ಬೆಂಗಳೂರು ನಗರದ ಸಿ . ಸಿ . ಬಿ ಘಟಕದ ಸೈಬರ್‌ಕ್ರಂ ಪೊಲೀಸರು ನಡೆಸಿದ ಕಾರ್ಯಚರಣೆ

ದಿನಾಂಕ : 05 . 02 . 2019

ದಿನಾಂಕ 04 . 02 . 2019 ರಂದು ಬೆಂಗಳೂರು ನಗರದ ಸಿ . ಸಿ . ಬಿ ಘಟಕದ ಸೈಬರ್‌ಕ್ರಂ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಬೆಂಗಳೂರು ನಗರದ ದೇವಿನಗರದಲ್ಲಿ ವಾಸವಾಗಿರುವ ಹಿರಿಯ ನಾಗರಿಕರೊಬ್ಬರ ವಾಹನ ಚಾಲಕನಾಗಿದ್ದುಕೊಂಡು , ವಿಶ್ವಾಸಗಳಿಸಿ ಪಿರೈಾದಿಯ ಲಕ್ಷ್ಮೀ ವಿಲಾಸ ಬ್ಯಾಂಕಿನ ಎ . ಟಿ . ಎಂಕಾರ್ಡ್ನ್ನು ಪಡೆದು ಅವರ ಗಮನಕ್ಕೆ ಬಾರದಂತೆ , ಎ . ಟಿ . ಎಂ ಕಾರ್ಡ್ನ ಭಾವಚಿತ್ರವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಂಗ್ರಹಿಸಿಟ್ಟುಕೊಂಡು , ಪಿರೈಾದಿಯ ಅನುಮತಿಯನ್ನು ಪಡೆಯದೇ ಅನಧಿಕೃತವಾಗಿ ತನ್ನ ಸ್ನೇಹಿತನಿಗೆ ವಾಟ್ಸ್ಆಫ್ ಮೂಲಕ ಕಳುಹಿಸಿದ್ದು , ತದನಂತರದಲ್ಲಿ ಪಿಲ್ಯಾಡಿಯ ಕಾರ್ಡ್ನ ಮಾಹಿತಿ ಬಳಸಿ ಪೇಟಿಯಂ ಮೂಲಕ ತನ್ನ ಖಾತೆಗೆ ಒಂಬತ್ತು ಬಾರಿ ಒಟ್ಟು 47 , 000 / – ರೂ ಹಣವನ್ನು ಹಂತ ಹಂತವಾಗಿ ಒಂದು ತಿಂಗಳ ಅವಧಿಯಲ್ಲಿ ವರ್ಗಾವಣೆ ಮಾಡಿಕೊಂಡು ನಂಚಿಕೆ ದ್ರೋಹ ಎಸಗಿ ವಂಚಿಸಿದ ಆರೋಪಿಗಳಿಬ್ಬರನ್ನು ಬೆಂಗಳೂರು