”फायर ऑफ लव: रेड” में शांतनु भामरे ने निभाई जेलर की अहम भूमिका – टीजर और पोस्टर रिलीज!

रोमांस फिल्मों के प्रशंसकों का इंतजार आखिरकार खत्म हो गया, क्योंकि ‘फायर ऑफ लव: रेड‘ का बहुप्रतीक्षित पोस्टर और टीजर आज रिलीज किया गया, जिसने सिनेप्रेमियों के बीच उत्साह की लहर पैदा कर दी। प्रशंसित फिल्म निर्माता द्वारा निर्देशित यह आगामी रोमांटिक ड्रामा, सभी स्टार कलाकारों और एक वीर दल को एक साथ लाता है और यह एक अविस्मरणीय सिनेमाई अनुभव होने का वादा करता है।

फिल्म में पायल घोष, कृष्णा अभिषेक और कंचन भोर हैं। फिल्म का लेखन और निर्देशन लीजेंडरी और गोल्ड मेडलिस्ट श्री अशोक त्यागी ने किया है और इसे राजीव चौधरी, जगन्नाथ वाघमारे और रेखा सुरेंद्र जगताप ने प्रोड्यूस किया है। फिल्म का सह-निर्माण शांतनु भामरे ने किया है और उन्होंने प्रसिद्ध कमलेश सावंत (जिन्होंने दृश्यम में अजय देवगन के साथ काम किया है और भूतनाथ रिटर्न्स, खाकी, फोर्स आदि में अमिताभ बच्चन के साथ काम किया है) के खिलाफ एक जेलर की महत्वपूर्ण भूमिका निभाई है। फिल्म को चंद्रकांत पवार और अवंतिका दत्तात्रेय पाटिल ने अवंती प्राजक्ता आर्ट्स के बैनर तले प्रस्तुत किया है। यह आयोजन अंधेरी (पश्चिम), मुंबई में फ्लाइंग सॉसर में हुआ और इसमें उद्योग जगत की जानी-मानी हस्तियां शामिल हुईं।

‘फायर ऑफ लव: रेड‘ इवेंट में अन्य मेहमानों में जीवंत अंतर्राष्ट्रीय सनसनी डीजे-मॉडल-अभिनेत्री मोनीका स्टार्लिंग (मूवी थीम के साथ मैच करने के लिए एक उत्तम दर्जे का लाल लगाम-गर्दन का टॉप पहने हुए), सुंदर अभिनेता यजुर मारवाह ( कृष्णा का भतीजा), राजेश खट्टर, इम्पैक्ट-एडवाइजर शुभ मल्होत्रा, अभिनेत्री अनन्या दत्ता, अभिनेत्री शशि शर्मा, निर्देशक कीर्ति कुमार, अभिनेत्री कोमल सुवर्णकर, आकर्षक ब्यूटी-क्वीन अभिनेत्री लवीना इसरानी, विनसम अभिनेत्री-डांसर श्वेता खंडूरी, और ग्लैम-गर्ल अभिनेत्री- डांसर-सिंगर ज़ीशा नैन्सी। अन्य अतिथियों में शामिल होने वाले सेलेब्स में अनुभवी फिल्म-निर्माता मेहुल कुमार (अपने दामाद भानु आसिफ खान-अभिनेत्री मंदाकिनी के भाई के साथ), कोरियोग्राफर लॉलीपॉप, अभिनेता थे। फिल्म-निर्माता अनिल नागरथ, और वरिष्ठ संगीतकार-गायक दिलीप सेन।

शांतनु भामरे एक बहु प्रतिभाशाली व्यक्तित्व हैं- बॉलीवुड में कला और वाणिज्य का शानदार मिश्रण! वह बॉलीवुड यानी हिंदी फिल्म उद्योग में निर्माता और अभिनेता हैं।

शांतनु भामरे जो एक अनुभवी सॉफ्टवेयर पेशेवर हैं, निर्माता निर्देशक राजीव चौधरी (‘बेइमान लव’ फेम जिसमें सनी लियोन ने अभिनय किया था) के पुराने मित्र रहे हैं! राजीव और शांतनु ग्लोबल कांग्रेस के एक कार्यक्रम में अमेरिका के सैन फ्रांसिस्को में दोस्त बने, तब से वे नियमित रूप से संपर्क में हैं और बॉलीवुड मामलों पर चर्चा कर रहे हैं।

