ಯೋಜನೆಗಳ ಭಾರ ಹೊರುವ ಕೈಗಳಿಗೆ ನ್ಯಾಯ ಯಾವಾಗ? ಅಂಗನವಾಡಿ ಕಾರ್ಯಕರ್ತೆಯರ ಕಾನೂನು ಹೋರಾಟ.

ಬೆಂಗಳೂರು, ಫೆಬ್ರವರಿ 4, 2026:
ಸರ್ಕಾರದ ಯೋಜನೆಗಳ ಭಾರವನ್ನು ಹೊತ್ತುಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಇನ್ನೂ ಕನಿಷ್ಠ ವೇತನವೇ ಇಲ್ಲದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿ, ಅವರನ್ನು ಸಿ ಮತ್ತು ಡಿ ದರ್ಜೆಯ ಸರ್ಕಾರಿ ನೌಕರರಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಬೆಂಗಳೂರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಸರ್ಕಾರಿ ಯೋಜನೆಗಳ ಕೀಲುಬಾಗಿಲಾಗಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ವರ್ಷಗಳಿಂದ ‘ಗೌರವಧನ’ದ ಹೆಸರಿನಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕೆಲಸ ಮಾತ್ರ ಶಾಶ್ವತ, ಆದರೆ ಹಕ್ಕುಗಳು ತಾತ್ಕಾಲಿಕ—ಈ ವೈರುಧ್ಯಕ್ಕೆ ಉತ್ತರ ನೀಡುವವರು ಯಾರು ಎಂಬ ಪ್ರಶ್ನೆಯನ್ನು ಸಂಘಟನೆ ನ್ಯಾಯಾಲಯದ ಮುಂದಿಟ್ಟಿದೆ.
ಈ ವೇಳೆ ಸಂಘಟನೆಯ ರಾಜ್ಯ ಅಧ್ಯಕ್ಷೆ ಬಿ. ಪ್ರೇಮ, ರಾಜ್ಯ ಕಾರ್ಯದರ್ಶಿ ಉಮಾಮಣಿ ಕೆ. ಎಲ್, ಕೋಶಾಧಿಕಾರಿ ವಿಶಾಲಾಕ್ಷಿ, ಉಪಾಧ್ಯಕ್ಷೆ ನಿರ್ಮಲ, ಸಹಕಾರ್ಯದರ್ಶಿ ಪ್ರೇಮಾ ಹಾಗೂ ವಕೀಲ ಗೌತಮ್ ಚಂದ್ ಉಪಸ್ಥಿತರಿದ್ದರು.
City Today News 9341997936

You must be logged in to post a comment.