ಜನಾಂಗದ ಅಗ್ರಮಾನ್ಯ ನಾಯಕರಲ್ಲಿ ಒಬ್ಬರಾದ ಶ್ರೀ ಡಿ . ಕೆ . ಶಿವಕುಮಾರ್‌ ರವರನ್ನು ಈ ಕೂಡಲೆ ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ರಾಜ್ಯ ಒಕ್ಕಲಿಗರ ಸಂಘ ಆಗ್ರಹಿಸುತ್ತದೆ

ರಾಜ್ಯ ಒಕ್ಕಲಿಗರ ಸಂಘ ಒಕ್ಕಲಿಗರ ಸಮಾಜದ ಪ್ರಾತಿನಿಧಿಕ ಸಂಸ್ಥೆ . ಇತ್ತೀಚಿನ ದಿನಗಳಲ್ಲಿ ಜನಾಂಗದ ಸರ್ವತೋಮುಖ ಬೆಳವಣಿಗೆಗೆ ಅಡ್ಡಿ ಮಾಡುವಂತಹ , ಜನಾಂಗದ ನಾಯಕರುಗಳನ್ನು ಬಗ್ಗುಬಡಿಯುವಂತಹ , ಸಮಾಜದ ಬೆಳವಣಿಗೆಗೆ ಕಂಟಕ ಪ್ರಾಯವಾಗಿ ಕೆಲವು ಮಹನೀಯರು ಅಡ್ಡಿ ಉಂಟು ಮಾಡುತ್ತಿದ್ದಾರೆ . ಇದು ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಅವ್ಯಾಹತವಾಗಿ ನಡೆಯುತ್ತಿದೆ . ವ್ಯವಸ್ಥೆಯ ದುರ್ಲಾಭ ಪಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನು ಬದ್ದ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ಪಿತೂರಿ , ಒಡೆದು ಆಳುವ ನೀತಿಯಿಂದ ಒಕ್ಕಲಿಗ ಮುಖಂಡರುಗಳನ್ನು ಎಲ್ಲಾ ಪಕ್ಷಗಳಲ್ಲೂ ಬಗ್ಗದ್ದುಪಡಿಯಲು ಪ್ರಯತ್ನಿಸುತ್ತಿದ್ದಾರೆ . ಅದಕ್ಕೆ ಜ್ವಲಂತ ಉದಾಹರಣೆ ಸನ್ಮಾನ್ಯ ಡಿ . ಕೆ . ಶಿವಕುಮಾರ್‌ರವರು . ಆದಾಯ ತೆರಿಗೆ , ಜಾರಿ ನಿರ್ದೇಶನಾಲಯಗಳ ಕಪಿ ಮುಷ್ಟಿಯಲ್ಲಿ ಸಿಲುಕಿಸಿ , ಭಾವಿ ಮುಖ್ಯ ಮಂತ್ರಿಯಾಗಿ ಸಮಾಜದಲ್ಲಿ ಅದ್ಭುತವಾಗಿ ಬೆಳೆಯಬಲ್ಲ ಧೀಮಂತ ನಾಯಕನೊಬ್ಬನನ್ನು ಸೆದೆಬಡಿಯುವ ಹುನ್ನಾರ ಮಾಡಲಾಗುತ್ತಿದೆ . ಶ್ರೀ ಡಿ . ಕೆ . ಶಿವಕುಮಾರ್‌ರವರಿಗಿಂತ ನೂರು ಪಟ್ಟು ಆಪಾಧನೆಗಳಿರುವ ಇತರೆ ಸಮಾಜದ ಮಹನೀಯರುಗಳು ಮಹಾಪುರುಷರ ಸೋಗಿನಲ್ಲಿ ಬೀಗುತ್ತಿದ್ದಾರೆ . ಇದು ಒಕ್ಕಲಿಗರ ಜನಾಂಗದ ನಾಯಕರುಗಳನ್ನು ರಾಜಕೀಯವಾಗಿ ತುಳಿಯುವ ಪಯತ್ನವಲ್ಲದೆ ಮತ್ತೇನು ? ಜನಾಂಗದ ಬಹುಮುಖ ವ್ಯಕ್ತಿತ್ವದ ಧೀಮಂತರುಗಳಿಗೆ ರಾಜಕೀಯವಾಗಿ ಯಾವುದೇ ಸ್ಥಾನ ಮಾನ ಸಿಗದಂತೆ ಮಾಡಿ , ಜನಾಂಗವನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ . ಈ ಧೋರಣೆಯನ್ನು ಸಮಸ್ತಿಯಾಗಿ ಖಂಡಿಸುತ್ತಾ , ಜನಾಂಗದ ಅಗ್ರಮಾನ್ಯ ನಾಯಕರಲ್ಲಿ ಒಬ್ಬರಾದ ಶ್ರೀ ಡಿ . ಕೆ . ಶಿವಕುಮಾರ್‌ರವರನ್ನು ಈ ಕೂಡಲೆ ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ರಾಜ್ಯ ಒಕ್ಕಲಿಗರ ಸಂಘ ಆಗ್ರಹಿಸುತ್ತದೆ . ಇಷ್ಟೇ ಅಲ್ಲದೆ ಸಮಾನ ಮನಸ್ಕರಾದ ನಮ್ಮ ಜನಾಂಗದ ಎಲ್ಲಾ ಸಂಘ – ಸಂಸ್ಥೆಗಳು , ಸಂಘಟನೆಗಳು ಜಿಲ್ಲಾ , ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿರುವ ನಮ್ಮ ಎಲ್ಲಾ ಒಕ್ಕಲಿಗರ ಸಂಘಗಳು ಒಗ್ಗೂಡಿ ,