एक दिन राजीव जी फोन पर अपनी आने वाली हिंदी फीचर फिल्म ‘फायर ऑफ लव: रेड‘ के बारे में बता रहे थे, शांतनु कहानी को लेकर उत्साहित हो गए और राजीव जी से मुंबई में मिलने का फैसला किया। राजीव जी ने निर्देशक अशोक त्यागी जी के साथ ‘फायर ऑफ लव: रेड‘ की कहानी विस्तार से सुनाई। मौके पर ही शांतनु समझौते पर हस्ताक्षर करने के लिए सहमत हो गए और एक सह-निर्माता और एक अभिनेता के रूप में ‘फायर ऑफ लव: रेड‘ टीम में शामिल हो गए।

शांतनु भामरे ने इस फिल्म ‘फायर ऑफ लव: रेड‘ में एक जेलर की भूमिका निभाई है, जो कमलेश सावंत (‘दृश्यम’ फेम) की मदद करता है, जो ‘फायर ऑफ लव: रेड‘ में एक पुलिस वाले की भूमिका निभाता है! शांतनु द्वारा निभाई गई जेलर की यह महत्वपूर्ण भूमिका फिल्म ‘फायर ऑफ लव: रेड‘ के मुख्य आकर्षण के रूप में सामने आ रही है! शांतनु, एक मंच और थिएटर कलाकार होने के नाते अनुभवी अभिनेता कमलेश सावंत के सामने बिना किसी रीटेक के एक जेलर की इस शक्तिशाली भूमिका को निभाने में सक्षम थे!

अभिनेता कमलेश सावंत ने फिल्म ‘फायर ऑफ लव: रेड‘ में जेलर के रूप में शांतनु के काम की जमकर तारीफ की! शांतनु का दावा है कि वह सह-निर्माता के साथ-साथ अभिनेता भी बने रहेंगे और शांतनु अपने दोस्त राजीव चौधरी के साथ उनकी भविष्य की फिल्म परियोजनाओं में भी काम करना चाहते हैं क्योंकि उनके बीच बहुत समझ, सकारात्मक कंपन और एकता है।

फिल्म एक रोलरकोस्टर होने का वादा करती है जो दर्शकों को बांधे रखेगी। अपने लुभावने पोस्टर और टीज़र के साथ, ‘फायर ऑफ़ लव: रेड’ ने पहले ही सिनेप्रेमियों के बीच महत्वपूर्ण चर्चा और प्रत्याशा पैदा कर दी है। यह फिल्म इस साल में सिनेमाघरों में रिलीज होने के लिए तैयार है।

फिल्म की दुनिया की एक झलक देते हुए फिल्म का ट्रेलर भी सामने आया था। ट्रेलर लुभावने दृश्यों, भावपूर्ण संगीत और शक्तिशाली प्रदर्शनों के साथ प्यार, दिल टूटने और मुक्ति की एक दिलचस्प कहानी का वादा करता है, जो दर्शकों को फिल्म की रिलीज की उत्सुकता से प्रतीक्षा करने के लिए बाध्य करता है।

निर्देशक श्री अशोक त्यागी ने कहा, “हम ‘फायर ऑफ लव: रेड‘ के पोस्टर और ट्रेलर का अनावरण करने के लिए रोमांचित हैं।” “यह फिल्म प्यार का श्रम रही है, और हमने दर्शकों के दिलों को छूने वाली एक आश्चर्यजनक और भावनात्मक रूप से गुंजायमान कहानी बनाने के लिए अपना दिल लगाया है। हम इस सिनेमाई यात्रा को दुनिया के साथ साझा करने के लिए इंतजार नहीं कर सकते हैं और आशा करते हैं कि पोस्टर और टीजर ने आपकी उत्सुकता बढ़ा दी है।”

