ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆದ ರಾಜಕೀಯ ಗುಂಡಾಗರ್ದಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತೀವ್ರವಾಗಿ ಖಂಡಿಸುತ್ತದೆ

ಬೆಂಗಳೂರು :ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆದ ರಾಜಕೀಯ ಗುಂಡಾಗರ್ದಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತೀವ್ರವಾಗಿ ಖಂಡಿಸುತ್ತದೆ , ಧರ್ಮವನ್ನು ರಕ್ಷಣೆ ಮಾಡಿದರೆ ನಮ್ಮನ್ನು ಮತ್ತು ಸಮಾಜದ ಸ್ವಾಸ್ಥ್ಯವನ್ನು ಧರ್ಮರಕ್ಷಣೆ ಮಾಡುತ್ತಿದೆ , ಆದರೆ ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಧರ್ಮವನ್ನು ತಾವು ಪರಿಪಾಲಿಸುವಲ್ಲಿ ಇನ್ನೊಬ್ಬರ ಆಚರಣೆಗೂ ಅಡ್ಡಿಪಡಿಸುವ ಅವಮಾನಿಸುವ ಅಮಾನವೀಯ ಕೃತ್ಯಗಳನ್ನು ರಾಕ್ಷಸಿ ಪುವೃತ್ತಿಗಳನ್ನು ಮಾಡುತ್ತ ಸಾಮಾಜಿಕ ಶಾಂತಿ ಮತ್ತು ಸೌಹಾರ್ಧತೆಗಳನ್ನು ಚುನಾವಣಾ ಹೆಸರಿನಲ್ಲಿ ಹಾಳುಮಾಡುತ್ತಿರುವ ನಾಚಿಗೇಡಿತನ ಮತ್ತು ಹೆಣಗೇಡಿತನ ಕಾರಣ .

ಶ್ರೀ ಪೇಜಾವರ ಶ್ರೀಗಳ ಸಾನಿಧ್ಯದಲ್ಲಿ ಹಾಗು ಶ್ರೀ ಚಕ್ರವರ್ತಿ ಸುಲಿಬೆಲೆ ಉಪಸ್ಥಿತಿಯಲ್ಲಿ ದಿ : 06 / 04 / 2019 ರಂದು ಬೆಂಗಳೂರಿನ ಪೂರ್ಣ ಪುಜ . ವಿದ್ಯಾಪೀಠದಲ್ಲಿ ವಿಷ್ಣುಸಹಸ್ರನಾಮ ಕಾರ್ಯಕ್ರಮವನ್ನು ಲೋಕಕಲ್ಯಾಣಕ್ಕಾಗಿ ಆಚರಿಸುವ ಸಮಯದಲ್ಲಿ ಕೆಲವೊಂದು ದುಷ್ಟಶಕ್ತಿಗಳು ಕಾಂಗ್ರೆಸ್ ಕಾರ್ಯಕರ್ತರಂದು ಹೇಳಿಕೊಂಡು ರಾಹುಲಗಾಂಧಿ ಹೆಸರಿನಲ್ಲಿ ನೆರೆದಿದ್ದ ಭಕ್ತಿಸಮೂಹ ಮತ್ತು ಶ್ರೀಗಳ ಅವಮಾನ ಮಾಡುವ ರೀತಿಯಲ್ಲಿ ಗಲಾಟೆ ಮಾಡಿರುವುದು ಒಂದು ಉತ್ತಮ ಸಮಾಜದ , ಅದಲಿಯೂ ಲೋಕಕಲ್ಯಾಣಕ್ಕಾಗಿ ವಿಷ್ಣುಸಹಸ್ರನಾಮ ಕಾರ್ಯಕ್ರಮವನ್ನು ಹಾಳುಗೆಡುಸುವಂತಹದು ನಾಗರಿಕ ಸಮಾಜದ ನಾಚಿಕೆಪಡುವಂತಹದು ಆದ್ದರಿಂದ ರಾಜಕೀಯವೇನಿದ್ದರು ರಾಜಕೀಯವೇದಿಕೆಯಲ್ಲಿ ಸೀಮಿತವಾಗಿರಲಿ . ಆದ್ದರಿಂದ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಶ್ರೀ ದಿನೇಶಗುಂಡೂರಾವ್ ಮತ್ತು ರಾಷ್ಟ್ರೀಯ ಅಧ್ಯಕ್ಷರಾದ ರಾಹುಲಗಾಂಧಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತಿದ್ದೇವೆ .

ರಾಷ್ಟ್ರೀಯ ಅಧ್ಯಕ್ಷರಾದ ಗೋವಿಂದ ಕುಲಕರ್ಣಿ ಮತ್ತು ರಾಷ್ಟ್ರೀಯಉಪಾಧ್ಯಕ್ಷರಾದ ಸುಬ್ರಮಣ ಶರ್ಮ , ರಾಜಖಜಾಂಚಿ ವಿಶ್ವನಾಥ್ ಜೋಶಿ ವಿಶ್ವನಾಥ್ ದೀಕ್ಷಿತ್ ಹಾಗು ರಾಮಕೃಷ್ ( ಅಧ್ಯಕ್ಷರು ರಾಘವೇಂದ್ರ ಕೋ ಆಪೊರೆಟಿವ್ ಬ್ಯಾಂಕ್ ) .

