ಲಾರಿ ಮಾಲೀಕರು ಅನುಭವಿಸುತ್ತಿರುವ ತೊಂದರೆಗಳನ್ನು ದಿ : 30-04-2022ರ ಒಳಗೆ ಪರಿಹಾರ ನೀಡದಿದ್ದಲ್ಲಿ ದಿ : 01-05-2022ರಿಂದ ಸ್ಥಳೀಯ ಲಾರಿಗಳ ಸ್ಥಗಿತ

ಈ ಹಿಂದಿನ 2 ವರ್ಷಗಳ ಅವಧಿಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಇಡೀ ರಾಷ್ಟ್ರ ಮತ್ತು ರಾಜ್ಯದಲ್ಲಿ ಆರ್ಥಿಕವಾಗಿ ಜನರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ . ಲಾರಿ ಮಾಲೀಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಂದು ಅಥವಾ ಎರಡು ವಾಹನಗಳನ್ನು ಹೊಂದಿರುವವರು ಹೆಚ್ಚಾಗಿ ಇರುತ್ತಾರೆ . ಈ ವಾಹನಗಳು ಸಹ ಮಾಸಿಕ ಕಂತಿನ ರೂಪದಲ್ಲಿ ( Hire Purchase ) ಸಾಲ ಪಡೆದು ನಡೆಸುತ್ತಿರುತ್ತಾರೆ . ಇವರು ಒಂದು ರೀತಿಯ ಸ್ವ ಉದ್ಯೋಗದಂತೆ ಜೀವನ ನಡೆಸುತ್ತಿದ್ದಾರೆ . ಆದರೆ ಸರ್ಕಾರದ ಕೆಲವು ನೀತಿಗಳಿಂದ ಲಾರಿಗಳನ್ನು ನಡೆಸಿ ಉದ್ದಿಮೆಯಲ್ಲಿ ಮುಂದುವರಿಯಲು ಮತ್ತು ಜೀವನ ಸಾಗಿಸಲು ಕಷ್ಟವಾಗಿರುತ್ತದೆ . ಸಾಮಾನ್ಯವಾಗಿ ಸರಕು ಸಾಗಾಣಿಕೆ ವಾಹನಗಳನ್ನು ನಾಲ್ಕು ವಿಧಾನಗಳಲ್ಲಿ ಬಳಸುತ್ತಿದ್ದಾರೆ . ಹೊಸ ವಾಹನವನ್ನು ರಾಷ್ಟ್ರೀಯ ಮಿತಿಯಲ್ಲಿ , ಸುಮಾರು ನಾಲೈದು ವರ್ಷಗಳ ನಂತರ ಅಂತರ ರಾಜ್ಯದಲ್ಲಿ , ತದನಂತರ ರಾಜ್ಯ ಮಟ್ಟದಲ್ಲಿ ಮತ್ತು ಕೊನೆಯದಾಗಿ ಹಳೆಯ ವಾಹನಗಳನ್ನು ನಗರ ಪಟ್ಟಣ ಪ್ರದೇಶಗಳಲ್ಲಿ 50 ಕಿ . ಮೀ ಒಳಗಿನ ಅಂತರದಲ್ಲಿ ಅಂದರೆ , ರೈಲ್ವೆ ಗೂಡ್ಸ್‌ಶೆಡ್ , ಎ.ಪಿ.ಎಂ.ಸಿ ಯಾರ್ಡ್ ಮತ್ತು ಕಟ್ಟಡ ಸಾಮಾಗ್ರಿಗಳನ್ನು ಸಾಗಿಸಲು ಉದ್ಯಮವನ್ನು ನಡೆಸುತ್ತಿದ್ದಾರೆ . ಇಂದಿನ ಸಂಚಾರ ದಟ್ಟಣೆಯಲ್ಲಿ ಈ 50 ಕಿ.ಮೀ. ಒಳಗಡೆ ಸಂಚರಿಸುವ ವಾಹನಗಳು ಒಂದೇ ಒಂದು ಟ್ರಿಪ್ ಮಾಡಲು ಸಾಧ್ಯವಾಗುತ್ತದೆ . ಈ ಹಳೇ ವಾಹನಗಳಿಗೆ ಸರ್ಕಾರ ಸಂಬಧಪಟ್ಟ ಫೀಸುಗಳನ್ನು 01-04-2022ರಿಂದ 16 ಪಟ್ಟು ಹೆಚ್ಚಳ ಮಾಡಿರುವುದು ಬಡ ಲಾರಿ ಮಾಲೀಕರ ಮೇಲೆ ಪ್ರಹಾರ ಮಾಡಿದಂತಾಗಿದೆ . ಇದರಿಂದ ನಾವುಗಳು , ಉದ್ದಿಮೆಯಲ್ಲಿ ಉಳಿಯುವುದೇ ಕಷ್ಟವಾಗಿರುತ್ತದೆ . ಈ ಹಳೆಯ ವಾಹನಗಳ ಫಿಟ್‌ನೆಸ್‌ ಸರ್ಟಿಫಿಕೇಟ್‌ನ್ನು ಅವಧಿ ಕಡಿಮೆ ಮಾಡಿ ಆಗಾಗ ಸೂಕ್ತ ರಿಪೇರಿ ಮಾಡಿಸಲು ಕಾನೂನಿನಲ್ಲಿ ಅವಕಾಶವಿದೆ . ಕೇಂದ್ರ ಸರ್ಕಾರ ಯಾರದೋ ಒತ್ತಡಕ್ಕೆ ಮಣಿದು ರಸ್ತೆ ಸರಕು ಸಾಗಾಣಿಕೆ ವಾಹನಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಇದ್ದ ನಿಯಮಗಳನ್ನು ಉಲ್ಲಂಘನೆ ಮಾಡಿದಾಗ ವಿಧಿಸುತ್ತಿದ್ದ ದಂಡವು ರೂ .100 ರಿಂದ ರೂ .500 ರವರೆಗೆ ಇದ್ದಿತು . ಈ ದಂಡಗಳನ್ನು ಕೇಂದ್ರ ಸರ್ಕಾರ ಕನಿಷ್ಟ ರೂ .5,000 / – ದಿಂದ ರೂ .25,000 / -ದವರೆಗೆ ಏರಿಸಿ ಈ ಲಾರಿ ಮಾಲೀಕರು ಈ ಉದ್ದಿಮೆಯನ್ನು ನಡೆಸಲು ಕಷ್ಟಕರವಾದ ಸನ್ನಿವೇಶವನ್ನು ಸೃಷ್ಟಿಮಾಡಿರುತ್ತಾರೆ . ಮೋಟಾರು ವಾಹನ ಇಲಾಖಾಧಿಕಾರಿಗಳು ಮೇಲ್ಕಂಡ ಹೆಚ್ಚಿಸಿದ ದಂಡದ ಮೊತ್ತಗಳನ್ನು ದುರುಪಯೋಗಪಡಿಸಿ ಕೊಂಡು ದಿನನಿತ್ಯ ಲಾರಿ ಮಾಲೀಕರನ್ನು ಸುಲಿಗೆ ಮಾಡುತ್ತಿದ್ದಾರೆ . ಈ ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂದರೆ ನಾವು ನಮ್ಮ ಲಾರಿಗಳನ್ನು ಓಡಿಸಿದಷ್ಟು ಸಾಲಗಾರರಾಗುತ್ತಿದ್ದೇವೆ , ಸರ್ಕಾರಿ ಅಧಿಕಾರಿಗಳು ಮಾತ್ರ ಖುಷಿಯಿಂದ ಇದ್ದಾರೆ . ಡಿಸೇಲ್ ಮತ್ತು ಪೆಟ್ರೋಲ್ ದರಗಳನ್ನು ದಿನದ ಲೆಕ್ಕದಲ್ಲಿ ಏರಿಕೆ ಮಾಡುತ್ತಿದ್ದು , ಇದನ್ನು ಸರಿದೂಗಿಸಿಕೊಂಡು ಸರಕು ಸಾಗಾಣೆ ಉದ್ಯಮವನ್ನು ನಡೆಸಲು ಕಷ್ಟವಾಗಿರುತ್ತದೆ . ಮೇಲ್ಕಂಡ ಈ ಎಲ್ಲಾ ಕಾರಣಗಳಿಂದಾಗಿ ನಮಗೆ ಇತ್ತೀಚೆಗೆ ರಸ್ತೆಯಲ್ಲಿ ಸರಕು ಸಾಗಾಣಿಕೆ ಉದ್ಯಮವನ್ನು ನಡೆಸಲು ಕಷ್ಟವಾಗಿರುವುದರಿಂದ ಸರ್ಕಾರವು ಕೂಲಂಕುಶವಾಗಿ ಪರಿಶೀಲಿಸಿ ದಿನಾಂಕ : 30-04-2022 ರೊಳಗೆ ಪರಿಹಾರ ನೀಡಬೇಕು , ಇಲ್ಲವಾದಲ್ಲಿ ನಾವು ನಮ್ಮ ಸ್ಥಳಿಯ ಸರಕು ಸಾಗಾಣಿಕೆ ಕೆಲಸವನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಬಿ.ಚನ್ನಾರೆಡ್ಡಿ – ಗೌರವ ಅಧ್ಯಕ್ಷರು ಸಿ.ನವೀನ್ ರೆಡ್ಡಿ – ಅಧ್ಯಕ್ಷರು ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು

City Today News

9341997936

ಟಿಪ್ಪು ಸುಲ್ತಾನ್ ರವರ ಕುರಿತ ಕೆಲವು ವಿಷಯಗಳನ್ನು ತೆಗೆಯುತ್ತಿರುವ ‘ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ‘ ಯ ನಿಲುವನ್ನು ಖಂಡಿಸಿ ಪತ್ರಿಕಾ ಗೋಷ್ಠಿ

ಮೈಸೂರು ಹುಲಿ ಟಿಪ್ಪುಸುಲ್ತಾನ್ ರವರ ಹೆಸರಿನಲ್ಲಿ ಹೆಸರರಚುವ ಕೆಲಸವನ್ನು ಒಂದು ವರ್ಗ ನಿರಂತರವಾಗಿ ಮಾಡುತ್ತ ಬಂದಿದೆ . ಅದರ ಭಾಗವಾಗಿಯೇ ಇತಿಹಾಸಕಾರರಲ್ಲದ ಸೃಜ ಚರಿತ್ರೆಯನ್ನು ತಿರುಚುವ ಕಲ ವ್ಯಕ್ತಿಗಳು ಟಿಪ್ಪು ರವರಿಗೆ ಮೈಸೂರು ಹುಲಿ ಎಂಬ ಬಿರುದು ಕೊಟ್ಟವರಾರೆಂದು ಪ್ರಶ್ನಿಸುತ್ತಾರೆ , ಹಾಗೆ ಕೇಳುವ ಹಕ್ಕು ಇಲದ ಇಂತಹ ವ್ಯಕ್ತಿಗಳು ಪಠ್ಯಪುಸ್ತಕದಿಂದ ಟಿಪ್ಪುರನ್ನು ಮರೆಮಾಚುವ ಕೃತ್ಯದ ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡುತ್ತಿದ್ದಾರೆ ,

ಪ್ರಚಂಡ ಹೋರಾಟಗಾರರಾಗಿದ್ದ , ಜನಪರ ನವ ರಾಜ್ಯ ಆಡಳಿತ ವ್ಯವಸ್ಥೆಯನ್ನು ಈ ನಾಡಿಗೆ ಪರಿಚಯಿ ಸಿದ , ರೇಷ್ಮೆ ಕೃಷಿಯನ್ನು ಅಭಿವೃದ್ಧಿಗೊಳಿಸಿ ಕೋಟ್ಯಂತರ ರೈತರಿಗೆ ನೇರವಾದ , ರಾಕೆಟ್ ತಂತ್ರಜ್ಞಾನವನ್ನು ಮೊದಲಿಗೆ ಪರಿಚಯಿಸಿದ ಸ್ವಾಭಿಮಾನಿ , ಕನ್ನಡ ಪರ , ಭಾರತದ ಸ್ವತಂತ್ರ ಹೋರಾಟ ಗಾರ ಟಿಪ್ಪು ಸುಲ್ತಾನ್ ರನ್ನು ಮೈಸೂರಿನ ಹುಲಿಯೆಂದು ಮೈಸೂರಿನ ಮಹಾಜನತೆಯೇ ಕರೆದವರು .

ನಮ್ಮ ದೇಶವಾಳಿದ ಟಿಪ್ಪುವಿನ ಪರಮ ವೈರಿಗಳಾಗಿದ್ದ ಬ್ರಿಟೀಷರೇ ಒಪ್ಪಿಕೊಂಡು ಹಾಗಂತ ದಾಖಲಿಸಿದ್ದಾರೆ . ಸುಮಾರು ಭಾಷೆಗಳಲ್ಲಿ ಸಾವಿರಾರು ಪುಸ್ತಕಗಳಲ್ಲಿ ಇದನ್ನು ದಾಖಲಿಸಲಾಗಿದೆ . ಒಂದು ವರ್ಗ ಟಿಪ್ಪುರನ್ನು ಪಠ್ಯ ಪುಸ್ತಕದಿಂದ ಅಳಿಸಿದ ಮಾತ್ರಕ್ಕೆ ಚರಿತ್ರೆಯೇ ಬದಲಾಗಿ ಬಿಡುವುದಿಲ್ಲ ಟಿಪ್ಪು ಸುಲ್ತಾನ್ ಕನ್ನಡ ನಾಡಿಗೆ ಆ ಮೂಲಕ ಭಾರತಕ್ಕೆ ಕೊಟ್ಟ ಕೊಡುಗೆ- ಸಾಧನೆಗಳನ್ನು ಜನಗಳಿಗೆ ತಿಳಿಸುವ ಕೆಲಸವನ್ನು ಮಾಡುವಂಥವರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ .

ನೈಜ ಇತಿಹಾಸದ ಬುನಾದಿಯ ಮೇಲೆ ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ನಾವಲಾ ಕೈಜೋಡಿಸಿದ್ದೇವೆ . ಈ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ‘ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ‘ ಯ ಶಾಲಾ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ರ ಕುರಿತಾದ ಕೆಲವು ಅಂಶಗಳನ್ನು ತೆಗೆಯುತ್ತಿರುವ ನಿಲುವನ್ನು ನಾವು ಖಂಡಿಸುತ್ತೇವೆ .

ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರು ಸಾಹಿಬ್ ಜಾದ ಸಯದ್ ಮನ್ಸೂರ್ ಅಲಿ ರವರು , ರಾಷ್ಟ್ರೀಯ ಅಧ್ಯಕ್ಷರು , ತಹರಿಕ್ -ಇ – ಖುದಾ ದಾದ್ ಹಾಗು ಟಿಪ್ಪುಸುಲ್ತಾನ್ ವಂಶಸ್ಥರು . ಸುಭಾಷ್ K R ರವರು , ವಕೀಲರು ಅನಂದ್ ಸಿದ್ಧಾರ್ಥ ಮಾಲೂರು ರವರು , ಯುವ ಮುಖಂಡರು ಫೈರೋಜ್ ಖಾನ್ ರವರು , ಅಧ್ಯಕ್ಷರು , ಜೈ ಜನ್ಮ ಭೂಮಿ ರಕ್ಷಣಾ ಪಡೆ , ಡಾ . ಖಾಸಿಂ ಸಾಬ್ ರವರು , ಸಂಚಾಲಕರು , ಯೂಥ್ ಬ್ಯುಸಿನೆಸ್ ಚೇಂಬರ್ , ಬೆಂಗಳೂರು . ವ್ಯವಸ್ಥಾಪಕರು : ತಹರಿಕ್ -ಇ – ಖುದಾ ದದ್ , ಸಂಘಟನ – ಕರ್ನಾಟಕ

City Today News

9341997936

ಹಿಂದೂ ಧರ್ಮದ, ಶ್ರೀರಾಮ , ಶ್ರೀ ಕೃಷ್ಣರ ಬಗ್ಗೆ ಈ ನೆಲದಲ್ಲಿ ಮಾತಾನಾಡುವಾಗ ಎಚ್ಚರವಿರಲಿ ಎಂದು ಎಚ್ಚರಿಸುತ್ತೇವೆ

ರಾಜ್ಯ ಸರ್ಕಾರವು ಇತ್ತೀಚೆಗೆ ” ಭಗವದ್ಗೀತೆ ” ಯನ್ನು ಪಠ್ಯ ಪುಸ್ತಕಕ್ಕೆ ಅಳವಡಿಸವ ವಿಚಾರವನ್ನು ನಾವೂ ಪೂರ್ಣವಾಗಿ ಸ್ವಾಗತಿಸುತ್ತೇವೆ ಮತ್ತು ಪೂರ್ಣ ಪ್ರಮಾಣವಾಗಿ ಬೆಂಬಲಸುತ್ತೇವೆ ಆದರೆ ಕೆಲ ಕಾಂಗ್ರೆಸಿಗರು ಪ್ರಾರಂಭದಲ್ಲಿ ವಿರೋಧಿಸಿ ಹೀಗ ಅನಿವಾರ್ಯ ಮತ್ತು ಅಸಾಯಕತೆಯಿಂದ ಒಪ್ಪಿಕೊಡಿರುತ್ತಾರೆ ಆದರೆ ಇನ್ನು ಕೆಲವರು ಉದಾಹರಣೆಗೆ ಮಾಜಿ ಸಚಿವ ತನ್ದಿರ್ ಸೇರ್ ಭಗವದ್ಗೀತೆ ಪಠ್ಯ ಪುಸ್ತಕಕ್ಕೆ ಅಳವಡಿಸಿತ್ತಿರುವುದು ” ಕರೋನ ವೈರಸ್‌ಗಿಂತ ದೊಡ್ಡ ಮಾಹಾಮಾರಿ ಎಂದು ಹೇಳ ಭಾರತದ ಪವಿತ್ರ ಗ್ರಂಥವನ್ನು ಅವಮಾನ ಮಾಡಿ ಹಿಂದುಗಳ ಬಾವನೆಗೆ ತೀವ್ರ ನೋವುಂಟು ಮಾಡಿರುತ್ತಾರೆ . ತನ್ದಿರ್ ಸೇಠ ಕೂಡಲೆ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಅವರಿಗೆ ಮಸಿ ಬಳಿಯುವ ಕೆಲಸ ಮಾಡಿತ್ತೆವೆ ಅವರು ಸಾರ್ವಜನಿಕ ಸಭೆಗಳಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ .

ಇದೇ ರೀತಿ ಮೈಸೂರಿನ ಉರಿಅಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜೀ ಇತ್ತೀಚೆಗೆ ತಮ್ಮ ಮಠಕ್ಕೆ ಇಸ್ಲಾನ್ ನೀಡಿದ 1000 ಭಗವದ್ಗೀತೆಗಳನ್ನು ಅನಿಷ್ಠ ಎಂದು ಸುಟ್ಟು ಹಾಕಿದ್ದೇವೆ ಎಂದು ಮಾದ್ಯಮ ಹೇಳಿಕೆ ನೀಡಿ ನಮ್ಮನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ ಇದರಿಂದ ಪವಿತ್ರ ಹಿಂದು ಧರ್ಮಕ್ಕೆ ಅವಮಾನ ಮಾಡಿರುವ ಸ್ವಾಮಿಜೀ ಶ್ರೀರಾಮ ಶ್ರೀ ಕೃಷ್ಣ ಮತ್ತು ಹಿಂದು ಧರ್ಮದ ಸಂಪ್ರಾದಾಯದಂತೆ ಕಾವಿ ಧರಿಸಿ ಅದರ ಪರಿಜ್ಞಾನವಿಲ್ಲದಂತೆ ನಡೆದು ಕೊಂಡಿರುತ್ತಾರೆ ಕಾವಿ ದರಿಸಲು ಯೋಗ್ಯರಲ್ಲದ ಸ್ವಾಮೀಜಿ ಕಾಪಿ ಕಳಚಲ ಇಲ್ಲವಾದರೆ ಹಿಂದುಗಳು ಕಳಚಿಸುತ್ತಾರೆ ಮತ್ತು ಯಾರೆ ಭಗವದ್ಗೀತೆಯನ್ನು ಸುಟ್ಟು ಹಾಕಿದ್ದೇವೆ ಎಂದು ಹೇಳಿಕೆ ಕೊಡುವುದಾಗಲಿ ಅಥವ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಹಿಂದು ಧರ್ಮದ ವಿರುದ್ಧ ವಿಕೃತಿಯನ್ನು ಮೆರೆದರೆ ಸರ್ಕಾರ ಅಂತಹವರನ್ನು ಕಾನುನಾಥ್ಮಕವಾಗಿ ಗುಂಡಿಕ್ಕಿ ಕೊಲ್ಲಬೇಕು ಇಲ್ಲವಾದಲ್ಲಿ ನಮಗೆ ಅನುಮತಿ ನೀಡಲ , ಹೀಗೆ ಹಿಂದುಗಳಿಗೆ ಪದೆ ಪದೆ ನೋವನ್ನುಂಟು ಮಾಡುವುದು , ಅವಹೇಳನ ಕಾರಿಯಾಗಿ ಹೇಳಿಕೆ ನೀಡುವುದು , ಭಗವದ್ಗೀತೆಯನ್ನು ಸುಡುವುದು , ಮಾಡುವುದಾದರೆ ನಾವುಗಳು ಅವರನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವ ಎಚ್ಚರಿಕೆಯನ್ನು ನೀಡುತ್ತಿದೇವೆ ಭಗವದ್ಗೀತೆಯನ್ನು ಗುಜರಾತ್ ಮಾದರಿಯಲ್ಲಿ ಅಳವಡಿಸಬೇಕು ಎಷ್ಟೇ ಒತ್ತಡ ಇದ್ದರು ವೀರೋಧವಿದ್ದರು ಸರ್ಕಾರ ಇದನ್ನು ಹಿಂಪಡೆಯಬಾರದು ಪಾಶ್ಚಿಮಾತ್ಯ ದೇಶಗಳಲ್ಲಿ ಸಿಗುವಾ ಗೌರವ ಶ್ರೀ ಕೃಷ್ಣ ಗೀತೋಪದೇಶ ಮಾಡಿದ ಪವಿತ್ರ ಭಾರತದ ನೆಲದಲ್ಲಿ ಸಿಗುತ್ತಿಲ್ಲ ಎನ್ನುವುದು ತೀವ್ರ ನೋವಿನ ಸಂಗತಿಯಾಗಿದೆ . ಕಾಂಗ್ರೇಸಿಗರು ಇಂತಹ ವಿಚಾರದಲ್ಲಿ ಮತಬ್ಯಾಂಕ್ ಗೊಸ್ಕರ ಕ್ರೈಸ್ತರನ್ನು ಮತ್ತು ಮುಸ್ಲಿಂರನ್ನು ಒಲೈಸುವ ಕೆಲಸ ಬಿಟ್ಟು ನಮ್ಮ ಸಂಸ್ಕೃುತಿ ಸಂಪ್ರಾದಾಯಕ್ಕೆ ನಮ್ಮ ಧರ್ಮಕ್ಕೆ ಗೌರವ ನೀಡಲ . ತಲೆಯಲ್ಲಿ ವಿಚಾರವಿಲ್ಲದ , ತಿರುಳಲ್ಲದ ಬಾಅಷ ಹೇಳಿಕೆ ಕೊಡುವುದನ್ನು ಈ ಕ್ಷಣವೇ ನಿಲ್ಲಸಲ ಇನ್ನೂ ಮುಂದೆ ಯಾರೆ ಹಿಂದೂ ಧರ್ಮದ ಬಗ್ಗೆ , ಶ್ರೀರಾಮ , ಶ್ರೀ ಕೃಷ್ಣರ ಬಗ್ಗೆ ಅಚಹೇಳನಕಾರಿಯಾಗಿ ಅಥವ ಅವಮಾನ ಮಾಡಿದ್ದೆ ಆದಲ್ಲಿ ಅಂತಹವರಿಗೆ ತಕ್ಕ ಪಾಠ ಕಅಸುವ ಕೆಲಸ ಮಾಡುತ್ತೇವೆ ಅವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರು . ಈ ನೆಲದಲ್ಲಿ ಮಾತಾನಾಡುವಾಗ ಎಚ್ಚರವಿರಲಿ ಎಂದು ಎಚ್ಚರಿಸುತ್ತೇವೆ ಎಂದು ಅಮ್ಮನಹಟ್ಟಿ ಹರೀಶ್ ರಾಜ್ಯಾಧ್ಯಕ್ಷರು ಕರ್ನಾಟಕ ಯಾದವ ಯುವ ಸೇವ ಬೆಂಗಳೂರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಶ್ರೀ ಋಷಿಕುಮಾರ ಮಾಹಾಸ್ವಾಮೀಜಿಗಳು ( ಕಾಳ ಮಠ , ಬೆಂಗಳೂರು ), ಶ್ರೀ ಶಿವಕುಮಾರ್ ( ಮಾಜಿ ಟಿ.ಟಿ.ಎಂ.ಪಿ. ಸದಸ್ಯರು ), ಶ್ರೀ ಶಿವರಾಜ್ ಎನ್ ( ಉಪಾಧ್ಯಕ್ಷರು , ಬಿ.ಜೆ.ಪಿ. ದಾ.ವಿ , ಕ್ಷೇತ್ರ , ಒಬಿಸಿ ), ಶ್ರೀ ಪಾರ್ಥಣ್ಣನವರು ( ಯಾದವ ಮುಖಂಡರು ),ಶ್ರೀ ವೀರೇಶ್ ( ಬಿ.ಜೆ.ಪಿ. ಮುಖಂಡರು ) ಪತ್ರಿಕಾ ಗೋಷ್ಠಿಯಲ್ಲಿ ಉಪಸ್ತಿತಿಯಿದ್ದರು.

