ನೂತನ ಸಂಸತ್‌ ಭವನಕ್ಕೆ ‘ಅನುಭವ ಮಂಟಪ’ ನಾಮಕರಣಕ್ಕೆ ಒಕ್ಕೊರಲ ಅಗ್ರಹ

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತನ್ನ ಐದು ವರ್ಷಗಳ ಯಶಸ್ವಿ ಹೋರಾಟದ ಹಾದಿ ಸವೆಸಿದ್ದು ಇತ್ತೀಚೆಗಷ್ಟೆ ‘ಪಂಚ ಸಂಭ್ರಮ'” ಕಾರ್ಯಕ್ರಮ ಅರಿಸಿತು. ಈ ಐದು ವರ್ಷಗಳ ಅವಧಿಯಲ್ಲಿ ಹತ್ತಾರು ಸಮಾಜವರ ಹೋರಾಗಳಲ್ಲಿ ಸಂಘಟನೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದರಲ್ಲಿ ಪ್ರಮುಖವಾದದ್ದು ಅನುಭವ ತುಂಟಪದ ವಿಚಾರ 12ನೇ ಶತಮಾನದಲ್ಲಿಯೇ ಜಗಜ್ಯೋತಿ ಬಸವೇಶ್ವರರು ಸ್ಥಾಪಿಸಿದ್ದ ಮತ್ತು ಇಡೀ ಜಗತ್ತಿಗೆ ಅನುಭವ ಮಂಟಪದ ಮುಖೇನ ಮೊಟ್ಟಮೊದಲ ಬಾರಿಗೆ ಪ್ರಜಾಪ್ರತಿನಿಧಿ ಸಂಸತ್ ವ್ಯವಸ್ಥೆಯನ್ನು ಪರಿಚಯಿಸಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಿರ್ಮಾಣವಾಗಿರುವ ನೂತನ ಸಂಸತ್ ಭವನಕ್ಕೆ ‘ಅನುಭವ ಮಂಟಪ’ ಎಂದು ನಾಮಕರಣ ಮಾಡಬೇಕೆಂದು ಸಮಸ್ತ ಕನ್ನಡಿಗರ ಪರವಾಗಿ ನಮ್ಮ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಒತ್ತಾಯಿಸುತ್ತದೆ. ಈ ಸಂಬಂಧ ಈಗಾಗಲೇ ವೇದಿಕೆ ಸಾಕಷ್ಟು ಮುಂದಡಿ ಇಟ್ಟಿದೆ ವಿವಿಧ ಮಠಾಧೀಶರು, ವಿವಿಧ ಸಮಾಜಗಳ ಮುಖಂಡರು ಸೇರಿದಂತೆ ಸಮಗ್ರ ದೃಷ್ಟಿಯಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡಿದೆ. ಕಳೆದ ಕೆಲವು ದಿನಗಳ ಹಿಂದೆ ಖುದ್ದು ನವದೆಹಲಿಗೆ ತೆರಳಿ ಹಲವು ಮಂದಿ ಕೇಂದ್ರ ಸಚಿವರು, ಕರ್ನಾಟಕದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರು ಹಾಗೂ ಬಸವತತ್ವ ಪಾಲನೆಯ ವಿವಿಧ ರಾಜ್ಯಗಳ ಸಂಸದರಿಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮನವಿ ಪತ್ರ ನೀಡಿದ್ದು, ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ’ ಎಂದು ಹೆಸರಿಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಒತ್ತಾಯಿಸಿದೆ.

