ಮೌನವಾಗಿ ಪರಿಸರಕ್ಕೆ ಹಾಗೂ ಸರ್ಕಾರಕ್ಕೆ ಸೇವೆಯನ್ನು ಸಲ್ಲಿಸುತ್ತಿರವ ತ್ಯಾಜ್ಯ ಆಯುವವರು ಬೆಂಗಳೂರು, ಸೇರಿದಂತೆ ವಿವಿಧ ಜಿಲ್ಲೆಗಳ ಸಂಘಟನೆಯ ಸದಸ್ಯರೆಲ್ಲಾರು ಸೇರಿ ಮಾರ್ಚ್-01 ರಂದು ಅಂತರಾಷ್ಟ್ರೀಯ ತ್ಯಾಜ್ಯ ಆಯುವವರ ದಿನಾಚರಣೆ ಆಚರಿಸಲು ಆಶಿಸುತ್ತಿದ್ದಾರೆ.

ತ್ಯಾಜ್ಯ ಶ್ರಮಿಕರನ್ನು ಕರ್ನಾಟಕದ ಎಲ್ಲಾ ನಗರ ಮತ್ತು ಪಟ್ಟಣಗಳ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಏಕೀಕರಿಸಿ ತ್ಯಾಜ್ಯ ಶ್ರಮಿಕರ ಚುನಾವಣಾ ಪ್ರಣಾಳಿಕೆ

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

ಪತ್ರಿಕಾ ಗೋಷ್ಠಿಯ ವಿವರ :   ಕರ್ನಾಟಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ತ್ಯಾಜ್ಯ ಶ್ರಮಿಕರು ಅಸಂಘಟಿತ ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಈ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಅದರಲ್ಲೂ ದಲಿತ ಹಾಗೂ ಬುಡಕಟ್ಟು ಜನಾಂಗದವರು ತೊಡಗಿಸಿಕೊಂಡಿದ್ದಾರೆ.

ಬೆಂಗಳೂರು, ಮೈಸೂರು, ನಂಜನಗೂಡು, ತುಮಕೂರು, ಚಾಮರಾಜನಗರ, ಮಂಗಳೂರು, ಚಿಕ್ಕಬಳ್ಳಾಪುರ, ಚಿಂತಾಮಣಿ, ಮಧುಗಿರಿ, ದಾವಣಗೆರೆ, ಹುಬ್ಬಳ್ಳಿ- ಧಾರವಾಡ ಮತ್ತು ಚಿತ್ರದುರ್ಗ ಇದಲ್ಲದೆ ಇತರೆ 64 ಹಳ್ಳಿಗಳಲ್ಲಿ ತ್ಯಾಜ್ಯ ಶ್ರಮಿಕರಾದ ನಾವು ಮುಂಬರುವ ಲೋಕ ಸಭಾ ಚುನಾವಣೆಯ ನಿಮ್‌ಮ ಘೋಷಣೆಯಲ್ಲಿ (ಪುಣಾಳಿಕೆಯಲ್ಲಿ) ತ್ಯಾಜ್ಯ ಶ್ರಮಿಕರನ್ನು ಘನ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯಲ್ಲಿ ಏಕೀಕರಿಸುವುದನ್ನು ಒಂದು ಗುರಿಯನ್ನಾಗಿ ಸೇರಿಸಿಕೊಳ್ಳಬೇಕೆಂದು ವಿನಂತಿಸುಸುತ್ತಿದ್ದೇವೆ.

ತ್ಯಾಜ್ಯ ಶ್ರಮಿಕರು ಬೀದಿಗಳಲ್ಲಿ, ಕಸದ ಗುಡ್ಡೆಗಳಿಂದ ಮತ್ತು ನೆಲಭರ್ತಿಗಳಿಂದ ಬಗೆ ಬಗೆಯ ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ಪ್ರತ್ಯೇಕಿಸಿ ವಿಂಗಡಿಸಿ ಒಟ್ಟು ಕೂಡಿಸುತ್ತಾರೆ, ನಂತರ ಅದನ್ನು ಪುನರುತ್ಪಾದನೆಯ ಉದ್ಯಮಕ್ಕೆ ಮಾರುತ್ತಾರೆ. ಹಸಿರು ದಳ ಮತ್ತು ಜೈನ್ ವಿಶ್ವವಿದ್ಯಾಲಯ ನಡೆಸಿದ ಅದ್ಯಯನದ ಪ್ರಕಾರ ಪ್ರತಿ ದಿನ ಬೆಂಗಳೂರು ನಗರದ ಸುಮಾರು 15,000 ತ್ಯಾಜ್ಯ ಆಯುವವರು 1050 ಟನ್ ಗಳಷ್ಟು ತ್ಯಾಜ್ಯವನ್ನು ಮರು ಉತ್ಪಾದನೆಗೆ ಕಳಿಸುತ್ತಾರೆ. ಆ ಮೂಲಕ ಪೌರ ಪ್ರಾಧಿಕರಕ್ಕೆ ತ್ಯಾಜ್ಯ ಸಾಗಾಣೆ ಮತ್ತು ಸಂಸ್ಕರಣೆಗೆ ತಗುಲುವ ವೆಚ್ಚ ವರ್ಷಕ್ಕೆ ಸುಮಾರು 84 ಕೋಟಿ ರೂಪಾಯಿ ಉಳಿತಾಯ ಮಾಡುತ್ತಾರೆ.

