ಸ್ಮಾರ್ಟ್‌ಫೋನ್ ಗೆ ಜೋತು ಬೀಳುತ್ತಿರುವ ಯುವ ಸಮುದಾಯ digital DETOX Centre

ದಿನಕ್ಕೆ ಸರಾಸರಿ 6 – 8 ಗಂಟೆಗಳ ಕಾಲ

ಸ್ಮಾರ್ಟ್‌ಫೋನ್ ಗೆ ಜೋತು ಬೀಳುತ್ತಿರುವ ಯುವ ಸಮುದಾಯ

ದೇಶದ ಮೊದಲ ಗ್ರಾಮೀಣ ಭಾಗದಲ್ಲಿ ಡಿಜಿಟಲ್‌ ವ್ಯಸನ ವರ್ಜನ ಕೇಂದ್ರ

digital DETOX Centre

ಒತ್ತಡ ಕಡಿಮೆ ಮಾಡಲು ಡಿಜಿಟಲ್ ತಂತ್ರಜ್ಞಾನ – ಸಾಧನಗಳಿಂದ ಯುವಕರನ್ನು ದೂರವಿಡಲು ಡಿಜಿಟಲ್ ವ್ಯಸನ ವಿಮುಕ್ತಿ (ಡಿಟಾಕ್ಸ್) ಕೇಂದ್ರ ಯುವಕರು ದಿನಕ್ಕೆ ಸರಾಸರಿ 6 – 8 ಗಂಟೆಗಳಷ್ಟು ಅವಧಿಯನ್ನು ಸ್ಮಾರ್ಟ್ ಫೋನ್ ಗಳ ವ್ಯರ್ಥ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದ ಯುವಕರಿಂದ ಮತ್ತು ವೃದ್ಧರವರೆಗೆ ಹಲವಾರು ಮಂದಿ ನಿದ್ರಾ ಹೀನತೆಯ ಸಮಸ್ಯೆಯನ್ನು ಎದುರಿಸಲಾರಂಭಿಸಿದ್ದಾರೆ. ಸ್ಮಾರ್ಟ್‌ ಫೋನ್ ಗಳನ್ನು ಬಳಸುವ ವ್ಯಸನ ತಮ್ಮ ವಿದ್ರಾ, ಚಕ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿಯದ ಅವರು ಈ ನಿದ್ರೆಯ ಕೊರತೆ ಸಮಸ್ಯೆಯೊಂದಿಗೆ ವೈದ್ಯರನ್ನು ಕಾಣುತ್ತಿದ್ದಾರೆ. ನಿರಂತರ ತಲೆನೋವು ಮತ್ತು ಆಯಾಸ ಯುವಜನರಲ್ಲಿ ಈಗ ಸರ್ವೇ ಸಾಮಾನ್ಯವಾಗುತ್ತಿದೆ ಎಂದು ಖ್ಯಾತ ವೈದ್ಯರಾದ ಎಂದು ಮಾನಸ ಆಸ್ಪತ್ರೆಯ ಡಾ|| ಹೆಚ್‌.ಎಸ್. ಶಶಿಧರ್ ಕುಮಾರ್ ಗೌರಿಬಿದನೂರು ಹೇಳಿದ್ದಾರೆ.

