“Obiects in the Rear-view Mirror” Photography Exhibition by Punkaj Gupta

Bengaluru 27/02/2019 “Objects in the Rear-view Mirror” is a CSR initiative by Honeycomb Creative Support in support of Multiple Sclerosis Society of India (MSSI) -Bengaluru Chapter. The objective of the Exhibition is to create awareness about MS. And, to support Mr. Punkaj Gupta who is passionate about Photography and an MS Warrior.

They request your presence at this Exhibition, which will be inaugurated Mr. Anand Sharan, Senior Photographer and Mentor on 1 March at 4:30 PM. And go on till 10th March at the Honeycomb A Gallery, Koramangala (Near Sony World Signal). Request your support in creating awareness. They requested to present to support the cause.

City Today News

(citytoday.media)

9341997936

“ಯೋಬ” ೦೨ – ೦೩ – ೨೦೧೯ ಶನಿವಾರದಂದು ರಾತ್ರಿ ೯ ಕೈ ಮರಿಯಾಪುರ ಗ್ರಾಮದಲ್ಲಿ ಪ್ರದರ್ಶಿಸಲಿರುವ ಪವಿತ್ರ ಬೈಬಲ್ ಆಧಾರಿತ ಕನ್ನಡ ಧ್ವನಿ – ಬೆಳಕು ೮ ನೇ ಕಾರ್ಯಕ್ರಮ

