“ಇಂಡಿಯಾ ಕಾ ಸೆಲೆಬ್ರೇಶನ್”ಪ್ರಚಾರದ ವಿಜೇತರನ್ನು ಘೋಷಿಸಿದ LG ಎಲೆಕ್ಟ್ರಾನಿಕ್ಸ್


ಜನವರಿ 10, 2024 – ಭಾರತದ ಮುಂಚೂಣಿ ಕನ್ಸ್ಯೂಮರ್ ಡ್ಯೂರಬಲ್ಸ್ ಬ್ರ್ಯಾಂಡ್‌ಗಳ ಪೈಕಿ ಒಂದಾದ LG ಎಲೆಕ್ಟ್ರಾನಿಕ್ಸ್, ಪ್ರಸ್ತುತ ನಡೆಯುತ್ತಿರುವ ತನ್ನ “ಇಂಡಿಯಾ ಕಾ ಸೆಲಬ್ರೇಶನ್” ಪ್ರಚಾರದ ಅದೃಷ್ಟಶಾಲಿ ವಿಜೇತರನ್ನು ಘೋಷಿಸಲು ಹರ್ಷಿಸುತ್ತದೆ. ಲೂಬಾಂಡ್ ಟೆಕ್ನಾಲಜೀಸ್‌ನ ಸಿಇಒ ಶ್ರೀ ರಾಜೇಶ್ ಚಂದ್ರನ್ ಅಮೋಘ ಬಹುಮಾನ Audi Q3 Premium ಗೆದ್ದುಕೊಂಡ ಅದೃಷ್ಟಶಾಲಿ ವಿಜೇತರಾಗಿದ್ದಾರೆ. ಅಕ್ಟೋಬರ್ 13, 2023ರಂದು ಶ್ರೀ ರಾಜೇಶ್ ಚಂದ್ರನ್, ರಿಲಯನ್ಸ್ ರೀಟೇಲ್‌ನಿಂದ ಟಾಪ್ ಲೋಡ್ ವಾಶಿಂಗ್ ಮಶೀನ್ ಖರೀದಿಸಿದ್ದರು.

ಸೆಪ್ಟೆಂಬರ್ 16ರಿಂದ ನವಂಬರ್ 12, 2023ರವರೆಗಿನ ಪ್ರಚಾರ ಅವಧಿಯಲ್ಲಿ ಎಲ್‌ಜಿಯೊಂದಿಗೆ ದೀಪಾವಳಿಯನ್ನು ಆಚರಿಸಲು ಗ್ರಾಹಕರಿಗೆ ಒಂದು ಸುವರ್ಣಾವಕಾಶ ಇದ್ದು, ಅದ್ಭುತ ಆಫರ್‌ಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿತ್ತು. ಜೀವನವನ್ನು ಇನ್ನಷ್ಟು ಅನುಕೂಲಕರವಾಗಿ ಮತ್ತು ನಿಜವಾಗಿಯೂ ಅವಿಸ್ಮರಣೀಯವಾಗಿ ಮಾಡಲು LG ಬದ್ಧವಾಗಿದ್ದು, ಸಂಸ್ಥೆಯು ಸಂತೋಷವನ್ನು ಹರಡಿ ಹಬ್ಬದ ಚೈತನ್ಯವನ್ನು ಹೆಚ್ಚಿಸಿದೆ.
ಇದರ ಬಗ್ಗೆ ಮಾತನಾಡುತ್ತಾ, LG ಇಂಡಿಯಾದ ಎಮ್‌ಡಿ ಶ್ರೀ ಹಾಂಗ್ ಜು ಜಿಯೋನ್, “ನಮ್ಮ ’ಇಂಡಿಯಾ ಕಾ ಸೆಲಬ್ರೇಶನ್”ಪ್ರಚಾರವು, ಸಂತೋಷವನ್ನು ಹರಡಿ, ಹಬ್ಬದ ಋತು ಹಾಗೂ ಹೊಸ ವರ್ಷವನ್ನು ನಿಜವಾಗಿಯೂ ವಿಶೇಷಗೊಳಿಸುವ ಪ್ರಯತ್ನವಾಗಿತ್ತು. LG ಬ್ರ್ಯಾಂಡ್‌ನ ಸಿದ್ಧಾಂತವು Life’s Good ಆಗಿದ್ದು, ಇದು ಆವಿಷ್ಕಾರದ ಮೂಲಕ ಜನರ ಜೀವನವನ್ನು ಉತ್ತಮಗೊಳಿಸುವ ನಮ್ಮ ಅಚಲ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ನಮ್ಮ ಇತ್ತೀಚಿನ ಬ್ರ್ಯಾಂಡ್ ಮರುಶೋಧದ ಮೂಲಕ, ವಿವಿಧ ಗ್ರಾಹಕ ಅನುಭವದಾದ್ಯಂತ ಇರುವ ಪ್ರತಿಯೊಂದು ಟಚ್ ಪಾಯಿಂಟ್‌ನಲ್ಲಿ Life’s Goodನ ಮೌಲ್ಯಗಳು ಹಾಗೂ ಸಿದ್ಧಾಂತವನ್ನು ಒದಗಿಸುವ ಪ್ರಯತ್ನ ನಮ್ಮದು. ನಮ್ಮ ಅದೃಷ್ಟಶಾಲಿ ವಿಜೇತರಾದ ಶ್ರೀ ರಾಜೇಶ್ ಚಂದ್ರನ್ ಅವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಎಲ್ಲಾ ಭಾಗೀದಾರರಿಗೂ ಒಂದು ದೊಡ್ಡ ಧನ್ಯವಾದ ಹೇಳಬಯಸುತ್ತೇನೆ. ಶ್ರೀ ರಾಜೇಶ್ ಮತ್ತು ಅವರ ಕುಟುಂಬದವರಿಗೆ ಇದು ನಿಜವಾಗಿಯೂ Life’s Good ಕ್ಷಣವಾಗಿದೆ.”ಎಂದು ಹೇಳಿದರು.
“LG’ ಅವರ “ಇಂಡಿಯಾ ಕಾ ಸೆಲಬ್ರೇಶನ್” ಪ್ರಚಾರವು ನಿಜವಾಗಿಯೂ ನನ್ನ ರಜಾದಿನಗಳ ಚೈತನ್ಯವನ್ನು ಬೆಳಗಿಸಿದೆ! ಅಮೋಘ ಬಹುಮಾನ Audi Q3 Premium ಗೆದ್ದುಕೊಂಡಿರುವುದು ನನಗೆ ಕನಸು ನಿಜವಾದ ಹಾಗಿದೆ ಮತ್ತು ಈ ಅದ್ಭುತ ಅಚ್ಚರಿಗಾಗಿ ನಾನು ಎಷ್ಟು ಆಭಾರಿಯಾಗಿದ್ದರೂ ಸಾಲದು.”ಎಂದು ಹೇಳಿದರು, ಶ್ರೀ ರಾಜೇಶ್ ಚಂದ್ರನ್.
ಈ ದೀಪಾವಳಿಯಂದು, LG, ಪ್ರತಿಷ್ಠಿತ LG ಕನಸಿನ ಮನೆ ಪ್ಯಾಕೇಜ್ ಗೆದ್ದುಕೊಳ್ಳಲು ಪ್ರತಿದಿನದ ಗ್ರಾಹಕರಿಗೆ ಅದ್ಭುತ ಅವಕಾಶವನ್ನು ಪರಿಚಯಿಸುವ ಮೂಲಕ ಸಂತೋಷ ಮತ್ತು ಆನಂದವನ್ನು ಹರಡುವಲ್ಲಿ ಸರ್ವ ಪ್ರಯತ್ನ ನಡೆಸಿತ್ತು.

