ವರ್ಲ್ಡ್‌ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾಗಿ ವಸಂತ ಕವಿತಾ

ವರ್ಲ್ಡ್‌ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾಗಿ ವಸಂತ ಕವಿತಾ
ಬೆಂಗಳೂರು:
ಕೆ ಸಿ ರೆಡ್ಡಿ ಸರೋಜಮ್ಮ ವೆಲ್ಫೇರ್ ಫೌಂಡೇಶನ್ ಸ್ಥಾಪಕಿ ಹಾಗೂ ಕಾರ್ಯದರ್ಶಿ ಮತ್ತು
ತಿರುಪತಿ ತಿರುಮಲ ದೇವಸ್ಥಾನ ಎಲ್ ಎ ಸಿ ಬೆಂಗಳೂರು ಕರ್ನಾಟಕ ಹಾಗೂ
ಲಾಯನ್ ಕ್ಯಾನ್ಬೆರಾ ಇಂಟರ್‌ನ್ಯಾಷನಲ್‌ ಕ್ಲಬ್‌ನ ಅಧ್ಯಕ್ಷರಾದ ಶ್ರೀಮತಿ ವಸಂತ ಕವಿತಾ ಅವರನ್ನು
ಕರ್ನಾಟಕ ರಾಜ್ಯಕ್ಕಾಗಿ ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಇಂಡೋರ್, ಮಧ್ಯಪ್ರದೇಶ್ ನಲ್ಲಿ ಕ್ಲಬ್
ಅಧ್ಯಕ್ಷರಾದ ಡಾ ದಿವಾಕರ್ ಶುಕ್ಲಾ. ಸಂತೋಷ್ ಶುಕ್ಲಾ, ಶಿಖಾ ಶರ್ಮಾ ಪತ್ರ ನೀಡಿ ಗೌರವಿಸಿದರು.

ಸಚಿವ ರಾಮ್ ದಾಸ್ ಅಠವಾಲೆ ಮತ್ತು
ಬಾಲಿವುಡ್ ಗೀತರಚನೆಕಾರ ಸಮೀರ್ ಅಂಜಾಮ್ ಮತ್ತು
ಹಾಡುಗಾರರಾದ ಉದಿತ್ ನಾರಾಯಣ ಸೇರಿದಂತೆ ನಟಿ‌ ಜಯಪ್ರದಾ ಉಪಸ್ಥಿತರಿದ್ದರು

City Today News

9341997936

ಡಾ. ಬಿ.ಆರ್.ಅಂಬೇಡ್ಕರ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ವಿಶ್ವವಿದ್ಯಾಲಯ ನಿರ್ಮಾಣ ಕಾರ್ಯದಲ್ಲಿ ಬಾರೀ ದೊಡ್ಡ ಮೊತ್ತದ ಅಕ್ರಮ ನಡೆದಿದೆ – ಅಹಿಂದ ರಕ್ಷಣಾ ವೇದಿಕೆ ಕಾರ್ಯದರ್ಶಿ ಜಿ.ಕೆ.ಜಯರಾಮ್

