ಕ್ರೈಸ್ಟ್ ವಿಶ್ವವಿದ್ಯಾಲಯದ ಸಂಶೋಧನೆ ಹಣ್ಣುಗಳ ಸಿಪ್ಪೆಗಳಿಂದ ಜಲಚರ ಸಾಕಣೆ  ಬೆಳವಣಿಗೆಗೆ ಉತ್ತೇಜನ

ಬೆಂಗಳೂರು – ಅಡುಗೆ ಮನೆಯಲ್ಲಿ ಉಂಟಾಗುವ ತ್ಯಾಜ್ಯ, ಹಣ್ಣುಗಳ ಸಿಪ್ಪೆಗಳು , ಕೃಷಿಕರಿಗೆ ಆರೋಗ್ಯಕರ ಮೀನು ಮತ್ತು ಸಿಗಡಿಗಳನ್ನು ಬೆಳೆಸಲು ಸಹಾಯ ಮಾಡಬಹುದೆಂದು ನಂಬಬಹುದೇ? ಕ್ರೈಸ್ಟ್ (ಘೋಷಿತ ವಿಶ್ವವಿದ್ಯಾಲಯ), ಬೆಂಗಳೂರು ಇವರ ಅಧ್ಯಯನದ ಪ್ರಕಾರ ಅದು ಸಾದ್ಯ. ಈ ಸಂಶೋಧನೆಯು ಜೈವಿಕ ತ್ಯಾಜ್ಯದ ಮೌಲ್ಯವನ್ನು ಪರಿವರ್ತಿಸುವ ನೂತನ ಮಾರ್ಗವಾಗಬಹುದು.

ಕ್ರೈಸ್ಟ್ ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಸಂಶೋಧಕರು, ವಿಶೇಷವಾಗಿ ದಾಳಿಂಬೆ ಸಿಪ್ಪೆಗಳ ಬಳಕೆಯಿಂದ, ಜಲದ ಸಿಗಡಿಗಳಿಗೆ (ಮ್ಯಾಕ್ರೋಬ್ರಾಕಿಯಮ್ ರೋಸೆನ್‌ಬರ್ಗೀ) ಪೋಷಕಾಂಶ ಪೂರಕ ಆಹಾರವನ್ನು ತಯಾರಿಸಿದ್ದಾರೆ.

ಪಿಎಚ್‌ಡಿ ವಿದ್ಯಾರ್ಥಿನಿ ಜಿ.ಆರ್ .ಜನನಿ ಅವರು ಈ ಬಗ್ಗೆ ಮಾತನಾಡುತ್ತಾ, “ಸಾಧಾರಣವಾಗಿ ರಾಸಾಯನಿಕಗಳನ್ನು ಬಳಸುವ ಜಟಿಲ ವಿಧಾನಗಳ ಬದಲಿಗೆ, ನಾವು ದಾಳಿಂಬೆ ಸಿಪ್ಪೆಗಳನು ನೈಸರ್ಗಿಕ ರೂಪದಲ್ಲೇ ಬಳಸಿದೆವು. ಇದು ಆಹಾರ ಖರ್ಚನ್ನು ಕಡಿಮೆ ಮಾಡುತ್ತದೆ, ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ಸಿಗಡಿಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ” ಎಂದು ಹೇಳಿದರು.

ಅನೇಕ ಹಣ್ಣಿನ ಸಿಪ್ಪೆಗಳ ವೈಜ್ಞಾನಿಕ ವಿಶ್ಲೇಷಣೆಯು ಈ ಸಂಶೋಧನೆಯ ಭಾಗವಾಗಿತ್ತು — ಪೈನಾಪಲ್, ಬಾಳೆಹಣ್ಣು (ಕ್ಯಾವೆಂಡಿಷ್), ಪಪ್ಪಾಯಿ, ಡ್ರ್ಯಾಗನ್ ಫ್ರೂಟ್ ಮತ್ತು ದಾಳಿಂಬೆ. ಈ ಎಲ್ಲಾ ಸಿಪ್ಪೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದ್ದು, ಅವುಗಳಲ್ಲಿ ದಾಳಿಂಬೆ ಸಿಪ್ಪೆ ಅತ್ಯಂತ ಶ್ರೇಷ್ಠವಾಗಿದೆ ಎಂಬುದು ತಿಳಿಯಿತು.

