ಅಲ್ಯೂಮಿನಿಯಂ ಕಿಟಕಿಗಳು, ಬಾಗಿಲು ಉತ್ಪನ್ನಗಳನ್ನು ಒದಗಿಸುವ ಅಲುಕೆ ಇಂಡಿಯಾ ಸಂಸ್ಥೆಯ ಬೆಂಗಳೂರಿನ ಮೊದಲ ಮೊದಲ ಎಕ್ಸ್ ಪೀರಿಯನ್ಸ್ ಸೆಂಟರ್ ಇಂದಿರಾನಗರದಲ್ಲಿ ಉದ್ಘಾಟನೆ

ಬೆಂಗಳೂರು, ಸೆಪ್ಟೆಂಬರ್ 13 2023: ಕಳೆದ 70 ವರ್ಷಗಳಿಂದ ಉನ್ನತ ದರ್ಜೆಯ ಅಲ್ಯುಮೀನಿಯಂ ಬಾಗಿಲುಗಳು, ಕಿಟಕಿಗಳು ಮತ್ತು ಮನೆ ಮುಂಭಾಗಕ್ಕೆ ಬಳಸಲಾಗುವ ಫಸಾಡ್ ಉತ್ಪನ್ನಗಳನ್ನು ಒದಗಿಸುತ್ತಿರುವ ಅಲುಕೆ ಇಂಡಿಯಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಬೆಂಗಳೂರಿನ ಇಂದಿರಾನಗರದ ಎಚ್ಎಎಲ್ 2ನೇ ಹಂತದಲ್ಲಿ ತನ್ನ ಮೊದಲ ಎಕ್ಸ್ ಪೀರಿಯನ್ಸ್ ಸೆಂಟರ್ ಅನ್ನು ಉದ್ಘಾಟಿಸಿದೆ.
ವೆಂಕಟರಮಣನ್ ಅಸೋಸಿಯೇಟ್ಸ್ (ವಿಎ)ನ ವ್ಯವಸ್ಥಾಪಕ ಪಾಲುದಾರರಾದ ಶ್ರೀ ನರೇಶ್ ವಿ ನರಸಿಂಹನ್ ಮತ್ತು ರಿಯಲ್ ಎಸ್ಟೇಟ್ ಉದ್ಯಮದ ಪರಿಣಿತ, ವಾಣಿಜ್ಯೋದ್ಯಮಿ, ಸಿಇಓ ಮತ್ತು ಲೇಖಕ ಶ್ರೀ ಅಶ್ವಿಂದರ್ ಆರ್. ಸಿಂಗ್ ಅವರು ಈ ಕೇಂದ್ರವನ್ನು ಉದ್ಘಾಟಿಸಿದರು. ಅಲುಕೆ ಗ್ಲೋಬಲ್ ಹೆಡ್ ಶ್ರೀಮತಿ ಹೆಲೆನ್ ರೌಕ್ಸ್ ಮತ್ತು ಅಲುಕೆ ಇಂಡಿಯಾದ ಎಂಡಿ ಹಾಗೂ ಸಿಇಓ ಶ್ರೀ. ಸುಭೇಂದು ಗಂಗೂಲಿ ಉಪಸ್ಥಿತರಿದ್ದರು.

ಎಕ್ಸ್ ಪೀರಿಯನ್ಸ್ ಸೆಂಟರ್ ಉದ್ಘಾಟನೆ ಸಂದರ್ಭದಲ್ಲಿ ಇನ್ಫಿನಿಯೊ ಮಿನಿಮಲ್ ಕೇಸ್ಮೆಂಟ್ ವಿಂಡೋ ಸಿಸ್ಟಮ್ ಮತ್ತು ಡಬ್ಲ್ಯೂ75ಯು ಯುನಿಟೈಸ್ಡ್ ಕರ್ಟನ್ ವಾಲಿಂಗ್ ಸಿಸ್ಟಮ್ ಎಂಬ ಎರಡು ಅತ್ಯಾಕರ್ಷಕ ಹೊಸ ಉತ್ಪನ್ನಗಳನ್ನೂ ಬಿಡುಗಡೆ ಮಾಡಲಾಯಿತು. ಈ ಹೊಸ ಉತ್ಪನ್ನಗಳು ಅಲುಕೆ ಸಂಸ್ಥೆಯ ಉತ್ಕೃಷ್ಟತೆ ಮತ್ತು ಬದ್ಧತೆಗೆ ಅನುಗುಣವಾಗಿ ರೂಪುಗೊಂಡಿದ್ದು, ವಿನ್ಯಾಸ, ಕಾರ್ಯಕ್ಷಮತೆ ಮತ್ತು ವಾಣಿಜ್ಯ ಅಂಶಗಳನ್ನು ಉತ್ತಮ ಸಮತೋನಲದಿಂದ ಮೂಡಿ ಬಂದಿದೆ.

