8000 ಕ್ಕೂ ಹೆಚ್ಚು ಓಟಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
26 ಮಾರ್ಚ್ 2023, ಬೆಂಗಳೂರು: NEB one8 ರನ್‌ನ 1 ನೇ ಆವೃತ್ತಿಯಲ್ಲಿ 8000+ ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರಿಂದ ಬೆಂಗಳೂರು ಭಾನುವಾರದ ಮುಂಜಾನೆಯೇ ಜೀವಂತಿಕೆ ಪಡೆಯಿತು. ಭಾರತೀಯ ಏಸ್ ಕ್ರಿಕೆಟಿಗ – ವಿರಾಟ್ ಕೊಹ್ಲಿ ನಗರದಲ್ಲಿ ಫಿಟ್‌ನೆಸ್ ಅನ್ನು ಉತ್ತೇಜಿಸುವ ಉದ್ದೇಶದಿಂದ ರನ್‌ಗೆ ಚಾಲನೆ ನೀಡಿದರು.
ಭಾನುವಾರ ನಡೆದ ಓಟದಲ್ಲಿ ವೃತ್ತಿಪರ ಕ್ರೀಡಾಪಟುಗಳು, ಉತ್ಸಾಹಿ ನಾಗರಿಕರು ಭಾಗವಹಿಸಿದ್ದರು. 18 ಕಿಮೀ ದೂರವನ್ನು 0:59:55 ರಲ್ಲಿ ಕ್ರಮಿಸುವ ಮೂಲಕ ಶಿವಂ ಯಾದವ್ ವೇಗದ ಪುರುಷ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದರು ಮತ್ತು ವೈಭವ್ ಪಾಟೀಲ್ 10 ಕಿಮೀ ದೂರವನ್ನು 0:32:38 ರಲ್ಲಿ ಕ್ರಮಿಸುವ ಮೂಲಕ ಮೊದಲ ರ್ಯಾಂಕ್ ಪಡೆದರು.
ಓಟದ ಆರಂಭಕ್ಕೂ ಮುನ್ನ ಎಲ್ಲಾ ಓಟಗಾರರನ್ನು ಪ್ರೇರೇಪಿಸಲು ವಿರಾಟ್ ಕೊಹ್ಲಿ, “ನಮಸ್ಕಾರ ಬೆಂಗಳೂರು. ದೊಡ್ಡ ಸಂಖ್ಯೆಗಳನ್ನು ಹೊರಹಾಕಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಾನು ಸ್ಥಳಕ್ಕೆ ಬಂದಾಗ ಉತ್ಸಾಹ ಮತ್ತು ನಿರೀಕ್ಷೆಯನ್ನು ನಂಬಲಾಗಲಿಲ್ಲ. One8 ರನ್ ಅನ್ನು ಪ್ರತಿ ವರ್ಷ ಆಯೋಜಿಸಲಾಗುವುದು ಮತ್ತು ಆರೋಗ್ಯಕರ ಜೀವನ ಮತ್ತು ಫಿಟ್‌ನೆಸ್ ಕುರಿತು ಹೆಚ್ಚಿನ ಅರಿವು ಮೂಡಿಸಲು ಇದನ್ನು ಪ್ಯಾನ್ ಇಂಡಿಯಾ ಮಾಡಲು ನಾವು ಪ್ರಯತ್ನವನ್ನು ಮಾಡುತ್ತೇವೆ. ಓಟವು ನಿಮ್ಮ ಸ್ನೇಹಿತರು ಅಥವಾ ಪಾಲುದಾರರಿಂದ ಪ್ರೋತ್ಸಾಹದೊಂದಿಗೆ ಮಾಡಬಹುದಾದ ಒಂದು ಶಿಸ್ತು.
26th March 2023, Bengaluru: Bengaluru sprung to life early on a Sunday morning as over 8000+ people took part in the 1st edition of the NEB one8 Run. Indian Ace Cricketer – Virat Kohli flagged off the run with the aim to promote fitness in the city.
Professional athletes, and enthusiastic citizens participated in the run on Sunday. Shivam Yadav won the first prize in the fastest male category by covering the distance of 18 km in 0:59:55, and Vaibhav Patil bagged the first rank by covering the distance of 10km in 0:32:38.