ನಗರದ ದೇವಿನಗರದ ಎಸ್ . ಆರ್ . ಬ್ಲೂ – ಡೈಮಂಡ್ ಅಪಾರ್ಟ್‌ಮೆಂಟ್ ಬಳಿ ವಶಕ್ಕೆ ಪಡೆದು ವಿಚಾರಣೆ ಕೈಗೊಂಡು ದಸ್ತಗಿರಿ ಕ್ರಮ ಜರುಗಿಸಿ ಆರೋಪಿಗಳ ವಶದಿಂದ ಕೃತ್ಯಕ್ಕೆ ಬಳಸಿದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ . ದಸ್ತಗಿರಿಯಾದವರ ವಿವರ ಕೆಳಕಂಡಂತಿವೆ : ಎ1 ) ನಾಗರಾಜ ಸಿ , ಬಿನ್ ಲೇಟ್ ಚಂದ್ರಪ್ಪ ವಯಸ್ಸು – 30 , ವ್ಯಾಸಂಗ – ಎಸ್ . ಎಸ್ . ಎಲ್ . ಸಿ , ಉದ್ಯೋಗ – ಚಾಲಕ , ವಾಹ – ನಂ – 204 , 2ನೇ ಮುಖ್ಯರಸ್ತೆ , 2ನೇ ಕ್ರಾಸ್ , ದೇವಿ ನಗರ , ಕೊಡಿಗೆಹಳ್ಳಿ ಹತ್ತಿರ , ಬೆಂಗಳೂರು ನಗರ , ಸ್ವಂತ ವಿಳಾಸ : 1ನೇ ಮುಖ್ಯರಸ್ತೆ , ದಿಡಗೂರು ಗ್ರಾಮ , ಹೊನ್ನಳ್ಳಿ ತಾಲ್ಲೂಕು , ದಾವಣಗೆರೆ ಜಿಲ್ಲೆ . ಎ2 ) ಸಚಿನ್ ಹೆಚ್ . ಎಸ್ . ಏನ್ ಶಿವರಾಜ ಹೆಚ್ . ಎಸ್ . ವಯಸ್ಸು 23 , ವ್ಯಾಸಂಗ – ಡಿಪ್ಲೋಮೊ , ಉದ್ಯೋಗ – ಚಾಲಕ , ವಾಸ – ನಂ – 001 , ಮುಂದೆ ಎಸ್ . ಆರ್ . ಬ್ಲೂ ಡೈಮಂಡ್ ಅಪಾರ್ಟ್‌ಮೆಂಟ್ , ದೇವಿ ನಗರ ಮುಖ್ಯರಸ್ತೆ , ಲೊಟ್ಟೆಗೊಲ್ಲಹಳ್ಳಿ , ಬೆಂಗಳೂರು ನಗರ – 560094 . ಸ್ವಂತ ವಿಳಾಸ ನಂ87 , ಹೊನ್ನನಾಯಕನಹಳ್ಳಿ , ಚನ್ನಪಟ್ಟಣ , ರಾಮನಗರ ಜಿಲ್ಲೆ .