ಬೆಂಗಳೂರು, ೨೭ – ೦೨ – ೨೦೧೯ ಬುಧವಾರ

೦೨ – ೦೩ – ೨೦೧೯ ಶನಿವಾರದಂದು ರಾತ್ರಿ ೯ ಕೈ ಮರಿಯಾಪುರ ಗ್ರಾಮದಲ್ಲಿ ಪ್ರದರ್ಶಿಸಲಿರುವ ಪವಿತ್ರ ಬೈಬಲ್ ಆಧಾರಿತ ಕನ್ನಡ ಧ್ವನಿ – ಬೆಳಕು ೮ ನೇ ಕಾರ್ಯಕ್ರಮ ) ಸ್ಥಳ : ೧೮೮೪ ರಲ್ಲಿ ಬರಗಾಲದ ೬೦೦ ಅನಾಥ ಬಾಲಕರಿಗೆ ಒಂದು ಅನಾಥಾಶ್ರಮ ಪ್ರಾರಂಭಿಸಿ ಫ್ರಾನ್ಸ್ ದೇಶದ ಫಾದರ್ ಫಿಲಿಪ್ ಸಿಜೋನ್ ಕನಕಪುರ ಮುಖ , ರಸೆಯ ಬಳಿ ಬೆಂಗಳೂರಿಂದ ೩೦ ಕಿ . ಮೀ . ದೂರದಲ್ಲಿ ಮರಿಯಾಪುರ ಗ್ರಾಮ ಹುಟ್ಟು ಹಾಕಿದರು . ಬಾಲಕರು ಬೆಳೆದು ವೃದ್ದಿಯಾದ ಹಾಗೆ ಅವರಿಗೆ ಮದುವೆ ಮಾಡಿ ಒಂದು ಮನೆ ಹಾಗೂ ಒಂದು ತುಂಡು ಭೂಮಿಯನ್ನು ಅವರು ನೀಡಿದರು . ೩೫ ವರ್ಷಗಳ ಸತತ ನಿಸ್ವಾರ್ಥ ದುಡಿಮೆಯ ನಂತರ ೧೯೨೭ ರಲ್ಲಿ ಮೃತರಾಗಿ ಅವರು ನಿರ್ಮಿಸಿದ ದೇವಾಲಯದಲ್ಲೇ ಅಡಕಮಾಡಲ್ಪಟ್ಟಿದ್ದಾರೆ , ಅನಾಥರ ತಂದೆಯಾದ ಫಾದರ್ ಫಿಲಿಪ್ ಸಿಜೋನ್ ಅವರ ಸ್ಮರಣಾರ್ಥ ೧೯೯೫ ರಿಂದ ಪ್ರತಿವರ್ಷ ೨೫ ಸಂವತ್ಸರಗಳಿಂದ ಇಲ್ಲಿನ ನಿವಾಸಿಗಳು ಬೈಬಲ್ ಆಧಾರಿತ ಧ್ವನಿ – ಬೆಳಕು ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ . ಯೋಬ : ಧ್ವನಿ – ಬೆಳಕು ಕಾರ್ಯಕ್ರಮದ ೨೫ ನೇ ವರ್ಷದ ರಜತ ಮಹೋತ್ಸವದ ಸವಿನೆನಪಿಗಾಗಿ ಈ ೮ ನೇ ಕಾರ್ಯಕ್ರಮ “ ಯೊಬ ” ೦೨ – ೦೩ – ೨೦೧೯ ಶನಿವಾರ ರಾತ್ರಿ ೯ ಕ್ಕೆ ಕನಕರಪುರ ಮುಖ್ಯ ರಸ್ತೆಯಲ್ಲಿರುವ ಮರಿಯಾಮರದಲ್ಲಿ ಪ್ರಥಮ ಬಾರಿ ವೇದಿಕೆಯ ಮೇಲೆ ಮೂಡಿಬರಲಿದೆ . ಬೈಬಲ್ಲಿನ ೭೮ ಪುಸ್ತಕಗಳ ಪೈಕಿ ಈಗಾಗಲೆ ೭ ಕಾರ್ಯಕ್ರಮಗಳಲ್ಲಿ ೫೩ ಪುಸ್ತಕಗಳು ಕಥಾವಸ್ತುಗಳಾಗಿವೆ . ಯೋಬ ನಾಟಕಕ್ಕೆ ಪವಿತ್ರ ಬೈಬಲ್ಲಿನ ಮತ್ತೆರಡು ಪುಸ್ತಕಗಳು , ಯೋಬ ಹಾಗೂ ತೊಗೀತ , ಆಧಾರವಾಗಿವೆ . ಅಲ್ಲಿ ಕಂಡುಬರುವ ಘಟನೆಗಳು ಇಸ್ರಯೇಲ್‌ ಹಾಗೂ ಮಧ್ಯ ಪ್ರಾಚ್ಯ ಪ್ರದೇಶಗಳ ಕ್ರಿ . ಪೂ . ೨೦೦ ರ ಹಿಂದಕ್ಕೆ ಹೋಗುತ್ತವೆ . ತಾತ್ಪರ್ಯ : ನಾಟಕದಲ್ಲಿ ಆದಿ ತಂದೆ – ತಾಯಿಗಳಾದ ಆದಾಮ್ – ಏವ , ಕಾಯಿನ ಪಿಶಾಚಿಯ ಶೋಧನೆಗೆ ಒಳಪಟ್ಟರೆ , ನೋಹ , ಯೋಬ ಮತ್ತು ತೊಬಿತ ಸದೃಢರಾಗಿ ದೇವರಲ್ಲಿ ಅಚಲ ಭಕ್ತಿ ಇರಿಸಿದ್ದೇ ಅಲ್ಲದೆ ಬಂದ ಕಷ್ಟಗಳನ್ನು ಸಹಿಸಿಕೊಂಡು ಕಡೆಯವರೆಗೂ ದೇವರ ಪರ ನಿಷ್ಠೆಯಿಂದ ನಿಲ್ಲುತ್ತಾರೆ . ೬ . ೩೦ ಗಂಟೆಗಳ ಈ ನೃತ್ಯ – ನಾಟಕದಲ್ಲಿ ೫೦೦ ನೃತ್ಯ ಮಾಡುವ ಗ್ರಾಮದ ಮಕ್ಕಳು , ೨೫೦ ಪಾತ್ರದಾರಿಗಳಲ್ಲದೆ ದನ – ಕರು , ಕುರಿ , ಕತ್ತೆ , ಕುದುರೆ ಮುಂತಾದ ಪ್ರಾಣಿಗಳು ೧೨೫ ಮೀಟರ್ ವೇದಿಕೆಯ ಮೇಲೆ ಬರುತ್ತವೆ .

City Today News

(citytoday.media)

9341997936

ಯೂರೋಪಿನಲ್ಲಿ ಛಾಪು ಮೂಡಿಸಲು ವೆಂಚರ್ ಕ್ಯಾಟಲಿಸ್ಟ್ಸ್ ತೀರ್ಮಾನ

ಬೆಂಗಳೂರು, ಫೆಬ್ರವರಿ, 2019- ಭಾರತದ ನವೋದ್ಯಮಗಳ ಪಾಲಿಗೆ ಸಮಗ್ರ ಪರಿಪೋಷಣಾ ಕೇಂದ್ರವಾಗಿರುವ ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯು ಜಾಗತಿಕ ನವೋದ್ಯಮ (ಸ್ಟಾರ್ಟಪ್) ಕೇಂದ್ರವಾದ ಇಂಗ್ಲೆಂಡಿನಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ತೀರ್ಮಾನಿಸಿದೆ.