ಬಸವಣ್ಣ ಅವರ ಬಗ್ಗೆ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಹತ್ತಾರು ಬಾರಿ ಅನೇಕ ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಬಸವೇಶ್ವರರ ಸಮಾನತೆ, ಜಾತ್ಯತೀತ ಪರಿಕಲ್ಪನೆ, ಕೆಳವರ್ಗದ ಬಗ್ಗೆ ಅವರಿಗಿದ್ದ ಕಾಳಜಿ ಎಲ್ಲವೂ ಇಂದಿಗೂ ಪ್ರೇರಣೆ ಎಂದು ಪ್ರಶಂಶಿಸಿದ್ದಾರೆ. ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಖುದ್ದು ಬಸವಣ್ಣ ಅವರ ವಚನ ಪ್ರಸ್ತಾಪಿಸಿ ನಮ್ಮ ಆಡಳಿತಕ್ಕೆ ಬಸವಣ್ಣ ಅವರೇ ಆದರ್ಶ ಎಂದಿದ್ದಾರೆ. ಇದನ್ನು ವೇದಿಕೆ ಶ್ಲಾಘಿಸುತ್ತದೆ. ಬಸವೇಶ್ವರರ ಬಗ್ಗೆ ಇಷ್ಟೆಲ್ಲಾ ಗೌರವ ಭಾವನೆ ಹೊಂದಿರುವ ಹಿನ್ನೆಲೆಯಲ್ಲಿ ಹಾಗೂ ಜಗತ್ತಿಗೆ ಸಂಸತ್ ವ್ಯವಸ್ಥೆ ಪರಿಚಯಿಸಿದ ಅವರ ಕಾಯಕ ಸ್ಮರಣೆ ಮತ್ತು ಆದರ್ಶಗಳು ಶಾಶ್ವತವಾಗಿ ಮುಂದಿನ ಪೀಳಿಗೆಗೂ ಪರಿಚಯವಾಗಲು ನೂತನ ಸಂಸತ್ ಭವನಕ್ಕೆ `ಅನುಭವ ಮಂಟಪ’ ಎಂದು ನಾಮಕರಣ ಮಾಡುವುದು ಪ್ರಸ್ತುತ ಮತ್ತು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟಕ್ಕೆ ಕನ್ನಡನಾಡಿದ ಏಳೂವರೆ ಕೋಟಿ ಜನರು ಒಂದೇ ಧ್ವನಿಯಾಗಿ ನಿಲ್ಲಬೇಕಿದೆ.

ಈ ನಿಟ್ಟಿನಲ್ಲಿ ಕರ್ನಾಟಕದ ಅಡಳಿತಾರೂಢ ಬಿಜೆಪಿ ಸರ್ಕಾರ ಈ ಸಂಬಂಧ ಕೂಡಲೇ ಸಚಿವಸಂಪುಟದಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಜಾತ್ಯತೀತ ಜನತಾದಳ ಸಹಿತ ಇತರ ಎಲ್ಲ ರಾಜಕೀಯ ಪಕ್ಷಗಳು, ಎಲ್ಲ ಸಮುದಾಯಗಳ ಮಠಾಧೀಶರು, ಸಮಾಜಗಳ ಮುಖಂಡರು, ಕನ್ನಡಪರ, ರೈತವರ, ವಿವಿಧ ಸಮುದಾಯಪರ, ನಾಡಪರ ಎಲ್ಲ ಸಂಘಟನೆಗಳು, ವಿವಿಧ ಕ್ಷೇತ್ರಗಳ ಗಣ್ಯರು ನಮ್ಮ ಸಂಘಟನೆಗೆ ಜೊತೆಯಾಗಿ ನಿಂತು ನಮ್ಮ ಹೋರಾಟಕ್ಕೆ ಬಲ ನೀಡುವಂತೆ ಈ ಮೂಲಕ ಕಳಕಳಿಯ ಮನವಿ ಮಾಡುತ್ತೇವೆ.ಎಂದು ಪ್ರದೀಪ ಕಂಕನವಾಡಿ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಈ ಸಂಧರ್ಬದಲ್ಲಿ ಡಾ. ವಿಕ್ರಮ್‌ ಶಿವಪ್ಪ, ಸಂಜಯ ಹೋಸಮಠ, ಗಂಗಾಧರ ಶಾಸ್ತ್ರೀ ಜೊತೆಗಿದ್ದರು.

City Today News – 9341997936

WATCHO Exclusives premieres crime thriller series, “EXPLOSIVE”

New Delhi, 02 March 2023: WATCHO, one of the fastest-growing OTT platforms by India’s leading content distribution company -Dish TV India Limited – today announced the premiere of the original crime thriller series- EXPLOSIVE. The show’s intriguing plot and compelling characters make it an ideal blend of mystery, suspense, drama, and excitement that will appeal to fans of the crime thriller genre. 

Set in the streets of Mumbai, “EXPLOSIVE” is a character-driven crime thriller that culminates in an unexpected yet cohesive resolution. The story revolves around a girl named Kiran who mistakenly enters a car filled with explosives driven by a terrorist named Neerav. The series follows Kiran and the police as they attempt to prevent a series of bombings in the city. While the police manage to apprehend two of the terrorists, the fate of the third remains unknown. Will the girl be able to save the city and millions of lives? To find out, viewers can tune in to WATCHO Exclusives. 

The series is produced by Rudrakshnam Films led by Tanishq Raj and Jagriti Rajpoot. Shaurya Singh skillfully directs the tightly written story, while Avaninder Kushwaha’s heart-throbbing background music complements the plot. Nibedita Paul, Manmohan Tiwari, and Sachin Verma deliver lively performances as Kiran, Neerav, and Inspector Tejas, respectively.Commenting on the launch, Mr. Sukhpreet Singh, Corporate Head – Marketing, DishTV & WATCHO, Dish TV India Ltd., said, “EXPLOSIVE is a story with amazing characters and an unexpected plot that keeps viewers hooked to the screen. The author has skilfully woven the story with reveals and twists that keep the tension high. The plot provides a comprehensive view of each character’s role in the series. We have received a tremendous response from our viewers on our previous crime thrillers. We anticipate the same success with “EXPLOSIVE.” This new addition to the crime thriller genre strengthens WATCHO’s content offering which is amazingly diversified and caters to our customers across the country.”

