ಮಹಾಮಾನವತಾವಾದಿ ಕರಡಿ ಬುಳ್ಳಪ್ಪ ವಿಚಾರವೇದಿಕೆಯಿಂದ ಕಾಂಗ್ರೆಸ್ಸ್ ಗೆ   ಬೆಂಬಲ

ಕಾಡುಗೊಲ್ಲ ಸಂಸ್ಕೃತಿಯ ಪುನುರುತ್ಥಾನದ ಮಹೋದ್ದೇಶವನ್ನು ಇಟ್ಟುಕೊಂಡು ಸ್ಥಾಪಿತವಾದ ಮಹಾಮಾನವತಾವಾದಿ ಕರಡಿಬುಳ್ಳಪ್ಪ ವಿಚಾರವೇದಿಕೆಯವತಿಯಿಂದ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಮಧ್ಯ ಕರ್ನಾಟಕದ ಕಾಡುಗೊಲ್ಲರ ಹಿರಿಯವನಾದ ಕರಡಿಬುಳ್ಳಪ್ಪ ಒಂದು ಮಹಾನ್ ಸಂಸ್ಕೃತಿಗೆ ಕಾರಣನಾದನೆಂಬುದು ಒಂದು ಅನನ್ಯ ಸಂಗತಿ. ಈತ ಪ್ರತಿನಿಧಿಸಿದ ಕಾಡುಗೊಲ್ಲರು ಮಧ್ಯ ಕರ್ನಾಟಕದ ಮೂಲನಿವಾಸಿ ಬುಡಕಟ್ಟು ಸಮುದಾಯದವರು. ಸಾಂಸ್ಕೃತಿಕವಾಗಿ ನೆಲಮೂಲ ಸಂಸ್ಕೃತಿಯ ಇವರು ದ್ರಾವಿಡ ಪರಂಪರೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡವರು. ಹಾಗೂ ಸಂಸ್ಕೃತಿಯಲ್ಲಿ ಪ್ರಕೃತಿ ಅರಾಧಕರು. ನಾವು ಮಧ್ಯ ಕರ್ನಾಟಕದ ಒಟ್ಟು ಹನ್ನೊಂದು ಜಿಲ್ಲೆ ಹಾಗೂ 38 ತಾಲ್ಲೂಕುಗಳಲ್ಲಿ ಒಟ್ಟು 1264ಹಟ್ಟಿಗಳಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮತ್ತು ರಾಜ್ಯದ ಕೆಲವು ನಗರ ಪಟ್ಟಣಗಳಲ್ಲಿ ನೌಕರಿ ಹಾಗೂ ವ್ಯಾಪಾರದ ಕಾರಣ ಬಂದು ವಿರಳವಾಗಿ ವಾಸಿಸುತ್ತಿದ್ದಾರೆ. ಕಾಡುಗೊಲ್ಲರು ಪ್ರಧಾನವಾಗಿ ಸಣ್ಣರೈತರು ಮತ್ತು ಪಶುಪಾಲಕರು, ಪಶುಪಾಲನೆಯಲ್ಲಿ ಕುರಿಗಾರಿಕೆ ಪ್ರಧಾನ ವೃತ್ತಿ. ಇಂದಿಗೂ ಅಚ್ಚ ಬುಡಕಟ್ಟು ಜೀವನ ಪದ್ದತಿಯಲ್ಲಿ ಬದುಕುತ್ತಿರುವ ಇವರು ಗ್ರಾಮ ಬಹಿಧ್ವಾಸಿಗಳು ಮತ್ತು ಕಾಡಂಚಿನಲ್ಲೇ ಇವರ ಬದುಕು. ಸುಮಾರು ಆರರಿಂದ ಏಳು ಲಕ್ಷ ಜನಸಂಖ್ಯೆ ಹೊಂದಿರುವ ಇವರು ಅಂದಾಜು ಶೇ40ರಷ್ಟು ಸಾಕ್ಷರತೆ ಮತ್ತು ಶೇ 5ರಷ್ಟು ಸರ್ಕಾರಿ ನೌಕರಿ ಮತ್ತು ಇತರೆ ವರ್ಗದ ನೌಕರರು ಇದ್ದಾರೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಇನ್ನೂ ತೀರಾ ನಿಕೃಷ್ಟತೆಯಲ್ಲಿದ್ದಾರೆಂದರೆ ಆಶ್ವರ್ಯವೇನೂ ಇಲ್ಲ. ಸಾಮಾಜಿಕವಾಗಿಯೂ ಒಂದು ನಿಖರವಾದ ಮತ್ತು ಪ್ರಭುದ್ಧವಾದ ನಾಯಕತ್ವವೇ ಇಲ್ಲದ ಕಾರಣ ಇವರು ತೀರಾ ಅಸಂಘಟಿತರೆನ್ನುವುದು ವಾಸ್ತವ ವಿಚಾರ.

ಕಾಡುಗೊಲ್ಲರನ್ನು ಕಳೆದ 200 ವರ್ಷಗಳಿಂದಲೂ ದೇಶ ವಿದೇಶದ ಅನೇಕ ಮಹಾನ್ ವಿದ್ವಾಂಸರು ಅಧ್ಯಯನ ಮಾಡಿ ಇವರು ಬುಡಕಟ್ಟು ಜನ ಎಂದು ಹೇಳಿದರೂ ನಾವು ಇನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಲ್ಲ. ಈ ಬಗ್ಗೆ ಕಳೆದ 2010-12ಳಲ್ಲಿ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸ್ ಆಗಿ 2013ರಲ್ಲಿ ವರದಿ ಬಂದು 2014 ಡಿಸೆಂಬರ್ ತಿಂಗಳಲ್ಲಿ ಅಂದಿನ ಮಾನ್ಯ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕೇಂದ್ರಕ್ಕೆ ಶಿಫಾರಸ್ ಆಯಿತು. ಇಲ್ಲಿಯವರೆಗೂ ಅಂದರೆ ಒಂಬತ್ತು ವರ್ಷ ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಹಾಗೆ ಇದೆ. ಇಲ್ಲಿಯವರೆಗೂ ರಾಜ್ಯದ ಬಹಳಷ್ಟು ನಾಯಕರು ಭರವಸೆ ಕೊಟ್ಟಿದ್ದಾಗ್ಯೂ ಇನ್ನೂ ನಮ್ಮ ಬೇಡಿಕೆ ಈಡೇರಿಲ್ಲದಿರುವುದು ವಿಷಾಧಕರ ಸಂಗತಿಯಾಗಿದೆ.