ಈ ರಾಜಕೀಯ ದಬ್ಬಾಳಿಕೆಯನ್ನು ಖಂಡಿಸುವ ಸಲುವಾಗಿ ದಿನಾಂಕ : 11 – 09 – 2019 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಿಂದ ಬೆಳಿಗ್ಗೆ 11 – 00 ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಿ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿ , ರಾಜ್ಯಪಾಲರವರಿಗೆ ಮನವಿಪತ್ರವನ್ನು ಸಲ್ಲಿಸಲಾಗುವುದು . ಈ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಜನಾಂಗದ ಸಮಸ್ತರೂ ಪಾಲ್ಗೊಂಡು ನಮ್ಮ ಸಮುದಾಯದವರ ರಕ್ಷಣೆಗೆ ನಿಲ್ಲಬೇಕೆಂದು ಕೋರುತ್ತೇವೆ .

–ರಾಜ್ಯ ಒಕ್ಕಲಿಗರ ಸಂಘದ ಮಾಜಿ ಪದಾಧಿಕಾರಿಗಳು ನಿರ್ದೇಶಕರುಗಳು ಮತ್ತು ಸಮಾಜದ ಮುಖಂಡರುಗಳು

City Today News

(citytoday.media)

9341997936

Exhibition and Sale of Fine Kanjivaram Silk Saris

Kanakavalli is delighted to be returning to Bengaluru with an exhibition and sale of fine Kanjivaram silk saris. Drop by the explore the queen of silks in all its splendour in a collection paying tribute to the textile tradition.

Prices start from Rs.8,000/-

Exhibition and Sale of fine Kanjivaram Silk Saris
Venue: Raintree, No 4 Sankey Road, Opp ITC Windsor, Bengaluru
Date: 13th,14th & 15th September 2019
Time: 10.00 am to 8.00 pm

City Today News

(citytoday.media)

9341997936

ಕರ್ನಾಟಕ ಸಂಘಟನೆಗಳ ಒಕ್ಕೂಟಗಳ ವತಿಯಿಂದ ದುಬಾರಿ ದಂಡ ವಿಧಿಸುತ್ತಿರುವ ಮೋಟರ್ ಕಾಯ್ದೆಯ ಕ್ರಮವನ್ನು ಖಂಡಿಸಿ 13 . 09 . 2019 ಸೈಕಲ್ ಜಾಥಾ –

ಕರ್ನಾಟಕ ಸಂಘಟನೆಗಳ ಒಕ್ಕೂಟ ದುಬಾರಿ ದಂಡ ವಿಧಿಸುತ್ತಿರುವ ಮೋಟರ್ ಕಾಯ್ದೆಯ ಕ್ರಮವನ್ನು ಖಂಡಿಸಿ 13 . 09 . 2019 ರಂದು ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳವಾಗಿದೆ.

ಸೈಕಲ್ ಜಾಥಾ ಸ್ಥಳ : – ಟೌನ್‌ಹಾಲ್ ವೃತ್ತ ದಿಂದ ಮೈಸೂರ್ ಬ್ಯಾಂಕ್ ವೃತ್ತದವರೆಗೆ ಸೈಕಲ್ ಜಾಥಾ .

