ಮಕ್ಕಳ ರಕ್ಷಣೆ / ಭದ್ರತೆ ಹಾಗೂ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ

ಮಕ್ಕಳ ರಕ್ಷಣೆ / ಭದ್ರತೆ ಹಾಗೂ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ಕುರಿತು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

ಶ್ರೀ. ಪುವೀಣ್ ರವರ ನಾಯಕತ್ವದಲ್ಲಿ ಹಾಗು ಮೂಸಾ ಶ್ರೀ ಶರೀಫ್ ರವರ ನಾಯಕತ್ವದಲ್ಲಿ ಭೇಟಿ ಬಚಾವೋ ಎಂದು “ದಕ್ಷಿಣದಿಂದ ಉತ್ತರಕ್ಕೆ” – (ಮಂಗಳೂರಿನಿಂದ ರಿಂದ ದಹಲಿ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ.

ಇಡೀ ವಿಶ್ವಕ್ಕೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ಪಾಠ ಹೇಳಿಕೊಟ್ಟ ನಮ್ಮ ಭವ್ಯ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಒಂದು ಹೆಣ್ಣು, ಓದಿನ ವಿಚಾರವಾಗಿಯೋ, ಅಥವಾ ಕಲಸದ ವಿಚಾರವಾಗಿಯೋ, ಅಥವಾ ಒಂದು ವ್ಯಾಪಾರದ ವಿಚಾರವಾಗಿಯೋ, ಅಥವಾ ಇನ್ಯಾವುದೋ ವಿಚಾರವಾಗಿಯೋ ಮನೆಯಿಂದ ಹೊರಗಡ ಹೋದರೆ ಆಕೆ ಕ್ಷೇಮವಾಗಿ ಮತ್ತೆ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಹಾಗೂ ಭರವಸೆ ಆ ಕುಟುಂಬಗಳಿಗೆ ಇಲ್ಲ. ಯಾಕೆ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದವನಿಗೆ ಯಾಕೆ ನಮ್ಮ ದೇಶದ ಕಾನೂನು ಸುವ್ಯವಸ್ಥೆಯಲ್ಲಿ ಕಠಿಣವಾದ ಶಿಕ್ಷೆ ಇಲ್ಲ ?. ದೇಶದಲ್ಲಿ ಸಮಾನತೆ ಇಲ್ವ?. ಈ ನಮ್ಮ ಭಾರತ ದೇಶದಲ್ಲಿ ಒಬ್ಬ ಪುರುಷ ಎಷ್ಟು ಸ್ವತಂತ್ರವಾಗಿ ಜೀವನ ಮಾಡುತ್ತಾನೋ ಹಾಗೆ ಮಹಿಳೆಯು ಕೂಡ ಘನತೆ ಮತ್ತು ಗೌರವದಿಂದ ಹಾಗೂ ಪ್ರತಿಷ್ಠೆಯಿಂದ ಸಮಾಜದಲ್ಲಿ ಬದುಕುವಂತ ವ್ಯವಸ್ಥೆಯನ್ನು ನಿರ್ಮಾಣ ಮಾಡಿ ಕೊಡುವುದು ಸರ್ಕಾರದ ಜವಾಬ್ದಾರಿಯಲ್ಲವೇ. ಹೆಸರಿಗಷ್ಟೇ ಈ ಭೇಟಿ ಬಚಾವೋ ಎಂಬ ಯೋಜನೆ ಈ ಯೋಜನೆ ದೇಶದ ಯಾವುದೇ ಹೆಣ್ಣು ಮಕ್ಕಳಿಗೆ ನೆರವಾಗುತ್ತಿಲ್ಲ. ವಿದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಇರುವಂತಹ ರಕ್ಷಣೆ ನಮ್ಮ ದೇಶದಲ್ಲಿ ಯಾಕೆ ಇಲ್ಲ ?. ಪ್ರತಿ ವರ್ಷ 35 ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಇದೇ ರೀತಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರಗಳು ಮುಂದುವರದರೆ ಕೊನೆಗೆ ನಾವು ಹೆಣ್ಣು ಮಕ್ಕಳನ್ನು ಮ್ಯೂಸಿಯಂನಲ್ಲಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇದರ ಸಲುವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳನ್ನು ದೆಹಲಿಯಲ್ಲಿ ಅವರನ್ನು ಕಚೇರಿಯಲ್ಲಿ ಭೇಟಿಯಾಗಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಈ “ಬೇಟಿ ಬಚಾವೋ” ಎಂಬ ಯೋಜನೆಯನ್ನು ಹೆಚ್ಚು ಬಲಿಷ್ಠ ಗೊಳಿಸಿ ದೇಶದ ಯಾವುದೇ ಒಂದು ಹೆಣ್ಣು ಅತ್ಯಾಚಾರಕ್ಕೆ ಒಳಗಾಗದೆ ಸಮಾಜದಲ್ಲಿ ಘನತೆ, ಗೌರವ ಮತ್ತು ಪ್ರತಿಷ್ಠೆಯಿಂದ ಬದುಕುವಂತೆ ಹಾಗೂ ಹೆಣ್ಣನ್ನು ಹೆತ್ತ ತಂದೆ ತಾಯಿಯು ಕೂಡ ನೆಮ್ಮದಿಯಿಂದ ಹಾಗೂ ಇಡೀ ದೇಶವೇ ಒಂದು ಹೆಣ್ಣನ್ನು ಗೌರವದಿಂದ ಕಾಣುವಂತೇ ಈ ಯೋಜನೆಯನ್ನು ರೂಪಿಸಬೇಕೆಂದು ದೇಶಕ್ಕೆ ತಾಯಿ ಸ್ಥಾನದಲ್ಲಿರುವಂತಹ ಪ್ರಧಾನಮಂತ್ರಿಗಳನ್ನು ಮನವಿ ಮಾಡಿಕೊಳ್ಳುತ್ತೇವೆ.