ಈ ಬಗ್ಗೆ ಮಾತನಾಡಿರುವ ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯ ಸಹ-ಸಂಸ್ಥಾಪಕ ಅನುಜ್ ಗೊಲೇಚ “ಇದೇ ಮೊದಲ ಬಾರಿಗೆ ನವೋದ್ಯಮಗಳಲ್ಲಿ ಹಣ ಹೂಡುವವರನ್ನು ಯೂರೋಪ್-ಏಷ್ಯಾ ಮಟ್ಟದಲ್ಲಿ ಉತ್ತೇಜಿಸಲು ನಾವು ಹೆಸರಾಂತ ವೆಂಚರ್ ಕ್ಯಾಪಿಟಲ್ ಉದ್ದಿಮೆಯಾದ ಜೆಪಿಐಎನ್ ಜತೆ ಸಹಭಾಗಿತ್ವ ಹೊಂದಿದ್ದೇವೆ,’’ ಎಂದಿದ್ದಾರೆ.

“ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯು ಈಗಾಗಲೇ 2019 ಮತ್ತು 2020ರ ನೀಲಿನಕಾಶೆಯನ್ನು ಅಭಿವೃದ್ಧಿ ಪಡಿಸಿದೆ. ಈ ವರ್ಷ ಎಚ್ಎನ್ಐ/ಕಾರ್ಪೊರೇಟ್ ಸಂಸ್ಥೆಗಳನ್ನು ಒಳಗೊಂಡಿರುವ 150ಕ್ಕೂ ಹೆಚ್ಚು ಹೂಡಿಕೆದಾರರ ಜಾಲವನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಮುಂದಿನ ವರ್ಷ ಹೂಡಿಕೆದಾರರ ಈ ಜಾಲದಲ್ಲಿ 500ಕ್ಕೂ ಹೆಚ್ಚು ಸದಸ್ಯರಿರುವಂತೆ ಮಾಡಲಾಗುವುದು,’’ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, “ಆರಂಭಿಕ ಹಂತದಲ್ಲಿ ನವೋದ್ಯಮಗಳಿಗೆ 125ರಿಂದ 150 ಕೋಟಿ ರೂ.ಗಳ ನಿಧಿಯನ್ನು ಪೂರೈಸಲಾಗುವುದು. ಮುಂದಿನ ಹಂತಗಳಲ್ಲಿ ಇದನ್ನು 250 ಕೋಟಿ ರೂ.ಗಳಿಗೆ ಏರಿಸಲಾಗುವುದು,’’ ಎಂದು ಗೊಲೇಚ ಹೇಳಿದ್ದಾರೆ.

ಅಲ್ಲದೆ, “ನಮ್ಮ ಸಂಸ್ಥೆಯು ಸದ್ಯಕ್ಕೆ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಅಗ್ರಗಣ್ಯ ಸಂಸ್ಥೆಯಾಗಿದ್ದು, ಏಷ್ಯಾ ಖಂಡದ ಮಟ್ಟದಲ್ಲಿ ಮುಂಚೂಣಿ ಐದು ಸ್ಥಾನಗಳಲ್ಲಿ ಒಂದನ್ನು ನಮ್ಮದಾಗಿಸಿಕೊಂಡಿದ್ದೇವೆ. ಜಗತ್ತಿನಲ್ಲಿ ಮೂರನೇ ಅತ್ಯಂತ ದೊಡ್ಡ ತಂತ್ರಜ್ಞಾನದ ಆಡುಂಬೊಲವಾಗಿರುವ ಲಂಡನ್, ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯ ಬೆಳವಣಿಗೆಗೆ ತಕ್ಕ ವಾತಾವರಣವನ್ನು ಒದಗಿಸಲಿದೆ,’’ ಎಂದು ಅವರು ಹೇಳಿದ್ದಾರೆ.“ಅತ್ಯಧಿಕ ಬಂಡವಾಳ ಕ್ರೋಡೀಕರಣ, ಅಂತರರಾಷ್ಟ್ರೀಯ ಮಟ್ಟದ ಪ್ರತಿಭೆ ಮತ್ತು ವಿನೂತನ ವಾಣಿಜ್ಯ ವಹಿವಾಟು ಪರಿಕಲ್ಪನೆಗಳ ಆವಿಷ್ಕಾರವು ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯ ಶಕ್ತಿಗಳಾಗಿವೆ. ಯೂರೋಪ್ ಖಂಡದಲ್ಲಿ ಮೊದಲಿಗೆ ಲಂಡನ್ ನಗರದಲ್ಲಿ ನಾವು ಛಾಪು ಮೂಡಿಸಲಿದ್ದು, ನಂತರ ಇಡೀ ಯೂರೋಪಿನಾದ್ಯಂತ ನೆಲೆಯೂರುವ ಗುರಿ ಇಟ್ಟುಕೊಂಡಿದ್ದೇವೆ,’’ ಎಂದು ನಯನ್ ಗೊಲೇಚ ಭರವಸೆ ವ್ಯಕ್ತಪಡಿಸಿದ್ದಾರೆ.