ಈ ಮಧ್ಯೆ 2020ರಲ್ಲಿ ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇವೆ ಎಂದು ಬಿಜೆಪಿ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಅಂದಿನ ಬಿಜೆಪಿ ಪಕ್ಷದ ಮುಖಂಡರಾದ ಬಿ.ವೈ.ವಿಜಯೇಂದ್ರರವರು, ಮೈಸೂರಿನ ಸಂಸದರಾದ ಪ್ರತಾಪ್‌ ಸಿಂಹ ಅವರು ಮತ್ತು ಚಿತ್ರದುರ್ಗದ ಸಂಸದರಾದ ಶ್ರೀಮಾನ್ ನಾರಾಯಣಸ್ವಾಮಿಯವರು ‘ಖಂಡಿತವಾಗಿ ನಾವು ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇವೆ’ ಎಂದು ದೊಡ್ಡ ಧ್ವನಿಯಲ್ಲಿ ಇಡೀ ರಾಜ್ಯದಲ್ಲಿಯೇ ಸಾರಿದರು. ಅದನ್ನು ನಂಬಿದ ನಾವು ಅವರಿಗೆ ಬೆಂಬಲ ನೀಡಿ ಅವರ ಅಭ್ಯರ್ಥಿ ಡಾ.ರಾಜೇಶ್‌ ಗೌಡರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಿದೆವು. ಅಲ್ಲಿಂದ ಇಲ್ಲಿಗೆ ನಾಲ್ಕು ವರ್ಷಗಳಾದರೂ ನಮ್ಮ ಎಸ್.ಟಿ.ಕಡತ ಒಂದಿಂಚೂ ಚಲಿಸಿಲ್ಲ. ಹಾಗೆ ಮೊನ್ನೆ ಮೊನ್ನೆ ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಹೆಚ್.ಡಿ.ದೇವೇಗೌಡರು ಆಶ್ವಾಸನೆ ನೀಡಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರಮೋದೀಜಿಯವರಲ್ಲಿ ಚರ್ಚಿಸಿ ಆಶ್ವಾಸನೆ ಪಡೆದಂತೆ ‘ಇದೇ ಅವಧಿಯಲ್ಲಿ ನಿಮ್ಮನ್ನು ಎಸ್.ಟಿ.ಪಟ್ಟಿಗೆ ಸೇರಿಸುತ್ತೇವೆ’ ಎಂದು ಅಭಯ ನೀಡಿದರು. ಆದರೆ ಪ್ರಸ್ತುತ ಸಂಸತ್ತಿನ ಅವಧಿಯೂ ಮುಗಿಯಿತು. ಮತ್ತು ಎಸ್.ಟಿ.ಸೇರ್ಪಡೆ ಆಶೆಯೂ ಬತ್ತಿ ಹೋಯಿತು. ಇಂತಹ ಪ್ರಮುಖ ನಾಯಕರೆ ನಮ್ಮನ್ನು ಕೈಬಿಟ್ಟಮೇಲೆ ನಾವು ಯಾವ ರೀತಿ ಮುಂದುವರಿಯುವುದು? ಆದಕಾರಣ ಈ ಚುನಾವಣೆಯಲ್ಲಿ ನಮ್ಮ ಸಂಘದ ಬಹುಜನಗಳ ಆಶೋತ್ತರದಂತೆ ನಾವು ಈ ಸಾರಿ ಕಾಂಗ್ರೆಸ್‌ನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ. ವಿಶೇಷವಾಗಿ ನಮ್ಮ ಸಂಘದ ಬಂಧುಗಳು ಹೆಚ್ಚಿರುವ ತುಮಕೂರಿನಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಮುದ್ದಹನುಮೇಗೌಡರು ಮತ್ತು ಚಿತ್ರದುರ್ಗದಲ್ಲಿ ಅನುಭವಿಗಳು ಮತ್ತು ಸಹೃದಯರಾದ ಬಿ.ಎನ್.ಚಂದ್ರಪ್ಪನವರು ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ಇನ್ನು ನಮ್ಮಂತಹ ತೀರಾ ಹಿಂದುಳಿದವರ ಬಗ್ಗೆ ಸಕಾರಾತ್ಮಕ ಧೋರಣೆಯ ಸಹೃದಯೀ ಶ್ರೀಮಾನ್ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾರೆ. ಇಡೀ ಸ್ವಾತಂತ್ರೋತ್ತರ ಕರ್ನಾಟಕದಲ್ಲಿ ಕಾಡುಗೊಲ್ಲರನ್ನು