ಶ್ರೀ. ಶರೀಫ್ ರವರ ನಾಯಕತ್ವದಲ್ಲಿ ಅಕ್ಟೋಬರ್ 17 ರಂದು ಮಂಗಳೂರಿನ ಟೌನ್ ಹಾಲ್ ಬಳಿ ಇರುವ ಗಾಂಧಿ ಪ್ರತಿಮೆಯಿಂದ ಆರಂಭಗೊಂಡು ದೆಹಲಿಯ “ಪ್ರಧಾನ ಮಂತ್ರಿಗಳ ಕಚೇರಿಯವರೆಗೆ” ಪಾದಯಾತ್ರೆಯ ಮೂಲಕ ದೆಹಲಿಯಲ್ಲಿರುವಂತ ಪ್ರಧಾನ ಮಂತ್ರಿಗಳ ಕಚೇರಿಗೆ ಭೇಟಿ ನೀಡಿ ಅವರಿಗೆ ನಮ್ಮ ಈ ಬೇಡಿಕೆಗಳನ್ನು ತಿಳಿಸಿ ಬರುವುದು ನಮ್ಮ ಉದ್ದೇಶ. ಹಾಗಾಗಿ ನಮ್ಮ ದೇಶದ ಎಲ್ಲಾ ಸಮುದಾಯದವರು ಇದರಲ್ಲಿ ಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ವಿನಂತಿ.

City Today News 9341997936

The Indian Garage Co. opened its first store, officially inaugurated by brand ambassador Suryakumar Yadav. The


Bengaluru’s vibrant Brigade Road was abuzz with excitement as The Indian Garage Co. opened its first store, officially inaugurated by brand ambassador Suryakumar Yadav. The event drew a remarkable crowd of enthusiastic locals, turning the area into a lively sea of Bengaluru residents eager to catch a glimpse of the star.

City Today News 9341997936

Vasundharotsava from the 15th to 22nd of November 2024. Bharatanatyam performances of artists and Dr. Vasundhara Doraswamys students from Mysore, United States and Australia

Dr. Vasundhara Doraswamy is a pioneer in the field of Bharatanatyam, and has been a torchbearer of the arts since the past six decades. In honour of her 75th birthday, we have organised Vasundharotsava from the 15th to 22nd of November 2024. Bharatanatyam performances of artists and Dr. Vasundhara Doraswamys students from Mysore, United States and Australia will be taking place.

Sanmarga is set to take place on the 20th and 21 of November 2024, as a part of which, Margam presentation by disciples of Dr Vasudhara Dorsawamy and “Krishna Madhuryam”- a thematic dance drama is to be presented.

Press meet held at Press club of Bengaluru

Panel discussions are to be held on 23 November 2024. The first panel discussion highlights the contribution of the Wodeyar dynasty and Mysore artists to art and culture. The second panel discusses the contributions to the field by Dr. Vasundhara Doraswamy and Vasundhara Baani style of dance. This is followed by Bharatanatyam performance by Dr. Vasundhara Doraswamy.