जैसे ही उत्साह बढ़ता है, प्रशंसक और फिल्म के प्रति उत्साही लोग फायर ऑफ लव: रेड की रिलीज का बेसब्री से इंतजार कर रहे हैं, जो लगभग 12 हफ्तों में सिनेमाघरों में रिलीज होने वाली है। अधिक अपडेट के लिए बने रहें और एक प्रेम कहानी का अनुभव करने के लिए तैयार रहें जैसा पहले कभी नहीं हुआ।

City Today News – 9341997936

ಪ್ರಸ್ತುತ ಡಾ|| ಮಲ್ಲೇಶಪ್ಪ ಎಸ್. ದಡ್ಡನವರ ಅವರು ತೇರದಾಳ ಮತ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದು, ಅವರಿಗೆ ಪಕ್ಷದ ವರಿಷ್ಠರು ಸ್ಪರ್ಧಿಸಲು ಅನುವು ಮಾಡಿಕೊಡಬೇಕು.

ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರವು ನೇಕಾರ ಲಿಂಗಾಯತ ಸಾಂದ್ರತೆಯುಳ್ಳ ಕ್ಷೇತ್ರವಾಗಿದ್ದು, ಕಳೆದ ನಾಲ್ಕು ಚುನಾವಣೆಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ನೇಕಾರ ಲಿಂಗಾಯತರನ್ನು ಕಡೆಗಣಿಸುತ್ತಾ ಬಂದಿದ್ದರಿಂದ ನಾವು ರಾಜಕೀಯ ಪಕ್ಷಗಳನ್ನು ಎಚ್ಚರಿಸುವ ಸಲುವಾಗಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ.

ಸುಮಾರು 2.25 ಲಕ್ಷ ಮತದಾರರನ್ನು ಹೊಂದಿರುವ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರಕ್ಕೂ ಹೆಚ್ಚು ಹಟಗಾರ ಲಿಂಗಾಯತ (ನೇಕಾರ) ಮತವಿದ್ದು, 2.5 ಲಕ್ಷಕ್ಕೂ ಹೆಚ್ಚು ಮತದಾರರು ಬಾಗಲಕೋಟೆ ಜಿಲ್ಲೆಯಲ್ಲಿ ಹಾಗೂ 10 ಲಕ್ಷಕ್ಕೂ ಹೆಚ್ಚು ಮತದಾರರು ಕರ್ನಾಟಕ ರಾಜ್ಯದಲ್ಲಿದ್ದು ನಮ್ಮ ಈ ಧ್ವನಿ ಯಾರಿಗೂ ಕೇಳಿಸದೆ ಅರಣ್ಯರೋದನವಾಗಿದೆ, ಅದರಲ್ಲೂ ತೇರದಾಳ ಮತಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಹಟಗಾರ ಲಿಂಗಾಯತ (ನೇಕಾರ) ಸಾಂದ್ರತೆ ಹೆಚ್ಚಿಗೆ ಇದ್ದು , ಇಲ್ಲಿ ಪಕ್ಷದ ಟಿಕೇಟ್ ಕೇಳಲು ಹೆಚ್ಚು ಹಕ್ಕು ಹೊಂದಿದ್ದೇವೆ.

ಈಗ ಮುಖ್ಯವಾಗಿ ನಮ್ಮ ಸಮಾಜದ ಡಾ|| ಮಲ್ಲೇಶಪ್ಪ ಎಸ್. ದಡ್ಡೆನವರ ವೃತ್ತಿಯಿಂದ ವೈದ್ಯರು, ಮುಖ್ಯವಾಗಿ ಇವರ ಮನೆತನವು ಕಾಂಗ್ರೇಸ್ ಪಕ್ಷದ ಕಛೇರಿಯಂತೆ ಸ್ವಾತಂತ್ರ್ಯ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಶ್ರೀಯುತರು ಹಲವಾರು ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿ, ಈಗಾಗಲೇ ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ಡಾ|| ಮಲ್ಲೇಶಪ್ಪ ಎಸ್. ದಡ್ಡನವರ ಅವರು ತೇರದಾಳ ಮತ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದು, ಅವರಿಗೆ ಪಕ್ಷದ ವರಿಷ್ಠರು ಸ್ಪರ್ಧಿಸಲು ಅನುವು ಮಾಡಿಕೊಡಬೇಕು. ಕಾಂಗ್ರೇಸ್ ಪಕ್ಷವು ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಿಕೊಂಡು ಬಂದಿದ್ದು ಪಕ್ಷವು ಎಲ್ಲರಿಗೂ ಸೇರಿದ್ದು ಹಾಗೂ ಎಲ್ಲರ ಹಿತವನ್ನು ಕಾಯ್ದುಕೊಂಡು ಹೋಗುತ್ತದೆ ಎಂಬ ಬಲವಾದ ನಂಬಿಕೆ ಹಾಗೂ ವಿಶ್ವಾಸವನ್ನು ಹೊಂದಿದ್ದೇವೆ ಎಂದು ಶ್ರೀ ಶ್ರೀ ಶ್ರೀ ಚಿಕ್ಕರೇವಣಸಿದ್ಧ ಸ್ವಾಮೀಜಿ ಪತ್ರಿಕಾ ಫ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