City Today News – 9341997936

Running with a mission to spread awareness towards Mental health Belenus Champion Hospital teams up with TREDASarjapur by organising a marathon to promote Mental health awareness

Bengaluru March 02, 2023: Belenus Champion Hospital, Sarjapur and Treatment Rehabilitation and Education of Drug Abuse (TREDA), Sarjapur teamed up and organised a marathon to spread Mental health awareness. The marathon was flagged off by Dr. Nataraj HM, Sr Consultant- HOD Dept of Orthopaedics, Belenus Champion Hospital at Government Public Ground next to Krupanidhi Nursing College, Gunjur.
As per an estimate reported by the World Health Organisation (WHO), out of every eight individuals in the world suffers from mental disorder. This constituted a staggering 15 percent of all of the world’s disease burden. Mental health is very prevalent in our society and the aftermath of Covid-19 pandemic has only worsened the situation.

The event witnessed a participation of 600 marathon runners along with 500 other participants. The marathon runners choose to be mental health warriors who are determined to control both mental and physical health while also breaking barriers around the stigma associated with mental health in Indian society.
While addressing the crowd, Dr. Lingaraju G, General Manager TREDA said,” There is an urgent need to address the mental health crisis in the country with utmost urgency and prudence. There is a need to increase awareness, sensitisation and emphasis on laws, schemes, policies and government programs to the citizens”.
Dr. Manjunath H., founder of Belenus Champion Hospital said, “the marathon was organised as a part of our efforts to spread awareness about mental health among the people. Through the marathon, we aim to educate others about running for mental health, raise mental health awareness and provide engagement to others.
He further added, “Running is a great way to alleviate depression, relieve stress and lower blood pressure. We choose this platform to promote exercise while also raising awareness for mental health initiatives”.

The organisers also arranged a mela along with the marathon which had various food stalls, clothing stores and accessories for participants and other outsiders. There was a kids play area set up for children.
About Belenus Champion Hospital
Belenus Champion Hospital located at Sarjapura Road, Bengaluru, is a super-specialty healthcare facility with cutting-edge technology and innovative infrastructure and services. The two hundred bedded facility aims to provide advanced healthcare services to the people in the comfort of a known environment without having to explore other parts of the world. The Hospital has 75 committed and passionate first-class doctors, 400 well-trained paramedics in more than 30 departments. This multispecialty facility houses several centres for clinical excellence that caters to the functions of Cardiac Science, Pulmonology, Orthopedics, Gastrointestinal Science, Neurology, Obstetrics and Gynecology, Pediatric and Child Care, Nephrology, Oncology, Urology, Diabetic & Endocrinology, Anesthesia, Rehabilitation Science, Cosmetic and Reconstruction.

City Today News – 9341997936

ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಸಚಿವ ಅಶ್ವಥ್‌ ನಾರಾಯಣ ಈ ಕೂಡಲೇ ಬಂಧಿಸಲು ಒತ್ತಾಯಿಸಿ ಶೀಘ್ರದಲ್ಲೆ ಶೋಷಿತ ಸಮುದಾಯಗಳ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ನಿರ್ಧಾರ

