ಪಿ. ಮಣಿವಣ್ಣನ್, ಪದ್ಮನಾಭನ್ ಹಾಗೂ ಇತರರಿಂದ ದಲಿತರ ಸಂವಿಧಾನ ಬದ್ಧ ನಿಯಮಾವಳಿಗಳನ್ವಯ ಅಭಿವೃದ್ಧಿಗಾಗಿ ಬಳಕೆ ಮಾಡಬೇಕಿದ್ದ ಅನುದಾನವನ್ನು ಮೇ|| ಝೇಂಕಾರ್ ಅಡ್ವರ್ಟೈಸಿಂಗ್ ಸಂಸ್ಥೆಗೆ ಕಾನೂನು ಬಾಹೀರವಾಗಿ ನೀಡಿ ಸರ್ಕಾರಕ್ಕೆ ಮೋಸ ಮಾಡಿರುವ ಬಗ್ಗೆ ದಾಖಲಾತಿಗಳನ್ನು ಬಿಡುಗಡೆ

ಪಿ. ಮಣಿವಣ್ಣನ್, ಪದ್ಮನಾಭನ್ ಹಾಗೂ ಇತರರಿಂದ ದಲಿತರ ಸಂವಿಧಾನ ಬದ್ಧ ನಿಯಮಾವಳಿಗಳನ್ವಯ ಅಭಿವೃದ್ಧಿಗಾಗಿ ಬಳಕೆ ಮಾಡಬೇಕಿದ್ದ ಅನುದಾನವನ್ನು ಮೇ|| ಝೇಂಕಾರ್ ಅಡ್ವರ್ಟೈಸಿಂಗ್ ಸಂಸ್ಥೆಗೆ ಕಾನೂನು ಬಾಹೀರವಾಗಿ ನೀಡಿ ಸರ್ಕಾರಕ್ಕೆ ಮೋಸ ಮಾಡಿರುವ ಬಗ್ಗೆ ದಾಖಲಾತಿಗಳನ್ನು ಬಿಡುಗಡೆ ಮಾಡಿ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತಿರುವ ಬಗ್ಗೆ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಸಮಾಜ ಕಲ್ಯಾಣ ಇಲಾಖೆಯ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಶಾಸನಬದ್ಧ ನಿಯಮಾವಳಿಗಳನ್ವಯ ಕ್ರಮಕೈಗೊಳ್ಳುವುದು ಇಲಾಖೆಯ ಆಧ್ಯಕರ್ತವ್ಯವಾಗಿರುತ್ತದೆ. ಆದರೆ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ ದಲಿತರ ಅಭಿವೃದ್ಧಿಯ ಹೆಸರಿನಲ್ಲಿ ಲೂಟಿ ಮಾಡುವುದನ್ನೇ ಕರಗತ ಮಾಡಿಕೊಂಡಿರುವ ಇಲ್ಲಿನ ಕೆಲವು ಅಧಿಕಾರಿಗಳು, ಇಲ್ಲದ ಕಾರ್ಯಕ್ರಮಗಳನ್ನು ಇದೆ ಎಂಬಂತೆ ಬಿಂಬಿಸಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ಸರ್ಕಾರಕ್ಕೆ ವಂಚಿಸಿ ದಲಿತರ ಸಂವಿಧಾನ ಬದ್ದ ಹಕ್ಕುಗಳನ್ನು ಕಸಿಯುತ್ತಿವೆ. ಇವರಿಗೆ ಹಿರಿಯ ಅಧಿಕಾರಿಗಳ ಕೃಪಾಕಟಾಕ್ಷವಿರುವುದು ಹಾಗೂ ಈ ಅಕ್ರಮದಲ್ಲಿ ಇವರುಗಳು ಭಾಗಿಯಾಗಿರುವುದು ಸಾಬೀತಾಗಿದೆ. ಇಲಾಖೆ ವ್ಯಾಪ್ತಿಗೆ ಬರುವ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟರ ಅಭಿವೃದ್ಧಿಯ ಚಟುವಟಿಕೆಗಳಿಗಾಗಿ ಮೀಸಲಿಟ್ಟ ಅನುದಾನದ ಮುಖಾಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನೆಪದಲ್ಲಿ ಈ ಪತ್ರದೊಂದಿಗೆ ಝೇಂಕಾರ್ ಅಡ್ವರ್ಟೈಸಿಂಗ್ ಏಜೆನ್ಸಿರವರಿಗೆ ರೂ. 54,935,042/- (ಐದು ಕೋಟಿ ನ–ತ್ತೊಂಬತ್ತು ಲಕ್ಷದ ಮೂವತ್ತೈದು ಸಾವಿರದ ನಲವತ್ತೆರೆಡು ರೂಗಳು) ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ, ಅಲ್ಲದೆ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳದೆ ಕೇವಲ ದಾಖಲಾತಿಗಳನ್ನು ಸಿದ್ಧಪಡಿಸಿ, ಹಣವನ್ನು ದುರುಪಯೋಗ ಮಾಡಿಕೊಂಡಿರುತ್ತಾರೆ. ಈ ಕಡತದ ನೋಟ್‌ಶೀಟ್‌ಗಳನ್ನು ಸಂಬಂಧಪಟ್ಟ ಅಧೀನ ಕಛೇರಿಯಿಂದ ಆರ್‌ಟಿಐನ ಮುಖಾಂತರ ಪಡೆದಿದ್ದು ನೋಟ್ 07 ರಲ್ಲಿ ರೂಪಾಣಿ ಎಂಬ ದ್ವಿ.ದ.ಸ ಅವರು ಬಹಳ ಸ್ಪಷ್ಟವಾಗಿ ಝೇಂಕಾರ್ ಅಡ್ವರ್ಟೈಸಿಂಗ್ ಏಜೆನ್ಸಿಯವರು ಸಲ್ಲಿಸಿದ ಬಿಲ್ಲು ಮೊತ್ತ ರೂ. 54,935,042/- (ಐದು ಕೋಟಿ ನಲ್ವತ್ತೊಂಬತ್ತು ಲಕ್ಷದ ಮೂವತ್ತೈದು ಸಾವಿರದ ನಲವತ್ತೆರೆಡು ರೂಗಳು) ಇದ್ದು ಕಾರ್ಯಾದೇಶ ಹಾಗೂ ಸರ್ಕಾರಿ ನಿಯಮದಂತೆ ಕೇವಲ ರೂ. 23,013,315/- (ಎರಡು ಕೋಟಿ ಮೂವತ್ತು ಲಕ್ಷ ಹದಿಮೂರು ಸಾವಿರದ ಮುನ್ನೂರ ಹದಿನೈದು ರೂಪಾಯಿಗಳು) ಮಾತ್ರ ನೀಡಬಹುದೆಂಬ ಷರಾವನ್ನು ಸಲ್ಲಿಸಿರುತ್ತಾರೆ.