To motivate all the runners before the start of the run, Virat Kohli said, “Namaskara Bengaluru. Thank you so much for turning out huge numbers. I couldn’t believe the excitement and anticipation when I arrived at the venue. The one8 Run will be organized every year, and we will put in the effort to do it pan India to create more awareness about healthy living and fitness. Running is a discipline that can be done with encouragement from your friends or partners.
ಬೆಂಗಳೂರು : ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವತಿಯಿಂದ ಇಗ್‌ನಿಟ್ಸ್ (IGNITUS) ಸಮಾವೇಶವನ್ನು ಬೆಂಗಳೂರಿನ ನಿಮಾನ್ಸ್ ಕನ್‌ವೆಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು.
ಈ ಸಮಾವೇಶವನ್ನು ಜಿ.ಇ ಹೆಲ್ತ್ ಕೇರ್ ನ ನಿರ್ದೇಶಕರಾದ ರಾಮ್ ಕುಮಾರ್ ರಾಮಚಂದ್ರನ್, ಜೈನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚನ್ನರಾಜ್ ರಾಯ್ ಚಂದ್, ಜೈನ್ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ.ರಾಜ್ ಸಿಂಗ್, ಕ್ಯಾಪ್ ಜಿಮಿನಿ ಹಿರಿಯ ನಿರ್ದೇಶಕರಾದ ಮೈಕ್ ಮುರಳಿ, ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವಿಭಾಗದ ಮುಖ್ಯಸ್ಥರಾದ ಡಾ ಅರ್. ಸುಚಿತ್ರ, ರಾಪರ್ ಚಂದನ್ ಶೆಟ್ಟಿ ರವರು ಉದ್ಘಾಟಿಸಿದರು. ಈ ವೇಳೆ 15 ಅತ್ಯಂತ ಪ್ರಭಾವಶಾಲಿ ಶಿಕ್ಷಣ ತಜ್ಞರು, ಸಿಇಓಗಳು ಸಹ ಸಂಸ್ಥಾಪಕರು ಮತ್ತು ಸೆಲೆಬ್ರಿಟಿಗಳು ತಮ್ಮ ಜ್ಞಾನ ಮತ್ತು ಅನುಭವಗಳನ್ನು ಈ ಸಮಾವೇಶದಲ್ಲಿ ಹಂಚಿಕೊಂಡರು. ಈ ವೇಳೆ ಜೈನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚನ್ನರಾಜ್ ರಾಯ್ ಚಂದ್ ರವರು ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಕೌಶಲ್ಯಗಳನ್ನು ಹೆಚ್ಚಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ನಂತರ ಮೈಕ್ ಮುರಳಿ ರವರು ಮಾತನಾಡಿ ಈ ಸಮಾವೇಶದಲ್ಲಿ ನಾನು ಭಾಗವಹಿಸಿರುವುದು ನಿಜಕ್ಕೂ ಸಂತೋಷವಾಗಿದೆ ಏಕೆಂದರೆ ಇದು ಬರೀ ಸಮಾವೇಶವಲ್ಲ ಒಳ್ಳೆಯ ಅನುಭವ ನೀಡುವ ವೇದಿಕೆಯಾಗಿದ್ದು ವಿದ್ಯಾರ್ಥಿಗಳೊಂದಿಗೆ ನಾನು ಕೂಡ ಹೊಸ ವಿಷಯಗಳನ್ನು ಕಲಿಯುವ ಸಂದರ್ಭ ದೊರೆತಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಕಿಚ್ಚನ್ನು ಹೊರಹೊಂಬುವ ಒಂದು ಒಳ್ಳೆಯ ಕಾರ್ಯಕ್ರಮವನ್ನು ಜೈನ್ ವಿಶ್ವವಿದ್ಯಾಲಯ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಬಳಿಕ ಡಾ ಅರ್. ಸುಚಿತ್ರ ರವರು ಮಾತನಾಡಿ ಈ ಸಮಾವೇಶದ ಮೂಲ ಉದ್ದೇಶವೇನೆಂದರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಈ ವೇದಿಕೆ ಮುಖೇನ ತಮ್ಮ ಸಾಧನೆಯ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳುವುದರಿಂದ ವಿದ್ಯಾರ್ಥಿಗಳು ತಮ್ಮ ಜೀವವನ್ನು ರೂಪಿಸಿಕೊಳ್ಳಲು ನೆರವಾಗಲಿದೆ ಎಂದರು.