City Today News

9341997936

544 ಜನ ಒಳಚರಂಡಿ ಸಹಾಯಕರನ್ನು ಖಾಯಂಗೊಳಿಸಲು ಒತ್ತಾಯಿಸಿ ಬೆಂಗಳೂರಿನ ” ಫ್ರೀಡಂ ಪಾರ್ಕ್ ಆವರಣ ” ದಲ್ಲಿ ದಿನಾಂಕ 28-03-2022ರಂದು ಪ್ರತಿಭಟನೆಯನ್ನು

ಒಳ ಚರಂಡಿ ವಿಭಾಗದಲ್ಲಿ ಸ್ವಚ್ಚತಾ ಕೆಲಸವನ್ನು ನಿರ್ವಹಿಸುತ್ತಿರುವ ಒಳಚರಂಡಿ ಸಹಾಯಕರು ಕರ್ನಾಟಕ ರಾಜ್ಯಾದ್ಯಂತ ತಮ್ಮ ಜೀವದ ಅಂಗು ತೊರೆದು ಮ್ಯಾನ್ ಹೋಲ್‌ಗಳಲ್ಲಿ ಕೆಲಸ ನಿರ್ವಹಿಸುವಾಗ ಸಾವನ್ನಪ್ಪಿರುತ್ತಾರೆ . ಪ್ರತಿನಿತ್ಯ ಮಲ – ಮೂತ್ರ ಶುಚಿತ್ವ ಮಾಡುತ್ತಿದ್ದು , ಈ ಕೆಲಸವು ತುಂಬಾ ಕಷ್ಟಕರವಾದ ಕೆಲಸವಾಗಿರುತ್ತದೆ . ಆರೋಗ್ಯ ಹಾಳಾಗಿ ಕೈಬೆರಳುಗಳು ತುಂಡಾಗಿ ಅನೇಕ ಕಾರ್ಮಿಕರುಗಳಿಗೆ ವಾಸಿಯಾಗದಂತಹ ಚರ್ಮರೋಗವು ಬಂದಿರುತ್ತದೆ . ಕರ್ನಾಟಕ ರಾಜ್ಯ 10 ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಒಳ ಚರಂಡಿ ಕಾರ್ಮಿಕರು 1 ವರ್ಷದಲ್ಲಿ ಸುಮಾರು 5-6 ಜನ ಮರಣ ಹೊಂದುತ್ತಿರುತ್ತಾರೆ . ಆದರೆ ಸರ್ಕಾರವು ನಮ್ಮ ಕೆಲಸವನ್ನು ಯು.ಜಿ.ಡಿ. ಹೆಲ್ಸರ್‌ಗಳೆಂದು ಪರಿಗಣಿಸಿರುವುದರಿಂದ ಖಾಯಂ ಪೌರಕಾರ್ಮಿಕರು ಹಾಗೂ ಗುತ್ತಿಗೆ ಪೌರ ಕಾರ್ಮಿಕರಿಗೆ ಸಿಗುತ್ತಿರುವ ಹಲವು ಸೌಲಭ್ಯಗಳಿಂದ ನಾವು ವಂಚಿತರಾಗುತ್ತಿದ್ದೇವೆ .