ಇದಲ್ಲದೆ ದೇಶದ ವಿವಿದ ಅದ್ಯಯನಗಳೂ ಸಹ ಅಸಂಘಟಿತ ಕ್ಷೇತ್ರದ ತ್ಯಾಜ್ಯ ಶ್ರಮಿಕರು ಸ್ಥಳಿಯ ಸರ್ಕಾರಗಳಿಗೆ ಆಗುವ ಲಾಭ ಹಾಗು ಇಂಗಾಲ ಅಡಿ ಮುದ್ರೆಗಳು ಕಡಿಮೆ ಮಾಡುವರೆಂದು ತಿಳಿಸಿದೆ. ಕಳೆದ ವರ್ಷಗಳಲ್ಲಿ ಪೌರಾಡಳಿತ ನಿರ್ದೇಶನಾಲಯ (2022) ಹಾಗೂ ಪಂಚಾಯತ್ ರಾಜ್ ಇಲಾಖೆಯ(2023) ತ್ಯಾಜ್ಯ ಆಯುವವರು ಮತ್ತು ಇತರೆ ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರು ವಹಿಸುವ ಪಾತ್ರದ ಮಹತ್ವವನ್ನು ಗುರುತಿಸಿ ಔದ್ಯೋಗಿಕ ಗುರುತಿನ ಚೀಟಿ ನೀಡಲು ಆದೇಶ ಹೊರಡಿಸಿದೆ. ಕೇಂದ್ರದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯವು ಅಧಿಸೂಚಿಸಿದ ಘನ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಾವಳಿ 2016 ತ್ಯಾಜ್ಯ ಆಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರನ್ನು ಘನ ತ್ಯಾಜ್ಯ ನಿರ್ವಹಣೆಯಲ್ಲಿ ಏಕೀಕರಿಸುವುದನ್ನು ಕಡ್ಡಾಯಗೊಳಿಸಿದೆ.

ಬೆಂಗಳೂರು, ಮೈಸೂರು, ನಂಜನಗೂಡು, ತುಮಕೂರು, ಚಾಮರಾಜನಗರ, ಮಂಗಳೂರು, ಚಿಕ್ಕಬಳ್ಳಾಪುರ, ಮಧುಗಿರಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಧಾರವಾಡ ತ್ಯಾಜ್ಯ ಆಯುವವರು ಮತ್ತು ಪೌರ ಪ್ರಾಧಿಕಾರಗಳು ತ್ಯಾಜ್ಯ ಆಯುವವರಿಗೆ ಔದ್ಯೋಗಿಕ ಗುರುತಿನ ಚೀಟಿಗಳನ್ನು ನೀಡುವುದರಲ್ಲಿ ಮೊದಲನೆಯ ಸಂಸ್ಥೆಯಗಿದೆ. ತಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನಗಳು(ಎನ್ ಎಪ್ ಕೆ ಎಸ್ ಡಿ ಸಿ. ಮುದ್ರಾ ಲೋನ್) ವಿಮೆ ಮತ್ತು ಆರೋಗ್ಯ ಸೇವೆಗಳ ಲಭ್ಯತೆ ಇವುಗಳನ್ನು ಪಡೆಯಲು ಔದ್ಯೋಗಿಕ ಗುರುತಿನ ಚೀಟಿಗಳು ತ್ಯಾಜ್ಯ ಆಯುವವರಿಗೆ ಸಹಾಯಕವಾಗಿವೆ. ಇದರ ನಂತರ ಜಾರಿಗೆ ಬಂದದ್ದು ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳನ್ನು ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳು ವಾರ್ಡ್ ಮಟ್ಟದಲ್ಲಿ ಸ್ಥಾಪಿಸಲಾದ ಅತಿ ಕಡಿಮೆ/ಶೂನ್ಯ ಬೆಲೆಯ ತ್ಯಾಜ್ಯ ಮತ್ತು ಮರು ಉತ್ಪಾದನೆ ಮಾಡಬಹುದಾದ ವಸ್ತುಗಳ ಸಂಗ್ರಹಣೆ ಮತ್ತು ಒಟ್ಟಿಸುವ ಕೇಂದ್ರಗಳು ಬೆಂಗಳೂರಿನ 34 ವಾರ್ಡುಗಳಲ್ಲಿ ಮನೆ ಮನೆಯಿಂದ ಒಣ ತ್ಯಾಜ್ಯ ಸಂಗ್ರಹಣೆ ಮಾಡುವುದರಲ್ಲಿ, ్యజ్య ಶ್ರಮಿಕರನ್ನು ಬಳಸಿಕೊಂಡು ಕಾರ್ಯನಿರ್ವಹಿಸಲು ಅನುಸರಿಸಿದರು. ನೀವು ಈ ಪ್ರಗತಿಪರ ಕ್ರಮಗಳನ್ನು ಕರ್ನಾಟಕದಾದ್ಯಂತ ವಿಸ್ತರಿನಬೇಕೆಂಬುದು ನಮ್ಮ ಕಳಕಳಿಯ ಮನವಿ.

