ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹ

೧. ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಶಿವಶಂಕರನಾಯ್ಕ ಮತ್ತಿತರರು ಸೇರಿ ಭ್ರಷ್ಟಾಚಾರ ನಡೆಸಿರುವುದು ಹಲವಾರು ಪ್ರಕರಣಗಳ ಮೂಲಕ ನಮಗೆ ತಿಳಿದು ಬಂದಿರುತ್ತದೆ. ಎಂ.ಡಿ ಅವರೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣಕಾಸು ಅಕ್ರಮ ನಡೆಸಿದ್ದಾರೆ ಎಂದು ಸ್ವತಃ ತಾಂಡ ನಿಗಮದ ಲೆಕ್ಕಾಧಿಕಾರಿಯೇ ಈ ಹಿಂದೆ ಸರ್ಕಾರಕ್ಕೆ ದೂರು ನೀಡಿದ್ದಾರೆ.

9.ಸೇವಾಲಾಲ್ ಜನ್ಮಸ್ಥಳದಲ್ಲಿ ನಿಯಮ ಮೀರಿ ಜೈವಿಕ ಶೌಚಾಲಯ ನಿರ್ಮಾಣದಲ್ಲಿ ಕೋಟಿಗೂ ಹೆಚ್ಚು ಹಣ ಅವ್ಯವಹಾರ ನಡೆದಿದೆ. ಕಳಪೆ ಕಾಮಗಾರಿ ನಡೆದಿರುವ ಕುರಿತು ಸೇವಾಲಾಲ್ ಮಹಾಮಠ ಸಮಿತಿಯ ದೂರು ಸಲ್ಲಿಸಿದೆ.

೩. ನಿಗಮದ ಲೆಕ್ಕ ಪರಿಶೋಧನೆ ಮಾಡಿಸಿಲ್ಲದಿದ್ದರೂ ಅನಗತ್ಯವಾಗಿ ಒಂದು ಕೋಟಿ ಹಣವನ್ನು ಬೇರೆಯವರಿಗೆ ಪಾವತಿಸಲಾಗಿದೆ.

೪. ಲಂಬಾಣಿ ಕಸೂತಿ ತರಬೇತಿಗಾಗಿ ಕೇಂದ್ರ ಸರ್ಕಾರದ ಎರಡು ಕೋಟಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. ಕಸೂತಿ ತರಬೇತಿದಾರರು ಮತ್ತು ವಸ್ತು, ಬಟ್ಟೆ ಮತ್ತಿತರ ಯಾವುದೇ ಮಾಹಿತಿಗಳು ನಿಗಮದಲ್ಲಿ ಇಲ್ಲ. ಈ ಅನುದಾನ ದುರುಪಯೋಗವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ತಪ್ಪು ಮಾಹಿತಿ ಸಲ್ಲಿಸಲಾಗಿದೆ.

೫. ತಾಂಡ ನಿಗಮದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವಾಗ ನಿಯಮ ಪಾಲಿಸಿಲ್ಲ. ಅಪೂರ್ಣ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಹೊಸ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ.

೬. ತಾಂಡ ನಿಗಮದ ಕಚೇರಿಯನ್ನು ಸ್ಥಳಾಂತರ ಮಾಡುವಾಗಲೂ ನಿಯಮಾನುಸಾರ ಟೆಂಡ‌ರ್ ನಡೆಸದೇ ಬೃಹತ್ ಕಾಮಗಾರಿಗಳಿಗೆ ಮಂಜೂರು ನೀಡಲಾಗಿದೆ.

೬. ಮೈಸೂರು ನಗರದಲ್ಲಿ ಜಿಲ್ಲಾ ಬಂಜಾರ ಭವನ ನಿರ್ಮಾಣದ ಕಾಮಗಾರಿಯನ್ನು ಟೆಂಡರ್ ಕರೆಯದೆ ಒಂದೇ ದಿನದಲ್ಲಿ ಹಣ ಬಿಡುಗಡೆ ಪ್ರಕ್ರಿಯೆ ಪೂರೈಸಲಾಗಿದೆ. ನಿಯಮ ಮೀರಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ.

