ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ 22-12-2022 ರಂದು ಬೆಳಗಾವಿ ಚಲೋ ಚಳುವಳಿ

ಅಂಗನವಾಡಿ ವ್ಯವಸ್ಥೆಯೊಳಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದನ್ನು ವಿರೋಧಿಸಿ, ಕನಿಷ್ಟ ವೇತನ ಜಾರಿಗೊಳಿಸುವುದು. ಗ್ರಾಚ್ಯುಟಿ ಸೌಲಭ್ಯ, ನಿವೃತ್ತಿ ವೇತನ ಜಾರಿ, ಕಳಪೆ ಮೊಬೈಲ್‌ಗಳ ಬದಲಿಗೆ ಮಿನಿಟ್ಯಾಬ್‌ಗಳನ್ನು ನೀಡುವುದು ಸೇರಿದಂತೆ ಅಂಗನವಾಡಿ ನೌಕರರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ದಿನಾಂಕ 22-12-2022 ರಂದು ಬೆಳಗಾವಿ ಚಲೋ ಚಳುವಳಿ”ಯನ್ನು ಹಮ್ಮಿಕೊಳ್ಳಲಾಗಿದೆ .

ಕಳೆದ 46 ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅನುಷ್ಠಾನದ ರೂವಾರಿಗಳಾಗಿ ಕೇವಲ ಗೌರವಧನದ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರುಗಳಿಗೆ ಔಧ್ಯಮಿಕ ಮತ್ತು ಆರ್ಥಿಕ ಭದ್ರತೆ ನೀಡುವ ಕುರಿತು ನಿರ್ಲಕ್ಷ ವಹಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಬಳಕೆಯ ವಸ್ತುಗಳಂತೆ ದುಡಿಸಿಕೊಳ್ಳುವ ಮೂಲಕ ಶೋಷಣೆ ಮಾಡಲಾಗುತ್ತಿದೆ.

ಸೇವಾ ಹಿರಿತನದ ಆಧಾರದ ಮೇಲೆ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಗೌರವಧನದ ಮಾಸಿಕ ಹತ್ತರಿಂದ ಹನ್ನೊಂದುವರೆ ಸಾವಿರ ಹಾಗೂ ಸಹಾಯಕಿಯರಿಗೆ ಐದರಿಂದ ಐದುವರೆ ಸಾವಿರ

ರೂಪಾಯಿ ಸಂಭಾವನೆಯಲ್ಲಿ ಇಂದಿನ ಬೆಲೆ ಏರಿಕೆ ಸೂಚ್ಯಂಕಕ್ಕನುಗುಣವಾಗಿ ಬದುಕು ನಡೆಸುವುದು ಅತ್ಯಂತ ದುಸ್ಥರವಾಗಿದೆ.

ಆದುದರಿಂದ ಅಂಗನವಾಡಿ ವ್ಯವಸ್ಥೆಯನ್ನು ಉಳಿಸಿ-ಬೆಳೆಸಲು ಪೂರಕವಾಗಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಅಗ್ರಹಿಸುತ್ತಿದ್ದೇವೆ.

ಬೇಡಿಕೆಗಳು :-

1. ಎಲ್.ಕೆ.ಜಿ-ಯು.ಕೆ.ಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿಯ ಪ್ರಾರಂಭಿಸಲು ಒತ್ತಾಯಿಸಿ: ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ(NEP)ಯನ್ನು ಅಂಗನವಾಡಿ ವ್ಯವಸ್ಥೆಯೊಳಗೆ ಜಾರಿಗೊಳಿಸಲು ಏಕಪಕ್ಷೀಯವಾಗಿ ಆತುರ ಪಡುತ್ತಿರುವ ರಾಜ್ಯ ಸರ್ಕಾರದ ನಿಲುವು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) ಯ ಮೂಲ ಆಶಯಗಳಿಗೆ ಚ್ಯುತಿಯನ್ನುಂಟು ಮಾಡಲಿದೆ . ಆರು ವರ್ಷದ ವಯೋಮಾನದೊಳಗಿನ ಮಕ್ಕಳು ಮತ್ತು ಗರ್ಭಿಣಿ-ಬಾಣಂತಿಯರ ಪೌಷ್ಠಿಕ ಆಹಾರ-ಆರೋಗ್ಯದ ಬಗ್ಗೆ ಕಾಳಜಿವಹಿಸಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳನ್ನು ಎನ್.ಇ.ಪಿ ಅಡಿಯಲ್ಲಿ ಶಾಲಾ ಪ್ರಾಂಗಣಕ್ಕೆ ಒಳಪಡಿಸಿದರೆ ಐ.ಸಿ.ಡಿ.ಎಸ್ ಯೋಜನೆ ಅವಸಾನವಾಗಲಿದೆ. ಮಕ್ಕಳು ಮತ್ತು ಮಹಿಳೆಯರಿಗೆ ದೊರೆಯುತ್ತಿರುವ ಪೂರಕ ಪೌಷ್ಠಿಕ ಆಹಾರಕ್ಕೆ ಕಡಿವಾಣ ಬೀಳಲಿದ್ದು, ಭದ್ರತಾ ಕಾಯ್ದೆಯ ಸವಲತ್ತುಗಳಿಂದ ಮಕ್ಕಳು-ಮಹಿಳೆಯರು ವಂಚಿತರಾಗಲಿದ್ದಾರೆ. ಆದುದರಿಂದ ಈಗಿರುವ ಅಂಗನವಾಡಿ ವ್ಯವಸ್ಥೆಯನ್ನೆ ಮತ್ತಷ್ಟು ಬಲಗೊಳಿಸಲು ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ-ಯು.ಕೆ.ಜಿ ಪ್ರಾರಂಭಿಸಲು ಅವಕಾಶ ಮಾಡಬೇಕು ಹಾಗೂ ಮಕ್ಕಳ ಕಲಿಕೆಗೆ ಪೂರಕವಾಗಿ ಅಂಗನವಾಡಿ ಶಿಕ್ಷಕಿಯರಿಗೆ ಸೂಕ್ತ ತರಬೇತಿ ಮತ್ತು ಪಠ್ಯ ಪುಸ್ತಕಗಳನ್ನು ಒದಗಿಸಬೇಕು. ಹಾಗೂ ಮಕ್ಕಳಿಗೆ ಸಮವಸ್ತ್ರ ಹಾಗೂ ವರ್ಗಾವಣೆ ಪತ್ರ ನೀಡುವ ಜವಾಬ್ದಾರಿಯನ್ನು ಅಂಗನವಾಡಿ ಕೇಂದ್ರಗಳಿಗೆ ವಹಿಸಬೇಕೆಂದು ಒತ್ತಾಯಿಸುತ್ತೇವೆ.