ಗುರ್ತಿಸಿ ದೊಡ್ಡದಾಗಿ ಬೆಂಬಲ ಕೊಟ್ಟವರು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು. ಅವರ ಕಳೆದ ಅವಧಿಯಲ್ಲಿ ಅವರು ನೀಡಿದ ಸವಲತ್ತುಗಳು. ಶ್ರೀಮತಿ ಜಯಮ್ಮಬಾಲರಾಜರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಿದರು. ಕಾಡುಗೊಲ್ಲರನ್ನು ಪರಿಶಿಷ್ಟಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ ಮಾಡಿದರು. ಅಲ್ಲಿಯವರೆಗೂ ಕನಸಾಗಿದ್ದ ರಾಜ್ಯ ಯೋಜನಾಮಂಡಳಿಗೆ ಡಾ.ಶಿವಚಿತ್ತಪ್ಪರನ್ನು ಸದಸ್ಯರನ್ನಾಗಿಸಿದರು. ಹಾಗೆ ಪ್ರೊ: ಎಂ.ಗುರುಲಿಂಗಯ್ಯರನ್ನು ಹಿಂದುಳಿದ ಶಾಶ್ವತ ಆಯೋಗಕ್ಕೆ ಸದಸ್ಯರನ್ನಾಗಿಸಿದರು. ಡಾ.ಕರಿಸಿದ್ದಪ್ಪನವರನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳನ್ನಾಗಿ ನೇಮಿಸಿದರು. ಅರಣ್ಯ ಮತ್ತು ಪರಿಸರ ಇಲಾಖೆಯ ರಾಜ್ಯ ನಿಷ್ಕರ್ಷ ಮಂಡಳಿಗೆ ನಿವೃತ್ತ ಐಎಫ್‌ಎಸ್. ಅಧಿಕಾರಿ ಬಿ.ಚಿಕ್ಕಪ್ಪಯ್ಯನವರನ್ನು ಸದಸ್ಯರನ್ನಾಗಿಸಿದರು. ಅನೇಕ ಕಾಡುಗೊಲ್ಲ ಅರ್ಹರನ್ನು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್, ಸೆನೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್‌ಗೆ ನಾಮಕರಣ ಮಾಡಿಸಿದರು. ಕಾಡುಗೊಲ್ಲರು ಅಪ್ಪಟ ಕುರಿ ಮತ್ತು ಪಶುಪಾಲಕರು. ಹಾಗಾಗಿ ಕುರಿಗಳ ಸಾವಿನಿಂದ ನಷ್ಟ ಅನುಭವಿಸಬಾರದೆಂದು ಕುರಿ ಅಥವಾ ರಾಸುಗಳು ಸತ್ತಾಗ ಆಗುವ ನಷ್ಟವನ್ನು ತುಂಬಲು ಅನುಗ್ರಹ ಕಾರ್ಯಕ್ರಮವನ್ನು ನೀಡಿದರು. ಹಾಗೆಯೇ ಕುರಿಗಾರರಿಗೆ ಭೇಡಪಾಲಕ್ ಯೋಜನೆ, ರಾಸುಗಳಿಗೆ ವಿಮಾ ಯೋಜನೆ ಜಾರಿ ಮಾಡಿದರು. ಪ್ರಸ್ತುತ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲ. ಅಭಿವೃದ್ಧಿ ನಿಗಮವನ್ನು ನೊಂದಣಿ ಮಾಡಿಸಿ ಅದಕ್ಕೆ ಅನುದಾನವನ್ನು ಬಿಡುಗಡೆ ಮಾಡಿದರು. ಹಾಗೆ ಕರ್ನಾಟಕ ಜಾನಪದ ಅಕಾಡೆಮಿಗೆ, ಬಯಲಾಟ ಅಕಾಡೆಮಿಗೆ, ಕುವೆಂಪುಭಾಷಾ ಭಾರತಿಗೆ ಕಾಡುಗೊಲ್ಲ ಸಮುದಾಯದವರನ್ನು ಸದಸ್ಯರನ್ನಾಗಿಸಿದ್ದಾರೆ. ಮತ್ತು ಚಿತ್ರದುರ್ಗ ಜಿಲ್ಲೆಯ ಗ್ಯಾರೆಂಟಿಗಳ ಅನುಷ್ಟಾನ ಸಮಿತಿಗೆ ಜಿಲ್ಲಾಧ್ಯಕ್ಷರನ್ನು ನೇಮಿಸಿದ್ದಾರೆ. ಇಲ್ಲಿ ಹೇಳಿದಂತಹ ವಿಷಯಗಳು ಕಾಡುಗೊಲ್ಲರಿಗೆ ಪ್ರತ್ಯೇಕವಾದ ಅನುಕೂಲಗಳು. ಇನ್ನು ಸಾಮಾನ್ಯ ಕಾರ್ಯಕ್ರಮಗಳಲ್ಲಿಯೂ ಕೂಡ ಇಡೀ ರಾಜ್ಯದ ಜನರಿಗೆ ಮರೆಯಲಾರದ ಮಹಾನುಭಾವನಂತೆ ಆಡಳಿತ ನೀಡಿದರು.