೮. ವಿಜಯಪುರ ಜಿಲ್ಲೆಯ ಖಂಡಸಾರಿ ತಾಂಡದಲ್ಲಿ ಕೃಷ್ಣಭಾಗ್ಯ ಜನ ನಿಗಮದಿಂದ ನಿರ್ಮಿಸಲಾಗಿರುವ ಸಮುದಾಯ ಭವನಕ್ಕೆ ಸೇವಾಲಾಲ್ ಸಮುದಾಯ ಭವನ ಎಂದು ಬಣ್ಣ ಬಳಿದು 12 ಲಕ್ಷ ಬಿಲ್ ಮಾಡಲಾಗಿದೆ.

೯. ತಾಂಡ ನಿಗಮದಲ್ಲಿ ನಡೆದಿರಬಹುದಾದ ಭ್ರಷ್ಟಾಚಾರ ಮಾಹಿತಿಗಳು ಸೋರಿಕೆ ಹೋಗಬಾರದು ಎಂಬ ಕಾರಣ ನೀಡಿ ನಿಗಮದ ಹೊರಮೂಲ ನೌಕರರು ಸ್ಮಾರ್ಟ್ ಪೋನ್ ಗಳನ್ನು ಕಚೇರಿ ಅವರಣದಲ್ಲಿ ತರದಂತೆ ಆದೇಶ ಮಾಡಲಾಗಿದೆ.

೧೧. ವಿಜಯಪುರ ಜಿಲ್ಲೆಯ ಅರ್ಲಾಪುರ ತಾಂಡದ ವಾರ್ಡ್ ನಲ್ಲಿ ನಡೆದ ಕಾಮಗಾರಿ ಸೇರಿದಂತೆ ವಿವಿಧ ತಾಂಡಗಳ ಕಾಮಗಾರಿ ಮಂಜೂರು ಪ್ರಕ್ರಿಯೆ ಸಂಬಂಧಿಸಿದಂತೆ ನಿಗಮದ ಎಂಡಿ ಲಂಚ ಪಡೆದಿದ್ದಾರೆ ಎಂಬ ಅಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

೧೨. ಸ್ವಯಂ ಉದ್ಯೋಗ, ನೇರ ಸೌಲಭ್ಯಗಳ ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡಿಲ್ಲ ಮತ್ತು ಪಲಾನುಭವಿಗಳಿಗೆ ಕಿರುಕುಳ. ಕೆಲವರಿಂದ ಹಣ ವಸೂಲಿ ನಡೆದಿದೆ ಎಂಬುದು ತಿಳಿದು ಬಂದಿದೆ.

೧೩. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಭಾಗಿತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯಾಗಾರ ಮಾಡಲು ನಿಗಮದ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ.

೧೪. ಮಹಾರಾಷ್ಟ್ರದಲ್ಲಿ ಸಂಘ ಪರಿವಾರದ ಅಂಗ ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಿಯಮ ಮೀರಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದಿಂದ ಹಣ ಬಿಡುಗಡೆ ಮಾಡಲಾಗಿದೆ.

15. ನೀತಿ ಸಂಹಿತೆ ಜಾರಿಯಲ್ಲಿದ್ದರೂ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸುಮಾರು 15 ಕೋಟಿಗಳಷ್ಟು ಹಣವನ್ನು ಹಳೆಯ ದಿನಾಂಕವನ್ನು ನಮೂದಿಸಿ ಯಾವುದೇ ಟೆಂಡರ್ ಕರೆಯದೇ 15 ರಿಂದ 17 ಕೋಟಿ ಅನುದಾನವನ್ನು ಬಿಡುಗಡೆ ಮಾಡಿರುತ್ತಾರೆ.