ಅದಾಗ್ಯೂ ಈ ಪ್ರಕರಣದಲ್ಲಿ ಜಿ.ಜೆ.ಪದ್ಮನಾಭ್ (ಜನರಲ್ ಮ್ಯಾನೇಜರ್) ADEL ರವರು ತನ್ನ ಅದಾಗ್ಯೂ ಈ ಪ್ರಕರಣದಲ್ಲಿ ಜಿ.ಜೆ.ಪದ್ಮನಾಭ್ (ಜನರಲ್ ಮ್ಯಾನೇಜರ್) ADEL ರವರು ತನ್ನ ನೋಟ್ 12 ರಲ್ಲಿ ಈ ಬಗ್ಗೆ ಏನು ಅಭಿಪ್ರಾಯ ವ್ಯಕ್ತಪಡಿಸದೆ, ತನ್ನ ಮೇಲಾಧಿಕಾರಿಗಳಿಗೆ ರೂ. 54,935,042/- (ಐದು ಕೋಟಿ ನಲ್ಮತ್ತೊಂಬತ್ತು ಲಕ್ಷದ ಮೂವತ್ತೈದು ಸಾವಿರದ ನಲವತ್ತೆರೆಡು ರೂಗಳು) ಪಾವತಿಸಲು ಕ್ರಮ ತೆಗೆದುಕೊಂಡಿರುತ್ತಾರೆ. ಮುಂದುವರೆದು ನೋಟ್ 46 ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಈ ಮೇಲ್ಕಂಡಂತೆ ಝೇಂಕಾರ್ ಅಡ್ವರ್ಟೈಸಿಂಗ್ ಬೆಂಗಳೂರುರವರಿಗೆ ವಾರ್ತಾ ಇಲಾಖೆರವರ ಮುಖಾಂತರ ಅಥವಾ ಇವರ ಮೂಲಕ ಅಧಿಕೃತಗೊಂಡಿರುವ ಏಜೆನ್ಸಿಗೆ ಪರಿಶಿಷ್ಟರ ಅಭಿವೃದ್ಧಿಯ ಅನುದಾನ ಪಾವತಿಸುವಲ್ಲಿ ಶಾಸನಬದ್ಧ ನಿಯಮಾವಳಗಳನ್ನು ಅಳವಡಿಸಿಕೊಳ್ಳದೆ ಹಣ ಪಾವತಿಸಲು ಕ್ರಮಕೈಗೊಂಡಿರುವ ಬಗ್ಗೆ ಉಲ್ಲೇಖವಾಗಿರುತ್ತದೆ.

1. ಆದ್ದರಿಂದ ಈ ರೀತಿ ತರಾತುರಿಯಲ್ಲಿ ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಅನುಮೋದನೆ ಸಹ ಈ ದಾಖಲಾತಿಗಳಲ್ಲಿ ಉಲ್ಲೇಖಿತವಾಗಿರುವುದು ಕಂಡುಬಂದಿರುವುದಿಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೇರವಾಗಿ ರೂ. 54,935,042/- ರೂ ಹಣವನ್ನು ಝೇಂಕಾರ್ ಅಡ್ವರ್ಟೈಸಿಂಗ್ ರವರಿಗೆ ನೀಡಿರುವುದು ಕಾನೂನು ಬಾಹೀರವಾಗಿರುತ್ತದೆ.

2. ಝೇಂಕಾರ್ ಅಡ್ವರ್ಟೈಸಿಂಗ್ ಏಜೆನ್ನಿರವರು ನೀಡಿರುವ ಬಿಲ್ಲಿನ ರೂ. 54,935,042/- ನಿಗದಿಪಡಿಸಿದ ದರ ರೂ. 23,013,315/- ರೂ ವ್ಯತ್ಯಾಸ ರೂ. 31,921,727/- (ಮೂರು ಕೋಟಿ ಹತ್ತೊಂಬ್ಬತ್ತು ಲಕ್ಷ ಇಪ್ಪತ್ತೊಂದು ಸಾವಿರದ ಏಳು ನೂರ ಇಪ್ಪತ್ತೇಳು ರೂಪಾಯಿಗಳು) ರಷ್ಟು ಹಣವನ್ನು ನೇರವಾಗಿ ಸರ್ಕಾರಕ್ಕೆ ಮೋಸ ಮಾಡಿರಲಾಗಿರುತ್ತದೆ.

ಒಟ್ಟಾರೆ ಕಲ್ಯಾಣ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಶಾಮೀಲಾಗಿಸಿಕೊಂಡು ಬಡ ದಲಿತರ ಕಲ್ಯಾಣ ಹೆಸರಿನಲ್ಲಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದು. ಈ ಹಣವನ್ನು ಇದೇ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾದ ಮೇಜರ್ ಮಣಿವಣ್ಣನ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜನರಲ್ ಮ್ಯಾನೇಜರ್ ಜಿ.ಜೆ.ಪದ್ಮನಾಭ ಹಾಗೂ ವಾರ್ತಾ ಇಲಾಖೆಯ ಭ್ರಷ್ಟ ಅಧಿಕಾರಿ ಮುರಳಿಧ‌ರ್ ಹಾಗೂ ಇತರರಿಂದ ಹಣವನ್ನು ಮರುವಸೂಲು ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಂಡು ಝೇಂಕಾರ್ ಅಡ್ವರ್ಟೈಸಿಂಗ್ ಏಜೆನ್ಸಿಯವರ ಮೇಲೆ ಸಹ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುಲು ಈ ಪತ್ರಿಕಾಗೋಷ್ಠಿಯ ಮುಖಾಂತರ ಒತ್ತಾಯ ಮಾಡುವುದರೊಂದಿಗೆ, ಈ ಹಗರಣಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಈ ಪ್ರಕರಣ ತನಿಖೆಯನ್ನು ಸರ್ಕಾರದ ಹಿರಿಯ ಐ.ಎ.ಎಸ್ ಅಧಿಕಾರಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸುವುದರೊಂದಿಗೆ ತನಿಖೆಯನ್ನು ರಿಟೈರ್ಡ್ ಜಡ್ಜ್ ಅಥವಾ ಹಾಲಿ ಐ.ಪಿ.ಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ತಂಡ ರಚಿಸಿ ತನಿಖೆ ನಡೆದರೆ ಮಾತ್ರ ಈ ಪ್ರಕರಣವು ಸೇರಿದಂತೆ, ಇವರ ಅಧಿಕಾರ ವ್ಯಾಪ್ತಿಯಲ್ಲಿ ನಡೆದಿರುವ ದಲಿತರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಅವ್ಯವಹಾರ ಆಗಿರುವುದು ಪತ್ತೆಹಚ್ಚಲು ಸಾಧ್ಯವಾಗುತ್ತದೆ.