ಡಾ|| ಕೆ.ಎಸ್. ರತ್ನ, ಪ್ರಕಾರ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿ ಪ್ರತಿದಿನ ಸರಾಸರಿ 6 ರಿಂದ 8 ಗಂಟೆಗಳ ಕಾಲ ಸ್ಮಾರ್ಟ್‌ಫೋನ್ ಗಳನ್ನು ಯಾವುದಾದರೂ ರೂಪದಲ್ಲಿ ಬಳಸುತ್ತಿದ್ದಾರೆ. ಇದು ವೈರಲ್ / ಅಶ್ಲೀಲ – ಬೆತ್ತಲೆ ವೀಡಿಯೊಗಳನ್ನು ವೀಕ್ಷಿಸುವುದು, ಡೇಟಿಂಗ್ ಅಪ್ಲಿಕೇಷನ್ ಗಳನ್ನು ಬ್ರೌಸ್ ಮಾಡುವುದು, ಸಂಗೀತ ಕೇಳುವುದು, ಸಂದೇಶ ಕಳುಹಿಸುವುದು, ಚಾಟ್ ಮಾಡುವುದು ಮತ್ತು ಮೇಲ್ ಪರಿಶೀಲಿಸುವುದು, ಆನ್‌ಲೈನ್ ಆಟ ಆಡುವುದು ಹೀಗೆ ನಾನಾ ಚಟುವಟಿಕೆಗಳನ್ನು ಒಳಗೊಂಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರಿನಲ್ಲಿ ಭಾರತದ ಪ್ರಪ್ರಥಮ ಡಿಜಿಟಲ್ ಡಿಟಾಕ್ಸ್ ಕೇಂದ್ರವನ್ನು ಮಾನಸ ಆಸ್ಪತ್ರೆಯಲ್ಲಿ ಪ್ರಾರಂಭಿಸಿದ್ದಾರೆ. ಡಾ|| ಸುಮಂತ್, ವೈಜೆ ಪ್ರಕಾರ ಈ ನಿದ್ರಾಹೀನ ವ್ಯಕ್ತಿಗಳಿಗೆ, ಸಮಸ್ಯೆಯಿಂದ ಹೊರ ಬಂದು ಹೆಚ್ಚು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಲು ಸಹಾಯ ಮಾಡಲು ನಿರ್ಧರಿಸಿದ್ದಾರೆ. “ಪ್ರತಿದಿನ, ನಾನು ಹಲವಾರು ಯುವಕರು ನಿದ್ರೆಯ ಮಾದರಿಯಲ್ಲಿ ಅಡಚಣೆ, ತಲೆನೋವು, ಕಣ್ಣಿನ ಸಮಸ್ಯೆ ಇತ್ಯಾದಿ ಸಮಸ್ಯೆಗಳೊಂದಿಗೆ ನಮ್ಮ ಬಳಿಗೆ

ಚಿಕಿತ್ಸೆಗೆ ಆಗಮಿಸುತ್ತಾರೆ. ಇದಕ್ಕೆಲ್ಲ ಒಂದೇ ಕಾರಣವೆಂದರೆ ಯಾವುದೇ ಬೆಳಕು ಇಲ್ಲದ ಕೋಣೆಯಲ್ಲಿ ರಾತ್ರಿಯಲ್ಲಿ ಸ್ಮಾರ್ಟ್‌ಫೋನ್ ಗಳ ನಿರಂತರ ಬಳಕೆ’ ಎಂದು ಅವರು ಕಂಡುಕೊಂಡಿದ್ದಾರೆ.

ಸ್ಮಾರ್ಟ್‌ ಫೋನ್ ಗಳಲ್ಲಿ ನಿರಂತರವಾಗಿ ಲಭ್ಯವಿರುವ ವಿವಿಧ ವಿಷಯಗಳೊಂದಿಗೆ ಅದನ್ನು ಅತಿಯಾಗಿ ವೀಕ್ಷಿಸುವುದರಿಂದ ಆರೋಗ್ಯ ಸಮಸ್ಯೆಗಳು ಸಾಕಷ್ಟು ಸಾಮಾನ್ಯವಾಗುತ್ತಿದೆ. ಈ ಹಿನ್ನಲೆಯಲ್ಲಿ ಯುವಕರು ಮತ್ತು ಇತರರನ್ನು ಈ ಡಿಜಿಟಲ್ ವ್ಯಸನದಿಂದ ದೂರ ಮಾಡಲು ಡಾ|| ಶಶಿಧರ್ ಕುಮಾರ್ ಗೌರಿಬಿದನೂರಿನಲ್ಲಿ ಡಿಜಿಟಲ್ ಡಿಟಾಕ್ಸ್ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಡಿಜಿಟಲ್‌ ಸಾಧನಗಳಿಗೆ ಅಂಟಿಕೊಂಡಿರುವ ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ಸ್ಮಾರ್ಟ್‌ಫೋನ್ ಗಳು, ಟಿವಿ ಮಾಧ್ಯಮ, ಇಂಟರ್ನೆಟ್, ಡಿಜಿಟಲ್ ಗೇಮ್ಸ್ ಮತ್ತು ಜೂಜು ಹಾಗೂ ಸಾಮಾಜಿಕ ಮಾಧ್ಯಮಗಳಿಂದ ದೂರ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಗೌರಿಬಿದನೂರಿನಲ್ಲಿರುವ ಈ ಕೇಂದ್ರದಲ್ಲಿ ಡಿಜಿಟಲ್ ದಾಸರಾಗಿರುವವರಿಗೆ ಆರೋಗ್ಯಕರ ಜೀವನಶೈಲಿ ಹಾಗು ಡಿಜಿಟಲ್ ತಂತ್ರಜ್ಞಾನಗಳ ಬಳಕೆಯ ಕುರಿತು ಸಲಹೆ ನೀಡಲಾಗುತ್ತದೆ. ಈ ಕೇಂದ್ರವು ಇಂತಹ ವ್ಯಕ್ತಿಗಳಿಗೆ ಮುಖಾಮುಖಿ ಸಂವಹನದ ಪ್ರಾಮುಖ್ಯತೆಯನ್ನು ತಿಳಿಯಪಡಿಸಿ, ಅವರನ್ನು ಸ್ಮಾರ್ಟ್‌ ಫೋನ್, ಲ್ಯಾಪ್‌ಟಾಪ್, ಇತ್ಯಾದಿಗಳಿಂದ ವಿರಾಮ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ, ತಂತ್ರಜ್ಞಾನದ ವ್ಯಸನವು ವ್ಯಕ್ತಿಗಳಲ್ಲಿ ಹೆಚ್ಚು ಒತ್ತಡವನ್ನು ಉಂಟುಮಾಡುತ್ತದ ಮತ್ತು ಈ ವ್ಯಸನಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆಗಿನ ಸಂಶೋಧನೆಯನ್ನು ಉಲ್ಲೇಖಿಸುವ ಡಾ|| ಶಶಿಧರ್, ಡಿಜಿಟಲ್ ವ್ಯಸನ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಫ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