16. ನಿಗಮದ ಕಷೇರಿಯನ್ನು ಸ್ಥಳಾಂತರಿಸಲು ಮೂವರ್ಸ್ ಪ್ಯಾಕರ್ಸ ಮೂಲಕ ದಸ್ತಾವೇಜುಗಳನ್ನು ಸರಬರಾಜು ಮಾಡಲು ಸುಮಾರು 60.000 ರೂ ವ್ಯಯಿಸಲಾಗಿದ್ದರೂ ಕೂಡ, ಅದರ ಖರ್ಚನ್ನು ಸುಮಾರು 50 ಲಕ್ಷಕ್ಕೆ ಏರಿಸಿ ನಿಗಮದ ಹಣವನ್ನು ಕೊಳ್ಳೆ ಹೊಡೆದಿರುತ್ತಾರೆ.

17.ಬಂಜಾರ ಪರಂಪರೆಯ ಸಿದ್ದ ಉಡುಪುಗಳ ತಯಾರಿಕೆಗೆ ಖಾಸಗಿ ಸಂಸ್ಥೆಗಳೊಂದಿಗೆ ವ್ಯವಹಾರ ಕುದುರಿಸಿಕೊಂಡು 2021-22 ರ ಅವಧಿಯಲ್ಲಿ ಸುಮಾರು 2ಕೋಟಿ ರಷ್ಟು ತಗುಲುವ ವೆಚ್ಚಕ್ಕೆ ಸುಮಾರು 5 ಕೋಟಿಗೂ ಅಧಿಕ ವೆಚ್ಚವನ್ನು ಬಿಡುಗಡೆ ಮಾಡಿ ಹಿಂದಿನ ಬಾಗಿಲಿನಿಂದ ನಿಗಮದ ಹಣವನ್ನು ಲೂಟಿ ಮಾಡಲಾಗಿರುತ್ತದೆ.

18. 2023-24 ರ ಅವಧಿಯ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಜಯಂತಿಯ ಸಂಧರ್ಭದಲ್ಲಿ ಯಾವುದೇ ಟೆಮಡರ್ ಕರೆಯದೇ ಶಾಶ್ವತವಾದ ಸುಸಜ್ಜಿತ ವಾಯ್ಲೆಟ್ ನಿರ್ಮಿಸಲು ಸುಮಾರು 1 ಕೋಟಿ ಮೊತ್ತವನ್ನು ಹ್ಯಾಬಿಟೇಟ್ ಸಂಸ್ಥೆಯ ಮೂಲಕ ನಿರ್ವಹಿಸಲು ಅನುಮೋದನೆ ನೀಡಿ, ಕಾಮಗಾರಿ ನಿರ್ವಹಿಸಲಾಗಿರುತ್ತದೆ. ಇದರಲ್ಲಿ ಬಳಸಿದ ಸರಂಜಾಮುಗಳು ಕಳಪೆ ಗುಣಮಟ್ಟ ಹೊಂದಿವೆ ಎಂದು ಸ್ಥಳೀಯ ಸಮೀತಿಯ ಅಧಧ್ಯಕ್ಷರು ನಿಗಮಕ್ಕೆ ಪತ್ರ ಬರೆದು ಸುಮಾರು 60 ಲಕ್ಷ ಹಣ ಸದರಿ ಕಾಮಗಾರಿಯಲ್ಲಿ ಲೂಟಿ ಮಾಡಲಾಗಿದೆ. ಕಾಮಗಾರಿ ನಿರ್ವಹಿಸಿದ ವಿವರಗಳನ್ನು ನೀಡಿ ಎಂದು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ನಿಗಮದ ವದಯವಸ್ಥಾಪಕರು ಸ್ಥಳೀಯ ಸಂಸ್ಥೆಗೆ 5 ಲಕ್ಷ ವಿಶೇಷ ಅನುದಾನ ನೀಡಿ ಈ ಪ್ರಕರಣವನ್ನು ಮುಚ್ಚಿಹಾಕಿರುತ್ತಾರೆ.”