ಪ್ರಕರಣದಲ್ಲಿ ಆರೋಪಿತರು ಪ್ರಭಾವಶಾಲಿಗಳಾಗಿದ್ದು ಆರೋಪಿತರು ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸುವ ಸಾಧ್ಯತೆಗಳಿರುವುದರಿಂದ ಕೂಡಲೆ ಪ್ರಕರಣದಲ್ಲಿ ಭಾಗಿಯಾದ ಡಾ.ಬಿ.ಆ‌ರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ರಾಜ್ಯದ ಎಲ್ಲಾ ಜಿಲ್ಲಾ ವ್ಯವಸ್ಥಾಪಕರು ಸೇರಿದಂತೆ ನಿಗಮದ ಜನರಲ್ ಮ್ಯಾನೇಜ‌ರ್ ಜಿ.ಜಿ ಪದ್ಮನಾಭ್ ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜ‌ರ್ ಪಿ.ಮಣಿವಣ್ಣನ್ ಇವರನ್ನು ಅಮಾನತ್ತು ಮಾಡುವುದರೊಂದಿಗೆ ಝೇಂಕಾರ್ ಅಡ್ವರ್ಟೈಸಿಂಗ್ ಮುಖಾಂತರ ಕಾನೂನು ಬಾಹೀರವಾಗಿ ಲೂಟಿ ಹೊಡೆದಿರುವ ಹಣವನ್ನು ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಿ ಝೇಂಕಾರ್ ಅಡ್ವರ್ಟೈಸಿಂಗ್ ಏಜೆನ್ಸಿ ಇವರ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1989 ಹಾಗೂ ಸುಪ್ರೀಂ ಕೋರ್ಟ್ ತಿದ್ದುಪಡಿ 2014 ಮತ್ತು 2016 ರರಂತೆ ಇತರ ಭಾರತೀಯ ದಂಡ ಸಂಹಿತೆ ಪ್ರಕರಣ ಪ್ರಕ್ರಿಯೆ ಯಡಿ ಸಮಾಜ ಕಲ್ಯಾಣ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂಖ್ಯೆ: ಎಸ್‌ಡಬ್ಲ್ಯೂಡಿ- ಎಸ್‌ಸಿಎಸ್‌ಪಿ01(ಓಟಿಹೆಚ್)/15/2021 ರಂತೆ ದಿನಾಂಕ: 01-12-2022 ರಂತೆ ಕ್ರಮ ವಹಿಸಲು ಭೀಮಪುತ್ರಿ ಬ್ರಿಗೇಡ್ ರಾಜ್ಯ ಸಮಿತಿ ಮತ್ತು ದಲಿತ ಸಂಘಗಳ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ  ಒತ್ತಾಯಿಸಲಾಯಿತು.

ಪತ್ರಿಕಾ ಗೋಷ್ಠಿಯಲ್ಲಿ, ಭೀಮಪುತ್ರಿ ರೇವತಿರಾಜ್ ರಾಜ್ಯಾಧ್ಯಕ್ಷರು- ಭೀಮಪುತ್ರಿ ಬ್ರಿಗೇಡ್,  ಡಾ.ಸಿ .ಎಸ್.ರಘು,ರಾಜ್ಯಾಧ್ಯಕ್ಷರು- ಕರ್ನಾಟಕ ದಲಿತ ಸಂಘರ್ಷ ಸಮಿತಿ, ಎಂ. ಎಂ.ರಾಜು ರಾಜ್ಯಾಧ್ಯಕ್ಷರು-ಜೈಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ,ಎನ್. ಅನಂತ್(ವಕೀಲರು) ರಾಜ್ಯಾಧ್ಯಕ್ಷರು -ಜೈಭೀಮ್ ಸೇನೆ,ಚೇತನ್ ಕುಮಾರ್ ರಾಜ್ಯಾಧ್ಯಕ್ಷರು-ಬಹುಜನ ಭಾಗ್ಯವಿಧಾತ ವೇದಿಕೆ,ದಿವಿಲ್ ಕುಮಾರ್ ರಾಜ್ಯಾಧ್ಯಕ್ಷರು-ಭಾರತೀಯ ಬುಡಕಟ್ಟು ಬ್ರಿಗೇಡ್,ಎಂ.ಶಂಕರ್ ರಾಜ್ಯಾಧ್ಯಕ್ಷರು- ಅಖಿಲ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮತ್ತು ಮೋಹನ್ ಕುಮಾ‌ರ್(ವಕೀಲರು) ರಾಜ್ಯಾಧ್ಯಕ್ಷರು ಹೊಸಹಳ್ಳಿ ಭೋವಿ ಅಭಿವೃದ್ಧಿ ಸಂಘ, ಉಪಸ್ಥಿತರಿದ್ದರು.

City Today News 9341997936

ಕರ್ನಾಟಕ ರಿಪಬ್ಲಿಕನ್ ಸಂಘಟನೆಯನ್ನು ಸನ್ಮಾನ್ಯ ಶ್ರೀ. ಡಾ॥ ಸುಭಾಷ್ ಭರಣಿರವರು, ಐ.ಪಿ.ಎಸ್. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ನಿವೃತ್ತ) ಕರ್ನಾಟಕ ಸರ್ಕಾರ, ರವರು ಉದ್ಘಾಟಿಸಿದರು

ಕರ್ನಾಟಕ ರಿಪಬ್ಲಿಕನ್ ಸಂಘಟನೆ (KRS)ನ ನೂತನ ಸಂಘಟನೆ ಉದ್ಘಾಟನಾ ಸಮಾರಂಭ,ದಿನಾಂಕ 27-03-2024ರ ಬುಧವಾರ ಸಮಯ ಬೆಳಗ್ಗೆ 10-30ಕ್ಕೆ ಸ್ಥಳ: ಗಾಂಧೀಭವನ, ಶಿವಾನಂದ ಸರ್ಕಲ್, ಬೆಂಗಳೂರ್ ನಲ್ಲಿ, ಸನ್ಮಾನ್ಯ ಶ್ರೀ. ಡಾ॥ ಸುಭಾಷ್ ಭರಣಿರವರು, ಐ.ಪಿ.ಎಸ್. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ನಿವೃತ್ತ) ಕರ್ನಾಟಕ ಸರ್ಕಾರ ರವರು ಉದ್ಘಾಟನೆ ಮಾಡಿದರು, ಸನ್ಮಾನ್ಯ ಶ್ರೀ ಚೇತನ್ ಅಹಿಂಸಾರವರು. ಚಿಂತಕರು ಹಾಗೂ ಖ್ಯಾತ ಚಲನಚಿತ್ರ ನಟರ ಪ್ರಸ್ತುತದಲ್ಲಿ,ಸನ್ಮಾನ್ಯ ಶ್ರೀ ಬೆಳತೂರು ವೆಂಕಟೇಶ್‌ರವರು.ರಾಜ್ಯಾಧ್ಯಕ್ಷರು, ಕೆ.ಆರ್.ಎಸ್. ಬೆಂಗಳೂರು ರವರ ಆಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು.


ಸ್ವತಂತ್ರ್ಯ ಬಂದು 76 ವರ್ಷಗಳು ಕಳೆದಿದೆ. ನಮ್ಮನ್ನು ಆಳಿದ ಎಲ್ಲಾ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರರವರು ಕಂಡಂತಹ ಕನಸು, ಕನಸಾಗಿ ಉಳಿದಿದೆ. ಅವರ ಕನಸು, ನನಸು ಮಾಡಲು ದಲಿತ ಚಳವಳಿಗಳು ಮನಸ್ಸು ಮಾಡಬೇಕಾಗಿದೆ.