2. ಕನಿಷ್ಠ ವೇತನ: ಇಂದಿನ ಬೆಲೆ ಏರಿಕೆ ಸೂಚ್ಯಂಕಕ್ಕನುಗುಣವಾಗಿ ಅಂಗನವಾಡಿ ಸಿಬ್ಬಂದಿಗಳಿಗೆ ನೀಡಲಾಗುತ್ತಿರುವ ಗೌರವ ಧನದಲ್ಲಿ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದ್ದು, ಮಾಸಿಕ ಕನಿಷ್ಠ ವೇತನ 31500 ರೂಪಾಯಿ ನೀಡಲು ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇವೆ.

3. ಗ್ರಾಚ್ಯುಟಿ : ಗ್ರಾಚ್ಯುಟಿ ಸೌಲಭ್ಯ ಪಡೆಯಲು ಅಂಗನವಾಡಿ ಉದ್ಯೋಗಿಗಳು ಅರ್ಹರು ಎಂಬುದಾಗಿ ಗುಜರಾತ್ ಪ್ರಕರಣದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು,

ಸದರಿ ತೀರ್ಪಿನ ಆಧಾರದಲ್ಲಿ ರಾಜ್ಯದಲ್ಲಿ ಅಂಗವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ನೀಡಲು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.

4. ಕಳಪೆ ಗುಣಮಟ್ಟದ ಮೊಬೈಲ್‌ಗಳನ್ನು ವಾಪಸ್ ಪಡೆದು ಮಿನಿಟ್ಯಾಬ್‌ಗಳನ್ನು ನೀಡಬೇಕು: ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರಗಳಲ್ಲಿ ಫಲಾನುಭವಿಗಳ ದಾಖಲೆಗಳ ಸಂಗ್ರಹಕ್ಕಾಗಿ ನೀಡಲಾಗಿರುವ ಎಲ್.ಜಿ ಮೊಬೈಲ್‌ಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದಾಗಿದ್ದು, ಕ್ಷಿಪ್ರಗತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಾಗೂ ಸಂಗ್ರಹಣ ಸಾಮರ್ಥ್ಯವು ಸಹ ಕಡಿಮೆ ಜಿಬಿಯದಾಗಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಯು ಎದುರಾಗುತ್ತಿದ್ದು ಸುಲಲಿತವಾಗಿ ಕಾರ್ಯನಿರ್ವಹಿಸಲಾಗುತ್ತಿಲ್ಲ. ಹಾಗೂ ಮೊಬೈಲ್‌ಗಳು ಅತ್ಯಂತ ಚಿಕ್ಕದಾಗಿರುವುದರಿಂದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಕಾರ್ಯಕರ್ತೆಯರಿಗೆ ಸಣ್ಣ ಅಕ್ಷರಗಳು ಗೋಚರಿಸದೆ ದಾಖಲೆ ಸಂಗ್ರಹಣೆ ಮಾಡಲು ತೊಡಕುಂಟಾಗುತ್ತಿದೆ. ಅದುದರಿಂದ ವಿತರಿಸಲಾಗಿರುವ ಮೊಬೈಲ್‌ಗಳನ್ನು ಹಿಂಪಡೆದು ಅದರ ಬದಲಿಗೆ ಮಿನಿಟ್ಯಾಬ್‌ಗಳನ್ನು ನೀಡಬೇಕೆಂದು ಒತ್ತಾಯಿಸುತ್ತೇವೆ.

5. ಮಾರಣಾಂತಿಕ ಕಾಯಿಲೆ ಹೊಂದಿರುವವರಿಗೆ ಸ್ವಯಂ ನಿವೃತ್ತಿಗೆ ಅವಕಾಶ ಮಾಡಿಕೊಡುವ ಮೂಲಕ ಅವರಿಗೆ ಪರಿಹಾರ ಒದಗಿಸಬೇಕು ಹಾಗೂ ಅಂಗನವಾಡಿ ನೌಕರರನ್ನು ಸಾಮಾಜಿಕ ಸುರಕ್ಷ ಯೋಜನೆಯಾದ ಇ.ಎಸ್‌.ಐ ಸೌಲಭ್ಯ ಹಾಗೂ ಸರ್ಕಾರಿ ನೌಕರರಿಗಾಗಿ ರೂಪಿಸಿರುವ ನೌಕರ ಸ್ನೇಹಿ ಉಚಿತ ವೈದ್ಯಕೀಯ ಯೋಜನೆಯ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕೆಂದು ಒತ್ತಾಯಿಸಿ, ದಿನಾಂಕ 22.12.2022 ರಂದು ಗುರುವಾರ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆದು ಸಮಸ್ಯೆಗಳ ಪರಿಹಾರಕ್ಕಾಗಿ “ಬೆಳಗಾವಿ ಚಲೋ” ಚಳುವಳಿ ನಡೆಸುವ ಮೂಲಕ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು. ಬಿ.ಅಮ್ಜದ್ – ರಾಜ್ಯಾಧ್ಯಕ್ಷರು & ಜಯಮ್ಮ – ರಾಜ್ಯ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