ತ್ಯಾಜ್ಯ ಶ್ರಮಿಕರು ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರ ಪರಿಚಯ

ತ್ಯಾಜ್ಯ ಶ್ರಮಿಕರು ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರು ಎಂದರೆ ಯಾರು? ‘ತ್ಯಾಜ್ಯ ಶ್ರಮಿಕರು’ ಎಂದರೆ ತ್ಯಾಜ್ಯದ ಮೂಲಗಳಾದ ರಸ್ತೆಗಳು, ಬೀದಿಗಳು, ತೊಟ್ಟಿಗಳು, ವಸ್ತುಗಳನ್ನು ಹಿಂಪಡೆಯುವ ಸೌಕರ್ಯಗಳು, ಸಂಸ್ಕರಣೆ ಮತ್ತು ತ್ಯಾಜ್ಯ ವಿಲೇವಾರಿ ಸೌಕರ್ಯಗಳು ಇವುಗಳಿಂದ ಮರು ಬಳಕೆ ಮತ್ತು ಪುನರ್ ಉತ್ಪಾದನೆಗೆ ಸಾದ್ಯವಿರುವ ತ್ಯಾಜ್ಯವನ್ನು ಸಂಗ್ರಹ ಮತ್ತು ಹಿಂಪಡೆದು ನೇರವಾಗಿ ಅಥವಾ ಮದ್ಯವರ್ತಿಗಳ ಮೂಲಕ ರಿಸೈಕರುಗಳಿಗೆ ಮಾರಾಟ ಮಾಡಿ ಜೀವನೋಪಾಯವನ್ನು ಕಂಡುಕೊಳ್ಳುವ ಕಾರ್ಯದಲ್ಲಿ ಅನೌಪಚಾರಿಕವಾಗಿ ತೊಡಗಿರುವ ವ್ಯಕ್ತಿ ಅಥವ ವ್ಯಕ್ತಿಗಳ ಸಮೂಹಗಳು. ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2016.

“ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರ” ರಲ್ಲಿ ರಿಸೈಕಲ್ ಮಾಡಲು ಸಾದ್ಯವಿರುವ ಸಾಮಾಗ್ರಿಯನ್ನು ವಿಂಗಡಿಸುವ, ಮಾರುವ ಮತ್ತು ಕೊಳ್ಳುವ ಕೆಲಸದಲ್ಲಿ ತೊಡಗಿರುವ ವ್ಯಕ್ತಿಗಳು, ಸಂಘಗಳು ಅಥವಾ ತ್ಯಾಜ್ಯ ವ್ಯಾಪಾರಿಗಳು ಒಳಗೊಳ್ಳುತ್ತಾರೆ. ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2016.

