ಉದ್ಯಮಿ ವಿಜಯ್ ಟಾಟಾ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ನೀಡಿದ ದೂರಿಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ವಿಧಾನಪರಿಷತ್ ಶಾಸಕರಾದ ಟಿ.ಎ. ಶರವಣ

ವಂಚನೆ,ಸುಳ್ಳು,ಸಮಯಸಾಧಕತನವನ್ನೇ ಮನೆ ದೇವರು ಮಾಡಿಕೊಂಡಿರುವ ರಿಯಲ್ ಎಸ್ಟೇಟ್ ದಂಧೆಕೋರ ವಿಜಯ್ ಟಾಟಾ, ಕುಮಾರಸ್ವಾಮಿ ಯವರ ಮೇಲೆ ಐವತ್ತು ಕೋಟಿ ಹಣ ಕೇಳಿದ್ರು ಎಂದು ಆರೋಪ ಮಾಡಿರುವುದು ಹಾಸ್ಯಾಸ್ಪದ ಎಂದು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಶ್ರೀ ಟಿ ಎ ಶರವಣ ಅವರು ಹೇಳಿಕೆ ನೀಡಿದರು.

ತಮ್ಮ ಮೇಲಿನ ಗಂಭೀರ ಸ್ವರೂಪದ ಆರೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ಸಿಎಂ ಸಿದ್ದರಾಮಯ್ಯಇಂಥ ಯಕಶ್ಚಿತ್ ವಿಜಯ್ ಟಾಟಾ ಅಂಥಹ ಡೂಪ್ಲಿಕೆಟ್ ಉದ್ಯಮಿ ಯ ನೆರವು ಪಡೆದು, ನಮ್ಮ ನಾಯಕರಾದ ಕುಮಾರ ಸ್ವಾಮಿಯವರ ತೇಜೋವಧೆಗೆ ಮುಂದಾಗಿರುವುದು ಅವರ ಅಧಃಪತನಕ್ಕೆ ಸಾಕ್ಷಿ.
ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ತಮ್ಮ ಕೊನೆ ದಿನಗಳನ್ನು ಎದುರು ನೋಡುತ್ತಿದ್ದಾರೆ ಎನ್ನುವುದಕ್ಕೆ ಈ ವಿಜಯ್ ಟಾಟಾ ಬಳಸಿಕೊಂಡು ಕುಮಾರಸ್ವಾಮಿ ಅವರ ಮೇಲೆ ದೂರು ಕೊಡಿಸಿ ಬಂಧನಕ್ಕೆ ಹತಾಶ ಯತ್ನ ನಡೆದಿರುವುದೇ ಸಾಕ್ಷಿ ಎಂದು ಈ ವೇಳೆ ತಿಳಿಸಿದರು.
ಇಂಥ ರಿಯಲ್ ಎಸ್ಟೇಟ್ ಏಜೆಂಟರ ಬೆದರಿಕೆಗಳಿಗೆ ಕುಮಾರಣ್ಣ ಜಗ್ಗಲ್ಲ. ಸಾರ್ವಜನಿಕ ಬದುಕಲ್ಲಿ ನೂರಾರು ಸಂಕಷ್ಟಗಳನ್ನು ಎದುರಿಸಿ ನಾಡಿನ ಜನರ ಹೃದಯ ಗೆದ್ದಿರುವ ನಾಯಕ ಕುಮಾರಣ್ಣ.
