
ಬಿ.ಎಂ.ಎಸ್ ಕಾನೂನು ಮಹಾವಿದ್ಯಾಲಯದಲ್ಲಿ 8
ನೇ ಬಿ.ಎಂ. ಶ್ರೀನಿವಾಸಯ್ಯ ಸ್ಮಾರಕ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ದಿ. 4 ರಿಂದ 6ವರೆಗೆ ಆಯೋಜಿಸಲಾಗಿತ್ತು.
ಅದರ ಅಂಗವಾಗಿ 6 ಆಗಸ್ಟ್ 2023 ರಂದು ಮುಕ್ತಾಯ ಸಮಾರಂಭವನ್ನು ಆಯೋಜಿಸಲಾಗಿತ್ತು
. ಮುಖ್ಯ ಅತಿಥಗಳಾಗಿದ್ದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ. ಹೆಚ್.ಪಿ.ಸಂದೇಶ್, ನ್ಯಾಯಾಧೀಶರು-ಕರ್ನಾಟಕದ ಉಚ್ಚ ನ್ಯಾಯಾಲಯ ಅವರು ಸ್ಪರ್ಧೆಯನ್ನು ಆಯೋಜಿಸಿದ್ದ ಬಿ.ಎಂ.ಎಸ್ ಕಾನೂನು ಮಹಾವಿದ್ಯಾಲಯವನ್ನು ಮತ್ತು ಪಾಲ್ಗೊಂಡಿದ್ದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಗೌರವ ಅತಿಥಗಳಾಗಿದ್ದ ಪ್ರೊ.ಡಾ.ಎಂ.ಕೆ.
ರಮೇಶ್, ಮಾಜಿ ಕಾನೂನು ಪ್ರಾಧ್ಯಾಪಕರು, NLSIU ಬೆಂಗಳೂರು ಅವರು ಕಾನೂನಿನ ಕುರಿತಾದ ತಮ್ಮ ಅಮೂಲ್ಯವಾದ ಒಳನೋಟಗಳನ್ನು ನೀಡಿದರು.
ಶ್ರೀ. ಜಿ.ಎಲ್.ವಿಶ್ವನಾಥ್, ಹಿರಿಯ ವಕೀಲರು – ಕರ್ನಾಟಕ ಹೈಕೋರ್ಟ್ ಇವರು ವಿದ್ಯಾರ್ಥಿಗಳಿಗೆ ಕಾನೂನಿಗೆ ಸಂಬಂಧಿಸಿದಂತೆ ಕೆಲವೊಂದು ಸಲಹೆಗಳನ್ನು ನೀಡಿದರು. ಶ್ರೀ. ಬ್ರಿಜೇಶ್ ಎಂ. ಸಿಂಗ್, ವಕೀಲ ಮತ್ತು ಕಾನೂನು ಸಲಹೆಗಾರ,
ಮೂಟ್ ಪ್ರಸ್ತಾವನೆಯನ್ನು ರಚಿಸಿದ್ದರು. ಶ್ರೀ. ಸಿದ್ದಲಿಂಗಪ್ಪ ಬಿ.ಪೂಜಾರಿ, ಕೆಎಸ್‌ಎಂಸಿ ವ್ಯವಸ್ಥಾಪಕ ನಿರ್ದೇಶಕರು
ಗೌರವ ಅತಿಥಿಗಳಾಗಿದ್ದರು. ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾಲೇಜು ಬೆಂಗಳೂರು ತಂಡವು ಪ್ರಥಮ ಬಹುಮಾನವನ್ನು ಪಡೆಯುವ ಮೂಲಕ ಸ್ಪರ್ಧೆಯಲ್ಲಿ ವಿಜೇತರಾದರು. ಡಾ.ಬಿ.ಎಸ್. ರಾಗಿಣಿ ನಾರಾಯಣ್, ದಾನಿ
ದತ್ತಿ, ಬಿ.ಎಂ.ಎಸ್.ಇ.ಟಿ; ಡಾ. ಪಿ. ದಯಾನಂದ ಪೈ, ಆಜೀವ ದತ್ತಿ, ಬಿ.ಎಂ.ಎಸ್.ಇ.ಟಿ; ಶ್ರೀ. ರವಿ ವೆಂಕಟೇಶ, ದತ್ತಿ, ಬಿ.ಎಂ.ಎಸ್.ಇ.ಟಿ; ಮತ್ತು ಶ್ರೀ. ಗೌತಮ್ ಕಲತ್ತೂರು, ಅಧ್ಯಕ್ಷರು, ಬಿ.ಎಂ.ಎಸ್. ಆಸ್ಪತ್ರೆ ಟ್ರಸ್ಟ್, ಶ್ರೀ. ಅವಿರಾಮ್ ಶರ್ಮಾ,
ದತ್ತಿ, ಬಿ.ಎಂ.ಎಸ್.ಇ.ಟಿ, ಅಧ್ಯಕ್ಷ ಬಿಎಂಎಸ್‌ಸಿಎಲ್, ಹಾಗೂ ಪ್ರಾಂಶುಪಾಲರಾದ ಪ್ರೊ.(ಡಾ.) ಅನಿತಾ ಎಫ್ ಎನ್ ಡಿಸೋಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
City Today News 9341997936

You must be logged in to post a comment.