ಕೇವಲ 1000 ರುಪಾಯಿಗೆ ಒಂದು ಬೆಡ್; ಕಲ್ಯಾಣ ಕರ್ನಾಟಕಕ್ಕೆ 650 ಬೆಡ್ ರವಾನೆಗೆ ಡಿಕೆಶಿ ಹಸಿರು ನಿಶಾನೆ

ದೊಡ್ಡಬಳ್ಳಾಪುರ, ಜು. 18: ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗಳು ಮತ್ತಿತರ ಕಡೆ ಸೋಂಕಿತರಿಗೆ ಬೆಡ್ ಗಳ ಕೊರತೆ ಉಂಟಾಗಿದ್ದು, ಅವರ ಪ್ರಾಣಕ್ಕೂ ಸಂಚಾರ ಉಂಟಾಗಿದೆ. ಇಂಥ ಸಂಕಷ್ಟ ಸನ್ನಿವೇಶದಲ್ಲಿ ಅತಿ ಕಡಿಮೆ ವೆಚ್ಚ, ಸುಲಭ ಸಾಗಣೆ, 350 ಕೆಜಿಯಷ್ಟು ಭಾರ ತಡೆಯಬಹುದಾದ ಶೇಕಡಾ 100 ರಷ್ಟು ನವೀಕರಿಸಬಹುದಾದ ಪರಿಸರ ಸ್ನೇಹಿ 650 ಬೆಡ್ ಗಳನ್ನು (Corrigated Beds) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೊಡ್ಡಬಳ್ಳಾಪುರದಿಂದ ಕಲ್ಯಾಣ ಕರ್ನಾಟಕಕ್ಕೆ ಸಾಗಣೆ ಮಾಡಲು ಶನಿವಾರ ಹಸಿರು ನಿಶಾನೆ ತೋರಿದರು.

ಹಾಸಿಗೆ, ದಿಂಬು ಎಲ್ಲ ಸೇರಿ ಬೆಡ್ ವೊಂದಕ್ಕೆ ಕೇವಲ 1000 ರುಪಾಯಿಗೂ ಕಡಿಮೆ ವೆಚ್ಚ. ಇಂಥ ಬೆಡ್ ಗಳನ್ನು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಗುಲ್ಬರ್ಗಾಕ್ಕೆ 550 ಹಾಗೂ ರಾಯಚೂರಿಗೆಂದು 100 ಒಟ್ಟು 650 ಬೆಡ್ ಗಳನ್ನು ಇಲ್ಲಿನ ವಾಡ್ ಪ್ಯಾಕ್ ಸಂಸ್ಥೆಯಿಂದ ಖರೀದಿಸಿದ್ದು, ಡಿ.ಕೆ. ಶಿವಕುಮಾರ್ ಅವರು ಅವುಗಳನ್ನು ಖುದ್ದು ಪರಿಶೀಲನೆ ಮಾಡಿ ಕಳುಹಿಸಿಕೊಟ್ಟರು. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸ್ಥಳೀಯ ಶಾಸಕ ವೆಂಕಟರಮಣ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಈ ಪರಿಸರ ಸ್ನೇಹಿ ಬೆಡ್ ಲಾಭದ ಬಗ್ಗೆ ವಿವರಿಸಿದ್ದು ಹೀಗೆ:

ಈ ಬೆಡ್ ಗಳ ಗುಣಮಟ್ಟವನ್ನು ನಾನು ಖುದ್ದು ಪರಿಶೀಲಿಸಿದ್ದೇನೆ. ಇವುಗಳನ್ನು ಕೇವಲ 5 ನಿಮಿಷದಲ್ಲಿ ಜೋಡಿಸಬಹುದು. ಅದೇ ರೀತಿ 5 ನಿಮಿಷದಲ್ಲಿ ಬಿಚ್ಚಬಹುದು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಯಾವಾಗ ಬೇಕಾದರೂ ಸಾಗಿಸಬಹುದು. ಎಲ್ಲಕಿಂಥ ಮಿಗಿಲಾಗಿ ಮಡಚಿ ಒಂದೇ ಲಾರಿಯಲ್ಲಿ 650 ಬೆಡ್ ಗಳನ್ನು ಸಾಗಿಸಬಹುದು. ರಾಜ್ಯ ಸರಕಾರ ದಿನವೊಂದಕ್ಕೆ 850 ರುಪಾಯಿ ದರದಲ್ಲಿ ಬಾಡಿಗೆಗೆ ಬೆಡ್ ಗಳನ್ನು ಪಡೆಯಲು ಮುಂದಾಗಿರುವ ಹೊತ್ತಿನಲ್ಲಿ ಕೇವಲ 1000 ರುಪಾಯಿಗೆ ಇದನ್ನು ಖರೀದಿಸಬಹುದಾಗಿರುವುದು ಲಾಭಕರ. ಜತೆಗೆ ಕೊರೊನಾ ಸೋಂಕಿತರ ದೃಷ್ಟಿಯಿಂದ ಹೆಚ್ಚು ಪ್ರಯೋಜನಕಾರಿ.