ಅಂಬೇಡ್ಕರ್ ವಿಶ್ವ ವಿದ್ಯಾಲಯ ನಿರ್ಮಾಣದಲ್ಲಿ ಬಾರೀ ಅವ್ಯವಹಾರ- ಅಹಿಂದ ನಾಯಕರ ಆರೋಪ

ಡಾ. ಬಿ.ಆರ್.ಅಂಬೇಡ್ಕರ್ ಲಂಡನ್ ಸ್ಕೂಲ್ ಆಪ್ ಎಕನಾಮಿಕ್ಸ್ ವಿಶ್ವವಿದ್ಯಾಲಯ ನಿರ್ಮಾಣ ಕಾರ್ಯದಲ್ಲಿ ಬಾರೀ ದೊಡ್ಡ ಮೊತ್ತದ ಆಕ್ರಮ ನಡೆದಿದೆ ಎಂದು ಅಹಿಂದ ರಕ್ಷಣಾ ವೇದಿಕೆ ಕಾರ್ಯದರ್ಶಿ ಜಿ.ಕೆ.ಜಯರಾಮ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರು 350 ರಿಂದ 400 ಕೋಟಿ ರೂಪಾಯಿ ಹಣ ಬಿಡುಗಡೆ ಗೊಳಿಸಲಾಗಿದ್ದು, ಈ ಮಹತ್ವದ ಯೋಜನೆಯನ್ನು ಯಾರಿಗೆ ಗುತ್ತಿಗೆ ನೀಡಲಾಗಿದೆ. ಇಷ್ಟು ದೊಡ್ಡ ಮಟ್ದದ. ಹಣವನ್ನು ನೀಡಿ ನಿರ್ಮಾಣ ಮಾಡಲಾಗಿರುವ ವಿ.ವಿ ಯನ್ನು ಇದುವರೆಗೂ ಉದ್ಘಾಟನೆಗೊಂಡಿಲ್ಲ. ಈ ಬಗ್ಗೆ ದಲಿತ ನಾಯಕರು ಕಣ್ಮುಚ್ಚಿ ಕುಳಿತಿದ್ದು , ಇವರಿಗೆ ಎಷ್ಟು ಹಣ ಸಂದಾಯವಾಗಿದೆ ಎಂದು ತಿಳಿಸಿದರು.
ಇದುವರೆಗೂ ಬೃಹತ್ ಪ್ರಮಾಣದಲ್ಲಿ ನಿರ್ಮಾಣ ಮಾಡಿರುವ ಅಂಬೇಡ್ಕರ್ ಪ್ರತಿಮೆಯನ್ನು ಉದ್ಘಾಟನೆ ಮಾಡಿಲ್ಲ. ಕೂಡಲೇ ಈ ಪುತ್ಥಳಿ ಯನ್ನು ಅನಾವರಣಗೊಳಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ರಾದ ಮುನೀರ್ ಎಸ್ ಬಿ. ಚೌದ್ರಿ, ಸುರೇಶ ನಾಯಕ ಮತ್ತಿತರರು ಹಾಜರಿದ್ದರು.

City Today News

9341997936

ಕರುನಾಡ ಜನಸ್ಪಂದನ ವೇದಿಕೆ ವತಿಯಿಂದ ಹೃದಯಸ್ಪರ್ಶಿ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಶಿಕ್ಷಕರ ಹಾಗೂ ಅಭಿಯಂತರರ ದಿನಾಚರಣೆ

ಕರುನಾಡ ಜನಸ್ಪಂದನ ವೇದಿಕೆ ವತಿಯಿಂದ ಹೃದಯಸ್ಪರ್ಶಿ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಶಿಕ್ಷಕರ ಹಾಗೂ ಅಭಿಯಂತರರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ, ಅಭಿಯಂತರರಿಗೆ ಹಾಗೂ ಸಮಾಜ ಸೇವೆ ಮಾಡುತ್ತಿರುವ ಹಲವು ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ನಗರದ ಜ್ಞಾನ ಸೌಧ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಬಿಬಿಎಂಪಿ ಮಾಜಿ ಸದಸ್ಯರಾದ ವಾಗೀಶ್, ಸಂಜೆ ಸಮಾಚಾರ್ ಪತ್ರಿಕೆಯ ಸಂಪಾದಕರಾದ ಬಿ.ಎ ಮಹೇಂದ್ರ ಹಾಗೂ ಆರ್ ಆರ್ ಪ್ರಸಾದ್ ರವರು ಉದ್ಘಾಟಿಸಿ ನಂತರ ಸನ್ಮಾನಿತರಿಗೆ ಸನ್ಮಾನಿಸಿ ಅಭಿನಂದಿಸಿದರು.

ಈ ವೇಳೆ ಮಾಜಿ ಬಿಬಿಎಂಪಿ ಸದಸ್ಯರಾದ ವಾಗೀಶ್ ಮಾತನಾಡಿ ಈ ಸಂಸ್ಥೆಗಳು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲು ಈ ಸಂಸ್ಥೆಗಳ ಜೊತೆ ಸದಾ ನಾವು ಕೈಜೋಡಿಸುತ್ತೇವೆ ಎಂದು ಹೇಳಿದರು.

ಬಳಿಕ ಸಂಜೆ ಸಮಾಚಾರ್ ಪತ್ರಿಕೆಯ ಸಂಪಾದಕರಾದ ಬಿ.ಎ. ಮಹೇಂದ್ರ ಮಾತನಾಡಿ ಕರುನಾಡ ಜನಸ್ಪಂದನ ವೇದಿಕೆ ಈ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡು ಶಿಕ್ಷಕರು ಹಾಗೂ ಸಮಾಜಮುಖಿ ಕಾರ್ಯನಿರ್ವಹಿಸುತ್ತಿರುವ ಗಣ್ಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. 