ದಾಳಿಂಬೆ ಸಿಪ್ಪೆಗಳನ್ನು ಆಹಾರಕ್ಕೆ ಸೇರಿಸಿದಾಗ ಸಿಗಡಿಗಳ ಬೆಳವಣಿಗೆ, ಪೋಷಕಾಂಶ ಶೋಷಣಾ ಸಾಮರ್ಥ್ಯ ಮತ್ತು ರೋಗ ನಿರೋಧಕ ಶಕ್ತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು. ಸಿಗಡಿಗಳು ಸಾಮಾನ್ಯವಾಗಿ ಎದುರಿಸುವ ಬ್ಯಾಕ್ಟೀರಿಯಾ ಸೋಂಕು ಏರೋಮೊನಸ್ ಹೈಡ್ರೋಫಿಲಾ ವಿರುದ್ಧ ಉತ್ತಮ ಪ್ರತಿರೋಧತೆಯನ್ನು ತೋರಿತು.

ಈ ಸಂಶೋಧನೆಯು ಡಾ. ಕೃಷ್ಣಕುಮಾರ್. ವಿ, ಸಹಾಯಕರ ಪ್ರಾಧ್ಯಾಪಕರು ಹಾಗೂ ಜಲಚರ ವಿಜ್ಞಾನ ಮತ್ತು ಮೀನುಗಾರಿಕೆ ತಜ್ಞರ ಮಾರ್ಗದರ್ಶನದಲ್ಲಿ ನಡೆಯಿತು. ಅವರು ಈ ಬಗ್ಗೆ ಮಾತನಾಡುತ್ತಾ, “ಹಣ್ಣುಗಳ ತ್ಯಾಜ್ಯವನ್ನು ಮರುಬಳಕೆ ಮಾಡುವ ಈ ವಿಧಾನವು ವಿಜ್ಞಾನಕ್ಕೂ ಸರಿಹೊಂದುತ್ತದೆ ಮತ್ತು ನಿತ್ಯಜೀವನಕ್ಕೂ ಉಪಯುಕ್ತವಾಗಿದೆ. ಇದು ಕೃಷಿಕರಿಗೆ ಲಾಭ, ಪರಿಸರಕ್ಕೆ ರಕ್ಷಣೆ ಹಾಗೂ ಮೀನು ಸಂಪತ್ತು ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ” ಎಂದು ಹೇಳಿದರು.

ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಫಾ. ಜೋಬಿ ಝೇವಿಯರ್ ಅವರ ನೇತೃತ್ವದಲ್ಲಿ ಇಂತಹ ಪರಿಸರ ಸ್ನೇಹಿ ಸಂಶೋಧನೆಗೆ ಉತ್ತೇಜನ ನೀಡಲಾಗುತ್ತಿದೆ. ಈ ಅಧ್ಯಯನವು ಈಗಾಗಲೇ ರಾಷ್ಟ್ರೀಯ ವೈಜ್ಞಾನಿಕ ವೇದಿಕೆಗಳಲ್ಲೂ ಗಮನ ಸೆಳೆದಿದ್ದು, ಸಣ್ಣ ಮಟ್ಟದ ಮೀನುಗಾರಿಕೆಯಲ್ಲಿ ಕ್ರಾಂತಿ ತರಬಹುದಾದ ಸಾಧ್ಯತೆಯಿದೆ.

ದಾಳಿಂಬೆ ಸಿಪ್ಪೆ ಪೂರಕ ಆಹಾರ – ಸಿಗಡಿಗಳ ರೋಗ ನಿರೋಧಕ ಶಕ್ತಿ, ಬೆಳವಣಿಗೆ ಹಾಗೂ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ.