ಆರೋಪಿಗಳ ಪ್ರಾಥಮಿಕ ವಿಚಾರಣೆಯಿಂದ ಕೆಳಕಂಡ ಅಂಶಗಳು ತಿಳಿದು ಬಂದಿರುತ್ತದೆ .

1 ) ಆರೋಪಿಗಳಿಬ್ಬರು ಒಂದೇ ಏರಿಯಾದವರಾಗಿದ್ದು ಹಲವಾರು ವರ್ಷಗಳಿಂದ ಪರಿಚಿತರಿದ್ದು ಇಬ್ಬರೂ ಕೂಡಚಾಲಕರಾಗಿ ವೃತ್ತಿಜೀವನ ನಡೆಸುತ್ತಿದ್ದು ಇವರುಗಳ ಪೈಕಿ ಆರೋಪಿ ನಾಗರಾಜು ಪಿರೈಾದಿಯ ವಾಹನಕ್ಕೆ ಚಾಲಕನಾಗಿ ಕಳೆದ 10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಂಶ ತಿಳಿದುಬಂದಿರುತ್ತದೆ . 2 ) ಆರೋಪಿ ನಾಗರಾಜ ಪಿರಾದುದಾರರ ಮೊಬೈಲ್ ಮತ್ತು ಲಕ್ಷ್ಮೀ ವಿಲಾಸ ಬ್ಯಾಂಕಿನ ಎಟಿಎಂ ಕಾರ್ಡ್ ಅನ್ನು ತನ್ನ ವಶದಲ್ಲಿಟ್ಟು ಕೊಂಡು ದೈನಂದಿನ ಚಟುವಟಿಕೆಗೆ ನೆರವು ನೀಡಿ ವಿಶ್ವಾಸ ಗಳಿಸಿಕೊಂಡು ತನ್ನ ವಶದಲ್ಲಿದ್ದ ಸಮಯದಲ್ಲಿ ಎಟಿಎಂ ಕಾರ್ಡ್ನ ಎರಡು ಬದಿಯ ಛಾಯಾಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಂಗ್ರಹಿಸಿಟ್ಟುಕೊಂಡು ಮತ್ತೊಬ್ಬ ಆರೋಪಿಯಾದ ತನ್ನ ಸ್ನೇಹಿತ ಸಚಿನ್ ಗೆ ವಾಟ್ಸ್ ಆಫ್ ಮೂಲಕ ಕಾರ್ಡ್ನ ಛಾಯಾಚಿತ್ರವನ್ನು ಕಳುಹಿಸಿದ್ದು , ಸದರಿ ಮಾಹಿತಿ ಬಳಸಿಕೊಂಡ ಸಚಿನ್ ತನ್ನ ಫೇಡಿಯಂ ಖಾತೆಗೆ ವಿದ್ಯಾವಿಯ ಖಾತೆಯಿಂದ ಒಂದು ತಿಂಗಳ ಅವಧಿಯಲ್ಲಿ ಒಂಬತ್ತು ಬಾರಿ ಅನಧಿಕೃತವಾಗಿ ಒಟ್ಟು 47 , 000 / – ರೂಗಳನ್ನು ವರ್ಗಾಯಿಸಿಕೊಂಡು ಪಿರಾದುದಾರರಿಗೆ ವಂಚಿಸಿರುವುದು ಕಂಡುಬಂದಿರುತ್ತದೆ . ಸಾರ್ವಜನಿಕರು ಯಾವುದೇ ವ್ಯಕ್ತಿಗೆ ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್‌ನ ಖಾತೆಯ ವಿವರ , ಎಟಿಎಂ ಕಾರ್ಡ್ , ಆನ್‌ಲೈನ್ ಬ್ಯಾಂಕಿಗೆ ಅಧಿಕೃತವಾಗಿ ನೋಂದಣಿಯಾದ ಮೊಬೈಲ್ ಸಂಖ್ಯೆಯುಳ್ಳ ಮೊಬೈಲನ್ನು ನೀಡಿದ್ದಲ್ಲಿ ತಮ್ಮ ಗಮನಕ್ಕೆ ಬಾರದೇ ನಂಬಿಕೆ ದ್ರೋಹವೆಸಗಿ ತಮ್ಮ ಅನುಮತಿ ಇಲ್ಲದೇ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸುವ ಅಪರಾಧಕ್ಕೆ ಬಲಿಯಾಗಬಾರದೆಂದು ಕೋರಿದೆ . ಈ ಪತ್ತೆ ಕಾರ್ಯವನ್ನು ಮಾನ್ಯ ಅಪರ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ ಅಲೋಕ್ ಕುಮಾರ್ , ಐ . ಪಿ . ಎಸ್ . ಉಪ ಮೊಅಸ್ ಆಯುಕ್ತರು , ಅಪರಾಧ ರವರಾದ ಶ್ರೀ ಗಿರೀಶ್ . ಎಸ್ , ಐ . ಪಿ . ಎಸ್ . ರವರ ಮಾರ್ಗದರ್ಶನದಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿ . ಐ . ಶ್ರೀ . ಯಶವಂತ್‌ಕುಮಾರ್ ಕೆ . ಎನ್ , ಎ . ಎಸ್ . ಐ ಭೋಜರಾಜು ಹಾಗೂ ಸಹದ್ಯೋಗಿಗಳಾದ ವಿನೋದ್ ಕುಮಾರ್ ಮತ್ತು ನೂರುಲ್ಲಾರವರುಗಳು ಕೈಗೊಂಡಿರುತಾರೆ.

City Today News

(citytoday.media)