— ವಿಶ್ವನಾಥ್ ಜೋಡಿ 8553871923

City Today News

(citytoday.media)

9341997936

Experience these Wildlife Destinations of South India like never before

Planning a getaway to some exotic wildlife destinations across the world with an end-to-end trip right from your flights, to wildlife resorts to wildlife safaris to pickup/drops from local airports to even local experiences is a long and a tedious process. But to make your experience memorable as well as hassle-free, WildTrails is there to easy the task with 16-hr support via direct chat with the world-class support staff via the App (in the event of any delays or last-minute issues to any general queries about your plan or destination).

Discover stunning wildlife destinations across India. You can now book fixed, group or flexible trips with WildTrails.

Optimal time to visit:

Summer is the best time to go for Wild trails because, in summer, there is less water so animals basically travel to places in search of water ponds. So these water ponds are generally around safari tracks so the chance of sightings increases drastically. It’s hot in summer but sights of animals, especially tigers will make you forget that. Summers are the best time to sight the tigers and other animals because you can sight them for a longer time.

Destinations to look out for:

NAGAHOLE – Nagarhole National Park, also known as Rajiv Gandhi National Park, is a wildlife reserve in the South Indian state of Karnataka. Part of the Nilgiri Biosphere Reserve, the park is backed by the Brahamagiri Mountains and filled with sandalwood and teak trees.

KABINI – A place that never disappoints to “Pench National Park – jungle that became a book”. The Kabini, also called Kapila, is one of the major tributaries of the river Cauvery in southern India.

BANDIPUR – Bandipur National Park established in 1974 as a tiger reserve under Project Tiger, is a national park located in the south Indian state of Karnataka, which is the state with the highest tiger population in India.

BHADRA – Bhadra Wildlife Sanctuary is a protected area and a tiger reserve as part of Project Tiger, located 23 km south of Bhadravathi town and 38 km northwest of Chikkamagaluru town in Karnataka state, India Bhadra sanctuary has a wide range of flora and fauna and is a popular place for day outings

BR HILLS – The Biligirirangana Hills, commonly called BR Hills, is a hill range situated in south-eastern Karnataka, at its border with Tamil Nadu in South India. The area is called Biligiriranganatha Swamy Temple Wildlife Sanctuary or simply BRT Wildlife Sanctuary.

How to use Wildtrails app?

WildTrails is the only App that gives sightings information of all the birds and animals across all national parks of India. The app helps in making your wildlife traveling simple and more adventures for you. It helps you to plan your Wildlife travel right from hotel booking to your wildlife safari.

Available on Playstore and IOS

For Google Play Store- https://play.google.com/store/apps/details?id=com.india.wildtrails&hl=en

For IOS- https://itunes.apple.com/in/app/wildtrails-recent-sightings/id1039766082?mt=8

City Today News

(citytoday.media)

9342997936

ವಿಜಯ ಬ್ಯಾಂಕನ್ನು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಕರಣ ಮಾಡುವ ಮೂಲಕ ಅದರ ಅಸ್ತಿತ್ವವನ್ನೇ ಕಿತ್ತು ಹಾಕಿತ್ತು – ಬಾಳಪ್ಪ ಶೆಟ್ಟಿ

“ವಿಜಯಾ ಬ್ಯಾಂಕ್ ವಿಲೀನ ವಿರೋಧಿಸಿ ಮಂಗಳೂರಿನಲ್ಲಿ ಕರಾಳ ದಿನ ಆಚರಣೆ“


ಬೆಂಗಳೂರು, ಏಪ್ರಿಲ್ 9, 2019:

ವಿಜಯ ಬ್ಯಾಂಕ್ ವಿಲೀನ ಸಂಬಂಧಿಸಿದಂತೆ ಕೆಲವು ನಾಯಕರು ಸತ್ಯಕ್ಕೆ ದೂರವಾದ ಹೇಳಿಕೆ ನೀಡುವ ಮೂಲಕ ಜನತೆಯನ್ನು ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ವಾಸ್ತವವಾಗಿ ಅವರಿಗೆ ಬ್ಯಾಂಕ್ ಬಗ್ಗೆ ಯಾವುದೇ ಅಭಿಮಾನವಿಲ್ಲ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನು ತೃಪ್ತಿಪಡಿಸಲು ಕೆಲವು ನಾಯಕರು ಹೇಳಿಕೆ ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ವಿಜಯ ಬ್ಯಾಂಕ್ ವಿಲೀನ ವಿಚಾರವಾಗಿ ರಾಜಕೀಯ ಬೇಡ. ವಿಜಯ ಬ್ಯಾಂಕ್ ರಾಷ್ಟ್ರೀಕರಣವಾದಾಗ ವಿರೋಧಿಸದ ಕಾಂಗ್ರೆಸ್ ನಾಯಕರು ಈಗ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘದ ಸಂಚಾಲಕ ಬಾಳಪ್ಪ ಶೆಟ್ಟಿ ಆರೋಪಿಸಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಆರಂಭಿಸಿತ್ತು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಅದೇ ಸಂದರ್ಭ ವಿಜಯ ಬ್ಯಾಂಕ್ ವಿಲೀನದ ಪ್ರಸ್ತಾವನೆ ನಡೆದಿತ್ತು. ಕರಾವಳಿಯ ಕಾಂಗ್ರೆಸ್‌ ನಾಯಕರಾದ ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ ಆಗ ಕೇಂದ್ರದಲ್ಲಿ ಸಚಿವರಾಗಿದ್ದರು. ಈ ನಾಯಕರು ವಿಲೀನ ಪ್ರಕ್ರಿಯೆ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ ಎಂದು ಆರೋಪಿಸಿದ್ದಾರೆ.