ಚಾತುರ್ವಣ್ರ ಪದ್ಧತಿಯಲ್ಲಿ ಶೂದ್ರರು ಅಂದರೆ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಅತ್ಯಂತ ಕೆಳವರ್ಣದವರಾಗಿದ್ದಾರೆ. ಧರ್ಮಸೂತ್ರಗಳು, ಸ್ಮೃತಿಗಳು ಒಬಿಸಿಗಳನ್ನು ಪಾಣಿಗಳಿಗಿಂತಲೂ ಕಡೆಯಾಗಿ ಕಾಣುತ್ತವೆ. ವ್ಯವಸಾಯ ಮಾಡುವ ಒಕ್ಕಲಿಗರನ್ನು ಮನುಸ್ಮೃತಿಯು ದುರ್ಜನರೆಂದು ಕರೆಯುತ್ತದೆ. ಒಬಿಸಿ, ದಲಿತರು ಹಾಗೂ ಮಹಿಳೆಯರನ್ನು ಕೀಳಾಗಿ ಕಾಣುವ ಇಂತಹ ಚಾತುರ್ವಣ್ರ ಧರ್ಮವನ್ನು ಮತ್ತೆ ಸ್ಥಾಪನೆ ಮಾಡಲು ಬಿಜೆಪಿ-ಆರ್.ಎಸ್.ಎಸ್. ಹವಣಿಸುತ್ತಿದೆ. ಇದನ್ನು ಸಾಧಿಸಲು ದಲಿತರ ವಿರುದ್ಧ ಒಬಿಸಿಗಳನ್ನು, ಕ್ರೈಸ್ತರು-ಮುಸ್ಲಿಮರ ವಿರುದ್ಧ ದಲಿತರು ಒಬಿಸಿಗಳನ್ನು ಎತ್ತಿಕಟ್ಟುವಲ್ಲಿ ಯಶಸ್ವಿಯಾಗಿದೆ. ಇದರ ಭಾಗವಾಗಿಯೇ ಹಲವು ರಾಜ್ಯಗಳಲ್ಲಿ ತನ್ನ ಓಟ್ ಬ್ಯಾಂಕ್‌ ರಾಜಕಾರಣವನ್ನು ಗಟ್ಟಿ ಮಾಡಿಕೊಂಡಿದೆ. ಈ ಪ್ರಕ್ರಿಯೆ ಕರ್ನಾಟಕಕ್ಕೂ ಬಂದು ಬಹಳ ವರ್ಷವಾಯಿತು. ಮುಂಬರುವ ಚುನಾವಣೆಯಲ್ಲಿ ಮತ್ತೆ ಕನ್ನಡಿಗರನ್ನು ಒಡೆದು ಆಳಲು ಬಿಜೆಪಿ-ಆರ್.ಎಸ್.ಎಸ್. ದಲಿತರ ವಿರುದ್ಧ ದಲಿತರು, ಓಸಿಗಳ ವಿರುದ್ಧ ಒಬಿಸಿಗಳನ್ನು ಎತ್ತಿ ಕಟ್ಟುವ ಉತ್ತರಭಾರತದ ಮಾದರಿಯನ್ನು ಕರ್ನಾಟಕದಲ್ಲಿ ಪಯೋಗಿಸಲು ಸಜ್ಜಾಗಿದೆ. ದಲಿತ ಹಿಂದುಳಿದ ಸಮುದಾಯಗಳ ಸಂವಿಧಾನಕಿ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಇಡಬ್ಲೂಎಸ್ ಜಾರಿ ಮಾಡುವ ಮೂಲಕ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯವನ್ನು ಅಪವ್ಯಾಕ್ಯಾನ ಮಾಡಲಾಗಿದೆ. ಸಂವಿಧಾನದ ಮೂಲ ಆಶಯಗಳನ್ನು ತಿರುಚಿ, ಬದಲಾಯಿಸುವ ಹುನ್ನಾರಗಳನ್ನು ಬಿಜೆಪಿ ನಡೆಸುತ್ತಿದೆ. ಇವುಗಳ ಮುಂದುವರಿಕೆಗಾಗಿ ಸಂವಿದಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಇರುವ ಜನ ನಾಯಕರನ್ನು ಅಪಮಾನಿಸುವ ಹೀಯಾಳಿಸುವ ಉದ್ದೇಶಿತ, ದುರುದ್ದೇಶಿತ ಕಾರಸೂಚಿಯನ್ನು ರೂಪಿಸಿಕೊಂಡಿದ್ದಾರೆ. ಹೀಗಾಗಿ ಈ ಪ್ರಯೋಗವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಹಾಲಿ ಉನ್ನತ ಶಿಕ್ಷಣ ಸಚಿವ ನಾರಾಯಣ ಕೊಲೆಯ ಬೆದರಿಕೆ ಹಾಕುವುದರಿಂದ ಆರಂಭವಾಗಿದೆ. ದಿನಾಂಕ:13-02-2023ರಂದು ಮಂಡ್ಯ ಜಿಲ್ಲೆಯ ಸಾತನೂರು ಗ್ರಾಮದ ಕಂಬದ ನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಮಹಾ ಶಕ್ತಿ ಕೇಂದ್ರದ ಸಭೆಯಲ್ಲಿ ಕರ್ನಾಟಕ ಸರ್ಕಾರದ ಉನ್ನತ ಸಚಿವರಾದ ಡಾ|ಆಶ್ವತ್ ನಾರಾಯಣ ರವು ರಾಜ್ಯದ ಅತ್ಯುನ್ನತ ಸರ್ವ ಸಮುದಾಯಗಳನ್ನು ಸಮಾನ ರೀತಿಯಲ್ಲಿ ಗೌರವಿಸುವ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ

ವಿರೋದ ಪಕ್ಷದ ನಾಯಕರಾದ ಸಿದ್ದರಾಮಯ್ಯನವರನ್ನು ಒಡೆದು ಹಾಕಬೇಕೆನ್ನುವ ಭಾಷಣ ಮಾಧ್ಯಮಗಳಲ್ಲಿ ವೈರಲ್ ಆದ ಸಾರಾಂಶ ಈ ಕೆಳಗಿನಂತಿದೆ. ಅಶ್ವಥ್ ನಾರಾಯಣ ಮಾತನಾಡುತ್ತಾ “ಮಂಡ್ಯದಿಂದಲೇ ಪ್ರಾರಂಭವಾಗಬೇಕು. ರಾಜಕೀಯ ದಿಕ್ಕೂಚಿ ಎಲ್ಲಿಂದ ಕಾಣಬೇಕು. ಆ ಕಾಣಂಗೇ ಮಾಡುತ್ತಿರಾ ತಾನೇ? ಇದನ್ನು ಮಾಡುತ್ತಿರಾ ಅಂಥ ಮತ್ತೊಮ್ಮೆ ಕೇಳಿಕೊಂಡು ಇಲ್ಲದೇ ಇದೇ, ಟಿಪ್ಪು ಹೆಸರನ್ನು ಹೇಳಿದರೆ ಸಿದ್ದರಾಮಯ್ಯನವರು ಬಂದು ಮಗಳು | ಬಿಡುತ್ತಾರೆ. ಟಿಪ್ಪು, ಟಿಪ್ಪು, ಟಿಪ್ಪು ಟಿಪ್ಪು ಬೇಕಾ ಸಾವರ್ಕರ್ ಬೇಕಾ, ಹಾಗಾಗಿ ಟಿಪ್ಪು ಸುಲ್ತಾನ್‌ನನ್ನ ಏಲ್ಲಿಗೆ ಕಳುಹಿಸಬೇಕು? ಹುರಿಗೌಡ ನಂಜೇಗೌಡ ಏನ್ ಮಾಡುದ್ರು? ಉರಿಗೌಡ, ನಂಜೇಗೌಡ ಏನ್ ಮಾಡುದ್ರು? ಅಂಗೇ ಇವರನ್ನು ಒಡೆದು ಹಾಕಬೇಕು. ಈ ರೀತಿ ಕಳುಹಿಸಿಕೊಡುವಂತೆ ಆಗಬೇಕು. ಈ ರೀತಿ ನಮ್ಮ ಪಕ್ಷವನ್ನು ಎದುರು ನೋಡಿ ಕೈಹಿಡಿರಿ ನಮ್ಮದನ್ನ ಕಾಪಾಡುವಂತಹದು ಭಾರತೀಯ ಜನತಾ ಪಾರ್ಟಿಯಿಂದ ಮಾತ್ರ ಸಾಧ್ಯ ಎಂದು ಕಾರ್ಯಕರ್ತರಿಗೆ ಸಾರ್ವಜನಿಕವಾಗಿ ಕರೆ ನೀಡಿದ್ದಾರೆ. ಸಿದ್ದರಾಮಯ್ಯನವರನ್ನು ಒಡೆದು ಹಾಕಬೇಕೆಂದು ಪ್ರಚೋದನಾ ಹೇಳಿಕೆ ನೀಡುವ ಮುಖಾಂತರ ಜನರನ್ನು ಎತ್ತಿ ಕಟ್ಟಿದ್ದಾರೆ. ಬಹಿರಂಗ ಸಭೆಯಲ್ಲಿಯೇ ‘ಸಿದ್ದರಾಮಯ್ಯನವರನ್ನು ಟಿಪ್ಪು ಮಾದರಿಯಲ್ಲಿ ಹೊಡೆದು ಹಾಕಬೇಕು’ ಎಂದು ಘಂಟಾಘೋಷವಾಗಿ ಹೇಳುವ ಮೂಲಕ ಉತ್ತರ ಭಾರತದ ಒಬಿಸಿಗಳನ್ನು ಒಡೆದು ಆಳುವ ಯಶಸ್ವೀ ಪ್ರಯೋಗವನ್ನು ಕರ್ನಾಟಕದಲ್ಲಿಯೂ ಪ್ರಯೋಗಿಸಲು ಮುಂದಾಗಿದೆ. ಮತ್ತೊಂದೆಡೆ ಶಾಸಕ ಹಾಗೂ ಬಿಜೆಪಿ ನಾಯಕ ಸಿ.ಟಿ.ರವಿ ಅವರನ್ನು ಪದೇ ಪದೇ ಹೀನಾಯ ಮಾತುಗಳ ಮೂಲಕ ಸನ್ಮಾನ್ಯ ಸಿದ್ದರಾಮಯ್ಯನವರನ್ನು ಅಪಮಾನಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿಗೆ ಹಾಲಿ ಬಿಜೆಪಿ ಸಚಿವನೊಬ್ಬ ಹಾಕಿರುವ ಕೊಲೆ ಬೆದರಿಕೆಯ ಇಡೀ ದೇಶವನ್ನು ಹೆಚ್ಚಿ ಬೀಳಿಸಬೇಕಿತ್ತು. ತತ್ ಕ್ಷಣ ಕಾರ್ಯಪ್ರವೃತ್ತರಾಗಿ ಅಶ್ವಥ್ ನಾರಾಯಣನನ್ನು ಮೋಲೀಸರು ಬಂಧಿಸಿ ಜೈಲಿಗಟ್ಟಬೇಕಿತ್ತು. ಪೋಲಿಸರು ಸ್ವಯಂಪ್ರೇರಿತ ಕೇಸು ದಾಖಲಿಸಿಕೊಳ್ಳಬೇಕಿತ್ತು. ಇದಕ್ಕಿಂತ ಹೆಚ್ಚಾಗಿ ಬಸವಣ್ಣ, ಕುವೆಂಪು, ಕನಕದಾಸರಂತಹ ಮಹಾಮಾನವರ ತವರೂರಾದ ಕರ್ನಾಟಕದ ಜನತೆಗೆ ಇಂತಹ ಕೊಲೆ ಬೆದರಿಕೆಗಳು ಕ್ರೂರವೆನಿಸಬೇಕಿತ್ತು. ಅಸಹ್ಯವೆನಿಸಬೇಕಿತ್ತು, ಆದರೆ ಇದಾವುದೂ ಆಗಿಲ್ಲ.