ತ್ಯಾಜ್ಯ ಶ್ರಮಿಕರು ಶೂನ್ಯ ಬೆಲೆಯುಳ್ಳ ತಿರಸ್ಕೃುತ ವಸ್ತುಗಳನ್ನು ಸಂಗ್ರಹಿಸಿ, ಹೆಕ್ಕಿತೆಗೆದು, ಸಂಗ್ರಹಣೆ, ವಿಂಗಡಣೆ ಗ್ರೇಡಿಂಗ್ ಮತ್ತು ಸಾಗಾಣೆ ಮುಂತಾದ ಶ್ರಮದ ಕಾರ್ಯದ ಮೂಲಕ ಅವುಗಳನ್ನು ಮಾರಾಟ ಯೋಗ್ಯಸಕರನ್ನಾಗಿ ಪರಿವರ್ತಿಸುತ್ತಾರೆ.ಅಲಯನ್ಸ್ ಆಪ್ ಇಂಡಿಯನ್ ವೇಸ್ಟ್ ಪಿಕ್ಕರ್ಸ್. ತ್ಯಾಜ್ಯ ಶ್ರಮಿಕರು (ವರ್ಡ್ ಬ್ಯಾಂಕ್ ಪ್ರಕಾರ ಅವರ ಸಂಖ್ಯೆ ಪ್ರತಿ ನಗರದ ಜನಸಂಖ್ಯೆಯಲ್ಲಿ ಶೇ.1ಕ್ಕಿಂತ ಹೆಚ್ಚು) ನಗರದ ಅತ್ಯಂತ ಸುಲಭವಾಗಿ ಹಾನಿಗೆ ಒಳಗಾಗುವ ದುರ್ಬಲ ವರ್ಗದವರಾಗಿದ್ದಾರೆ, ತ್ಯಾಜ್ಯ ಶ್ರಮಿಕರಲ್ಲಿ ಹೆಚ್ಚಿನವರು ಮಹಿಳೆಯವರಾಗಿದ್ದಾರೆ, ಹೆಚ್ಚಿನವರು ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಂತಹ ಜನಸಮೂಹವಾಗಿದ್ದಾರೆ. ಸಾಮಾಜಿಕವಾಗಿ ಉಪೇಕ್ಷಿತ

ಅದ್ಯಯನಗಳ ಪ್ರಕಾರ ಅನಕ್ಷರಸ್ಥ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಯುವಜನ (18 ರಿಂದ 40 ವರ್ಷ) ವಿವಿಧ ನಗರಗಳಲ್ಲಿ ತ್ಯಾಜ್ಯ ಶ್ರಮಿಕರಿದ್ದಾರೆ.

ತ್ಯಾಜ್ಯ ಶ್ರಮಿಕರು ಅವ್ಯವಸ್ಥಿತ ನೆಲೆಗಳಲ್ಲಿ ವಾಸಿಸುತ್ತಿದ್ದಾರೆ, ಮಳೆ ಮತ್ತು ಸೊಳ್ಳೆಗಳಿಂದ ಏನು ರಕ್ಷಣೆ ಇರುವುದಿಲ್ಲ. ಹೆಚ್ಚಿನ ನೆಲೆಗಳಲ್ಲಿ ಇರುವ ಗುಡಿಸಲುಗಳು ಮತ್ತು ಅರೆ ಶಾಶ್ವತ ರಚನೆಗಳೇ ಇವರ ವಾಸ ಸ್ಥಾನಗಳು ಮತ್ತು ಕೆಲಸದ ತಾಣಗಳು. ಕೆಲವು ತ್ಯಾಜ್ಯ ಆಯುವವರು ತಾವು ವಾಸಿಸುವ ತುಂಡು ನೆಲದ ಒಡೆಯರು ಆಗಿದ್ದಾರೆ, ಆದರೆ ಲಕ್ಷಣವಾದ ಮನೆಯನ್ನು ಕಟ್ಟುವಷ್ಟು ಹಣವನ್ನು ಸಂಗ್ರಹಿಸುವ ಸಾಮರ್ಥ್ಯ ಅವರಲ್ಲಿಲ್ಲ, ಹೀಗಾಗಿ ಅವರು ಸದಾ ಅನೈರ್ಮಲ್ಯದ ನಡುವೆಯೇ ಬದುಕುತ್ತಾರೆ. ಇಂತ ಸ್ವಚ್ಚ ಮತ್ತು ಅನಾರೋಗ್ಯಕರ ಪರಿಸರದಿಂದಾಗಿ ಈ ನೆಲೆಗಳಲ್ಲಿ ವಾಸಿಸುವ ತ್ಯಾಜ್ಯ ಶ್ರಮಿಕರು ಡಯೊರಿಯ, ಮಲೇರಿಯಾ ಮತ್ತು ಡೆಂಗು ಮುಂತಾದ ಕಾಯಿಲೆಗಳಿಂದ ಬಳಲುತ್ತಾರೆ. ಒಮ್ಮೆ ಕಾಯಿಲೆ ಬಿದ್ದರೆ ಅವರಿಗೆ ಎಟುಕುವ ಬೆಲೆಯಲ್ಲಿ ಆರೋಗ್ಯ ಆರೈಕೆ ಲಭ್ಯವಿಲ್ಲ ಮತ್ತು ಸುಲಭವಾಗಿ ವಾಸಿಸುವಾ ಈ ಕಾಯಿಲೆಗಳು ದೊಡ್ಡ ಮಾರಕ ರೋಗಗಳಾಗಿ ಬಿಡುತ್ತವೆ.