ರಾಜ್ಯದಲ್ಲಿ ಅನೇಕ ಸಂಘಟನೆಗಳು, ಮೂಲ ಆಶಯಗಳನ್ನು ಮರೆತು ಬೇರೆ ಬೇರೆ ಆಯಾಮಗಳನ್ನು ಕಂಡುಕೊಂಡಿವೆ. ಇವೆಲ್ಲವನ್ನೂ ಮರೆತು ಒಂದಾಗಿ ಹೋಗುವ ದಿಕ್ಕಿನಲ್ಲಿ ಸಾಗಬೇಕಾಗಿದೆ.

ದಲಿತ ಕವಿ ಡಾ. ಸಿದ್ದಲಿಂಗಯ್ಯನವರು ಹೇಳಿದಂತೆ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬಂತೆ ನಮ್ಮ ಹೋರಾಟ ಧಮನಿತರ ಪರವಾಗಿ, ಶೋಷಿತ, ಸಹಶೋಷಿತರ, ಕೂಲಿಕಾರ್ಮಿಕರ, ಮಹಿಳೆಯರ, ನಿರುದ್ಯೋಗಿ ಯುವಕರ ಪರವಾಗಿ ಸಂಘಟಿತ ಹೋರಾಟ ಮಾಡಬೇಕಾಗಿರುತ್ತದೆ. ಬುದ್ಧ, ಬಸವ, ಅಂಬೇಡ್ಕ‌ರವರ ವಿಚಾರಧಾರೆಯೊಂದಿಗೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆಶಯದೊಂದಿಗೆ ಸಾಮಾಜಿಕ ರಾಜಕೀಯ ಇಚ್ಚಾಶಕ್ತಿಯೊಂದಿಗೆ ಸಮ ಸಮಾಜವನ್ನು ನಿರ್ಮಾಣ ಮಾಡಿ, ಹಸಿವು ಅವಮಾನ, ಅಸ್ಪೃಶ್ಯತೆ ಮುಕ್ತ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಕೆ.ಆ‌ರ್.ಎಸ್. ನೂತನ ಸಂಘಟನೆಯ ಪರಿಚಯಿಸುವ ಸಹ ಉದ್ದೇಶದೊಂದಿಗೆ ರಾಜ್ಯಾಧ್ಯಕ್ಷರಾದ ಬೆಳತೂರು ವೆಂಕಟೇಶರವರ ನೇತೃತ್ವದಲ್ಲಿ ನಾಡಿನ ಸಮಸ್ತ ನಾಗರಿಕರ ಮೂಲಭೂತ ಹಕ್ಕುಗಳಿಗಾಗಿ ಶ್ರಮಿಸುವ ಪ್ರಾಮಾಣಿಕ ಪ್ರಯತ್ನದ ಸಲುವಾಗಿ ಸಂಘಟನೆಯ ಉದ್ಘಾಟನೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರೋತ್ಸಾಹಿಸಿ, ಶುಭ ಹಾರೈಸಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ಮುಖಂಡರುಗಳು, ಪದಾಧಿಕಾರಿಗಳು,ಹಿರಿಯ ದಲಿತ ಮುಖಂಡರುಗಳು ಬಾಗವಹಿಸಿ ಯಶಸ್ವಿಗೊಳಿಸಿದರು.

City Today News 9341997936

ಹಣ ಆಸ್ತಿ ಕಳೆದುಕೊಂಡ ಮೃತರಿಗೆ ಸೂಕ್ತ ಪರಿಹಾರ ಒದಗಿಸಬೇಕು- ಎಮ್ ಎಮ್. ವೈ. ಸಿ

ದ.ಕ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ಶಾಹುಲ್ ಹಮೀದ್ (45 ವರ್ಷ),ಮದ್ದಡ್ಕ ನಿವಾಸಿ ಇಸಾಕ್ ( 54 ವರ್ಷ) ಮತ್ತು ಶಿರ್ಲಾಲು ನಿವಾಸಿ ಸಿದ್ದೀಕ್ ( 34 ವರ್ಷ) ಎಂಬ ಮೂವರು ಅಮಾಯಕ ವ್ಯಕ್ತಿಗಳ ಬರ್ಬರ ಹತ್ಯೆ,ಹಾಗೂ ಮೃತದೇಹಗಳನ್ನು ಕಾರಿನೊಳಗೆ ಹಾಕಿ ಸುಟ್ಟು ಹಾಕಿರುವ ಅಮಾನುಷ ಕೃತ್ಯ ದಿನಾಂಕ 22/03/2024 ರಂದು ತುಮಕೂರು ಜಿಲ್ಲೆಯ ಕೋರಾ ಪೋಲೀಸ್ ಠಾಣೆಯ ವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ನಡೆದಿರುತ್ತದೆ. ಈ ಘಟನೆಯನ್ನು ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ (ರಿ) ಬೆಂಗಳೂರು ತೀವವಾಗಿ ಖಂಡಿಸುತ್ತದೆ.