ಮುಂಬರುವ ದಿನಗಳಲ್ಲಿ ಈ ಸಂಸ್ಥೆ ಉನ್ನತ ಮಟ್ಟಕ್ಕೆ ಏರಿ ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲಿ ಎಂದು ಹೇಳಿದರು.

ನಂತರ ಸಮಾಜ ಸೇವಕರಾದ ಆರ್.ಆರ್. ಪ್ರಸಾದ್ ಮಾತನಾಡಿ ಈ ಸಂಸ್ಥೆಗಳ ಕಾರ್ಯವೈಖರಿ ನಿಜಕ್ಕೂ ವಿಭಿನ್ನವಾಗಿದ್ದು ಪರಿಸರ ಸಂರಕ್ಷಣೆ, ಶಿಕ್ಷಣ ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ಒತ್ತು ನೀಡುತ್ತಿರುವುದು ನಿಜಕ್ಕೂ ಸಂತಸದ ವಿಷಯ ಎಂದು ಹೇಳಿದರು.

ಕರುನಾಡ ಜನಸ್ಪಂದನೆ ವೇದಿಕೆಯ ರಾಜ್ಯಾಧ್ಯಕ್ಷರಾದ ನಟರಾಜ್ ಬಿ.ಪಿ ಮಾತನಾಡಿ ಯಾರೇ ಒಬ್ಬ ವ್ಯಕ್ತಿಯ ಹಿಂದೆ ಗುರುವಿನ ಪರಿಶ್ರಮ ಇದ್ದೇ ಇರುತ್ತದೆ ತಾವೇನಾದರೂ ಇಂದು ಸಾಧಿಸುತ್ತಿದ್ದೇವೆ ಎಂದರೆ ಅದಕ್ಕೆ ಮೂಲಕಾರಣ ಶಿಕ್ಷಕರು ಅಂತಹ ಶಿಕ್ಷಕರನ್ನು ಸನ್ಮಾನಿಸಿ ಅಭಿನಂದಿಸುತ್ತಿರುವುದು ನಿಜಕ್ಕೂ ನಮಗೆ ಸಂತೋಷ ತಂದಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಮೋಹನ್ ಕುಲಕರ್ಣಿ ಮಾತನಾಡಿ ಸಂಸ್ಥೆಗಳು ಹಲವು ಒಳ್ಳೆಯ ನಿರ್ವಹಿಸುತ್ತಿದ್ದು ಮುಂಬರುವ ದಿನಗಳಲ್ಲಿ ಈ ಸಂಸ್ಥೆಗಳೊಡನೆ ಕೈಜೋಡಿಸಿ ಕಾರ್ಯ ನಿರ್ವಹಿಸಲು ನಾನು ಸದಾ ಸಿದ್ಧನಾಗಿದ್ದೇನೆ ಎಂದು ಹೇಳಿದರು

ಈ ಕಾರ್ಯಕ್ರಮದಲ್ಲಿ ಕರುನಾಡ ಜನಸ್ಪಂದನ ವೇದಿಕೆ ಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ದಿಲೀಪ್ .ಆರ್, ಹೃದಯಸ್ಪರ್ಶಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಸುರೇಶ್, ಹಿರಿಯ ಪತ್ರಕರ್ತರಾದ ಮೋಹನ್ ಕುಲಕರ್ಣಿ, ಖ್ಯಾತ ವಕೀಲರಾದ ಹರಿಪ್ರಸಾದ್, ಸಮಾಜ ಸೇವಕರಾದ ಗೀತಾ, ಭರತನಾಟ್ಯ ಶಿಕ್ಷಕರಾದ ಕಾವ್ಯ ದಿಲೀಪ್ ಸೇರಿದಂತೆ ಹಲವರು ಭಾಗವಹಿಸಿದ್ದರು.