ವಿಜಯ ಬ್ಯಾಂಕ್ ಕರಾವಳಿಯ ಹೆಮ್ಮೆಯ ಪ್ರತೀಕವಾಗಿತ್ತು. ಇಂತಹ ವಿಜಯ ಬ್ಯಾಂಕನ್ನು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಕರಣ ಮಾಡುವ ಮೂಲಕ ಅದರ ಅಸ್ತಿತ್ವವನ್ನೇ ಕಿತ್ತು ಹಾಕಿತ್ತು. ವಿಜಯಬ್ಯಾಂಕ್ ಯೂನಿಯನ್ ಮಾಜಿ ನಾಯಕರೆಂದು ಈಗ ಕರೆಸಿಕೊಳ್ಳುವವರು ಆಗ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಬ್ಯಾಂಕ್ ರಾಷ್ಟ್ರೀಕರಣದ ಬಗ್ಗೆ ಅವರು ಚಕಾರ ಎತ್ತಲಿಲ್ಲ. ವಿಜಯ ಬ್ಯಾಂಕ್ ರಾಷ್ಟ್ರೀಕರಣವಾದ ದಿನವೇ ಕರಾವಳಿಯಿಂದ ದೂರವಾಗಿದೆ. ಆಗ ಮಾತನಾಡದ ನಾಯಕರು ಈಗ ಸ್ವಂತ ಲಾಭಕ್ಕಾಗಿ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ವಿಜಯ ಬ್ಯಾಂಕಿನ ಅಭಿವೃದ್ಧಿಯ ರೂವಾರಿ ಮೂಲ್ಕಿ ಸುಂದರ ರಾಮ ಶೆಟ್ಟಿ ಅವರ ಹೆಸರನ್ನು ನಗರದ ಲೈಟ್ ಹೌಸ್ ಹಿಲ್ ರಸ್ತೆಗೆ ಇಡಲು ಮಂಗಳೂರು ಮಹಾ ನಗರ ಪಾಲಿಕೆ ನಿರ್ಣಯ ಕೈಗೊಂಡಿತ್ತು. ರಾಜ್ಯಸರ್ಕಾರ ಕೂಡ ಇದಕ್ಕೆ ಅಧಿಕೃತ ಅನುಮತಿ ನೀಡಿತ್ತು. ಆದರೆ ಆಗಿನ ಕಾಂಗ್ರೆಸ್ ಶಾಸಕ ಜೆ.ಆರ್.ಲೋಬೊ ಸರ್ಕಾರದ ಮೇಲೆ ಒತ್ತಡ ಹೇರಿ ಇದಕ್ಕೆ ರಾತ್ರೋರಾತ್ರಿ ತಡೆಯಾಜ್ಞೆ ತಂದಿದ್ದರು. ಸುಂದರ ರಾಮ ಶೆಟ್ಟಿ ಅವರ ಹೆಸರಿಟ್ಟರೆ ಕೋಮು ಗಲಭೆ ನಡೆಯಲಿದೆ ಎಂದು ಲಿಖಿತವಾಗಿ ತಿಳಿಸಿದ್ದರು.

ಸುಂದರರಾಮ ಶೆಟ್ಟಿ ಅವರಂತಹ ಮಹಾನ್ ನಾಯಕರಿಗೆ ಅವಮಾನವಾದಾಗ ಮಾತನಾಡದ ಈ ನಾಯಕರಿಗೆ ಈಗ ವಿಲೀನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ವಿವಾದ ಬಗೆಹರಿಸಲು ಸತ್ಯ ಶೋಧನಾಸಮಿತಿ ನೇಮಿಸಿದ ಆಗಿನ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಯಾವುದೇ ಕ್ರಮ ಕೈಗೊಳ್ಳದೆ ಸುಂದರ ರಾಮ ಶೆಟ್ಟಿ ಅವರ ಅಭಿಮಾನಿಗಳನ್ನು ವಂಚಿಸಿದ್ದರು. ಈ ನಾಯಕರಿಗೆ ಕಾಂಗ್ರೆಸ್‌ನವನ್ನು ಪ್ರಶ್ನಿಸಲು ಧೈರ್ಯವಿಲ್ಲ. ಬದಲಾಗಿ ಹಾದಿ ತಪ್ಪಿಸುವ ಹೇಳಿಕೆ ನೀಡುವ ಮೂಲಕ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ಮುಂತಾದವರು ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರಚೋದಿಸಿಪ್ರತಿಭಟನೆ ನಡೆಸಿದ್ದರು. ಬಳಿಕ ಕೆಲವು ವಿಜಯಬ್ಯಾಂಕ್ ವಿರೋಧಿಗಳು ಪತ್ರಿಕಾಗೋಷ್ಠಿ ನಡೆಸಿ ಸುಂದರ ರಾಮ ಶೆಟ್ಟಿ ಯಾರೆಂದು ಪ್ರಶ್ನಿಸಿದ್ದರು. ಈಗ ವಿಜಯ ಬ್ಯಾಂಕ್ ವಿಲೀನದ ಬಗ್ಗೆ ಮಾತನಾಡುತ್ತಿರುವ ನಾಯಕರು ಆಗ ಯಾವುದೇ ಧ್ವನಿ ಎತ್ತಿಲ್ಲ ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

