ಶ್ರೀ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗೆ ಇಳಿಸಿದಲ್ಲಿ, ಉಲ್ಲೇಖಿತ ಅಹಿಂದ ಸಮುದಾಯಗಳು ಈ ಸಂಘಟನೆಯ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಾದಿ ಹಿಡಿಯುತ್ತೇವೆಂದು ಈ ಮೂಲಕ ಸಂಬಂಧಪಟ್ಟವರಿಗೆ ಎಚ್ಚರಿಕೆ

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

>ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಸಮುದಾಯಗಳನ್ನು ಸಂಘಟಿಸುವುದು; ಆ ಸಮುದಾಯಗಳ ಒಳಗೆ ಬಡತನರೇಖೆಗಿಂತ ಕೆಳಗಿರುವವರಿಗೆ ಆರ್ಥಿಕಶಕ್ತಿ ಕಲ್ಪಿಸುವುದು; ಭವಿಷ್ಯತ್ತಿಗೆ ರಾಜಕೀಯಶಕ್ತಿ ಗಳಿಸುವುದು; ದೇಶದಲ್ಲಿ ಅಸಮಾನತೆ ನಿವಾರಣೆ ಮಾಡಿ, ಭಾರತ ಸಂವಿಧಾನದ ಸಮಪಾಲು/ಸಮಬಾಳು ತತ್ವದಡಿ, ಸಮ ಸಮಾಜ ನಿರ್ಮಾಣ ಮಾಡುವ, ಗುರಿ ಇಟ್ಟುಕೊಂಡು ಈ ಸಂಘಟನೆ ಸ್ಥಾಪಸಿಲಾಗಿದೆ. ಈ ಉದ್ದೇಶಗಳಿಗಾಗಿ ರಾಜ್ಯದ ಉದ್ದಗಲಕ್ಕೂ ಅಹಿಂದ ಸಮುದಾಯಗಳ ಚಳುವಳಿ ರೂಪಿಸುವ, ಪಕ್ಷಾತೀತ, ಕೇಡರ್ ಬೇಸ್ ಸಂಘಟನೆ ಇದಾಗಿದೆ;

>ರಾಜ್ಯದ ಹಾಲಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರು ಮೂಲತಃ ರಾಮಮನೋಹ‌ರ್ ಲೋಹಿಯಾ ಅವರ ಅನುಯಾಯಿ ಮತ್ತು ಅವರ ಸಿದ್ಧಾಂತದ ಸಮಾಜವಾದದ ಬಳವಳಿ; ಡಾಃಬಿ.ಆರ್.ಅಂಬೇಡ್ಕರ್ ಅವರ, ಭಾರತ ಸಂವಿಧಾನದ ಆಶಯಗಳ ಸಕಾರಗೊಳಿಸುವ ಮನಭೂಮಿಕೆ, ಬದ್ಧತೆ ಹೊಂದಿರುವ ರಾಜಕಾರಣಿ; ಪೆರಿಯಾರ್, ಕುವೆಂಪು ರಂತಹ ಮೌಡ್ಯ ಕಂದಾಚಾರಗಳನ್ನು ವಿರೋಧಿಸುವ ಗುಣವುಳ್ಳ ನಾಯಕ; ಜಾತ್ಯತೀತ ತತ್ವಗಳನ್ನು ತನ್ನ ವೈಯಕ್ತಿಕ ಬದುಕು, ಜೀವನದಲ್ಲಿ ಅಳವಡಿಸಿಕೊಂಡಿಸಿರುವ ರಾಜಕಾರಣಿ;

>ಶ್ರೀ ಸಿದ್ಧರಾಮಯ್ಯನವರು 2013 ರಿಂದ 2018ರವರೆಗೆ ಮೊದಲ ಬಾರಿ ರಾಜ್ಯದ ಮುಖ್ಯಮಂತ್ರಿ ಅವದಿಯಲ್ಲಿ ಹಲವು ಬಾಗ್ಯಗಳನ್ನು ಬಡವರಿಗಾಗಿ ನೀಡಿದ್ದಾರೆ. ಇದರಿಂದ ಶೇ.80ಕ್ಕೂ ಹೆಚ್ಚಿರುವ ಆಹಿಂದ ಸಮುದಾಯಗಳ ಜನರು ಉತ್ತಮವಾಗಿ ಬದಕಲು ಸಹಾಯವಾಗಿದೆ. ಬಡತನರೇಖೆಗಿಂತ ಕೆಳಗಿದ್ದ ಸಮುದಾಯಗಳು ಮೂರೊತ್ತು ಹೊಟ್ಟೆ ತುಂಬ ಊಟ ಮಾಡಿವೆ; ಇಂತಹ ಕಾರ್ಯಕ್ರಮಗಳಿಂದ ಅವರ ಒಳಗಿನ ಗುಣ ಮತ್ತು ಬದ್ಧತೆಗಳು ಸಾಬಿತಾಗಿವೆ.