ಪ್ರತಿನಿತ್ಯ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಪಾದುಕೆ ಗಳನ್ನು ಪೂಜಿಸುತ್ತಿರುವ ಪರಮ ಪೂಜ್ಯ ಶ್ರೀ 108 ಶ್ರೀ ಶ್ರೀಸುಬುಧೇಂದ್ರತೀರ್ಥ ಶ್ರೀಪಾದರು!

ಪ್ರತಿನಿತ್ಯ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಪಾದುಕೆ ಗಳನ್ನು ಪೂಜಿಸುತ್ತಿರುವ ಪರಮ ಪೂಜ್ಯ ಶ್ರೀ 108 ಶ್ರೀ ಶ್ರೀಸುಬುಧೇಂದ್ರತೀರ್ಥ ಶ್ರೀಪಾದರು!
ಇತ್ತೀಚೆಗೆ ಕಲ್ಯಾಣಿ ನಗರ ವಾದ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 108 ಶ್ರೀ ಶ್ರೀಸುಬುಧೇಂದ್ರತೀರ್ಥ ಶ್ರೀಪಾದರು,ಶ್ರೀಮನ್ ಮೂಲ ರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ ನಂತರ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಪಾದುಕೆಗೆ ಪೂಜೆಯನ್ನು ಮಾಡಿ ನಂತರ ರಾಯರ ಬೃಂದಾವನಕ್ಕೆ ಮಹಾಮಂಗಳಾರತಿಯನ್ನು ನೆರವೇರಿಸಿದರು .ಈ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಾಚಾರ್ಯರು, ಪುರೋಹಿತರಾದ ನಂದಕಿಶೋರಾಚಾರ್ಯರು ಹಾಗೂ ಭಕ್ತರು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು

City Today News – 9341997936

2023 ವಿಧಾನಸಭಾ ಚುನಾವಣೆ: KRS ಪಕ್ಷದಿಂದ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ

ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಮಹಿಳೆಯರ ಪರಿಸ್ಥಿತಿ ಉತ್ತಮವಾಗಿಲ್ಲ, ಪ್ರತಿನಿತ್ಯ ನಾವು ಮಹಿಳೆಯರ ಮೇಲೆ ಅವರು ಕೆಲಸ ಮಾಡುವ ಸ್ಥಳದಲ್ಲಿ, ಮನೆಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಅತ್ಯಾಚಾರ, ದೌರ್ಜನ್ಯ, ಕಿರುಕುಳ ಮತ್ತು ಶೋಷಣೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಬಹಳ ಕಡಿಮೆ ಪ್ರಮಾಣದಲ್ಲಿರುವುದು. ಪ್ರಸ್ತುತ ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ನಗಣ್ಯವಾಗಿದ್ದು, ಈ ಪರಿಸ್ಥಿತಿಯನ್ನು ಉತ್ತಮಪಡಿಸುವ ಅಗತ್ಯವಿದೆ. ಅದರಲ್ಲೂ ಪುರುಷ ಪ್ರಧಾನ ಸಮಾಜದ ನಮ್ಮಲ್ಲಿ ಬದಲಾವಣೆ ತರುವುದು ಬಹಳ ಕಷ್ಟದ ವಿಷಯ, ಆದರೆ ರಾಜಕೀಯ ಪಕ್ಷಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರೆ, ತ್ವರಿತವಾಗಿ ಬದಲಾವಣೆ ತರಬಹುದು. 

ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಸಬಲೀಕರಣದ ಬಗ್ಗೆ ಕೇವಲ ಮಾತನಾಡುತ್ತ ಕಾಲಹರಣ ಮಾಡುತ್ತಿವೆಯೆ ಹೊರತು, ಅವರಿಗೆ ನೀಡಬೇಕಾದ ಅವಕಾಶಗಳನ್ನು ಕಿತ್ತುಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ನಿರ್ಮಿಸಿಕೊಂಡಿವೆ ಮತ್ತು ಕಾರಣಗಳನ್ನು ನೀಡುತ್ತವೆ. ತೃತೀಯ ಹಂತದ ಸರ್ಕಾರಗಳಾದ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿ ದಶಕಗಳೆ ಕಳೆದಿದ್ದರೂ ಕೂಡ, ಅಲ್ಲಿಯೂ ಕೂಡ ಪುರುಷರದೇ ಪಾರಮ್ಯ ನಡೆಯುತ್ತಿದೆ. ಕೇವಲ ಹೆಸರಿಗೆ ಮಾತ್ರ ಮಹಿಳಾ ಚುನಾಯಿತ ಪ್ರತಿನಿಧಿಗಳಿದ್ದು, ನಿಜವಾದ ಅಧಿಕಾರ ಅವರ ಪತಿ/ತಂದೆ/ಮಕ್ಕಳು ಚಲಾಯಿಸುತ್ತಿರುತ್ತಾರೆ. ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ನಡೆಯುವ ಚುನಾವಣೆಗಳಿಗೆ ಮಹಿಳೆಯರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗುತ್ತದೆ. ಕನಿಷ್ಠ ಪಕ್ಷ ಮೇಲ್ಮನೆ ಚುನಾವಣೆಗಳಲ್ಲಿ, ನಿಸ್ಸಂದೇಹವಾಗಿ ಗೆಲ್ಲುವ ಕ್ಷೇತ್ರಗಳಲ್ಲೂ, ಅದರಲ್ಲೂ ನಾಮ ನಿರ್ದೇಶನ ಮಾಡುವಂತಹ ಸಂದರ್ಭಗಳಲ್ಲೂ ಮಹಿಳೆಯರನ್ನು ನಿರ್ಲಕ್ಷಿಸಲಾಗುತ್ತಿದೆ. ರಾಜ್ಯದಲ್ಲಿನ ಮೂರು ಭ್ರಷ್ಟ ಪಕ್ಷಗಳು ಎಂದಿಗೂ ಮಹಿಳೆಯರಿಗೆ, ಅವರಿಗೆ ಸಿಗಬೇಕಾದ ರಾಜಕೀಯ ಸ್ಥಾನಮಾನವನ್ನು ನೀಡುವುದಿಲ್ಲ. ಆ ಪಕ್ಷಗಳಿಗೆ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯುವುದು ಆದ್ಯತೆಯೆ ಹೊರತು, ಮಹಿಳೆಯರ ಸಬಲೀಕರಣ ಮತ್ತು ಅವರ ಮೇಲಿನ ದೌರ್ಜನ್ಯ ನಿವಾರಣೆ ಬೇಕಿಲ್ಲ.

ಈ ನಿಟ್ಟಿನಲ್ಲಿ ನಾಯಕತ್ವ ಗುಣವುಳ್ಳ ಮಹಿಳೆಯರು ಇಂದು ಸಮಾಜಕ್ಕೆ ಮತ್ತು ರಾಜಕೀಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೆ.ಆರ್.ಎಸ್. ಪಕ್ಷವು ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ನೀಡುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಮೂರನೇ ಒಂದರಷ್ಟು ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಡಲಿದ್ದು, ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಪಕ್ಷವೇ ಚುನಾವಣಾ ವೆಚ್ಚವನ್ನು ಕೂಡ ಭರಿಸಲಿದೆ.

ಕೆ.ಆರ್.ಎಸ್. ಪಕ್ಷವು ಪಾರದರ್ಶಕವಾಗಿ ಮತ್ತು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಹಾಗು ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತಿದೆ. ಈಗಾಗಲೇ ವಿಧಾನಸಭಾ ಚುನಾವಣೆಗೆ 170 ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿ, ಅವರಲ್ಲಿ 60 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಿಸಿದ್ದು, ಈಗಾಗಲೇ ಅವರೆಲ್ಲ, ಆಯಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ಒಂದು ವರ್ಷದಿಂದ ಕೆಆರ್‍ಎಸ್ ಪಕ್ಷವು ನಿರಂತರವಾಗಿ ಪ್ರತಿ ತಿಂಗಳು ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗಾಗಿ ಸಂದರ್ಶನ ನಡೆಸಿಕೊಂಡು ಬರುತ್ತಿದ್ದು, ಇದೇ ಡಿಸೆಂಬರ್ 10 ಮತ್ತು 11 ರಂದು ಸಂಭಾವ್ಯ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುತ್ತಿದೆ, ರಾಜ್ಯದ ನೆಲ, ಜಲ, ಭಾಷೆ, ಅರಣ್ಯ ಉಳಿಸಲು, ಸ್ವಚ್ಚ, ಪ್ರಾಮಾಣಿಕ ಮತ್ತು ನೈತಿಕ ರಾಜಕಾರಣದಲ್ಲಿ ಆಸಕ್ತಿಯುಳ್ಳವರು, ರಾಜ್ಯದಲ್ಲಿನ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಬೇಕೆಂಬ ಆಕಾಂಕ್ಷೆಯುಳ್ಳವರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಈ ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಸ್ವಚ್ಚ-ಸುಂದರ-ಸದೃಢ-ಸಮೃದ್ಧ ಕರ್ನಾಟಕ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲು ಈ ಮೂಲಕ ಕೋರಲಾಗುತ್ತಿದೆ. 

ದಿನಾಂಕ 10 ಮತ್ತು 11 ರಂದು ನಡೆಯುವ ಸಂಭಾವ್ಯ ಅಭ್ಯರ್ಥಿಗಳ ಸಂದರ್ಶನಕ್ಕೆ ಮಹಿಳೆಯರಿಗೆ 2,500/-   ಪುರುಷರಿಗೆ ರೂ. 5,000/- ಶುಲ್ಕವಿರುತ್ತದೆ, ಹೆಚ್ಚಿನ ಮಾಹಿತಿಗಾಗಿ 7975625575 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮಹಾಲಕ್ಷ್ಮೀ ಚನ್ನಕೇಶವ, ಪ್ರಧಾನ ಕಾರ್ಯದರ್ಶಿ – ಬೆಂಗಳೂರು ಮಹಾನಗರ ಮಹಿಳಾ ಸಮಿತಿ, ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

HOOVU FRESH RAISES $790K IN A PRE-SERIES A ROUND LED BY SAUCE.VC

Bangalore, November 2022: Hoovu Fresh, a fresh puja flower startup has raised $790K in a pre-series A funding round led by Sauce.VC and joined by multiple angels such as: Sangeet Agrawal (founder of Mokobara), Akshay Dujodwala (CSO at Mangalam Organics), Nikhil Bhandarkar (founder of Panthera Peak Capital), Mylktree Family Office, Cafe Coffee Day’s family office etc.