ಇನ್ಸುಲೇಟೆಡ್ ವಿಂಡೋ ಸಿಸ್ಟಮ್‌ಗಳು ಘನತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಜೊತೆಗೂಡಿಸಿ ರಚಿಸಲಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ರೀತಿಯ ಉತ್ಪನ್ನ ಮೊದಲನೆಯದಾಗಿದೆ. 65 ಎಂಎಂ ಅಲ್ಯೂಮಿನಿಯಂ ಸೈಟ್‌ಲೈನ್‌ ಉತ್ಪನ್ನಗಳನ್ನು ಎಲ್ಲಾ ಕಡೆಗಳಲ್ಲಿ ಸುಲಭವಾಗಿ ನಿರ್ವಹಣೆ ಮಾಡಬಹುದಿದೆ. ಇವುಗಳು ಎ ಎಸ್ ಟಿ ಎಂ ಅಡಿಯಲ್ಲಿ ನಡೆದ ಡೈನಾಮಿಕ್ ವಾಟರ್ ಪೆನೆಟ್ರೇಶನ್ ಪರೀಕ್ಷೆಯಲ್ಲಿ +750 ಪ್ಯಾಸ್ಕಲ್ ಮತ್ತು +720 ಪ್ಯಾಸ್ಕಲ್ ಮತ್ತು ಏರ್ ಇನ್‌ಫಿಲ್ಟ್ರೇಶನ್ ಪರೀಕ್ಷೆಯಲ್ಲಿ +600 ಪ್ಯಾಸ್ಕಲ್ ಶಕ್ತಿ ಸಾಮರ್ಥ್ಯ ದಾಖಲಿಸಿವೆ. 4500 ಪ್ಯಾಸ್ಕಲ್ ಸ್ಟ್ರಕ್ಚರಲ್ ಪ್ರೂಫ್ ಲೋಡ್‌ ಶಕ್ತಿ ಹೊಂದಿರುವ ಗಾಳಿಯನ್ನು ತಡೆಯಬಲ್ಲ ಸಾಮರ್ಥ್ಯ ಇರುವ ವಿಂಡೋವನ್ನು ಕಂಪನಿಯು ವಿನ್ಯಾಸಗೊಳಿಸಿದೆ.