ವಿ. ಸಣ್ಣ ಅಜ್ಜಯ್ಯ ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ಅಲೇಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷರು
ನ್ಯಾಯಮೂರ್ತಿ ಶ್ರೀಯುತ. ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸಿನಂತೆ ಎಸ್.ಸಿ. ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವಂತೆ ದಶಕಗಳ ಕಾಲ ನಡೆಸಿದ ಹೋರಾಟಕ್ಕೆ ಹಿಂದಿನ ಯಾವುದೇ ಸರ್ಕಾರಗಳು ತೆಗೆದುಕೊಳ್ಳದ ಐತಿಹಾಸಿಕ ನಿರ್ಧಾರವನ್ನು ನಿನ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಮೊದಲನೆಯದಾಗಿನನ್ನ ವೈಯಕ್ತಿಕವಾಗಿ ಹಾಗೂ ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ. ಅಲೆಮಾರಿ ಬುಟಕಟ್ಟು ಮಹಾಸಭಾದ ವತಿಯಿಂದ ಮಾನ್ಯ ಮುಖ್ಯ ಮಂತ್ರಿಯವರಿಗೆ ಅಭಿನಂದನೆಗಳನನು ಸಲ್ಲಿಸುತ್ತೇನೆ.
ಆದರೆ ಇದುವರೆಗೂ ಸಮಾಜದ ಮುಖ್ಯ ವಾಹಿನಿಯಿಂದ ವಂಚಿತವಾಗಿ ಗುಡಿಸಲು, ಗುಡಾರಗಳಲ್ಲಿ ವಾಸಿಸುತ್ತಾ ಧಾರ್ಮಿಕ ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿರುವ ಇದುವರೆಗೂ ಶಾಲೆಯ ಮುಖವನ್ನೇ ನೋಡದ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹೀಗೆ ಯಾವುದೇ ದಾಖಲೆಗಳಿಲ್ಲದೆ, ವಿಳಾಸವಿಲ್ಲದೆ, ಶಿಕ್ಷಣವಿಲ್ಲದೆ ಊರಿಂದ ಊರಿಗೆ ಅಲೆಯುವ ಅಲೆಮಾರಿ ಮತ್ತಿತರ ಸಮುದಾಯಗಳೆಂದು 4ನೇ ವರ್ಗದಲ್ಲಿ ಗುರುತಿಸಿ ಕೇವಲ 1% ಮೀಸಲಾತಿ ನೀಡಿರುವುದು ಅತ್ಯಂತ ಅವೈಜ್ಞಾನಿಕ ನಿರ್ಧಾರವಾಗಿದೆ.
ಕಾರಣ ಪ.ಜಾತಿಗೆ ಇದ್ದ 15% ಮೀಸಲಾತಿಯನ್ನು ಇದುವರೆಗೂ ಯಾವ ಸಮುದಾಯಗಳು ಹೆಚ್ಚಿನ ಮಟ್ಟದಲ್ಲಿ ಮೀಸಲಾತಿಯನ್ನು ಅನುಭವಿಸಿದ್ದವೋ ಅದೇ ಸಮುದಾಯಗಳಿಗೆ ಈ ಸದಾಶಿವ ಆಯೋಗದ ವರದಿಯಲ್ಲಿಯೂ ಸಹ ಅವರಿಗೇನೆ ಪ್ರಧಾನ ಆದ್ಯತೆ ನೀಡಿ ಹಂಚಿಕೆ ಮಾಡಿದೆ.