– MANASA HOSPITAL B.H ROAD, Gauribidanur-561208, Chikkaballapur Dist., Mob: 9945619067

City Today News – 9341997936

ದಲಿತ ರೈತರ ಹೋರಾಟ

ಪ್ರಪಂಚದಲ್ಲೇ ಅತ್ತಿವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಸಿಲಿಕಾನ್ ಮತ್ತು ಐ.ಟಿ ಬಿಟಿ ಸಿಟಿಯಾಗಿದೆ. ಜೊತೆಗೆ ಭೂಮಿಯ ಬೆಲೆಯು ಸಹ ಚಿನ್ನದ ಬೆಲೆಗಿಂತ ಅಧಿಕವಾಗಿದೆ ಹಾಗೆಯೇ ಬಡವರನ್ನು ಯಾಮಾರಿಸಿ ಭೂಮಿಯನ್ನು ಕಬಳಿಸುವವರ ಸಂಖ್ಯೆಯು ಹೇರಳವಾಗಿದೆ. ಇಂತಹ ಪರಿಸ್ಥಿಯಲ್ಲಿ ದಲಿತ ರೈತರು ಬೆಂಗಳೂರು ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾಡುಗೋಡಿ ಪ್ಲಾಂಟೇಶನ್ ಗ್ರಾಮದಲ್ಲಿ ಕಳೆದ 74 ವರ್ಷಗಳ ಹಿಂದೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಜೀತಪದ್ಧತಿಯಲ್ಲಿದ್ದ ದಲಿತ ಕುಟುಂಬಗಳನ್ನು ಸರ್ಕಾರವೇ ಗುರುತಿಸಿ ಪ್ರತಿ ಕುಟುಂಬಕ್ಕೆ ತಲಾ 5 ಎಕರೆ ಕೃಷಿ ಭೂಮಿ ಮತ್ತು 40X50) ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಿರುತ್ತಾರೆ. ಜೊತೆಗೆ ದಲಿತ ರೈತರ ಹೆಸರಿಗೆ ಕಂದಾಯ ಇಲಾಖೆಯಿಂದ ಪಹಣಿ ನೀಡಿ ಭೂಮಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಕಂದಾಯವನ್ನು ಸಹ ವಸೂಲಿ ಮಾಡಿರುತ್ತಾರೆ.