ಕರ್ನಾಟಕದ ರಾಜಕಾರಣ ಇಂತಹ ಹೀನ ಸ್ಥಿತಿಯನ್ನು ಎಂದಿಗೂ ಕಂಡಿರಲಿಲ್ಲ. ಕಳೆದ ಹತ್ತು ವರ್ಷಗಳ ಹಿಂದೆ ಭಾರತದ ಯಾವ ಪಕವು ಸಹ ಇಂತಹ ಕೀಳು ರಾಜಕಾರಣವನ್ನು ಮಾಡಿರಲಿಲ್ಲ. ಹೆಣ್ಣು ಮಕ್ಕಳನ್ನು ಶಾಲೆಗಳಿಗೆ ನಿಬಂಧಿಸುವುದರಿಂದ, ಅತ್ಯಾಚಾರಿಗಳನ್ನು ಬಿಡುಗಡೆ ಮಾಡುವುದು, ಒಂದಿಡೀ ಜನಾಂಗಕ್ಕೆ ‘ಗುಂಡು ಹೊಡೆಯಿರಿ’ ಎನ್ನುವುದರಿಂದ, ವ್ಯಾಪಾರದಲ್ಲಿ ಒಂದು ಜನಾಂಗವನ್ನು ನಿಬಂಧಿಸುವುದರಿಂದ ಚುನಾವಣೆಯಲ್ಲಿ ಓಟುಗಳನ್ನು ಹೆಚ್ಚಿಸಿಕೊಳ್ಳಬಹುದು ಎಂಬ ‘ಹೀನಾಯ ರಾಜಕಾರಣ’ ವನ್ನು ನಾವು ಹಿಂದೆಂದೂ ಕಂಡಿರಲಿಲ್ಲ. ಈಗ ಕಣ್ಣಾರೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲನಿಕ ಪಾತ್ರಗಳನ್ನು ಸೃಷ್ಟ ಮಾಡುವುದರ ಮೂಲಕ ಕರ್ನಾಟಕದ ಒಕ್ಕಲಿಗ ಸಮುದಾಯದ ಘನ ಅಸ್ಮಿತೆಯನ್ನೇ ಅಳಿಸಿ ಹಾಕುವ

ಹುನ್ನಾರಕ್ಕೂ ಬಿ.ಜೆ.ಪಿ.ಆರ್.ಎಸ್.ಎಸ್. ಕೈ ಹಾಕಿರುವುದು ದುರಂತದ ಸಂಗತಿಯಾಗಿದೆ. ಹಾಗಾಗಿ ‘ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ’ವು ಇಂತಹ ಜೀವವಿರೋಧಿ ನಡೆಗಳನ್ನು ತೀವ್ರವಾಗಿ ಖಂಡಿಸುತ್ತದೆ.

1. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ವಿರುದ್ಧ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಸಚಿವ ಅಶ್ವಥ್ ನಾರಾಯಣ ಅವರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಕೊಳ್ಳಬೇಕು. ತಕ್ಷಣ ಬಂಧಿಸಬೇಕು.