Mysuru Kala Diwas is organised on 24th November 2024 as a grand culmination of the event, which focuses on and honours the contribution of the Wodeyar dynasty and the dancers of Mysore to the art field, and the deep everlasting impacts on the art created by Dr. Vasundhara Doraswamy. Performances of around a five hundred invited artists and three generations of her students from across the globe will be taking place.

This event creates history at it is the first time Mysore is hosting a dance event of this scale. Anybody who is above 8 years of age and has had atleast 3 years of training in classical dance can register for this historic event.

For more details regarding registration, contact

Dr. Lakshmi Rekha Arun

Vid Vibha Diwakar

+91 97411 29133

+91 88612 77666

laasyaacademyofdance@gmail.com

vibhahp@gmail.com



– Vasundhara Doraswamy

Dr. Vasundhara Doraswamy

Artistic Director-Vasundhara Performing Arts Centre
Email: info@vasundharadoraswamy.com

Web:

http://www.vasundharadoraswamy.ಕಂ

City Today News 9341997936

ರೋಟರಿ ಜಿಲ್ಲೆ 3192 ರ “ಆಸರೆ” ಎಂಬ ವಿನೂತನ ಯೋಜನೆ

ರೋಟರಿ ಸಂಸ್ಥೆಯು ನಿರಂತರವಾಗಿ 119 ವರ್ಷಗಳಿಂದ ಸಾರ್ವಜನಿಕ ವಲಯದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು. ಈಗ ವಿನೂತನ ಆಸರೆ ಯೋಜನೆಯು ಹಿರಿಯ ನಾಗರಿಕರು ಮತ್ತು ಅಗತ್ಯವಿರುವವರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದು,ರೋಟರಿ ಸದಸ್ಯರನ್ನು ಸ್ಥಳೀಯ ಸಮುದಾಯದೊಂದಿಗೆ ಸಂಪರ್ಕಿಸುವ ಮೂಲಕ ರೋಟರಿಯ ಸಾಮಾಜಿಕ ಸೇವೆ ಅಗತ್ಯವಿರುವವರಿಗೆ ತಲುಪಿಸುವಂತದ್ದಾಗಿದೆ .

ಈ ಯೋಜನೆಯ ಎರಡು ಪ್ರಮುಖ ಅಂಶಗಳು ಈ ಕೆಳಕಂಡಂತಿವೆ.

1. ತುರ್ತು ವೈದ್ಯಕೀಯ ಸೇವೆ: ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ಮೀಸಲಿಟ್ಟ ಫೋನ್ ಸಂಖ್ಯೆಯನ್ನು ಹೊಂದಿದ್ದು, ತುರ್ತು ಸಹಾಯವನ್ನು ಒದಗಿಸಲು ವಿ-ಮಿಡೋ ವೈದ್ಯಕೀಯ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ.

2. ರೋಟರಿ ಸಂಪರ್ಕಗಳು: ಸಾರ್ವಜನಿಕರಿಗಾಗಿ ಮೀಸಲಿಟ್ಟ ವಾಟ್ಸಾಪ್ ಗುಂಪಿನ ಮೂಲಕ ಸ್ಥಳೀಯ ರೋಟರಿ ಕ್ಲಬ್ಬಿನ ಸದಸ್ಯರೊಂದಿಗೆ ಸಂಪರ್ಕ ಸಾಧಿಸಬಹುದು.ರೋಟರಿ ಯೋಜನೆಗಳನ್ನು ವೀಕ್ಷಿಸಿ, ಪ್ರತಿಕ್ರಿಯೆ ನೀಡಬಹುದು.

ಸ್ಥಳೀಯ ರೋಟರಿ ಕ್ಲಬ್ ನ ಯೋಜನೆಗಳು ಅಥವಾ ವೈಯಕ್ತಿಕ ಅಗತ್ಯತೆಗಳಿಗೆ ಸಹಾಯವನ್ನು ವಿನಂತಿಸಬಹುದು.

ಪ್ರಮುಖ ಪ್ರಯೋಜನಗಳು:

– ಸಾರ್ವಜನಿಕರಿಗೆ ರೋಟರಿ ಕ್ಲಬ್ ನ ಪದಾಧಿಕಾರಿಗಳು ಹಾಗು ಸದಸ್ಯರೊಂದಿಗೆ ನೇರ ಸಂಪರ್ಕ ಸಾಧಿಸಲು ಅವಕಾಶ.