How it started: 

Started by sisters Yeshoda Karuturi and Rhea Karuturi in February 2019, Hoovu’s mission is all about making fresh flowers available every day at affordable prices.  They deliver high quality fresh flowers by shortening the supply chain and leveraging on technology in packaging and innovation.  “Hoovuu is a pan India brand synonymous with quality, fresh puja flowers.  We believe flowers are the way millions of Indians express their gratitude every day; whether used in prayer, to decorate your hair or to hang on a loved one’s picture.  We want to make those moments beautiful for everyone” say Yeshoda and Rhea.

Technology: 

By partnering with local farms, innovative packaging and multiple distribution channels, Hoovu has been able to reduce this turnaround time to 12-24 hours enabling the extension of the flower shelf life by two to five times. “With our developed processing and packaging technology our flowers stay fresh for 15 days when compared to the average of 2-3 days, something that is unheard of in the industry. This way we have been able to create value both for the farmer as well as the end customer” add Yeshoda and Rhea.

Expansion of offerings: 

In the past year Hoovu has expanded its offerings to temples as well. Team Hoovu fresh is responsible for doing the decoration at the ISKCON temple in Bangalore amongst many other temples. Hoovu’s range of products include assorted roses, assorted puja flowers and green mixes which can be bought by customers either as individual boxes or by signing up for their monthly subscriptions.   They also have special packages for festivals, puja staples and others curated with exclusive flowers.  Their assorted flowers plus greens package is very popular as it includes auspicious greens like gharke, bil Patre and tulsi which people use for their special pujas. Another customer favourite is their rose petal mola – made by hand rolling rose petals into a garland.

Availability: 

Hoovu has operations in Bangalore, Hyderabad and Mumbai. Flowers can be ordered via Big Basket, Zepto, Milk Basket and other grocery apps. Hoovu Fresh also offers agarbatti’s made out of recycled temple flowers and other puja samagri that can be shopped on www.hoovufresh.com 

“We are batting on Hoovu’s strength in the fresh flower supply chain and their unique go-to-market strategy of building influence via temples to establish trust with consumers. We view Hoovu as a breakthrough brand in the enormous and unorganised space of puja consumables. While in the early stages, Rhea and Yashoda’s adoption of technology to repurpose wastage while improving margins to deliver growth and profits from day zero is a testament to their disciplined and execution focussed DNA. I am personally excited about the employment generation potential of this business especially for women at the lowest strata of society. It is the perfect marriage of purpose with profit” says Manu Chandra, Founder and Managing Partner at Sauce. VC

“Hoovu is super exciting because they are creating a brand around what was previously a commodity. They are building a category ground up for Puja flowers and also creating a very strong community of modern/religious customers. The puja space is growing for new age brands with a fresh take and Hoovu is leading this charge” says Sangeet Agarwal, Founder of Mokobara.

City Today News – 9341997936

AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ 1000ನೇ ಬ್ಯಾಂಕಿಂಗ್ ಟಚ್‌ಪಾಯಿಂಟ್ ಅನ್ನು ಪ್ರಾರಂಭಿಸಿದೆ

  ಬೆಂಗಳೂರಿನ ಇಂದಿರಾನಗರ ಶಾಖೆಯನ್ನು ಪ್ರಾರಂಭಿಸುವುದರೊಂದಿಗೆ ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವವನ್ನು 18 ಬ್ಯಾಂಕಿಂಗ್ ಟಚ್‌ಪಾಯಿಂಟ್‌ಗಳಿಗೆ ವಿಸ್ತರಿಸುತ್ತದೆ

ಬೆಂಗಳೂರು, 7 ಡಿಸೆಂಬರ್ 2022: ಭಾರತದ ಅತಿದೊಡ್ಡ ಸಣ್ಣ ಹಣಕಾಸು ಬ್ಯಾಂಕ್ ಮತ್ತು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ಬ್ಯಾಂಕ್‌ಗಳಲ್ಲಿ ಒಂದಾದ AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇಂದು ಬೆಂಗಳೂರಿನ ಇಂದಿರಾ ನಗರದಲ್ಲಿ ತನ್ನ 1000 ನೇ ಬ್ಯಾಂಕಿಂಗ್ ಟಚ್‌ಪಾಯಿಂಟ್ ಅನ್ನು ಪ್ರಾರಂಭಿಸಿದೆ.  AU ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಪ್ಯಾನ್-ಇಂಡಿಯಾ ಉಪಸ್ಥಿತಿಯ ಪ್ರಯಾಣದಲ್ಲಿ ಇದು ಗಮನಾರ್ಹ ಮಾನದಂಡವಾಗಿದೆ ಮತ್ತು ಇದು ನಗರದಲ್ಲಿ ಎಂಟು ಬ್ಯಾಂಕಿಂಗ್ ಟಚ್‌ಪಾಯಿಂಟ್‌ಗಳೊಂದಿಗೆ ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ಬ್ಯಾಂಕ್‌ನ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸುತ್ತದೆ.  ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಸಿಇಒ ಮತ್ತು ಗ್ರೂಪ್ ಮೆಡಿಕಲ್ ಡೈರೆಕ್ಟರ್, ಮಾಜಿ ಅಧ್ಯಕ್ಷ ಡಾ ನಂದಕುಮಾರ್ ಜೈರಾಮ್ ಅವರು ಶಾಖೆಯನ್ನು ಉದ್ಘಾಟಿಸಿದರು;  ಶ್ರೀ B.N.S ರೆಡ್ಡಿ (EX IPS), Rtd.  ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ ಮತ್ತು ಇಂದಿರಾನಗರ ಕ್ಲಬ್ನ ಪ್ರಸ್ತುತ ಅಧ್ಯಕ್ಷರಾದ ಶ್ರೀ. ಅವಿನಾಶ್ ಶರಣ್, ಶಾಖೆ ಬ್ಯಾಂಕಿಂಗ್, AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಶ್ರೀ. ಲಾಯ್ಡ್ ಜೋಸೆಫ್ ಅವರೊಂದಿಗೆ ರಾಷ್ಟ್ರೀಯ ವ್ಯಾಪಾರ ವ್ಯವಸ್ಥಾಪಕರು.  ಲೋಬೋ, ಸರ್ಕಲ್ ಮ್ಯಾನೇಜರ್ (ದಕ್ಷಿಣ), AU ಸಣ್ಣ ಹಣಕಾಸು ಬ್ಯಾಂಕ್.