ತದನಂತರ 1981-82 ರಲ್ಲಿ ಸದರಿ ರೈತರ ಬಳಿಯಿದ್ದ ಸ್ವಲ್ಪ ಪ್ರಮಾಣದ (385 ಎಕರೆ) ಭೂಮಿಯನ್ನು ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿಯಿಂದ ತಲ್ಲಾ ಎಕರೆ ಭೂಮಿಗೆ 30,000/- ರೂಗಳಂತೆ ದಲಿತ ರೈತರಿಗೆ ಪರಿಹಾರವನ್ನು ನೀಡಿ ಭೂಮಿಯನ್ನು ತೆಗೆದುಕೊಂಡಿರುತ್ತಾರೆ. ಸದರಿ ಭೂಮಿಯಲ್ಲಿ ಭಾರತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗು ಖಾಸಗಿ ಕೈಗಾರಿಕೆಗಳು ಕಾರ್ಯಾರಂಭ ಮಾಡುತ್ತದೆ.

385 ಎಕರೆ ಹೊರತುಪಡಿಸಿ ಉಳಿದಿರು ಸುಮಾರು 150 ಎಕರೆ ಭೂಮಿಯಲ್ಲಿ ದಲಿತ ರೈತರು ಇಂದಿಗೂ ವ್ಯವಸಾಯದ ಕುರಿ, ಮೇಕೆ ಹಾಗು ದನಗಳ ಸಾಕಾಣಿಕೆಯಿಂದ ಹಾಲಿನ ವ್ಯಾಪಾರದೊಂದಿಗೆ ಜೀವನ ನಡೆಸುತ್ತಿದ್ದಾರೆ. ಈ ನಡುವೆ ಬೃಹತ್ ಬೆಂಗಳೂರು: ಮೇಟೋ ನಿಗಮದವರು ಸುಮಾರು 49 ಎಕರೆ ಭೂಮಿಯನ್ನು ಸ್ವಾಧಿನಪಡಿಕೊಳ್ಳುವ ಸಂದರ್ಭದಲ್ಲಿ ಭೂಮಿ ಕಳೆದುಕೊಳ್ಳುವ ದಲಿತ ರೈತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಎರಡು ವರ್ಷಗಳು ಕಳೆದರು. ಭೂಮಿ ಕಳೆದುಕೊಂಡ ರೈತರಿಗೆ ಒಂದು ಬಿಡಿಗಾಸಿನ ಪರಿಹಾರವು ದೊರೆತಿಲ್ಲ. ಇದರಿಂದಾಗಿ 24 ದಲಿತ ಕುಟುಂಬಗಳು ಕೃಷಿ ಮಾಡುತ್ತಿದ್ದ ಭೂಮಿಯನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.

ಇನ್ನೂಳಿದ ಕೃಷಿ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಸರ್ಕಾರದ ಕೆಲವು ಸಂಸ್ಥೆಗಳ ಹೆಸರಿನಲ್ಲಿ ಸ್ವಾಧಿನಪಡಿಸಿಕೊಂಡು ತದನಂತರ ಖಾಸಗೀಯವರಿಗೆ ಮಾರಾಟ ಮಾಡುವ ಉನ್ನಾರ ನಡೆಯುತ್ತಿದೆ. ಇಂತಹ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಗ್ರಾಮದ ದಲಿತ ರೈತರು ಹೋರಾಟ ಸಮಿತಿಗಳನ್ನು ರಚಿಸಿಕೊಂಡು ಹಲವು ವರ್ಷಗಳಿಂದ ನ್ಯಾಯಾಕ್ಕಾಗಿ ಹೋರಾಟಗಳನ್ನು ಮಾಡುತ್ತಿದೆ. ಈ ರೀತಿಯಲ್ಲಿ ಹೋರಾಟಗಳನ್ನು ಮಾಡುವ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿಯವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ತಮ್ಮ ಭೂಮಿ ಮತ್ತು ನಿವೇಶನಗಳಿಗೆ ಹಕ್ಕುಪತ್ರ ವಿತರಣೆ ಮಾಡಿಸುವುದಾಗಿ ಹಲವು ಭಾರಿ ಭರವಸೆಗಳನ್ನು ನೀಡಿರುತ್ತಾರೆ.