ತ್ಯಾಜ್ಯ ಶ್ರಮಿಕರ ಮಕ್ಕಳು ಶಾಲೆಗಳನ್ನು ಸೇರುತ್ತಾರೆ. ಕೆಲವರು ಸರ್ಕಾರಿ ಇನ್ನು ಕೆಲವರು ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಕೆಲಸ ಬಿಡಿಸಿ ಶಾಲೆಗೆ ಕಳಿಸುವುದು. ಎಂದರೆ ದಿಡಿಯುವ ಅಷ್ಟು ಕೈಗಳು ಕಡಿಮೆಯಾದಂತೆ, ಅಷ್ಟರ ಮಟ್ಟಿಗೆ ಇದು ಕುಟುಂಬದ ಮೇಲೆ ಹೊರೆಯಾಗುತ್ತದೆ. ಭಾರತ ಸರ್ಕಾರವು ತ್ಯಾಜ್ಯ ಶ್ರಮಿಕರ ಮಕ್ಕಳಿಗಾಗಿ ವಿದ್ಯಾರ್ಥಿ ವೇತನಗಳನ್ನು ನೀಡುತ್ತಿದೆ,ಅನೇಕ ಖಾಸಗಿ ದಾನಿಗಳು ವಿದ್ಯಾರ್ಥಿ ವೇತನಗಳನ್ನು ಕೊಡುತ್ತಿದ್ದಾರೆ. ಆದರೆ ಕ್ಲಿಷ್ಟಕರವಾದ ಕ್ರಮದ ಕಾರಣದಿಂದಾಗಿ ಹೆಚ್ಚಿನ ಮಕ್ಕಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾದ್ಯವಾಗುತ್ತಿಲ್ಲ. ತಕ್ಷಣದ ಯಾವುದೆ ಹಣಕಾಸು ಉತ್ತೇಜನವಿಲ್ಲ,ಬದುಕುವುದು ದುಬಾರಿಯಾಗಿದೆ, ತ್ಯಾಜ್ಯ ಶ್ರಮಿಕರ ಹೆಚ್ಚಿನವರು ತಮ್ಮ ಮಕ್ಕಳನ್ನು ಶಾಲೆಯಿಂದ ಹೊರತರುತ್ತಾರೆ, ಇದರಿಂದ ಶಾಲೆಗಳನ್ನು ಬಿಡುವವರ ಸಂಖ್ಯೆಯು ಹೆಚ್ಚಾಗಿದೆ.

ತ್ಯಾಜ್ಯ ಶ್ರಮಿಕರ ಕೆಲಸದ ಪರಿಸ್ಥಿತಿಗಳು ದಯನೀಯವಾಗಿದೆ. ಕಸದ ರಾಶಿಯಿಂದಲೇ ಹೆಕ್ಕಿ ಪಡೆದ ಹಳೆಯ ಹರಿದ ಶೂಗಳು ಮತ್ತು ಅಂತಹದೇ ಬಟ್ಟೆಬರೆ, ಕಸವನ್ನು ಕೆದಕಲು ಇರುವ ಒಂದು ಕೋಲು ಇವಷ್ಟೆ ಇವರ ಕೆಲಸದ ವೇಳಯ ಸಾಧನಗಳು, ಶ್ರಮಿಕರ ಕೆಲಸದ ಪರಿಸ್ಥಿತಿ ಹೀನಾಯವಾಗಿದೆ.ಇವರದು ಅಪಾಯಕಾರಿ ಮತ್ತು ಕಳಂಕವನ್ನು ಮೆತ್ತಿಕೊಂಡಿರುವ ಕೆಲಸ ಎಂದು ಭಾವಿಸಲಾಗಿತ್ತದೆ. ಕೆಲಸದ ಪರಿಸರವನ್ನು ಬದಲಾಹಿಸುವ ಮೂಲಕ, ಸುರಕ್ಷತೆ ಸಾಧನಗಳನ್ನು ಕಡ್ಡಾಯ ಮಾಡುವುದರ ಮೂಲಕ ಮತ್ತು ತ್ಯಾಜ್ಯ ಶ್ರಮಿಕರು ಸುರಕ್ಷಿತ ಬದುಕನ್ನು ಬದುಕುವಂತೆ ಅವರನ್ನು ಸಶಕ್ತಗೊಳಿಸುವ ಮೂಲಕ ಕಸುಬು ಹೆಚ್ಚು ಉತ್ತಮಗೊಳ್ಳಬಹುದು, ಈ ಕೆಲಸಗಾರರು ಹೆಚ್ಚು ಆರೋಗ್ಯಕರವಾಗಿ, ಗೌರವಯುತವಾಗಿ ಬದುಕಬಹುದು.

