New Joyalukkas Showroom Launched in Koramangala with Ministerial Presence

BENGALURU, April 12, 2025: Joyalukkas, a leading global jewellery retail chain, inaugurated its latest showroom in Koramangala, Bengaluru, marking a significant step in the brand’s ongoing expansion in Karnataka.

The new showroom was formally inaugurated by Shri Ramalinga Reddy, Minister for Transport & Muzrai, Government of Karnataka, and Mr. Rahim Khan, Minister for Municipal Administration & Hajj, Government of Karnataka. The event was also attended by Mr. Mohammed Rizwan Nawab, Vice Chairman, Karnataka State Road Transport Corporation (KSRTC), and Mr. Mohammed Rihan Nawab, CEO, Emmar Properties.

From the Joyalukkas Group, Mr. Joy Alukkas, Chairman and Managing Director, was present along with Mrs. Jolly Joy Alukkas, Mr. John Paul Alukkas, Mr. Antony Jos, Mr. Thomas Mathew, and Mrs. Elsa Joy Alukkas. The inauguration drew the participation of several other dignitaries, industry representatives, and loyal customers.

Speaking on the occasion, Mr. Joy Alukkas stated, “Koramangala is the hub of modern lifestyles in Bengaluru. Our new showroom is not just a point of sale, but a destination where customers can experience the artistry, craftsmanship, and emotional significance of fine jewellery. We are thrilled to bring our signature excellence to this dynamic community.”

The showroom offers a diverse range of traditional and contemporary jewellery collections, combining regional craftsmanship with modern design sensibilities. The launch event also featured first-look access to new collections, free gifts for early shoppers, and complimentary design consultations.

Joyalukkas aims to provide customers with a premium retail experience, showcasing jewellery that blends cultural heritage with global trends. The Koramangala showroom is now open to the public.

City Today News 9341997936

ಜಯನಗರ ರಾಯರ ಮಠದಲ್ಲಿ ಹನುಮ ಜಯಂತಿ ಪ್ರಯುಕ್ತ ಶ್ರೀ ಮುಖ್ಯಪ್ರಾಣ ದೇವರಿಗೆ ವಜ್ರಕವಚಧಾರಣೆ ಹಾಗೂ ಹುಣ್ಣಿಮೆಯ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಬೆಂಗಳೂರು : ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಹನುಮ ಜಯಂತಿ ಪ್ರಯುಕ್ತ  ಶ್ರೀ ಮುಖ್ಯ ಪ್ರಾಣದೇವರಿಗೆ ವಜ್ರಕವಚ ಧಾರಣೆ ಹಾಗೂ  ಹುಣ್ಣಿಮೆ ಹಾಗೂ ಹನುಮ ಜಯಂತಿಯ ಪ್ರಯುಕ್ತ ವೇದ ಪಾರಾಯಣದೊಂದಿಗೆ ಶ್ರೀ ಸತ್ಯನಾರಾಯಣ ಸ್ವಾಮಿವ್ರತ ಪೂಜೆಯು ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ಹಾಗೂ ಕಟ್ಟಿ ರಾಘವೇಂದ್ರ ಆಚಾರ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ರಥೋತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು. ಈ ಪೂಜಾ ಸೇವೆಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

Alliance Club International District 272(S) Cabinet Presentation Ceremony Held with Grandeur in Bengaluru

Bengaluru, April 12, 2025:
The Association of Alliance Club International, District 272(S), organized a grand presentation ceremony for its newly appointed cabinet members on April 12, 2025, at 10:00 AM at the FKCCI Auditorium in Gandhinagar, Bengaluru.

Alliance Club International is a wholly indigenous Indian service organization that has been actively involved in impactful and committed social welfare activities across the country for the past 18 years. The organization’s headquarters is located in Noida, New Delhi.

This year’s International President, Alay Rajkumar Saxena, South Zone International Director Alay Nagaraj V. Bairi, PID Alay G.P. Divakar, ICC Alay Ajanta S. Rangaswamy, Alay M. Muniyappa, and former MLA and film actor N.L. Narendra Babu graced the occasion as chief guests.