City Today News 9341997936

Alliance University Unveils Nation’s First Ph.D. Program Merging Research and Entrepreneurship

BENGALURU | 28 MAY 2025 — In a bold step towards transforming India’s doctoral education landscape, Alliance University has announced the launch of Ph.D. VISTA (Venture Innovation for Social Transformation and Advancement) — the country’s first multidisciplinary Ph.D. program that seamlessly integrates research with entrepreneurship.

Positioned as a platform for nurturing scholar-entrepreneurs, the program aims to transform traditional academic pursuits into impactful, real-world ventures. Open to scholars from diverse fields including Business, Law, Liberal Arts, and Engineering, Ph.D. VISTA encourages interdisciplinary problem-solving and innovation to address complex social challenges.

Conceptualized and curated by renowned angel investor and social innovation advocate Nagaraja Prakasam, the program is deeply rooted in field immersion, grassroots problem-solving, and sustainable development. “We are building a generation of scholar-practitioners who don’t just research problems but work hands-on to solve them,” said Prakasam. His vision is reflected in the mandatory course ‘Solving for Bharat’, based on his book “Back to Bharat”, which prioritizes 80% fieldwork and 20% classroom learning.

Ph.D. VISTA encourages collaboration with industry, government bodies, NGOs, and local communities, enabling scholars to translate their research into tangible outcomes—ranging from policy impact to startup ventures. Candidates receive mentorship from academic experts, investors, and sector leaders, along with support in legal, branding, HR, financial planning, and intellectual property management. The university also provides assistance in patent filing, innovation licensing, and commercialization.

Dr. Priestly Shan, Vice-Chancellor of Alliance University, emphasized the program’s transformative potential: “This initiative reflects our commitment to ensure research results in actionable solutions. Ph.D. VISTA is a bridge between knowledge and societal impact.”

Admission to the full-time program requires a master’s degree with a minimum of 55% marks. Candidates are selected through an entrance exam, an interview, and submission of a preliminary entrepreneurial problem statement. The program duration ranges from three to six years, with degree conferral contingent on academic performance, publication, and demonstrable impact in line with UGC norms.

Aligned with the United Nations Sustainable Development Goals (SDGs), particularly collaboration and innovation, the program positions Alliance University at the forefront of purpose-driven education and societal transformation.

Applications are now open. For more details, visit: https://www.alliance.edu.in/programme/phd-in-vista

City Today News 9341997936

ಅಲಯನ್ಸ್ ವಿಶ್ವವಿದ್ಯಾಲಯದಿಂದ ಸಾಮಾಜಿಕ ಪರಿಣಾಮಕ್ಕಾಗಿ ಹೊಸ ಪಿಎಚ್‌ಡಿ ಕಾರ್ಯಕ್ರಮ

ಬೆಂಗಳೂರು, ಮೇ 27 – ಅಲಯನ್ಸ್ ವಿಶ್ವವಿದ್ಯಾಲಯವು ಸಮಾಜಮುಖಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಒತ್ತಿ ಹೇಳುವ ವಿಭಿನ್ನ ಪಿಎಚ್‌ಡಿ ಕಾರ್ಯಕ್ರಮವೊಂದನ್ನು ಆರಂಭಿಸಿದೆ. “ಪಿಎಚ್‌ಡಿ ವಿಸ್ಟಾ – ವೆಂಚರ್ ಇನ್ನೋವೇಶನ್ ಫಾರ್ ಸೋಷಿಯಲ್ ಟ್ರಾನ್ಸ್‌ಫಾರ್ಮೇಶನ್ ಅಂಡ್ ಅಡ್ವಾನ್ಸ್‌ಮೆಂಟ್” ಎಂಬ ಹೆಸರಿನ ಈ ಹೊಸ ಅಧ್ಯಯನ ಮಾರ್ಗವು, ಪರಂಪರೆಯಲ್ಲದ ಶೈಕ್ಷಣಿಕ ನಿಲುವುಗಳನ್ನು ತಳಿ ಜ್ಞಾನದೊಂದಿಗೆ ಸಂಯೋಜಿಸಿ ನೈಜ ಜಗತ್ತಿನಲ್ಲಿ ಪರಿಣಾಮ ಬೀರುವ ಪರಿಹಾರಗಳನ್ನು ರೂಪಿಸಲು ಉದ್ದೇಶಿಸಲಾಗಿದೆ.