19. ಸರ್ಕಾರದ ಯೋಜನೆಗಳಾಗಿರುವ ಭೂ ಒಡೆತನ, ಗಂಗಾ ಕಲ್ಯಾಣ. ಸ್ವಯಂ ಉದ್ಯೋಗ ಐ.ಎಸ್.ಟಿ ಸಾಲಕ್ಕೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳನ್ನು ನಿಗಮದ ಎಫ್.ಡಿ.ಎ ಆಗಿರುವ ಎಲ್.ಬಿ.ನಾಯ್ಕ ಮೂಲಕ ಸಂಪರ್ಕಿಸಿ, ಸದರಿ ಫಲಾನುಭವಿಗಳಿಂದ ಹಣ ಒಸೂಲಿ ಮಾಡಿಕೊಂಡು ಪಲಾಣುಭವಿಗಳಿಗೆ ಯೋಜನೆಯನ್ನು ಮುಟ್ಟಿಸಿರುತ್ತಾರೆ.

20. ರಾಜ್ಯ ಸರ್ಕಾರದ ಯಾವುದೇ ಲಿಖಿತ ಆದೇಶ ಇರದೇ ಇದ್ದರೂ ಕೂಡ ನಿಗಮದಿಂದ, ಅಲೆಮಾರಿ ಅಭೀವೃದ್ಧಿ ನಿಗಮಕ್ಕೆ ಸುಮಾರು 3 ಕೋಟಿ ಹಣವನ್ನು ವರ್ಗಾಯಿಸಲಾಗಿರುತ್ತದೆ.

ಮೇಲ್ನೋಟಕ್ಕೆ ಈ ಪ್ರಕರಣಗಳು ಕಂಡು ಬಂದಿವೆಯಾದರೂ ಇನ್ನೂ ಹಲವಾರು ಅಕ್ರಮಗಳು ನಡೆದಿರುವ ಸಾದ್ಯತೆಗಳಿವೆ. ಹಾಗಾಗಿ ಕಳೆದ ಐದು ವರ್ಷಗಳಿಂದ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಹಣಕಾಸು ವ್ಯವಹಾರ ತಪಾಸಣೆ, ಅವ್ಯವಹಾರಗಳನ್ನು ತನಿಖೆ ಮಾಡಲು ಸೂಕ್ತ ಸಮಿತಿಯನ್ನು ರಚಿಸಿ ತನಿಖೆ ಮಾಡಬೇಕು. ಈ ಅವ್ಯವಹಾರಗಳಿಗೆ ನೇರವಾಗಿ ಕಾರಣವಾಗಿರುವ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ನಾಯ್ಕ ಮತ್ತಿತರನ್ನು ತಕ್ಷಣದಿಂದಲೇ ಅವರ ಹುದ್ದೆಯಿಂದ ವಜಾಗೊಳಿಸಿ. ನಿಗಮದಲ್ಲಿ ಆಗಿರುವ ಅಕ್ರಮಗಳ ತನಿಖೆಗೆ ಸಿಐಡಿ ಸಂರ್ಸತೆಯ ಮೂಲಕ ತನಿಖೆಗೆ ಆದೇಶಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸುತ್ತೇವೆ. ಹಾಗೆಯೇ ಇನ್ನು ಮುಂದೆ ಕರ್ನಾಟಕ ತಾಂಡ ಅಭಿವೃದ್ದಿ ನಿಗಮದ ಹಣ ಪಾರದರ್ಶಕವಾಗಿ ನೇರವಾಗಿ ಸಮಾಜದ ಅಭಿವೃದ್ದಿಗಾಗಿ ಬಳಕೆಯಾಗುವಂತೆ ಕ್ರಮವಹಿಸಲು ವಿಠ್ಠಲ್ ನಾಯಕ್ ಪ್ರಧಾನ ಕಾರ್ಯಧರ್ಶಿ ಗಳು ಸಂಘದ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯ ಮೂಲಕ ಮನವಿ ಮಾಡಿದರು.

City Today News 9341997936

Criminal Investigation of this entire scam was first done by CID however, this entire investigation was in a shoddy way, as manifested in Charge-Sheet still not being filed.