ಹಾಗೂ ಇತ್ತೀಚಿನ ದಿನಗಳಲ್ಲಿ ಶೇಕಡ 15% ಇದ್ದ ಮೀಸಲಾತಿಯನ್ನು 17% ಗೆ ಹೆಚ್ಚಿಸಿದ್ದು, ಈ ಹೆಚ್ಚಳದ ಮೀಸಅನಲ್ಲಿ ಸ್ಯುಷ್ಯ ಸಮುದಾಯಗಳಿಗೆ 1 1/2% ಹೊಲಯ ಮತ್ತು ಹೊಲಯ ಸಂಬಂಧಿತ ಜಾತಿಗೆ 1/2 ಹೆಚ್ಚಿಸಿ 2% ಮೀಸಲನ್ನು ಈ ಎರಡು ವರ್ಗಕ್ಕೆ ಹಂಚಿಕೆ ಮಾಡಿದ್ದಾರೆ. ಅಲೆಮಾರಿ ಮತ್ತಿತರ ಸಮುದಾಯಗಳನ್ನು ಮರೆತಿದ್ದಾರೆ.
ದಿನಾಂಕ 10/1/2023ರಂದು ಎಲ್ಲಾ ಜಿಲ್ಲಾ ಅಧಿಕಾರಿಗಳ ದ್ವಾರ ಮಾನ್ಯ ಸರ್ಕಾರಕ್ಕೆ ನಮ್ಮ ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ಅಲೇಮಾರಿ ಬುಡಕಟ್ಟು ಮಹಾಸಭಾ, ಬೆಂಗಳೂರು (ರಿ) ವತಿಯಿಂದ ಪತ್ರ ಚಳುವಳಿ ಮಾಡಿದ್ದರೂ ಕೂಡ ಸರ್ಕಾರಕ್ಕೆ ನಮ್ಮ ಅಲೆಮಾರಿ ದ್ವನಿ ಕೇಳಿಲ್ಲಾ.
ಕೇವಲ ಜನ ಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ವರ್ಗೀಕರಣ ಮಾಡದೆ. ಇದುವರೆಗೂ ಯಾವ-ಯಾವ ವರ್ಗಗಳು ಈ 15% ಮೀಸಲಾತಿಯನ್ನು ಬಳಸಿಕೊಂಡು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಮಾಜಿಕವಾಗಿ ಅಭಿವೃದ್ಧಿ ಹೊಂದಿವೆಯೋ ಅಂತಹ ಜಾತಿಗಳಿಗೆ ಸ್ವಲ್ಪ ಕಡಿಮೆ ಮೀಡಲು ನೀಡಿ, ಇದುವರೆಗೂ ಶಾಲೆಯ ಮುಖವನ್ನೇ ನೋಡದ ಸಮಾಜದಲ್ಲಿ ಕಡೆಗಣನೆಗೆ ಒಳಗಾಗಿರುವ ಮೀಸಲನ ವಾಸನೆಯನ್ನು ತಿಳಿದಿರದ ಯಾವುದೇ ಸರ್ಕಾರಿ ನೌಕರಿ, ರಾಜಕೀಯ ಸ್ಥಾನ-ಮಾನ ಪಡೆಯದೇ ಎಲ್ಲಾ ರಂಗಗಳಲ್ಲೂ ಹಿಂದುಳಿದಿರುವ ಅಲೆಮಾರಿ ಮತ್ತಿತರ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳೆಂದು ಗುರುತಿಸಿರುವ 4 ವರ್ಗದ ಸಮುದಾಯಗಳಿಗೆ ಈ ಒಳ ಮೀಸಲು ನೀಡಿರುವ 1% ಮೀಸಲು ಮೂಗಿಗೆ ತುಪ್ಪ ಸವರಿದಂತಿದೆ ಹಾಗೂ ಈ ಸಮುದಾಯಗಳನ್ನು ಮತ್ತೊಮ್ಮೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಈ ಸಮುದಾಯಗಳನ್ನು ಉಳಿಸಿ ಸಮಾಜದ ಮುಖ್ಯವಾಹಿನಿಗೆ ತಂದು ಸಮಾಜಿಕ ನ್ಯಾಯ ಏನಾದರೂ ದೊರೆಯಬೇಕೆಂದರೆ ಕನಿಷ್ಠ 2% ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ಅಲೇಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷರು ವಿ. ಸಣ್ಣ ಅಜ್ಜಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
You must be logged in to post a comment.