> ಶ್ರೀ ಸಿದ್ಧರಾಮಯ್ಯನವರ ರಾಜಕೀಯ ಆಧ್ಯತೆ ಮತ್ತು ಬದ್ಧತೆಗಳನ್ನು ಒಪ್ಪಿ 2023ರಲ್ಲಿ ರಾಜ್ಯದಲ್ಲಿ ವಿಧಾನಸಭೆಗೆ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಪುನಃ ಕಾಂಗ್ರೇಸ್ ಸರ್ಕಾರವನ್ನು ರಾಜ್ಯದ ಬಹುತೇಕ ಅಹಿಂದ ಸಮುದಾಯಗಳು ಕೈಹಿಡಿದಿದ್ದೇವೆ. ಈ ಅವದಿಯಲ್ಲಿ ಅಹಿಂದ ಸಮುದಾಯಗಳ ಜೊತೆಗೆ ಉಳಿದ ಎಲ್ಲರಿಗೂ ಹಲವು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಫಲವನ್ನು ರಾಜ್ಯದ ಎಲ್ಲರೂ ಉಣ್ಣುತ್ತಿದ್ದಾರೆ.

> ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಅಂದಾಜು ಲಿಂಗಾಯಿತರು 12% ಮತ್ತು ಒಕ್ಕಲಿಗರು 10% SC/ST 24% ಮತ್ತು (ಲಿಂಗಾಯಿತರು ಮತ್ತು ಒಕ್ಕಲಿಗರು ಹೊರತುಪಡಿಸಿದ) ಇನ್ನೂಳಿದ ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರು 34% ಜನಸಂಖ್ಯೆಯಿದ್ದಾರೆ. ಬಹುಸಂಖ್ಯಾತರಿದ್ದರೂ SC/ST, OBC, Minoritiesಗಳಲ್ಲಿ ಮುಖ್ಯಮಂತ್ರಿ ಪದವಿಗೇರಿದವರ ಸಂಖ್ಯೆ ಕಡಿಮೆ. ಸ್ವಾತಂತ್ರ ನಂತರ ಹೆಚ್ಚು ಪಾಲು ಮೊದಲಿನ 2 ಜಾತಿಗಳೆ ಪಡೆದಿವೆ. ಉಳಿದ ಬಹುಸಂಖ್ಯಾತ ಜಾತಿಗಳು ಮುಖ್ಯಮಂತ್ರಿ ಪದವಿಗೇರುವಲ್ಲಿ ಜೊತೆಗೆ ರಾಜಕೀಯ ಶಕ್ತಿಗಳಿಸುವಲ್ಲಿ ವಂಚಿತರಾಗಿದ್ದಾರೆ.

> ಈ ಕಾರಣದ ಜೊತೆಗೆ ಹತ್ತು ಹಲವು ಕಾರಣಗಳಿಂದ ರಾಜ್ಯದಲ್ಲಿ ಮತ್ತು ದೇಶದಲ್ಲಿ ಸ್ವಾತಂತ್ರ್ಯ ಮತ್ತು ಭಾರತ ಸಂವಿಧಾನ ಅನುಷ್ಟಾನಗೊಂಡು 75 ವರ್ಷಗಳು ಕಳೆದರೂ ಸಮ ಸಮಾಜ ನಿರ್ಮಾಣವಾಗಿಲ್ಲ. ಆಸಮಾನತೆ ಮುಂದುವರೆದಿದೆ; ಉಲ್ಲೇಖಿತ ಬಹುಸಂಖ್ಯಾತ ಜಾತಿಗಳಲ್ಲಿ ಈದಿನಗಳಲ್ಲಿಯೂ ಹಿಂದುಳಿದಿರುವಿಕೆ, ಬಡತನ ಮುಂದುವರೆದಿದೆ. ಈ ಅಪರಾಧ ಹೊಣೆಗಾರಿಕೆಯನ್ನು ಮುಂದುವರಿದ ಜಾತಿಗಳು ತೆಗೆದುಕೊಳ್ಳುತ್ತಿಲ್ಲ ಬದಲಿಗೆ ಮತ್ತಷ್ಟು ಅಧಿಕಾರ ಮತ್ತು ಫಲವನ್ನು ನಿರಂತರವಾಗಿ ಅವರೇ ಪಡೆಯಲು ಬಯಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದದ್ದು;