Sri Guru Raghavendra Sahakara Bank (Ni) was placed under restriction on 10th Jan 2020 U/S 35A of the Banking Act 1949 AACS read with Section 56. Since last 4 and half years we are deprived of our money that is kept in the bank for no fault of ours. Our Shareholders & Depositors have been put to extremely tormented for last few as most of them are Senior Citizens, Retired persons, some with pension and many without any pensions. Victims of Sri Guru Raghavendra Sahakara Bank (Ni) are the only one who are suffering but all those who are the reason for this heist are living happily enjoying the luxuries acquired from ill-gotten money.

Institutions mentioned below constitute the genesis of this scam and unfortunately these institutions are Constitutional bodies to protect common man from Scams anda subterfuge that have been inflicted on our Depositors.

1. RESERVE BANK OF INDIA: – This is the an independent statutory body that came into existence on 1st April 1935 in accordance to the provisions of Reserve Bank of India Act 1934, with Preamble

“To regulate the issue of Bank notes and keeping of reserves with a view to securing monetary stability in India and generally to operate the currency and credit system of the country to its advantage; to have a modern monetary policy framework to meet the challenge of an increasingly complex economy, to maintain price stability while keeping in mind the objective of growth.”

However, RBI has utterly failed at policy level, implementation and execution levels, thus leading our bank to its debacle. Bank started in 1999 after obtaining licence from RBI, inspected by RBI as per Banking Act 1949 AACS however it failed to detect ongoing scam right under its nose and only after it received some inside information about the bunco that was happening in the Bank only then a proper inspection happened and all skullduggery was unearthed before this fiasco that happened in 2019 September-October our Bank received accolades and awards from RBI and other prestigious institutions which in turn misguided Depositors falling into the a web of deceit of this Bank Management. Had RBI played its role properly in safeguarding the interest of common depositors Shareholders and Depositors of this Bank would have been saved froma undergoing this trauma of pauperdom. What is even more stressful is that RBI’s own admission in their 2019 Inspection Report that this bank is indulging in chicanery from 2001 onwards but in Inspection Report of 2017 & 2015 nothing of that sort was detected inferring that RBI was oblivious to all the misdemeanours of the Bank Management and Staff since 2001 till 2019.

2. REGISTRAR OF COOPERATIVE SOCIETY & MINISTRY OF COOPERATION GOVT OF KARNATAKA: – This is another Constitutional Body that failed, Our Bank being a Cooperative Bank is under dual control of RBI for its Banking activities and Registrar of Cooperative Societies (RCS) control Governing body of this Bank and RCS has on its part failed completely despite having access to all the activities and documents of our bank, RCS had done annual Auditing of this Bank since inception and just put its approval to all its Audit Reports and Balance without verifying the – reports.

3. Criminal Investigation of this entire scam was first done by CID however, this entire investigation was in a shoddy way, as manifested in Charge-Sheet still not being filed. All perpetrators of this scam got bail uncontested in Court resulting in all accused free in open enjoying their life with ill-gotten money. New Govt gave hopes of free and fair investigation by handing it over to CBI in November 2023 however till date more than 6 months passed but Investigation Officer not yet appointed for our case.

In addition BJP was in rule both in Central Government under PM Modi’s leadership and in Karnataka State Government under CM Basavaraj Bommai’s leadership. This bank situated in Basavanagudi Assembly Constituency Represented by Sri Ravi Subramanya from BJP and Bangalore South Parliamentary Constituency represented by Sri Tejaswi Surya of the BJP. However, none of them helped in getting our hard-earned money back. Except for promises nothing has fructified resulting in agony to the Share holders and Depositors.

Under the circumstances our Vedike has decided to give a call to all the depositors and stakeholders to unite and join our fight in getting Justice to all the depositors said HARISH.V Gen. Secretary at press meet held at Press club of Bangalore.