ದೃಢವಾದ ರಿಟೇಲ್ ಫ್ರಾಂಚೈಸ್ ನಿರ್ಮಿಸಲು ಬ್ಯಾಂಕ್ ಗಮನಹರಿಸಿರುವುದರಿಂದ, AU ಬ್ಯಾಂಕ್ ದಕ್ಷಿಣದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವತ್ತ ಗಮನಹರಿಸುತ್ತಿದೆ, ಕರ್ನಾಟಕವು ಗೇಟ್‌ವೇ ಆಗಿದೆ.  ಕರ್ನಾಟಕ ರಾಜ್ಯವು ತನ್ನ ದೃಢವಾದ IT ಸೇವಾ ಉದ್ಯಮದಿಂದ ನಡೆಸಲ್ಪಡುವ ದೇಶದಲ್ಲಿ 5 ನೇ ಅತ್ಯಧಿಕ GDP ಹೊಂದಿದೆ, ಮತ್ತು ಇದು ಭಾರತದಲ್ಲಿನ ಔಪಚಾರಿಕ ಉದ್ಯೋಗಗಳಲ್ಲಿ ಸುಮಾರು 10% ಗೆ ಕೊಡುಗೆ ನೀಡುತ್ತದೆ.  ರಾಜ್ಯದ ಬಲವಾದ ಆರ್ಥಿಕತೆಯು ಬ್ಯಾಂಕಿಂಗ್ ವಿಭಾಗಕ್ಕೆ ಗಮನಾರ್ಹ ಮಾರುಕಟ್ಟೆಯನ್ನು ಮಾಡುತ್ತದೆ, ಠೇವಣಿ ಮತ್ತು ಕ್ರೆಡಿಟ್‌ಗಳ ಹೆಚ್ಚಿನ ಸಾಮರ್ಥ್ಯವನ್ನು ನೀಡುತ್ತದೆ.  ರಾಜ್ಯವು 12 ಲಕ್ಷ ಕೋಟಿ ಮೌಲ್ಯದ ಮೂರನೇ ಅತಿದೊಡ್ಡ ಠೇವಣಿ ಮಾರುಕಟ್ಟೆಯನ್ನು ಮತ್ತು 8 ಲಕ್ಷ ಕೋಟಿ ಮೌಲ್ಯದ ನಾಲ್ಕನೇ ಅತಿದೊಡ್ಡ ಕ್ರೆಡಿಟ್ ಮಾರುಕಟ್ಟೆಯನ್ನು ನೀಡುತ್ತದೆ.  ಬೆಂಗಳೂರು ಮಾತ್ರ ಸುಮಾರು ರೂ.  ರಾಜ್ಯದ 9 ಲಕ್ಷ ಕೋಟಿಗಳ ಠೇವಣಿ ಮತ್ತು ದಕ್ಷಿಣ ಭಾರತದಲ್ಲಿ AU ನ ವಿಸ್ತರಣೆ ಯೋಜನೆಯಲ್ಲಿ ಪ್ರಮುಖ ನಗರವಾಗಿ ಉಳಿದಿದೆ.