> ಸಾಮಾಜಿಕ ಕಳಕಳಿಯ ಹರಿಕಾರ ಶ್ರೀ ಸಿದ್ದರಾಮಯ್ಯನವರಿಂದ ಮುಖ್ಯಮಂತ್ರಿ ಪದವಿಯನ್ನು ವಾಪಸ್ಸು ಪಡೆಯುವ, ಆ ಸ್ಥಾನದಿಂದ ಆಸ್ಥಿರಗೊಳಿಸುವ ಹುನ್ನಾರ, ಷಡ್ಯಂತರಗಳನ್ನು ರಾಜ್ಯದ ಅಹಿಂದ ಸಮುದಾಯಗಳ ಪರವಾಗಿ ಈ ಸಂಘಟನೆಯು ಕಟುವಾಗಿ ಖಂಡಿಸುತ್ತದೆ. ಇಂತಹ ಸಾಮಾಜಿಕ ಕಳಕಳಿಯ ಹರಿಕಾರ ಶ್ರೀ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಪದವಿ ಬಿಟ್ಟಕೋಡಿ ಎಂದು ಕೇಳುತ್ತಿರುವ ಮಾನ್ಯರು ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇವೆ.

>ಪ್ರಾಮಾಣಿಕ, ಸಾಮಾಜಿಕ ಬದ್ಧತೆಯಿರುವ ಶ್ರೀ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗೆ ಇಳಿಸಿದಲ್ಲಿ, ಉಲ್ಲೇಖಿತ ಅಹಿಂದ ಸಮುದಾಯಗಳು ಈ ಸಂಘಟನೆಯ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಾದಿ ಹಿಡಿಯುತ್ತೇವೆಂದು ಈ ಮೂಲಕ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡುತ್ತಿದ್ದೇವೆ.

> ಜೊತೆಗೆ, ರಾಜ್ಯದಲ್ಲಿ ಮಾಡಲ್ಪಟ್ಟಿರುವ ಜಾತಿ  ವಿವರಗಳನ್ನು ಅದಷ್ಟು ಬೇಗ ಬಿಡುಗಡೆಗೊಳಿಸಬೇಕೆಂದು ಈ ಸಂಘಟನೆಯು ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಎನ್.ವೆಂಕಟೇಶ್ ಗೌಡ – ರಾಜ್ಯ ಜಂಟಿ ಮುಖ್ಯ ಸಂಚಾಲಕರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

ಶ್ರೀಮತಿ ಯೋಗೇಶ್ವರಿ ವಿಜಯ್ -ಮಡಿವಾಳ,ಶ್ರೀ ಪ್ರಜ್ವಲ್ ಸ್ವಾಮಿ / ಶ್ರೀಮತಿ ಆಶಾ-ಕ್ರಿಶ್ಚಿಯನ್,ಶ್ರೀ ರಿಯಾಜ್ / ಶ್ರೀ ಮೊಹಮ್ಮದ್ -ಮುಸ್ಲಿಂ,ಶ್ರೀ ಆಶೋಕ್ ಕುಮಾ‌ರ್ -ಗಾಣಿಗ,ಶ್ರೀ ವೆಂಕಟೇಶ್ -ತಿಗಳರು,ಶ್ರೀ ಮಂಡ್ಯ ಕೃಷ್ಣಪ್ಪ -ವಿಶ್ವಕರ್ಮ,ಶ್ರೀ ಮೋಹನ್, ಶ್ರೀಮತಿ ರೂಪಕೃಷ್ಣಪ್ಪ, ಶ್ರೀಮತಿ ಸರಸ್ವತಮ್ಮ ಕೆ.ಎನ್-ಕುರುಬ,ಶ್ರೀ ದಾಸ್ ಪ್ರಕಾಶ್, ಶ್ರೀ ನಾಗರಾಜ್-SC/ST,ಶ್ರೀ R. ಸುರೇಂದ್ರ, ಶ್ರೀ ಹರೀಶ್ ಬಾಬು ಹಾಗೂ ಶ್ರೀ ನಾರಾಯಣಸ್ವಾಮಿಯವರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

City Today News 9341997936

.