ಈ ಪ್ರಕರಣದ ಮತ್ತೊಬ್ಬ ವ್ಯಕ್ತಿ ರಮೇಶ್ ಗೌಡರು ಟಾಟಾ ಜೊತೆ ಯಾವುದೇ ವ್ಯವಹಾರವನ್ನು ತಳ್ಳಿ ಹಾಕಿದ್ದಾರೆ.ಇನ್ನೂ ಕುಮಾರಸ್ವಾಮಿ ಅವರ ಸಂಪರ್ಕ ಕೊಟ್ಟು ಹಣ ಕೇಳಿದ ಆರೋಪ ನಿರಾಧಾರ ಅಂದಿದ್ದಾರೆ
ದೂರು ಕೊಟ್ಟ ಮಾತ್ರಕ್ಕೆ ಆರೋಪ ಸತ್ಯ ಅಲ್ಲ. ಸಾಕ್ಷಿಗಳೇ ಇಲ್ಲದ ಈ ಆರೋಪ ಶುದ್ದ ಸುಳ್ಳು. ಇದರ ಹಿಂದೆ ದೊಡ್ಡ ಪಿತೂರಿ ಇದೆ ಇದನ್ನು ಪರಿಶೀಲಿಸಬೇಕೆಂದು ತಿಳಿಸಿದರು. ಬದಲಿಗೆ ರಮೇಶ್ ಗೌಡ್ರ ಬಳಿ ಟಾಟಾ ಅವರೇ ಹಣ ಕೇಳಿದ್ದಾರೆ ಎನ್ನುವ ಮಾಹಿತಿ ರಮೇಶ್ ಗೌಡ್ರು ಹೇಳಿದ್ದಾರೆ. ಕುಮಾರಸ್ವಾಮಿ ಅವರಿಗೆ ಕುಮಾರಸ್ವಾಮಿ ಅವರಿಗೆ ಟಾಟಾ ಬಳಿ ಹಣ ವಸೂಲಿ ಮಾಡಿ ರಾಜಕೀಯ ಮಾಡುವಂಥ ದುಸ್ಥಿತಿ ಬಂದಿಲ್ಲ ಬಳಿ ಹಣ ವಸೂಲಿ ಮಾಡಿ ರಾಜಕೀಯ ಮಾಡುವಂಥ ದುಸ್ಥಿತಿ ಬಂದಿಲ್ಲ. ಟಾಟಾ ಅಂಥ ಮನುಷ್ಯ ಐಪಿಎಸ್ ಅಧಿಕಾರಿಗಳಿಗೆ , ರಿಯಲ್ ಎಸ್ಟೇಟ್ ದಂಧೆ ಕೋರರಿಗೆ ದಲ್ಲಾಳಿ ಮಾತ್ರ. ಈ ಮಧ್ಯವರ್ತಿಗಳಿಗೆ ಹೆದರುವ ಪ್ರಶ್ನೆ ಇಲ್ಲವೇ ಇಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಥ ಕೀಳು ರಾಜಕಾರಣ ಮಾಡಬಹುದು ಅಂತ ನಿರೀಕ್ಷೆ ಮಾಡಿರಲಿಲ್ಲ. ಮೂಡಾ ಪ್ರಕರಣದಲ್ಲಿ ಸಿಲುಕಿ ತನಿಖೆ ಎದುರಿಸ್ತಾ ತಮ್ಮ ಬಟ್ಟೆಯನ್ನು ಕೆಸರು ಮಾಡಿಕೊಂಡಿರುವ ಸಿದ್ರಾಮಯ್ಯ, ಈಗ  ಬೇರೆಯವರ ಮೂಲಕ ಕುಮಾರಸ್ವಾಮಿ ಅವರಿಗೂ ಕೆಸರು ಏರುಚುತ್ತಿರುವುದು ಅವರ ಘನತೆಗೆ ತಕ್ಕುದಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಮತ್ತು ಜೆಡಿಎಸ್  ಬೆಳೆಯುತ್ತಿರುವುದನ್ನು ಸಹಿಸದೆ, ಅವರನ್ನು ತುಳಿಯಲು ಸರಕಾರದ ಕುಮ್ಮಕ್ಕಿನಿಂದ ಈ ದೂರು ರಿಜಿಸ್ಟರ್ ಮಾಡಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಆಕ್ರೋಶ ವ್ಯಕ್ತಪಡಿಸಿದರು.

City Today News 9341997936