  ಬೆಳವಣಿಗೆಯ ಕುರಿತು ಮಾತನಾಡಿದ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಉತ್ತಮ್ ತಿಬ್ರೆವಾಲ್, “ಇಂದು, ನಾವು 1000 ಟಚ್‌ಪಾಯಿಂಟ್ ಹೆಗ್ಗುರುತನ್ನು ತಲುಪುತ್ತಿರುವಾಗ, ಐದೂವರೆ ವರ್ಷಗಳ ಈ ಪ್ರಯಾಣವನ್ನು ಹಿಂತಿರುಗಿ ನೋಡುವುದು ತುಂಬಾ ವಿನಮ್ರವಾಗಿದೆ.  300+ ಟಚ್‌ಪಾಯಿಂಟ್‌ಗಳು. ಈ ಅವಧಿಯಲ್ಲಿ, ನಾವು *77,800 Cr+ ನ ಬ್ಯಾಲೆನ್ಸ್ ಶೀಟ್ ಗಾತ್ರವನ್ನು ನಿರ್ಮಿಸಿದ್ದೇವೆ, 58,300 Cr+ ಠೇವಣಿ ಬೇಸ್ ಮತ್ತು *52,400 Cr+ ನ ಒಟ್ಟು ಮುಂಗಡಗಳನ್ನು ಸ್ಥಿರವಾಗಿ ಸುಧಾರಿಸುತ್ತಿರುವ ಗ್ರ್ಯಾನ್ಯುಲಾರಿಟಿಯೊಂದಿಗೆ ನಾವು ನಿರ್ಮಿಸಿದ್ದೇವೆ. ನಾವು ಸಾಧಿಸಿದ ಪರಿಣಾಮವನ್ನು ನೋಡುವುದು ಸಂತೋಷಕರವಾಗಿದೆ.  ಈ ಪ್ರಯಾಣದ ಮೂಲಕ ಮಾಡಿ, ಹೆಚ್ಚಿನ ಗ್ರಾಹಕ ತೊಡಗಿಸಿಕೊಳ್ಳುವಿಕೆಯೊಂದಿಗೆ ಉತ್ಪನ್ನಗಳು, ಸೇವೆಗಳು ಮತ್ತು ಡಿಜಿಟಲ್ ಪರಿಹಾರಗಳ ಸಮಗ್ರ ಸೂಟ್ ಅನ್ನು ನಿರ್ಮಿಸುವಲ್ಲಿ ಪ್ರಮುಖ ಗಮನವನ್ನು ಕೇಂದ್ರೀಕರಿಸಲಾಗಿದೆ. ಬ್ಯಾಂಕಿಂಗ್ ವಿತರಣೆ ಮತ್ತು ಗ್ರಾಹಕರಿಗೆ ತಲುಪುತ್ತದೆ. ಪ್ರವೇಶದ ಸುಲಭತೆಗಾಗಿ, ನಾವು ಬ್ಯಾಂಕಿನ ಡಿಜಿಟಲ್ ವಿತರಣೆಯನ್ನು ನಿರ್ಮಿಸಿದ್ದೇವೆ  ನಮ್ಮ AU0101 ಅಪ್ಲಿಕೇಶನ್ ಮೂಲಕ ಪ್ರಾಯೋಗಿಕವಾಗಿ ಗ್ರಾಹಕರ ಹ್ಯಾಂಡ್‌ಸೆಟ್‌ಗಳಲ್ಲಿ ಬ್ಯಾಂಕ್ ಅನ್ನು ತರುತ್ತದೆ.

ವೀಡಿಯೊ ಬ್ಯಾಂಕಿಂಗ್ ಮೂಲಕ, ನಮ್ಮ ಗ್ರಾಹಕರು ತಮ್ಮ ಅನುಕೂಲಕ್ಕಾಗಿ 400 ಕ್ಕೂ ಹೆಚ್ಚು ಸೇವೆಗಳನ್ನು ಪ್ರವೇಶಿಸಬಹುದು.  ಈಗ, ನಮ್ಮ ಉತ್ಸಾಹ ಮತ್ತು ದೀರ್ಘಾವಧಿಯ ಸಂಬಂಧಗಳನ್ನು ನಿರ್ಮಿಸುವ ಪ್ರೀತಿಯೊಂದಿಗೆ ದಕ್ಷಿಣದ ರಾಜ್ಯಗಳಲ್ಲಿನ ಗ್ರಾಹಕರಿಗೆ ಸೇವೆ ಸಲ್ಲಿಸಲು ನಾವು ಪ್ರಯತ್ನಿಸುತ್ತೇವೆ.  ಉಳಿತಾಯ ಖಾತೆಯ ಮೇಲಿನ ಮಾಸಿಕ ಬಡ್ಡಿ ಪಾವತಿ, ವಿಸ್ತೃತ ಬ್ಯಾಂಕಿಂಗ್ ಅವಧಿಗಳು ಮತ್ತು ಯಾವುದೇ ಠೇವಣಿ ಅಥವಾ ಹಿಂಪಡೆಯುವ ಸ್ಲಿಪ್‌ನಂತಹ ನಮ್ಮ ಪ್ರಮುಖ ವೈಶಿಷ್ಟ್ಯಗಳಿಂದ ಈ ಪ್ರದೇಶದ ಗ್ರಾಹಕರು ಪ್ರಯೋಜನ ಪಡೆಯಬೇಕೆಂದು ನಾವು ಬಯಸುತ್ತೇವೆ.  ಅವರು ಉಳಿತಾಯ ಖಾತೆ ಮತ್ತು ಠೇವಣಿಗಳ ಮೇಲೆ ಸ್ಪರ್ಧಾತ್ಮಕ ಮತ್ತು ಗ್ರಾಹಕ ಸ್ನೇಹಿ ಬಡ್ಡಿ ದರವನ್ನು ಸಹ ಪಡೆಯಬಹುದು.”

