ಕನಾಟಕ ರಾಜ್ಯದ ಮೈಸೂರು ಸಂಸ್ಥಾನದಲ್ಲಿ ಪ್ರಪ್ರಥಮ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯಶ್ರೀ.ಕೆ.ಸಿ.ರೆಡ್ಡಿ ರವರ ನಂತರ ಕರ್ನಾಟಕ ರಾಜ್ಯದಲ್ಲಿ ರೆಡ್ಡಿ ಸಮುದಾಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳಿಂದ ಮೋಸ

ಕನಾಟಕ ರಾಜ್ಯದ ಮೈಸೂರು ಸಂಸ್ಥಾನದಲ್ಲಿ ಪ್ರಪ್ರಥಮ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯಶ್ರೀ.ಕೆ.ಸಿ.ರೆಡ್ಡಿ ರವರ ನಂತರ ಕರ್ನಾಟಕ ರಾಜ್ಯದಲ್ಲಿ ರೆಡ್ಡಿ ಸಮುದಾಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳಿಂದ ಮೋಸ.

ಕರ್ನಾಟಕ ರಾಜ್ಯದಲ್ಲಿ ಪ್ರತಿ ಜಿಲ್ಲೆಗಳಲ್ಲಿ ಬೀದರ್‌ನಿಂದ ಮುಳಬಾಗಿಲು ರವರೆಗೆ ರೆಡ್ಡಿ ಸಮುದಾಯದವರು ಲಕ್ಷಾಂತರ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ನಮ್ಮ ಸಮುದಾಯಕ್ಕೆ ಕರ್ನಾಟಕ ಸರ್ಕಾರಗಳಲ್ಲಿ ಇದುವರೆವಿಗೂ ಪ್ರತ್ಯೇಕ ನಿಗಮ ಮಂಡಳಿ ನೀಡಿರುವುದಿಲ್ಲ. ಮತ್ತು ಸರ್ಕಾರದವತಿಯಿಂದ ಯಾವುದೇ ರೀತಿಯ ಅನುದಾನವನ್ನು ನೀಡಿರುವುದಿಲ್ಲ. ಮತ್ತು ನಮ್ಮ ಸಮುದಾಯದ ವಿರ್ದ್ಯಾರ್ಥಿ ನಿಲಯಗಳಿಗೆ ಜಮೀನು ಸಹ ನೀಡಿರುವುದಿಲ್ಲ. ಹಾಗೂ ಆನೇಕ ಸವಲತ್ತುಗಳಿಂದ ವಂಚಿತರಾಗಿದ್ದೇವೆ.

ಕರ್ನಾಟಕ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ನಗರ ಪಾಲಿಕೆ ಮತ್ತು ಮಹಾನಗರ ಪಾಲಿಕೆಗಳಲ್ಲಿ, ತಾಲ್ಲೂಕು ಪಂಚಾಯತಿಗಳಲ್ಲಿ, ಜಿಲ್ಲಾ ಪಂಚಾಯತಿಗಳಲ್ಲಿ, ನಿಗಮಮಂಡಳಿಗಳಲ್ಲಿ ಪಕ್ಷಗಳಪಧಾದಿಕಾರಿಗಳಸ್ಥಾನಗಳಲ್ಲಿ ವಿಧಾನ ಪರಿಷತ್ ಚುನಾವಣೆಗಳಲ್ಲಿ, ವಿಧಾನಸಭಾ ಚುನಾವಣೆಗಳಲ್ಲಿ, ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಸಮುದಾಯದ ಮುಖಂಡರುಗಳನ್ನು ಕಡೆಗಣಿಸಿ ಸ್ಥಾನಮಾನ ನೀಡದೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದೆ ನಮ್ಮ ಸಮುದಾಯವನ್ನು ಕಡೆಗಣಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ನ್ಯಾಯ ದೊರಕಿಸದೆ ಇದ್ದರೆ ನಮ್ಮ ಸಮುದಾಯದ ವತಿಯಿಂದ, ಬೀದರ್ ನಿಂದ ಮುಳಬಾಗಿಲು ವರೆಗೆ ಪಾದಯಾತ್ರೆ ಮುಖಾಂತರ ವಿಧಾನಸೌಧಕ್ಕೆ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಮತ್ತು ನಮ್ಮ ಸಮುದಾಯವನ್ನು ಮತಬ್ಯಾಂಕ್ ಮಾತ್ರ ಉಪಯೋಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳಿಗೆ ನಮ್ಮ ಸಮುದಾಯವನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಪರಿಣಾಮ ರಾಜಕೀಯ ಪಕ್ಷದವರು ನೋಡಬೇಕಾಗುತ್ತದೆ. ಆದುದರಿಂದ ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಎಲ್ಲಾ ರಾಜಕೀಯ ಪಕ್ಷಗಳ ಹಿರಿಯ ಮುಖಂಡರುಗಳು ಗಣನೆಗೆ ತೆಗೆದುಕೊಳ್ಳಬೇಕಾಗಿ ನಮ್ಮ ಪತ್ರಿಕಾ ಗೋಷ್ಟಿ ಮುಖಾಂತರ ತಿಳಿಸುತ್ತಿದ್ದೇವೆ ಎಂದು ಅಧ್ಯಕ್ಷರಾದ ಚಂದ್ರಶೇಖರ್ ರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಎಂ.ಸಿ.ಪ್ರಬಾಕರ ರೆಡ್ಡಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲೂ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ನುಡಿದರು.

City Today News 9341997936