9341997936

ಸಿಸಿಬಿ ಕಾರ್ಯಾಚರಣೆ ವಾಹನ ಕಳವು ಆಸಾಮಿ ಬಂಧನ

ಸಿಸಿಬಿ ಕಾರ್ಯಾಚರಣೆ ವಾಹನ ಕಳವು ಆಸಾಮಿ ಬಂಧನ , 15 ಲಕ್ಷ ರೂ ಬೆಲೆಯ 1 ಎರ್ಟಿಗಾ ಹಾಗೂ 6 ದ್ವಿಚಕ್ರ ವಾಹನಗಳ ವಶ . ಬೆಂಗಳೂರು ನಗರದ ಬೆಳ್ಳಂದೂರು , ಸಂಪಂಗಿರಾಮ ನಗರ , ಬನಶಂಕರಿ , ಕುಮಾರಸ್ವಾಮಿ ಲೇಔಟ್ , ರಾಜಾಜಿ ನಗರ , ಆರ್ . ಟಿ ನಗರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಘೋರೂಂ ಹಾಗೂ ಸರ್ವಿಸ್ ಸ್ಟೇಷನ್‌ಗಳ ಹತ್ತಿರ ನಿಲ್ಲಿಸುತ್ತಿದ್ದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಅಸಾಮಿಯ ಮಾಹಿತಿಯು ಸಿಸಿಬಿಯ ಹಿರಿಯ ಅಧಿಕಾರಿಗಳಿಗೆ ಬಂದಿರುತ್ತದೆ . ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಕೇಂದ್ರ ಅಪರಾಧ ವಿಭಾಗದ ( ಸಿ . ಸಿ . ಬಿ ) ವಿಶೇಷ ವಿಚಾರಣಾ ದಳದ ಪೊಲೀಸ್ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯಾದ , ಪಿಲಾಕಲ್ ನಜೀರ್ ಬಿನ್ ಪಿ , ಬಾಬು ವಯಸ್ಸು 55 ವರ್ಷ , ವಾಸ : ಪ್ರೀಜಾ ಮ್ಯಾನರ್ ಅರ್ಪಾಮೆಂಟ್ಸ್ , 2ನೇ ಮಹಡಿ ನಂ , 303 , ಬಿ . ಟಿ . ಎಂ 1ನೇ ಸ್ಟೇಜ್ , 9ನೇ ಮುಖ್ಯ ರಸ್ತೆ , 2ನೇ ಕ್ರಾಸ್ , ಜನಾರ್ಧನ ಶಾಲೆಯ ಹತ್ತಿರ ಬಿ . ಟಿ . ಎಂ . ಲೇಔಟ್ ಬೆಂಗಳೂರು ನಗರ . ಈತನನ್ನು ದಿನಾಂಕ : 24 – 01 – 2019 ರಂದು ಬಂಧಿಸಿ ಈತನ ವಶದಿಂದ 1 ಎರ್ಟಿಗಾ ಕಾರು ಹಾಗೂ 6 ದ್ವಿಚಕ್ರ ವಾಹನಗಳನ್ನು ಅಮಾನತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ .

ಈತನ ಬಂಧನದಿಂದ ಬೆಂಗಳೂರು ನಗರದ , ಬೆಳ್ಳಂದೂರು , ಸಂಪಂಗಿರಾಮನಗರ , ಬನಶಂಕರಿ , ಕುಮಾರಸ್ವಾಮಿ ಲೇಔಟ್ , ರಾಜಾಜಿ ನಗರ ಹಾಗೂ ಆರ್ . ಟಿ . ನಗರ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ಒಟ್ಟು 7 , ವಾಹನ ಕಳವು ಪ್ರಕರಣಗಳು ಬೆಳಕಿಗೆ ಬಂದಿರುತ್ತದೆ . ಈ ಕಾರ್ಯಚರಣೆಯನ್ನು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ . ಆಲೋಕ್ ಕುಮಾರ್ , ಐ . ಪಿ . ಎಸ್ . ಮತ್ತು ಉಪ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ . ಎಸ್ . ಗಿರೀಶ್ , ಐ . ಪಿ . ಎಸ್ , ರವರ ಮಾರ್ಗದರ್ಶನದಲ್ಲಿ , ಸಿಸಿಬಿ , ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ . ಪಿ . ಟಿ ಸುಬ್ರಮಣ್ಯ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಮಲ್ಲಿಕಾರ್ಜುನ್ ಮತ್ತು ಸಿಬ್ಬಂದಿಗಳಾದ ಶ್ರೀ ದಿನೇಶ್‌ಕುಮಾರ್ ಶೆಟ್ಟಿ , ಶ್ರೀ ಮಲ್ಲಿಕಾರ್ಜುನ , ಶ್ರೀ . ಎಸ್ . ಜಿ ಅಶೋಕ , ಶ್ರೀ ಹರಿಚಂದ್ರ , ರವರುಗಳು ಕೈಗೊಂಡಿರುತ್ತಾರೆ .

