ಏಪ್ರಿಲ್ 14: ಅಂಬೇಡ್ಕರ್–ಜಗಜೀವನ್ ರಾಮ್ ಜಯಂತಿ, ಸಾಧಕರಿಗೆ ಸನ್ಮಾನ

ಬೆಂಗಳೂರು: ಬೆಂಗಳೂರು ಸಿಟಿ ಕಾರ್ಪೋರೇಶನ್ ವರ್ಕರ್ಸ್ ಫೆಡರೇಷನ್ ಹಾಗೂ ಜೈ ಭಾರತ ಮಾತಾ ಸೇವಾ ಸಮಿತಿ ಸಂಯುಕ್ತ ಆಶ್ರಯದಲ್ಲಿ, ಭಾರತರತ್ನ ಹಾಗೂ ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ರವರ 135ನೇ ಜನ್ಮಜಯಂತಿ ಮತ್ತು ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ಜಯಂತಿಯನ್ನು ಏಪ್ರಿಲ್ 14ರಂದು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಲಾಯಿತು.
ಫೆಡರೇಷನ್ ಅಧ್ಯಕ್ಷ ಡಾ. ಬಾಬು, ಸಮಿತಿಯ ವೈಜನಾಥ್ ರುುಳಕಿ, ಮಲ್ಲಿಕಾರ್ಜುನ ಸಾರವಾಡ್, ನಿವೃತ್ತ ಡಿ.ವೈ.ಎಸ್.ಪಿ ಎಸ್.ವಿ. ಅವಂಟಿ ಸೇರಿದಂತೆ ಗುರುಸಿದ್ದಪ್ಪ, ಗಣೇಶ್ ಬೀದರ್, ದೊರೈ ಮತ್ತು ಶಿವಶರಣ ಸುತ್ತಾರ್ ಉಪಸ್ಥಿತರಿದ್ದರು.
ಡಾ. ಬಾಬು ಮಾತನಾಡಿ, ಜಯಂತಿ ಅಂಗವಾಗಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಮುಖ್ಯ ಆಯುಕ್ತರು ಮತ್ತು ಐದು ಪಾಲಿಕೆಗಳ ಆಯುಕ್ತರು ದೀಪ ಬೆಳಗಿಸಿ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಜೈ ಭಾರತ ಮಾತಾ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಪರಮಪೂಜ್ಯ ಶ್ರೀ ಹವಾಮಲ್ಲಿನಾಥ ಮಹಾರಾಜ ನಿರಗುಡಿ ಅವರ ದಿವ್ಯ ಸಾನಿಧ್ಯದಲ್ಲಿ, ಬಿಬಿಎಂಪಿ ಕೇಂದ್ರ ಕಚೇರಿಯಿಂದ ಫ್ರೀಡಂ ಪಾರ್ಕ್‌ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.ಕನ್ನಡ ಸಂಘಟನೆಗಳು, ದಲಿತ ಪರ ಸಂಘಟನೆಗಳು, ಹೋರಾಟಗಾರರು, ಪೌರ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳ ಜನರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸೈನಿಕರು, ಹಿರಿಯ ನಾಗರಿಕರು ಹಾಗೂ ಶ್ರಮಿಕ ವರ್ಗದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.
ಮೆರವಣಿಗೆ ಫ್ರೀಡಂ ಪಾರ್ಕ್‌ನಿಂದ ಕೆ.ಆರ್. ಸರ್ಕಲ್, ವಿಧಾನಸೌಧ, ಅಂಬೇಡ್ಕರ್ ಪ್ರತಿಮೆ, ಶಾಂತಿನಗರ, ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಮಾರ್ಗವಾಗಿ ಸಾಗಲಿದೆ ಎಂದು ಅವರು ವಿವರಿಸಿದರು.
City Today News 9341997936

You must be logged in to post a comment.