ಈ ಪಠ್ಯಕ್ರಮವು ವ್ಯವಹಾರ, ಕಾನೂನು, ಲಿಬರಲ್ ಆರ್ಟ್ಸ್ ಮತ್ತು ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಸೂಕ್ತವಾಗಿದ್ದು, ಅಂತರಶಿಸ್ತೀಯ ಸಂಶೋಧನೆಯ ಮೂಲಕ ಗಂಭೀರ ಸಾಮಾಜಿಕ ಸಮಸ್ಯೆಗಳಿಗೆ ಕಾರ್ಯಗತ ಪರಿಹಾರಗಳನ್ನು ಕಂಡುಹಿಡಿಯಲು ಒತ್ತಾಯಿಸುತ್ತದೆ.

ಈ ಕಾರ್ಯಕ್ರಮವನ್ನು ರೂಪಿಸಿರುವ ದೇಶದ ಶ್ರೇಷ್ಠ ಎಂಜೆಲ್ ಬಂಡವಾಳಶಾಹಿಗಳಲ್ಲೊಬ್ಬರಾದ ನಾಗರಾಜ ಪ್ರಕಾಶಂ ಅವರು, “ಅದು ಸಂಶೋಧನೆಯ ಪ್ರಕಟಣೆಯಲ್ಲಿ ಮಾತ್ರವಲ್ಲದೆ, ನೈಜ ಸಮಸ್ಯೆಗಳ ಪರಿಹಾರದಲ್ಲಿ ನಿರ್ದಿಷ್ಟ ಪರಿಣಾಮ ಬೀರುವುದರಲ್ಲಿ ತೊಡಗಿಸಿಕೊಳ್ಳುವ ವಿದ್ವಾಂಸರನ್ನು ರೂಪಿಸಲು ಉದ್ದೇಶಿಸಲಾಗಿದೆ” ಎಂದು ಹೇಳಿದ್ದಾರೆ.

ಪಠ್ಯಕ್ರಮದ ವೈಶಿಷ್ಟ್ಯಗಳು:

“ಭಾರತಕ್ಕಾಗಿ ಪರಿಹಾರ” ಎಂಬ ನಿರ್ದಿಷ್ಟ ಕೋರ್ಸ್, 80% ಕ್ಷೇತ್ರಾಧಾರಿತ ಮತ್ತು 20% ಸಿದ್ಧಾಂತಾಧಾರಿತ ಆಗಿದ್ದು, ಪ್ರಕಾಶಂ ಅವರ “Back to Bharat” ಪುಸ್ತಕ ಆಧಾರವಾಗಿದೆ.

ವಿದ್ಯಾರ್ಥಿಗಳು ಕೈಗಾರಿಕೆಗಳು, ಸರ್ಕಾರ, ಎನ್‌ಜಿಓಗಳು ಮತ್ತು ಸಮುದಾಯ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಾರೆ.

ಶೈಕ್ಷಣಿಕರು, ಉದ್ಯಮಶೀಲರು ಮತ್ತು ತಜ್ಞರಿಂದ ಮಾರ್ಗದರ್ಶನ.

ಕಲ್ಪನೆಯಿಂದ MVP (Minimum Viable Product) ವರೆಗೆ ನಾವೀನ್ಯತೆಯ ಹಾದಿಯಲ್ಲಿ ಪ್ರಾಯೋಗಿಕ ಅನುಭವ.

ಪೇಟೆಂಟ್, ಪರವಾನಗಿ ಮತ್ತು ವಾಣಿಜ್ಯೀಕರಣದಲ್ಲಿ ವಿಶ್ವವಿದ್ಯಾಲಯದಿಂದ ಬೆಂಬಲ.