* ವಿಜಯಾ ಬ್ಯಾಂಕ್‌ ಅಭಿವೃದ್ಧಿಯ ರೂವಾರಿ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರನ್ನು ರಸ್ತೆಗೆ ಇಡುವ ಮೂಲಕ ವಿಜಯಾ ಬ್ಯಾಂಕ್ ಹೆಸರನ್ನು ಕಾಯಂ ಆಗಿ ಉಳಿಸುವ ಅವಕಾಶ ಕಾಂಗ್ರೆಸ್ ಪಕ್ಷದ ಕೈಯಲ್ಲಿತ್ತು. ಕೈಯಲ್ಲಿರುವ ಇರುವ ವಿಚಾರವನ್ನು ಕೈಬಿಟ್ಟು ಇದೀಗ ರಾಜಕೀಯ ಲಾಭಕ್ಕಾಗಿ ವಿಜಯಾ ಬ್ಯಾಂಕ್‌ ಹೆಸರನ್ನು ಬಳಸುತ್ತಿರುವುದು ಕಾಂಗ್ರೆಸ್‌ನ ಕೆಟ್ಟ ರಾಜಕಾರಕ್ಕೆ ಸಾಕ್ಷಿಯಾಗಿದೆ.

* ನಾನು ಸಂಸದನಾದರೆ ವಿಜಯಾ ಬ್ಯಾಂಕ್‌ಅನ್ನು ಮತ್ತೆ ಸ್ಥಾಪಿಸುತ್ತೇನೆ ಎಂಬ ಹೇಳಿಕೆಯನ್ನು ಮಿಥುನ್ ರೈ ನೀಡುತ್ತಿರುವುದು ಬಾಲಿಶ ಮತ್ತು ಹಾಸ್ಯಾಸ್ಪದವಾಗಿದೆ.

* ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಈಗಾಗಲೇ ಇನ್ನಷ್ಟು ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಪ್ರಸ್ತಾಪವಿದೆ. ಪರಿಸ್ಥಿತಿ ಹೀಗಿರುವಾಗ ವಿಜಯಾ ಬ್ಯಾಂಕ್‌ಅನ್ನು ಪುನರ್ ಸ್ಥಾಪನೆ ಎಂಬುವುದು ಶುದ್ಧ ರಾಜಕೀಯ ಹೇಳಿಕೆಯಾಗಿದೆ.

City Today News

(citytoday.media)

9341997936

KRDCL ನಲ್ಲಿ 3 , 163 ಕೋಟಿ ಅಕ್ರಮ ಟೆಂಡರ್‌ – 600 ಕೋಟಿ ಭ್ರಷ್ಟಾಚಾರ – ಹಗರಣದ ಸಂಪೂರ್ಣ ದಾಖಲೆಗಳನ್ನು ಬಿಡುಗಡೆ ಮಾಡಿದ N.R. ರಮೇಶ್.

KRDCL ನಲ್ಲಿ 3 , 163 ಕೋಟಿ ಅಕ್ರಮ ಟೆಂಡರ್‌ – 600 ಕೋಟಿ ಭ್ರಷ್ಟಾಚಾರ H . D . ರೇವಣ್ಣ ಮತ್ತು H . C . ಮಹದೇವಪ್ಪ ರಿಂದ ಚುನಾವಣೆಗೆ ನೂರಾರು ಕೋಟಿ ವಸೂಲಿ ಬಹುಶಃ ಈ ಕ್ಷಣದವರೆಗೆ KRDCL ಸಂಸ್ಥೆಯ ಬಗ್ಗೆಯಾಗಲೀ ಅಥವಾ ಆ ಸಂಸ್ಥೆಯಲ್ಲಿ ನಡೆಯುವ ಬ್ರಹ್ಮಾಂಡ ಭ್ರಷ್ಟಾಚಾರಗಳ ಬಗ್ಗೆಯಾಗಲೀ ಅಷ್ಟೊಂದು ಮಾಹಿತಿಗಳು ಯಾರಿಗೂ ದೊರೆತಿಲ್ಲವೇನೋ ? ? ? ! ! ! ಹೌದು ! ! ! ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ( KRDCL ) ಎಂಬ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಸಂಸ್ಥೆಯಲ್ಲಿ ನಿತ್ಯ ನಿರಂತರವಾಗಿ ನಡೆಯುವ | ನಡೆಯುತ್ತಿರುವ ಅಪಾರ ಪ್ರಮಾಣದ ಭ್ರಷ್ಟಾಚಾರಗಳ ಬಗ್ಗೆ ಯಾರೊಬ್ಬರೂ ಅಹ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ . ಆದರೆ , ಜಲ ಸಂಪನ್ಮೂಲ ಇಲಾಖೆಯನ್ನು ಮತ್ತು ಲೋಕೋಪಯೋಗಿ ಇಲಾಖೆಯನ್ನೂ ಮೀರಿಸುವ ಬೃಹತ್ ಮಟ್ಟದ ಭ್ರಷ್ಟಾಚಾರ ನಡೆಯುವುದು KRDCL ಸಂಸ್ಥೆಯಲ್ಲಿಯೇ ಎಂಬುದು ದಾಖಲೆಗಳಿಂದ ಬಹಿರಂಗವಾಗಿದೆ . – KRDCL ಸಂಸ್ಥೆಯು PWD ಇಲಾಖೆಯ ಅಧೀನ ಸಂಸ್ಥೆಯಾಗಿದ್ದು , ಈ ಸಂಸ್ಥೆಯ “ ಟೆಂಡರ್ ಅನುಮೋದನೆ ಸಮಿತಿ ” ಗೆ ಆಯಾ ಕಾಲದಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾಗಿರುವವರೇ ಅಧ್ಯಕ್ಷರಾಗಿರುತ್ತಾರೆ . ಉಳಿದಂತೆ ಈ ಸಮಿತಿಯ ನಿರ್ದೇಶಕರುಗಳಾಗಿ – KRDCL ನ ವ್ಯವಸ್ಥಾಪಕ ನಿರ್ದೇಶಕರು , PWD ಇಲಾಖೆಯ ಕಾರ್ಯದರ್ಶಿಗಳು ಸೇರಿದಂತೆ 03 ಮಂದಿ IAS ಅಧಿಕಾರಿಗಳು ಹಾಗೂ ಇತರೆ 07 ಮಂದಿ ಅಧಿಕಾರಿಗಳು ಸರ್ಕಾರದಿಂದ ನಿಯೋಜನೆಗೊಂಡಿರುತ್ತಾರೆ .