City Today News

(citytoday.media)

9341997936

Bengaluru’s noted ‘Orthority’, SPARSH Hospital, transforms to Super-Specialty Hospital

Bangalore, February 5, 2019: SPARSH Hospital, Bengaluru’s leading hospital thus far known for orthopaedic specialty, announced that it will be expanding its services across specialities transforming to a Super-Specialty Hospital, effective 10 Feb 2019 The Hepatology, HPB Surgery, Liver Transplant, Cardiac Sciences, NeuroSciences, Cosmetic and reconstructive surgery, Diabetes / Endocrinology, Nephrology, Urology & Pulmonology.

The new SPARSH Super-Specialty Hospital will include specialty units in Gastroenterology, Hepatology, HBP Surgery, Liver Transplant, Cardiac Sciences, Neurosciences, Cosmetic and reconstructive surgery, Diabetes/Endocrinology, Nephrology, Urology & Pulmonology.

The brand also announced recent appointments to head the departments of Cardiology. Gastroenterology, Hepatology, Liver Transplant and HPB, Plastic and Reconstructive Surge Noted doctors Dr. Ganesh Nallur Shivu, Dr. Poornachandra K.S, Dr. Basant Mahadevappa, Dr. Anand K will be joining SPARSH Super-Specialty Hospital with immediate effect.

Dr. Sharan Patil, noted philanthropist, orthopedic surgeon, and founder of SPARSH Hospital, said on the occasion, “SPARSH Hospital was started with the mission of being a leader in healthcare & serve as a destination for complexities. Since its inception in 2006, we have helped thousands of people and worked some on some of the most difficult cases in the technology. Today, we expand and aim to bring the same quality of service through the other specialty units. We welcome on board the new doctors who will be leading the way in their respective divisions and look forward to an exciting future.

SPARSH Super-Specialty Unit has invested in some of the most cutting edge technologies for each division, combining it with excellent patient care the brand is known for.

About SPARSH Hospital SPARSH Hospital, established in 2006 by renowned orthopaedic surgeon, Dr. Sharan Patil, is one of the earliest orthopedic specialty hospitals in Bengaluru, conducting path-breaking surgeries in the country With the vision of being a leader in healthcare & serve as a destination for complexities SPARSH earned a global reputation for path-breaking surgeries, highly-skilled orthopedic terventions with Joint Replacement facilities in its first year. In less than a decade of inception, SPARSH expanded across 4 locations in Karnataka – Bommasandra, Infantry Road, Yeshwanthpur and Davanagere.

City Today News

(citytoday.media)

9341997936

04 / 02 / 2019 ರಂದು ಶ್ರೀಮತಿ . ಹೆಚ್ . ಆರ್ . ಮಮತ ರವರು ದೂರುದಾರರಿಂದ ರೂ . 5 , 000 / – ಲಂಚದ ಹಣವನ್ನು ಪಡೆಯುತ್ತಿರುವ ಸಂದರ್ಭದಲ್ಲಿ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ

ದಿನಾಂಕ 04 / 02 / 2019 , ತುಮಕೂರು ಜಿಲ್ಲೆ , ಕೊರಟಗೆರೆ ತಾಲ್ಲೂಕು , ಕುರಂಕೋಟೆ ಗ್ರಾಮದ ನಿವಾಸಿಯೊಬ್ಬರು ತಮ್ಮ ಜಮೀನಿನ ಹದ್ದುಬಸ್ತ್ ಸರ್ವೆ ಮಾಡಿಕೊಡಲು ಕೋರಿ ತೋವಿನಕೆರೆ ನಾಡಕಛೇರಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿಕೊಂಡಿದ್ದು , ಅರ್ಜಿಯ ಮೇರೆಗೆ ಶ್ರೀಮತಿ . ಹೆಚ್ . ಆರ್ . ಮಮತ , ಸರ್ವೇಯರ್ , ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿ , ತಾಲ್ಲೂಕು ಕಛೇರಿ , ಕೊರಟಗೆರೆ ರವರು ಹದ್ದುಬಸ್ತ್ ಸರ್ವೆ ಮಾಡಿಕೊಟ್ಟಿರುತ್ತಾರೆ . ನಂತರ ತಾನು ಕೆಲಸ ಮಾಡಿಕೊಟ್ಟಿರುವುದರಿಂದ ರೂ . 10 , 000 / – ಲಂಚದ ಹಣ ನೀಡಬೇಕೆಂದು ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 04 / 02 / 2019 ರಂದು ಶ್ರೀಮತಿ . ಹೆಚ್ . ಆರ್ . ಮಮತ ರವರು ದೂರುದಾರರಿಂದ ರೂ . 5 , 000 / – ಲಂಚದ ಹಣವನ್ನು ಪಡೆಯುತ್ತಿರುವ ಸಂದರ್ಭದಲ್ಲಿ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪಿತರನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ , ತನಿಖೆ ಮುಂದುವರೆದಿದೆ .

City Today News

(citytoday.media)

9341997936

ಜಯನಗರದ ಕಿತ್ತೂರು ರಾಣಿ ಚೆನ್ನಮ್ಮಒಳಾಂಗಣ ಕ್ರೀಡಾಂಗಣದಲ್ಲಿ ಆಧುನಿಕವ್ಯಾಯಾಮ ಶಾಲೆ ಉದ್ಘಾಟನೆ: ವಾಲಿಬಾಲ್ ಒಳಾಂಗಣ ಕ್ರೀಡಾಂಗಣ & ಗ್ರೀನ್ ರೂಂ, ಶೆಟಲ್ ಬ್ಯಾಡ್ಮಿಂಟನ್ಕೋರ್ಟ್ ಕಾಮಗಾರಿಗೆ ಶಂಕುಸ್ಥಾಪನೆ

ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಭೈರ ಸಂದ್ರ ವಾರ್ಡ್ ನಕಿತ್ತೂರು ರಾಣಿ ಚೆನ್ನಮ್ಮಕ್ರೀಡಾಂಗಣದಲ್ಲಿ ಬೆಂಗಳೂರಿನಲ್ಲಿಯೇಶ್ರೇಷ್ಠ ಮತ್ತು ಅತ್ಯುತ್ತಮ ವಾಲಿಬಾಲ್ಒಳಾಂಗಣ ಕ್ರೀಡಾಂಗಣನಿರ್ಮಾಣವಾಗುತ್ತಿದೆ.

ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್,ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕಿಸೌಮ್ಯಾ ರೆಡ್ಡಿ, ಪಾಲಿಕೆ ಸದಸ್ಯ ಎನ್ನಾಗರಾಜ್ ಆಟದ ಮೈದಾನದಲ್ಲಿಮೊದಲ ಹಂತದಲ್ಲಿ ಒಳಾಂಗಣದಅತ್ಯಾಧುನಿಕ ವ್ಯಾಯಾಮ ಶಾಲೆಉದ್ಘಾಟಿಸಿದರು. ವಾಲಿಬಾಲ್ಒಳಾಂಗಣ ಕ್ರೀಡಾಂಗಣ, ಗ್ರೀನ್ ರೂಂ,ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್ನಿರ್ಮಾಣದ ಕಾಮಗಾರಿಗಳಿಗೆ ಇದೇಸಂದರ್ಭದಲ್ಲಿ ಚಾಲನೆ ನೀಡಿದರು.

ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ಮಾತನಾಡಿ, ಬೆಂಗಳೂರಿನ ದಕ್ಷಿಣಭಾಗದಲ್ಲಿ ಒಳಾಂಗಣ ಕ್ರೀಡಾಂಗಣಇರಲಿಲ್ಲ. ಈ ಕೊರೆತೆ ಈಗನಿವಾರಣೆಯಾಗಿದ್ದು, ರಾಜ್ಯ ಮತ್ತುರಾಷ್ಟ್ರಮಟ್ಟದಲ್ಲಿ ಕ್ರೀಡಾಕೂಟಗಳನ್ನುಆಯೋಜಿಸಲು ಸಹಕಾರಿಯಾಗಲಿದೆ.ವ್ಯಾಯಾಮ ಶಾಲೆ ಕ್ರೀಡಾಪಟುಗಳಸಾಮರ್ಥ್ಯ ವೃದ್ಧಿಗೆ ಪೂರಕವಾಗಲಿದೆಎಂದು ಹೇಳಿದರು.