City Today News

ಹೊಸದಾಗಿ ಪ್ರಾರಂಭವಾದ ಕನ್ನಡ ಫಿಲಂ ಚೇಂಬ‌ರ್ (ರಿ) , ಪೋಸ್ಟ‌ರ್ ಬಿಡುಗಡೆ

ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಹೊಸ ಕಲಾವಿದರು ಹಾಗೂ ಹಿರಿಯ ಕಲಾವಿದರು ಜೊತೆಗೂಡಿ ಹೊಸದಾಗಿ ಪ್ರಾರಂಭವಾದ ಕನ್ನಡ ಫಿಲಂ ಚೇಂಬರ್ (ರಿ) ಸ್ಥಾಪನೆ ಆಗಿದ್ದು ನಮ್ಮಲ್ಲಿ ಸಿನಿಮಾಗೆ ಸಂಭಂದಪಟ್ಟ ಕಲಾವಿದರು, ನಿರ್ದೇಶಕರು, ಕ್ಯಾಮೆರಾಮನ್‌, ಸಂಗೀತ, ಡ್ಯಾನ್ಸ್‌, ಫೈಟ್ ಮಾಸ್ಟರ್ ಎಲ್ಲ ವಿಭಾಗದವರಿಗೆ ಲೈಫ್ ಟೈಮ್ ಸದಸ್ಯವ್ವ 2000/- ನೊಂದಣಿ ಮಾಡಿ ಐಡಿ ಕಾರ್ಡ್‌ (ID Card ) ಕೊಡಲಾಗುವುದು.

ನಿರ್ಮಾಪಕರು ಮೂವಿ ಬ್ಯಾನರ್‌ ಲೈಫ್ ಟೈಮ್ ಸದಸ್ಯವ್ವ 5000/- ಹಾಗೂ ಮೂವಿ ಟೈಟಲ್ 500/- ಇರುತ್ತೆ.ನೊಂದಣಿ ಮಾಡಿದ ಸದಸ್ಯರು ಕನ್ನಡ ಫಿಲಂ ಚೇಂಬ‌ರ್ ಚುನಾವಣೆಯಲ್ಲಿ ಭಾಗವಹಿಸಲು ವೋಟಿಂಗ್‌ ಪವ‌ರ್ ಇರುತ್ತೆ ಹಾಗೂ ಸ್ವರ್ಧೆ ಮಾಡಬಹುದು. ನಮ್ಮ ಸಮಾಜಮುಖಿ ಕೆಲಸಕ್ಕೆ ಮಾಧ್ಯಮ ಬಂದುಗಳು ಆಶೀರ್ವಾದ ಮಾಡಬೇಕು ಎಂದು ಕೇಳಿಕೊಳ್ಳುತ್ತೇವೆ  ಎಂ. ಎಸ್. ರವೀಂದ್ರ ಅಧ್ಯಕ್ಷರು ಕನ್ನಡ ಫಿಲಂ ಚೇಂಬ‌ರ್ (ರಿ) ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲೂ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

ಜಯನಗರ ರಾಯರ ಮಠದಲ್ಲಿ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಶೀರ್ವಾದ ಪಡೆದ ಬಿಜೆಪಿ ನೂತನ ಸಂಸದ ಡಾ|| ಮಂಜುನಾಥ್ ದಂಪತಿಗಳು

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜುಲೈ 18ರಂದು ಬಿಜೆಪಿ ನೂತನ ಸಂಸದ ಡಾ|| ಮಂಜುನಾಥ್ ದಂಪತಿಗಳು ಶ್ರೀ ಗುರು ರಾಯರ ಬೃಂದಾವನಕ್ಕೆ ದೀಪ ಬೆಳಗಿಸಿ ನಂತರ ಪರಮ ಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ಫಲ ಮಂತ್ರಾಕ್ಷತೆ ಸ್ವೀಕರಿಸಿ, ಆಶೀರ್ವಾದ ಪಡೆದುಕೊಂಡರು  ಈ ಸಂದರ್ಭದಲ್ಲಿ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರು, ಶ್ರೀ ನಂದಕಿಶೋರ್ ಆಚಾರ್ಯರು , ಶ್ರೀ ಕೃಷ್ಣಾಚಾರ್ಯರು,ಉದ್ಯಮಿ  ಶ್ರೀ ಕಿರಣ್ ಕುಮಾರ್, ಮತ್ತು ಶ್ರೀ ಮಠದ ಸಿಬ್ಬಂದಿಗಳು ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