ದಿನಾಂಕ 22/03/2024 ರಂದು ಬೆಳಕಿಗೆ ಬಂದಂತೆ ತುಮಕೂರು ಜಿಲ್ಲೆಯ ಕುಚ್ಚಂಗಿ ಕೆರೆಯಲ್ಲಿ ಎಸ್ಸೆಸ್ ಕಾರೊಂದು ಸುಟ್ಟ ಸ್ವಿಯಲ್ಲಿ ಕಂಡು ಬಂದಿದ್ದು, ಅದರ ಡಿಕ್ಕಿಯಲ್ಲಿ 2 ಮೃತದೇಹಗಳು ಹಾಗೂ ಮದ್ಯ ಸೀಟಿನಲ್ಲಿ ಒಂದು ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಕಂಡು ಬಂದಿದನ್ನು ಗಮನಿಸಿ ವಿಚಾರಿಸಲಾಗಿ, ಸದ್ರಿ ಕಾರನ್ನು ಮದ್ದಡ್ಕ ನಿವಾಸಿ ಇಸಾಕ್ ರವರು ಮಾಲೀಕರಿಂದ ಸುಮಾರು 13 ದಿನಗಳ ಹಿಂದೆ ಪಡೆದುಕೊಂಡು ಹೋಗಿದ್ದು ಸದ್ರಿ ಕಾರಿನಲ್ಲಿ ಕಂಡ ಸುಟ್ಟು ಕರಕಲಾದ ಮೃತದೇಹಗಳು ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಶಾಹುಲ್‌ ಹಮೀದ್(45 ವರ್ಷ), ಮದ್ದಡ್ಕ ನಿವಾಸಿ ಇಸಾಕ್ ( 54 ವರ್ಷ) ಮತ್ತು ಶಿರ್ಲಾಲು ನಿವಾಸಿ ಸಿದ್ದೀಕ್ ( 34 ವರ್ಷ) ಎಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಪೋಲೀಸರು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಗಳಾದ 1. ತುಮಕೂರಿನ ಶ್ರೀರಾ ಗೇಟ್ ಬಳಿ ನಿವಾಸಿ ಪಾತರಾಜು @ ರಾಜು @ ರಾಜಗುರು@ ಕುಮಾರ್, ಬಿನ್ ಸಿದ್ದಲಿಂಗಪ್ಪ ಹಾಗೂ 2. ಸತ್ಯಮಂಗಲದ ವಾಸಿ ಗಂಗರಾಜು ಬಿನ್ ಹನುಮಂತರಾಯಪ್ಪ ಎಂಬವರನ್ನು ಬಂಧಿಸಿ ವಿಚಾರಿಸಲಾಗಿ, ಕೊಲೆಗೀಡಾದ ದುರ್ದೈವಿಗಳನ್ನು ನಿಧಿ / ಬಂಗಾರ ಕೊಡಿಸುವ ಆಸೆಗೆ ಬೀಳಿಸಿದ ಪಾತರಾಜು @ ಕುಮಾರನು, ಸುಮಾರು 6 ಲಕ್ಷ ಹಣ ಪಡೆದು, ಮರಳಿ ನೀಡದೇ ಇದ್ದರೆ ಪೋಲೀಸ್ ಕೇಸು ದಾಖಲಿಸಿರುವೂದಾಗಿ ಬೆದರಿಕೆ ಹಾಕಿದ ಕಾರಣ ಕೊಲೆ ಮಾಡುವ ಉದ್ದೇಶದಿಂದ, ತನ್ನ ಪರಿಚಯದ ಸತ್ಯಮಂಗಳದ ನಿವಾಸಿ ಗಂಗರಾಜು ಮತ್ತು ಆತನ 6 ಜನ ಸಹಚಚರಾದ 1. ಪುಟ್ಟ ಸ್ವಾಮಯ್ಯನ ಪಾಳ್ಯದ ಮಧುಸೂದನ್ (24 ವರ್ಷ), 2. ಸಂತೇಪೇಟೆಯ ನವೀನ್ (24 ವರ್ಷ), 3. ವೆಂಕಟೇಶಪುರದ ಕೃಷ್ಣ (22 ವರ್ಷ), 4. ಹೊಂಬಯ್ಯನ ಪಾಳ್ಯದ ಗಣೇಶ (19 ವರ್ಷ),5, ನಾಗಣ್ಣ ಪಾಳ್ಯದ ಕಿರಣ್ (23 ವರ್ಷ), 6. ಕಾಳಿದಾಸನಗರದ ಸೈಮನ್,18 ವರ್ಷ) ಸೇರಿಕೊಂಡು 3 ಜನರನ್ನು ಕೊಲೆ ಮಾಡಿದರೆ 3 ಕೆ.ಜಿ ಚಿನ್ನವನ್ನು ಕೊಡುವೂದಾಗಿ ಆಮಿಷ ಒಡ್ಡಿ, ಹಿಂದಿನ ದಿನ ಸಂಚು ರೂಪಿಸಿ ದಿನಾಂಕ 22/03/2024 ರ ಮದ್ಯರಾತ್ರಿ 12 ಸುಮಾರಿಗೆ ಮೃತರನ್ನು ಚಿನ್ನ ಕೊಡುವುದಾಗಿ ಬೀರನಕಲ್ಲು ಬೆಟ್ಟದ ಸಮೀಪ ಕರೆಸಿಕೊಂಡು, ಅವರುಗಳನ್ನು ಮಚ್ಚು, ಲಾಂಗ್, ಮತ್ತು ಡ್ರಾಗನ್ ಜಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಮೃತರು ಹೋಗಿದ್ದ ಕಾರಿನ ಡಿಕ್ಕಿ ಮತ್ತು ಮದ್‌ಯ ಸೀಟಿಗೆ ತುಂಬಿಸಿಕೊಂಡು ಕುಚ್ಚಂಗಿಕೆರೆಗೆ ತೆಗೆದುಕೊಂಡು ಹೋಗಿ ಸಾಕ್ಷ ನಾಶಪಡಿಸುವ ಉದ್ದೇಶದಿಂದ ಕಾರಿನೊಂದಿಗೆ ಸುಟ್ಟಿದ್ದಾಗಿ ಪೋಲೀಸ್ ತನಿಖೆಯಿಂದ ತಿಳಿದುಬಂದಿರುತ್ತದೆ. ಇದೊಂದು ಸಮಾಜವನ್ನೇ ಬೆಚ್ಚಿ ಬೀಳಿಸಿದ ಘಟನೆಯಾಗಿದ್ದು, ಈ ಪ್ರಕರಣವನ್ನು ವಿಶೇಷ ಪ್ರಕರಣವನ್ನಾಗಿ ಸರಕಾರ ಪರಿಗಣಿಸುವಂತೆ ಆಗ್ರಹಿಸುವ ಸಲುವಾಗಿ ಈ ಪತ್ರಿಕಾ ಪ್ರಕಟನೆ/ಸುದ್ದಿಗೋಷ್ಟಿ ಕರೆಯಲಾಗಿದೆ.

ಈ ಘಟನೆಯಲ್ಲಿ ಹತ್ಯೆಗೀಡಾಗಿ ಅಮಾನುಷವಾಗಿ ಸುಟ್ಟು ಕರಕಲಾದ ಶಾಹುಲ್ ಹಮೀದ್ ಎಂಬವರು ಬಡ ಜೀವಿಯಾಗಿದ್ದು, ಸಮಾಜಮುಖಿ ಕಾರ್ಯಗಳಿಗಾಗಿ ಸದಾ ತನ್ನನ್ನು ತೊಡಗಿಸಿಕೊಂಡು, ಸಮಾಜ ಸೇವನಾಗಿ, ಸಂಘ ಸಂಸ್ಥೆಗಳನ್ನು ತೊಡಗಿಸಿಕೊಂಡು ಪ್ರಸ್ತುತ ಮಸೀದಿ ಕಮಿಟಿ ಸದಸ್ಯರಾಗಿಯೂ, ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿರುವ ಸಜ್ಜನ ವ್ಯಕ್ತಿಯಾಗಿರುತ್ತಾರೆ. ಹತ್ತು ಜನರಿಗೆ ಮಾರ್ಗದರ್ಶಿಯಾಗಿರುವ ಶಾಹುಲ್ ಹಮೀದ್ ರವರು ಅಮಾನುಷವಾಗಿ ನಿಧಿ ಆಮಿಷಕ್ಕೆ ಒಳಪಟ್ಟು ಹತ್ಯೆ ಆಗಿರುವೂದು ನಂಬಲಸಾದ್ಯವಾಗಿದ್ದು ಈ ಬಗ್ಗೆ ಸೂಕ್ತ ತನಿಖೆ ಆಗಬೇಕಿದ್ದು, ಅದೇ ರೀತಿ ಇಸಾಕ್ ತಾನೊಬ್ಬ ವಿದೇಶಿ ಕೆಲಸದಲ್ಲಿದ್ದು ತಕ್ಕಮಟ್ಟಿಗೆ ಜೀವನ ನಡೆಸುತ್ತಿದ್ದು, ತನ್ನ ಮನೆ ಮಾರಿ ಹಾಗೂ ಇರುವ ಮನೆಗೆ ಸಾಲ ಮಾಡಿ ಹಾಗೂ ಮಗಳ ಚಿನ್ನಾಭರಣ ಒತ್ತೆ ಇಟ್ಟು ಲಕ್ಷಾಂತರ ಹಣ ಕಳೆದುಕೊಂಡು ಅಮಾನುಷ ಕೃತ್ಯಕ್ಕೆ ಬಲಿಯಾಗಿದ್ದು ಹಾಗೂ ಫೂಟ್ ವೇ‌ರ್ ಅಂಗಡಿ ಕೆಲಸಗಾರನಾಗಿ, ಕಳೆದ ವರ್ಷ ತನ್ನ ಮಗು ಹಾಗೂ ಮಡದಿಯನ್ನು ಅಪಘಾತದಲ್ಲಿ ಕಳೆದುಕೊಂಡು ಒಬ್ಬ ಮಗನನ್ನೂ ಹೊಂದಿರು ಸಿದ್ದೀಕ್ ಈ ಜಾಲದಲ್ಲಿ ಆಮಿಷಕ್ಕೆ ಒಳಗಾಗಿ ಹಣ ಹಾಗೂ ಪ್ರಾಣವನ್ನು ಕಳೆದುಕೊಂಡಿರುವ ಸಂಗತಿಯು ಅಚ್ಚರಿಯಾಗಿದ್ದು, ಇದರ ಹಿಂದೆ ಯಾವುದೋ ರೀತಿಯ ಒಂದು ಜಾಲವಿದು, ಅಮಾಯಕರನ್ನೇ ಗುರಿಯಾಗಿಸಿ ಈ ಜಾಲದಲ್ಲಿ ಸಿಲುಕಿಸಿದ್ದು, ತಮ್ಮ ಶಕ್ತಿ ಮೀರಿ, ಯಾವುದೇ ಅಗತ್ಯ ಇಲ್ಲದಿದ್ದರೂ ಈ ಜಾಲದಲ್ಲಿ ಸಿಲುಕಿರುವ ಮೂರೂ ಅಮಾಯಕರಿಗೂ ಸೂಕ್ತ ಕಾನೂನು ಜಯ ಹಾಗೂ ಪರಿಹಾರ ಸಿಗಲು ಅರ್ಹರಾಗಿರುತ್ತಾರೆ.