ಕರ್ನಾಟಕದಲ್ಲಿ ವಾಸವಾಗಿರುವ ಎಲ್ಲಾ ತ್ಯಾಜ್ಯ ಶ್ರಮಿಕರ ಬೇಡಿಕೆಗಳು:

ವೃತ್ತಿಪರ:

1.ತ್ಯಾಜ್ಯ ಕಾರ್ಮಿಕರ ಕುಟುಂಬಗಳಿಗೆ ಕೌಶಲ್ಯ ತರಭೇತಿ ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸುವುದು.(ಅಂಬೆಡ್ಕರ್ ಅಭಿವೃದ್ದಿ ನಿಗಮ,ಹಾಗೂ (ಎನ್,ಎಸ್,ಕೆ,ಎಫ್.ಡಿ.ಸಿ) ಇತರೆ.   2.ಕರ್ನಾಟಕದ ಎಲ್ಲಾ ನಗರಗಳು ಮತ್ತು ಪಟ್ಟಣಗಳಲ್ಲಿರುವ ತ್ಯಾಜ್ಯ ಆಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರನ್ನು ಗುರುತಿಸಿ, ಪಟ್ಟಿ ಮಾಡಿ ಅವರಿಗೆ ಔದ್ಯೋಗಿಕ ಗುರುತಿನ ಚೀಟಿಗಳನ್ನು ವಿತರಿಸುವುದು.

3.ಬೆಂಗಳೂರು, ಮೈಸೂರು ಮತ್ತು ತುಮಕೂರಿನಲ್ಲಿ ಮಾಡಿರುವ ಹಾಗೆ ಎಲ್ಲಾ ನಗರಗಳಲ್ಲಿ ವಿಕೇಂದ್ರೀಕೃತ ಒಣ ತ್ಯಾಜ್ಯ ಸಂಗ್ರಹಣೆ ಕೇಂದ್ರಗಳನ್ನು ಸ್ಥಾಪಿಸುವುದು. ಈ ಕೇಂದ್ರಗಳ ಕಾರ್ಯಚಾಲನೆಯಲ್ಲಿ ತ್ಯಾಜ್ಯ-ಆಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರನ್ನು ತೊಡಗಿಸಿಕೊಳ್ಳುವುದು.

4.ಒಣ ತ್ಯಾಜ್ಯ(ರಿಸೈಕಲ್ ಮಾಡಬಹುದಾದ ವಸ್ತುಗಳು, ಕಡಿಮೆ ಮತ್ತು ಶೂನ್ಯ ಬೆಲೆಯ ಇನರ್ಟ್ ತ್ಯಾಜ್ಯ), ಹಸಿ (ಸಾವಯವ)ತ್ಯಾಜ್ಯ ಮತ್ತು ಸ್ಯಾನಿಟರಿ/ಅಪಾಯಕಾರಿ ತ್ಯಾಜ್ಯ ಈ ರೀತಿಯ 3-ಬಗೆ ತ್ಯಾಜ್ಯ ಪ್ರತ್ಯೇಕಿಸುವಿಕೆಯನ್ನು ಅನುಸರಿಸಿ ಮತ್ತು 2016 ಡಿಸೆಂಬರ್ 15ರ ಉಚ್ಚ ನ್ಯಾಯಾಲಯದ ಆದೇಶದಲ್ಲಿ ನಿಗದಿಪಡಿಸಿರುವಂತೆ ತ್ಯಾಜ್ಯ-ಆಯುವವರನ್ನು ಪ್ರತ್ಯೇಕಿತ ತ್ಯಾಜ್ಯ ಸಂಗ್ರಹಣೆಯಲ್ಲಿ ತೊಡಗಿಸಿಕೊಳ್ಳುವುದು.

5.ಸಾವಯವ ತ್ಯಾಜ್ಯದ ಸಂಸ್ಕರಣೆಯಲ್ಲಿ ಎಂದರೆ ಬಯೋ-ಮಿಥನೈಜೇಷನ್ ಘಟಕಗಳ ಕಾಂಪೋಸ್ಟಿಂಗ್ ಕಾರ್ಯಚಾಲನೆಯಲ್ಲಿ ತ್ಯಾಜ್ಯ-ಆಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರನ್ನು ತೊಡಗಿಸಿಕೊಳ್ಳುವುದು.