City Today News 9341997936

ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಆಗಸ್ಟ್ 1 ರಿಂದ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದ ತೀರ್ಮಾನವನ್ನು ಬಿ.ಎಂ.ಟಿ.ಸಿ ಮದ್ದೂರ್ ಸಂಘ (ರಿ), ಬೆಂಗಳೂರು ಹಾಗು ಕರ್ನಾಟಕ ರಸ್ತೆ ಸಾರಿಗೆ ಮಜೂರ್ ಸಂಘ ಒಕ್ಕೂಟ ಸ್ವಾಗತಿಸುತ್ತದೆ.

ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತದೆ. ಇದರಿಂದ ರಾಜ್ಯದ ಲಕ್ಷಾಂತರ ನೌಕರರ ವೇತನ ಶೇ 27.5 ರಷ್ಟು ಹೆಚ್ಚಾಗಲಿದೆ.

‘ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯನ್ನು ಪ್ರಾರಂಭದಿಂದ ಇಲ್ಲಿವರೆಗೂ ಹಗಲು-ರಾತ್ರಿ ಮಳೆ, ಚಳಿ, ಬಿಸಿಲು ಲೆಕ್ಕಿಸದೆ ಹಬ್ಬ ಹರಿದಿನಗಳನ್ನು ಬದಿಗೊತ್ತಿ ಕರ್ತವ್ಯ ನಿರ್ವಹಿಸಿ ಯಶಸ್ವಿಗೊಳಿಸಿದ ಸಾರಿಗೆ ಕಾರ್ಮಿಕ ವರ್ಗದ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಗಮನ ಹರಿಸಬೇಕಿದೆ.

1,35,000 ಸಾರಿಗೆ ಕಾರ್ಮಿಕರು 01-01-24 ವೇತನ ಪರಿಷ್ಕರಣೆ ಹಾಗೂ 01-01-2020 ರ ಹಿಂಬಾಕಿ ವೇತನ ಪಾವತಿ ವಿಷಯದಲ್ಲಿ ಅನೇಕ ಬಾರಿರಾಜ್ಯ ಸರ್ಕಾರಕ್ಕೆ ನಮ್ಮ ಸಂಘ ಮನವಿ ಸಲ್ಲಿಸಿದೆ. 2023 ರಲ್ಲಿ ನಿವೃತ್ತಿಯಾದ ನೌಕರರಿಗೆ ಉಪಧನ ಹಾಗು ಹಿಂಬಾಕಿ ಪಾವತಿ ಮಾಡಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿವೃತ್ತ ನೌಕರರು ಬೇಡಿಕೆ ಇಟ್ಟು ಕಾಯುತ್ತಿದ್ದಾರೆ.

ಲಕ್ಷಾಂತರ ಸಾರಿಗೆ ಕಾರ್ಮಿಕರು ಹಾಗು ನಿವೃತ್ತ ನೌಕರರು ಸಂಕಷ್ಟದಲ್ಲಿ ಇದ್ದಾರೆ. ಆದ ಕಾರಣ ಮಾನ್ಯ ಮುಖ್ಯಮಂತ್ರಿಗಳು ಸಾರಿಗೆ ಸಿಬ್ಬಂದಿಗಳ ವೇತನ ಪರಿಷ್ಕರಣಿಯ ವಿಷಯದಲ್ಲಿ ಮತ್ತು ನಿವೃತ್ತಿಯಾದ ನೌಕರರಿಗೆ ಉಪಧನ ಹಾಗು ಹಿಂಬಾಕಿ ಪಾವತಿ ವಿಷಯದಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಸಮಸ್ತ ಕಾರ್ಮಿಕ ವರ್ಗದ ಪರವಾಗಿ ರಸ್ತೆ ಸಾರಿಗೆ ಮಜದೂರ್ ಸಂಘದ ವತಿಯಿಂದ ಅಧ್ಯಕ್ಷರಾದ ಮಾದಯ್ಯನವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯ ಮಾಡಿದರು.

City Today News 9341997936