ವೆಂಚರ್ ಕ್ಯಾಟಲಿಸ್ಟ್ಸ್ ಜೊತೆಗಿನ ಸಹಭಾಗಿತ್ವದ ಬಗ್ಗೆ ಮಾತನಾಡಿರುವ ಜೆಪಿಐಎನ್ ವ್ಯವಸ್ಥಾಪಕ ನಿರ್ದೇಶಕ ನಯನ್ ಗಾಲಾ, “ನವೋದ್ಯಮಗಳ ಅಗಾಧ ಬೆಳವಣಿಗೆಗೆ ಮತ್ತು ರಚನಾತ್ಮಕ ಸಹಭಾಗಿತ್ವಕ್ಕೆ ಯೂರೋಪ್-ಏಷ್ಯಾ ವಲಯದ ಕಾರಿಡಾರ್ ಅನಿವಾರ್ಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ವಾಣಿಜ್ಯ ವಹಿವಾಟು ವೃದ್ಧಿಸಿದ್ದು ಸದ್ಯಕ್ಕೆ ಇದು 20 ಶತಕೋಟಿ ಪೌಂಡ್ ಗಳಷ್ಟಿದೆ. ಹೀಗಾಗಿ, ಯೂರೋಪ್-ಏಷ್ಯಾ ಕಾರಿಡಾರ್ ವಲಯದ ಹೂಡಿಕೆದಾರರಿಗೆ ತಕ್ಕ ವೇದಿಕೆ ಒದಗಿಸುವ ಸಲುವಾಗಿ ವೆಂಚರ್ ಕ್ಯಾಟಲಿಸ್ಟ್ಸ್ ಜತೆ ಕೈ ಜೋಡಿಸಿದ್ದೇವೆ. ಇದರಿಂದಾಗಿ ಜಗತ್ತಿನೆಲ್ಲೆಡೆ ನವೋದ್ಯಮಗಳಿಗೆ ಮತ್ತಷ್ಟು ಉಜ್ವಲ ಪರಿಸರವನ್ನು ಒದಗಿಸಲು ಸಾಧ್ಯವಾಗಲಿದೆ’’ ಎಂದಿದ್ದಾರೆ.

City Today News

(citytoday.media)

9342997936

ಸ್ವಾಧೀನ ಪುನರ್ವಸತಿ ಕಾಯ್ದೆ 2019 ಕಾಯ್ದೆಯ ಕರಾಳ ಮುಖ

ದಿನಾಂಕ 25 / 02 / 2019ರ

ಪೂಜಾವಾಣಿ ಪ್ರಕಟಣೆಯನ್ನು ಆಧರಿಸಿ ಭೂ ಸ್ವಾಧೀನ ತಿದ್ದುಪಡಿ ಮಸೂದೆ 2019 ಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಅನುಮೋದನೆ ಪಡೆದಿದ್ದು ರಾಜೀಪಾಲರ ಅಂಗಿಕಾರಬಾಕಿ ಇದೆ . ರಾಜ್ಯಪಾಲರ ಅಂಕಿತ ಬಿದ್ದ ತಕ್ಷಣ ಜಾರಿಗೆ ಬರುತ್ತದೆ . ಈ ಕಾಯ್ದೆಯಿಂದಾಗಿ ಸರ್ಕಾರದ ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರ ಬದುಕು ಮೂರ ಬಟ್ಟೆಯಾಗಿರುತ್ತದೆ .