ರಾಜ್ಯದಲ್ಲಿ ಇದೀಗ ರೋಗ ಲಕ್ಷಣ ಇರುವ ಸೋಂಕಿತರು ಹಾಗೂ ರೋಗ ಲಕ್ಷಣ ಇಲ್ಲದ ಸೋಂಕಿತರು ಎಂಬ ಅವಶ್ಯಕ ವಿಭಜನೆ ಇಲ್ಲದೆ ಎಲ್ಲರೂ ಒಂದೇ ಕಡೆ ದಾಖಲಾಗಿರುವುದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಒತ್ತಡ ಹೆಚ್ಚಾಗಿದೆ. ಸರಕಾರ ಕೂಡ ಇಲ್ಲಿ ಎಡವಿದೆ. ಇಂಥ ಸಂದರ್ಭದಲ್ಲಿ ಈ ತೆರನ ಹಾಸಿಗೆಗಳನ್ನು ಸ್ಟೇಡಿಯಂ, ಕಲ್ಯಾಣ ಮಂಟಪ, ಬಯಲು ಪ್ರದೇಶ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡುವುದರಿಂದ ರೋಗ ಲಕ್ಷಣ ಇಲ್ಲದವರಿಗೆ ಇಂಥ ಕಡೆ ಚಿಕಿತ್ಸೆ ನೀಡಬಹುದು. ಇದರಿಂದ ಉಸಿರಾಟದ ತೊಂದರೆ ಮತ್ತಿತರ ಗಂಭೀರ ರೋಗ ಲಕ್ಷಣದಿಂದ ನರಳುತ್ತಿರುವವರು ಹಾಗೂ ವಯಸ್ಸಾದ ಸೋಂಕಿತರಿಗೆ ವೆಂಟಿಲೇಟರ್ ಯುಕ್ತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬಿದ್ದಿರುವ ಒತ್ತಡವನ್ನು ನಿವಾರಿಸಬಹುದಾಗಿದೆ.

ಕಡಿಮೆ ದರದಲ್ಲಿ ಸಿಗುವ ಈ ಬೆಡ್ ಗಳನ್ನು ನಮ್ಮ ಸರ್ಕಾರ ಕೂಡ ಖರೀದಿಸಬಹುದು. ತೆಲಾಗಾಣ ಸರ್ಕಾರ ಈಗಾಗಲೇ 5000ಕ್ಕೂ ಹೆಚ್ಚು ಹಾಸಿಗೆಗಳನ್ನು ಖರೀದಿಸಿದ್ದು, ದೇಹಲಿಯಲ್ಲೂ ಇದೇ ಮಾದರಿ ಹಾಸಿಗೆ ಬಳಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಬಳಸಲು ಇಂತಹ ಗುಣಮಟ್ಟದ ಹಾಸಿಗೆ ತಯಾರಿಸುತ್ತಿರುವ ವ್ಯಾಡ್ ಪ್ಯಾಕ್ ಸಂಸ್ಥೆಗೆ ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಪಕ್ಷದ ವತಿಯಿಂದ ರಾಜ್ಯ ಸರಕಾರಕ್ಕೂ ಒಂದಷ್ಟು ಹಾಸಿಗೆಗಳನ್ನು ಕೊಡುಗೆ ನೀಡುವ ಯೋಚನೆಯಿದೆ.

ರಾಜ್ಯ ಸರಕಾರ ಕೊರೊನಾ ಸಲಕರಣೆಗಳ ವಿಚಾರದಲ್ಲಿ ಮಾಡಿರುವ ಭ್ರಷ್ಟಾಚಾರದ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಲೆಕ್ಕ ಕೇಳಿದ್ದಾರೆ. ನಾನು ಮಾಧ್ಯಮಗಳಲ್ಲಿ ಬಂದಿರುವ ವರದಿ ಆಧರಿಸಿ ಉತ್ತರ ಕೇಳಿದ್ದೇನೆ. ಸರಕಾರದ ಈ ಅಕ್ರಮ ವಿರುದ್ಧದ ಹೋರಾಟವನ್ನು ಪಕ್ಷದಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು.