“ಶ್ರೀ 1008 ಶ್ರೀ ವಿಜಯೀoದ್ರ ತೀರ್ಥ ಶ್ರೀ ಪಾದರ “ಆರಾಧನಾ” ಮಹೋತ್ಸವ ಶ್ರೀ ಗುರು ರಾಯರ ಸನ್ನಿಧಿಯಲ್ಲಿ”

“ಶ್ರೀ 1008 ಶ್ರೀ ವಿಜಯೀoದ್ರ ತೀರ್ಥ ಶ್ರೀ ಪಾದರ “ಆರಾಧನಾ” ಮಹೋತ್ಸವ ಶ್ರೀ ಗುರು ರಾಯರ ಸನ್ನಿಧಿಯಲ್ಲಿ”
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾಧೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ1008 ಶ್ರೀ  ವಿಜಯೀoದ್ರತೀರ್ಥ ಶ್ರೀಪಾದರ  “ಆರಾಧನಾ”ಮಹೋತ್ಸವವು ವಿಶೇಷ ಪಲ್ಲಕ್ಕಿ ಉತ್ಸವ, ಗಜವಾಹನೋತ್ಸವ, ರಥೋತ್ಸವದೊಂದಿಗೆ ನೆರವೇರಿತು ಎಂದು ಶ್ರೀ ನಂದಕಿಶೋರ್  ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ  ಭಕ್ತಾದಿಗಳು ಪೂಜಾ ಸೇವೆಯಲ್ಲಿ ಭಾಗವಹಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಸಚಿವರಾದ ಸನ್ಮಾನ್ಯ ಶ್ರೀ ರಾಮಲಿಂಗ ರೆಡ್ಡಿ ರವರ ನೇತೃತ್ವದಲ್ಲಿ ಉಚಿತ ಬಟ್ಟೆ, ಪುಸ್ತಕ ಮತ್ತು ಬ್ಯಾಗ್ ವಿತರಣೆ

ಮುಜುರಾಯಿ ಇಲಾಖೆ ಮತ್ತು ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ರಾಮಲಿಂಗ ರೆಡ್ಡಿ ರವರ ನೇತೃತ್ವದಲ್ಲಿ ನಡೆದ ಉಚಿತ ಬಟ್ಟೆ, ಪುಸ್ತಕ ಮತ್ತು ಬ್ಯಾಗ್ ನ ವಿತರಣೆಯನ್ನು ಕೋರಮಂಗಲದ ಶ್ರೀ ಗಣೇಶ ಸೇವಾ ಟ್ರಸ್ಟ್ ವತಿಯಿಂದ ಆಡುಗೋಡಿ M.A.R.P Higher Primary School C.A.R Quaters na ಶಾಲಾ ಮಕ್ಕಳಿಗೆ ವಿತರಿಸಲಾಗಿದೆ. ಈ ಸಂದರ್ಭದಲ್ಲಿ C.A.R DCP, ACP, Inspectors, ಮಾಜಿ ಪಾಲಿಕೆ ಸದಸ್ಯರುಗಳು ಹಾಗೂ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು

City Today News 9341997936

Dr. Agarwals Eye Hospital Supports Children’s Nutrition through Akshaya Patra Foundation’s Mid-Day Meal Program




Bengaluru, July 2, 2024 – Dr. Agarwals Eye Hospital has taken a notable step in supporting child nutrition by sponsoring mid-day meals as part of their Corporate Social Responsibility (CSR) initiative. In collaboration with The Akshaya Patra Foundation, the leading NGO in implementing the PM POSHAN program, the hospital has contributed to serving over 424,252 meals to more than 2,556 beneficiaries in 34 government and government-aided schools for the fiscal year 2023-24.

Team Dr. Agarwal’s Eye Hospital in collaboration with the Akshaya Patra Foundation

Mr. Dheeraj ET, AVP – Operations at Dr. Agarwals Eye Hospital, expressed his enthusiasm about the partnership, stating, “We are proud to be a part of this initiative, as it reflects our commitment to promote not just eye health but also the holistic well-being within communities. We are dedicated to making a meaningful impact on the lives of young minds, while contributing to their physical and cognitive growth.”