ಇದೀಗ ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 5 ವರ್ಷಗಳು ಕಳೆದರು ಮಾನ್ಯ ಶಾಸಕರು ನಮ್ಮ ದಲಿತ ರೈತರ ಸಮಸ್ಯೆಗಳನ್ನು ಪರಿಹಾರಿಸಲು ಯಾವುದೇ ಕ್ರಮವಹಿಸದಿರುವುದು ದಲಿತ ವಿರೋಧಿ ನೀತಿಯಾಗಿದೆ. ದಲಿತ ರೈತರ ಸ್ವಾಧಿನಾನುಭವದಲ್ಲಿರುವ ಭೂಮಿಗಳನ್ನು ಯಾವುದೇ ಪರಿಹಾರವಿಲ್ಲದೆ ಕಬಳಿಸುವ ಜೊತೆಗೆ ದಲಿತರನ್ನು ಮತ್ತಷ್ಟು ಶೋಷಣೆ ಮಾಡುವ ಸರ್ಕಾರದ ಹಾಗು ಶಾಸಕರ ನಡೆಯನ್ನು ಖಂಡಿಸಿ ಕಾಡುಗೋಡಿ ಪ್ಲಾಂಟೇಶನ್ ಗ್ರಾಮದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಕಳೆದ 365 ದಿನಗಳಿಂದ ನಿರಂತರ ಧರಣಿ ಸತ್ಯಗ್ರಹ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಧರಣಿ ನಿರತ ಸ್ಥಳಕ್ಕೆ ಮಾನ್ಯ ಶಾಸಕರು ಆಗಮಿಸಿ ಮನವಿಯನ್ನು ಸ್ವೀಕರಿಸಬೇಕೆಂದು ಕೋರಿ ಪತ್ರದ ಮೂಲಕ ಮನವಿ ಸಲ್ಲಿಸಿದರು ಸಹ ಮಾನ್ಯ ಶಾಸಕರು ದಲಿತ ರೈತರ ಕಡೆ ಮುಖ ಮಾಡಲಿಲ್ಲ. ಇಂತಹ ನಡವಳಿಕೆಯನ್ನು ಖಂಡಿಸಿ ಮುಂದಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿರುವ ದಲಿತ, ರೈತ, ಪ್ರಗತಿಪರ ಸಂಘಟನೆಗಳೊಂದಿಗೆ ಚರ್ಚಿಸಿ ಮತ್ತಷ್ಟು ಹೋರಾಟಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಇತರೆ ಪ್ರದೇಶಗಳ ಜನಸಮಾನ್ಯರಿಗೆ ವಿಚಾರವನ್ನು ಸಲುವಾಗಿ ಬೆಂಗಳೂರಿನ ಪ್ರಸ್‌ಕ್ಲಬ್ ನಲ್ಲಿ ಪತ್ರಿಕ ಗೋಷ್ಟಿಯನ್ನು ಕರೆಯಲಾಗಿ ಮುನೇಂದ್ರ .ಪಿ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

60 ಲಕ್ಷ ಜನಸಂಖ್ಯೆ ಹೊಂದಿರುವ ವಾಲ್ಮೀಕಿ ನಾಯಕ ಜನಾಂಗಕ್ಕೆ ಸಾಮಾನ್ಯ ಕ್ಷೇತ್ರಗಳಲ್ಲಿ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಕುರಿತು.

ಈ ಮೂಲಕ ತಮ್ಮಲ್ಲಿ ವಿನಂತಿ ಮಾಡುವುದೇನೆಂದರೆ, ವಾಲ್ಮೀಕಿ ನಾಯಕ ಜನಾಂಗವು ಕರ್ನಾಟಕದಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವುದು ತಮಗೆಲ್ಲರಿಗೂ ತಿಳಿದಿರುವುದು ಸರಿಯಷ್ಟೇ. ಆದರೆ ಎಸ್.ಟಿ. ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಸಾಮಾನ್ಯ ಕ್ಷೇತ್ರಗಳಲ್ಲಿಯೂ ಸಹ ನಿರ್ಣಾಯಕ ಮತದಾರರ ಸಂಖ್ಯೆ ಹೊಂದಿರುತ್ತೇವೆ. ಆದ್ದರಿಂದ ತಾವುಗಳು ಮುಂಬರುವ ವಿಧಾನಸಭಾ ಚುನಾವಣೆಗೆ ನಮ್ಮ ಜನಾಂಗದ ಅಭ್ಯರ್ಥಿಗಳಿಗೆ ಪ್ರಾಶಸ್ತ್ರ ಕೊಟ್ಟು ತಮ್ಮ ಪಕ್ಷದ ವತಿಯಿಂದ ಸಾಮಾನ್ಯ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇವೆ. ರಾಜ್ಯದಲ್ಲಿ ವಾಲ್ಮೀಕಿ ನಾಯಕ ಜನಾಂಗವು ಸುಮಾರು 80 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಅಭ್ಯರ್ಥಿಯ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲದು. ಆದ್ದರಿಂದ ಎಲ್ಲ ಪಕ್ಷಗಳಿಂದಲೂ ತಾವುಗಳು ನಮ್ಮ ಜನಾಂಗರ ಅಭಿವೃದ್ಧಿಗಾಗಿ ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ತಮ್ಮ ತಮ್ಮ ಪಕ್ಷದಿಂದ ಅವಕಾಶ ಮಾಡಿಕೊಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.