• ಲೋಕೋಪಯೋಗಿ ಸಚಿವ H. D. ರೇವಣ್ಣ ಮತ್ತು ಮಾಜಿ ಸಚಿವ H. C. ಮಹದೇವಪ್ಪ ವಿರುದ್ಧ ACB ಮತ್ತು ಲೋಕಾಯುಕ್ತದಲ್ಲಿ ದೂರುಗಳು ದಾಖಲು.
• KRDCL ನ ವ್ಯವಸ್ಥಾಪಕ ನಿರ್ದೇಶಕ B. S. ಶಿವಕುಮಾರ್ ವಿರುದ್ಧವೂ ದೂರುಗಳು ದಾಖಲು.
• ಹಿರಿಯ IAS ಅಧಿಕಾರಿಗಳಾದ ರಜನೀಶ್ ಗೋಯೆಲ್, ಏಕರೂಪ್ ಕೌರ್, ನವೀನ್ ರಾಜ್ ಸಿಂಗ್ ಮತ್ತು ಡಾ|| ಸಂದೀಪ್ ದಾವೆ ಅವರುಗಳ ವಿರುದ್ಧವೂ ದೂರುಗಳು ದಾಖಲು.
• ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕೃಷ್ಣಾರೆಡ್ಡಿ ಸೇರಿದಂತೆ KRDCL ನ ಮುಖ್ಯಸ್ಥರಾಗಿದ್ದ ಗಣೇಶ್ ಮತ್ತು ಇತರೆ 10 ಅಧಿಕಾರಿಗಳ ವಿರುದ್ಧವೂ ದೂರುಗಳು ದಾಖಲು.
• ಇವರೆಲ್ಲರ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ, ಕಾನೂನು ಬಾಹಿರವಾಗಿ ಟೆಂಡರ್ ಅನುಮೋದನೆ ಪ್ರಕರಣಗಳು ದಾಖಲು.
• ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (KRDCL) ದಲ್ಲಿ 3,163 ಕೋಟಿ ಮೊತ್ತದ ಬೃಹತ್ ಟೆಂಡರ್ ಅಕ್ರಮಗಳ ಹಗರಣ ಬಯಲು.
• ಲೋಕೋಪಯೋಗಿ ಇಲಾಖೆಯ ಅಧೀನ ಸಂಸ್ಥೆಯಾಗಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ.
• ಪ್ರಸ್ತುತ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗಳಾಗಿರುವ ಕೃಷ್ಣಾರೆಡ್ಡಿ ಯವರು ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮುಖ್ಯ ಅಭಿಯಂತರರಾಗಿದ್ದರು.
• ಸಿದ್ಧಯ್ಯನವರು ಪಾಲಿಕೆಯ ಆಯುಕ್ತರಾಗಿದ್ದ ಸಂಧರ್ಭದಲ್ಲಿ 2011 ರಲ್ಲಿ ಮುಖ್ಯ ಅಭಿಯಂತರರಾಗಿದ್ದ ಕೃಷ್ಣಾರೆಡ್ಡಿ ಯವರನ್ನು ಅವ್ಯವಹಾರ ಮಾಡಿದ್ದ ಸಂಬಂಧ ಅಮಾನತುಗೊಳಿಸಿದ್ದರು.
• ಲೋಕೋಪಯೋಗಿ ಇಲಾಖೆಯ ಸಚಿವರು – KRDCL ಟೆಂಡರ್ ಅನುಮೋದನಾ / ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
• 2018-19 ರ ಅವಧಿಯಲ್ಲಿ KRDCL ನಲ್ಲಿ 10 ಪ್ಯಾಕೇಜ್ ಗಳ 1,433 ಕೋಟಿ ಮೊತ್ತದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ.
• 2017-18 ರ ಅವಧಿಯಲ್ಲಿ KRDCL ನಲ್ಲಿ 15 ಪ್ಯಾಕೇಜ್ ಗಳ 1,714 ಕೋಟಿ ಮೊತ್ತದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ.
• 25 ಪ್ಯಾಕೇಜ್ ಗಳ 2,552 ಕೋಟಿ ಅಂದಾಜು ಮೊತ್ತದ ಕಾಮಗಾರಿಗಳಿಗೆ 611 ಕೋಟಿಗಳಷ್ಟು ಅಧಿಕ ಮೊತ್ತವನ್ನು ಸೇರಿಸಿ 3,163 ಕೋಟಿಗಳಿಗೆ ಅನುಮೋದನೆ ನೀಡಲಾಗಿದೆ.