ಪ್ರವೇಶ ಮಾಹಿತಿ: UGC ಮಾನದಂಡದಂತೆ ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಹೊಂದಿರುವವರು ಅರ್ಹರು. ಪ್ರವೇಶಕ್ಕೆ ಪ್ರವೇಶ ಪರೀಕ್ಷೆ, ಸಂದರ್ಶನ ಮತ್ತು ತಾತ್ಕಾಲಿಕ ಉದ್ಯಮದ ಪ್ಲಾನ್ ಸಮರ್ಪಣೆ ಅವಶ್ಯಕ. ಕಾರ್ಯಕ್ರಮವು ಕನಿಷ್ಠ ಮೂರು ವರ್ಷಗಳಿಂದ ಆರು ವರ್ಷಗಳವರೆಗೆ ವಿಸ್ತರಿಸಬಹುದು.

ವಿಶ್ವವಿದ್ಯಾಲಯದ ನಿಲುವು: ಅಲಯನ್ಸ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪ್ರೀಸ್ಟ್ಲಿ ಶಾನ್ ಅವರ ಪ್ರಕಾರ, “ಸಂಶೋಧನೆಯು ಅಳೆಯಬಹುದಾದ ಬದಲಾವಣೆಗೆ ದಾರಿ ಮಾಡಿಕೊಡಬೇಕು. ಪಿಎಚ್‌ಡಿ ವಿಸ್ಟಾ, ಜ್ಞಾನ ಮತ್ತು ಕ್ರಿಯೆಯ ನಡುವೆ ಸೇತುವೆ ನಿರ್ಮಿಸಲು ನಮ್ಮ ಬದ್ಧತೆಯ ಪ್ರತೀಕ.”

ಈ ಕಾರ್ಯಕ್ರಮವು ವಿಶ್ವಸಂಸ್ಥೆಗಳ SDG ಗೊಳಗಾಗಿ ಜವಾಬ್ದಾರಿ ಹೊಂದಿದ ನೂತನ ಪೀಳಿಗೆಯ ವಿದ್ವಾಂಸ-ವೃತ್ತಿಪರರನ್ನು ರೂಪಿಸಲು ಉದ್ದೇಶಿತವಾಗಿದೆ.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ: https://www.alliance.edu.in/programme/phd-in-vista

City Today News City Today News

Royal Challenge Game Nights Turns Bengaluru Into a Hub for Gamers and Creators

Bengaluru, May 27, 2025 – Continuing its mission to blend youthful energy with immersive play, Royal Challenge Packaged Drinking Water brought its flagship digital property, Game Nights, to Bengaluru after successful editions in Mumbai, Ludhiana, and Guwahati. Hosted at the RCB Bar & Café in Ashok Nagar, the event transformed the venue into a dynamic playground of virtual sports, interactive entertainment, and next-gen fan engagement.

The event witnessed an enthusiastic turnout of gamers, digital creators, and fans who immersed themselves in cutting-edge VR cricket, PlayStation zones featuring cricket-themed games, and on-the-spot challenges offering exciting rewards. A live screening of a marquee league match also added to the high-energy environment, combining traditional sports fandom with modern digital experiences.

Varun Koorichh, Vice President – Marketing & Portfolio Head at Diageo India, stated, “Gaming is a natural extension for Royal Challenge – a brand rooted in high-energy sports and bold self-expression. Through Game Nights, we are channeling that spirit into the digital world, creating a vibrant platform where community and competition thrive.”

With Game Nights, Royal Challenge Packaged Drinking Water is tapping into India’s thriving gaming culture and reaching passionate youth communities across the country. The brand’s commitment to staying relevant and resonant with its evolving audience is clearly reflected in this initiative, which celebrates bold choices and the spirit of modern play.