-ಹೆಚ್ಚಿನ ಪಾರದರ್ಶಕತೆ ಮತ್ತು ಸಮುದಾಯದೊಂದಿಗೆ ನಿಕಟ ಸಂಪರ್ಕ.

– ವಿ-ಮಿಡೋ ವೈದ್ಯಕೀಯ ಸೇವೆಗಳ ಮೂಲಕ ತುರ್ತು ವೈದ್ಯಕೀಯ ಸಹಾಯಕ್ಕೆ ಸುಲಭ ಅವಕಾಶ.

ರೋಟರಿಯು ಸ್ಥಳೀಯ ಅಗತ್ಯತೆಗಳಿಗೆ ಸ್ಪಂದಿಸಲು ಮತ್ತು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲಕರ ವಾತಾವರಣ ನಿರ್ಮಾಣ.

3.ಶಾಲಾ ಹೆಣ್ಣು ಮಕ್ಕಳಿಗೆ ಉಚಿತ ಸರ್ವಿಕಲ್ ಕ್ಯಾನ್ಸೆರ್ ಚುಚ್ಚು ಮದ್ದನ್ನು ನೀಡಲಾಗುವುದು.ಕ್ಯಾನ್ಸೆರ್

ಆಸರೆ ಯೋಜನೆಯು ರೋಟರಿ ಸದಸ್ಯರು ಮತ್ತು ಸಮುದಾಯದ ನಡುವೆ ಅಂತರವನ್ನು ಕಡಿಮೆ ಮಾಡುವ ಮೂಲಕ, ಜವಾಬ್ದಾರಿ, ಕಾಳಜಿ, ಮತ್ತು ಸಂಪರ್ಕದ ಪ್ರಜ್ಞೆಯನ್ನು ಉತ್ತೇಜಿಸುತ್ತದೆ. ಇದರಿಂದ, ರೋಟರಿಯ ಇಮೇಜ್ ಮತ್ತು ಪ್ರಭಾವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಆಸರೆ ಯೋಜನೆಯು,ರೋಟರಿ ಕ್ಲಬ್ಬುಗಳ ಸಂಪರ್ಕಗಳನ್ನು ಇನ್ನಷ್ಟು ಸದೃಢಗೊಳಿಸುವ ಮೂಲಕ, ರೋಟರಿಯ ಪ್ರಮುಖ ಸೇವಾ ಯೋಜನೆಗಳು ಮತ್ತು ತುರ್ತು ಸ್ಪಂದನೆ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಜನರ ಬಳಕೆಗೆ ಸುಲಭವಾಗಿ ಸಿಗುವಂತೆ ಮಾಡುತ್ತದೆ.

ಆಸರೆ ಯೋಜನೆ:

1. ತುರ್ತು ಸಂಖ್ಯೆಯ ನಿರ್ವಹಣೆ:

– ರೋಟರಿ ಕ್ಲಬ್‌ಗಾಗಿನ 24/7 ತುರ್ತು ಸಂಖ್ಯೆಯನ್ನು ಅಧ್ಯಕ್ಷರು ಅಥವಾ ನಿಯೋಜನೆಗೊಂಡ ಮುಖ್ಯಸ್ಥರು ನಿರ್ವಹಿಸುತ್ತಾರೆ.

2. ಸ್ಥಳೀಯ ಸೇವಾ ಸಂಪರ್ಕ:

ಆಯಾ ಪ್ರದೇಶದಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ರೋಟರಿ ಕನೆಕ್ಸ್ ವಾಟ್ಸಾಪ್  ಗುಂಪಿಗೆ ಸೇರಿಸಲು ಸಹಕರಿಸುವುದು

3. ವೈದ್ಯಕೀಯ ತುರ್ತು ಸಮಯದಲ್ಲಿ:

– ಸಾರ್ವಜನಿಕರು ಸಹಾಯಕ್ಕಾಗಿ ರೋಟರಿ ತುರ್ತು ಸಂಖ್ಯೆಗೆ ಕರೆ ಮಾಡಬಹುದು.

– ತುರ್ತು ಸಹಾಯಕ್ಕಾಗಿ ಮಾಡುವ ಕರೆಮಾಡುವಯು ವಿ-ಮಿಡೋ ವೈದ್ಯಕೀಯ ಸೇವೆಗಳಿಗೆ ಸಂಪರ್ಕ ಮಾಡುತ್ತದೆ.