• 2019 ರ ಲೋಕಸಭಾ ಚುನಾವಣೆಗೂ ಮುನ್ನ KTPP ಕಾಯ್ದೆಗೆ ವಿರುದ್ಧವಾಗಿ ಆತುರಾತುರವಾಗಿ 1,433 ಕೋಟಿ ಮೊತ್ತದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳಿಗೆ ಅನುಮೋದನೆ ನೀಡಲಾಗಿದೆ.
• ಲೋಕೋಪಯೋಗಿ ಸಚಿವ H. D. ರೇವಣ್ಣ ರವರ ಸೂಚನೆಯಂತೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ.
• 1,275 ಕೋಟಿ ಅಂದಾಜು ಮೊತ್ತದ 10 ಪ್ಯಾಕೇಜ್ ಗಳಿಗೆ ಗುತ್ತಿಗೆದಾರರು ನಮೂದಿಸಿದ್ದ 174 ಕೋಟಿ ಗಳನ್ನು ಸೇರಿಸಿ 1,449 ಕೋಟಿ ಮೊತ್ತದ ಟೆಂಡರ್ ಗಳಿಗೆ ಅನುಮೋದನೆ ನೀಡಲಾಗಿದೆ.
• ಹಾಸನ ಮತ್ತು ತುಮಕೂರು ಲೋಕಸಭಾ ಚುನಾವಣೆಗಳಿಗೆ ಹಣ ಸಂಗ್ರಹಿಸಲು ಆತುರಾತುರವಾಗಿ ಟೆಂಡರ್ ಅನುಮೋದನೆ ನೀಡಲಾಗಿದೆ.
• 10 ಪ್ಯಾಕೇಜ್ ಗಳ 1,449 ಕೋಟಿ ಮೊತ್ತದ ಅಕ್ರಮ ಟೆಂಡರ್ ಗಳಿಗೆ ಅನುಮೋದನೆ ಕೊಡಿಸುವ ಮೂಲಕ ಗುತ್ತಿಗೆದಾರರಿಂದ H. D. ರೇವಣ್ಣ ನವರು 100 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಕಿಕ್ ಬ್ಯಾಕ್ ರೂಪದಲ್ಲಿ ಪಡೆದಿದ್ದಾರೆ.
• ಪ್ಯಾಕೇಜ್ ಸಂಖ್ಯೆ 4 B ಯ 157 ಕೋಟಿ ಮೊತ್ತದ ಕಾಮಗಾರಿಗೆ ಮೊದಲ ಬಾರಿ ಕರೆಯಲಾಗಿದ್ದ ಟೆಂಡರ್ ನಲ್ಲಿ NCC ಸಂಸ್ಥೆಯು ಭಾಗವಹಿಸಿ ಯಶಸ್ವಿ ಬಿಡ್ ದಾರ ಸಂಸ್ಥೆಯಾಗಿತ್ತು.
• ತಾವು ಕೇಳಿದಷ್ಟು ಕಮಿಷನ್ ಕೊಡದಿರುವ ಕಾರಣಕ್ಕೆ NCC ಸಂಸ್ಥೆಯವರನ್ನು ಬೆದರಿಸಿ ಟೆಂಡರ್ ಪ್ರಕ್ರಿಯೆಯಿಂದ ಹಿಂದೆ ಸರಿಯುವಂತೆ H. D. ರೇವಣ್ಣ ನವರು B. S. ಶಿವಕುಮಾರ್ ಮೂಲಕ ಮಾಡಿಸಿದ್ದಾರೆ.
• BDA ಮುಖ್ಯ ಅಭಿಯಂತರರಾಗಿದ್ದ B. S. ಶಿವಕುಮಾರ್ ಎಂಬ ಪರಮ ಭ್ರಷ್ಟ H. D. ರೇವಣ್ಣ ನವರ ಪರಮಾಪ್ತ.
• ಪ್ರಸ್ತುತ KRDCL ನ ವ್ಯವಸ್ಥಾಪಕ ನಿರ್ದೇಶಕನಾಗಿರುವ B. S. ಶಿವಕುಮಾರ್.
• 2018 ರ ವಿಧಾನಸಭಾ ಚುನಾವಣೆಗೆ ಹಣ ಸಂಗ್ರಹಿಸಲು ಆತುರಾತುರವಾಗಿ 1,714 ಕೋಟಿ ಮೊತ್ತದ 15 ಪ್ಯಾಕೇಜ್ ಗಳ ಕಾಮಗಾರಿಗಳ ಅಕ್ರಮ ಟೆಂಡರ್ ಗಳಿಗೆ ಅನುಮೋದನೆ ನೀಡಲಾಗಿತ್ತು.
• ಸಿದ್ಧರಾಮಯ್ಯನವರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ H. C. ಮಹದೇವಪ್ಪ.
• 1,277 ಕೋಟಿ ಮೊತ್ತದ 15 ಪ್ಯಾಕೇಜ್ ಗಳಲ್ಲಿ ಭಾಗವಹಿಸಿದ್ದ ಗುತ್ತಿಗೆದಾರರು ನಮೂದಿಸಿದ್ದ 437 ಕೋಟಿಗಳನ್ನು ಸೇರಿಸಿ ಒಟ್ಟು 1,714 ಕೋಟಿ ಮೊತ್ತದ ಟೆಂಡರ್ ಗಳಿಗೆ ಕಾನೂನು ಬಾಹಿರ ಅನುಮೋದನೆ ನೀಡಲಾಗಿತ್ತು.
• 1,714 ಕೋಟಿ ಮೊತ್ತದ ಟೆಂಡರ್ ಗಳಿಗೆ ಅನುಮೋದನೆ ನೀಡುವ ಮೂಲಕ H. C. ಮಹದೇವಪ್ಪ ನವರು ಗುತ್ತಿಗೆದಾರರಿಂದ 250 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಕಿಕ್ ಬ್ಯಾಕ್ ರೂಪದಲ್ಲಿ ಪಡೆದಿದ್ದಾರೆ.