ಸ್ಲಿಮ್ ಆಗಿರುವ ಡಬಲ್ಯೂ 75ಯು ಯುನಿಟೈಸ್ಡ್ ಕರ್ಟನ್ ವಾಲಿಂಗ್ ಸಿಸ್ಟಮ್ ವಿಶೇಷ ಫೀಚರ್ ಗಳನ್ನು ಹೊಂದಿದೆ. 3 ಬ್ಯಾರಿಯರ್ ಸಿಸ್ಟಮ್ ಜೊತೆಗೆ ಮಲ್ಲಿಯನ್ ಜಂಕ್ಷನ್‌ಗಾಗಿ 3 ಗ್ಯಾಸ್ಕೆಟ್ ಮತ್ತು ಗಾಳಿ ಮತ್ತು ನೀರಿನ ಹೊಡೆತ ತಡೆಯಲು ಸ್ಟಾಕ್ ಜಾಯಿಂಟ್‌ಗಾಗಿ 5 ಗ್ಯಾಸ್ಕೆಟ್, 106 ಎಂಎಂ ಎತ್ತರದ ಸ್ಟಾಕ್ ಜಾಯಿಂಟ್ ಮತ್ತು 15 ಮಿಮೀನಷ್ಟು ವಿಸ್ತರಣೆ ಮಾಡುವ ಸೌಲಭ್ಯ, ಟಾಪ್ / ಸೈಡ್ ಹಂಗ್ ವಿಂಡೋಗಳು, ಸಮಾನಾಂತರ ಕಿಟಕಿಗಳು ಮತ್ತು ಎಲ್ಲಾ ರೀತಿಯ ಬಾಗಿಲುಗಳು, ಲೂವರ್‌ಗಳು, ಫಿನ್ ಗಳು ಮತ್ತು ಸನ್‌ಶೇಡ್‌ಗಳೊಂದಿಗೆ ಇದು ಸೂಕ್ತವಾಗಿ ಹೊಂದಿಕೊಳ್ಳಬಲ್ಲದು. ಜೊತೆಗೆ ಇದನ್ನು ಎ ಎಸ್ ಟಿ ಎಂ ನಿಗದಿಪಡಿಸಿದ ಕಠಿಣ ಮಾನದಂಡಗಳ ಅಡಿಯಲ್ಲಿಪರೀಕ್ಷೆಗೊಳಪಡಿಸಿದ್ದು, 600 ಪ್ಯಾಸ್ಕಲ್ ಏರ್ ಇನ್‌ಫಿಲ್ಟ್ರೇಶನ್, 750 ಪ್ಯಾಸ್ಕಲ್ ಸ್ಟ್ಯಾಟಿಕ್ ಆಂಡ್ ಡೈನಾಮಿಕ್ ವಾಟರ್ ಟೆಸ್ಟ್ ಸಾಮರ್ಥ್ಯ ದಾಖಲಿಸಿದೆ. ಮುಂಭಾಗದಲ್ಲಿ ಬಳಸುವ ಫಸಾಡ್ ಉತ್ಪನ್ನಗಳು 4500 ಪ್ಯಾಸ್ಕಲ್ ಸ್ಟ್ರಕ್ಚರಲ್ ಪ್ರೂಫ್ ಲೋಡ್‌ ಶಕ್ತಿಯ ಗಾಳಿಯನ್ನು ತಡೆದುಕೊಳ್ಳುವ ಶಕ್ತಿ ಹೊಂದಿವೆ.
ಅಲುಕೆ ಹೋಮ್ ಎಕ್ಸ್‌ಪೀರಿಯೆನ್ಸ್ ಸೆಂಟರ್ ವಾಸ್ತುಶಿಲ್ಪಿಗಳು, ಇಂಟೀರಿಯರ್ ಡಿಸೈನರ್‌ಗಳು, ಬಿಲ್ಡರ್‌ಗಳು, ಕನ್ಸಲ್ಟೆಂಟ್‌ಗಳು, ಮನೆ ಮಾಲೀಕರಿಗೆ ಆಸಕ್ತಿಕರ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ಶಾಪಿಂಗ್ ಮಾಡಲು, ಕಂಪನಿಯನ್ನು ಸಂಪರ್ಕಿಸಲು ಮತ್ತು ಕಿಟಕಿಗಳು, ಬಾಗಿಲುಗಳು, ಮುಂಭಾಗದಲ್ಲಿ ಬಳಸುವ ಉತ್ಪನ್ನಗಳು ಮತ್ತು ಪರ್ಗೋಲಾ ವ್ಯವಸ್ಥೆಗಳನ್ನು ವೀಕ್ಷಿಸಲು ಈ ಕೇಂದ್ರಕ್ಕೆ ಆಗಮಿಸಬಹುದಾಗಿದೆ.
ಅಲುಕೆ ಕುರಿತು
ಅಲುಕೆ ಬ್ರ್ಯಾಂಡ್ ಫೆನೆಸ್ಟ್ರೇಶನ್ ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದರ ಜೊತೆಗೆ ಅದರ ಉನ್ನತ ದರ್ಜೆಯ ಸೇವೆಗಳಿಗೆ ಅಭೂತಪೂರ್ವ ಜನಪ್ರಿಯತೆಯನ್ನು ಹೊಂದಿದೆ. ಯುರೋಪ್, ಅಮೇರಿಕಾ, ಮಧ್ಯಪ್ರಾಚ್ಯ, ಚೀನಾ ಮತ್ತು ಆಗ್ನೇಯ ಏಷ್ಯಾದ 12 ದೇಶಗಳಲ್ಲಿ ಜಾಗತಿಕ ವ್ಯಾಪ್ತಿಯನ್ನು ಹೊಂದಿರುವ ಅಲುಕೆ ಸಂಸ್ಥೆಯು ಪ್ರೀಮಿಯಂ ಅಲ್ಯೂಮಿನಿಯಂ ಫೆನೆಸ್ಟ್ರೇಶನ್ ಮತ್ತು ಮುಂಭಾಗದಲ್ಲಿ ಬಳಸುವ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಬ್ರ್ಯಾಂಡ್ ಆಗಿದೆ. ಭಾರತದಲ್ಲಿ 2013 ರಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿರುವ ಅಲುಕೆ ದೇಶದಲ್ಲಿಯೂ ಅಲ್ಯೂಮಿನಿಯಂ ಉತ್ಪನ್ನಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ.
ಅಲುಕೆ ಬೆಂಗಳೂರು ವಿಳಾಸ: ಅಲುಕೆ ಹೋಮ್ ಎಕ್ಸ್‌ ಪೀರಿಯನ್ಸ್ ಸೆಂಟರ್, ಬೆಂಗಳೂರು. ನೆಲ ಮಹಡಿ, ಎಂಎಸ್ಎಂ ಕಾರ್ನರ್ #901, 7ನೇ ಮುಖ್ಯರಸ್ತೆ, 4ನೇ ಕ್ರಾಸ್, HAL 2ನೇ ಹಂತ, ಇಂದಿರಾನಗರ, ಬೆಂಗಳೂರು, ಕರ್ನಾಟಕ 560038.

City Today News 9341997936