ಬೆಂಗಳೂರು, ಏಪ್ರಿಲ್ 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿ.ಬಿ.ಎಂ.ಪಿ) 2005 ರಿಂದ 2017ರ ಅವಧಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ ಪೌರಕಾರ್ಮಿಕರ ಇ.ಎಸ್.ಐ. ಮತ್ತು ಪಿ.ಎಫ್. ನಿಧಿಗಳ ಬಗ್ಗೆ ಉಂಟಾಗಿರುವ ಭಾರಿ ಅವ್ಯವಹಾರ ಕುರಿತು ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು (ACB/ಬೆಂ.ನರಾ/ಮೊ.ಸಂಖ್ಯೆ 40/2017), ಪ್ರಸ್ತುತ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸುಮಾರು ₹384 ಕೋಟಿ ಮೌಲ್ಯದ ಇ.ಎಸ್.ಐ. ಮತ್ತು ಪಿ.ಎಫ್. ನಿಧಿ, ಹಾಗೂ 6,600 ನಕಲಿ ಪೌರಕಾರ್ಮಿಕರ ವೇತನದ ರೂಪದಲ್ಲಿ ₹550 ಕೋಟಿ ಮೊತ್ತದ ವಂಚನೆಯ ಆರೋಪ ಕೇಳಿಬಂದಿದೆ.
ಈ ಸಂಬಂಧ ಈಗಾಗಲೇ ಬಿ.ಬಿ.ಎಂ.ಪಿಯಿಂದ ತಾತ್ಕಾಲಿಕ ತನಿಖಾ ತಂಡ ರಚನೆಗೊಂಡಿದ್ದು, ತನಿಖೆಗೆ ಸಹಕಾರ ನೀಡಲಾಗುತ್ತಿದೆ. ಆದರೆ, ನಕಲಿ ಪೌರಕಾರ್ಮಿಕರ ಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಈ ಸಂದರ್ಭದಲ್ಲಿ ಪೌರಕಾರ್ಮಿಕರ ಖಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದರೆ, ನೈಜವಾಗಿ ದುಡಿದ ಕಾರ್ಮಿಕರು ವಂಚಿತರಾಗುವ ಭೀತಿ ಇದೆ ಎಂದು ಕೆ.ಜಿ. ಶ್ರೀನಿವಾಸ್ ಅವರು ತಿಳಿಸಿದರು.
ಅವರು ಬೆಂಗ್ಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, “ಅನಧಿಕೃತವಾಗಿ ಗೈರುಹಾಜರಿರುವವರು ಮತ್ತು ಒಂದುವರ್ಷದೊಳಗಿನ ನೇರ ಪಾವತಿ ಪೌರಕಾರ್ಮಿಕರನ್ನೂ ಖಾಯಂಗೊಳಿಸುವ ಪ್ರಕ್ರಿಯೆಯಲ್ಲಿ ಪರಿಗಣಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದು ನ್ಯಾಯೋಚಿತವಲ್ಲ. ಪ್ರಕರಣದ ತನಿಖೆ ಮುಕ್ತಾಯವಾಗಿ, ನಕಲಿ ಪೌರಕಾರ್ಮಿಕರ ಪಟ್ಟಿ ಅಧಿಕೃತವಾಗಿ ಪ್ರಕಟವಾಗುವವರೆಗೆ ಪೌರಕಾರ್ಮಿಕರ ಖಾಯಂ ಪ್ರಕ್ರಿಯೆಯನ್ನು ತಕ್ಷಣ ತಡೆಹಿಡಿಯಬೇಕು,” ಎಂದು ಆಗ್ರಹಿಸಿದರು.
ಇದಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ತನಿಖಾ ತಂಡ ಹಾಗೂ ಬಿ.ಬಿ.ಎಂ.ಪಿಯ ಕಾನೂನು ವಿಭಾಗದ ಮುಖ್ಯಸ್ಥರೊಂದಿಗೆ ತಕ್ಷಣ ಜಂಟಿ ಸಭೆ ಕರೆಯಬೇಕು ಮತ್ತು ಖಾಯಂಗೊಳಿಸುವ ಪ್ರಕ್ರಿಯೆಯ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಅವರು ಮನವಿ ಸಲ್ಲಿಸಿದರು.