• ಕಳೆದ 10 ತಿಂಗಳ ಅವಧಿಯಲ್ಲಿ 2,552 ಕೋಟಿ ಮೊತ್ತದ ಕಾಮಗಾರಿಗಳಿಗೆ ಗುತ್ತಿಗೆದಾರರು ನಮೂದಿಸಿದ್ದ ಅಧಿಕ ಮೊತ್ತ 611 ಕೋಟಿ ಸೇರಿಸಿ, ಒಟ್ಟು 3,163 ಕೋಟಿ ಮೊತ್ತಕ್ಕೆ ಅಕ್ರಮ ಅನುಮೋದನೆ ನೀಡಲಾಗಿದೆ.
• ಈ ಎರಡು ಟೆಂಡರ್ ಪ್ರಕ್ರಿಯೆಗಳಲ್ಲಿ ಅಧಿಕಾರಿಗಳು 150 ಕೋಟಿಗಳಿಗೂ ಹೆಚ್ಚು ಹಣವನ್ನು ಕಮಿಷನ್ ರೂಪದಲ್ಲಿ ಪಡೆದಿದ್ದಾರೆ.
• H. D. ರೇವಣ್ಣ ಮತ್ತು H. C. ಮಹದೇವಪ್ಪ ನವರು ಅನುಮೋದನೆ ದೊರಕಿಸಿಕೊಟ್ಟಿರುವ 25 ಪ್ಯಾಕೇಜ್ ಗಳ ಗುತ್ತಿಗೆ ಪಡೆದಿರುವ ಗುತ್ತಿಗೆದಾರರೆಲ್ಲರೂ ಆಂಧ್ರ ಮತ್ತು ಕೇರಳ ಮೂಲದವರಾಗಿದ್ದಾರೆ.
• KTPP ಕಾಯ್ದೆಯನ್ವಯ ಒಂದು ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಯ ಟೆಂಡರ್ ಗಳಲ್ಲಿ ಗುತ್ತಿಗೆದಾರರು ಭಾಗವಹಿಸಲು 60 ದಿನಗಳ ಕಾಲಾವಕಾಶ ನೀಡಲೇ ಬೇಕಿರುತ್ತದೆ.
• ಒಂದು ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಅಲ್ಪಾವಧಿ ಟೆಂಡರ್ ಆಹ್ವಾನಿಸುವಂತಿಲ್ಲ.
• ಪಾರದರ್ಶಕ ಕಾಯ್ದೆಯನ್ವಯ ಮೊದಲ ಬಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ಒಬ್ಬನೇ ಗುತ್ತಿಗೆದಾರ ಭಾಗವಹಿಸಿದ್ದರೆ, ಎರಡನೇ ಬಾರಿ ಟೆಂಡರ್ ಆಹ್ವಾನಿಸಬೇಕಿರುತ್ತದೆ.
• ಸಾವಿರಾರು ಕೋಟಿ ಮೊತ್ತದ ಕಾಮಗಾರಿಗಳಿಗೆ ಕೇವಲ 14 ದಿನಗಳ ಕಾಲಾವಕಾಶ ನೀಡಿ ಟೆಂಡರ್ ಕರೆಯಲಾಗಿದೆ.
• ಕೇವಲ ಒಬ್ಬೊಬ್ಬರೇ ಗುತ್ತಿಗೆದಾರರು ಭಾಗವಹಿಸಿದ್ದ ಮೂರು ಕಾಮಗಾರಿಗಳಿಗೆ ನಿಯಮ ಬಾಹಿರವಾಗಿ ಅನುಮೋದನೆ ನೀಡಲಾಗಿದೆ.
• ಸಚಿವ H. D. ರೇವಣ್ಣ ಮತ್ತು ಮಾಜಿ ಸಚಿವ H. C. ಮಹದೇವಪ್ಪ ರವರುಗಳ ಬೇಡಿಕೆಗಳನ್ನು ಪೂರೈಸಲು ಒಪ್ಪಿರುವ ಗುತ್ತಿಗೆದಾರರಿಗಷ್ಟೆ ಅವಕಾಶ ಕಲ್ಪಿಸಲಾಗಿದೆ.
• ತಾವೇ ಆಯ್ಕೆ ಮಾಡಿದ ಗುತ್ತಿಗೆದಾರರಿಗೆ ಮಾತ್ರವೇ ಟೆಂಡರ್ ನಲ್ಲಿ ಭಾಗವಹಿಸುವ ಅವಕಾಶವನ್ನು B. S. ಶಿವಕುಮಾರ್, ಗಣೇಶ್ ಮತ್ತು ಕೃಷ್ಣಾರೆಡ್ಡಿಯವರು ದೊರಕಿಸಿಕೊಟ್ಟಿದ್ದಾರೆ.
• ಮೊದಲ ಬಾರಿ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ L 1 ಆಗಿದ್ದ NCC ಸಂಸ್ಥೆ.
• NCC ಸಂಸ್ಥೆಯ ಮುಖ್ಯಸ್ಥರನ್ನು ಬೆದರಿಸಿ ಹಿಂದೆ ಸರಿಯುವಂತೆ ಮಾಡಿದ್ದ 157 ಕೋಟಿ ಮೊತ್ತದ 4 B ಪ್ಯಾಕೇಜ್ ನ ಗುತ್ತಿಗೆಯನ್ನು H. D. ರೇವಣ್ಣ ನವರಿಗೆ ಆಪ್ತರಾಗಿರುವ ಆಂಧ್ರ ಮೂಲದ M/S Nagabhushanam & Co ಎಂಬ ಸಂಸ್ಥೆಗೆ ದೊರಕಿಸಿಕೊಡಲಾಗಿದೆ.
