಣ್‌ ರವರ ತಂದೆಯವರಾದ ದೇವೇಂದ್ರ ಹಾಗೂ ಅವರ ಪತ್ನಿ ರಾಜೇಶ್ವರಿ ರವರ ಮೇಲೆ ಕಾನೂನಿನಡಿಯಲ್ಲಿ ದೂರನ್ನು ದಾಖಲಿಸಲು ಅನುಕೂಲ ಕಲ್ಪಿಸಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜೈಭೀಮ್ ಅಖಿಲ ಭಾರತ ದಲಿತ ಕಿಯಾ ಸಮಿತಿಯ B.R.ಮುನಿರಾಜ, ರಾಷ್ಟ್ರೀಯ ಅಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

ನಮ್ಮ ಬೇಡಿಕೆಯನ್ನು ಬಜೆಟ್ ಮುಂಚಿತವಾಗಿ ಘೋಷಣೆ ಮಾಡಬೇಕು. ಒಂದೊಮ್ಮೆ ನಮ್ಮ ಬೇಡಿಕೆಗೆ ಮಾನ್ಯ ಘನ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಬಜೆಟ್ ಮುಂಚಿತವಾಗಿ ಅನಿರ್ದಿಷ್ಟವಾಗಿ ಮುಷ್ಕರವನ್ನು ಹಮ್ಮಿಕೊಳ್ಳುವುದಾಗಿ ಸರಕಾರಕ್ಕೆ ಎಚ್ಚರಿಕೆ

ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಸುಮಾರು 44 ವರ್ಷಗಳಿಂದ ಗ್ರಾಮ ಸಹಾಯಕರಾಗಿ ಕೆಲಸ ಮಾಡಿಕೊಂಡು ಬಂದಿರುತ್ತೇವೆ. ನಮಗೆ ಆರಂಭದಲ್ಲಿ 100 ರೂಪಾಯಿ ವೇತನ ಕೊಟ್ಟು ಈಗ ಪ್ರಸ್ತುತ 13,000 ಸಾವಿರ ರೂಪಾಯಿ ವೇತನ ನಮಗೆ ಸರ್ಕಾರ ನೀಡುತ್ತಿದೆ. ಇಷ್ಟು ಕನಿಷ್ಠ ವೇತನದಲ್ಲಿ ನಾವು ದಿನದ 24 ತಾಸು ಕೆಲಸವನ್ನು ನಿರ್ವಹಿಸುತ್ತ ಬರುತ್ತಿದ್ದೇವೆ. ಈ ಅಲ್ಪವೇತನದಿಂದ ಈಗಿನ ಬೆಲೆ ಏರಿಕೆಯ ದಿನಮಾನದಲ್ಲಿ ಕುಟುಂಬದ ನಿರ್ವಹಣೆ ಮಾಡುವುದು ಬಹಳ ಕಷ್ಟದಾಯಕವಾಗಿರುತ್ತದೆ. ಮತ್ತು ನಮಗೆ ಯಾವುದೇ ಸೇವಾ ಭದ್ರತೆ ಇರುವುದಿಲ್ಲ. ಸರಕಾರದ ಯಾವುದೇ ಸೌಲಭ್ಯವನ್ನು ಸಹ ನಾವು ಪಡೆಯುತ್ತಿಲ್ಲ. ನಮ್ಮ ಗ್ರಾಮ ಸಹಾಯಕರು ತುಂಬಾ ಜನ ಶೇ.80% ಗ್ರಾಮ ಸಹಾಯಕರು ವಿದ್ಯಾವಂತರು ಇರುತ್ತಾರೆ. ವಿದ್ಯೆಗೆ ತಕ್ಕಂತೆ ಹುದ್ದೆಯಾಗಲಿ ಅಥವಾ ವೇತನ ಶ್ರೇಣಿಯನ್ನು ಸರ್ಕಾರ ನೀಡುತ್ತಿಲ್ಲ ನಾವು ಈ ಹಿಂದೆ ಹಲವಾರು ಸಹ ಮುಷ್ಕರ ಹೂಡಲಾಗಿ ಆ ಮುಷ್ಕರದಲ್ಲಿ ಇಲಾಖೆಗೆ ಸಂಬಂಧಪಟ್ಟ ಮಂತ್ರಿಗಳು ಹಾಗೂ ಅಧಿಕಾರಿಗಳು ಬಂದು ನಿಮಗೆ ಸೇವಾ ಭದ್ರತೆ ಕೊಡುವುದಾಗಿ ಆಶ್ವಾಸನೆ ನೀಡಿದಾಗಲೂ ಸಹ ನಮಗೆ ಇನ್ನೂ ತನಕ ಸರಕಾರ ನಮ್ಮ ಬೇಡಿಕೆ ಈಡೇರಿಸಿರುವುದಿಲ್ಲ. ಮುಂಬರುವ ಫೆಬ್ರವರಿ ಬಜೆಟ್‌ನಲ್ಲಿ ನಮಗೆ ಸೇವಾ ಭದ್ರತೆ ಒದಗಿಸಿಕೊಂಡು ನಮ್ಮನ್ನು ಸರಕಾರಿ ನೌಕರರು ಅಂತ ಪರಿಗಣಿಸಬೇಕಾಗಿ ನಮ್ಮ ಬೇಡಿಕೆ ಇರುತ್ತದೆ. ಹಾಗೂ ಈ ನಮ್ಮ ಬೇಡಿಕೆಯನ್ನು ಬಜೆಟ್ ಮುಂಚಿತವಾಗಿ ಘೋಷಣೆ ಮಾಡಬೇಕು. ಒಂದೊಮ್ಮೆ ನಮ್ಮ ಬೇಡಿಕೆಗೆ ಮಾನ್ಯ ಘನ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಬಜೆಟ್ ಮುಂಚಿತವಾಗಿ ಅನಿರ್ದಿಷ್ಟವಾಗಿ ಮುಷ್ಕರವನ್ನು ಹಮ್ಮಿಕೊಳ್ಳುವುದಾಗಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತೇವೆ ಎಂದು ಹೆಚ್.ಎನ್.ದೇವರಾಜು- ರಾಜ್ಯಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