ತಾವುಗಳು ನಮ್ಮ ಜನಾಂಗದ ಅಭ್ಯರ್ಥಿಗಳಿಗೆ ಸಾಮಾನ್ಯ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಿದಲ್ಲಿ ನಾವುಗಳು ರಾಜ್ಯಾದ್ಯಂತ ತಮ್ಮ ಪಕ್ಷಕ್ಕೆ ಬೆಂಬಲ ಸಿಗಲಿದೆ. ಆದ್ದರಿಂದ ನಮ್ಮ ಈ ಮನವಿಯನ್ನು ಪರಿಗಣಿಸಿ ನಮ್ಮ ಸಮಾಜದ ಅಭಿವೃದ್ಧಿಗೆ ಇದೊಂದು ಸುವರ್ಣಾವಕಾಶ ಎಂದು ಭಾವಿಸಿ ಸಾಮಾನ್ಯ ಕ್ಷೇತ್ರಕ್ಕೆ ನಮ್ಮ ಜನಾಂಗದ ಆಕಾಂಕ್ಷಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕಾಗಿ ಕೋರಲಾಗಿದೆ.

– ಜಿ.ಟಿ. ಚಂದ್ರಶೇಖರಪ್ಪ ರಾಜ್ಯಾಧ್ಯಕ್ಷರು

– ಕೆಂಪರಾಮಯ್ಯ ಪ್ರಧಾನ ಕಾರ್ಯದರ್ಶಿಗಳು

City Today News – 9341997936

ಅಹಿಂಸಾ ಚೇತನ್ ಅವರ ನ್ಯಾಯಸಮ್ಮತವಲ್ಲದ ಬಂಧನದ

ಅಹಿಂಸಾ ಚೇತನ್ ಅವರ ನ್ಯಾಯಸಮ್ಮತವಲ್ಲದ ಬಂಧನದ ಬಗ್ಗೆ ಪತ್ರಿಕಾ ಗೋಷ್ಠಿ

ಶ್ರೀ ಅಹಿಂಸಾ ಚೇತನ್ ಅವರು ರೈತರು, ಕಾರ್ಮಿಕರು, ದಲಿತರು ಮತ್ತು ಆದಿವಾಸಿಗಳ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರೊಬ್ಬ ಕನ್ನಡ ಪರ ನಿಲುವು ಹೊಂದಿರುವ ಸಮಾಜವಾದಿ, ಲಿಂಗಾಯತ ಸ್ವತಂತ್ರಧರ್ಮದ ಹೋರಾಟದ ಧ್ವನಿಯಾಗಿದ್ದಾರೆ. ಅವರನ್ನು ಕ್ಷುಲಕ ನೆಪದಿಂದ ಕೇಂದ್ರ ಕಾರಾಗೃಹದಲ್ಲಿ ಬಂಧಿಸಿಟ್ಟುರುವುದು ನ್ಯಾಯಸಮ್ಮತವಲ್ಲದ ಕಾರಣ ಅದನ್ನು ವಿರೋಧಿಸಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಹಾಗೂ ಕರ್ನಾಟಕ ಬೌದ್ಧ ಸಮಾಜ, ಬಹಳ ಉಗ್ರವಾಗಿ ಖಂಡಿಸುತ್ತವೆ.