ಬೆಂಗಳೂರು, ಏಪ್ರಿಲ್ 28: ರಾಜ್ಯದಲ್ಲಿ ಮಾದಿಗ ಸಮುದಾಯದ ಒಳಮೀಸಲಾತಿ ಜಾರಿಗಾಗಿ ಮತ್ತು ಇತರ ಬೇಡಿಕೆಗಳ ಅನುಷ್ಠಾನಕ್ಕೆ ಒತ್ತಾಯಿಸಿ, ಮೇ 24ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಫ್ರೀಡಂ ಪಾರ್ಕ್‌ನಲ್ಲಿ “ಸಂವಿಧಾನ ಜಾಗೃತಿ ಸಮಾವೇಶ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆದಿಜಾಂಬವ/ಮಾದಿಗ ಪೌರಕಾರ್ಮಿಕ ಸಂಘಟನೆಗಳ ಒಕ್ಕೂಟ ಪ್ರಕಟಿಸಿದೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪಾಲನಹಳ್ಳಿ ಮಠದ ಸಿದ್ಧರಾಜು ಸ್ವಾಮೀಜಿ, ಆದಿಜಾಂಬವ ಸಮುದಾಯದ ಅಧ್ಯಕ್ಷ ಸಿದ್ಧರಾಜು,ಸಂತೋಷ ಸವಣೂರ ರಾಜ್ಯ ಅಧ್ಯಕ್ಷರು ಅಖೀಲ ಕರ್ನಾಟಕ ಢೋಹರ ಕಕ್ಕಯ್ಯಾ ಸಮಾಜ, ಪ್ರಧಾನ ಕಾರ್ಯದರ್ಶಿ ರಮೇಶ್ ಮೊದಲಾದವರು ಭಾಗವಹಿಸಿದ್ದರು. ಒಕ್ಕೂಟವು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಆದಿಜಾಂಬವ ಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ದಂಡೋರ, ಜಗಜೀವನರಾಮ್ ಸಂಘ, ಮಾತಂಗ ಪರಿವಾರ, ಮಾದಿಗ ಮಹಾಸಭಾ, ಹರಳಯ್ಯ ಸಮಾಜ, ಪೌರಕಾರ್ಮಿಕರ ಸಂಘ ಹಾಗೂ ಅನೇಕ ಸಂಘಟನೆಗಳನ್ನು ಒಳಗೊಂಡಿದೆ.
ಮೇಲು ತಿಳಿಸಿದ ಪ್ರಮುಖ ಅಂಶಗಳು:
1992ರಿಂದ ಮಾದಿಗ ಸಮುದಾಯವು ಪರಿಶಿಷ್ಟ ಜಾತಿಗಳ ಶೇ.15ರ ಮೀಸಲಾತಿಯಲ್ಲಿ ಪ್ರತ್ಯೇಕ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದೆ.
ಎಸ್.ಎಂ. ಕೃಷ್ಣ ಸರ್ಕಾರದ ಕಾಲದಲ್ಲಿ (2005) ರಚಿಸಲಾದ ಏಕಸದಸ್ಯ ಆಯೋಗ 2012ರಲ್ಲಿ ವರದಿ ಸಲ್ಲಿಸಿದ್ದು, ಅದರ ಆಧಾರದ ಮೇಲೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಸಮೀಕ್ಷಾ ವರದಿಯೂ ಸಿದ್ಧವಾಗಿದೆ.
ಇದೀಗ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವನ್ನು ರಚಿಸಿ, ಮೇ 5ರಿಂದ 17ರವರೆಗೆ ಮನೆಮನೆ ಸಮೀಕ್ಷೆ ಮತ್ತು ಮೇ 19ರಿಂದ 21ರವರೆಗೆ ಬೂತ್ ಮಟ್ಟದ ಸಮೀಕ್ಷೆ ನಡೆಸುತ್ತಿದೆ. ಮೇ 19ರಿಂದ 23ರವರೆಗೆ ಆನ್‌ಲೈನ್ ದಾಖಲೆ ಅವಕಾಶ ನೀಡಲಾಗಿದೆ.