Diageo India is the country’s leading beverage alcohol company and a subsidiary of global leader Diageo Plc. The company produces and distributes a range of iconic premium brands, including Johnnie Walker, Black Dog, VAT 69, Signature, Royal Challenge, McDowell’s No.1, Smirnoff, and Godawan – India’s artisanal single malt whisky. Headquartered in Bengaluru, Diageo India operates 35 manufacturing units across the country with a workforce of over 3,000 and a robust distribution network.

For more information, visit http://www.diageoindia.com.
To learn more about responsible drinking, visit http://www.DRINKiQ.com.

City Today News 9341997936

ಬೆಂಗಳೂರು ಗೇಮರ್ಸ್‌ಗಾಗಿ ದಿಟ್ಟ ವೇದಿಕೆ: ರಾಯಲ್ ಚಾಲೆಂಜ್ ಗೇಮ್ ನೈಟ್ಸ್ ಯಶಸ್ವಿ ಆಯೋಜನೆ

ಬೆಂಗಳೂರು, 28 ಮೇ 2025 – ದಿಟ್ಟತನ ಮತ್ತು ಸ್ಪರ್ಧಾತ್ಮಕತೆಗಾಗಿ ಹೆಸರಾಗಿರುವ ರಾಯಲ್ ಚಾಲೆಂಜ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ತನ್ನ ಆವಿಷ್ಕಾರಾತ್ಮಕ ಗೇಮಿಂಗ್ ಉಪಕ್ರಮ ‘ಗೇಮ್ ನೈಟ್ಸ್’ ಅನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಿದೆ. ಈ ಕಾರ್ಯಕ್ರಮವು ಮುಂಬೈ, ಲೂಧಿಯಾನ ಮತ್ತು ಗೌಹಾತಿಯಂತಹ ನಗರಗಳಲ್ಲಿ ಯಶಸ್ವೀ ಸುತ್ತುಗಳನ್ನು ಪೂರೈಸಿದ ಬಳಿಕ, ಈಗ ನವೀನ ತಂತ್ರಜ್ಞಾನ, ಕ್ರಿಯೇಟಿವಿಟಿ ಮತ್ತು ಯುವಶಕ್ತಿಯ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ನಡೆಯಿತು.

ಆರ್‌ಸಿವಿ ಬಾರ್ ಮತ್ತು ಕೆಫೆ, ಅಶೋಕನಗರದಲ್ಲಿ ಜರುಗಿದ ಈ ಗೇಮಿಂಗ್ ಸಂಭ್ರಮವು, ಕ್ರೀಡೆ, ಆಟ, ಮತ್ತು ಡಿಜಿಟಲ್ ಸಂಸ್ಕೃತಿಯ ಸಂಗಮವನ್ನೇ ಮೇಳೈಸುವ ವೇದಿಕೆಯಾಗಿತ್ತು. ಇದರಲ್ಲಿ ಅತ್ಯಾಧುನಿಕ ವಿಆರ್ ಕ್ರಿಕೆಟ್, ಕ್ರಿಕೆಟ್ ಥೀಮ್ ಆಧಾರಿತ ಪ್ಲೇಸ್ಟೇಶನ್ ಗೇಮಿಂಗ್ ವಲಯಗಳು ಮತ್ತು ಬಹುಮಾನಗಳೊಂದಿಗೆ ನಡೆದ ಇಂಟರಾಕ್ಟಿವ್ ಸವಾಲುಗಳು ಪ್ರಮುಖ ಆಕರ್ಷಣೆಯಾಗಿದ್ದವು.

ಈ ಕಾರ್ಯಕ್ರಮದಲ್ಲಿ ನೂರಾರು ಗೇಮರ್ಸ್, ಡಿಜಿಟಲ್ ಕ್ರಿಯೇಟರ್‌ಗಳು ಹಾಗೂ ಕ್ರಿಕೆಟ್ ಅಭಿಮಾನಿಗಳು ಪಾಲ್ಗೊಂಡು, ಪರಸ್ಪರ ಸಂವಾದದ ಮೂಲಕ ತಮ್ಮ ಕೌಶಲ್ಯ ಹಾಗೂ ಸ್ಫೂರ್ತಿಯನ್ನು ಹಂಚಿಕೊಂಡರು. ಅಲ್ಲದೇ, ಆಸಕ್ತಿಯಾಯಕ ಮಾರ್ಕೀ ಲೀಗ್ ಪಂದ್ಯಗಳ ನೇರ ಪ್ರಸಾರವು ಕೂಡ ಈ ಗೇಮ್ ನೈಟ್‌ನ ಭಾಗವಾಗಿತ್ತು.