2. ಪದೇ ಪದೇ ಹೀನಾಯ ಮಾತುಗಳ ಮೂಲಕ ಮಾನ್ಯ ಸಿದ್ದರಾಮಯ್ಯನವರನ್ನು ಅಪಮಾನಿಸುತ್ತಿರುವ ಶಾಸಕ ಸಿ.ಟಿ.ರವಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು

3. ಇಲ್ಲಿಯವರೆಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳದೆ ನಿರ್ಲಕ್ಷವಹಿಸಿರುವ ಮಂಡ್ಯ ಪೋಲಿಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.

ಬಿಜೆಪಿ ಪರಿವಾರದ ಇಂತಹ ಕುತಂತ್ರಗಳನ್ನು ವಿರೋಧಿಸಿ ನಾಡಿನ ದಲಿತ, ಹಿಂದುಳಿದ ಅಲ್ಪ ಸಂಖ್ಯಾತ ಸಮುದಾಯಗಳು ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ಶೀಘ್ರದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗುವುದು.

ಬುದ್ಧ, ಬಸವ, ಕನಕ, ಅಂಬೇಡ್ಕರ್, ಕುವೆಂಪು ನೆಲದಲ್ಲಿ ದ್ವೇಷ ಬಿತ್ತುವುದನ್ನು ಖಂಡಿಸುತ್ತೇವೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ತಿಳಿಸಲಾಯಿತು.

ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕೆ.ಎಂ.ರಾಮಚಂದ್ರಪ್ಪ , ಪ್ರೋ.ಎಸ್.ವಿ.ನರಸಿಂಹಯ್ಯ, ಮಾವಳ್ಳಿ ಶಂಕರ್, ಡಾ.ಬಿ.ಟಿ.ಲಲಿತಾನಾಯಕ್‌, ಎಣ್ಣೆಗೆರ R. ವೆಂಕಟರಾಮಯ್ಯ, ಎನ್. ಅನಂತನಾಯ್ಕ,ಸುರೇಶ್ ಎಂ.ಲಾತೋರ್‌. ಉಪಸ್ತಿತರಿದ್ದರು.

City Today News – 9341997936

ರಾಷ್ಟ್ರೀಯ ಕಿಸಾನ್ ಸಮನ್ವಯ ಸಮೂಹ ಸಮಿತಿ ಸಭೆ 2, 3 &4 ರ ಮಾರ್ಚ, 2023 ರಂದು

ಕರ್ನಾಟಕ ರಾಜ್ಯದ ಕೇಂದ್ರ ಸ್ಥಾನದಲ್ಲಿರುವ ಗಾಂಧಿ ಭವನ ಬೆಂಗಳೂ‌, ನವಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಡೆಯಲಿರುವ ಸಭೆಗೆ ರಾಷ್ಟ್ರಮಟ್ಟದ ಕೃಷಿ ವಿಜ್ಞಾನಿಗಳೂ ಕರೆಸಿ ಸಭೆ ನಡೆಸಲಾಗುವುದು ಮತ್ತು ರಾಷ್ಟ್ರ ಮಟ್ಟದ ಪ್ರತಿ ರಾಜ್ಯದಿಂದಲೂ ಎರಡು ಮತ್ತು ಮೂರು ಪ್ರತಿನಿಧಿಗಳನ್ನು ಕರೆಸಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವಿಷಯವನ್ನು ಪ್ರಸ್ಥಾವನೆ ಮಾಡಲಾಗುವುದು. ಭಾರತ ಸರಕಾರ, ಮೂವತ್ತು ರಾಜ್ಯದ ಸರಕಾರದ ನಿತಿ ನಿಯಮಗಳೂ ಸುಧಿರ್ಗ ಚರ್ಚೆ ನಡೆಸಿ ದೇಶದ 30 ರಾಜ್ಯಗಳಲ್ಲಿ ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಆಧಾರದ ಮೇಲೆ ಬೆಲೆ ಸಿಗುವ ಮತ್ತು ಸಹಾಯ ಸಿಗುವ ಬಗ್ಗೆ ಸಮಿತಿ ಚರ್ಚೆ ನಡೆಸಲಾಗುವುದು.

ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿರುವುದರಿಂದ ಹಾಗೂ ದೇಶದಲ್ಲಿ 65 ಪ್ರತಿಶತ ಕೃಷಿಕರು ಇದ್ದು ಆಯಾ ರಾಜ್ಯಗಳಿಗೆ ಪ್ರತ್ಯೇಕ ಬಜೆಟ ನಿಡಬೇಕೆಂದೂ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಒತ್ತಾಯಿಸಲಾಗುವುದು. ಭಾರತ ದೇಶದಲ್ಲಿ ನದಿ ಜೋಡಣೆ ಅತಿ ಸಿಗದಲ್ಲಿ ಆರಂಭ ಆಗಬೇಕು ಮತ್ತು ದೇಶದಲ್ಲಿ ಎಲ್ಲಾ ರಾಜ್ಯದ ರೈತರಿಗೆ ಉಚಿತವಾಗಿ ವಿದ್ಯುತ ಕೊಡುವುದು. 60 ವರ್ಷ ಮೆಲ್ಪಟ್ಟ ರೈತರು, ರೈತ ಮಹಿಳೆಯರಿಗೆ ಮಾಶಾಸನ ಆಗಬೇಕು.