ದಿನನಿತ್ಯದ ಕನಸಿನ ಮನೆ ಪ್ಯಾಕೇಜ್ ಅಡಿ ಒಟ್ಟೂ 50 ಅದೃಷ್ಟಶಾಲಿ ವಿಜೇತರನ್ನು ಘೋಷಿಸಲಾಗಿದ್ದು, ಐದು ಅದ್ವಿತೀಯ ಉತ್ಪನ್ನಗಳ ಇಡೀ ಶ್ರೇಣಿಯನ್ನು ಪ್ರತಿದಿನ ಒಬ್ಬ ಅದೃಷ್ಟಶಾಲಿ ಗ್ರಾಹಕರು ಗೆದ್ದು ಪ್ರಚಾರಕ್ಕೆ ಕೌತುಕತೆ ತಂದರು. ಕನಸಿನ ಮನೆ ಪ್ಯಾಕೇಜ್, ಸೈಡ್-ಬೈ-ಸೈಡ್ ರೆಫ್ರಿಜಿರೇಟರ್, ಫ್ರಂಟ್ ಲೋಡ್ ವಾಶಿಂಗ್ ಮಶೀನ್, ವಾಟರ್ ಪ್ಯೂರಿಫೈಯರ್, ಮೈಕ್ರೋವೇವ್ ಓವನ್ ಮತ್ತು OLED ಟಿವಿಯನ್ನು ಒಳಗೊಂಡಿತ್ತು, ಗ್ರಾಹಕರಿಗೆ ಅತ್ಯಂತ ಅನುಕೂಲ ಹಾಗೂ ಐಶಾರಾಮ ಒದಗಿಸುವುದಕ್ಕಾಗಿಯೇ ವಿನ್ಯಾಸಗೊಳಿಸಲಾಗಿದ್ದ ಈ ಉತ್ಪನ್ನಗಳು, ಅವರ ಆಚರಣೆಗಳನ್ನು ಇನ್ನಷ್ಟು ವಿಶೇಷಗೊಳಿಸಿತ್ತು.
ಈ ಆಲೋಚನಾಪೂರ್ಣ ಉಪಕ್ರಮವು, ಅವರ ದೀಪಾವಳಿ ಆಚರಣೆಗಳಿಗೆ ವಿಶೇಷ ಸ್ಪರ್ಶ ನೀಡಿದುದು ಮಾತ್ರವಲ್ಲದೆ, LG ಇಂಡಿಯಾದ ಉದಾರ ಕೊಡುಗೆಗಳಿಂದ ಸಂತುಷ್ಟರಾದ ಗ್ರಾಹಕರಿಂದ ಹೃತ್ಪೂರ್ವಕ ಮೆಚ್ಚುಗೆಯನ್ನೂ ಪಡೆದುಕೊಂಡಿತ್ತು.

City Today News 9341997936