ಡಿಯಾಜಿಯೊ ಇಂಡಿಯಾದ ಉಪಾಧ್ಯಕ್ಷ ಮತ್ತು ಪೋರ್ಟ್‌ಫೋಲಿಯೋ ಮುಖ್ಯಸ್ಥ ವರುಣ್ ಕೂರಿಚ್ಚ್ ಈ ಕುರಿತು ಮಾತನಾಡುತ್ತಾ, “ರಾಯಲ್ ಚಾಲೆಂಜ್ ಬ್ರ್ಯಾಂಡ್‌ಗಾಗಿ ಗೇಮಿಂಗ್ ಒಂದು ನೈಸರ್ಗಿಕ ವಿಸ್ತರಣೆ. ಇದು ಕ್ರೀಡೆ ಮತ್ತು ಸ್ವ-ಅಭಿವ್ಯಕ್ತಿಯ ಮದ್ಯದಲ್ಲಿ ನಿಂತಿರುವ ದಿಟ್ಟತೆಯ ರೂಪವಾಗಿದೆ. ಡಿಜಿಟಲ್ ಆಟಗಳ ಮೂಲಕ ನಾವು ಹೊಸ ತಂತ್ರಜ್ಞಾನದಲ್ಲೂ ಸ್ಪರ್ಧಾತ್ಮಕ ಉತ್ಸಾಹವನ್ನೇ ಮುಂದುವರಿಸುತ್ತಿದ್ದೇವೆ,” ಎಂದರು.

ರಾಯಲ್ ಚಾಲೆಂಜ್ ಗೇಮ್ ನೈಟ್ಸ್ ಮುಂದಿನ ಹಂತವಾಗಿ ಭಾರತದಲ್ಲಿನ ಇತರ ನಗರಗಳಲ್ಲಿ, ವಿಶೇಷವಾಗಿ ಗೌಹಾತಿ ಮತ್ತು ಆ ಊರಾಚೆ, ಇತರ ಯುವ ಗೇಮಿಂಗ್ ಸಮುದಾಯಗಳೊಂದಿಗೆ ಸಂಪರ್ಕ ಬೆಳೆಸಲು ಉದ್ದೇಶಿಸಿಕೊಂಡಿದೆ. ಈ ಮೂಲಕ ಯುವ ಪೀಳಿಗೆಯ ಸೃಜನಶೀಲತೆಯನ್ನು ಉತ್ತೇಜಿಸುವ, ಸ್ಪರ್ಧಾತ್ಮಕತೆ ಮತ್ತು ಸಾಂಸ್ಕೃತಿಕ ಸಂಗಮವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

ಡಿಯಾಜಿಯೊ ಇಂಡಿಯಾ ಜಾಗತಿಕ ಮದ್ಯ ತಯಾರಿಕಾ ಸಂಸ್ಥೆಯಾದ ಡಿಯಾಜಿಯೊ ಪಿಎಲ್ಸಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತದ ಪ್ರಮುಖ ಪಾನೀಯ ಉತ್ಪಾದಕ ಸಂಸ್ಥೆಯಾಗಿದೆ. ಬೆಂಗಳೂರು ಕೇಂದ್ರ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಿಯಾಜಿಯೊ ಇಂಡಿಯಾ 35ಕ್ಕೂ ಹೆಚ್ಚು ಘಟಕಗಳು ಮತ್ತು 3000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಬೃಹತ್ ಸಂಸ್ಥೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ:
http://www.diageoindia.com
http://www.DRINKiQ.com

City Today News 9341997936