4. ವೈದ್ಯಕೀಯ ಸೇವೆಗಳು:

ವಿ ಮಿಡೋ ಸಂಸ್ಥೆಯೊಂದಿಗೆ ಆನ್‌ಲೈನ್ ವೈದ್ಯರ ಸಮಾಲೋಚನೆಗಳು ಉಚಿತವಾಗಿ ಲಭ್ಯವಿರುತ್ತವೆ.

ತುರ್ತು ಪರಿಸ್ಥಿತಿಗಳಲ್ಲಿ ಆಂಬ್ಯುಲೆನ್ಸ್ ಸೇವೆ ಮತ್ತು ಆಸ್ಪತ್ರೆಗೆ ಸಾರಿಗೆ ವ್ಯವಸ್ಥೆ ನಿರಾತಂಕವಾಗಿರುವುದು.

ರೋಟರಿ ಸಂಪರ್ಕಿಸಿ: 9535534666

ಸದಾ ರೋಟರಿ ಸೇವೆಯಲ್ಲಿ,

– ರೊ ಮಹದೇವಪ್ರಸಾದ್ ಎನ್.ಎಸ್. ಜಿಲ್ಲಾ ಗವರ್ನರ್, ರೋಟರಿ ಜಿಲ್ಲೆ 3192

City Today News 9341997936

“ಪಿಜಿ ಮಾಲೀಕರ ಜಾಗೃತಿ ಸಮಾವೇಶ 2024″

“ಪಿಜಿ ಮಾಲೀಕರ ಜಾಗೃತಿ ಸಮಾವೇಶ 2024″ ವನ್ನು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟ ದಿಂದ ದಿನಾಂಕ 16.10.24 ಬುಧವಾರ ಬೆಳಗ್ಗೆ 10.30 ಗಂಟೆಗೆ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲಿ( ಹೊಸಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರ ) ಆಯೋಜಿಸಲಾಗಿದೆ.

ಈ ಕಾರ್ಯಕ್ರಮವು ನಗರದ ಪಿಜಿ ಮಾಲೀಕರುಗಳಲ್ಲಿ ಜಾಗೃತಿ ಹಾಗೂ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳ ಪಾಲನೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿದೆ.ಈ ಕಾರ್ಯಕ್ರಮಕ್ಕೆ ಬಿಬಿಎಂಪಿಯ ವಿಶೇಷ ಆಯುಕ್ತರಾದ ಶ್ರೀ ಸುರಳ್ಳರ್ ವಿಕಾಸ್ ಕಿಶೋರ್ ಅವರು ಆಗಮಿಸಲಿದ್ದು, ವಿಶೇಷವಾಗಿ ಪಿಜಿಗಳ ಮಾರ್ಗಸೂಚಿ ಅನುಸರಿಸುವ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ಅವರು ಕಾನೂನು ಬದ್ಧ ವಾಗಿ ಪಿಜಿಗಳು ನಡೆಸುವ ಬಗ್ಗೆ ಮಾರ್ಗದರ್ಶನ ಕೊಡಲಿದ್ದಾರೆ. ಬಿಬಿಎಂಪಿಯ ಮಾಜಿ ಮಹಾಪೌರರಾದ ಶ್ರೀಮತಿ ಗಂಗಾಂಬಿಕಾ ಮಲ್ಲಿಕಾರ್ಜುನ್ ಅವರು ಉಪಸ್ಥಿತರಿದ್ದು,