City Today News

(citytoday.media)

9341997936

ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಪರವಾಗಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಹಿಳಾ ಸಾಧಕರ ಪ್ರಶಸ್ತಿ 2019 ಮತ್ತು ಯಂಗ್ ಸ್ಟಾರ್ ಪ್ರಶಸ್ತಿ 2019 ಅನ್ನು ಆಯೋಜಿಸುತ್ತಿದ್ದೇವೆ

ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಪರವಾಗಿ ನಾವು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಹಿಳಾ ಸಾಧಕರ ಪ್ರಶಸ್ತಿ 2019 ಮತ್ತು ಯಂಗ್ ಸ್ಟಾರ್ ಪ್ರಶಸ್ತಿ 2019 ಅನ್ನು ಆಯೋಜಿಸುತ್ತಿದ್ದೇವೆ ಎಂದು ತಿಳಿಸಲು ನಮಗೆ ತುಂಬಾ ಸಂತೋಷವಾಗಿದೆ.

ಯುವ ಪ್ರತಿಭಾವಂತ ವ್ಯಕ್ತಿಗಳನ್ನು ಸಶಕ್ತಗೊಳಿಸುವುದು, ಪ್ರೇರೇಪಿಸುವುದು ಮತ್ತು ಪ್ರೇರೇಪಿಸುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಗುರುತಿಸುವುದು ನಮ್ಮ ಉದ್ದೇಶ. ನಮ್ಮ ಸಂಘವು ಪರಿಸರವನ್ನು ರಕ್ಷಿಸುವಲ್ಲಿ ಮತ್ತು ವಿವಿಧ ಸಾಮಾಜಿಕ ಕಾರಣಗಳನ್ನು ಬೆಂಬಲಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈವೆಂಟ್ ಅನ್ನು ಆಯೋಜಿಸುವ ಮೂಲಕ ನಾವು ಪ್ರಕೃತಿಯನ್ನು ರಕ್ಷಿಸುವಲ್ಲಿ ತೊಡಗಿಸಿಕೊಳ್ಳಲು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ಯುವಕರನ್ನು ಪ್ರೋತ್ಸಾಹಿಸುವ ಮೂಲಕ ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡಲು ಹಣವನ್ನು ಬಳಸಲು ಬಯಸುತ್ತೇವೆ.

ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡಿದ ಮಹಿಳೆಯರು ಮತ್ತು ಮಕ್ಕಳನ್ನು ನಾವು ಗೌರವಿಸಲು ಬಯಸುತ್ತೇವೆ ಶಿಕ್ಷಕರು, ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು, ಲೋಕೋಪಕಾರಿಗಳು, ಸಂಗೀತಗಾರರು, ಕ್ರೀಡಾ ಆಟಗಾರರು, ನಾಟಕ ಕಲಾವಿದರು, ಸೌಂದರ್ಯ ಸ್ಪರ್ಧೆ, ಶೀರ್ಷಿಕೆ ಹೊಂದಿರುವವರು ಮುಂತಾದ ವಿವಿಧ ಕ್ಷೇತ್ರಗಳ ಪ್ರೊಫೈಲ್‌ಗಳನ್ನು ನಾವು ಸ್ವಾಗತಿಸುತ್ತೇವೆ.

ಅಲ್ಲದೆ, ಶೈಕ್ಷಣಿಕ, ಸಂಗೀತ, ಕ್ರೀಡೆ ಇತ್ಯಾದಿಗಳಲ್ಲಿ ಉತ್ತಮ ಸಾಧನೆ ತೋರಿದ ಮಕ್ಕಳು, ವಿಶ್ವದ ವಿವಿಧ ಭಾಗಗಳಿಂದ ಮಿಸ್. ಮಾರ್ಸಿಯಾ, ಆಸ್ಟ್ರೇಲಿಯಾದಿಂದ ಡಾ. ಕ್ಯಾರೋಲಿನ್, ಜಿಂಬಾಬ್ವೆಯ ಡಾ. .

-ಎಂ.ಆರ್. ಉಮೇಶ್

(ಸಿಪಿಡಬ್ಲ್ಯೂಎ ಮತ್ತು ಸಿಪಿಡಬ್ಲ್ಯುಎಫ್ ಅಧ್ಯಕ್ಷರು):

-ಶ್ರೀಭವಾಣಿ ರಾಕೇಶ್ (ಸಿಪಿಡಬ್ಲ್ಯೂಎ ಸಂಘಟನಾ ಕಾರ್ಯದರ್ಶಿ):

ನೋಂದಣಿಗೆ ದಯವಿಟ್ಟು ಸಂಪರ್ಕಿಸಿ: +91 9880356178.

City Today News

(citytoday.media)

9341997936