ಸಮುದಾಯದವರು ಸಮೀಕ್ಷೆಯಲ್ಲಿ ತಮ್ಮನ್ನು “ಮಾದಿಗ” ಎಂದು ಸ್ಪಷ್ಟವಾಗಿ ನೊಂದಾಯಿಸಲು ಒಕ್ಕೂಟದಿಂದ ಜಾಗೃತಿ ಮೂಡಿಸಲಾಗುತ್ತಿದೆ.
ಹೋರಾಟದ ಉದ್ದೇಶ:
ಮಾದಿಗ ಸಮುದಾಯಕ್ಕೆ ಆಧುನಿಕ ಭಾರತದ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಹಕ್ಕುಗಳ ಅವಕಾಶ ಒದಗಿಸಲು ಒತ್ತಾಯ.
ಸಮಾಜದ ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕ ಮಟ್ಟದಲ್ಲಿ ಸಮುದಾಯದ ಸ್ವಾಭಿಮಾನವನ್ನು ಪ್ರತಿಷ್ಠಾಪಿಸುವ ಗುರಿ.
52ಕ್ಕೂ ಹೆಚ್ಚು ಉಪನಾಮಗಳಲ್ಲಿ ಪಡಿದು ಬಾಳುತ್ತಿರುವ ಸಮುದಾಯದವರು ಒಂದಾಗಿ ಒಟ್ಟುಗೂಡಲು ಪ್ರೇರಣೆ.
ಒಕ್ಕೂಟದ ಆಶಯ: “ಸ್ವಾಭಿಮಾನದಿಂದ ಬಾಳೋಣ, ಹಕ್ಕಿಗಾಗಿ ಹೋರಿಸೋಣ” ಎಂಬ ಧ್ಯೇಯದೊಂದಿಗೆ, ರಾಜ್ಯದ ಮಾದಿಗ ಸಮುದಾಯಕ್ಕೆ ನ್ಯಾಯಯುತ ಸ್ಥಾನಮಾನ ಒದಗಿಸಲು ಸರ್ಕಾರವನ್ನು ಒತ್ತಾಯಿಸುವುದು.
ಮಾಹಿತಿ ಪ್ರಕಾರ, ಮೇ 24ರಂದು ನಡೆಯಲಿರುವ ಸಮಾವೇಶದಲ್ಲಿ ರಾಜ್ಯದಾದ್ಯಂತ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಒಕ್ಕೂಟದ ಮುಖಂಡರು, ಸಮುದಾಯದ ಸದಸ್ಯರು ಮತ್ತು ಹೋರಾಟಗಾರರು ಸೇರಿ ಆ ದಿನ ಸರ್ಕಾರದ ಗಮನ ಸೆಳೆಯಲು ಬೃಹತ್ ಸಮಾವೇಶದ ಮೂಲಕ ತಮ್ಮ ಹಕ್ಕುಬದ್ಧ ಬೇಡಿಕೆಗಳನ್ನು ಪ್ರಸ್ತಾಪಿಸಲಿದ್ದಾರೆ ಎಂದು ಹೇಳಿದರು.