ಈ ಎಲ್ಲಾ ಹಿನ್ನೆಲೆಯಂತೆ ನಮ್ಮ ಸಂಘದ ಬಹುತೇಕ ಕಾಡುಗೊಲ್ಲರು ಈ ಸಾರಿ ಕಾಂಗ್ರೆಸ್ಸನ್ನು ಬೆಂಬಲಿಸಬೇಕೆಂದು ತೀರ್ಮಾನಿಸಿದ್ದೇವೆ ಎಂದು ಮಹಾಮಾನವತಾವಾದಿ ಕರಡಿ ಬುಳ್ಳಪ್ಪ ವಿಚಾರವೇದಿಕೆ ವತಿಯಿಂದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತುಳಿಸಿದರು.

City Today News 9341997936

ಸನ್ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀ ರವರ 10ವರ್ಷಗಳ ಸಾಧನೆಗಳು

ಈ ಕೆಳಕಂಡಂತೆ ಅವರ 10ವರ್ಷಗಳ ಅಧಿಕಾರದ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆಯಿಲ್ಲದೇ ಅಧಿಕಾರ ಮಾಡಿರುವುದು, ಮಹತ್ವದ ಕೆಲಸಗಳಾದ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಮಾಡಿರುವುದು, ಒಂದೇ ಕಾನೂನು ಅಡಿಯಲ್ಲಿ ಆರ್ಟಿಕಲ್ 370 ರದ್ದು ಮಾಡಿರುವುದು, ಹಾಗೂ ದೇಶದ ಆರ್ಥಿಕ ಸ್ಥಿತಿ 5ರಿಂದ 3ನೇ ಸ್ಥಾನಕ್ಕೆ ತರುವುದು ನಮಗೆಲ್ಲಾ ಸಂತೋಷದ ವಿಷಯ.

ದೇಶದಲ್ಲಿ 2014ರಿಂದ 2024ರ ಅವಧಿಯಲ್ಲಿ ಹಿಂದೆ ಇದ್ದ 74 ಏರ್ಪೋರ್ಟಗಳ ಸಂಖ್ಯೆಯನ್ನು 149 ಏರ್‌ಫೋರ್ಟಗಳನ್ನು ಅಭಿವೃದ್ಧಿ ಪಡಿಸಿರುವುದು

ನೇಕಾರ ವೃತ್ತಿಯನ್ನು ಗುರುತಿಸಿ 2015ರ ಆಗಸ್ಟ್-7 ರಂದು ಕೈಮಗ್ಗ ದಿನಾಚರಣೆಯನ್ನು ಘೋಷಣೆ ಮಾಡಿ ಉದ್ಘಾಟನೆಯನ್ನು ಮಾಡಿರುತ್ತಾರೆ. ಇನ್ನೂ ಅನೇಕ ನೇಕಾರ ವೃತ್ತಿಯು ಅಭಿವೃದ್ಧಿ ಪತದತ್ತ ಸಾಗಲು ಮಹತ್ತರ ಪಾತ್ರವನ್ನು ವಹಿಸಿರುತ್ತಾರೆ.

ಹಿಂದೆ ಇದ್ದ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಯಡಿಯೂರಪ್ಪ ನವರು ನೇಕಾರ ಸಾಲ ಮನ್ನಾ ಮತ್ತು ಸಮ್ಮಾನ್ ಯೋಜನೆ ಅಡಿಯಲ್ಲಿ ಹಾಗೂ ದೇವರ ದಾಸಿಮಯ್ಯ ಜಯಂತಿಯನ್ನು ಘೋಷಣೆ ಮಾಡಿರುತ್ತಾರೆ. ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರು ನೇಕಾರ ಅಭಿವೃದ್ಧಿ ನಿಗಮ ಘೋಷಣೆ ಮಾಡಿರುತ್ತಾರೆ. ಹಾಗೂ ಪ್ರತಿ ಜಿಲ್ಲೆಯಲ್ಲು ಟೆಕ್ಸ್‌ ಟೈಲ್ ಪಾರ್ಕಗಳನ್ನು ತೆರೆಯಲು ಆದೇಶ ಮಾಡಿರುತ್ತಾರೆ.

ಮತ್ತೊಮ್ಮೆ ಪ್ರಧಾನಿ ಆಗಲು ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರಿಗೆ ಬೆಂಬಲವಾಗಿ BJP ಮತ್ತು NDAಯಿಂದ 28 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ನೇಕಾರರು ಬೆಂಬಲ ಸೂಚಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಬಿ.ಎಸ್.ಸೋಮಶೇಖರ್ – ರಾಜ್ಯ ಸಂಚಾಲಕರು. ನೇಕಾರ ಪ್ರಕೋಷ್ಠ ಬಿಜೆಪಿ ಯವರು ತಿಳಿಸಿದರು..

City Today News 9341997936

ಪೀಣ್ಯ ಕೈಗಾರಿಕಾ ವಲಯದಲ್ಲಿರುವ ಕರ್ಲಾನ್ ಎಂಟರ್‌ಪ್ರೈಸಸ್ ಕಾರ್ಖಾನೆಯನ್ನು ಮುಚ್ಚಿ 110 ಕ್ಕೂ ಹೆಚ್ಚು ಕಾರ್ಮಿಕರನ್ನು ಬೀದಿ ಪಾಲು

ಪೀಣ್ಯ ಕೈಗಾರಿಕಾವಲಯದಲ್ಲಿರುವ ಕರ್ಲಾನ್ ಎಂಟರ್‌ಪ್ರೈಸಸ್ ಕಾರ್ಖಾನೆಯನ್ನು ಮುಚ್ಚಿ 110 ಕ್ಕೂ ಹೆಚ್ಚು ಕಾರ್ಮಿಕರನ್ನು ಬೀದಿ ಪಾಲು ಮಾಡಿರುವ ಬಗ್ಗೆ ಪತ್ರಿಕಾ ಗೋಷ್ಠಿ.

ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಸಂಸ್ಥೆ ದೇಶದಾಧ್ಯಂತ ಹಾಸಿಗೆಗಳನ್ನು ತಯಾರು ಮಾಡುವಲ್ಲಿ ಪ್ರಸಿದ್ದಿಯಾಗಿದೆ. ದೆಶದ ಹಲವಾರು ರಾಜ್ಯಗಳಲ್ಲಿ ತನ್ನದೇ ಹಾಸಿಗೆ ಉತ್ಪಾದನೆ ಮಾಡುವ ಕಾರ್ಖಾನೆಗಳಿವೆ. ಕರ್ನಾಟಕದಲ್ಲಿ ಯಶವಂತಪುರ, ಪೀಣ್ಯ, ದಾಬಸ್‌ಪೇಟೆಯಲ್ಲಿ 6 ಕಾರ್ಖಾನೆಗಳನ್ನು ಹೊಂದಿದೆ. ನಂ.49, 3ನೇ ಹಂತ, ಪೀಣ್ಯ ಕೈಗಾರಿಕಾವಲಯದಲ್ಲಿರುವ ಕರ್ಲಾನ್ ಎಂಟರ್‌ಪ್ರೈಸಸ್ ಲಿ. ನಲ್ಲಿ 110ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ದೇಶದ ಹಾಗೂ ಬೆಂಗಳೂರಿನ ಎಲ್ಲಾ ಕಾರ್ಖಾನೆಗಳ ಮೂಲ ಮಾಲೀಕರು ಟಿ.ಸುಧಾಕರ್ ಪೈ ಆಗಿರುತ್ತಾರೆ. ಬೆಂಗಳೂರಿನ ಎಲ್ಲಾ ಕಾರ್ಖಾನೆಗಳಲ್ಲಿ 1300 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಟಿ.ಸುಧಾಕರ್ ಪೈ ರವರು ಯಾವುದೇ ಕಾಯಿದೆಗಳನ್ನು ಅನುಷ್ಠಾನ ಮಾಡದೇ ಕಾರ್ಮಿಕರನ್ನು ಜೀವಂತ ಶೋಷಣೆ ಮಾಡುತ್ತಿದ್ದಾರೆ.

1999ರಿಂದ ಪೀಣ್ಯ ಕೈಗಾರಿಕಾ ವಲಯದಲ್ಲಿ ಟಿ.ಸುಧಾಕರ್ ಪೈ ರವರು ಸ್ಥಾಪಿಸಿದ ಹಾಗೂ ಮಾಲೀಕತ್ವ ಹೊಂದಿರುವ ಕಾರ್ಖಾನೆಯಲ್ಲಿ 110 ಜನ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು ಏಕಾಏಕಿ 26-02-2024ರಂದು ಪೀಣ್ಯ ಕೈಗಾರಿಕಾವಲಯದಿಂದ ಆಂದ್ರಪ್ರದೇಶದ ಚಿತ್ತೂರಿನ ಕೈಗಾರಿಕಾ ಪ್ರದೇಶಕ್ಕೆ ವರ್ಗಾವಣೆ ಮಾಡಿದ್ದಾರೆ. ಇಲ್ಲಿ ಯಾವುದೇ ಕೈಗಾರಿಕೆಯಾಗಲೀ, ಉತ್ಪಾದನಾ ಘಟಕವಾಗಲೀ ಇಲ್ಲ. ಈ ಕಾರ್ಮಿಕರು ಕಾರ್ಮಿಕ ಸಂಘದ ಸದಸ್ಯರಾದ ಒಂದೇ ಕಾರಣದಿಂದ ಆಡಳಿತ ವರ್ಗ ಸ್ಥಾಯಿ ಆದೇಶದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗಾವಣೆ ಮಾಡಲು ಅವಕಾಶವಿಲ್ಲದಿದ್ದರು ವರ್ಗಾವಣೆ ಮಾಡಲಾಗಿದೆ. ಇದು ಕಾನೂನುಬಾಹಿರ.

ಇದಲ್ಲದೇ ಕಾರ್ಖಾನೆಯಲ್ಲಿ ಈ ಕೆಳಕಂಡ ರೀತಿ ಕಾರ್ಮಿಕ ಅನುಚಿತ ನೀತಿ ಅನುಸರಿಸಿ 110 ಜನ ಕಾರ್ಮಿಕರನ್ನು ಬೀದಿ ಪಾಲು ಮಾಡಿದ್ದಾರೆ.

1) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಕಾರ್ಖಾನೆ ಕಳೆದ 20 ವರ್ಷಗಳಿಂದ ಪೀಣ್ಯ ಕೈಗಾರಿಕಾವಲಯದಲ್ಲಿ ಕೆಲಸ ನಿರ್ವಹಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಇಲಾಖೆ ವತಿಯಿಂದ ಪರವಾನಿಗೆ ಹಾಗೂ ಕಾರ್ಮಿಕ ಇಲಾಖೆಗೂ ತಿಳಿದ ವಿಷಯ.

2) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಕಾರ್ಮಿಕರು ತಮಗೆ ಅರ್ಹ ಸವಲತ್ತುಗಳನ್ನು ನೀಡದಿರುವ ಬಗ್ಗೆ ಈಗಾಗಲೇ ಈ ಹಿಂದೆ ಉಪ ಕಾರ್ಮಿಕ ಆಯುಕ್ತರು, ಪ್ರಾದೇಶಿಕ ವಿಭಾಗ-01 ಇವರಲ್ಲಿ 2018ರಲ್ಲಿ ವೇತನ ಹಾಗೂ ಇತರೆ ಸವಲತ್ತುಗಳ ಬಗ್ಗೆ ವಿವಾದ ನಡೆಯುತ್ತಿದ್ದು ಸದರಿ ವಿವಾದ ಇಂದು ಕಾರ್ಮಿಕ ನ್ಯಾಯಾಲಯದಲ್ಲಿದೆ.

3) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಕಾರ್ಖಾನೆ ಕಳೆದ 20 ವರ್ಷದಿಂದ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಯಾವುದೇ ಮುನ್ಸೂಚನೆಯಿಲ್ಲದೇ ಆಡಳಿತ ವರ್ಗ ಏಕಾಏಕಿ ಈ ಕಾರ್ಖಾನೆಯಲ್ಲಿ ಗುರುದೇವ ಟ್ರೇಡಿಂಗ್ ಅಂಡ್ ಸರ್ವಿಸಸ್ ಲಿ., ಲೋಚನಾ ಟ್ರೇಡಿಂಗ್ ಅಂಡ್ ಸರ್ವಿಸಸ್ ಪಿ. ಎಂಬ ಬೇನಾಮಿ ಗುತ್ತಿಗೆದಾರರ ಹೆಸರಿನಲ್ಲಿ ಎಲ್ಲಾ ಕಾರ್ಮಿಕರನ್ನು ನೇಮಿಸಿರುವುದು ಕೈಗಾರಿಕಾ ವಿವಾದ ಕಾಯಿದೆ 1947ರ ಷೆಡ್ಯೂಲ್ 05ರ ಪ್ರಕಾರ ಶಿಕ್ಷಾರ್ಹಕ್ಕೆ ಗುರಿಯಾಗಿದೆ.

