
“76ನೇ ಗಣರಾಜ್ಯೋತ್ಸವ” ಆಚರಣೆ ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಡಾ|| ಅಂಬಿಕಾ ಸಿ ಮತ್ತು ಸಂಸ್ಥೆಯವರು
ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಮತ್ತು “ಹೈರೆಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್” ವಿಶ್ವ ದಾಖಲೆ ಪ್ರತಿಭಾ ಪ್ರದರ್ಶನದಲ್ಲಿ ಯಶಸ್ವಿಯಾಗಿ ಪಾಲ್ಗೊಂಡವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿ ಎಸ್ ಶ್ವೇತಾ ವಿಶ್ವನಾಥ್ – ಚೈತನ್ಯ ಶಾಲೆಯ ಪ್ರಾಂಶುಪಾಲರು,
ಡಾ|| ಆರ್ ಸದಾಶಿವಯ್ಯ- ಖ್ಯಾತ ಜ್ಯೋತಿಷಿ, ಜಿ. ಅಪ್ಪಯಣ್ಣ- ಬಿ ಎಂ ಎಸ್ ಕಾನೂನು ಮಹಾ ವಿದ್ಯಾಲಯದ ಆಡಳಿತ ಅಧಿಕಾರಿ, ಸಮಾಜ ಸೇವಕರುಗಳಾದ ಬದ್ರಿನಾಥ್ ಕೆ,
ರಾಜಶೇಖರ್ ಜೆ, ಭೂಪಾಲಂ ಸುನಿಲ್, ಶಿವರುದ್ರಪ್ಪ ಮತ್ತು ಯೋಗ ಗುರು ಕಲಂದರ್ ಭಾಷಾ ರವರುಗಳು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಗೊಳ್ಳುವುದರಲ್ಲಿ
ಮಕ್ಕಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಮುಖ ಪಾತ್ರ ವಹಿಸಿದರು,
ಈ ಕಾರ್ಯಕ್ರಮವನ್ನು ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ವರ್ಡ್ ಕಲ್ಚರ್ ಆಡಿಟೋರಿಯಂ ನಲ್ಲಿ ಏರ್ಪಡಿಸಲಾಗಿತ್ತು.
City Today News 9341997936




You must be logged in to post a comment.