• 157 ಕೋಟಿ ಮೊತ್ತದ ಕಾಮಗಾರಿಗೆ 39 ಕೋಟಿ ರೂ. ಗಳನ್ನು ಹೆಚ್ಚು ನಮೂದಿಸಿ, 196 ಕೋಟಿ ರೂಪಾಯಿಗಳಿಗೆ ಕಾಮಗಾರಿಯ ಗುತ್ತಿಗೆಯನ್ನು ಪಡೆದಿರುವ M/S Nagabhushanam & Co.
• ಟೆಂಡರ್ ಫಾರಂ ಗಳನ್ನು, Bank Guarantee ಗಳನ್ನು ನೀಡಲು ಹೋಗಿದ್ದ M/S MVR Infra ಸಂಸ್ಥೆ ಸೇರಿದಂತೆ ಇತರೆ ಗುತ್ತಿಗೆದಾರರಿಗೆ ಧಮಕಿ ಹಾಕಿ ವಾಪಸ್ಸು ಕಳುಹಿಸಿದ್ದ B. S. ಶಿವಕುಮಾರ್.
• 2018 ರ ವಿಧಾನಸಭಾ ಚುನಾವಣೆಗೂ ಮುನ್ನ ಅನುಮೋದನೆ ನೀಡಲಾಗಿದ್ದ ಗುತ್ತಿಗೆದಾರರಿಂದ 250 ಕೋಟಿ ಕಿಕ್ ಬ್ಯಾಕ್ ಪಡೆದಿದ್ದ H. C. ಮಹದೇವಪ್ಪ ನವರು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಒಂದು ನಯಾಪೈಸೆಯನ್ನೂ ನೀಡಿರಲಿಲ್ಲ.
• 250 ಕೋಟಿ ಕಿಕ್ ಬ್ಯಾಕ್ ಪಡೆದು ತಮಗೆ ನಿಗದಿತ ಹಣ ತಲುಪಿಸಲಿಲ್ಲ ಎಂಬ ಕಾರಣಕ್ಕೆ ಸಿದ್ಧರಾಮಯ್ಯ ಮತ್ತು H. C. ಮಹದೇವಪ್ಪ ನವರ ಸಂಬಂಧ ಹಳಸಿ ಹೋಗಿತ್ತು.
• H. D. ರೇವಣ್ಣ ನವರಿಗೆ ಒಪ್ಪಿಗೆಯಾಗುವ ಗುತ್ತಿಗೆದಾರರು ಮಾತ್ರವೇ ಟೆಂಡರ್ ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವ B. S. ಶಿವಕುಮಾರ್.
• ಪತ್ರಿಕಾಗೋಷ್ಠಿಯಲ್ಲಿ ಹಗರಣದ ಸಂಪೂರ್ಣ ದಾಖಲೆಗಳನ್ನು ಬಿಡುಗಡೆ ಮಾಡಿದ N.R. ರಮೇಶ್.

City Today News

(citytoday.media)

9341997936

Travelyaari Offers Discounts via Coupons for this Weekend Travel

Bengaluru : Online bus ticketing platform Travelyaari is offering discounts on tickets via Coupon Codes, UTSAV which is applicable to journey dates ranging from the 12th to the 14th of April 2019 and as part of which one could save up to 11% of the amount.

Yet another coupon code is, TYVOTE which is urging people to land at their native to cast their vote and which is available with bookings done from the 10th to the 12th of April 2019. The requisite code too offers a discount up to 12%.
Download the Travelyaari app to know about the other exciting offers as well or Log on to www.travelyaari.com

City Today News

(citytoday.media)

9341997936