The newly appointed District Governor, Alay Dr. Satyavati Basavaraj, who took office on April 1, 2025, led the installation ceremony and administered the oath to the new cabinet members.

Speaking at the event, District PRO Alay Shobha Vishu highlighted the organization’s ongoing initiatives: “Alliance Club is actively engaged in a wide range of service activities at the national, state, and district levels, including education, food distribution, care for the elderly and orphans, health camps, cleanliness drives, and tree plantation programs.”

She further added, “Alliance Club International is spread across 28 countries with more than 2,500 clubs and over 30,000 members worldwide. Although the Bengaluru district was only established last year, it already comprises 35 clubs and over 1,000 members, and has received several international accolades.”

City Today News 9341997936

ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 272(S) ಜಿಲ್ಲಾಸಂಪುಟ ಪದಗ್ರಹಣ ಕಾರ್ಯಕ್ರಮ ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ನೆರವೇರಿತು

ಬೆಂಗಳೂರು, ಏಪ್ರಿಲ್ 12, 2025:
ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 272(S) ವತಿಯಿಂದ ಜಿಲ್ಲಾಸಂಪುಟ ಸದಸ್ಯರ ಪದಗ್ರಹಣ ಸಮಾರಂಭವನ್ನು ಏಪ್ರಿಲ್ 12 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ಗಾಂಧಿನಗರದ ಎಫ್‌ಕೆಸಿಸಿಐ (FKCCI) ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಯಿತು.

ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಎಂಬುದು ಭಾರತದ ಸ್ವದೇಶಿ ಸೇವಾ ಸಂಸ್ಥೆಯಾಗಿದ್ದು, ಕಳೆದ 18 ವರ್ಷಗಳಿಂದ ದೇಶದಾದ್ಯಂತ ನಿಷ್ಠೆಯುತ ಹಾಗೂ ಪರಿಣಾಮಕಾರಿಯಾದ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದರ ಪ್ರಧಾನ ಕಚೇರಿ ನವದೆಹಲಿಯ ನೋಯ್ಡಾದಲ್ಲಿ ಇದೆ.

ಈ ವರ್ಷ ಅಂತರಾಷ್ಟ್ರೀಯ ಅಧ್ಯಕ್ಷರಾಗಿ ಅಲಯ್ ರಾಜಕುಮಾರ್ ಸಸ್ಸೇನಾ, ದಕ್ಷಿಣ ಪ್ರಾಂತ್ಯದ ಅಂತರಾಷ್ಟ್ರೀಯ ನಿರ್ದೇಶಕರಾಗಿ ಅಲಯ್ ನಾಗರಾಜ್ ವಿ. ಬೈರಿ, ಪಿಐಡಿ ಅಲಯ್ ಜಿ.ಪಿ. ದಿವಾಕರ್, ಐಸಿಸಿ ಅಲಯ್ ಅಜಂತ ಎಸ್. ರಂಗಸ್ವಾಮಿ, ಅಲಯ್ ಎಂ. ಮುನಿಯಪ್ಪ ಹಾಗೂ ಮಾಜಿ ಶಾಸಕ ಹಾಗೂ ಚಲನಚಿತ್ರ ನಟ ನ.ಲ. ನರೇಂದ್ರಬಾಬು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ವರ್ಷದ ಏಪ್ರಿಲ್ 1 ರಿಂದ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾ ಗವರ್ನರ್ ಅಲಯ್ ಡಾ. ಸತ್ಯವತಿ ಬಸವರಾಜ್ ಅವರ ನೇತೃತ್ವದಲ್ಲಿ ನೂತನ ಸಂಪುಟ ಸದಸ್ಯರು ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಿಆರ್‌ಒ ಅಲಯ್ ಶೋಭಾ ವಿಶು ಅವರು, “ಅಲಯನ್ಸ್ ಸಂಸ್ಥೆ ದೇಶ, ರಾಜ್ಯ ಮತ್ತು ಜಿಲ್ಲೆ ಮಟ್ಟದಲ್ಲಿ ಶಿಕ್ಷಣ, ಆಹಾರ ಸೇವೆ, ವೃದ್ಧಾಶ್ರಮ, ಅನಾಥಾಶ್ರಮ, ಆರೋಗ್ಯ ಶಿಬಿರಗಳು, ಸ್ವಚ್ಛತಾ ಅಭಿಯಾನಗಳು, ಸಸಿ ನೆಡುವಿಕೆ ಮುಂತಾದ ನಾನಾ ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ” ಎಂದು ಹೇಳಿದರು.