ಪತ್ರಿಕಾಗೋಷ್ಠಿಯ ಉಪಸ್ಥಿತಿ

1) ಪರಮಪೂಜ್ಯ ಶ್ರೀ ಶ. ಬ್ರ. ಅಭಿನವ ರೇವಣಸಿದ್ದ ಪಟ್ಟದೇವರು, ಗುರು ಹಿರೇಮಠ, ಮೈಂದರಿಗಿ.

2) ನಿರಂಜನ ಪ್ರಣವ ಸ್ವರೂಪಿ ಶ್ರೀ ಮೃತುಂಜಯ ಮಹಾಸ್ವಾಮಿಗಳು, ಸಿದ್ಧಾಶ್ರಮ ವಿರಕ್ತಮಠ, ಮೈಂದರಿಗಿ,

3) ಪರಮಪೂಜ್ಯ ಶ್ರೀ ಘನಲಿಂಗ ಮಹಾಸ್ವಾಮಿಗಳು, ಸಿದ್ದರೂಢ ಮಠ, ನೀರಲಕೇರಿ,

ನೇಕಾರ ಮುಖಂಡರಾದ ಶ್ರೀ ಶಂಕರ್ ಜಾಲಿಗಿಡದ, ಡಾ.ಪಂಡಿತ್ ಪಟ್ಟಣ, ಶ್ರೀ ಮಲ್ಲಪ್ಪ ಭಾವಿಕಟ್ಟಿ, ಶ್ರೀ ಚಂದ್ರಶೇಖರ ಶಿವಪೂಜಿ ಹಾಗೂ ಶ್ರೀ ಜಯವಂತ್ ಇಂಜಿನೇರಿ.

City Today News – 9341997936

ಬೆಂಗಳೂರು ಮೂಲಕ ಕಾಶ್ಮೀರಕ್ಕೆ ವಿಶೇಷ ರೈಲು.     

ಬೆಂಗಳೂರು:  ಭಾರತೀಯ ರೈಲ್ವೆಯ ‘ಭಾರತ್ ಗೌರವ್’ ಯೋಜನೆಯಡಿಯಲ್ಲಿ ದಕ್ಷಿಣ ಸ್ಟಾರ್ ರೈಲು ಕಾಶ್ಮೀರ ಕಣಿವೆಗೆ ರೈಲುಗಳ ಓಡಾಟ ಪ್ರಾರಂಭಿಸಿದೆ. ಕೊಯಂಬತ್ತೂರಿನಿಂದ ಹೊರಡುವ ರೈಲು ಬೆಂಗಳೂರಿನ ಯಲಹಂಕ ಮೂಲಕ ಹಾದು ಹೋಗುತ್ತದೆ. ಈ ಬೇಸಿಗೆ ರಜೆಗೆ ವಿಶೇಷ ರೈಲಿನ ಟಿಕೆಟ್ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ.