City Today News

9341997936

ಭಾರತ್ ಬಂದ್ ಪರ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಬೆಂಬಲ

ಪತ್ರಿಕಾ ಹೇಳಿಕೆ
1). ಮೆಕ್ಕೆಜೋಳ ಕನಿಷ್ಠ ಮೂರು ಸಾವಿರ ಗಳು ಬೆಂಬಲ ಬೆಲೆ ಘೋಷಣೆ ಮಾಡಬೇಕು ರಾಜ್ಯ ಸರ್ಕಾರ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಪ್ರಾರಂಭಿಸಬೇಕು
2) ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ 28 ಪ್ರಕರಣಗಳು ಸುಮಾರು 750 ಕ್ಕಿಂತ ಹೆಚ್ಚಿದ್ದು ರಾಣೆಬೆನ್ನೂರಿನಲ್ಲಿ ಎಸ್ಎಲ್ ಓ ಆಫೀಸಿನಲ್ಲಿ ಪೆಂಡಿಂಗ್ ಉಳಿದಿದ್ದು ಅವುಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸಬೇಕು
3) ಕಾಡು ಪ್ರಾಣಿಗಳಿಂದ ರೈತರ ಜಮೀನಿಗೆ ಬೆಳೆಗಳನ್ನು ರಕ್ಷಿಸಲು ಸೋಲಾರ್ ತಂತಿ ಬೇಲಿಯನ್ನು ಅಳವಡಿಸಬೇಕೆಂದು ಶೇಕಡ 90% ಸಹಾಯದಲ್ಲಿ ನೀಡಬೇಕು
4) ರೈತರ ಕೃಷಿ ಯಂತ್ರೋಪಕರಣಗಳು ಖರೀದಿಯಲ್ಲಿ ಎಲ್ಲ ವರ್ಗದ ರೈತರಿಗೆ 90% ಸಹಾಯಧನ ನೀಡಬೇಕು
5) ರೈತರ ಪಂಪ್ಸೆಟ್ಗಳಿಗೆ ತ್ರಿಫೇಸ್ ಹತ್ತು ಗಂಟೆ ಕಾಲ ಹಗಲು ಹೊತ್ತಿನಲ್ಲಿ ವಿದ್ಯುತ್ತನ್ನು ಒದಗಿಸಿಕೊಡಬೇಕು
6) ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ತತ್ತರಿಸಿ ರೈತರಿಗೆ ಶೀಘ್ರದಲ್ಲಿ ಮನೆ ಹಾನಿ ಮತ್ತು ಬೆಳೆ ಪರಿಹಾರ ಒದಗಿಸಿಕೊಡಬೇಕು
7) ರೈತರ ಟ್ಯಾಕ್ಟರ್ 50% ಸಬ್ಸಿಡಿ ಒದಗಿಸಿಕೊಡಬೇಕು
8) ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಬೇಕು
9) ರಾಗಿ ಬೆಳೆಗೆ ಕನಿಷ್ಠ 5000 ಬೆಂಬಲ ಬೆಲೆ ನೀಡಬೇಕು
10) ಭಾರತ್ ಬಂದ್ ಪರ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲ ಇರುತ್ತದೆ

-ಶ್ರೀ ಸಿದ್ದನಗೌಡ ಎಸ್ ಪಾಟೀಲ್ ಹಿರೇಕೆರೂರು ಹಾವೇರಿ ಜಿಲ್ಲೆ , ರಾಜ್ಯ ಅಧ್ಯಕ್ಷರು – ಅಖಂಡ ಕರ್ನಾಟಕ ರಾಜ್ಯ ರೈತ ಸಂಘ (ರಿ)

ಮಹೇಶ್ ಕೊಟ್ಟೂರ್ ಹಾವೇರಿ ಜಿಲ್ಲಾ ಅಧ್ಯಕ್ಷರು,ಚಂದ್ರು ಜೋಗಿಹಳ್ಳಿ ಹಿರೇಕೆರೂರು ತಾಲೂಕ ರೈತ ಸಂಘ,
ಬ್ಯಾಡಗಿ ತಾಲೂಕ ಅಧ್ಯಕ್ಷರು, ಶೇಖಪ್ಪ ಕಾಶಿ ಬಸವರಾಜಪ್ಪ ಚಿತ್ರದುರ್ಗ ತಾಲೂಕು ಅಧ್ಯಕ್ಷರು ( ಮುದ್ದಾಪುರ ) ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ತಿತರಿದ್ದರು.