ಕಾಯೆಯ ಉದ್ದೇಶ –

ಸರ್ಕಾರದ ಯೋಜನೆಗಳಿಗೆ ಭೂಮಿಯನ್ನು ಕಳೆದುಕೊಳ್ಳುವ ರೈತರ ಪುನರ್ವಸತಿ ಮತ್ತು ಅವರ ಪುನರ್‌ಸ್ಥಾಪನೆಯಾಗಿರುತ್ತದೆ . ಆದರೆ 2019ರ ಈ ಕಾಯ್ದೆ ಜಾರಿಗೆ ಬಂದರೆ ರೈತ ಪುನರ್‌ಸ್ಥಾಪನೆಯಾಗುವ ಬದಲು ರೈತನ ಬದುಕು ಬೀದಿಗೆ ಬರುತ್ತದೆ .

ಈ ಹಿಂದೆ ಬ್ರಿಟಿಷರ 1838 ರ ಲ್ಯಾಂಡ್ ಅಕ್ಲೀಜೆಷನ್ ಆಕ್ಸ್ ಪ್ರಕಾರ ಭೂಮಿಯನು ವಶಪಡಿಸಿಕೊಂಡು ಕಿಲುಬು ಕಾಸಿನ ಪರಿಹಾರವನ್ನು ನೀಡುತ್ತಿದ್ದ ಪರಿಸ್ಥಿತಿ ಇದ್ದಂತ ಸಮಯದಲ್ಲಿ 2014 ರಲ್ಲಿ ಯು . ಪಿ . ಎ ಸರ್ಕಾರವು ಕೇಂದ್ರದಲ್ಲಿ ಲ್ಯಾಂಡ್ ಅಕ್ಲೀಜೆಷನ್ ಬಿಲ್ಲನ್ನು ತಂದು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಯ್ದೆ ರೂಪಿಸಿದರು . 2015 ರಲ್ಲ ಎನ್ . ಡಿ . ಎ ಸರ್ಕಾರವು ಈ ಕಾಯ್ದೆಗೆ ತಿದ್ದುಪಡಿಸಲು ಹೊರಟಾಗ ವಿರೋದ ಪಕ್ಷಗಳು ಇದನ್ನು ಪ್ರಬಲವಾಗಿ ವಿರೋಧಿಸಿದವು .

ಕರ್ನಾಟಕದಲ್ಲಿ ರೈತಪರ ಸರ್ಕಾರವೆಂದು ಹೇಳಿಕೊಂಡು ನಾವು ಮಣ್ಣಿನ ಮಕ್ಕಳೆಂದು ರೈತರ ಭೂಮಿಯಲ್ಲಿ ಪ್ರಚಾರಕ್ಕೋಸ್ಕರ ಪೈರು ನಾಟಿಮಾಡಿ ಪೋಸ್ ಕೊಡುವ ಮುಖ್ಯಮಂತ್ರಿಗಳು 2019 ರ ಭೂಸ್ವಾಧೀನ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದು ನಿಜವಾದ ಮಣ್ಣಿನ ಮಕ್ಕಳನ್ನು ಗುಂಡಿಯಲ್ಲಿ ಹಾಕಿ ಗೋರಿ ಕಟ್ಟುವಂತಹ ಕೆಲಸಕ್ಕೆ ಮುಂದಾಗಿದ್ದಾರೆ . ಈ ಮಸೂದೆಯಲ್ಲಿ ಕಾಲ೦ 15 ( ಎ ) ಯನ್ನು ಸೇರಿಸಲಾಗಿದ್ದು ಇದರಿಂದ ಕೇವಲ ರಿಯಲ್ ಎಸ್ಟೇಟ್ ಕುಳಗಳಗೆ ಅನುಕೂಲವಾಗುವ ದುರುದ್ದೇಶ ಹೊಂದಿದೆ .