4) ಪೀಣ್ಯ ಕೈಗಾರಿಕಾವಲಯದ ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಕಾರ್ಮಿಕರ ಖಾಯಂ ವಿಷಯದ ಬಗ್ಗೆ ಈಗಾಗಲೇ ಕೈಗಾರಿಕಾ ಟ್ರಿಬ್ಯೂನಲ್ 56/2020ರಲ್ಲಿ ವಿವಾದ ನಡೆಯುತ್ತಿದೆ. ಇದು ಆಡಳಿತ ವರ್ಗಕ್ಕೂ ತಿಳಿದ ವಿಷಯ. ಇದರ ಸಂಪೂರ್ಣ ದಾಖಲೆಗಳನ್ನು ನೀಡಲಾಗಿದೆ/

5) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ನಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರು ಪ್ರಾರಂಭದಿಂದ ಅವರ ಇ.ಎಸ್.ಐ., ಭವಿಷ್ಯನಿಧಿ ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಸಂಸ್ಥೆಯ ಹೆಸರಿನಲ್ಲಿದೆ.

6) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಆಡಳಿತ ವರ್ಗ ಕಾರ್ಮಿಕರಿಗೆ ಕೆಲವು ಸವಲತ್ತುಗಳನ್ನು ವಿಸ್ತರಿಸಲು ಸದರಿ ಬೇನಾಮಿ ಗುತ್ತಿಗೆದಾರರ ಹೆಸರಿನಲ್ಲಿ 12(3) ವೇತನ ಒಪ್ಪಂದಕ್ಕೆ 30-03-2022ರಂದು ಉಪ ಕಾರ್ಮಿಕ ಆಯುಕ್ತರು, ಪ್ರಾದೇಶಿಕ ಇವಭಾಗ-01ರಲ್ಲಿ ಸಹಿ ಮಾಡಿಸಿರುವುದು ಸಾಮಾಜಿಕ ನ್ಯಾಯದ ಉಲ್ಲಂಘನೆ, ಕಾರ್ಮಿಕ ಅನುಚಿತ ನೀತಿ ಅನುಸರಿಸಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ.

7) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಆಡಳಿತ ವರ್ಗ ಹಾಗೂ ಬೇನಾಮಿ ಗುತ್ತಿಗೆದಾರರು ಕಾರ್ಮಿಕರು ಸಂಘ ಬದಲಾವಣೆ ಮಾಡಿಕೊಂಡಿರುವ ಬಗ್ಗೆ ಸಹಿಸದೇ ಕಾರ್ಮಿಕ ಅನುಚಿತ ನೀತಿ ಅನುಸರಿಸಿ ಪೀಣ್ಯ ಕೈಗಾರಿಕಾವಲಯದಿಂದ ಯಾವುದೇ ಕಾರ್ಖಾನೆಯಿಲ್ಲದ ಹಾಗೂ ಕಾಯಿದೆಯಲ್ಲಿ ಅವಕಾಶವಿಲ್ಲದಿದ್ದರೂ ಎಪಿಐಐಸಿ ಕೈಗಾರಿಕಾ ಪಾರ್ಕ್ (ಯುಡಿಎಲ್-1), ಗಂಧರಾಜುಪಲ್ಲೆ, ಚಿತ್ತೂರು ಜಿಲ್ಲೆ-517432ಕ್ಕೆ ವರ್ಗಾವಣೆ ಮಾಡುವುದಾಗಿ ಪತ್ರ ನೀಡಿರುವುದು ಕಾನೂನುಬಾಹಿರವಾಗಿದೆ ಹಾಗೂ ಕೈಗಾರಿಕಾ ವಿವಾದ ಕಾಯಿದೆಯ ಉಲ್ಲಂಘನೆಯಾಗಿರುವುದರಿಂದ ಶಿಕ್ಷಾರ್ಹಕ್ಕೆ ಗುರಿಯಾಗಿದೆ.

8) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಆಡಳಿತ ವರ್ಗ ಹಾಗೂ ಬೇನಾಮಿ ಗುತ್ತಿಗೆದಾರರು ಕಳೆದ 20 ವರ್ಷದಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಬೆದರಿಕೆ ಹಾಕಿ ಅನುಸರಿಸುತ್ತಿರುವ ಒಂದೊಂದು ಕಾರ್ಮಿಕ ಅನುಚಿತ ನೀತಿಯಾಗಿದೆ.