ಕೊಯಂಬತ್ತೂರು ಮೂಲದ ಸೌತ್ ಸ್ಟಾರ್ ರೈಲ್, ಎಂ ಮತ್ತು ಸಿ ಪ್ರಾಪರ್ಟಿ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ನೋಂದಾಯಿಸಲಾಗಿದೆ. ಭಾರತ ಗೌರವ್ ಯೋಜನೆಯಡಿ ಕೊಯಂಬತ್ತೂರಿನಿಂದ ಮಹಾರಾಷ್ಟ್ರದ ಶಿರಡಿವರೆಗೆ 2022ರ ಜೂನ್ ನಲ್ಲಿ ತನ್ನ ಮೊದಲ ಓಟವನ್ನು ಪ್ರಾರಂಭಿಸಿತು. ಭಾರತ್ ಗೌರವ್ ಅಡಿಯಲ್ಲಿ, ಪ್ರವಾಸೋದ್ಯಮ ಪ್ಯಾಕೇಜ್ ಗಳನ್ನು ಉತ್ತೇಜಿಸಲು ವಿಷಯಾಧಾರಿತ ವಲಯಗಳನ್ನು ನಡೆಸಲು ಖಾಸಗಿ ನಿರ್ವಾಹಕರು ಅಥವಾ ಸೇವಾ ಪೂರೈಕೆದಾರರಿಗೆ ಭಾರತೀಯ ರೈಲ್ವೆಯಿಂದ ರೈಲುಗಳನ್ನು ಗುತ್ತಿಗೆ ನೀಡಲು ರೈಲ್ವೆಯು ಅವಕಾಶ ನೀಡುತ್ತದೆ. ಬಾಡಿಗೆದಾರರು ತಮ್ಮ ಆಯ್ಕೆಯ ಯಾವುದೇ ಪ್ರವಾಸಿ ವಲಯಗಳಲ್ಲಿ ರೈಲುಗಳನ್ನು ನಿರ್ವಹಿಸಬಹುದು. ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು ಈ ಸೇವೆಯನ್ನು ನೀಡಲಾಗುತ್ತಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.

ಈ ಪ್ರವಾಸವನ್ನು ಟ್ರಾವೆಲ್ ಟೈಮ್ಸ್ ಇಂಡಿಯಾ ಲಿ.  ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದ ಟೂರ್ ಆಪರೇಟರ್ ಗಳು ಸುಮಾರು 600 ಕ್ಕೂ ಅಧಿಕ ಪ್ರವಾಸಿ ರೈಲುಗಳನ್ನು ಓಡಿಸಿದ್ದಾರೆ.

ದಕ್ಷಿಣ ಸ್ಟಾರ್ ರೈಲ್ ನ ಕಾಶ್ಮೀರ ಪ್ಯಾಕೇಜ್ ಮೇ 11, 2023 ರಂದು ಪ್ರಾರಂಭವಾಗುತ್ತದೆ. ಈ ರೈಲು ಕೊಯಂಬತ್ತೂರನಿಂದ ಆರಂಭವಾಗುತ್ತದೆ. ಅಂತಿಮ ಗಮ್ಯಸ್ಥಾನವನ್ನು ತಲುಪುವ ಮೊದಲು, ಪ್ರಯಾಣಿಕರು ಈ ರೈಲು ನಿಲ್ದಾಣಗಳಲ್ಲಿ ಯಾವುದಾದರೂ ಒಂದು ನಿಲ್ದಾಣದಿಂದ ಟ್ರೈನ್ ಹತ್ತಬಹುದು: ಈರೋಡ್, ಸೇಲಂ, ಧರ್ಮಪುರಿ, ಹೊಸೂರು, ಯಲಹಂಕ, ಪೆರಂಬೂರು, ವಿಜಯವಾಡ, ಮತ್ತು ವಾರಂಗಲ್. ಒಟ್ಟು ಪ್ರವಾಸ ಪ್ಯಾಕೇಜ್: 12 ದಿನಗಳು.

ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ, ಸರ್ಕಾರಿ ನೌಕರರಿಗೆ ಎಲ್ ಟಿಸಿ ಸೌಲಭ್ಯ, ಎಸಿ ಮತ್ತು ಎಸಿ ಅಲ್ಲದ ಎಲ್ಲಾ ವರ್ಗದ ಬೋಗಿಗಳು ಸೇರಿದಂತೆ ಈ ರೈಲು ಸೇವೆಯಲ್ಲಿ ಪ್ರವಾಸಿಗರಿಗೆ ಅನೇಕ ಆಕರ್ಷಣೆಗಳಿವೆ. ಆನ್ಬೋರ್ಡ್ ಮತ್ತು ಆಫ್ಬೋರ್ಡ್ನಲ್ಲಿ ಅನಿಯಮಿತ ದಕ್ಷಿಣ ಭಾರತೀಯ ಊಟವನ್ನು ನೀಡಲಾಗುತ್ತದೆ. ಇದು ದೃಶ್ಯ ವೀಕ್ಷಣೆಯನ್ನೂ ಮತ್ತು ವರ್ಗಾವಣೆ ಪ್ರವಾಸ ವ್ಯವಸ್ಥಾಪಕರನ್ನು ಒದಗಿಸುತ್ತದೆ. ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರೇಕ್ಷಣೀಯ ಸ್ಥಳಗಳಿಗೆ ಅಥವಾ ರಾತ್ರಿ ತಂಗಲು ಹೋಗುವಾಗ ಪ್ರಯಾಣಿಕರು ತಮ್ಮ ಲಗೇಜುಗಳನ್ನು ಬೋಗಿಗಳಲ್ಲಿಯೇ ಇಡಬಹುದು. ಪ್ರವಾಸಿಗರಿಗೆ ಸಹಾಯ ಮಾಡಲು ರೈಲು ಸಂಯೋಜಕರು ಮತ್ತು ವ್ಯವಸ್ಥಾಪಕರು ಲಭ್ಯವಿರುತ್ತಾರೆ. ತುರ್ತುಸ್ಥಿತಿಗಳಿಗೆ ಹಾಜರಾಗಲು ಒಬ್ಬ ವೈದ್ಯರು ರೈಲ್ವೆ ಬೋಗಿಯಲ್ಲಿ ಇರುತ್ತಾರೆ.

ಟಿಕೆಟ್ ದರವು ರೈಲು ದರ, ವಿಮೆ, ಹಾಸಿಗೆ ಕಿಟ್, ಕೊಠಡಿಗಳು, ಎಲ್ಲಾ ಊಟ ಮತ್ತು ಪಾನೀಯಗಳು, ದೃಶ್ಯವೀಕ್ಷಣೆ, ವರ್ಗಾವಣೆ ಮತ್ತು ಪ್ರವಾಸ ನಿರ್ವಾಹಕರ ವೆಚ್ಚವನ್ನು ಒಳಗೊಂಡಿದೆ.

ಪ್ಯಾಕೇಜ್ ದರ:  3ಎಸಿ ರೂ.41,950/-, 2ಎಸಿ ರೂ.54,780/-, 1ಎಸಿ ರೂ.64,900/-

ದೂರವಾಣಿ ಸಂಖ್ಯೆ 90155 00200 ಹಾಗೂ ಆನ್ಲೈನ್ ಬುಕಿಂಗ್ http://www.railtourism.com ಮೂಲಕ ಟಿಕೆಟ್ ಬುಕ್ ಮಾಡಬಹುದು.

City Today News – 9341997936

ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಾಲಿ ಶಾಸಕ ನೆಹರು ಓಲೆಕಾರ್ ಗೆ ಟಿಕೆಟ್ ನೀಡದಂತೆ ಪಕ್ಷಕ್ಕೆ ಹಾವೇರಿ ಬಿಜೆಪಿ ಕಾರ್ಯಕರ್ತ ಸಂತೋಷ್ ರೆಡ್ಡಿ‌ ಆಗ್ರಹ

ಹಾವೇರಿ ಬಿಜೆಪಿಯಲ್ಲಿ ಜೋರಾದ ಟಿಕೆಟ್ ಫೈಟ್..!

‘ಅಭ್ಯರ್ಥಿ ಬದಲಿ ಬಿಜೆಪಿ ಗೆಲ್ಲಿಸಿ’ ಅಭಿಯಾನ..

ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಬದಲಾವಣೆಗೆ ಆಗ್ರಹ

ಹಾವೇರಿಯ ಬಿಜೆಪಿ ಕಾರ್ಯಕರ್ತ ಸಂತೋಷ್ ರೆಡ್ಡಿ‌ ಅವರಿಂದ ಸುದ್ದಿಗೋಷ್ಟಿ

ಹಾವೇರಿಯಲ್ಲಿ ಬಿಜೆಪಿ ಗೆಲ್ಲಬೇಕು ಅಂದ್ರೆ ಅಭ್ಯರ್ಥಿ ಬದಲಾವಣೆ ಆಗಬೇಕು, ಹಾಲಿ ಶಾಸಕ ನೆಹರು ಓಲೆಕಾರ್ ಗೆ ಟಿಕೆಟ್ ನೀಡಬಾರದು, ಶಾಸಕರಿಗೆ ಹೀಗಾಗಿಲೇ ಲೋಕಾಯುಕ್ತ ಕೋರ್ಟ್ 2ವರ್ಷ ಶಿಕ್ಷೆ ನೀಡಿದೆ. ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಿಗೆ ನೀಡುವುದು ಸೂಕ್ತ.

ಕೆಲವು ದಿನಗಳ ಹಿಂದೆ‌ ನವೀನ್ ಎಂಬುವವರ ಮೇಲೆ ಹಲ್ಲೆ ನಡೆದಿತ್ತು,ಈ ಕೇಸ್ ಸಂಬಂಧ ಹಲವರ‌ ಮೇಲೆ ಸುಳ್ಳು ಕೇಸ್ ದಾಖಲಾಗಿದೆ,ಟಿಕೆಟ್ ಆಕಾಂಕ್ಷಿಗಳ ಮೇಲೆ ಸುಳ್ಳು ಎಫ್ಐಆರ್ ಮಾಡಿಸಲಾಗಿದೆ..

ಈಗಾಗಲೇ ಶಿಕ್ಷೆ ಆಗಿರುವ ನೆಹರು ಓಲೇಕಾರ ಅವರಿಗೆ ಟಿಕೆಟ್ ನೀಡಬಾರದು, ಕೋರ್ಟ್ ಸ್ಟೇ ಕೊಟ್ಟಿದ್ದನ್ನೇ ದೊಡ್ಡ ಗೆಲುವು ಎಂದು ಸಂಭ್ರಮಿಸಿದ್ದಾರೆ. ಇಷ್ಟಾದರೂ ಓಲೆಕಾರ್ ಗೆ ಟಿಕೆಟ್ ನೀಡುವಂತೆ‌ ಕೆಲವು ಬೆಂಬಲಿಗರು ಕೇಳ್ತಾ ಇದ್ದಾರೆ. ಈ ಬಾರಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕು. ವೆಂಕಟೇಶ್ ನಾರಯಣಿ, ಪರಮೇಶ್ವರಪ್ಪ ಮೇಗಳಮನಿ, ಶ್ರೀಪಾದ್ ಬೆಟ್ಟಗೆರಿಯಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ನನ್ನ ಮನವಿ.

ನೆಹರು ಓಲೆಕಾರ್ ಶಾಸಕ ಸ್ಥಾನಕ್ಕೆ ಅನರ್ಹ ಮಾಡುವಂತೆ ರಾಜ್ಯಪಾಲರು, ನಳೀನ್ ಕಟೀಲ್, ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ, ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಲಿದ್ದೇನೆ.

ಹೀಗಾಗಿ ನೆಹರು ಓಲೆಕಾರ್ ಅವರಿಗೆ ಟಿಕೆಟ್ ನೀಡದಂತೆ ಪಕ್ಷಕ್ಕೆ ನನ್ನ ಆಗ್ರಹ, ಭ್ರಷ್ಟಾಚಾರ ದಲ್ಲಿ ಭಾಗಿಯಾಗಿರುವ ಯಾವುದೇ ಅಭ್ಯರ್ಥಿ ಗಳಿಗೂ ಟಿಕೆಟ್ ನೀಡದಂತೆ ನನ್ನ ಮನವಿ. ಇಲ್ಲವಾದಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತದೆ ಎಂದು ಹಾವೇರಿ ಬಿಜೆಪಿ ಕಾರ್ಯಕರ್ತ ಸಂತೋಷ್ ರೆಡ್ಡಿ‌ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