ಅವರು ಮುಂದುವರೆದು, “ಅಲಯನ್ಸ್ ಸಂಸ್ಥೆ ಪ್ರಪಂಚದಾದ್ಯಂತ 28 ದೇಶಗಳಲ್ಲಿ ತನ್ನ ಸೇವಾ ಜಾಲವಿಸ್ತಾರ ಹೊಂದಿದ್ದು, 2,500ಕ್ಕೂ ಹೆಚ್ಚು ಕ್ಲಬ್‌ಗಳು ಹಾಗೂ 30,000ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಬೆಂಗಳೂರಿನ ಜಿಲ್ಲೆ ಕೇವಲ ಕಳೆದ ವರ್ಷ ಆರಂಭವಾದರೂ ಈಗಾಗಲೇ 35 ಕ್ಲಬ್‌ಗಳು ಹಾಗೂ 1000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ ಮತ್ತು ಹಲವು ಅಂತಾರಾಷ್ಟ್ರೀಯ ಗೌರವಗಳನ್ನು ಗಳಿಸಿದೆ,” ಎಂದರು.

City Today News 9341997936

“ಶ್ರೀಕೃಷ್ಣ ಲೀಲಾ” ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ಸೆಳೆದವು

ಬೆಂಗಳೂರು, ಏಪ್ರಿಲ್ 11: ಪರಮಪೂಜ್ಯ ಶ್ರೀ ಶ್ರೀ 1008 ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಶೀರ್ವಾದದಂತೆ, ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಭಕ್ತರ ಗಮನ ಸೆಳೆಯಿತು.

ಈ ಕಾರ್ಯಕ್ರಮವು ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಗುರುವಾರ ಸಂಜೆ ಜರುಗಿದ್ದು, ನೆಲಮಂಗಲದ ಶ್ರೀ ಗಣೇಶ ನೃತ್ಯಾಲಯ ಸಂಗೀತ ಮತ್ತು ನೃತ್ಯ ಶಾಲೆಯ ಪ್ರಭಾರಿಗಳಾದ ವಿದುಷಿ ಶ್ರೀಮತಿ ಭಾವನಾ ಗಣೇಶ್ ಮತ್ತು ವಿದ್ವಾನ್ ಶ್ರೀ ಎಂ.ಡಿ. ಗಣೇಶ್ ದಂಪತಿಗಳು ತಮ್ಮ ಶಿಷ್ಯರಾದ ಸುಮಾರು 35 ವಿದ್ಯಾರ್ಥಿಗಳೊಂದಿಗೆ “ಶ್ರೀಕೃಷ್ಣ ಲೀಲಾ” ಭರತನಾಟ್ಯ ಪ್ರದರ್ಶನವನ್ನು ನಡೆಸಿಕೊಟ್ಟರು.

ಈ ನೃತ್ಯಾವಳಿಯಲ್ಲಿ ಶ್ರೀಕೃಷ್ಣನ ಬಾಲ್ಯ ಲೀಲೆಗಳು, ರಾಸಕ್ರೀಡೆ, ನಂದನ ಮದುವೆ ಸೇರಿದಂತೆ ವಿವಿಧ ಘಟನಾವಳಿಗಳನ್ನು ಭಾವನಾತ್ಮಕವಾಗಿ ಪ್ರದರ್ಶಿಸಲಾಯಿತು. ಭಕ್ತರು ಮತ್ತು ಪ್ರೇಕ್ಷಕರು ಈ ಕಾರ್ಯಕ್ರಮವನ್ನು ಮನಸ್ಸಾರೆ ಆನಂದಿಸಿ, ಕಲಾತ್ಮಕ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಮಠದ ಹಿರಿಯರು ತಿಳಿಸಿದ್ದಾರೆ.

City Today News 9341997936