ಬೆಂಗಳೂರು : ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ “ಅಕ್ಷಯ ತೃತೀಯಾ” ಪ್ರಯುಕ್ತ ಏಪ್ರಿಲ್ 30, ಬುಧವಾರ ಬೆಳಗ್ಗೆ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಸಂಪೂರ್ಣವಾಗಿ ಶ್ರೀಗಂಧ ಲೇಪನದ ಅಲಂಕಾರವನ್ನು ಮಾಡಲಾಗುವುದು, ವರ್ಷಕ್ಕೊಮ್ಮೆ ಆಚರಿಸುವಂತಹ ಈ ವಿಶೇಷವಾದ ಶ್ರೀಗಂಧ ಲೇಪನದ ಸೇವೆಯು ನೆರವೇರುವುದು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು, ಈ ವಿಶೇಷವಾದ ಸೇವೆಯಲ್ಲಿ ಭಾಗವಹಿಸುವಂತಹ ಭಕ್ತರು ಶ್ರೀ ಮಠದ ವಾಟ್ಸಾಪ್ ಆನ್ಲೈನ್ -9449133929 ಈ ನಂಬರ್ ಮುಖಾಂತರ ಸೇವೆ ಸಲ್ಲಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು. ಶ್ರೀ ಗಂಧ ಲೇಪನ ಸೇವೆ ಸಲ್ಲಿಸಿರುವಂತಹ ಭಕ್ತರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಸಮರ್ಪಿಸಿದ ಶ್ರೀಗಂಧದ ಪ್ರಸಾದವನ್ನು ಮಾರನೆಯ ದಿನ (ಮೇ1-5-2025) ಗುರುವಾರ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ- 08022443962-9945429129-8660349906
Bengaluru, April 28, 2025 — The Sri Aurobindo Annual History Essay Competition 2024–25 concluded with a prize distribution ceremony on Thursday, April 24 at Hotel Green Park, Bengaluru. The event was organized by the Foundation for Indian Historical and Cultural Research (FIHCR), founded by historian and author Dr. Vikram Sampath.
Conducted under FIHCR’s Yuva vertical, the competition attracted over 1,500 entries from students in Grades 6 to 9 nationwide. Their essays uncovered overlooked narratives—shining a light on forgotten heroes and lesser-known monuments, and reflecting a growing interest among youth in India’s history.
A panel led by celebrated authors Ashwin Sanghi and Amish Tripathi reviewed the submissions and identified the most compelling essays for their fresh insights, strong research, and clear writing.
Shri Tejasvi Surya – MP for Bengaluru South, attended as Chief Guest, with Smt. Rajalakshmi Aggarwal – Chairperson of Ola Foundation, and Shri Devesh Verma – Head of Ola Foundation, as Guests of Honour. Dr. Vikram Sampath* hosted the evening and highlighted the importance of giving young voices a platform to engage with history on their own terms.
Shri Tejasvi Surya, MP for Bengaluru South expressed his gratitude and stated “I am deeply grateful to Vikram Sampath Sir and the Ola Foundation Team for their kind invitation and for the monumental work they continue to do through the FIHCR. It’s always an honour to support such efforts that aim to popularize Indian history among the youth. The overwhelming response to the Sri Aurobindo essay competition, with entries pouring in from every corner of the country, is a powerful reflection of the growing curiosity and pride among young Indians about our civilizational roots. The diversity in the choice of topics—from a student in the north writing about Alluri Sitarama Raju to one in the south writing about a monument in the north—shows how India’s cultural unity is being rediscovered by the younger generation. I urge every young Indian to read the works of great minds like Sri Aurobindo, for it is through them that we truly understand what it means to be a Bharatiya in spirit and essence.”
Eight students received first and second place awards across the four grades, while twelve students were recognized with special prizes for depth of research and originality. All prize winners received cash awards, certificates, and trophies.
The top 100 essays will be published in an upcoming anthology, which will be available in both print and digital formats.