ಆಗ್ರಹ:

1.ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ (ರಿ) ಬೆಂಗಳೂರು ಈ ಘಟನೆಯನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗುವಂತೆ ಹಾಗೂ ಈ ಪ್ರಕರಣ ಹಿಂದಿರುವ ದೊಡ್ಡ ಜಾಲವನ್ನು ಪತ್ತೆ ಹಚ್ಚುವ ಸಲುವಾಗಿ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗಳಾದ ಸಿ.ಒ.ಡಿ ಗೆ ವಹಿಸಬೇಕು,

2. ಈ ಒಂದು ಘಟನೆಯು ಅಮಾನುಷವಾಗಿದ್ದು, ನಾಗರಿಕ ಸಮಾಜವು ತಲೆ ತಗ್ಗಿಸುವಂತಹ ಹೀನ ಕುಕೃತ್ಯ ಇದಾಗಿದ್ದು, ನಿಧಿ, ಬಂಗಾರದ ಆಮಿಷ ಒಡ್ಡಿ ಮೂರು ಅಮಾಯಕ ಜೀವಗಳನ್ನು ಹತ್ಯೆಗೈದು ಗುರುತು ಪರಿಚಯ ಸಿಗದ ರೀತಿಯಲ್ಲಿ ಕ್ರೂರವಾಗಿ ಸುಟ್ಟು ಹಾಕಿ ಮೃತ ದೇಹವು ಸಂಪೂರ್ಣ ಬೂದಿ ಆಗುವಂತೆ ಮಾಡಿದ ಈ ಕೃತ್ಯದಲ್ಲಿ ಮಡಿದ ಬಡ ಜೀವಗಳ ಕಟುಂಬ/ಮಕ್ಕಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು.

3. ತನಿಖಾಧಿಕಾರಿಗಳ ಮಾಹಿತಿಯಂತೆ ಆರೋಪಿತನು ಅಮಾಯಕ ಮೃತರಿಂದ ನಿಧಿ ಹುಡುಕಿ ಕೊಡುವ ಸಲುವಾಗಿ ರೂ 600,000/- ಹಣವನ್ನು ಪಡಕೊಂಡ ಬಗ್ಗೆ ಆರೋಪಿ ಸ್ವ ಇಚ್ಛಾ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾಗಿ ತಿಳಿದು ಬಂದಿದ್ದು, ಆದರೆ ಈ ಮೊತ್ತವು 50,00,000/- (ರೂಪಾಯಿ ಐವತ್ತು ಲಕ್ಷ) ಕ್ಕೂ ಹೆಚ್ಚಿನ ಹಣವನ್ನು ಆರೋಪಿತರು ಲೂಟಿ ಮಾಡಿದ ಬಗ್ಗೆ ಸಂಶಯ ಇದ್ದು. ಮೃತ ದುರ್ದೈವಿ ಇಸಾಕ್ ಒಬ್ಬರೇ ರೂಪಾಯಿ 35,00,000/- ಹಣವನ್ನು ಮನೆ ಸಾಲ ಮತ್ತು ಒಡವೆ ಒತ್ತೆ ಇಟ್ಟು ತೆಗೆದುಕೊಂಡ ಹೋದ ಬಗ್ಗೆ ಮೃತ ಇಸಾಕ್ ಪತ್ನಿ ಹೇಳಿಕೆ ನೀಡಿದ್ದು, ಈ ಬಗ್ಗೆ ಸರಿಯಾದ ತನಿಖೆ ನಡೆದರೆ ಮಾತ್ರ ಇನ್ನಷ್ಟು ಸತ್ಯ ಹೊರ ಬೀಳಲಿದ್ದು, ಸರಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸುತ್ತಿದ್ದೇವೆ. ಹಾಗೂ ಹಣ ಆಸ್ತಿ ಕಳೆದುಕೊಂಡ ಮೃತರಿಗೆ ಸೂಕ್ತ ಪರಿಹಾರ ಒದಗಿಸಬೇಕು.

4. ಆರೋಪಿಗಳೆಲ್ಲರನ್ನು ಶೀಘ್ರು ಬಂಧಿಸಿ, ಕೃತ್ಯಕ್ಕೂ ಮೊದಲು ಆರೋಪಿತರು ನಡೆಸಿದ ಮೋಸ, ವಂಚನೆ, ಹಾಗೂ ಮೃತರ ಮನೆಗಳಿಗೆ ಬೇಟಿ ನೀಡಿ ಮೃತರೊಂದಿಗೆ ನಡೆಸಿದ ಸಂಬಂಧದ ಕುರಿತು ಹಾಗೂ ಆರೋಪಿತರ ಜಾಲದ ಬೇರುಗಳ ಬಗ್ಗೆ ಸೂಕ್ತ ತನಿಖೆ ಆಗಬೇಕು. ಕೃತ್ಯದಲ್ಲಿ ಭಾಗಿ ಆದವರೂ, ಆರೋಪಿತರಿಗೆ ಸಹಕರಿಸದವರೂ, ಹಾಗೂ ಅಮಾಯಕ 3 ಜನರನ್ನು ನಂಬಿಸಿ ಈ ನಿಧಿ,ಆಸೆಯ ಜಾಲಕ್ಕೆ ಪರಿಚಯಿಸಿದ ವ್ಯಕ್ತತಗಳ ಬಗ್ಗೆಯೂ ತನಿಖೆ ಆಗಬೇಕು, ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುಬೇಕು. ಈ ಕೃತ್ಯದ ಹಿಂದಿರುವ ಸಂಪೂರ್ಣ ತಂಡವನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದೇವೆ.