  AU ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ದಕ್ಷಿಣ ಭಾರತ ವಿಸ್ತರಣೆ ಯೋಜನೆ ಕುರಿತು ಮಾತನಾಡಿದ AU ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ರಾಷ್ಟ್ರೀಯ ವ್ಯಾಪಾರ ವ್ಯವಸ್ಥಾಪಕ, ಶಾಖೆ ಬ್ಯಾಂಕಿಂಗ್ ಶ್ರೀ ಅವಿನಾಶ್ ಶರಣ್, “ನಾವು ಎರಡು ವರ್ಷಗಳ ಹಿಂದೆ ಮೂರು ಶಾಖೆಗಳೊಂದಿಗೆ ದಕ್ಷಿಣ ಭಾರತದಲ್ಲಿ ಕಾಲಿಟ್ಟಿದ್ದೇವೆ. ಕಳೆದ 11 ತಿಂಗಳುಗಳಲ್ಲಿ,  ನಾವು ಮಹತ್ವಾಕಾಂಕ್ಷೆಯಿಂದ ~*700 ಕೋಟಿ ಠೇವಣಿ ಪುಸ್ತಕವನ್ನು ನಿರ್ಮಿಸುವಾಗ ದಕ್ಷಿಣದ 18 ಟಚ್‌ಪಾಯಿಂಟ್‌ಗಳಿಗೆ ನಮ್ಮ ಉಪಸ್ಥಿತಿಯನ್ನು ವಿಸ್ತರಿಸಿದ್ದೇವೆ. ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿಯಾಗಿದೆ, ಇದು ವರ್ಷಗಳಲ್ಲಿ ಅನೇಕ ಯುನಿಕಾರ್ನ್‌ಗಳನ್ನು ನಿರ್ಮಿಸಿದೆ. ಇದು ರಾಜ್ಯದ ಅನುಕೂಲಕರ ವ್ಯಾಪಾರ ವಾತಾವರಣಕ್ಕೆ ಸಾಕ್ಷಿಯಾಗಿದೆ.  ದೊಡ್ಡ ಐಟಿ ಉದ್ಯಮ, ಏರೋಸ್ಪೇಸ್ ಹಬ್ ಮತ್ತು ಬಯೋಟೆಕ್ ಹಬ್‌ಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸಂಬಳ ಪಡೆಯುವ, ಸ್ವಯಂ ಉದ್ಯೋಗಿ ಮತ್ತು ಸಣ್ಣ ವ್ಯಾಪಾರ ವಿಭಾಗಕ್ಕೆ ನಮ್ಮ ಬ್ಯಾಂಕಿಂಗ್ ಸೇವೆಗಳು ಇಲ್ಲಿ ಗ್ರಾಹಕರ ವಿಶ್ವಾಸವನ್ನು ಗಳಿಸುವುದರೊಂದಿಗೆ ರಾಜ್ಯದಲ್ಲಿ ನಮ್ಮ ವ್ಯಾಪಾರವನ್ನು ಬಲಪಡಿಸಲು ಸಹಾಯ ಮಾಡುತ್ತದೆ.”

ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಸಿಇಒ ಮತ್ತು ಸಮೂಹ ವೈದ್ಯಕೀಯ ನಿರ್ದೇಶಕ ಡಾ.ನಂದಕುಮಾರ್ ಜೈರಾಮ್ ಮಾತನಾಡಿ, “ನಮ್ಮ ನಗರದಲ್ಲಿ AU ಬ್ಯಾಂಕ್‌ನ 1000 ನೇ ಬ್ಯಾಂಕಿಂಗ್ ಟಚ್‌ಪಾಯಿಂಟ್ ಅನ್ನು ಉದ್ಘಾಟಿಸಲು ನನಗೆ ತುಂಬಾ ಸಂತೋಷವಾಗಿದೆ. AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಣಕಾಸಿನ ಒಳಗೊಳ್ಳುವಿಕೆಯ ಮೇಲೆ ಅಚಲವಾದ ಗಮನವನ್ನು ಹೊಂದಿದೆ.  ಗ್ರಾಹಕರಿಗೆ ಸೇವೆ ಸಲ್ಲಿಸಲು ಪಟ್ಟುಬಿಡದೆ ಕೆಲಸ ಮಾಡುವ ವ್ಯಾಪಕ ಅನುಭವ. ನಮ್ಮ ನಗರ ಮತ್ತು ಇಡೀ ದಕ್ಷಿಣ ಭಾರತದ ನಿವಾಸಿಗಳು ಇಲ್ಲಿ AU ಬ್ಯಾಂಕ್‌ನ ವಿಸ್ತರಣೆಯೊಂದಿಗೆ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ ಎಂದು ನನಗೆ ಖಾತ್ರಿಯಿದೆ.”

  AU ಬ್ಯಾಂಕ್ ಬ್ಯಾಂಕಿಂಗ್ ಪ್ರವೇಶವನ್ನು ಸುಧಾರಿಸಲು ಅನೇಕ ಉದ್ಯಮ-ಮೊದಲ ಡಿಜಿಟಲ್ ಬ್ಯಾಂಕಿಂಗ್ ಪ್ರಯತ್ನಗಳನ್ನು ಕೈಗೊಂಡಿದೆ.  ಬ್ಯಾಂಕ್ ಕರೆಂಟ್ ಅಕೌಂಟ್ ಮತ್ತು ಫಿಕ್ಸೆಡ್ ಡೆಪಾಸಿಟ್ ಸೇರಿದಂತೆ ಎಲ್ಲಾ ಠೇವಣಿ ಖಾತೆಯ ಪ್ರಭೇದಗಳನ್ನು ಟ್ಯಾಬ್ಲೆಟ್‌ನಲ್ಲಿ ಡಿಜಿಟಲ್‌ನಲ್ಲಿ ವಿತರಿಸುತ್ತಿದೆ ಮತ್ತು ದ್ವಿಚಕ್ರ ವಾಹನಗಳ ಮೇಲೆ ಸಾಲವನ್ನು ಬಯಸುವ ಗ್ರಾಹಕರಿಗೆ ಎಂಡ್-ಟು-ಎಂಡ್ ಡಿಜಿಟಲ್ ಟ್ರಿಪ್ ನೀಡುತ್ತದೆ.  AU ಬ್ಯಾಂಕ್ ತನ್ನದೇ ಆದ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಹೊರಬಂದ ಮೊದಲ ಮತ್ತು ಏಕೈಕ ಸಣ್ಣ ಹಣಕಾಸು ಬ್ಯಾಂಕ್ ಆಗಿದೆ.

City Today News – 9341997936