6.ತ್ಯಾಜ್ಯ-ಆಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರ ಮೈಕ್ರೋ ಉದ್ಯಮಗಳಿಗೆ ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳಲು ವಯಬಿಲಿಟಿ ಗ್ಯಾಪ್ ಫಂಡಿಂಗ್ ಬೆಂಬಲವನ್ನು ನೀಡುವುದು.

7.ಸ್ಕಾಪ್ ವ್ಯಾಪಾರಕ್ಕಾಗಿ ಸುರಕ್ಷಿತ ಮತ್ತು ಸುಭದ್ರ ಮಾರುಕಟ್ಟೆ ತಾಣ-ರಿಸೈಕ್ಲಿಂಗ್ ಹಬ್- ಸ್ಥಾಪಿಸುವುದು

8.ಕರ್ನಾಟಕಾದ್ಯಂತ ತ್ಯಾಜ್ಯ-ಆಯುವವರಿಗಾಗಿ ವಿಶೇಷ ವಸತಿಯೋಜನೆ. ತ್ಯಾಜ್ಯ- ಆಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರ ವಸತಿ ಸೌಕರ್ಯವು ಅವರ ಉದ್ಯೋಗ/ಜೀವನೋಪಾಯದ ಅಗತ್ಯಗಳಿಗೆ ಅನುಸಾರವಾಗಿ ಇರಬೇಕು. ಇದರಲ್ಲಿ ತ್ಯಾಜ್ಯವನ್ನು ವಿಂಗಡಿಸಲು, ದಾಸ್ತಾನು ಮಾಡಲು ಸ್ಥಳಾವಕಾಶ ಇರಬೇಕು.

9.ರಾಜ್ಯ ಮತ್ತು ಮುನಿಸಿಪಲ್ ಮಟ್ಟದ ಸ್ವಚ್ಛ ಭಾರತ ನಿಗಾವಣೆ ಮತ್ತು ಅನುಷ್ಠಾನ ಸಮಿತಿಗಳಲ್ಲಿ ತ್ಯಾಜ್ಯ-ಆಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರ ಪ್ರತಿನಿಧಿಗಳನ್ನು ಸೇರಿಸಿಕೊಳ್ಳುವುದು.

10.ಕಾಗದ ಆಯುವವರಿಗೆಗುರುತಿನ ಚೀಟಿಯನ್ನು ಹೊಸದಾಗಿ ಮಾಡುವುದು ಮತ್ತುಈಗಾಗಲೇ ಬಿ.ಬಿ.ಎಂ.ಪಿಯ ಆಯುಕ್ತರು ನೀಡಿರುವ ಗುರುತಿನ ಚೀಟಿಯನ್ನು ನವೀಕರಣ ಮಾಡುವುದು.

11.30 ನಿರ್ವಹಣೆಯಲ್ಲಿಬರುವ ತೆರಿಗೆ ಆಯುವವರಕಲ್ಯಾಣನಿಧಿಯನ್ನು ಸ್ಥಾಪಿಸುವ ಹಣದಲ್ಲಿ ಕಾಗದ ಬಗ್ಗೆ ಉದಾರಣೆ: ಕಟ್ಟಡಕಾರ್ಮಿಕರ ಕಲ್ಯಾಣನಿಧಿಯ ಮಾದರಿಯನ್ನು ಅನುಸರಿಸುವುದು.        13. ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಕಟ್ಟಡದ ಅಳತೆಯನ್ನು ವಿಸ್ತರಿಸುವುದು ಮತ್ತುಮೂಲಭೂತ ಸೌಕರ್ಯವನ್ನು ಒದಗಿಸುವುದು.

14. ಬೆಂಗಳೂರು ಒನ್ ಮಾದರಿಯಲ್ಲಿಪ್ರತಿ ವಾರ್ಡ್ ಅಥವಾ ವಾರ್ಡ್‌ಗಳ ಸಮೂಹಕ್ಕಾಗಿ ಕಾರ್ಮಿಕ ಇಲಾಖೆಯ ಮೂಲಕ

15.ಕಾರ್ಮಿಕರ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಬೇಕು.