बेंगलुरु, 27 अप्रैल: नारायण सेवा संस्थान द्वारा बसवंगुड़ी स्थित मराठा हॉस्टल परिसर में आयोजित विशेष शिविर में 694 दिव्यांगजनों को निःशुल्क कृत्रिम अंग एवं कैलीपर प्रदान किए गए। इस अवसर पर संसद की सामाजिक न्याय एवं अधिकारिता समिति के अध्यक्ष एवं बेंगलुरु मध्य के सांसद श्री पी.सी. मोहन मुख्य अतिथि के रूप में उपस्थित रहे।
श्री मोहन ने कहा कि केंद्र सरकार दिव्यांगजनों के सशक्तीकरण और उनके कल्याण के लिए पूरी तरह से प्रतिबद्ध है। उन्होंने नारायण सेवा संस्थान के कार्यों की सराहना करते हुए कहा, “संस्थान दिव्यांगजनों को समाज की मुख्यधारा से जोड़ने का कार्य कर रहा है। मैं इस पुनीत प्रयास में हरसंभव सहयोग प्रदान करूंगा।”
शिविर का शुभारंभ दीप प्रज्ज्वलन के साथ हुआ। कार्यक्रम में समाजसेवी श्री महेंद्र मुनोत, प्रजा प्रभुत्व सेना के श्री कुँवर राकेश देसरला, रेलवे बोर्ड के सलाहकार सदस्य श्री अश्विन सेमलानी, श्री मूलसिंह राजपुरोहित, श्री रमेश माली, श्री सुनील वैष्णव, श्री राकेश वैष्णव, संस्थान के अध्यक्ष श्री प्रशांत अग्रवाल, निदेशक श्रीमती वंदना अग्रवाल, स्थानीय शाखा अध्यक्ष श्री विनोद जैन एवं श्रीमती पलक अग्रवाल सहित कई गणमान्य अतिथिगण उपस्थित रहे।
समाजसेवी श्री महेंद्र मुनोत ने कहा कि नारायण सेवा संस्थान न केवल दिव्यांगजनों को सशक्त बना रहा है, बल्कि उनमें आत्मविश्वास और आत्मसम्मान भी जागृत कर रहा है। प्रजा प्रभुत्व सेना के श्री राकेश देसरला ने संस्थान के संस्थापक श्री कैलाश ‘मानव’ और अध्यक्ष श्री प्रशांत अग्रवाल के सेवा कार्यों की सराहना करते हुए दिव्यांग लाभार्थियों को नए जीवन की शुरुआत पर शुभकामनाएं दीं।
शिविर में अतिथियों ने लाभार्थियों से संवाद कर उनकी जीवन यात्रा को सुना तथा डॉक्टरों द्वारा कृत्रिम अंगों के फिटमेंट की प्रक्रिया का अवलोकन किया। लाभार्थियों को कृत्रिम अंगों के रखरखाव तथा सुचारू उपयोग हेतु प्रशिक्षण भी प्रदान किया गया। शिविर के दौरान लाभार्थियों ने अपने नए कृत्रिम अंगों के साथ परेड की तथा खेल गतिविधियों में भी हिस्सा लिया।
अध्यक्ष श्री प्रशांत अग्रवाल ने बेंगलुरु के 13 प्रमुख दानदाताओं को “सेवा सम्मान” प्रदान किया। सम्मानित दानदाताओं में जनरल मोटर्स, भैरूमल भंडारी, डॉ. सुधीर लोढ़ा, उदय सिंह टाटेर, अशोक राका, नितिन भट्ट तथा लॉयंस क्लब बी प्रमुख रहे।
कार्यक्रम की शुरुआत में नारायण सेवा संस्थान के बेंगलुरु शाखा प्रमुख श्री विनोद जैन ने मेवाड़ी परंपरा के अनुरूप अतिथियों का स्वागत करते हुए संस्थान की सेवा यात्रा का संक्षिप्त विवरण प्रस्तुत किया।
श्री प्रशांत अग्रवाल ने बताया कि दिव्यांगजनों तक सहायता पहुँचाने के उद्देश्य से 2 फरवरी को प्रारंभिक पंजीकरण शिविर आयोजित किया गया था, जिसमें 1,050 से अधिक रोगियों ने भाग लिया। उनमें से चयनित 694 लाभार्थियों को आज कृत्रिम अंग एवं कैलीपर प्रदान कर एक नया जीवन प्रदान किया गया।
यह बेंगलुरु में संस्थान द्वारा आयोजित तीसरा बड़ा शिविर है, जिसमें जर्मन तकनीक आधारित “नारायण लिम्ब” के माध्यम से दिव्यांगजनों को गतिशीलता प्रदान की गई। इस शिविर में लगभग 80 सदस्यों की टीम ने सेवा प्रदान की।
समारोह के समापन पर संस्थान की निदेशक श्रीमती वंदना अग्रवाल ने सभी अतिथियों, दानदाताओं एवं स्वयंसेवकों के प्रति आभार व्यक्त किया।
You must be logged in to post a comment.