9) ಈಗಾಗಲೇ ಕರ್ಲಾನ್ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸನ್ಮಾನ್ಯ ಕಾರ್ಮಿಕ ಸಚಿವರ ಸಮ್ಮುಖದಲ್ಲಿ ಸಭೆ ನಡೆದು ಮಾನ್ಯ ಕಾರ್ಮಿಕ ಸಚಿವರು ಅಧಿಕಾರಿಗಳನ್ನೊಳಗೊಂಡ ಸಭೆಯಲ್ಲಿ ಆಡಳಿತ ವರ್ಗದವರು, ಇಲಾಖೆಯ ಉನ್ನತಾಧಿಕಾರಿಗಳು ಮತ್ತು ಸಂಘದ ಸದಸ್ಯರನ್ನೊಳಗೊಂಡ ಸಭೆಯಲ್ಲಿ ಆಡಳಿತ ವರ್ಗ ಮಾಡಿರುವ ಮೋಸದ ಬಗಗೆ ಮನಗೊಂಡು ಆಡಳಿತ ವರ್ಗಕ್ಕೆ ಪೀಣ್ಯದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಕಾರ್ಮಿಕರನ್ನು ಯಶವಂತಪುರ ಹಾಗೂ ದಾಬಸ್‌ಪೇಟೆಗೆ ವರ್ಗಾವಣೆ ಮಾಡಬೇಕು ಹಾಗೂ ವರ್ಗಾವಣೆ ಮಾಡಲು ಸೂಚಿಸಿದ್ದಾರೆ. ಆದರೆ ಕರ್ಲಾನ್ ಆಡಳಿತ ವರ್ಗ ಇದಕ್ಕೆ ಮಾನ್ಯತೆ ನೀಡದೇ ಕಾರ್ಮಿಕ ಅಧಿಕಾರಿಗಳ ಮುಂದೆಯೇ ಸಚಿವರ ಸೂಚನೆ ಮಾಡಿದ್ದಾರೆ.

ಕಾರ್ಮಿಕ ಇಲಾಖೆ ಹಾಗೂ ಸರ್ಕಾರ ಕೂಡಲೇ ಕಾರ್ಮಿಕ ಅನುಚಿತ ನೀತಿ ಅನುಸರಿಸುತ್ತಿರುವ ಆಡಳಿತ ವರ್ಗದ ಮೇಲೆ ಶಿಸ್ತಿನ ಕ್ರಮ ಜರುಗಿಸಲು ಈ ಮೂಲಕ ನಮ್ಮ ಸಂಘ ಮನವಿ ಮಾಡುತ್ತದೆ. ಇದನ್ನು ತಮ್ಮ ಪತ್ರಿಕೆ / ನಿಲಯದ ವತಿಯಿಂದ ಪ್ರಕಟಿಸಲು ಈ ಮೂಲಕ ನಮ್ಮ ಸಂಘ ಮತ್ತೊಮ್ಮೆ ಮನವಿ ಮಾಡುತ್ತದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಅಧ್ಯಕ್ಷರಾದ ಜಿ.ಆರ್.ಶಿವಶಂಕರ್ ರವರು ತಿಳಿಸಿದರು.

City Today News 9341997936

ತಮ್ಮ ಅಮೂಲ್ಯವಾದ ಮತ ಯಾಚಿಸಿ ಸ್ವತಂತ್ರ ಅಭ್ಯರ್ಥಿ ಅಭ್ಯರ್ಥಿ ಭಾಸ್ಕರ್ ಅಂಕಾಲಮಡಗು ಶಿವರೆಡ್ಡಿ ರವರಿಂದ ಮನವಿ

ಕಾಂಗ್ರೆಸ್ ಮತ್ತು ಬಿ.ಜೆ.ಪಿ ಒಂದು ನಾಣ್ಯದ ಎರಡು ಮುಖಗಳು ಹಿಂಗಾಗಿ ದೇಶ ಅಭಿವೃದ್ಧಿ ಆಗುತ್ತಿಲ್ಲ ಮತ್ತು ಸಾಮಾನ್ಯರು ಸಾಮಾನ್ಯರಾಗೇ ಉಳಿಯುತ್ತಿದ್ದಾರೆ ಮತ್ತು ಬಡವರು ಬಡವರಾಗೇ ಉಳಿದ್ದಿದ್ದಾರೆ.

ಸ್ವತಂತ್ರ ಬಂದು 75 ವರ್ಷ ಕಳೆದರೂ ರಾಜಕೀಯ ಲೋಪಗಳಿಂದ ಮತ್ತು ಅಡ್ಜೆಸ್ಟ್ ಮೆಂಟ್ ರಾಜಕೀಯದಿಂದ ದೇಶದ ಪ್ರಗತಿ ಆಗುತ್ತಿಲ್ಲ.

ಈ ಕಾರಣದಿಂದ ಭಾಸ್ಕರ್ ಅಂಕಾಲಮಡಗು ಶಿವರೆಡ್ಡಿ ಆದೆ ನಾನು ಸ್ವತಂತ್ರ ಅಭ್ಯರ್ಥಿ ಯಾಗಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ. ನಾನು ಸಾಮಾನ್ಯ ರೈತ ಕುಟುಂಬಕ್ಕೆ ಸೇರಿದವನು, ನನಗೆ ಕ್ಷೇತ್ರಗಳ, ಅವರ ಸಮಸ್ಯೆಗಳು ಅರಿತಿವೆ ಮತ್ತು ಅವುಗಳನ್ನು ಪರಿಷ್ಕರಿಸುವ ಸಾಮರ್ಥ್ಯ ನನಗೆ ಇದೆ.

ಜವ ಸೇವೆಯೇ ಜನಾರ್ಧನ ಸೇವೆ ಎಂಬುವುದನ್ನು ನಾನು ನನ್ನ ಜೀವನದಲ್ಲಿ ನಿರಂತವಾಗಿ ನಂಬಿದ್ದೇನೆ.

ನಮ್ಮ ಪ್ರಣಾಳಿಕೆ:

* ಕ್ಷೇತ್ರವಾರು 10000 ಉದ್ಯೋಗಗಳ ಸೃಷ್ಟಿ.

* ಪಾರರ್ದಕ ಆಡಳಿತ ಮತ್ತು ಸಮಗ್ರ ಅಭಿವೃದ್ಧಿ.

* ಉತ್ತಮ ಗುಣಮಟ್ಟದ ಶಿಕ್ಷಣ ಸರ್ಕಾರದ ಶಾಲೆ- ಕಾಲೇಜುಗಳಲ್ಲೇ ಒದಗಿಸುವುದು.

* ನೀರಿನ ಸಮಸ್ಯೆಯನ್ನು ಬಗೆಹರಿಸುವುದು.