ಶಾಸಕ ರಾಮಲಿಂಗಾ ರೆಡ್ಡಿ ಮಾತನಾಡಿ,ಬಿಬಿಎಂಪಿ ಮತ್ತು ಸರ್ಕಾರದಿಂದಆರೋಗ್ಯ ರಕ್ಷಣೆಗೆ ವಿಶೇಷಗಮನಹರಿಸಲಾಗಿದೆ. ಖಾಸಗಿ ವಲಯದವ್ಯಾಯಾಮ ಶಾಲೆಗಳು ಸಾಮಾನ್ಯಜನರಿಗೆ ದುಬಾರಿಯಾಗಿದೆ. ಈ ಸೌಲಭ್ಯಕಲ್ಪಿಸುತ್ತಿದ್ದು, ಇದನ್ನು ಜನತೆಸದುಪಯೋಗಪಡಿಸಿಕೊಳ್ಳಬೇಕುಎಂದು ಕರೆ ನೀಡಿದರು.

ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ,ಜಯನಗರ ವಿಧಾನಸಭಾ ಕ್ಷೇತ್ರದಲ್ಲಿಕ್ರೀಡೆ, ಸಂಸ್ಕೃತಿಕ ಚಟುವಟಿಕೆಗಳಿಗೆವಿಶೇಷ ಒತ್ತು ನೀಡಲಾಗುತ್ತಿದೆ. ಎಲ್ಲಾವಲಯಗಳಲ್ಲಿ ಕ್ಷೇತ್ರ ಪ್ರಗತಿಸಾಧಿಸುತ್ತಿದ್ದು, ಅಭಿವೃದ್ಧಿಯಲ್ಲಿ ಜನರಸಹಭಾಗಿತ್ವ ಹೆಚ್ಚಾಗಬೇಕು ಎಂದರು.

ಭೈರಸಂದ್ರ ವಾರ್ಡ್ ನ ಎನ್ . ನಾಗರಾಜು ಮಾತನಾಡಿ, ಯುವ ಕ್ರೀಡಾಪಟುಗಳು ಈ ಸೌಲಭ್ಯ ಬಳಸಿಕೊಂಡುರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು. ಈ ಕ್ರೀಡಾಂಗಣದಲ್ಲಿಪ್ರತಿಯೊಂದು ಕ್ರೀಡಾ ಚಟುವಟಿಕೆಗಳಿಗೆಇಲ್ಲಿ ಅವಕಾಶವಿದೆ. ಒಂದು ಕೋಟಿ ರೂವೆಚ್ಚದಲ್ಲಿ ವ್ಯಾಯಾಮ ಶಾಲೆಆರಂಭವಾಗಿದ್ದು, ಸೂಕ್ತತರಬೇತುದಾರರ ಮಾರ್ಗದರ್ಶನದವ್ಯವಸ್ಥೆ ಮಾಡಲಾಗಿದೆ. ಮನರಂಜನೆಗಾಗಿ ಹೋಮ್ ಥೇಟರ್,ಓಪನ್ ಥಿಯಟರ್, ವಾಹನಗಳಿಗೆಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಕಾಮಗಾರಿಸ್ವಲ್ಪ ದಿನಗಳಲ್ಲಿ ಪ್ರಾರಂಭವಾಗಲಿದಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಹಲವಾರು ಮಂದಿಕ್ರೀಡಾಪಟುಗಳು, ವಿವಿಧ ಸಂಘಟನೆಗಳಪ್ರತಿನಿಧಿಗಳು ಪಾಲ್ಗೊಂಡಿದ್ದರು.

City Today News

(citytoday.media)

9341997936