5. ತುಮಕೂರು ಭಾಗಗಳಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಈ ರೀತಿ ಜಾಲದ ಮೋಸದಿಂದಾಗಿ ಅಮಾಯಕರು, ಹಣ ಮತ್ತು ಪ್ರಾಣವನ್ನು ಕಳೆದುಕೊಂಡ ಬಗ್ಗೆ ಕೇಳಿ ಬರುತ್ತಿದ್ದು, ಇದೊಂದು ಪೋಲೀಸ್ ಇಲಾಖೆ ಮತ್ತು ಸರಕಾರದ ವೈಫಲ್ಯವಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತನಿಖಾ ತಂಡವನ್ನು ರಚಿಸಿ ಇಂತಹಾ ಜಾಲಗಳ ಹಿಂದಿರುವ ಎಲ್ಲಾ ವ್ಯಕ್ತಿಗಳನ್ನು ಬಂಧಿಸಬೇಕು ಹಾಗೂ ಸೂಕ್ತ ಜಾಗೃತಿ ಕ್ರಮ ಕೈಗೊಳ್ಳಬೇಕು ಸಮಿತಿಯ ವತಿಯಿಂದ ಆಗ್ರಹಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ,ಅಬೂಬಕ್ಕರ್ ಹೆಚ್ ( ಅಧ್ಯಕ್ಷರು, ಎಮ್ ಎಮ್. ವೈ. ಸಿ),ಜುನೈದ್ ( ಪ್ರಧಾನ ಕಾರ್ಯದರ್ಶಿ),ಸಲೀಂ ಸಿ.ಎಮ್ ( ಅಧ್ಯಕ್ಷರು, ಮೆಜೆಸ್ಟಿಕ್ ವಲಯ),ಸಮದ್‌ ಮದ್ದಡ್ಕ, ( ನಲ್ ಏರಿಯಾ ಲೀಡರ್),ಬಶೀರ್ ಪುಣಚ( ಖಜಾಂಜಿ),ಉಬೈದುಲ್ಲಾ ( ವಿಜಯನಗರ ವಲಯ),ಶಬೀರ್ ಉಜಿರೆ ಉದ್ಯಮಿ ಬೆಂಗಳೂರು.ಉಪಸ್ಥಿತರಿದ್ದರು.

City Today News 9341997936

ಕರ್ನಾಟಕ ಸ್ವಾಭಿಮಾನಿ ರೈತರ, ಕಾರ್ಮಿಕರ ಪಕ್ಷ (ರಿ)ದ ವತಿಯಿಂದ ಮನವಿ

1. ನೀತಿ ಸಂಹಿತೆ: ಘೋಷಣೆ ಆದಂದಿನಿಂದ ದೇಶಾದ್ಯಂತ ರಾಷ್ಟ್ರಪತಿ/ರಾಜ್ಯಪಾಲರ ಆಡಳಿತ ಜಾಲ ಮಾಡಿ ಸಾರ್ವಜನಿಕರ ಸಾವಿರಾರು ಕೋಟಿ ಜನರ ತೆರಿಗೆ ಹಣ ಪ್ರಧಾನಿ ಕೇಂದ್ರ ಸಚಿವರುಗಳು, ಮುಖ್ಯಮಂತ್ರಿ ಸಚಿವರುಗಳ ಅಧಿಕಾರದ ದುರ್ಬಳಕೆ, ಪ್ರವಾಸ, ವಾಸ್ತವ್ಯ,ಭದ್ರತೆ, ಇತರೆ ಭತ್ಯೆಗಳು ಚುನಾವಣೆ ಕಾರ್ಯಕ್ಕೆ ದುಂದು ವೆಚ್ಚವಾಗುವುದನ್ನು ದೇಶಕ್ಕೆ ಉಳಿತಾಯ ಮಾಡಬೇಕು. ಚುನಾವಣೆ ಕಾರ್ಯ ಮುಗಿದ ನಂತರ ರಾಷ್ಟ್ರಪತಿ ಆಡಳಿತ ರದ್ದುಗೊಳಿಸಿ ಹೊಸ ಸರ್ಕಾರ ರಚನೆ ಆಗಬೇಕು.

2. ಮಾಜಿ MLA, MLC KPSC ನಿವೃತ್ತ ಅಧ್ಯಕರು ಮತ್ತು ಸದಸ್ಯರು….ಗಳಿಗೆ ಕೊಡುತ್ತಿರುವ ನಿವೃತ್ತಿ ವೇತನ, ವೈದ್ಯಕೀಯ ಸೌಲಭ್ಯ ಮುಂತಾದ ಇತರೆ ಸೌಲಭ್ಯಗಳನ್ನು ನಿಲ್ಲಿಸಬೇಕು. ಕಾರಣ ಯಾವ ನಿವೃತ್ತ ರಾಜಕಾರಣಿಗಳು ಬಡವರ ತೆರಿಗೆ. ಹಣದಿಂದ ಜೀವಿಸುವಷ್ಟು ಬಡವರಾಗಿಲ್ಲ.

3. ಕಾರಣ ಚುನಾವಣಾ ಆಯೋಗ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ನಿಗಧಿ ಪಡಿಸಿದ್ದರೂ ಸಹ ವಾಮ ಮಾರ್ಗದಿಂದ ಯವುದೇ ಚುನಾವಣೆಗಳಲ್ಲಿ ಚುನಾವಣಾ ಆಯೋಗ ನಿಗಧಿಪಡಿಸಿದ್ದಕ್ಕಿಂತ 100-150 ಪಟ್ಟು ಹೆಚ್ಚು ಖರ್ಚು ಮಾಡಿ ಚುನಾವಣೆ ಮುಗಿದ ನಂತರ ಚುನಾವಣಾ ಆಯೋಗ ನಿಗಧಿಪಡಿಸಿದ ವೆಚ್ಚಕ್ಕೆ ಸರಿಯಾಗಿ ಸುಳ್ಳು ಲೆಕ್ಕ ಕೊಡುತ್ತಾರೆ. ಚುನಾವಣಾ ಆಯೋಗ ಒಪ್ಪಿಕೊಳ್ಳುತ್ತದೆ.