* ರೈತರ ಫಸರಿಗೆ ಸೂಕ್ತ ಬೆಲೆ ದೊರಕಿಸುವುದು.

* ಕೇವಲ 3 ತಿಂಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವವು.

* ಪ್ರತಿ ಕುಟುಂಬಕ್ಕೆ ಒಂದು ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಲಾಗುವುದು.

* ಸಾಮಾನ್ಯ ಮತ್ತು ಬಡವರ ಎಲ್ಲಾ ತರಹದ ಸಾಲ ಮನ್ನಾ ಮಾಡಲಾಗುವುದು.

* ಯುವಕರಿಗೆ ಎಲ್ಲಾ ರಂಗಗಳಲ್ಲೂ ಅವಕಾಶ (ಕ್ರೀಡೆ, ಒಲಂಪಿಕ್ಸ್ ಮತ್ತು ಸಿನಿಮಾ ಇತ್ಯಾದಿ)

ಸರ್ಕಾರಕ್ಕೆ ನಮ್ಮ ಪ್ರಶ್ನೆಗಳು:

1) ನೀವು ಘೋಷಿಸಿಕೊಂಡಿರುವ ಗ್ಯಾರೆಂಟಿಗಳನ್ನು ಸಮರ್ಪಕವಾಗಿ ಸಾಮಾನ್ಯರಿಗೆ ಯಾಕೆ ಕೊಡುತ್ತಿಲ್ಲ?

2) ಸಿ.ಎಂ.ಸಿದ್ದರಾಮಯ್ಯನವರೇ ನೀವು 2017-18 ಬಜೆಟ್ ಮಂಡಿಸಿದ ಮೊಬೈಲ್ ಅಂಬುಲೆನ್ಸ್ ಎಲ್ಲಿವೆ? ಮತ್ತು ಅದಕ್ಕೆ ಘೋಷಣೆ ಮಾಡಿರುವ 150 ಕೋಟಿ ದುಡ್ಡು ಎಲ್ಲಿದೆ?

3) ಡಿ.ಸಿ.ಎಂ ಡಿ.ಕೆ ಶಿವಕುಮಾರ್ ರವರೇ ಬ್ರಾಂಡ್ ಬೆಂಗಳೂರು ಅಂದರೆ ಇದೇನಾ? ಸರಿಯಾದ ಟ್ರಾಫಿಕ್ ನಿರ್ವಹಣೆ ಇಲ್ಲ, ಕುಡಿಯುವ ನೀರಿಲ್ಲ. ಕರೆಂಟ್ ಇಲ್ಲ. ಶುದ್ಧವಾದಂತಹ ವಾತಾವರಣ ಇಲ್ಲ, ಎಲ್ಲಿ ನೋಡಿದರೂ ರಾಶಿಗಟ್ಟಲೇ ಗಲೀಜು ಮತ್ತು ದುರ್ವಾಸನೆ ಇವುಗಳಿಗೆ ಮುಕ್ತಿ ಯಾವಾಗ?

ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಸ್ವತಂತ್ರ ಅಭ್ಯರ್ಥಿ ಭಾಸ್ಕರ್ ಅಂಕಾಲಮಡಗು ಶಿವರೆಡ್ಡಿ ತಿಳಿಸಿದರು.

City Today News 9341997936

One Day National Seminar on “Application of Gas Turbines and Indian Endeavours”.

The Society for Advancement of Aerospace Propulsion (SAAP) is conducting one day National seminar on the 20th of April 2024 (Saturday) in the Conference Hall of HAL’s old Management Academy located next to HAL Hospital on the Suranjandas Road, Bangalore-17 during 9AM-5PM. Theme of the Seminar is “Application of Gas Turbines and Indian Endeavours”.

The “Society for Advancement of Aerospace Propulsion (SAAP)” was formed with a motto of bringing together the serving and retied Scientists,Engineers, Practicing Professionals, Academia as well as Industries involved in Aerospace Propulsion Systems’ Design & Development, Manufacture, MRO Services and Airworthiness – Certification all under one roof to pursue and benefit from their mutually possessed knowledge.

An audience of approximately 150 from HAL, DRDO, NAL, Academic Institutions and Aerospace related Industries is expected to participate in the Seminar to discuss and deliberate various avenues of applications of Gas Turbines being developed in India. Design, development and testing aspects for the Gas Turbine Engines will also be discussed during the Seminar.

A Book on the Author’s “Journey through Gas Turbine Technologies” will be released during the Seminar. The SAAP has constituted “AVM Roy Choudhary Memorial Award” in the memory of the “FATHER OF INDIAN GAS TURBINES” on annual basis which will be presented to one of the Eminent personalities pursuing Gas Turbine Technologies along with a Memorial Talk by the Awardee.

In addition, a lot of Technical talks will also be presented by Eminent personalities from DRDO, HAL, IAF, Academia and Aerospace related Industries in addition to a very interesting Key note Speech on the current trending field “Hydrogen as an alternate Fuel for Gas turbines” by Prof. J.J. Isaac of Park Engineering College, Coimbatore who was a former Offg. Director, National Aerospace Laboratories (NAL), Bangalore.

Towards the end, a Panel discussion will be held to summarise and suggest action points for the benefit of Gas Turbine Fraternity followed by Seminar Dinner. We request a good Press Coverage (Print and Electronic Media) to spread awareness on the theme and available opportunities in the country, the above informations were released at a press meet held at Press Club of Bangalore by T. Mohanrao, President, SAAP & Team today.

At the press meet,Shri T.  Mohan Rao, Retired Director, GTRE, Chairman, SAAP

Shri Balakrishnan, retired Executive Director, HAL

Shri C.  Kalaivanan, Vishranta Group Director, GTRE

Mr. N. M. Kaverappa, retired RPRO, DRDO, convenor, were present.

City Today News 9341997936