City Today News

9341997936

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಭಾರತ್ ಬಂದ್‌ಗೆ ಬೆಂಬಲ

ಪತ್ರಿಕಾ ಪ್ರಕಟಣೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು . ಬೆಂಬಲ ಬಲ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳನ್ನು ಬೆಂಬಲಿಸಿ 27-09-2021 ರಂದು ಭಾರತ್ ಬಂದ್ ಮಾಡಲು ತೀರ್ಮಾನಿಸಿದ್ದು , ಅದನ್ನು ಬೆಂಬಲಿಸಿ ಕಾರ್ನಾಟಕ ಬಂದ್ ಮಾಡುತ್ತಿದ್ದೇವೆ . ಕಿಸಾನ್ ಸಂಯುಕ್ತ ಮೋರ್ಚ ಹಾಗು ಕಾರ್ನಾಟಕ ರಾಜ್ಯ ರೈತ ಸಂಘ , ರಾಜ್ಯ ಕಬ್ಬು ಬೆಳೆಗಾರರ ಸಂಘಗಳು ಬಂದ್‌ಗೆ ಬೆಂಬಲ ವ್ಯಕ್ತ ಪಡಿಸಿದ್ದು , ರಾಜ್ಯ ಹಾಗು ರಾಷ್ಟ್ರ ವ್ಯಾಪ್ತಿಯ ಅನೇಕ ರೈತ ಸಂಘಗಳು ಹಾಗು ಸಮಾನ ಮನಸ್ಕರ ಸಂಘ ಸಂಸ್ಥೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಬಿ.ಡಿ.ಎ ಶಿವರಾಮ ಕಾರಂತ ಬಡಾವಣೆ ಹಾಗೂ ಪರಿಘರಲ್ ರಿಂಗ್ ರಸ್ತೆ ನಿರ್ಮಾಣ ಮಾಡುವ ಹೆಸರಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಸುತ್ತಾ ಸಾವಿರಾರು ಎಕರೆ ಕೃಷಿ ಜಮೀನು ವಶಪಡಿಸಿಕೊಂಡು ಭೂ ಮಾಲೀಕರಿಗೆ ಪುಡಿಗಾಸಿನ ಪರಿಹಾರ ನೀಡಲು ಯೋಜನೆ ರೂಪಿಸುತ್ತಿದ್ದು , ಇದರ ವಿರುದ್ಧವು ನಾವು ಹೋರಾಟ ರೂಪಿಸುತ್ತಿದ್ದೇವೆ .

ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಬಿ.ಡಿ.ಎ ಅಧಿಕಾರಿಗಳು ರೈತರಿಗೆ ಸರಿಯಾದ ಪರಿಹಾರ ಯೋಜನೆ ರೂಪಿಸದೆ ನಮ್ಮ ಭೂಮಿಯನ್ನು ವಶಪಡಿಸಿಕೊಂಡು ನಮಗೆ ಶೇ 40 % ಬಿ.ಡಿ.ಎಗೆ ಶೇ 60 % ಅಭಿವೃದ್ಧಿ ಹೊಂದಿದ ಭೂಮಿ ನೀಡಲು ತಯಾರಿ ನಡೆಸಿದ್ದು , ಖಾಸಗಿ ಕಂಪನಿಗಳು ಶೇ 60 % ಅಭಿವೃದ್ಧಿ ಹೊಂದಿದ ಭೂಮಿಯನ್ನು ನೀಡುವ ಯೋಜನೆಗಳು ಬೆಂಗಳೂರಿನಲ್ಲಿ ಇವೆ . ಆದರೆ ಸರ್ಕಾರದ ಭಾಗವಾದ ಬಿ.ಡಿ.ಎ ಏಕೆ ಈ ರೀತಿಯ ಯೋಜನೆ ಮಾಡುತ್ತಿದೆ ಎಂದು ನಮ್ಮ ಪ್ರಶ್ನೆ . ಈ ಬಗ್ಗೆ ನಮ್ಮ ಹೋರಾಟ ಮುಂದೆವರೆಯುತ್ತದೆ ಎಂದು ನಮ್ಮ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುತ್ತಿದ್ದೇವೆ .

ದಿನಾಂಕ : 27-09-2021 ರಂದು ಭಾರತ್ ಬಂದ್‌ಗೆ ನಮ್ಮ ಬೆಂಬಲ ಇದೆ .

ವಿಆರ್ ನಾರಾಯಣರೆಡ್ಡಿ ರಾಜ್ಯಾಧ್ಯಕ್ಷರು

ಮಂಜುನಾಥ್ – ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರು

ಹರೀಶ ಅದ್ದೆ – ರಾಜ್ಯ ಸಮಿತಿ ಸದಸ್ಯರು

ನವೀನ್ ಗೌಡ – ಯಲಹಂಕ ತಾಲ್ಲೂಕು ಅಧ್ಯಕ್ಷರು

City Today News

9341997936