4. ಸಭೆ ಸಮಾರಂಭ, ರ್ಯಾಲಿಗಳನ್ನು ನಡೆಸಲು ಅನುಮತಿ ಕೊಡಬಾರದು, ಇದರಿಂದ ಜಾತಿ ಬಲ, ಹಣಬಲ ತೋಳ್ಳಲ ಮುಂತಾದವುಗಳಿಂದ ವೃಥಾ ಪರ್ಷಣೆಗಳು ತಪ್ಪುತ್ತವೆ. ಇದರಿಂದ ಸಾರ್ವಜನಿಕರು ನೆಮ್ಮದಿಯಿಂದಿರುತ್ತಾರೆ. ಯಾವುದೇ ರೀತಿಯಿಂದಲೂ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ.

5. ಲೋಕಸಭೆ/ವಿದಾನಸಭೆ ಚುನಾವಣಾ ಕ್ಷೇತ್ರಗಳ ಮೀಸಲಾತಿಯ ಅವಧಿಯನ್ನು ಕನಿಷ್ಠ ಎರಡು ಅವಧಿಗೆ(10ವರ್ಷ) ನಿಗಧಿಗೊಳಿಸಬೇಕು.

6. ಚುನಾವಣಾ ಆಯೋಗವೇ ಚುನಾವಣೆಗೆ ನಿಂತ ಅಭ್ಯರ್ಥಿಗಳಿಂದ ನಿಗಧಿತ ಶುಲ್ಕ ವಸೂಲ್ಯಾಡಿ ಸರ್ವಪಕ್ಷಗಳ ಅಭ್ಯರ್ಥಿಗಳು ದೃಶ್ಯಮಾಧ್ಯಮದ ಮೂಲಕ ಅವರವರ ಪಕ್ಷದ ಕಾಠ್ಯಕ್ರಮಗಳನ್ನು ಪ್ರಚಾರಪಡಿಸಿ, ಮತಕೇಳಲು ಸಂವಾದ ಕಾರ್ಯಕ್ರಮಗಳನ್ನು ಚುನಾವಣಾ ಆಯೋಗವೇ ವ್ಯವಸ್ಥೆ ಮಾಡುವ ಮೂಲಕ ಎಲ್ಲ ಅಭ್ಯರ್ಥಿಗಳಿಗೂ ಸರ್ವ ಸಮಾನ ಅವಕಾಶ ಕಲ್ಪಿಸಿಕೊಡಬೇಕು ಎಂದು ಕರ್ನಾಟಕ ಸ್ವಾಭಿಮಾನಿ ರೈತರ, ಕಾರ್ಮಿಕರ ಪಕ್ಷ (ರಿ)ದ ವತಿಯಿಂದ ಮನವಿ ಎಂದು ಅಧ್ಯಕ್ಷರು-ಜಿ.ಎಸ್. ನಾಗರಾಜ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಭರತ್ ರಾಜ್, ವಕೀಲರು ಮತ್ತು ವಸಂತ್, ಸಂಚಾಲಕರು ಉಪಸ್ಥಿತರಿದ್ದರು.

City Today News 9341997936

ಕರ್ನಾಟಕ ರಿಪಬ್ಲಿಕನ್ ಸಂಘಟನೆ (KRS)ನ ನೂತನ ಸಂಘಟನೆ ಉದ್ಘಾಟನಾ ಸಮಾರಂಭ,ದಿನಾಂಕ 27-03-2024ರ ಬುಧವಾರ ಸಮಯ ಬೆಳಗ್ಗೆ 10-30ಕ್ಕೆ ಸ್ಥಳ: ಗಾಂಧೀಭವನ, ಶಿವಾನಂದ ಸರ್ಕಲ್, ಬೆಂಗಳೂರು

ಸ್ವತಂತ್ರ್ಯ ಬಂದು 76 ವರ್ಷಗಳು ಕಳೆದಿದೆ. ನಮ್ಮನ್ನು ಆಳಿದ ಎಲ್ಲಾ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರರವರು ಕಂಡಂತಹ ಕನಸು, ಕನಸಾಗಿ ಉಳಿದಿದೆ. ಅವರ ಕನಸು, ನನಸು ಮಾಡಲು ದಲಿತ ಚಳವಳಿಗಳು ಮನಸ್ಸು ಮಾಡಬೇಕಾಗಿದೆ.

ರಾಜ್ಯದಲ್ಲಿ ಅನೇಕ ಸಂಘಟನೆಗಳು, ಮೂಲ ಆಶಯಗಳನ್ನು ಮರೆತು ಬೇರೆ ಬೇರೆ ಆಯಾಮಗಳನ್ನು ಕಂಡುಕೊಂಡಿವೆ. ಇವೆಲ್ಲವನ್ನೂ ಮರೆತು ಒಂದಾಗಿ ಹೋಗುವ ದಿಕ್ಕಿನಲ್ಲಿ ಸಾಗಬೇಕಾಗಿದೆ.

ದಲಿತ ಕವಿ ಡಾ. ಸಿದ್ದಲಿಂಗಯ್ಯನವರು ಹೇಳಿದಂತೆ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬಂತೆ ನಮ್ಮ ಹೋರಾಟ ಧಮನಿತರ ಪರವಾಗಿ, ಶೋಷಿತ, ಸಹಶೋಷಿತರ, ಕೂಲಿಕಾರ್ಮಿಕರ, ಮಹಿಳೆಯರ, ನಿರುದ್ಯೋಗಿ ಯುವಕರ ಪರವಾಗಿ ಸಂಘಟಿತ ಹೋರಾಟ ಮಾಡಬೇಕಾಗಿರುತ್ತದೆ. ಬುದ್ಧ, ಬಸವ, ಅಂಬೇಡ್ಕ‌ರವರ ವಿಚಾರಧಾರೆಯೊಂದಿಗೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆಶಯದೊಂದಿಗೆ ಸಾಮಾಜಿಕ ರಾಜಕೀಯ ಇಚ್ಚಾಶಕ್ತಿಯೊಂದಿಗೆ ಸಮ ಸಮಾಜವನ್ನು ನಿರ್ಮಾಣ ಮಾಡಿ, ಹಸಿವು ಅವಮಾನ, ಅಸ್ಪೃಶ್ಯತೆ ಮುಕ್ತ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಕೆ.ಆ‌ರ್.ಎಸ್. ನೂತನ ಸಂಘಟನೆಯ ಪರಿಚಯಿಸುವ ಸಹ ಉದ್ದೇಶದೊಂದಿಗೆ ರಾಜ್ಯಾಧ್ಯಕ್ಷರಾದ ಬೆಳತೂರು ವೆಂಕಟೇಶರವರ ನೇತೃತ್ವದಲ್ಲಿ ನಾಡಿನ ಸಮಸ್ತ ನಾಗರಿಕರ ಮೂಲಭೂತ ಹಕ್ಕುಗಳಿಗಾಗಿ ಶ್ರಮಿಸುವ ಪ್ರಾಮಾಣಿಕ ಪ್ರಯತ್ನದ ಸಲುವಾಗಿ ಸಂಘಟನೆಯ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರೋತ್ಸಾಹಿಸಿ, ಶುಭ ಹಾರೈಸಬೇಕೆಂದು ಸಂಘಟನೆಯ ವತಿಯಿಂದ ವಿನಂತಿಸಲಾಯಿತು.

City Today News 9341997936