ಶ್ರೀ ಅಹಿಂಸಾ ಚೇತನ್ ಅವರು ನಾಡಿನ ಹಲವಾರು ಅಸಮಾನತೆಯ ಪರ ಧ್ವನಿ ಎತ್ತುವ ಮೂಲಕ ಹೋರಾಟವನ್ನು ಮಾಡುವುದು ಸಮಾಜದ ಹಿತದೃಷ್ಟಿಯಿಂದಲೇ ಹೊರತು ವೈಯಕ್ತಿಕ ಹಿತದೃಷ್ಟಿಯಿಂದಲ್ಲ. ಭಾರತದ ಸಂವಿಧಾನದ ಅಡಿಯಲ್ಲಿ ತಮ್ಮ ತಮ್ಮ ಚಿಂತನೆಗಳನ್ನು ಅಭಿವ್ಯಕ್ತಗೊಳಿಸುವ ಸ್ವಾತಂತ್ರ್ಯ ಪ್ರತಿಯೊಬ್ಬ ಪ್ರಜೆಗೂ ಇದೆ. ಹೀಗಿರುವಾಗ ಚೇತನ್ ಬಂಧನ ಉದ್ದೇಶಪೂರ್ವಕವಾಗಿ ಆಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಅನ್ಯಾಯದಿಂದ ಅವರನ್ನು ಬಂಧಿಸಿರುವುದನ್ನು ನಾವು ಖಂಡಿಸುತ್ತೇವೆ. ಅವರನ್ನು ಈ ಕೂಡಲೆ ಬಿಡುಗಡೆ ಮಾಡಬೇಕೆಂದು ನಮ್ಮೆಲ್ಲ ಸಂಘಟನೆಗಳ ಪರವಾಗಿ ಹಕ್ಕೊತ್ತಾಯವನ್ನು ಮಂಡಿಸುತ್ತಿದ್ದೇವೆ. ಸಮಾಜಪರ ಕಾಳಜಿ ಹೊಂದಿರುವ ಚೇತನ್ ಅವರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ನಾವು ಈ ಮೂಲಕ ತಿಳಿಸುತ್ತಿದ್ದೇವೆ.

ಈ ಹೋರಾಟಕ್ಕೆ ಬೆಂಬಲಿತ ಸಂಸ್ಥೆಗಳ ದೂರವಾಣಿ ಸಂಪರ್ಕಗಳು :

ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಬೆಂಗಳೂರು ಜಿಲ್ಲೆ, ಅಧ್ಯಕ್ಷರು, ಕರ್ನಾಟಕ ಬೌದ್ಧ ಸಮಾಜ, ಬಸವಪರ ಸಂಘಟನೆಗಳು, ದಲಿತಪರ ಸಂಘಟನೆಗಳು

9342510286, 9738467983, 9845530982, 9663205083, 9448119652, 9986283922, 9880447829.

ಪ್ರೊ. ವೀರಭದ್ರಯ್ಯ ಅಧ್ಯಕ್ಷರು 9448119652

City Today News – 9341997936

Amy Taylor Alpers to Conduct Pilates Training in Bengaluru

Bengaluru, India – March 24th, 2023 – Amy Taylor Alpers, a second-generation Pilates teacher and co-founder of The Pilates Centre in Colorado, will be visiting India to share her expertise at an Introductory Classical Pilates Workshop in Bengaluru on March 25, 2023. This will be the first time that a teacher of her caliber will visit India to promote the practice of Pilates.

Amy Alpers trained under Romana Kryzanowska, Joseph Pilates protege and inheritor of his studio in New York City. Globally recognized as one of the torchbearers of Classical Pilates, she has maintained the integrity of the original movement practice and inspires others to become teachers.

According to a recent fitness report, Pilates has seen a 38% increase in popularity as people look to incorporate it into their fitness routines. Pilates provides numerous benefits for the mind and body, making it an ideal form of exercise for the busy and stressful lifestyles of today.

Amy trained directly under Romana Kryzanowska, a disciple of Joseph Pilates, who founded the discipline. With over 35 years of teaching and mentoring students worldwide, Amy is highly regarded in the Pilates community. In addition to the introductory workshop at the Courtyard Community Centre, she will teach other Pilates-based well-being workshops and lessons at Pilates for Wellbeing.

This event coincides with the launch of India’s first Classical Pilates Teacher Training Academy by Kavita Prakash, the only licensed teacher trainer for the Pilates Centre in Asia. The workshop will cover the benefits of Pilates for the mind and body, including its potential to combat depression and stress. It is suitable for people of all ages, from 10 to 100, including new age working professionals.

Tickets are available on: http://www.bookmyshow. com


Where: The Courtyard Community Centre Bangalore

Date: March 25, 2023.

Time: 10.30am


Contact  95389 99967

City Today News – 9341997936