ದಿನಾಂಕ 19-11-2023, ಭಾನುವಾರ ನಡೆಯುವ ಒಕ್ಕಲಿಗ ಧರ್ಮ ಮಹಾಸಭಾ ಮಹಿಳಾ ಘಟಕ ಉದ್ಘಾಟನೆ ಮತ್ತು ಒಕ್ಕಲಿಗ ಧರ್ಮ ಸಂಸ್ಕಾರಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ

ದಿನಾಂಕ 19-11-2023 ಭಾನುವಾರ, ಬೆಂಗಳೂರಿನ ಜೆ.ಸಿ. ರಸ್ತೆ, ನಯನ ಸಭಾಂಗಣದಲ್ಲಿ, ಬೆಳಿಗ್ಗೆ 11 ಗಂಟೆಗೆ ಒಕ್ಕಲಿಗ ಧರ್ಮ ಮಹಾಸಭಾ ರಾಜ್ಯ ಮಹಿಳಾ ಘಟಕ ಉದ್ಘಾಟನೆ ಮತ್ತು ಪೂಜ್ಯ ಶ್ರೀ ಸಿದ್ಧರಾಮ ಚೈತನ್ಯ ಮಹಾಸ್ವಾಮಿಗಳ ಒಕ್ಕಲಿಗ ಧರ್ಮ ಸಂಸ್ಕಾರಗಳು ಕಿರು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರಾಜ್ಯದ ಕೃಷಿ ಮಂತ್ರಿಗಳಾದ ಶ್ರೀ ಚೆಲುವರಾಯಸ್ವಾಮಿಯವರು, ರಾಜ್ಯಸಭಾ ಸದಸ್ಯರಾದ ಶ್ರೀ ಜಿ.ಸಿ. ಚಂದ್ರಶೇಖರ್ ರವರು ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಡಾ॥ ಭೈರಪ್ಪ ನವರು, ರಾಜ್ಯ ಒಕ್ಕಅಗರ ಸಂಘದ ಉಪಾಧ್ಯಕ್ಷರಾದ ಶ್ರೀ ಎಲ್. ಶ್ರೀನಿವಾಸ್ ರವರು ಮುಂತಾದ ಗಣ್ಯ ಮಹಾನೀಯರು ಭಾಗವಹಿಸಲ್ಲಿದ್ದಾರೆ.
–ಶ್ರೀಮತಿ ವರಲಕ್ಷ್ಮಿ ಸುರೇಶ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಮಹಿಳಾ ಘಟಕ
City Today News 9341997936

You must be logged in to post a comment.