City Today News

(citytoday.media)

9341997936

Chief Minister directs Private Medical College Hospitals to provide 50 per cent beds for COVID treatment from tomorrow

Bengaluru, July 18– Chief Minister B.S. Yediyurappa today convened a meeting with Private Medical College Hospitals regarding COVID management and directed them to provide 50 per cent of the beds as promised, with effect from tomorrow itself.

In his address, he said that the private medical college hospitals need to cooperate as there is sharp rise in COVID cases in the city. It has come to the notice of the Government that some institutes are denying treatment for COVID as well as non-COVID patients and he expressed his concerns over media reports of death of several people, who died as they didn’t get timely treatment due to denial from the hospitals. He said that Bengaluru should continue to lead the country as a role model in COVID management.

During previous meeting private medical colleges had agreed upon providing around 4500 beds, which would make total beds available in Government and private medical colleges is 6500 beds. Chief Minister expressed dismay over some colleges not providing the number of beds as promised and also about certain lacunae which were noticed by ministers during their visit.

During this emergency situation we should respond with humanity. COVID and Non COVID patients shall not be denied of treatment and the balance in healthcare system shall be maintained, he advised.

He directed them to provide 50 per cent of the beds with effect from tomorrow itself as there is acute increase in the number of COVID 19 cases reported in BEngaluru.

He assured them of all support including providing doctors and nurses, if need be.

The private medical colleges assured to provide 50 per cent of beds and some colleges offered 80 per cent of the beds for COVID treatment.

Nodal officers have already been appointed to monitor the availability of beds in these medical colleges.

It was decided to issue notice to Vaidehi Medical College for their absence.

City Today News

(citytoday.media)

9341997936

ಅಗ್ನಿಶಾಮಕ ದಳ ವಿಶೇಷ ಕಾರ್ಯಾಚರಣೆ: ಬೆಂಗಳೂರಾದ್ಯಂತ ರೋಗ ನಿರೋಧಕ ಸಿಂಪಡಣೆ

ಬೆಂಗಳೂರು,ಜು,18:ನಗರದ ಅಸ್ಪತ್ರೆಗಳು ಹಾಗೂ ಪ್ರಮುಖ ಸರ್ಕಾರಿ ಕಟ್ಟಡಗಳಲ್ಲಿ ರಾಜ್ಯ ಅಗ್ನಿಶಾಮಕ ದಳದಿಂದ ವಿಶೇಷ ವಾಹನಗಳ ಮೂಲಕ ವ್ಯಾಪಕವಾಗಿ ರೋಗ ನಿರೋಧಕ ಔಷಧಿ ಸಿಂಪಡಿಸಲಾಯಿತು.  
ಕಳೆದ ಮೂರು ದಿನಗಳಲ್ಲಿ ಬೆಂಗಳೂರಿನ ಎಲ್ಲ ಪ್ರಮುಖ ಅಸ್ಪತ್ರೆಗಳ ಒಳಗೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ನೂರಾರು ಅಗ್ನಿ ಶಾಮಕ‌ ದಳ ಸಿಬ್ಬಂದಿ ವಿಶೇಷ ವಾಹನಗಳಲ್ಲಿ ಸುಧಾರಿತ ಜೆಟ್ ಮೂಲಕ ರೋಗ ನಿರೋಧಕ ಔಷಧಿಯನ್ನು ಸಿಂಪಡಿಸಿದರು.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ ಲಾಕ್ ಡೌನ್ ಮಾಡಲಾಗಿದ್ದು ಈ ನಡುವೆ ಜನ ಮತ್ತು ವಾಹನಗಳಿಲ್ಲದೆ, ಖಾಲಿ ಇರುವ ಪ್ರಮುಖ ರಸ್ತೆಗಳಲ್ಲಿ ರೋಗ ನಿರೋಧಕ ಔಷಧಿ  ಸಿಂಪಡಣೆ ಮಾಡಲಾಯಿತು.

ಈ ಮಧ್ಯೆ ಜನ ಮತ್ತು ವಾಹನಗಳಿಲ್ಲದೆ, ಖಾಲಿ ಇರುವ ಪ್ರಮುಖ ರಸ್ತೆಗಳಲ್ಲಿ ರೋಗ ನಿರೋಧಕ ಔಷಧಿ  ಸಿಂಪಡಣೆ ಮಾಡಲಾಯಿತು.