ರಾಷ್ಟ್ರೀಯ ಜನಹಿತ ಪಾರ್ಟಿ (ಆರ್.ಜೆ.ಪಿ) ಪ್ರಾರಂಭ ಹಾಗು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ

07-04-2323 ರಂದು ರಾಜ್ಯದಲ್ಲಿ ರಾಷ್ಟ್ರೀಯ ಜನಹಿತ ಪಾರ್ಟಿ (ಆರ್.ಜೆ.ಪಿ) ಒಂದು ರಾಜಕೀಯ ಪಕ್ಷವನ್ನು ಪ್ರಾರಂಭ ಮಾಡುತ್ತಿದ್ದು, ಹಾಗು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಪ್ರತಿಯೊಬ್ಬ ಸಾಮಾನ್ಯ ಜನರಿಗೂ ಆರ್ಥಿಕ ಸೌಲಭ್ಯದ ಹಕ್ಕು ನೀಡುವುದು ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು, ರಾಜಕೀಯ ಶುದ್ದೀಕರಣ ಮತ್ತು ಸ್ವಚ್ಛ ಹಾಗೂ ಸ್ವಚ್ಚಾ ಸುರಕ್ಷಿತ ಮತ್ತು ಪಾರದರ್ಶಕ ಆಡಳಿತ ನೀಡುವುದು, ವಿಶೇಷವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸುರಕ್ಷತೆ ಮತ್ತು ಭದ್ರತೆ ಕಲ್ಪಿಸುವುದು. ರಾಜ್ಯದ ನೆಲ,ಜಲ, ಭಾಷೆ ಮತ್ತು ಪರಿಸರ ಸಂರಕ್ಷಣೆ ಮತ್ತು ನಿರ್ವಹಣೆಗೆ ಆದ್ಯತೆ ನೀಡುವುದು. ರಾಜ್ಯದಲ್ಲಿರುವ ಹಿಂದುಳಿದ, ಅಲ್ಪ ಸಂಖ್ಯಾತರ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಭದ್ರತೆ ಮತ್ತು ಪ್ರೋತ್ಸಾಹ ನೀಡುವುದು ರೈತರು ತಾವು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗಧಿಪಡಿಸುವುದು, ರಾಜ್ಯದ ಎಲ್ಲಾ ಜಾತಿ, ಪಂಗಡಗಳಿಗೆ ಸಮಾನತೆಯ ಮೀಸಲಾತಿಯನ್ನು ಅನುಷ್ಠಾನಗೊಳಿಸುವುದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು, ಉತ್ತಮವಾದ ರಸ್ತೆ ಮತ್ತು ದಿನದ 24 ಗಂಟೆಗಳ ಕಾಲ ವಿದ್ಯುತ್ ನೀಡುವುದು. ಕೃಷಿ, ನೀರಾವರಿ, ಹೈನುಗಾರಿಕೆ, ತೋಟಗಾರಿಕೆ ಚಟುವಟಿಕೆಗಳಿಗೆ ಆದ್ಯತೆ ನೀಡುವುದು. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಇಲ್ಲದೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಂತೆ ಪ್ರೇರೇಪಿಸುವುದು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ವರ್ಗದವರಿಗೂ ಹೈಟೆಕ್‌ ಆಸ್ಪತ್ರೆ ಸೌಲಭ್ಯ ಕಲ್ಪಿಸುವುದು.

ಈ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನ ಕ್ಕೆ ಮತ್ತು ನಮ್ಮ ರಾಜ್ಯದ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು, ಜನರಿಗೆ ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತ ಕೊಡುವುದು ನಮ್ಮ ಉದ್ದೇಶವಾಗಿರುತ್ತದೆ ಎಂದು ಕೆ.ಮಂಜುನಾಥ್ ರಾಷ್ಟ್ರಾಧ್ಯಕ್ಷರು, ರಾಷ್ಟ್ರೀಯ ಜನಹಿತ ಪಾರ್ಟಿ, ಇಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936