ರಾಜ್ಯ ಸರ್ಕಾರವು ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ , ಮಹಾನಗರ ಪಾಲಿಕೆಗಳ ವತಿಯಿಂದ ಹಾಲಿ ಕೆಲಸ ನಿರ್ವಹಿಸುತ್ತಿರುವ ಒಳಚರಂಡಿ ಕಾರ್ಮಿಕರುಗಳನ್ನು ಖಾಯಂಗೊಳಿಸಬೇಕೆಂದು ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಮೇಯರ್ ನಾರಾಯಣ ರವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಪ್ರಮುಖ ಬೇಡಿಕೆ : 1 ) ಕರ್ನಾಟಕ ರಾಜ್ಯ 10 ಮಹಾನಗರಪಾಲಿಕೆಗಳಲ್ಲಿ ಹಾಲಿ ಕೆಲಸ ನಿರ್ವಹಿಸುತ್ತಿರುವ ಒಳಚರಂಡಿ ಸಹಾಯಕರುಗಳನ್ನು ಖಾಯಂ ಮಾಡಬೇಕು .

ಮಾರ, ಪಳನಿ, ಕುಮಾರಸ್ವಾಮಿ, ಶ್ರೀನಿವಾಸ, ರಾಜು ಆರ್‌ . ಗಣೇಶ್‌ ಎಸ್‌ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ತಿತಿಯಿದ್ದರು.

City Today News

9341997936

ಕರ್ನಾಟಕ ರಾಜ್ಯದ ಕೆ.ಎಫ್.ಸಿ.ಎಸ್.ಸಿ.ಯ ಎಲ್ಲಾ ಗೋಡನ್‌ಗಳಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕಾರ್ಮಿಕರ ಬೇಡಿಕೆಗಳನ್ನು ಒತ್ತಾಯಿಸಿ ದಿನಾಂಕ : 17-01-2022 ರಿಂದ ಎಲ್ಲಾ ಗೋಡನ್‌ಗಳ ಮುಂದೆ ಪ್ರತಿಭಟನೆ

ಕರ್ನಾಟಕ ರಾಜ್ಯದ ಕೆ.ಎಫ್.ಸಿ.ಎಸ್.ಸಿ.ಯ ಎಲ್ಲಾ ಗೋಡನ್‌ಗಳಲ್ಲಿ 3000 ಕ್ಕೂ ಹೆಚ್ಚು ಕಾರ್ಮಿಕರು ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕೆಲಸವನ್ನು 1973 ರಿಂದ ನಿರಂತರವಾಗಿ ನಿರ್ವಹಿಸುತ್ತಿದ್ದಾರೆ . ಈ ಕಾರ್ಮಿಕರಿಗೆ ಈ ಕೆಳಕಂಡ ಅರ್ಹ ಸವಲತ್ತುಗಳನ್ನು ನೀಡಲು ಆದೇಶಬದ್ದರು ಎಲ್ಲಾ ಜಿಲ್ಲೆಯ ಜೆ.ಎಫ್.ಸಿ.ಎಸ್.ಸಿ. ಹಾಗೂ ಆಹಾರ , ನಾಗಲೀಕ ಸರಬರಾಜು ಗ್ರಾಹಕರ ಇಲಾಖೆಯ ಅಧಿಕಾರಿಗಳು ನೀಡುತ್ತಿಲ್ಲ . ಈ ಕೆಳಕಂಡ ಬೇಡಿಕೆಗಳನ್ನು ಕೂಡಲೇ ಜಾರಿಗೊಳಿಸುವಂತೆ ಪ್ರತಿಭಟನೆ ನಡೆಸಲಾಗುವುದು .

* ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕಾರ್ಮಿಕರಿಗೆ ಸಾಲಿಗೆ ಗುತ್ತಿಗೆದಾರರಾಗಲೀ ಅಥವಾ ಗೋಡನ್ ವ್ಯವಸ್ಥಾಪಕರಾಗಲೀ ವೇತನ ಚೀಟಿ , ಉದ್ಯೋಗ ಪತ್ರ , ಗುರುತಿನ ಚೀಟ , ಹಕ್ಕಿನ ರಜೆಗಳ ಸವಲತ್ತು ಕೂಡಲೇ ನೀಡಬೇಕು .

* ರಾಜ್ಯದ ಎಲ್ಲಾ ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕಾರ್ಮಿಕರಿಗೆ ಭವಿಷ್ಯನಿಧಿ , ಇ.ಎಸ್.ಐ. ಕಟ್ಟಬೇಕಿರುವ ದಿನಾಂಕದಿಂದl ಕಟ್ಟಿಸಿ ಅದರ ಸಂಪೂರ್ಣ ಮಾಹಿತಿಯನ್ನು ನಮ್ಮ ಸಂಘಟನೆಗೆ ನೀಡಬೇಕು .

* ರಾಜ್ಯದ ಗೋಡನ್‌ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 2018 ರಲ್ಲಿ ರೂ.16- ಹೆಚ್ಚಳ ಮಾಡಿದ್ದಾರೆ . ಅಂದಿನಿಂದ ಬೆಲೆ ಏರಿಕೆ , ಜೀವನ ನಿರ್ವಹಿಸಲು ಕಷ್ಟಕರವಾಗಿರುವುದರಿಂದ ಇಂದು ಕಾರ್ಮಿಕರಿಗೆ ಲೋಡಿಂಗ್ ಅಂಡ್ ಅನ್‌ಲೋಡಿಂಗ್‌ಗೆ 16- ರೂ.ಗಳಿಂದ 25 ರೂ.ಗಳಿಗೆ ಹೆಚ್ಚಿಸಿ , ಅದೇ ರೀತಿ ಎಫ್.ಸಿ.ಐ.ನಿಂದ ಕೆ.ಎಫ್.ಸಿ.ಎಸ್.ಸಿ.ಗೆ ಬರುವ ಅನ್‌ಲೋಡಿಂಗ್ ದರವನ್ನು ರೂ .08 – 13 ರೂ.ಗೆ ಹೆಚ್ಚಳ ಮಾಡಬೇಕು .

* ಕಾರ್ಮಿಕ ಕಾಯಿದೆ ಪ್ರಕಾರ ಕಾರ್ಮಿಕರಿಗೆ ಕೆಲಸದ ವೇಳೆ , ನಿವೃತ್ತಿಯಾದ ಕಾರ್ಮಿಕರಿಗೆ ಗಾಚ್ಯುಟಿ ಮತ್ತು ನಿವೃತ್ತಿ ವೇತನ ನೀಡಬೇಕು .

* ಕಾರ್ಮಿಕರಿಗೆ ಕಾನೂನಿನ ಪ್ರಕಾರ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು .

* ಭಾರತದ ಆಹಾರ ನಿಗಮದಲ್ಲಿ ( ಎಫ್.ಸಿ.ಐ. ) ನೀಡುತ್ತಿರುವ ವೇತನದ ಪ್ರಕಾರ ಕೆ.ಎಚ್.ಸಿ.ಎಸ್.ಸಿ. , ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕಾರ್ಮಿಕರಿಗೂ ಸವಲತ್ತು ನೀಡಬೇಕು .

* ಕಾರ್ಮಿಕನಿಗೆ ಅಪಘಾತ ಉಂಟಾದರೂ ಯಾವುದೇ ಪರಿಹಾರ ನೀಡುತ್ತಿಲ್ಲ ಇದನ್ನು ನೀಡಬೇಕು .

ಈ ಮೇಲ್ದಂಡ ಬೇಡಿಕೆಗಳ ಬಗ್ಗೆ ಒತ್ತಾಯಿಸಿ ನಡೆಸುವ ಹೋರಾಟದಲ್ಲಿ ಎಲ್ಲಾ ಕಾರ್ಮಿಕರು ಸಕ್ರೀಯವಾಗಿ ಭಾಗವಹಿಸಿ ತಮ್ಮ ತಮ್ಮ ಗೋಡನ್‌ಗಳ ಮುಂದೆ ಪ್ರತಿಭಟನೆ ನಡೆಸಬೇಕೆಂದು ಸಂಘದ ವತಿಯಿಂದ ಕಳಕಳಿಯ ಮನವಿ

-ಕರ್ನಾಟಕ ಫುಡ್ ಅಂಡ್ ಸಿವಿಲ್ ಸಪ್ಲೈ , ಕಾರ್ಪೊರೇಷನ್ ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಲೇಬರ್ ಯೂನಿಯನ

City Today News

9341997936