In addition to the meal sponsorship, Dr. Agarwals Eye Hospital has also contributed a food delivery van in Hubli to assist in meal distribution, facilitating the delivery of approximately 6,000 meals daily across 28 schools in the location. This further enhances the hospital’s commitment to community welfare and aligns with Akshaya Patra’s mission to eliminate classroom hunger.

Mr. Dhananjay Ganjoo, CMO at The Akshaya Patra Foundation, highlighted the significance of such partnerships, saying, “Collaborations with Dr. Agarwals Eye Hospital are vital in our quest to nurture the health and educational prospects of children. Their support extends beyond mere philanthropy; it is an investment in the future of our nation. Together, we are setting a precedent for how the corporate sector can contribute effectively to social causes.”

The Akshaya Patra Foundation is operating the world’s largest NGO-led school meal program, nourishing over 2 million children across 72 locations in 16 States & 2 Union Territories, every day across India.

This partnership exemplifies the power of collective effort and dedication towards the common goal of improving the health and education of India’s future generations.

City Today News 9341997936

ಕರ್ನಾಟಕ ಬಂಜಾರ ತಾಂಡಾಗಳ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದು, ಇದಕ್ಕಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ಅಂದಾಜು ರೂ.500.00 ಕೋಟಿಗಳನ್ನು ನೀಡಬೇಕು

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ಶ್ರೀ ಜಯದೇವನಾಯ್ಕ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿರವರಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಧನ್ಯವಾದಗಳು.

> ಕರ್ನಾಟಕ ಬಂಜಾರ ತಾಂಡಾಗಳ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದು, ಇದಕ್ಕಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ಅಂದಾಜು ರೂ.500.00 ಕೋಟಿಗಳನ್ನು ನೀಡಬೇಕೆಂದು ಮುಖ್ಯಮಂತ್ರಿ ರವರಿಗೆ ಒತ್ತಾಯಿಸಲಾಗಿದೆ.

ಬಂಜಾರ(ಲಂಬಾಣಿ) ಜನಾಂಗದ ಒಬ್ಬರ/ವಿಧಾನಸಭಾ ಸದಸ್ಯರಿದ್ದು ಅವರಿಗೆ ಮಂತ್ರಿ ಪದವಿ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿ ರವರಿಗೆ ಮನವಿ ಮಾಡಿಕೊಂಡಿರುತ್ತೇವೆ.

> ಬೆಂಗಳೂರಿನ ಬಂಜಾರ ಭವನದ ಉದ್ಘಾಟನಾ ಕಾರ್ಯಕ್ರಮದಂದು ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರು ಘೋಷಿಸಿದಂತೆ ಬಂಜಾರ ಭವನ ಮುಂದುವರೆದ ಕಾಮಗಾರಿಗೆ ರೂ.8.00 ಕೋಟಿ ಹಣ ಕೂಡಲೇ ಬಿಡುಗಡೆಗೊಳಿಸಲು ಕೋರುತ್ತೇವೆ.

ಈ ಎಲ್ಲಾ ನಮ್ಮ ಬೇಡಿಕೆಗಳನ್ನು ಪೂರೈಸಲು ಕರ್ನಾಟಕದ ಬಂಜಾರ ಸಮುದಾಯ ಹಾಗೂ ಮೇಲ್ಕಂಡ ನಮ್ಮ ಸಂಘವು ಆಗ್ರಹಿಸುತ್ತದೆ ಎಂದು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ(ರಿ) ಬೆಂಗಳೂರು ಇವರ ವತಿಯಿಂದ ಎನ್.ಆರ್.ನಾಯಕ್-ಅಧ್ಯಕ್ಷರು,ಹೆಚ್.ಬಿ.ಸಿದ್ಯಾನಾಯಕ್ -ಪ್ರಧಾನ ಕಾರ್ಯದರ್ಶಿ ಹಾಗೂ ಸಂಘದ ಮುಖಂಡರು ಉಪಸ್ಥಿತರಿದ್ದ ಪತ್ರಿಕಾ ಗೋಷ್ಠಿಯಲ್ಲಿ ಪಕಟಿಸಲಾಯಿತು.

City Today News 9341997936