ಅಲ್ಲದೇ ರೈತರಿಗೆ ನೀಡುವ ಪರಿಹಾರದಲ್ಲಿ ಕಾಲಂ 23 ( ಎ ) ಯನ್ನು ಸೇರಿಸಿ ರೈತರಿಗೆ ಬಾರಿ ಅನ್ಯಾಯವನ್ನು ಎಸಗಿದ್ದಾರೆ , ರೈತನಿಗೆ ವ್ಯವಸಾಯದ ಹೊರತು ಬೇರೆ ಕೆಲಸ ಗೊತ್ತಿಲ್ಲದೇ ಇರುವುದರಿಂದ ಅವನು ಮತ್ತೆ ಭೂಮಿಯನ್ನು ಕೊಳ್ಳಬೇಕಾಗುತ್ತದೆ . ಅದರೆ ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ ಇವರ ಘೋಷಣೆ ಮಾಡಲಿರುವ ಪರಿಹಾರದಲ್ಲಿ ಭೂಮಿ ಕೊಳ್ಳುವುದು ಕಷ್ಟ ಸಾಧ್ಯವಾಗಿದೆ . ಏಕೆಂದರೆ ಭೂಮಿಯ ನೋಂದಣಾದರಕ್ಕೂ ನಿಜ ಮಾರುಕಟ್ಟೆ ಬೆಲೆಗೂ ಭಾರಿ ವ್ಯತ್ಯಾಸವಿರುವುದು ಈ ಕಾಯ್ದೆ ರೂಪಿಸಿರುವಂತಹ ನಮ್ಮನ್ನ ಆಳುವವರಿಗೂ ತಿಳಿದಿದೆ . ಎಕೆಂದರೆ ಅನೇಕ ರಾಜಕಾರಣಿಗಳು ರಿಯಲ್ ಎಸ್ಟೇಟ್ ದಂದೆಗಳನ್ನು ನಡೆಸುವಂತಹವರೆ ಆಗಿದ್ದಾರೆ .

ಆನೇಕಲ್ ತಾಲ್ಲೂಕಿನ ಸೂರ್ಯನಗರ 4ನೇ ಹಂತಕ್ಕೆ ಕರ್ನಾಟಕ ಗೃಹಮಂಡಳಿಯು ಭೂಸ್ವಾಧೀನ ಪ್ರಕ್ರಿಯೆಯನ್ನು 2013 ರಲ್ಲಿ ಹೊರಡಿಸಿದ್ದು ಆ ಲಾಗಾಯ್ತಿನಿಂದ ಈವರೆವಿಗೂ ನೋಂದಣಾಶುಲ್ಕವನ್ನು ಸರಿಯಾದ ರೀತಿಯಲ್ಲಿ ನಿಗದಿ ಪಡಿಸಿರುವುದಿಲ್ಲ . ಅಂತಹದರಲ್ಲಿ ಕಸಬಾ ಹೋಬಳಿಯ ಇಂಢವಾಡಿ , ಬಗ್ಗನದೊಡ್ಡಿ , ಜಿಗಣಿ ಹೋಬಳಿಯ ಕಾಡುಜಕ್ಕನಹಳ್ಳಿ , ಬೊಮ್ಯಂಡಹಳ್ಳಿ , ಕೋನಸಂದ್ರ ಗ್ರಾಮಗಳ ಒಟ್ಟು 1938 ಎಕರೆ 13 ಗುಂಟೆ ಜಮೀನನ್ನು ವಶಪಡಿಸಿಕೊಂಡು ರೈತರ ಪರಿಸ್ಥಿತಿಯನ್ನು ತ್ರಿಶಂಕು ಸ್ಥಿತಿಯಲ್ಲಿ ಇದುವರೆವಿಗೂ ನಿಲ್ಲಿಸಿದ್ದರು . ಆದರೆ ಈಗ ಇದ್ದಕ್ಕಿದ್ದಂತೆ ಮಾನ್ಯ ಕುಮಾರಸ್ವಾಮಿಯವರ ಕಿಚಡಿ ಸರ್ಕಾರವು ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ನೇತು ಹಾಕಿ ಜೀವಂತವಾಗಿ ಚರ್ಮ ಸುಲಿಯಲು ಮುಂದಾಗಿದ್ದಾರೆ . ಈ ಐದು ಗ್ರಾಮಗಳ ಸುತ್ತಮುತ್ತಲ ಭೂಮಿಯ ಬೆಲೆ ಎಕರೆ ಒಂದಕ್ಕೆ 1 . 5 ಕೋಟಿಗೂ ಅಧಿಕವಾಗಿದ್ದು . ಆದರೆ ನೋಂದಣಾ ಮಾರ್ಗ ಸೂಚಿ ಬೆಲೆಯು ಕೇವಲ 18 ಲಕ್ಷದಿಂದ 50 ಲಕ್ಷದ ಅಸುಪಾಸಿನಲ್ಲಿದೆ . ಇದರಿಂದಾಗಿ ರೈತರಿಗೆ ಬಾರಿ ಅನ್ಯಾಯವಾಗುತ್ತದೆ , ಅದ್ದರಿಂದ 2019ರ ಈ ಕಾಯ್ದೆಯನ್ನು ವಾಪಸ್ಸು ಪಡೆಯಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ . ಇಲ್ಲದೇ ಇರುವ ಪಕ್ಷದಲ್ಲಿ ರಾಜ್ಯಾದ್ಯಂತ ರೈತರ ಹೋರಾಟ ಪ್ರಾರಂಭಿಸಬೇಕಾಗುತ್ತದೆ .