ಬಿಬಿಎಂಪಿಯ ಎಂಟು ವಲಯಗಳ ಆರೋಗ್ಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಾಗೂ ಎರಡುವರೆ ಸಾವಿರಕ್ಕೂ ಹೆಚ್ಚು ನಗರದ ಪಿಜಿ ಮಾಲೀಕರು ಹಾಗೂ ಪಿಜಿ ವ್ಯವಸ್ಥಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಲಿದ್ದಾರೆ.ಈ ಸಂದರ್ಭದಲ್ಲಿ ಪಿಜಿ ಮಾಲೀಕರ ಕ್ಷಮಾಭಿವೃದ್ಧಿ ಸಂಘಗಳ ಒಕ್ಕೂಟವು ಪಿಜಿ ಮಾಲೀಕರ ಸಾಧಕ ಬಾಧಕಗಳ ಬಗ್ಗೆ ಮಾನ್ಯ ಆಯುಕ್ತರಲ್ಲಿ ಮನವಿ ಸಲ್ಲಿಸಲಿದ್ದು, ಪ್ರಸಕ್ತವಾಗಿ ನಗರ ಪ್ರದೇಶದಲ್ಲಿ ಸಾವಿರಾರು ಪಿಜಿಗಳಿದ್ದು,ಲಕ್ಷಾಂತರ ಜನರು ಪಿಜಿಗಳಲ್ಲಿ ವಾಸವಾಗಿದ್ದಾರೆ ಹಾಗೆ ತಮ್ಮ ಬದುಕನ್ನು ಕಟ್ಟಿಕೊಳಲು ತಮ್ಮ ಸಾಧನೆಯನ್ನು ಮಾಡಲು ದೂರದ ಊರುಗಳಿಂದ ಆಗಮಿಸಿ ತಮ್ಮ ಓದು ಹಾಗೂ ಕೆಲಸ ಹರಸಿ ಬಂದಿರುವವರಿಗೆ ಪಿಜಿಗಳು ಸಹಕಾರಿಯಾಗಿವೆ.ಹಾಗೆ ಮುಂಬರುವ ದಿನಗಳಲ್ಲಿ ಕಾನೂನು ಬದ್ಧವಾಗಿ ಹಾಗೂ ಬಿಬಿಎಂಪಿಯ ಹಾಗೂ ಪೊಲೀಸ್ ಇಲಾಖೆಯ ಮಾರ್ಗಸೂಚಿ ನಿಯಮದಡಿಯಲ್ಲಿ ನಡೆಸುವಂತಹ ಪಿಜಿಗಳ ಉದ್ಯಮಕ್ಕೆ ಅನುಕೂಲಕರ ರೀತಿಯಲ್ಲಿ ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಲಾಗುತ್ತದೆ.

ಪಿಜಿ ಒಂದು ಸಾಮಾಜಿಕ ಸೇವೆ ಮತ್ತು ಸಾವಿರಾರು ಜನ ಪಿಜಿ ನಡೆಸುವವರು ತಮ್ಮ ಜೀವನೋಪಾಯಕ್ಕಾಗಿ ಸಾಮಾಜಿಕ ಸೇವೆಯಂತಿರುವ ಈ ಪಿಜಿ ಉದ್ಯೋಗವನ್ನು ಪ್ರಸಕ್ತ ಕೆಲಮಾಲೀಕರು ಆಯ್ಕೆ ಮಾಡಿಕೊಂಡಿರುತ್ತಾರೆ.

ಹಾಗೆ ನೂರಾರು ಕನಸು ಕಟ್ಟಿಕೊಂಡು ಬಂದಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಪುರುಷ ಹಾಗೂ ಮಹಿಳೆಯರಿಗೆ ಈ ಪಿಜಿಗಳಿಂದ ಅನೇಕ ಲಾಭದಾಯಕ ಹಾಗೂ ಉಪಯೋಗ ಆಗುತ್ತಿರುವುದನ್ನು ಗಮನಕ್ಕೆ ತಂದು ಕನಿಷ್ಠ ಮಾನದಂಡವನ್ನು ಹಾಗೂ ವ್ಯವಸ್ಥಿತವಾಗಿ ಪಿಜಿ ನಡೆಸುವವರಿಗೆ ಪ್ರೋತ್ಸಾಹ ನೀಡುವಂತೆ ಒತ್ತಾಯಿಸಲಾಗುತ್ತದೆ. ಎಂದು ಪ್ರಕಟಣೆಯಲ್ಲಿ ಪಿಜ ಮಾಲೀಕರ ಕ್ಷೇಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಅರುಣ್ ಕುಮಾರ್ ಡಿ ಟಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಬಸವನಗುಡಿ ವಲಯದ ಮನೀಶ್, ವೈಟ್ ಫೀಲ್ಡ್ ವಲಯದ ಭಾಸ್ಕರ್ ರೆಡ್ಡಿ,ಜಯನಗರ ವಲಯದ ಅಂಜಯ್ಯ ರೆಡ್ಡಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಸೂಚನೆ :ಈ ಮೂಲಕ ನಗರದಲ್ಲಿರುವ ಎಲ್ಲಾ ಪಿಜಿ ಮಾಲೀಕರು ಆಗಮಿಸಬೇಕೆಂದು ಆಹ್ವಾನ ಕೊಡುತ್ತಿದ್ದೇವೆ

City Today News 9341997936