ಕೇವಲ ರಸ್ತೆಗಳಷ್ಟೇ ಅಲ್ಲದೆ, ಪ್ರಮುಖ ಆಸ್ಪತ್ರೆಗಳ ಸರಹದ್ದಿನಲ್ಲೂ ಅಗ್ನಿ ಶಾಮಕದಳದ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡಿದರು.
ವಿಕ್ಟೋರಿಯಾ ಅಸ್ಪತ್ರೆ, ಬೌರಿಂಗ್ ಅಸ್ಪತ್ರೆ, ಕೆಸಿ ಜನರಲ್ ಅಸ್ಪತ್ರೆ, ಆಕಾಶ್ ಅಸ್ಪತ್ರೆ, ಇಎಸ್ಐ ಅಸ್ಪತ್ರೆ, ಹೈಕೋರ್ಟ್, ವಿ.ವಿ.ಟವರ್ , ಮೆಟ್ರೋ ನಿಲ್ದಾಣ, ಉದ್ಯಾನಗಳು ಸೇರಿದಂತೆ 50ಕ್ಕೂ ಪ್ರದೇಶಗಳಲ್ಲಿ ಅಗ್ನಿಶಾಮಕ‌ ದಳ ಕಾರ್ಯಾಚರಣೆ ನಡೆಸಿ ರೋಗನಿರೋಧಕ‌ ಸಿಂಪಡಣೆ ಮಾಡಿತು.
ಎಡಿಜಿಪಿ ಸುನೀಲ್ ಅಗರ್ ವಾಲ್ , ವಿಕ್ಟೋರಿಯಾ ಆಸ್ಪತ್ರೆ ಬಳಿ ಈ ಕಾರ್ಯಕ್ಕೆ ಚಾಲನೆ ನೀಡಿದರು.

City Today News

(citytoday.media)

9341997936

ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರ ೧೦೧ ನೇ ಜನ್ಮದಿನೋತ್ಸವವನ್ನು ಮೈಸೂರು ಅರಮನೆ ಮಂಡಳಿ ಮತ್ತು ಶ್ರೀ ನಾಲ್ವಡಿ ಪೌಂಢೇಷನ್ ವತಿಯಿಂದ ಆಚರಿಸಲಾಯಿತು

ಇಂದು ನಗರದ ಅರಮನೆಯಲ್ಲಿ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರ ೧೦೧ ನೇ ಜನ್ಮದಿನೋತ್ಸವವನ್ನು ಮೈಸೂರು ಅರಮನೆ ಮಂಡಳಿ ಮತ್ತು ಶ್ರೀ ನಾಲ್ವಡಿ ಪೌಂಢೇಷನ್ ವತಿಯಿಂದ ಆಚರಿಸಲಾಯಿತು ಈ ಸಂಧರ್ಭದಲ್ಲಿ ಮೈಸೂರು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ , ಅರಮನೆ ಮಂಡಳಿಯ ಉಪನಿರ್ದೇಶಕರಾದ ಟಿ‌.ಎಸ್ ಸುಬ್ರಹ್ಮಣ್ಯ , ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ ,
ನಾಲ್ವಡಿ ಪೌಂಡೇಷನ್ ಅಧ್ಯಕ್ಷರಾದ ನಂದೀಶ್ ಅರಸ್, ಮಾಜಿ ನಗರ ಪಾಲಿಕೆ ಸದಸ್ಯರಾದ
ರಘುರಾಜೇ ಅರಸ್ , ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷರಾದ ಯಮುನಾ , ವಿಶ್ವ ಇತರರು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಸರ್ದಾರ್ ಲಿಂಗರಾಜೇ ಅರಸ್ ಅವರ ಮಗ ಎ.ಎಸ್ ನಂಜುಂಡರಾಜೇ ಅರಸ್ ಅವರು ನೂರು ವರ್ಷಗಳ ಹಿಂದೆ ಪೆನ್ಸಿಲ್ ನಲ್ಲಿ ಬರೆದ ಮುಮ್ಮಡಿ ಅವರ ಮತ್ತು ನಾಲ್ವಡಿ ಅವರ ಪೋಟೊ ನಾಲ್ವಡಿ ಪೌಂಡೇಷನ್ ಇಂದ ಅರಮನೆ ಮಂಡಳಿಗೆ ಲೋಕಸಭಾ ಸದಸ್ಯರು ಬಿಡುಗಡೆ ಮಾಡಿ ಹಸ್ತಾಂತರಿಸಿದರು