16.ಅಸಂಘಟಿತ ಕಾರ್ಮಿಕರಿಗೆ ಜೀವವಿಮೆ ಮಾಡಿಕೊಡಬೇಕು

ಜೀವನಾಧಾರಿತ:

1.ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ ಪೋಷಕರ ಮಕ್ಕಳಿಗೆ ಮಿಸಲಾಗಿರುವ ವಿಧ್ಯಾರ್ಥಿ ವೇತನದ ಮೊತ್ತವನ್ನು 3000 ಕೇಂದ್ರಸರ್ಕಾರ ನೀಡುತ್ತದೆ. ರಾಜ್ಯ ಸರ್ಕಾರದಿಂದ 2000 ಸೇರಿಸಿ ರೂ 5000/- ಒಂದು ಮಗುವಿಗೆವರ್ಷಕ್ಕೆ ಸಿಗುವಂತೆ ಮಾಡುವುದು.

2.ತ್ಯಾಜ್ಯ ಕಾರ್ಮಿಕರು ಪರಿಶಿಷ್ಟ ಜಾತಿ ಮತ್ತು ಮತ್ತು ಪರಿಶಿಷ್ಟ ಪಂಗಡದವರಿಗೆ ಸೇರಿರುತ್ತಾರೆ. ಅದರೆ ಅವರು ಹೆಚ್ಚಿನ ಪ್ರಮಾಣದಲ್ಲಿ ಅವಿದ್ಯವಂತರಾಗಿರುತ್ತಾರೆ. ಮಕ್ಕಳ ದಾಖಲೆಯ ಆದರದ ಮೇಲೆ ತಂದೆಗೆ ಜಾತಿಪತ್ರನೀಡುತ್ತಾರೆ. ಆದರೆ ತಾಯಿಗೆ ಈ ಸೌಲಭ್ಯ ದೊರಕುತ್ತಿಲ್ಲ. ತಾಯಿಗೂ ಈ ಸೌಲಭ್ಯ ದೊರೆಯುವಂತೆ ಆದೇಶವನ್ನು ಜಾರಿಗೊಳಿಸುವುದು. ಮಕ್ಕಳ ವಿಧ್ಯಾಬ್ಯಾಸದ ದಾಖಲೆಯನ್ನು ಆದಾರವಾಗಿಟ್ಟುಕೊಂಡು ತಂದೆ ತಾಯಿಗೆ ಇಬ್ಬರಿಗೂ ಜಾತಿ ಪ್ರಮಾಣ ಪತ್ರವನ್ನು ಕೊಡುವ ಆದೇಶವನ್ನು ಜಾರಿಗೊಳಿಸುವುದು.

3.ಕಾಗದ ಆಯುವವರಿಗೆ ಗುರುತಿನ ಚೀಟಿಯನ್ನು ಹೊಸದಾಗಿ ಮಾಡುವುದು ಮತ್ತುಈಗಾಗಲೇ

4.ಬಿ.ಬಿ.ಎಂ.ಪಿಯ ಆಯುಕ್ತರು ನೀಡಿರುವ ಗುರುತಿನ ಚೀಟಿಯನ್ನು ನವೀಕರಣ ಮಾಡುವುದು.

5.ಅಸಂಘಟಿತಕಾರ್ಮಿಕರಿಗೆ ಜೀವವಿಮೆ ಮಾಡಿಕೊಡಬೇಕು

6.ಆರೋಗ್ಯ : ಇ.ಎಸ್.ಐ. ಸೇವೆಯನ್ನು ತ್ಯಾಜ್ಯ ಶ್ರಮಿಕರು ಹಾಗೂ ಅಸಂಘಟಿತ ಕೂಲಿಕಾರ್ಮಿಕರಿಗೆ ಒದಗಿಸುವುದು. ಆರೋಗ್ಯ ಸಾರ್ವತ್ರಿಕರಣ ಅಲ್ಲದೆ ವಾರ್ಡಿಗೊಂದು ಪ್ರಾಥಮಿಕ ಚಿಕಿತ್ಸೆ ಪಡೆಯಲು ಸರ್ಕಾರಿ ಕ್ಲಿನಿಕ್.

7.ಆಹಾರ ಪಡೀತರ ಚೀಟಿ ಹೊಂದಿರುವ ತ್ಯಾಜ್ಯ ಶ್ರಮಿಕರಿಗೆ ಅಕ್ಕಿ, ಗೋದಿ ಕೊಡುವುದರ ಜೊತೆಗೆ ದಿನನಿತ್ಯ ಬಳಸುವ ಆಹಾರಗಳಾದ ಸಕ್ಕರೆ, ಅಡುಗೆ ಎಣ್ಣೆ, ಬೇಳೆ, ಸೋಪ್, ಬೆಲ್ಲ, ಜೋಳ, ರಾಗಿ, ಉಚಿತವಾಗಿ ಒದಗಿಸುವುದು.

City Today News 9341997936