ನಮ್ಮ ಹೊಲ ನಮ್ಮ ರಸ್ತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಸಂಪೂರ್ಣ ಜಾರಿಯಾಗಬೇಕು. ಪ್ರತಿ ಗ್ರಾಮ ಪಂಚಾಯತಗೆ ಒಂದು ಪ್ರತ್ಯೇಕ ಸ್ಟೋರೆಜ ಮತ್ತು ಕೊಲ್ಲ ಸ್ಟೋರೆಜ ಅವಶ್ಯ ಮಾಡುವ ಕುರಿತು. ದೇಶದಲ್ಲಿ ಅನೇಕ ಜನ ರೋಗದಿದಂದ ಬಳಲುತಿದ್ದು ಇದನ್ನಉ ನಿಯಂತ್ರಿಸಲು ಸಾವಯವ ಕೃಷಿ ಅವಶ್ಯಕತೆ ಇರುವುದರಿಂದ ಭಾರತ ಸರಕಾರ ಇದನ್ನು ಸರಕಾರದ ಗೆಜಟನಲ್ಲಿ ಪರಿಣಾಮಕಾರಿಯಾಗಿ ತೆಗೆದುಕೊಳ್ಳುವುದು. ಭಾರತ ದೇಶದಲ್ಲಿ ಕೃಷಿ ಕೈಗಾರಿಕೆ ಯಾಗಿ ಮಾಡುವ ಕುರಿತು ಈ ಕಾರ್ಯ ಮಾಡುವುದರಿಂದ ರೈತರ ಮಕ್ಕಳು ನಿರುದ್ಯೋಗಿ ಯಾಗುವುದನ್ನು ತಪ್ಪಿಸಬಹುದು, ಬಹಳ ದಿನಗಳ ಕಾಲ ನೆನೆಗುದಿಗೆ ಬಿದ್ದಿರುವ ಸ್ವಾಮಿನಾಥನ ವರದಿ ಜಾರಿ ಆಗಬೇಕು. ಭಾರತ ದೇಶದಲ್ಲಿ ಗ್ರಾಮ ಸ್ವರಾಜ ಮತ್ತು ಗ್ರಾಮ ಸರಕಾರ ಸಂವಿಧಾನ ದರ್ಜೆ ಆಗಬೇಕು. ಇದನ್ನು ಗಾಂಧಿ ಕಂಡ ಕನಸು ಇದನ್ನು ಪೂರ್ತಿ ಗೊಳಿಸುವುದು. ಈ ಪತ್ರವನ್ನು ದೇಶದ 30 ರಾಜ್ಯದ ಪ್ರತಿನಿಧಿಗಳಗೊಂಡೂ, ಈ ಮನವಿಯನ್ನು ಭಾರತ ದೇಶದ ಪ್ರಧಾನಮಂತ್ರಿಗಳೂ, ಕೃಷಿ ಮಂತ್ರಿ, ನೀರಾವರಿ ಮಂತ್ರಿ ಹಾಗೂ ಗ್ರಾಮೀಣ ಅಭಿವೃದ್ಧಿ ಮಂತ್ರಿಗಳಿಗೆ ಕೊಡುವುದಾಗಿ ನಿರ್ಣಯವಾಗಿರುತ್ತದೆ. ಅದೆ ರೀತಿ ದೇಶದ 30 ರಾಜ್ಯಗಳಿಗೂ ಈ ಮನವಿ ಪತ್ರವನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕಾರ್ಯಾಲಯದಿಂದ ಕಳಿಸಲಾಗುವುದು ಎಂದು ಶ್ರೀ ದಶರಥ್ ಕುಮಾರ,  ಅಧ್ಯಕ್ಷರು – ರಾಷ್ಟ್ರೀಯ ಕಿಸಾನ್ ಸಮನ್ವಯ ಸಮಿತಿ ಮತ್ತು. ಶ್ರೀ ದಯಾನಂದ ಸಿ. ಪಾಟೀಲ,ರಾಜ್ಯ ಅಧ್ಯಕ್ಷರು – ನವ ಕರ್ನಾಟಕ ರೈತ ಸಂಘ, ಕರ್ನಾಟಕ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936