
ಬೆಂಗಳೂರು: ಅಪೋಲೋ ಆಸ್ಪತ್ರೆಗಳ ಸಮೂಹವು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತನ್ನ ಅತ್ಯಾಧುನಿಕ ತಂತ್ರಜ್ಞಾನ, ವೈಯಕ್ತಿಕಗೊಳಿಸಿದ ಆರೈಕೆ ಮತ್ತು ಜಾಗತಿಕ ಮಟ್ಟದ ವೈದ್ಯಕೀಯ ಸೇವೆಗಳನ್ನು ಒದಗಿಸಲು ಅಪೋಲೋ ಕ್ರೇಡಲ್ ಮತ್ತು ಅಪೋಲೋ ಒನ್ ಹೆಸರಿನಲ್ಲಿ ಹೊಸ ಆರೋಗ್ಯ ಸಂಕೀರ್ಣವನ್ನು ಉದ್ಘಾಟಿಸಿದೆ.
ಈ ಸಂದರ್ಭದಲ್ಲಿ ಅಪೋಲೋ ಆಸ್ಪತ್ರೆಗಳ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ ಮುಖ್ಯಾತಿಥಿಯಾಗಿದ್ದು, ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಮತ್ತು ನಟಿ ಸಪ್ತಮಿ ಗೌಡ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಸ್ತ್ರೀಯ ಗಾಯಕ ರಾಹುಲ್ ದೇಶಪಾಂಡೆ ಅವರು ವರ್ಚುವಲ್ ಮೂಲಕ ಈ ಸಮಾರಂಭದಲ್ಲಿ ಭಾಗವಹಿಸಿ ಶುಭಾಶಯಗಳನ್ನು ಹೇಳಿದರು.

ಅಪೋಲೋ ಝೆನ್:
ಈ ಹೊಸ ಕೇಂದ್ರದಲ್ಲಿ ‘ಅಪೋಲೋ ಝೆನ್’ ಹೆಸರಿನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ, ನಿಖರ ರೋಗನಿರ್ಣಯ ಮತ್ತು ಪುರಾವೆ ಆಧಾರಿತ ತಪಾಸಣಾ ವ್ಯವಸ್ಥೆ ಆರಂಭವಾಗಿದೆ. ಸಂಪೂರ್ಣ ದೇಹದ ಎಂಆರ್‌ಐ, ಮೈಕ್ರೋಬಯೋಮ್ ವಿಶ್ಲೇಷಣೆ, ಮುನ್ಸೂಚನೆಗೆ ಅನುಗುಣವಾದ ಆರೋಗ್ಯ ಸಮೀಕ್ಷೆಗಳಿಗೆ ಇದು ಬೆನ್ನುಡಂಬರಾಗಿದೆ.
ನೌ ಫಾರ್ ಫ್ಯೂಚರ್:
ಇದೆ ಸಂದರ್ಭದಲ್ಲಿ ‘ನೌ ಫಾರ್ ಫ್ಯೂಚರ್’ ಎಂಬ ವಿಶಿಷ್ಟ ಯೋಜನೆಗೂ ಚಾಲನೆ ನೀಡಲಾಗಿದೆ. ಇದು ಎರಡನೇ ಬಾರಿ ತಾಯಿತನವನ್ನು ಚಿಂತೆಯಿಲ್ಲದೆ ಆಲಿಂಗಿಸುವ ಆಶಯವಿರುವ ಮಹಿಳೆಯರಿಗೆ ರೂಪುಗೊಳಿಸಲಾಗಿದೆ.

ಸೌಲಭ್ಯಗಳ ವೈಶಿಷ್ಟ್ಯತೆ:
ಅಪೋಲೋ ಕ್ರೇಡಲ್ ಮತ್ತು ಚಿಲ್ಡ್ರನ್’ಸ್ ಹಾಸ್ಪಿಟಲ್‌ನ 7ನೇ ಮತ್ತು ಪ್ಯಾನ್-ಇಂಡಿಯಾ ಮಟ್ಟದಲ್ಲಿ 19ನೇ ಕೇಂದ್ರವಾಗಿ ಸ್ಥಾಪಿತವಾದ ಈ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯವಿದ್ದು, ಹೆರಿಗೆ, ಸ್ತ್ರೀರೋಗ, ಭ್ರೂಣ ಔಷಧ, ನವಜಾತ ಶಿಶು ಆರೈಕೆ, ಮಕ್ಕಳ ತುರ್ತು ವೈದ್ಯಸೇವೆ, ಶಸ್ತ್ರಚಿಕಿತ್ಸಾ ವಿಭಾಗ, ನರವಿಜ್ಞಾನ, ದಂತವೈದ್ಯ, ಹೃದ್ರೋಗ ಸೇರಿದಂತೆ ಹಲವಾರು ತಜ್ಞ ಚಿಕಿತ್ಸಾ ವಿಭಾಗಗಳಿವೆ.
ಸಂಗೀತದ ಸ್ಪರ್ಶ:
ರಾಹುಲ್ ದೇಶಪಾಂಡೆ ಅವರಿಂದ ಸಂಗೀತ ಸಂಯೋಜನೆಯಾದ ಅಪೋಲೋ ಕ್ರೇಡಲ್‌ಗೆ ಲಾಲಿ ಹಾಡು ಬಿಡುಗಡೆಗೊಳ್ಳಿದ್ದು, ತಾಯಿ ಮತ್ತು ಮಗುವಿನ ನಡುವಿನ ಪ್ರೀತಿಯ ಬಾಂಧವ್ಯಕ್ಕೆ ಸಂವೇದನಾತ್ಮಕ ರೂಪ ನೀಡಿದೆ.
ಆರೋಗ್ಯದಲ್ಲಿ ಹೊಸ ಅಧ್ಯಾಯ:
“ಈ ಹೊಸ ಸೌಲಭ್ಯವು ಅತ್ಯುತ್ತಮ ಆರೋಗ್ಯ ಸೇವೆಗೆ ಪ್ರವೇಶ ಸುಲಭಗೊಳಿಸುವ ಮೂಲಕ ಕುಟುಂಬದ ಪ್ರತಿಯೊಬ್ಬ ಸದಸ್ಯನ ಆರೋಗ್ಯದ ಭದ್ರತೆಯಲ್ಲಿ ಹೊಸ ಅಧ್ಯಾಯವನ್ನೇ ರೂಪಿಸಿದೆ,” ಎಂದು ಡಾ. ಸಂಗೀತಾ ರೆಡ್ಡಿ ಹೇಳಿದರು.
City Today News 9341997936

You must be logged in to post a comment.