Protest Under the banner of AICCTU BY Illegally terminated workers of Yazaki India Pvt Ltd plant of Lakkenahalli of Ramnagara

Illegally terminated workers of Yazaki India Pvt Ltd plant of Lakkenahalli of Ramnagara district of Karnataka have been staging a protest under the banner of AICCTU outside the factory gate since 26th December. Last month, about 153 workers were illegally and abruptly terminated by this unit. Yazaki is a Japan based company that manufactures automobile wiring equipment.

Besides the termination without notice, the workers are plagued with myriad other issues as Yazaki does not concern itself much with sticking to legal labour practices. It employs about 1500 workmen in this manner, terming them “trainee operator” who in fact perform core jobs which are the same as the permanent workers. These workers have all been working continuously for various periods extending to three years. These workers are also denied other benefits extended to the permanent workmen, including production incentive, leave facilities, bonus, shoes/uniforms etc. These workers do overtime work without double the pay and are forced to work for continuous double (16 hours) or sometimes even triple (24 hours) shifts. The list continues.

The factory was initially in Bangalore district in the outskirts, later shifted to Ramnagara in January, 2022. At this time, all the workers were also shifted to the new unit. They were given assurances that they would be continued in work, and their salary would be increased and that they would eventually be made permanent workmen. These workers are mostly intra-state migrants hailing from Gulbarga, Belgaum, Chikkamagaluru, and other districts of Karnataka.

53 workers were not able to punch-out after their shift in the biometric attendance machine on the night of 13.12.2022. Shockingly, on presenting themselves to the factory on 14.12.2022 at 6.00 am, these workers were told by the HR Assistant of the management that they have been terminated. About 100 other workers who saw what was happening to the 53 workers came in solidarity with them and were sacked.

Due to the pressure built by the movement, management was forced to assure in a conciliation meeting with the Deputy Labour commissioner (DLC) that all the workers will be taken back. As of now around 30 workers have been called back for work. However, inspite of recorded assurances, there is no more progress in taking the workers back since the last three weeks. It is becoming increasingly difficult for them to survive without a salary as they are mostly from different districts of Karnataka. Currently, the demand is to complete the process of reinstating all the workers immediately, as assured.

Karanataka General Labour Union (Yazaki Unit) AICCTU

City Today News – 9341997936