City Today News

(citytoday.media)

9341997936

ದಕ್ಷತೆ, ಅಂತಃಕರಣ, ದೂರದೃಷ್ಟಿಯುಳ್ಳ ನೇತಾರರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ರವರ 101ನೇ ಜನ್ಮ ಜಯಂತಿ

ಮೈಸೂರು ಸಂಸ್ಥಾನದ ಕೊನೆಯ ಅರಸ ಮತ್ತು ಸ್ವತಂತ್ರ್ಯಾನಂತರ ಮೈಸೂರು ರಾಜ್ಯದ ಮೊದಲ ರಾಜ್ಯಪಾಲರಾಗಿದ್ದ ರಾಜರ್ಷಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 101ನೇ ಜನ್ಮ ಜಯಂತಿ ಇಂದು.‌ ದಕ್ಷತೆ, ಅಂತಃಕರಣ, ದೂರದೃಷ್ಟಿಯುಳ್ಳ ನೇತಾರರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು, ಲೋಕ ಕಂಡ ಮಹಾನ್ ವಿದ್ವಾಂಸರು, ಸಂಗೀತ ಶಾಸ್ತ್ರಜ್ಞರೂ, ವಾಗ್ಗೇಯಕಾರರೂ ಆಗಿದ್ದರು. ದಕ್ಷ ಆಡಳಿತಗಾರರಾಗಿ, ಕನ್ನಡ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ನಮ್ಮ ಸನಾತನ‌ ಧರ್ಮದ ಆಶಯದಂತೆ ರಾಜ್ಯಾಡಳಿತ ನಿರ್ವಹಿಸಿದ್ದರು. ಅರಸೊತ್ತಿಗೆಯನ್ನು ಭಾರತದ ಆಡಳಿತದಲ್ಲಿ ವಿಲೀನಗೊಳಿಸುವ ಸರ್ದಾರ್ ಪಟೇಲ್ ಅವರ ನಿರ್ಧಾರವನ್ನು ಒಪ್ಪಿ ಮೈಸೂರು ಸಂಸ್ಥಾನವನ್ನು ಗಣರಾಜ್ಯದಲ್ಲಿ ವಿಲೀನಗೊಳಿಸಿದ ಪ್ರಪ್ರಥಮ ದೊರೆ ಇವರು. ಪ್ರಜಾಪ್ರಭುತ್ವವಾದಿಯಾಗಿದ್ದ ಇವರು ಪ್ರಜಾ ಪ್ರಾತಿನಿಧಿಕ ಸಭೆ (ಇಂದಿನ‌ ವಿಧಾನ ಪರಿಷತ್) ಸ್ಥಾಪಿಸಿ, ಹಲವಾರು ನಾಯಕರುಗಳ ರಾಜಕೀಯ ಬೆಳವಣಿಗೆಗೆ ಕಾರಣಕರ್ತರಾಗಿದ್ದರು. ವಿಶ್ವ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಜೋಗದಲ್ಲಿ ಸ್ಥಾಪಿಸಲಾಗಿರುವ ಶರಾವತಿ ನದಿಗೆ ಅಣೆಕಟ್ಟು ಮತ್ತು ಜಲವಿದ್ಯುದಾಗಾರ ಒಡೆಯರ್ ಅವರ ಕೊಡುಗೆ.
ಭಾರತದ ಆಡಳಿತರಂಗದ ಇತಿಹಾಸದಲ್ಲಿಯೇ ಪ್ರಥಮವಾಗಿ ಪಂಚವಾರ್ಷಿಕ ಯೋಜನೆ ಜಾರಿಗೆ ತಂದ ಧೀಮಂತರು ಒಡೆಯರ್ ಅವರು.

ಕನ್ನಡ ನಾಡು ಕಂಡ ಅಗ್ರಮಾನ್ಯ ಸಾಧಕರಾದ ಇವರ ಸೇವೆ ಮತ್ತು ಸಾಧನೆಗಳು ನಮಗೆ ಆದರ್ಶಪ್ರಾಯವಾಗಿವೆ.
ಇಂತಹಾ ರಾಜನೀತಿಜ್ಞ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 101ನೇ ಜಯಂತಿ ಯಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು.

– ಶ್ರೀ .ರಮೇಶ್ ಜಾರಕಿಹೊಳಿ‌ ಜಲಸಂಪನ್ಮೂಲ ಸಚಿವರು
ಕರ್ನಾಟಕ ಸರ್ಕಾರ

City Today News

(citytoday.media)

9341997936