ಹಕ್ಕೊತ್ತಾಯಗಳು

1 , ಕರ್ನಾಟಕ ಭೂಸ್ವಾಧೀನ ತಿದ್ದುಪಡಿ ಮಸೂದೆ 2019ನ್ನು ವಾಪಸ್ಸು ಪಡೆಯಬೇಕು . ರೈತರಿಗೆ 2014 ರ ಯು . ಪಿ . ಎ ಸರ್ಕಾರದ ಮಸೂದೆಯ ಪ್ರಕಾರ ಪರಿಹಾರ ನೀಡಬೇಕು .

2 . ಆನೇಕಲ್ ತಾಲ್ಲೂಕಿನ ಸೂರ್ಯನಗರದ 4ನೇ ಹಂತಕ್ಕೆ 2013ರಲ್ಲಿ ಸ್ವಾಧೀನಪಡಿಸಿಕೊಂಡು ಇಲ್ಲಿಯವರೆಗೂ ನೆನೆಗುದಿಗೆ ಬಿದಿದ್ದ ಯೋಜನೆಗೆ ತ್ವರಿತಗತಿಯಲ್ಲಿ ಚಾಲನೆಕೊಟ್ಟು ಈಗಿನ ಮಾರುಕಟ್ಟೆ ದರದಲ್ಲಿ ನಾಲ್ಕು ಪಟ್ಟು ಪರಿಹಾರವನ್ನು ನೀಡಬೇಕು .

3 , ಜಂಟಿ ಅಭಿವೃದ್ದಿಗೆ ಭೂಮಿ ನೀಡುವ ರೈತರುಗಳಿಗೆ ಶೇ 50ರ ದರದಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ನೀಡುವುದಲ್ಲದೇ ಯೋಜನೆಯನ್ನು ನಿಗದಿತ ಸಮಯದಲ್ಲಿ ಮುಗಿಸುವಂತಹ ಒಂದು ಅಶ್ವಾಸನೆಯನ್ನ ನೀಡುವಂತೆ ಕ್ರಮವಹಿಸುವುದು ತಪ್ಪಿದಲ್ಲಿ ಅದಕ್ಕೆ ನಷ್ಟ ಪರಿಹಾರ ಕೊಡಬೇಕು .

City Today News

(citytoday.media)

9341997936

SPECIAL OLYMPICS BHARAT KARNATAKA “SPECIAL OLYMPICS WORLD SUMMER GAMES- 2019” ABU DHABHI- 14th to 21st March 2019

Bengaluru, 26th Feb, 2019:

16 athletes and 9 coaches from Karnataka are selected for Special Olympics World Summer Games 2019 to be held at Abu Dhabhi from 14h to 21st March 2019. Its an honour that athletes from Karnataka are selected to represent India among 192 countries all over the world. A felicitation and fare well wishing all the athletes and coaches to give their best at the world games and bring laurels to our country is being organized on 28th, February 2019 at Rama Mandir ground, Rajajinagar

Many prominent persons from all disciplines have wished the athletes for their success. Few of them namely Politician and actor Mr Prakash Raj. Actor Mr. Yash, Producer Mr. Rockline Venkatesh, Actor Mr.Doddanna, Rajajinagar MLA Sri.Suresh Kumar, Politicia Bangarappa, Actor Mr Ajay Rao. Thanks to all those who supported Special Olympics Bharat Karnataka and our athletes and coaches. Companise like ACO system s and olutions, Buildtech polymers pvt ltd, Seven hills builders and many more have joined hands with Special Olympics Bharat Karnataka for the success of the program.

City Today News

(citytoday.media)

9341997936